ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-08-2019

By blogger on ಗುರುವಾರ, ಆಗಸ್ಟ್ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-08-2019
ಸಂಚಾರಿ ಪೊಲೀಸ್ ಠಾಣೆ :- 53/2019  ಕಲಂ 279,  338, 304(ಎ) ಐಪಿಸಿ;- ದಿನಾಂಕ:28/08/2019 ರಂದು ಬೆಳಗ್ಗೆ ನನ್ನ ತಮ್ಮನಾದ ವಾಲಚಂದನು ನನಗೆ ಫೋನ್ಮಾಡಿ ತಿಳಿಸಿದ್ದೇನೆಂದರೆ, ತಾನು ಮತ್ತು ತನ್ನ ಗೆಳೆಯನಾದ ಸೋಮಶೇಖರ ತಂದೆ ಸಿದ್ದಮಲ್ಲಪ್ಪ ಮನ್ನಳ್ಳಿ ಇಬ್ಬರು ಕೂಡಿಕೊಂಡು ಯಾದಗಿರಿಯ ಹತ್ತಿರ ಇರುವ ಮೈಲಾಪೂರಕ್ಕೆ ದೇವರಿಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದನು. ರಾತ್ರಿ 7:45 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದಲ್ಲಿ ಇದ್ದಾಗ ನನ್ನ ತಮ್ಮ ವಾಲಚಂದನ ಮೊಬೈಲ್ನಿಂದ ಯಾರೋ ನನಗೆ ಫೋನ್ಮಾಡಿ ತಿಳಿಸಿದ್ದೇನೆಂದರೆ, ಈಗ ರಾತ್ರಿ 7:30 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ನಂ: ಕೆಎ-32 ಇಎಲ್-0580 ನೇದ್ದರ ಮೇಲೆ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳು ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಕಂಚಗಾರಹಳ್ಳಿ ಕ್ರಾಸ್ ಹತ್ತಿರ ಮೋಟರ್ ಸೈಕಲ್ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದು ಅಪಘಾತವಾಗಿದ್ದು, ಮೋಟರ್ ಸೈಕಲ್ ಸವಾರನಿಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದು, ಹಿಂದೆ ಕುಳಿತ ವ್ಯಕ್ತಿಗೂ ಗಾಯಗಳಾಗಿದ್ದು ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ತಿಳಿಸಿದ್ದು, ಕೂಡಲೇ ನಾನು ಮತ್ತು ನನ್ನ ಅಣ್ಣನಾದ ಪೂಲಚಂದ, ನನ್ನ ತಂದೆ ಥಾವರು ಪವಾರ್ ಹಾಗು ನಮ್ಮ ತಾಂಡೆಯ ಮಲ್ಲಿನಾಥ ತಂದೆ ರಾಮದಾಸ ರಾಠೋಡ್ ರವರು ಹಾಗು ಇತರರು ಕೂಡಿಕೊಂಡು ಖಾಸಗಿ ವಾಹನ ಮಾಡಿಕೊಂಡು ನಮ್ಮೂರಿನಿಂದ ಹೊರಟು ಯಾದಗಿರಿ-ವಾಡಿ ರಸ್ತೆಯ ಕಂಚಗಾರಹಳ್ಳಿ ಕ್ರಾಸ್ ಸಮೀಪ ಇದ್ದ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ರಸ್ತೆಯ ಪಕ್ಕದಲ್ಲಿ ನಮ್ಮ ಮೋಟರ್ ಸೈಕಲ್ ನಂ: ಕೆಎ-32 ಇಎಲ್-0580 ಜಖಂಗೊಂಡು ಬಿದ್ದಿತ್ತು. ಅಲ್ಲಿದ್ದವರಿಗೆ ಕೇಳಲಾಗಿ ಅಪಘಾತದಲ್ಲಿ ಗಾಯಗೊಂಡವರಿಗೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ್ದರಿಂದ ನಾವು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಶವಗಾರ ಕೋಣೆಯಲ್ಲಿ ಇದ್ದ ನನ್ನ ತಮ್ಮ ವಾಲಚಂದ ಈತನ ಶವವನ್ನು ನೋಡಲಾಗಿ ಎಡಗಡೆ ಹಣೆಗೆ ಮತ್ತು ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು, ಎಡಕೈಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು, ಮೃತಪಟ್ಟಿರುತ್ತಾನೆ. ಅಪಘಾತದಲ್ಲಿ ಗಾಯಗೊಂಡ ಸೋಮಶೇಖರ ತಂದೆ ಸಿದ್ದಮಲ್ಲಪ್ಪ ಮನ್ನಳ್ಳಿ ಇವರಿಗೆ ಭಾರಿ ಗಾಯಗಳಾಗಿದ್ದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಿದ ಬಗ್ಗೆ ಗೊತ್ತಾಗಿರುತ್ತದೆ. 
       ಕಾರಣ ದಿನಾಂಕ:28/08/2019 ರಂದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ವಾಲಚಂದ ತಂದೆ ಥಾವರು ಪವಾರ್, ವಯ:27 ವರ್ಷ ಈತನು ತನ್ನ ಮೋಟರ್ ಸೈಕಲ್ ನಂ: ಕೆಎ-32 ಇಎಲ್-0580 ನೇದ್ದರ ಮೇಲೆ ಸೋಮಶೇಖರ ತಂದೆ ಸಿದ್ದಮಲ್ಲಪ್ಪ ಮನ್ನಳ್ಳಿ ಸಾ||ಕಲಬುರಗಿ ಅನ್ನುವವರಿಗೆ ಕೂಡಿಸಿಕೊಂಡು ಮೈಲಾಪೂರದಿಂದ ಮರಳಿ ಕಲಬುರಗಿಗೆ ಯಾದಗಿರಿ-ವಾಡಿ ರಸ್ತೆಯ ಮೇಲೆ ಬರುವಾಗ ವಾಲಚಂದನು ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಕಂಚಗಾರಹಳ್ಳಿ ಕ್ರಾಸ್ ಹತ್ತಿರ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಸ್ಕಿಡ್ಮಾಡಿ ಬಿದ್ದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನನ್ನ ತಮ್ಮ ವಾಲಚಂದ ತಂದೆ ಥಾವರು ಪವಾರ್, ವಯ:27 ವರ್ಷ ಈತನು ಭಾರಿಗಾಯಗೊಂಡು ಮೃತಪಟ್ಟಿದ್ದು, ಹಿಂದುಗಡೆ ಕುಳಿತ ಸೋಮಶೇಖರ ತಂದೆ ಸಿದ್ದಮಲ್ಲಪ್ಪ ಮನ್ನಳ್ಳಿ ಇವರಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿರುತ್ತವೆ. ಈ ಅಪಘಾತವು ಮೋಟರ್ ಸೈಕಲ್ ನಂ: ಕೆಎ-32 ಇಎಲ್-0580 ರ ಸವಾರ ನನ್ನ ತಮ್ಮ ವಾಲಚಂದ ತಂದೆ ಥಾವರು ಪವಾರ್, ವಯ:27 ವರ್ಷ ಈತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಅಜರ್ಿಯ ಹೇಳಿಕೆ ಸಾರಾಂಶದ ಮೇಲಿಂದ ಇಂದು ದಿನಾಂಕ-28/08/2019 ರಂದು 10-30 ಪಿ ಎಮ್ ಕ್ಕೆ ಠಾಣೆ ಗುನ್ನೆ ನಂ. 53/2019 ಕಲಂ 279, 338 304 (ಂ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.   
  

ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂ.69/2019 ಕಲಂ.143,147,148,323,324,326,504,506 ಸಂ.149 ಐಪಿಸಿ;- ದಿನಾಂಕ.28/08/2019 ರಂದು 5 ಪಿಎಂಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಗಾಯಾಳು ಎಂ.ಎಲ್.ಸಿ ಪೋನ ಮಾಹಿತಿ ಮೇರೆಗೆ ಆಸ್ಪತ್ರೆಗೆ 5-15 ಪಿಎಂಕ್ಕೆ ಬೇಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಾಳು ಪಿರ್ಯಾದಿ ಶ್ರೀ ನಾನು ಲಕ್ಷ್ಮಣ ತಂ. ಸೂರಜ್ಯಾ ಪವಾರ  ಸಾಃ ವಿಶ್ವಾಸಪೂರ ತಾಂಡ (ಠಾಣಗುಂದಿ ತಾಂಡಾ) ತಾಃಜಿಃಯಾದಗಿರಿ ಇತನ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ಸೂರಜ್ಯಾ ಈತನು ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದು ನಮ್ಮ ಕಾಕ ಜಂಬು ಪವಾರ ಈತನು ಕೂಡಾ 15 ವಸರ್ಷಗಳ ಹಿಂದೆ ತೀರಿಕೊಂಡಿದ್ದು ನಮ್ಮ ಕಾಕ ತೀರಿಕೊಂಡ ನಂತರ ನಮ್ಮ ಕಾಕನ ಹೆಂಡತಿ ಗನ್ನಿಬಾಯಿ ಮತ್ತು ಅವಳ ಮಗ ಸಂಜಯ ಪವಾರ ಇವರು ನಮ್ಮ ಚಿಕ್ಕಮ್ಮಳಾದ ಗನ್ನಿಬಾಯಿ ತವರು ಮನೆಯಾದ ಎಸ್.ಹೊಸಳ್ಳಿ ತಾಂಡದಲ್ಲಿ ಇರುತ್ತಾರೆ.ನಮ್ಮ ತಾಂಡಾದ ಪಕ್ಕದಲ್ಲಿ ಬಾಲಾಜಿ ನಗರದ ಸೀಮಾಂತರದಲ್ಲಿಯ ನಮ್ಮ ತಂದೆಯವರ ಹೆಸರಿನಲ್ಲಿರುವ ನಮ್ಮ ಪಿತ್ರಾಜರ್ಿತ ಆಸ್ತಿ ಸವರ್ೆ ನಂ. 10 ವಿಸ್ತಿರ್ಣ 37 ಗುಂಟೆ ಇದ್ದು ನಮ್ಮ ತಂದೆಯವರ ಹೆಸರಿನ ಜಮೀನನ್ನು ನಮ್ಮ ತಾಯಿ ಬೀಮಣಿಬಾಯಿ ಇವಳ ಹೆಸರಿನಲ್ಲಿ ವಗರ್ಾವಣೆ ಮಾಡಿಸುವ ಸಲುವಾಗಿ 5-6 ತಿಂಗಳ ಹಿಂದೆ ಯಾದಗಿರಿ ಮಾನ್ಯ ತಹಸೀಲ್ದಾರರ ಆಪೀಸಿನಲ್ಲಿ ಸಂ/ಕಂ/ಹದಾ/ತ/76/2019-20 ಪ್ರಕಾರ ಅಜರ್ಿ ಹಾಕಿದ್ದು ಇರುತ್ತದೆ. ನಮ್ಮ ಕಾಕನ ಹೆಂತಿಯಾದ ಗನ್ನಿಬಾಯಿ ಮತ್ತು ಅವಳ ಮಗ ಸಂಜಯ ಪವಾರ ಇವರು ನಮ್ಮ ಮೇಲ್ಕಂಡ ಜಮೀನಿನಲ್ಲಿ ಪಾಲು ಬರುತ್ತದೆ ಅಂತಾ ತಕರಾರು ಮಾಡಿ ನಮ್ಮ ಆಸ್ತಿಯ ವಿರುದ್ದ ತಹಸೀಲ ಆಫೀಸಿನಲ್ಲಿ ತಕರಾರು ಅಜರ್ಿ ಹಾಕಿರುತ್ತಾರೆ. ಈ ಬಗ್ಗೆ ತಹಸೀಲ ಆಫೀಸಿನಲ್ಲಿ ವಿಚಾರಣೆ ನಡೆದಿರುತ್ತದೆ. ಇಂದು ದಿನಾಂಕ.28/08/2019 ರಂದು ನಮ್ಮ ಆಸ್ತಿ ಸವರ್ೆ ನಂ. 10 ವಿಸ್ತಿರ್ಣ 37 ಗುಂಟೆ ನೇದ್ದರ ವಿಷಯದಲ್ಲಿ ವಿಚಾರಣೆ ಮುದ್ದತ್ತು ಇದ್ದುದ್ದರಿಂದ ಇಂದು ಯಾದಗಿರಿ ತಹಸೀಲ ಆಫಿಸಿಗೆ ನಾನು ಮತ್ತು ನಮ್ಮ ತಾಯಿ ಬೀಮಣಿಬಾಯಿ ಮದ್ಯಾಹ್ನ ಬಂದಾಗ  ಆಗ 1. ಸಂಜಯ ತಂ. ಜಂಬು ಪವಾರ, 2. ಗನ್ನಿಬಾಯಿ ಗಂ. ಜಂಬು ಪವಾರ. ಹಾಗೂ ಅವರ ಸಂಭಂದಿಕರಾದ 3. ಜಂಬು ತಂ. ಬಾಷಾ, 4. ಹಂಪ್ಯಾ ತಂ. ಜಂಬು, 5. ರೂಪ್ಲಾ ತಂ. ದೇವಜಿ, 6. ಈರ್ಯಾ ತಂ. ಭಾಷಾ, 7. ಭಿಮ್ಯಾ ತಂ. ಸುಭಾಶ, 8. ವಿಠ್ಠಲ ತಂ. ಜಂಬು, 9. ಸುನೀತಾಬಾಯಿ ಗಂ. ಶಾಂತ್ಯಾ, 10. ಆರತಿ ಗಂ. ಸಂಜು ಪವಾರ ಸಾಃ ಎಲ್ಲರೂ ಎಸ್.ಹೊಸಳ್ಳಿ ತಾಂಡಾ ರವರು ಬಂದಿದ್ದರು. ಆಗ ಮಾನ್ಯ ತಹಸೀಲ್ದಾರರು ವಿಚಾರಣೆ ದಿನಾಂಕ ಇನ್ನೋಂದು ಮುದ್ದತ್ತು ನೀಡಿದ್ದರಿಂದ ನಾವು ತಹಸೀಲ ಆಫೀಸಿನಿಂದ ಹೊರಗಡೆ ಬಂದು 3-15 ಪಿಎಂ ಸುಮಾರಿಗೆ ನಿಂತಾಗ ಸಂಜಯ ಮತ್ತು ಊಳಿದವರೆಲ್ಲರೂ ಗುಂಪುಕಟ್ಟಿಕೊಂಡು ನಮ್ಮ ಹತ್ತಿರ ಬಂದು ಏ ಬೋಸಡಿ ಮಗನೇ ನಮ್ಮ ಪಾಲು ನಮಗೆ ಕೊಟ್ಟು ಬಿಡು ಅಂತಾ ಅಂದಾಗ ನಾನು ಅವರಿಗೆ ನಿಮ್ಮ ಆಸ್ತಿ ಬೇರೆ ಇದೆ ಇದಕ್ಕೂ ನಿಮಗೂ ಸಂಭಂದ ಇಲ್ಲಾ ಅಂದಿದ್ದಕ್ಕೆ ಸಂಜಯ ಈತನು ಆಸ್ತಿಗೆ ಸಂಭಂದ ಇಲ್ಲಾ ಅನ್ನುತ್ತಿ ಮಗನೇ ಅಂತಾ ಒಂದು ಹಿಡಿಗಲ್ಲಿನಿಂದ ಬಾಯಿಗೆ ಹೊಡೆದು ರಕ್ತಗಾಯ ಮಾಡಿದನು.  ಆಗ ನಮ್ಮ ತಾಯಿ ಜಗಳಾ ಬಿಡಿಸಲು ಬಂದಾಗ ಗನ್ನಿಬಾಯಿ, ಸುನೀತಾಬಾಯಿ, ಆರತಿ ಇವರೆಲ್ಲರೂ ಕೂಡಿ ನೆಲಕ್ಕೆ ಹಾಕಿ ಹೊಡೆ ಬಡೆ ಮಾಡಿ ಒಳಪೆಟ್ಟು ಮಾಡಿರುತ್ತಾರೆ ಅಗ ನಾನು ಯಾಕೆ ಹೊಡೆಯುತ್ತಿದ್ದಿರಿ ಅಂತಾ ಅಂದಿದ್ದಕ್ಕೆ  ಸಂಜಯ ಈತನು ಪಕ್ಕದಲ್ಲಿ ಬಿದ್ದಿದ್ದ ಒಂದು ರಾಡನ್ನು ತೆಗೆದುಕೊಂಡು ಬಂದು ನನ್ನ ಎಡಪಕ್ಕೆಗೆ ಹೊಡೆದು ಬಾರಿ ಒಳಪೆಟ್ಟು ಮಾಡಿದ್ದು, ಅದೆ ರಾಡಿನಿಂದ ನನ್ನ ಬಲ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿದ್ದು ಜಂಬು ತಂ. ಬಾಷಾ, ಹಂಪ್ಯಾ ತಂ. ಜಂಬು, ರೂಪ್ಲಾ ತಂ. ದೇವಜಿ, ಇವರು ನನಗೆ ನೆಲಕ್ಕೆ ಕೈಯಿಂದ ಹೊಡೆದು ಕಾಲಿನಿಂದ ಒದ್ದರು.  ಈರ್ಯಾ ತಂ. ಭಾಷಾ, ಭಿಮ್ಯಾ ತಂ. ಸುಭಾಶ, ಇವರು ಈ ಸೂಳೆ ಮಗನಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ಜೀವದ ಬೆದರಿಕೆ ಹಾಕಿದಾಗ ವಿಠ್ಠಲ ತಂ. ಜಂಬು ಇತನು ಇ ಮಗನಿಗೆ ಬಹಳ ಸೊಕ್ಕು ಬಂದಿದೆ ಅಂತಾ ಕಾಲಿನಿಂದ ಬೆನ್ನಿಗೆ ಒದ್ದನು. ಆಗ ನಾವು ಚೀರಾಡುತ್ತಿರುವಾಗ ತಹಸೀಲ ಆಫೀಸ ಹತ್ತಿರ ಇದ್ದ ಪೂಲಸಿಂಗ ತಂ. ದೇವಜೀ ಪವಾರ, ಬಾಬು ತಂ. ದಾಂಬ್ಲಾ ಚವ್ಹಾಣ ಇವರು ಜಗಳಾ ಬಿಡಿಸಿದರು ನಂತರ  ನಾನು ಮತ್ತು ನಮ್ಮ ತಾಯಿ ಕೂಡಿಕೊಂಡು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ. ನಮಗೆ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು 6-45 ಪಿಎಂಕ್ಕೆ ಬಂದು ಪಿರ್ಯಾದಿಯ ಹೇಳೀಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.69/2019 ಕಲಂ.143,147,148, 323,324,326,504,506,ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಟಕಲ ಪೊಲೀಸ್ ಠಾಣೆ :- ಗುನ್ನೆ ನಂ: 141/2019 ಕಲಂ: 379 ಐಪಿಸಿ;- ದಿನಾಂಕ 28.08.2019 ರಂದು ಸ.ತ.ಪಿರ್ಯಾಧಿ ರಾತ್ರಿ ವಿಶೇಷ ಗಸ್ತು ಕರ್ತವ್ಯದಲಿದ್ದಾಗ ಒಬ್ಬ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಗ್ಗೆ ಭಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸಮಯ ರಾತ್ರಿ 2.00  ಎ.ಎಂ ಕ್ಕೆ ಚೆಪೆಟ್ಲಾ ಗ್ರಾಮ ದಾಟಿ ಹಿಮ್ಲಾಪೂರ ಕ್ರಾಸ ಹತ್ತಿರ ಒಂದು ಟ್ರ್ಯಾಕ್ಟರನ್ನು ಬರುತ್ತಿದ್ದನ್ನು ನೋಡಿ ಟ್ರ್ಯಾಕ್ಟರ ನಿಲ್ಲಿಸಿ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪರಿಶೀಲಿಸಿದ್ದು ಕೆಂಪು ಬಣ್ಣದ ಮಸ್ಸಿ ಪರ್ಗುಶನ್ ಟ್ರ್ಯಾಕ್ಟರ ಇಂಜಿನ ನಂ.ಖ337.1ಃ25351 ಒಇಂ665ಂ5ಈಏ 2249746 ಅಂತಾ ಇದ್ದು ಟ್ರ್ಯಾಲಿ ನಂಬರ ಇರುವುದಿಲ್ಲ. ಸದರಿ ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು ಇರುತ್ತದೆ. ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ತುಂಬಿದ ಟ್ರ್ಯಾಕ್ಟರ ಮೂಲ ಜಪ್ತಿ ಪಂಚನಾಮೆ ಹಾಗೂ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಈ ಮೇಲಿನಂತೆ ಪ್ರಕರಣ ದಾಖಲಿಸಲಾಗಿದೆ.

ಕೊಡೇಕಲ ಪೊಲೀಸ್ ಠಾಣೆ :- ಗುನೆ ನಂ. 46/2019 ಕಲಂ:78() ಕೆ ಪಿ ಆಕ್ಟ;- ದಿನಾಂಕ 27.08.2019 ರಂದು 5:30 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ: 27.08.2019 ರಂದು 2:20 ಪಿ.ಎಮ್ ಗಂಟೆಗೆ ತಾವು ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ಸದರ ಕಟ್ಟಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕಲ್ಯಾಣಿ ಮಟಕಾ ಎಂಬುವವ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ತಿಳಿಸಿದ್ದು ಯಲ್ಲಪ್ಪ ಹೆಚ್ಸಿ ರವರು ಪಂಚರನ್ನಾಗಿ 1) ಯಂಕಪ್ಪ ತಂದೆ ಹಣಮಂತ ಘಾಟಗೇರ ಸಾ: ಕೊಡೇಕಲ್ಲ  2) ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ  ಇವರನ್ನು  2:30 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡಿದ್ದು ಅದಕ್ಕೆ ಒಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117  ಬಸನಗೌಡ ಹೆಚ್ಸಿ-100, ರವರನ್ನು ಮತ್ತು  ಪಂಚರೊಂದಿಗೆ ಠಾಣೆಯಿಂದ 2:35 ಪಿಎಮ್ ಕ್ಕೆ ಬಿಟ್ಟು 3:15 ಪಿಎಮ್ಕ್ಕೆ ಕಕ್ಕೇರಾ ಉಪ ಠಾಣೆಗೆ ತಲುಪಿ ಅಲ್ಲಿನ ಸಿಬ್ಬಂದಿಯವರಾದ ಎಎಸ್ಐ ಬಸನಗೌಡ ಮತ್ತು ಪ್ರಕಾಶ ಹೆಚ್ಸಿ-143 ರವರಿಗೆ ಕರೆದು ಅವರಿಗೆ ವಿಷಯ ತಿಳಿಸಿ ನಮ್ಮ ಜೋತೆಗೆ ಜೀಪಿನಲ್ಲಿ ಕೂಡಿಸಿಕೊಂಡು ಬಾತ್ಮಿ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ಸದರ ಕಟ್ಟಿಯ ಹತ್ತಿರ ಹೋಗಿ  ಸ್ವಲ್ಪ ದೂರದಲ್ಲಿ 3:30 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ   ಸದರ ಕಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕಲ್ಯಾಣೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 3:35 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ರಮೇಶ @ ರಾಮಲಿಂಗ ತಂದೆ ಬಸಣ್ಣ ಹೂಗಾರ ವ:38 ವರ್ಷ ಉ: ಹೂ ಮಾರುವದು ಜಾ: ಹೂಗಾರ ಸಾ: ಕಕ್ಕೇರಾ ತಾ: ಸುರಪೂರ  ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಕಾ ಚೀಟಿ, ಮತ್ತು ನಗದು ಹಣ 320 ರೂಪಾಯಿಗಳು ದೊರೆತಿದ್ದು. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 3:35 ಪಿ.ಎಮ್ ದಿಂದ 4:35 ಪಿಎಮ್ ವರೆಗೆ  ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 5:30 ಪಿ.ಎಮ್ ಕ್ಕೆ ಬಂದು ನಿಮಗೆ ನಾನು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸಿದ್ದು, ಆರೋಪಿತನ ಮೇಲೆ ಮುಂದಿನ ಕ್ರಮ ಜರುಗಿಸಬೇಕುೆ.  ಅಂತಾ ಇದ್ದು ಕಾರಣ ಪಿಎಸ್ಐ ಸಾಹೇಬರು ಹಾಜರ ಪಡಿಸಿದ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದು ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾಗಿದ್ದರಿಂದ  ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನಿನ್ನೆಯ ದಿನ ಹೆಚ್ಸಿ-124 ರವರು ಮಾನ್ಯರು ನ್ಯಾಯಾಲಯಕ್ಕೆ ಪರವಾನಿಗೆಗಾಗಿ ವಿನಂತಿಸಿಕೊಂಡಿದ್ದು. ಇಂದು ದಿನಾಂಕ: 28.08.2019 ರಂದು 4:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶದ ಮೇಲಿಂದ ಇಂದು ನಾನು ಸಂಗಪ್ಪ ಹೆಚ್ಸಿ-135 ಠಾಣಾ ಗುನ್ನೆ ನಂ: 46/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

ಶೋರಾಪೂರ ಪೊಲೀಸ್ ಠಾಣೆ :- 174/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ;-ದಿನಾಂಕ:28-08-2019 ರಂದು 5-30 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬರು ತಮ್ಮ ಟಿಪ್ಪರವಾಹನದಲ್ಲಿ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯ ದಡದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಶೇಳ್ಳಗಿ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಠಾಣೆಯ  ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105, 2) ಶ್ರೀ ಸೋಮಯ್ಯಾ ಸಿಪಿಸಿ-235, 3) ಶ್ರೀ ಲಿಂಗಣಗೌಡ ಸಿಪಿಸಿ-365 ಮೂವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೊಗೋಣ ಅಂತಾ ಹೇಳಿ ಇಬ್ಬರು ಪಂಚರಾದ 1) ಶ್ರೀ ರಿಯಾಜ ತಂದೆ ಮಹಿಬೂಬಸಾಬ ಖಾನ ವಯಾ:20 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ಕಬಾಡಗೇರಾ ಸುರಪೂರ  2) ಶ್ರೀ ಹುಸೇನಶಾ ತಂದೆ ಮಕಬುಲ್ಲಶಾ ವಯಾ:19 ವರ್ಷ ಉ:ಕೂಲಿ ಜಾತಿ:ಮುಸ್ಲಿಂ ಸಾ:ಆಸರ ಮೊಹಲ್ಲಾ ಸುರಪೂರ ಇವರನ್ನು ಠಾಣೆಗೆ 05-15 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ನೇದ್ದರಲಿ 05-30 ಎ.ಎಂ.ಕ್ಕೆ ಠಾಣೆಯಿಂದ ಹೊರಟು ಶೆಳ್ಳಗಿ ಕ್ರಾಸ ಹತ್ತಿರ 6-15 ಎ.ಎಂ.ಕ್ಕೆ ಹೋಗಿ ರಸ್ತೆಯ ಪಕ್ಕದಲ್ಲಿ ಕಾಯುತ್ತಾ ನಿಂತುಕೊಂಡಾಗ 6-30 ಎ.ಎಂ. ಸುಮಾರಿಗೆ ಶೇಳ್ಳಗಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ  ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಪೊಲೀಸರ ಸಹಾಯದಿಂದ ಕೈ ಮಾಡಿ ನಿಲ್ಲಿಸಲು ಸದರಿ ಟಿಪ್ಪರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ಸ್ವಲ್ಪ ದೂರದಲ್ಲಿಯೆ ನಿಲ್ಲಿಸಿ ಕೆಳಗೆ ಇಳಿದು ಓಡಿಹೋಗಿದ್ದು, ಸದರಿ ಟಿಪ್ಪರನ್ನು ಪರೀಶಿಲಿಸಿ ನೋಡಲು ಒಂದು ಟಾಟಾ ಕಂಪನಿಯ ಟಿಪ್ಪರ ನಂಬರ ಕೆಎ-01 ಎಹೆಚ್-1772 ನೇದ್ದು ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅ.ಕಿ 10400/- ರೂಗಳು ಆಗುತ್ತದೆ. ಸದರಿ ಓಡಿ ಹೋದ ಟಿಪ್ಪರ ಚಾಲಕನ ಬಾಲಪ್ಪ ತಂದೆ ಕಂಟೆಪ್ಪ ಮಂಗಳೂರ ವಯಾ:41 ವರ್ಷ ಉ:ಡ್ರೈವರ ಜಾತಿ:ಕುರುಬರ ಸಾ:ಗಾಳಪೂಜಿ ತಾ:ಮುದ್ದೇಬಿಹಾಳ ಅಂತಾ ಗೊತ್ತಾಯಿತು.ಸದರಿ ಟಿಪ್ಪರ ಮತ್ತು ಮಾಲಿಕರು ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 06-30 ಎ.ಎಮ್ ದಿಂದ 07-30 ಎ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!