ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-08-2019

By blogger on ಮಂಗಳವಾರ, ಆಗಸ್ಟ್ 27, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-08-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 126/2019 ಕಲಂ 279,338 ಐಪಿಸಿ:-ದಿನಾಂಕ 16/08/2019 ರಂದು ಬೆಳಿಗ್ಗೆ ಸುಮಾರಿಗೆ ನನ್ನ ಅಕ್ಕಳಾದ ಬಸಲಿಂಗಮ್ಮ ಗಂಡ ಅಯ್ಯಣ್ಣ ಅಲ್ಲೂರ ಮತ್ತು ಆಕೆಯ ಮಗನಾದ ಮಲ್ಲಿನಾಥರೆಡ್ಡಿ ತಂದೆ ಅಯ್ಯಣ್ಣ ಅಲ್ಲೂರ ಇಬ್ಬರೂ ಕೂಡಿಕೊಂಡು ಮನೆಯ ದೇವರಾದ ಹಲಕಟರ್ಿಯಲ್ಲಿ ಇರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತೆವೆ ಅಂತಾ ಹೇಳಿ ತಮ್ಮ ಮೋಟಾರ ಸೈಕಲ್ ನಂಬರ ಕೆ.ಎ-33-ಎಕ್ಸ-0345 ನೆದ್ದರ ಮೇಲೆ ಕುಳಿತುಕೊಂಡು ಹೋದರು, ಆಗ ಮಲ್ಲಿನಾಥರೆಡ್ಡಿ ಇತನು ಮೋಟಾರ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದನು, ನನ್ನ ಅಕ್ಕಳು ಅವನ ಹಿಂದೆ ಕುಳಿತುಕೊಂಡಿದ್ದಳು, ಹೀಗಿದ್ದು ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಅಕ್ಕಳಾದ ಬಸಲಿಂಗಮ್ಮ ಇವಳು ಮೊಬೈಲದಿಂದ ಪೋನ ಮಾಡಿ ನಾನು ಮತ್ತು ಮಲ್ಲಿನಾಥರೆಡ್ಡಿ ಹಲಕಟರ್ಿಗೆ ಹೋಗಿ ವೀರಭದ್ರೆಶ್ವರ ದೇವರ ದರ್ಶನ ಮಾಡಿಕೊಂಡು ನಂತರ ಮರಳಿ ಅದೇ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಮರಳಿ ಯಾದಗಿರಿಗೆ ಬರುವಾಗ ಯರಗೋಳ ಗ್ರಾಮ ದಾಟಿದ ನಂತರ ಮಲ್ಲಿನಾಥರೆಡ್ಡಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುತ್ತಿದ್ದನು, ಆಗ ನಾನು ನಿಧಾನವಾಗಿ ಓಡಿಸಿಕೊಂಡು ಹೋಗು ಅಂತಾ ಹೇಳಿದರು ಕೂಡಾ ಅವನು ಅದೇ ವೇಗದಲ್ಲಿ ಓಡಿಸಿಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ್ ಸ್ಕೀಡ್ ಆಗಿ ಅಪಘಾತವಾಗಿದ್ದರಿಂದ ಅಪಘಾತದಲ್ಲಿ ನನ್ನ ಎಡಗೈ ಮೊಳಕೈಗೆ ಮತ್ತು ಭುಜಕ್ಕೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಮತ್ತು ಮುಖಕ್ಕೆ ತರಚಿದ ಗಾಯವಾಗಿರುತ್ತದೆ, ನನ್ನ ಮಗ ಮಲ್ಲಿನಾಥರೆಡ್ಡಿ ಇತನಿಗೆ ಯಾವುದೇ ಗಾಯಗಳು ಆಗಿರುವದಿಲ್ಲ, ಈ ಅಪಘಾತವು ಇಂದು ಮಧ್ಯಾಹ್ನ 2-30 ಗಂಟೆಗೆ ಯರಗೋಳ-ನಾಲವಾರ ರೋಡಿನ ಮೇಲೆ ನಡೆದಿರುತ್ತದೆ, ನೀನು ಬೇಗನೇ ಬಾ ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಮಾವ ಅಯ್ಯಣ್ಣ ಅಲ್ಲೂರ ಇಬ್ಬರೂ ಸ್ಥಳ್ಕಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು ನನ್ನ ಅಕ್ಕ ಬಸಲಿಂಗಮ್ಮಳಿಗೆ ಈ ಮೇಲಿನಂತೆ ಗಾಯಗಳು ಆಗಿದ್ದವು, ಆಗ ನಾನು, ನನ್ನ ಮಾವ ಅಯ್ಯಣ್ಣ ಮತ್ತು ಮಲ್ಲಿನಾಥರೆಡ್ಡಿ ಮೂವರೂ ಕೂಡಿಕೊಂಡು ನನ್ನ ಅಕ್ಕ ಬಸಲಿಂಗ್ಮಮ ಇವಳನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಅಲ್ಲಿಂದ ಮಿರಜದಲ್ಲಿ ಇರುವ ಜಿ.ಎಸ್.ಕೆ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೆವೆ, ನನ್ನ ಅಕ್ಕಳು ಅಲ್ಲಿಯೇ ಉಪಚಾರ ಪಡೆಯುತ್ತಿದ್ದಾಳೆ, ನಮಗೆ ಕಾನೂನಿನ ಅರಿವು ಇಲ್ಲದ ಕಾರಣ ಕಾನೂನ ಬಗ್ಗೆ ತಿಳಿದುಕೊಂಡು ತಡವಾಗಿ ಇಂದು ದಿನಾಂಕ 27/08/2019 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೆನೆ, ಈ ಅಪಘಾತವು ಮಲ್ಲಿನಾಥರೆಡ್ಡಿ ಇತನ ನಿರ್ಲಕ್ಷತನದಿಂದ ನಡೆದಿದ್ದು ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 126/2019 ಕಲಂ 279,338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 140/2019 ಕಲಂ: 498(ಎ), 323, 324, 504, 506 ಸಂ 34 ಐಪಿಸಿ:-ಸುಮಾರು 1 ವರ್ಷದ 8 ತಿಂಗಳ ಹಿಂದೆ ಫೀರ್ಯಾದಿದಾರಳನ್ನು ಆರೋಪಿ ಬಸವರಾಜ @ ಬಸ್ಸ್ಯ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಅದಾದ ನಂತರ 2 ತಿಂಗಳ ವರೆಗೆ ಆರೋಪಿತರು ಫೀರ್ಯಾದಿದಾರಳೋಂದಿಗೆ ಅನೂನ್ಯವಾಗಿದ್ದು ನಂತರ ಆಕೆಗೆ ಚನ್ನಾಗಿ ಅಡುಗೆ ಮಾಡಲು ಬರೋದಿಲ್ಲ ಹಾಗೂ ಚನ್ನಾಗಿಲ್ಲ ಅಂತಾ ಹೊಡೆ-ಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡಿದ್ದು ಅಲ್ಲದೇ ನಿನ್ನೆ ದಿನಾಂಕ 26.08.2019 ರಂದು ಸಂಜೆ 4:00 ಗಂಟೆಗೆ ಫಿರ್ಯಾದಿದಾರಳು ಎಸರು ಬುಡ್ಡೆಯನ್ನು ಹೊತ್ತುಕೊಂಡು ಮನೆಗೆ ಬಂದಾಗ ಆರೋಪಿತನು ಫಿರ್ಯಾಧಿದಾರಳಿಗೆ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದ ಬಗ್ಗೆ ಫಿರ್ಯಾಧಿದಾರಳು ಜಗಳದ ವಿಚಾರವನ್ನು ತನ್ನ ತವರು ಮನೆಗೆ ತಿಳಿಸಿದ ನಂತರ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 27.08.2019 ರಂದು  ಸಂಜೆ 6:15 ಗಂಟೆಗೆ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಗುನ್ನೆ ನಂ: 140/2019 ಕಲಂ: 498(ಎ), 323, 324, 504, 506 ಸಂ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
                                                                                       
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 224/2019. ಕಲಂ 78 (3) ಕೆ.ಪಿ.ಆಕ್ಟ:- ದಿನಾಂಕ:27-08-2019 ರಂದು 3:35 ಪಿ.ಎಮ್.ಕ್ಕೆ  ಆರೋಪಿತನು ಶಹಾಪೂರ ನಗರದ ಆಶ್ರಯ ಕಾಲೋನಿಯ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು  ಒಂದು ರೂಪಾಯಿಗೆ 80 ರೂ ಬರುತ್ತದೆ. ದೈವದ ಆಟಾ ಆಡಿರಿ ಎಂದು ಕೂಗಿ ಕರೆಯುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿ ಹಿಡಿದು ಅವರಿಂದ 1)  ನಗದು ಹಣ 480/- 2) ಒಂದು ಬಾಲ್ ಪೆನ್ .ಕಿ.00=00 3) ಒಂದು ಮಟಕಾ ಚೀಟಿಗಳು ಅ.ಕಿ. 00=00  ಜಪ್ತಿ ಪಡಿಸಿಕೊಂಡು ಮರಳಿ ಠಣೆಗೆ ಬಂದು ಕ್ರಮ ಜರುಗಿಸಿದ್ದು ಇದೆ.
 
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 76/2019 ಕಲಂ. 323 324 341 325 504 506 ಐಪಿಸಿ:-ದಿನಾಂಕ:27/08/2019 ರಂದು ಬೆಳಿಗ್ಗೆ 07.00 ಗಂಟೆಯ ಸುಮಾರಿಗೆ ಫಿರ್ಯಾದಿಯು ತೆಂಬಿಗೆ ತೆಗೆದುಕೊಂಡು ಹಳ್ಳದ ಕಡೆಗೆ ಹೊರಟಾಗ ಆರೋಪಿತನು ಫಿರ್ಯಾದಿಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮಗಳಿಗೆ ಕೊಡಬೇಕಾದ ಹಣವ ಕೊಡು ಅಂತಾ ಫಿರ್ಯಾದಿಗೆ ಬೈದಾಗ ಫಿರ್ಯಾದಿಯು ಹಣವನ್ನು ನಿನ್ನ ಮಗಳಿಗೆ ಬಡ್ಡಿ ಸಮೇತ ಕೊಟ್ಟದ್ದೇನೆ, ಇನ್ನೇನು ಕೊಡುವದಿದೆ ಅಂತಾ ಫಿರ್ಯಾದಿ ಅಂದಾ, ಫಿರ್ಯಾದಿಗೆ ಆರೋಪಿತನು ತನ್ನ ಕೈಯಲ್ಲಿಯ ಬಡಿಗೆಯಿಂದ ಎಡಗೈ ಹಸ್ತದ ಮೇಲೆ ಹೊಡೆದು ಅಲ್ಲದೆ ರಟ್ಟೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯಪಡಿಸಿದ್ದು, ಅಲ್ಲದೆ ಕೈಯಿಂದ ಕಪಾಳಕ್ಕೆ ಜೋರಾಗಿ ಹೊಡೆದಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದಾನೆ ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!