ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-08-2019

By blogger on ಭಾನುವಾರ, ಆಗಸ್ಟ್ 25, 2019  ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-08-2019

ಗುರಮಿಠಕಲ ಪೊಲೀಸ್ ಠಾಣೆ :- ಗುನ್ನೆ ನಂ: 136/2019 ಕಲಂ 323, 354, 504 ಐಪಿಸಿ;- ದಿನಾಂಕ 23.08.2019 ರಂದು ರಾತ್ರಿ 11.00 ಗಂಟೆ ಸುಮಾರಿಗೆ ಪಿರ್ಯಾಧಿ ಒಬ್ಬಳೆ ಸಂಡಸಕ್ಕೆ ಹೋಗುತ್ತಿದ್ದಾಗ ಆರೋಪಿತನು ಪಿರ್ಯಾಧಿ ಹಿಂದೆ ಬಂದು ಅವಳ ಕೈಯಿಡಿದು ಜಗ್ಗಿ ಮಾನಭಂಗಕ್ಕೆ ಪ್ರಯತ್ನಿಸಿದಾಗ ಪಿರ್ಯಾಧಿ ಜೋರಾಗಿ ಚೀರಾಡುತ್ತಿದ್ದನ್ನು ನೋಡಿ ಆರೋಪಿತನು ಪಿರ್ಯಾಧಿಯ ಕಪಾಳಕ್ಕೆ ಕೈಯಿಂದ ಹೊಡೆದು ಸೂಳಿ ಇವತ್ತು ನನ್ನ ಜೊತೆಗೆ ಮಲಗು ಅಂತಾ ಅವಾಚ್ಯವಾಗಿ ಬೈದ ಬಗ್ಗೆ ಪಿರ್ಯಾಧಿ ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ :- 125/2019 ಕಲಂ 143, 147, 148, 323, 324, 504, 506 ಸಂ 149 ಐಪಿಸಿ ;- ದಿನಾಂಕ 25-08-2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿಯು ತನ್ನ ಹೊಲದಲ್ಲಿ ಗಳೆ ಹೊಡೆಯುತತಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿ ಹೊಲದಲ್ಲಿ ಬಂದು ಅವಾಚ್ಯವಾಗಿ ಬೈದು ಈ ಹೊಲದಲ್ಲಿ ನನ್ನ ಅಕ್ಕಳಿಗೆ ಪಾಲು ಕೊಡು ಅಂತಾ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಕೊಡಲಿ ಕಾವಿನಿಂದ, ಕೈಯಿಂದ ಹೊಡೆಬಡೆ ಮಡಿ ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ :- 173/2019 ಕಲಂ 379  ಐ.ಪಿ.ಸಿ;- ದಿನಾಂಕ:25-08-2019 ರಂದು 11-30 ಎ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಮುಭಾರಕ ತಂದೆ ಮಹ್ಮದ ಅಲ್ಲಿಸಾಬ ಸೌಧಾಗರ ವಯಾ:48 ವರ್ಷ ಉ:ಪಾಪುಡಿ ವ್ಯಾಪಾರ ಜಾತಿ:ಮುಸ್ಲಿಂ ಸಾ:ಕುಂಬಾರ ಪೇಠ ಸುರಪೂರ ಇವರು ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ನಮ್ಮವು 12 ಆಡು ಕುರಿಗಳಿದ್ದು ಅವುಗಳನ್ನು ಸಾಕಿಕೊಂಡಿದ್ದು, ಅವುಗಳನ್ನು ಮನೆಯ ಪಕ್ಕದಲ್ಲಿಯ ಒಂದು ಶೇಡ್ಡಿನಲ್ಲಿ ರಾತ್ರಿ ಸಮಯದಲ್ಲಿ ಶೆಡ್ಡನಲ್ಲಿ ಶೇಡ್ಡಿನ ಬಾಗಿಲಿಗೆ ಕೀಲಿ ಹಾಕುತ್ತಿದ್ದೆನು. ಹಿಗಿದ್ದು ನಿನ್ನೆ ದಿನಾಂಕ:24-08-2019 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಎಂದಿನಂತೆ ನಮ್ಮ ಆಡುಮರಿಗಳನ್ನು ಮೆಯಿಸಿಕೊಂಡು ಬಂದು ಶೇಡ್ಡಿನಲ್ಲಿ ಹಾಕಿ ಶೇಡ್ಡಿನ ಬಾಗಿಲಿಗೆ ಕೀಲಿ ಹಾಕಿ ಮನೆಯಲ್ಲಿ ಊಟ ಮಾಡಿ ರಾತ್ರಿಯಾದ ನಂತರ ಮನೆಯಲ್ಲಿ ಮಲಗಿಕೊಂಡಿದ್ದನು. ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದು ಆಡುಮರಿಗಳಿಗೆ ಮೇವು  ಹಾಕಬೇಕು ಅಂತಾ ಶೇಡ್ಡಿನ ಬಾಗಿಲದ ಕೀಲಿ ತಗೆದು ಒಳಗಡೆ ಹೋಗಿ ಮೇವು ಹಾಕಿ ಕುರಿಗಳನ್ನು ನೋಡಲು 12 ಆಡು ಮರಿಗಳಲ್ಲಿ ಮೂರು ಆಡುಗಳು ಶೇಡ್ಡಿನಲ್ಲಿ ಇರಲಿಲ್ಲ ನಾನು ಮನೆಯಲ್ಲಿದ್ದ ನನ್ನ ಮಗನಾದ ಅಜೀಜ ಹೆಂಡತಿಯಾದ ಶ್ರೀ ರಿಜವಾನಾ ಬೇಗಂ ಇವರಿಗೆ ಕರೆದು ಇನ್ನು ಮೂರು ಆಡುಗಳು ಕಾಣಿಸುತ್ತಿಲ್ಲ ಅಂತಾ ಹೇಳಿ ಎಲ್ಲರೂ ಶೇಡ್ಡಿನಲ್ಲಿ ಶೇಡ್ಡಿನ ಅಕ್ಕ ಪಕ್ಕದಲ್ಲಿ ನೋಡಲು ಎಲ್ಲಿಯೂ ಆಡುಗಳು ಇರಲಿಲ್ಲ. ನಂತರ ನಾನು ನನ್ನ ಮಗನಾದ ಅಜೀಜ ಇಬ್ಬರು ಕೂಡಿ ಓಣಿಯಲ್ಲಿ ವಿಚಾರ ಕುಂಬಾರಪೇಠದ ವಾಸುಧಣಿ ಪೆಟ್ರೋಲ ಪಂಪ ಹತ್ತಿರ ಇರುವ ಹೋಟೆಲದಲ್ಲಿ ಹೋಗಿ ಬಂದನಮಾಜ ಈತನಿಗೆ ವಿಚಾರ ಮಾಡಲಾಗಿ ನಾನು ನಸುಕಿನ ಅಂದಾಜು 4 ಗಂಟೆ ಸುಮಾರಿಗೆ ನಾನು ಚಹಾದ ಹೊಟೇಲದಲ್ಲಿದ್ದಾಗ ನಮ್ಮ ಓಣಿಯ ಶರಣಪ್ಪ ತಂದೆ ಯಲ್ಲಪ್ಪ ಗುಡ್ಡಕಾಯ, ಮಂಜುನಾಥ ತಂದೆ ಹಣಮಂತ ಛೇಲುವಾದಿ, ಮುತ್ತಣ್ಣ ತಂದೆ ಶಿವಪ್ಪ, ಮೌನೇಶ ತಂದೆ ಚಂದ್ರಶೇಖರ ಬಿಚ್ಚಗತ್ತಕೇರಿ ಶಶಿಕುಮಾರ ತಂದೆ ಗೋಪಾಲ ಹಿರೆಗೋಟ ಈತನ ಅಟೋ ನಂಬರ ಕೆಎ-33 ಎ-3020 ನೇದ್ದರಲ್ಲಿ ಮೂರು ಆಡುಗಳನ್ನು ಹಾಕಿಕೊಂಡು ಚಹಾದ ಹೊಟೇಲಗೆ ಬಂದು ಚಹಾ ಕೇಳಿದ್ದು ಆಗ ನಾನು ಅವರಿಗೆ ಇನ್ನು ಚಹಾ ಮಾಡಿಲ್ಲ ಅಂತಾ ಹೇಳಿದಾಗ ಅವರು ಅವಸರಗೊಂಡು ಹೊರಟು ಹೊದರು ಅಂತಾ ತಿಳಿಸಿದ್ದು ಇರುತ್ತದೆ. ಸದರಿ ನನ್ನ ಆಡುಗಳನ್ನು ಮೇಲೆ ಹೇಳಿದ ಐದು ಜನರು ದಿನಾಂಕ:24-08-2019 ರಂದು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳತನವಾದ ಮೂರು ಕುರಿಗಳ ಅಂದಾಜು ಕಿಮ್ಮತ್ತು 24000/- ರುಗಳು ಆರಗುತ್ತದೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಆಡುಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 221/2019 ಕಲಂ 87 ಕೆ.ಪಿ.ಯಾಕ್ಟ;- ದಿನಾಂಕ 25/08/2019 ರಂದು 1.00 ಪಿ.ಎಂಕ್ಕೆ ಶ್ರೀ ಹನುಮರೆಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ನಾಲವಾಡಗಿ ಗ್ರಾಮದ ಹನುಮಾನ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೆಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ 6 ಜನರು ಸಿಕ್ಕಿದ್ದು ಅವರ ಹೆಸರು 1)ಶಿವರಾಜ ತಂದೆ ಶಿವರಾಜ ಬಡಿಗೇರ ವ|| 27 ಜಾ|| ಕಬ್ಬಲಿಗ ಉ|| ಕೂಲಿ ಸಾ|| ನಾಲವಾಡಗಿ 2)ಯಂಕಪ್ಪ ತಂದೆ ಸಾಬಣ್ಣ ಶಖಾಪೂರ ವ|| 32 ಜಾ|| ಕುರುಬರ ಉ|| ಒಕ್ಕಲುತನ ಸಾ|| ನಾಲವಾಡಗಿ 3)ಶ್ರೀಶೈಲ ತಂದೆ ಹಣಮಂತ ತಳವಾರ ವ|| 25 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ನಾಲವಾಡಗಿ 4)ವಿಶ್ವನಾಥ ತಂದೆ ಮಲ್ಲಣ್ಣ ಮಾಲಿ ಪಾಟೀಲ ವ|| 35 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ನಾಲವಾಡಗಿ 5)ಮರೆಪ್ಪ ತಂದೆ ಹಣಮಂತ ಚಟ್ನಳ್ಳಿ ವ|| 45 ಜಾ|| ಮಾದರ ಉ|| ಕೂಲಿ ಸಾ|| ನಾಲವಾಡಗಿ 6)ಈಶಪ್ಪ ತಂದೆ ಸಾಬಣ್ಣ ಓರುಣಸಿ ವ|| 37 ಜಾ|| ಮಾದರ ಉ|| ಕೂಲಿ ಸಾ|| ನಾಲವಾಡಗಿ ತಾ|| ಶಹಾಪೂರ ಅಂತಾ ತಿಳಿಸಿದ್ದು ಅವರ ಹತ್ತಿರ 6850/- ರೂ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು, ಹಣ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 25/08/2019 ರಂದು 3.30 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 4.30 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 221/2019 ಕಲಂ 87 ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ :- ಗುನ್ನೆ ನಂ. 92/2019 ಕಲಂ: 143, 147, 148, 341, 323, 324, 307, 354, 427, 504, 506 ಸಂ/ 149 ಐಪಿಸಿ ;- ದಿನಾಂಕ: 25/08/2019 ರಂದು 06.30 ಪಿಎಮ್ ಕ್ಕೆ ಪಿಯರ್ಾದಿ ಶ್ರೀಮತಿ. ಕಮಲಬಾಯಿ ಗಂಡ ಮಲ್ಲಪ್ಪ ವ:50 ಜಾ: ಹಿಂದೂ ಮಾದರ (ಪ.ಜಾತಿ.) ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದ್ದು, ಸದರಿ ದೂರು ಅಜರ್ಿ ಸಾರಂಶ ಏನಂದರೆ, ನಾನು ಕಮಲಬಾಯಿ ಗಂಡ ಮಲ್ಲಪ್ಪ ದೂರುದಾರಳಾದ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಾಪುರ ಈ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ : 24/08/2019 ರಂದು ನಾನು ಶಾಲೆಯಲ್ಲಿ ಮದ್ಯಾಹ್ನದ ಊಟವನ್ನು ತಯಾರು ಮಾಡಿ ಶಾಲಾ ಮಕ್ಕಳಿಗೆ ಬಡಿಸಿ ನಂತರ ಮಕ್ಕಳದೆಲ್ಲಾ ಊಟ ಮುಗಿದ ನಂತರ ಅಡುಗೆ ಸಾಮಾನುಗಲನೆಲ್ಲಾ ತೋಳೆದು ಇಟ್ಟು, ಬಾಗಿಲು ಬಂದು ಮಿಚ್ಚಿಕೊಂಡು ಹೋಗುವಾಗ ಭೀಮಣ್ಣ ತಂದೆ ಮರಳಪ್ಪ ನವರು ಬಂದು ಶಾಲಾ ಮಕ್ಕಳಿಗೆ ಊಡ ಹೇಗಿತ್ತು ಎಂದು ಕೇಳಿದಾಗ ಅವರೆಲ್ಲಾ ಇಷ್ಟು ದಿನ ಇರುವದಕಿಂತ ಇವತ್ತು ಊಟ ಚನ್ನಾಗಿತ್ತು ಎಂದು ಹೇಳಿದರು. ಆದ್ಯಾಗ್ಯೂ ನನ್ನ ಮೇಲೆ ಹಳೆ ದ್ವಷದಿಂದ ಇರುವ ಕಾರಣ ನೀನು ಅಡುಗೆ ಚನ್ನಾಗಿ ಮಾಡಿಲ್ಲ. ನೀನು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅದಕ್ಕೆ ನಾನು ಎಸ್.ಡಿ.ಎಂ.ಸಿ ಸದಸ್ಯನಾಗಿ ನಿನ್ನ ಕಿತ್ತು ಎಸೆಯುತ್ತೇನೆ. ಎಂದು ಹೇಳಿದಾಗ ನನಗೂ ಅವನಿಗು ಸ್ವಲ್ಪ ವಾದ ವಿವಾದಗಳಾದವು. ನಂತರ ನನಗೆ ಅಡುಗೆ ಮಾಡಿಸಿ ಎಂದು ಹೇಳಿದ. ಆಗ ನಾನು ಕೆಲಸ ಮುಗಿಸಿ ಮನೆಗೆ ಹೊರಟಿದ್ದೇನೆ. ನನಗೆ ಆಗುವದಿಲ್ಲ ಎಂದು ಹೋರಟೆನು. ಆಗ ನನ್ನನ್ನು ತಡೆದು ನಾನು ಎಸ್.ಡಿ.ಎಂ.ಸಿ ಸದಸ್ಯನಾಗಿ ಹೇಳಿದರು ಕೂಡ ನನಗೆ ಅಡುಗೆ ಮಾಡಿ ಬಡಿಸುವದಿಲ್ಲವಾ ಎಂದು ನನ್ನ ಮೇಲೆ ಹಲ್ಲೆ ಮಾಡಲು ಬಂದು ಸೀರೆ ಸೆರಗನ್ನು ಕೈಯಿಂದ ಎಳೆದು ಅವಾಚ್ಯ ಶಬ್ದಗಳಿಂದ ಬೈಯ್ದು ಅವಮಾನಿಯವಾಗಿ ನಡೆದುಕೊಂಡನು.

         ಅಲ್ಲಿಂದ ನನಗೆ ಅವಮನವಾಗಿ ಮನೆಗೆ ಹೋಗಿ ನಮ್ಮ ಕುಟುಂಬದವರಿಗೆಲ್ಲಾ ತಿಳಿಸಿದಾಗ ನನ್ನ ಗಂಡ ಮಲ್ಲಪ್ಪ ಮತ್ತು ನನ್ನ ಮಕ್ಕಳಾದ 1) ದೇವಪ್ಪ 2) ಸದಾಶಿವ ರವರು ಅವರಿಗೆ ಹೀಗೆಕೆ ಮಾಡಿದಿ ಎಂದು ಕೇಳಿ ನಾನು ಮಾನಕ್ಕೆ ಹೆದರಿ ಬದುಕುವವರು ಹೀಗೆ ಮಾಡುವದು ಸರಿಯಲ್ಲ ಎಂದು ಹೇಳಿದಾಗ ಅವರೆಲ್ಲಾ ಹೇ ಮಕ್ಕಳೆ ನಮಗೆ ಕೇಳಲು ಬಂದಿದ್ದಿರಾ ಎಂದು ಹೇಳಿ ಮೈ ಮೇಲೆ ಬಂದರು. ಸದಕ್ಕೆ ಅಲ್ಲಿಂದ ಓಡಿ ಬಂದು ನಾನು ನನ್ನ ಗಂಡ ಮತ್ತು ನನ್ನ ಮಕ್ಕಳು ಎಲ್ಲರೂ ಸೇರಿ ಮನೆಯೊಳಗೆ ಹೊಕ್ಕು ಬಾಗಿಲು ಮುಚ್ಚಿಕೊಂಡು ಒಳಚಿಲಕಾ ಹಾಕಿಕೊಂಡು ಮತ್ತು ಬಾಗಿಲಿಗೆ ಒಳಗಡೆಯಿಂದ ಜೋಳದ ಚೀಲಗಳನ್ನು ಇಟ್ಟು ಕೂಡ ಸುಮಾರು 15 ರಿಂದ 18 ಜನ ಈ ಕೇಳಗೆ ಹೆಸರಿಸಿದಂತೆ 1) ಶರಣಪ್ಪ ತಂದೆ ಬೀಮಪ್ಪ 2) ಬೀಮಣ್ಣ ತಂದೆ ಮರಳಪ್ಪ 3) ಮಹೇಶ ತಂದೆ ಯಮನಪ್ಪ 4) ಚಂದ್ರಶೇಖರ ತಂದೆ ಮರಳಪ್ಪ 5) ಮಂಜುಳ ಗಂಡ ಚಂದ್ರಶೇಖಕರ 6) ಕಸ್ತೂರಿಬಾಯಿ ಗಂಡ ಮರಳಪ್ಪ 7) ವಿಜಯಕುಮಾರ ತಂದೆ ಸುಭಾಸ್ ರವರುಗಳು ರಾತ್ರಿ ಸುಮಾರು 08.00 ಗಂಟೆಗೆ ಬಂದು ನಮ್ಮ ಮನೆ ಬಾಗಿಲನ್ನು ತಳ್ಳಿ ನಮ್ಮೆಲ್ಲರನ್ನು ಹೊರಗಡೆ ಎಳೆದುಕೊಂಡು ಬಂದು ಹಲ್ಲೆ ಮಾಡತೊಡಗಿದರ. ನಂತರ 8) ಮರಳಪ್ಪ ತಂದೆ ಬೀಮಪ್ಪ 9) ಯಮನಪ್ಪ ತಂದೆ ಬೀಮಣ್ಣ  10) ಲವಕುಶ ತಂದೆ ಸುಭಾಸ್ 11) ಗುರುರಾಜ ತಂದೆ ಸುಭಾಸ್ 12) ಸುಭಾಸ ತಂದೆ ಭೀಮಪ್ಪ 13) ಮರಳಪ್ಪ ತಂದೆ ಭೀಮಪ್ಪ 14) ಶಾಂತಮ್ಮ ತಂದೆ ಮರಳಪ್ಪ 15) ಶಿಲ್ಪಾ ತಂದೆ ಯಮನಪ್ಪ 16) ಗಂಗಮ್ಮ ಗಂಡ ಶರಣಪ್ಪ 17) ಸರೋಜಿನಿ ಗಂಡ ಯಮನಪ್ಪ 18) ನೀಲಮ್ಮ ಗಂಡ ಸುಭಾಸ್ ಎಲ್ಲರೂ ಸೇರಿ ಒಂದೆ ಸಮಯಕ್ಕೆ ನಮ್ಮೆಲ್ಲರ ಮೇಲೆ ಕಲ್ಲು ಮತ್ತು ಬಡಿಗೆಗಳಿಂದ ಹಲ್ಲೆ ಮಾಡತೊಡಗಿದರು.
     ಅದರ ಮಧ್ಯೆ ಶರಣಪ್ಪ ತಂದೆ ಭೀಮಪ್ಪ ಕೈಯಲ್ಲಿ ಕುಡಗೊಲು ಹಿಡಿದು ಮತ್ತು ಮರಳಪ್ಪ ತಂದೆ ಭೀಮಪ್ಪ ಇವನು ಕೂಡ ತಲವಾರ ಹಿಡಿದುಕೊಂಡು ನನ್ನ ಗಂಡನ ಮೇಲೆ ಹೊಡೆದರು. ಅದಕ್ಕೆ ತಲೆಗೆ ಗಾಯವಾಗಿ ರಕ್ತಸ್ರಾವ ಆಗುವಾ ನನ್ನ ಮಕ್ಕಳು ಬಯಗೊಂಡು ನಮ್ಮ ತಂದೆ ಸತ್ತನೆಂದು ಕಿರಿಚಿಕೊಡು ಬಿಡಿಸಲು ಹೋದಾಗ ನನ್ನ ಮಕ್ಕಳ ಮೇಲೆ ಕೂಡ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ನನ್ನ ಮನೆಯ ಸಾಮಾನು ಮತ್ತು ಮನೆಯ ವಸ್ತುಗಳೆಲ್ಲಾ ದ್ವಂಸ್ಗೊಳಿಸಿ ಮನೆ ಮುಂದೆ ನಿಂತಿದ್ದ ದ್ವೀ ಚಕ್ರ ವಾಹನದ ಮೇಲು ಕಲ್ಲು ಎತ್ತಿ ಹಾಕಿ ಜಕಂಗೊಳಿಸಿದ್ದಾರೆ. 
    ಆದಾಗ್ಯೂ ನನ್ನ ಗಂಡನ ತಲೆಯಿಂದ ವೀಪರೀತ ರಕ್ತಸ್ರಾವಾಗುತ್ತಿರುವಾಗ ನಾವೆಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ಶರಣಪ್ಪ ಮತ್ತು ಭಿಮಣ್ಣ ನವರು ಮತ್ತೆ ತಡೆದು ಇವರನ್ನು ಹೊಗಲು ಬಿಡದೆ ಇಲ್ಲೆ ಸಾಯಿಹೊಡೆಯಬೇಕೆಂದು ಹೇಳಿ ಮತ್ತೆ ಎಲ್ಲರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಅಂದೆ ಸೊಂಟದ ಕೆಳಗಿನ ಬೈಗುಳಗಳಿಮದ ನಿಂದಿಸಿ ಅಮಾನವಿಯವಾಗಿ ದೌರ್ಜನ್ಯ ಮಾಡಿ ಮನ ಬಂದಂತೆ ಥಳಿಸಿದರು. ಇದನ್ನು ಕಂಡು ನಮ್ಮ ಸಮಾಜದವರಾದ ಭೀಮಣ್ಣ ಜೆಟ್ಟೆಪ್ಪ, ಗೌರಮ್ಮ ಗಂಡ ಸದಾಶಿವ ರವರುಗಳು ನೊಡಿ ಜಗಳ ಬಿಡಿಸಿ ಆಸ್ಪತ್ರೆಗೆ ಹೊಗಲು ಅನುವು ಮಾಡಿಕೊಟ್ಟರು. ನಂತರ ಆಸ್ಪತ್ರೆಗೆ ಹೊಗಿ ಇಂದು ದಿನಾಂಕ: 25-08-2019 ರಂದು ಸುಮಾರು 06.30 ಕ್ಕೆ ದೂರು ನೀಡಿರುತ್ತೇವೆ.  ಸದರಿ 18 ಜನರ ಮೇಲೆ ಕಾನೂನು ಕ್ರಮ ಜರೂಗಿಸಬೇಕಾಗಿ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2019 ಕಲಂ: 143, 147, 148, 341, 323, 324, 307, 354, 427, 504, 506 ಸಂ/ 149 ಐಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ :- ಗುನ್ನೆ ನಂ. 93/2019 ಕಲಂ: 143, 147, 148, 323, 324, 354, 504, 506 ಸಂ/ 149 ಐಪಿಸಿ ;- ದಿನಾಂಕ: 25/08/2019 ರಂದು 08.15 ಪಿಎಮ್ ಕ್ಕೆ ಪಿಯರ್ಾದಿ ಶ್ರೀ. ಭೀಮಣ್ಣ ತಂದೆ ಮರಳಪ್ಪ ಹಾದಿಮನಿ ವ;35 ಉ: ಡ್ರೈವರ ಜಾ: ಮಾದರ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಾನು ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ.ಸಿ ಸದಸ್ಯನಾಗಿರುತ್ತೇನೆ. ಆಗಾಗ ಶಾಲೆಗೆ ಬೇಟಿ ಮಾಡಿ ನಾನು ನಮ್ಮ ಶಾಲೆಯ ಶಿಕ್ಷಕರಿಗೆ ಸರಿಯಾಗಿ ಶಾಲೆಗೆ ಬರಲು ಮತ್ತು ಮಕ್ಕಳಿಗೆ ಬಿಸಿ ಊಟ ಮಾಡುವವರಿಗೆ ಸರಿಯಾಗಿ, ದಾನ್ಯಗಳನ್ನು ಸ್ವಚ್ಚವಾಗಿಸಿ ಅಡುಗೆ ಮಾಡಲು ಹೇಳುತ್ತಿದ್ದೆನು.

      ಹೀಗಿದ್ದು ನಿನ್ನೆ ದಿನಾಂಕ: 24/08/2019 ರಂದು ನಾನು 11.30 ಎಎಮ್ . ಸುಮಾರಿಗೆ ನಮ್ಮೂರಿನ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಮಾಡುವವರ ಹತ್ತಿರ ಹೊಗಿ ಸರಿಯಾಗಿ ಅಡುಗೆ ಮಾಡಿದ್ದಿರಿ ಇಲ್ಲ ಅಂತಾ ಕೇಳಿದಾಗ ಮುಖ್ಯ ಅಡುಗೆ ಸಹಾಯಕಿಯಾದ ಶ್ರೀಮತಿ. ಕಮಲಾಬಾಯಿ ಗಂಡ ಮಲ್ಲಪ್ಪ ಹಾದಿಮನಿ ಇವಳು ನನ್ನ ಜೋತೆಯಲ್ಲಿ ವಾದ ವಿವಾದ ಮಾಡಿದ್ದಳು. ಆಗ ನಾನು ಕಮಲಾಬಾಯಿ ಇವಳಿಗೆ ನಾನು ನನ್ನ ಮನೆಯ ಅಡುಗೆ ಮಾಡಲು ಹೇಳಿಲ್ಲ ನಮ್ಮುರಿನ ಎಲ್ಲ ಮಕ್ಕಳು ಊಟ ಮಾಡುತ್ತಾರೆ. ಈಗ ಮಳೆಗಾಲ ಇದೆ ಅಡುಗೆಯಲ್ಲಿ ಯಾವುದೆ ಕೀಟಗಳು ಬಿಳದಂತೆ ಮಾಡರಿ ಅಂತಾ ನಾನು ಎಸ್.ಡಿ.ಎಂ.ಸಿ ಸದಸ್ಯ ಆಗಿದ್ದರಿಂದ ಹೇಳುತ್ತಿದ್ದೇನೆ ಅಂತಾ ಹೇಳಿದ್ದೆನು.
      ನಂತರ ಸಾಯಂಕಾಲ ನಾನು ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ಅಂದಾಜು 07.30 ಪಿಎಂ ಸುಮಾರಿಗೆ ನಮ್ಮೂರಿನ 1) ಮಲ್ಲಪ್ಪ ತಂದೆ ಹಣಮಂತ ಹಾದಿಮನಿ 2) ಸದಾಶಿವ ತಂದೆ ಮಲ್ಲಪ್ಪ ಹಾದಿಮನಿ 3) ದೇವಪ್ಪ ತಂದೆ ಮಲ್ಲಪ್ಪ ಹಾದಿಮನಿ 4) ಕಮಲಾಬಾಯಿ ಗಂಡ ಮಲ್ಲಪ್ಪ ಹಾದಿಮನಿ 5) ಗೌರಮ್ಮ ಗಂಡ ಸದಾಶಿವ ಹಾದಿಮನಿ 6) ದುರ್ಗಮ್ಮ ಗಂಡ ದೇವಪ್ಪ ಹಾದಿಮನಿ ಎಲ್ಲರು ಜಾ: ಮಾದರ ಸಾ: ಗುಂಡಾಪೂರ ಇದ್ದು, ಇವರೆಲ್ಲರೂ ಕೂಡಿಕೊಂಡು ಬಂದವರೆ ಮಲ್ಲಪ್ಪ ಮತ್ತು ಸದಾಶಿವ ಇವರು ಎಲೆ ರಂಡಿ ಮಗನೆ ಭೀಮ್ಯಾ ನೀನು ಎಸ್.ಡಿ.ಎಮ.ಸಿ ಸದಸ್ಯನಾಗಿ ಏನು ಡಿಸಿ ಆಗಿದಿ ಅಂತಾ ತಿಳದಿಯೇನು ಸೂಳೆ ಮಗನೆ, ಅಂತಾ ಅವಾಚ್ಯವಾಗಿ ಬೈಯುತ್ತಾ, ಬೆಳಿಗ್ಗೆ ನಮ್ಮ ತಾಯಿಗೆ ಏನು ಅಂತಾ ಬೈಯ್ದು ಬಂದಿದಿ ಅಂತಾ ಬಂದವರೆ ನನಗೆ ಎದೆ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆಯತೊಡಗಿದರು. ಆಗ ದೇವಪ್ಪ ತಂದೆ ಮಲ್ಲಪ್ಪ ಈತನು ಒಂದು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಅಲ್ಲೆ ಇದ್ದ ಮಂಜುಳಾ ಗಂಡ ಚಂದ್ರಶೇಖರ, ಚಂದ್ರಶೇಖರ ತಂದೆ ಮರಳಪ್ಪ, ಇವರುಗಳು ಬಿಡಿಸಿಕೊಳ್ಳು ಬಂದಾಗ ದೇವಪ್ಪ, ಕಮಲಾಬಾಯಿ, ಮಲ್ಲಪ್ಪ ಮತ್ತು ಸದಾಶಿವ ಇವರುಗಳು, ಕೈಯಿಂದ ಮಂಜೂಳಾ ಮತ್ತು ಚಂದ್ರೇಶಖರ ಇವರೀಗೂ ಮೈಕೈಗೆ ಹೊಡೆದು, ಕಾಲಿನಿಂದ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾರೆ. ಗೌರಮ್ಮ ಮತ್ತು ದುರ್ಗಮ್ಮ ಇವರು ನಮ್ಮ ಮಂಜೂಳಾ ಇವಳಿಗೆ ಕೈಯಿಂದ ಹೊಡೆದು ಕೂದಲು ಹಿಡಿದು ಎಳೆದಾಡಿರುತ್ತಾರೆ. ಅಷ್ಟರಲ್ಲಿ ಶರಣಪ್ಪ ತಂದೆ ಭೀಮಣ್ಣ ಈತನು ಏನಾಯಿತು ಅಂತಾ ವಿಚರಿಸುತ್ತಿರುವಾಗ ಮಲ್ಲಪ್ಪ ಈತನು ಅವನ ಕೈಗೆ ಬಾಯಿಂದ ಕಚ್ಚಿ ಗಾಯ ಮಾಡಿದನು. ಆಗ ಸದಾಶಿವ ಈತನು ಗೌರಮ್ಮ ಇವಳ ಮಾನ ಹಾನಿ ಮಾಡುವ ಉದ್ದೇಶದಿಂದ ಸೀರೆ ಸೆರಗು ಹಿಡಿದು ಎಳೆದಿರುತ್ತಾನೆ. ಆಗ ನಮ್ಮೂರಿನ ಮಹೇಶ ತಂದೆ ಯಮನಪ್ಪ, ಶರಣಪ್ಪ ತಂದೆ ಭೀಮಣ್ಣ ಇವರುಗಳು ಬಿಡಿಸಿಕೊಂಡರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಆಗ ಎಲ್ಲರು ಮಕ್ಕಳಾ ನೀವು ಇನ್ನೊಮ್ಮೆ ಶಾಲೆ ವಿಷಯದಲ್ಲಿ ನಮ್ಮ ತಾಯಿಯು ಅಡುಗೆ ಮಾಡುವ ವಿಷಯದಲ್ಲಿ ಕೇಳಲಿಕ್ಕೆ ಬಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ನವು ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ತಡವಾಗಿ ಇಂದು ದಿನಾಂಕ:25/08/2019 ರಂದು 08.15 ಪಿಎಂ ಕ್ಕೆ ಠಾಣೆಗೆ ಬಂದು ದೂರು ನೀಡಿರುತ್ತೇನೆ. 
       ಕಾರಣ ನಾನು ನಮ್ಮೂರಿನ ಶಾಲೆಯ ಮಕ್ಕಳಿಗೆ ಸರಿಯಾಗಿ ಅಡುಗೆ ಮಾಡರಿ ಅಂತಾ ಅಡುಗೆಯವರಿಗೆ ಹೇಳಿದ್ದಕ್ಕೆ, ನನಗೆ ಮತ್ತು ನಮ್ಮ ಮನೆಯವರಿಗೆ ಹೊಡೆ ಬಡೆ ಮಾಡಿದ್ದು, ಜಗಳ ಬಿಡಿಸಲು ಬಂದ ನನ್ನ ತಮ್ಮನ ಹೆಂಡತಿಗೆ ಸೀರೆ ಸೆರಗು ಹಿಡಿದು ಎಳೆದು ಮಾನ ಹಾನಿ ಮಾಡಿದ್ದು, ನಮಗೆಲ್ಲ ಹೊಡೆದು ಗಾಯಗೊಳಿಸದ ಮೇಲಿನ 06 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 93/2019 ಕಲಂ: 143, 147, 148, 323, 324, 354, 504, 506 ಸಂ/ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.   ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!