ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-08-2019
ಸಂಚಾರಿ ಪೊಲೀಸ್ ಠಾಣೆ :- ಗುನ್ನೆ ನಂ. 51/2019 ಕಲಂ 279, 304(ಎ) ಐಪಿಸಿ ಸಂ, 187 ಐಎಂವಿ ಆ್ಯಕ್ಟ್;- ದಿನಾಂಕ 23/08/2019 ರಂದು ರಾತ್ರಿ 8 ಪಿ.ಎಂ. ದ ಸುಮಾರಿಗೆ ಯಾದಗಿರಿ ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಮುಂಡರಗಿ ಗ್ರಾಮದ ಹತ್ತಿರದ ಬಾದಲ್ ಕಾಟನ್ ಮಿಲ್ ಹತ್ತಿರ ಮುಖ್ಯ ರಸ್ತೆ ಮೇಲೆ ಒಬ್ಬ ಅಪರಿಚಿತ ವ್ಯಕ್ತಿಯು ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ ಅಂದಾಜು ವಯಸ್ಸು 60 ರಿಂದ 65 ವರ್ಷ, ಈತನು ರಸ್ತೆ ಬದಿಯಲ್ಲಿ ಮುಂಡರಗಿ ಕಡೆಯಿಂದ ರಾಮಸಮುದ್ರ ಕಡೆಗೆ ನಡೆದುಕೊಂಡು ಬರುವಾಗ ಅದೇ ಸಮಯಕ್ಕೆ ಮುಂಡರಗಿ ಕಡೆಯಿಂದ ರಾಮಸಮುದ್ರ ಕಡೆಗೆ ಹೊರಟಿದ್ದ ಯಾವುದೋ ಒಂದು ಆಟೋ ನೇದ್ದರ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಆಗ ಪಿಯರ್ಾದಿಯವರು ನೋಡು ನೋಡುತ್ತಿದ್ದಂತೆ ಆ ವ್ಯಕ್ತಿಗೆ ಆಟೋ ನೇದ್ದರ ಚಾಲಕನು ಡಿಕ್ಕಿಕೊಟ್ಟಿ ಅಪಘಾತ ಮಾಡಿದ್ದು ಆಗ ಆ ವ್ಯಕ್ತಿಯು ಡಿಕ್ಕಿ ಕೊಟ್ಟ ರಭಸಕ್ಕೆ ರಸ್ತೆ ಮೇಲೆ ಬಿದ್ದಾಗ ಸದರಿ ಅಪರಿಚಿತ ವ್ಯಕ್ತಿಗೆ ಹತ್ತಿರ ಬಂದು ನೋಡಲಾಗಿ ಈ ಅಪಘಾತದಲ್ಲಿ ತಲೆಗೆ ಗಂಭೀರ ರಕ್ತಗಾಯವಾಗಿ ಮೂಗಿನಿಂದ ಕಿವಿಯಿಂದ ರಕ್ತ ಹೊರಬರುತ್ತಿದ್ದು, ಬಲಗಾಲಿನ ಪಾದದ ಮೇಲೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದು ಇರುತ್ತದೆ. ಅಷ್ಟರಲ್ಲಿಯೇ ಆಟೋ ಚಾಲಕನು ಗಡಿಬಿಡಿಯಿಂದ ತನ್ನ ಆಟೋವನ್ನು ಘಟನಾ ಸ್ಥಳದಿಂದ ಚಾಲು ಮಾಡಿಕೊಂಡು ಓಡಿ ಹೋಗಿರುತ್ತಾನೆ ಪಿಯರ್ಾದಿ ಮತ್ತು ಸಾಕ್ಷಿಯವರು ಆಟೋ ಮತ್ತು ಅದರ ಚಾಲಕನನ್ನು ಮತ್ತೆ ನೋಡಿದ್ದಲ್ಲಿ ಗುತರ್ಿಸುತ್ತೇವೆ ಅಂತಾ ತಿಳಿಸಿದ್ದು ಈ ಘಟನೆ ಜರುಗಲು ಕಾರಣನಾದ ಆಟೋ ಮತ್ತು ಅದರ ಚಾಲಕನನ್ನು ಪತ್ತೆ ಮಾಡಲು ಹಾಗೂ ಆತನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2019 ಕಲಂ 279, 304(ಎ) ಐಪಿಸಿ ಸಂಗಡ ಕಲಂ 187 ಐ.ಎಂ.ವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 220/2019. ಕಲಂಃ 323,384,120ಬಿ, 504,506,149 ಐ.ಪಿ.ಸಿ.;- ದಿನಾಂಕ: 23/08/2019 ರಂದು 5.00 ಪಿಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀ ಚಂದ್ರಕಾಂತ ತಂದೆ ಬಸಣ್ಣ ನಾಗಲೋಟ ವ|| 53ವರ್ಷ ಜಾ|| ಲಿಂಗಾಯತ ಉ|| ಕೆಎಸ್ಆರ್ಟಿಸಿ ಚಾಲಕ/ನಿವರ್ಾಹಕ ಶಹಾಪೂರ ಘಟಕ ಸಾ|| ಸಗರ(ಬಿ) ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ಸಾರಿಗೆ ಇಲಾಖೆಯಲ್ಲಿ ಚಾಲಕ/ನಿವರ್ಾಹಕನಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತಿದ್ದೇನೆ. ಹೀಗಿದ್ದು ದಿನಾಂಕ 07/08/2019 ರಂದು 4.00 ಪಿಎಂ ಸುಮಾರಿಗೆ ನಾನು ಕರ್ತವ್ಯದ ಮೇಲೆ ಶಹಾಪೂರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿಕೊಂಡು ನಿಂತಿದ್ದಾಗ ನನ್ನ ಮೊಬೈಲ ನಂ 9008270272 ನೇದ್ದಕ್ಕೆ ಒಂದು ಮೊಬೈಲ ನಂ 9591348542 ನೇದ್ದರಿಂದ ನನಗೆ ಫೋನ ಮಾಡಿ ಒಬ್ಬಳು ಯಾರೋ ಹೆಣ್ಣುಮಗಳು ನನಗೆ ನೀವು ಯಾರು ಅಂತಾ ಕೇಳಿದಳು ಆಗ ನಾನು ನನ್ನ ಹೆಸರು ಹೇಳಿ ನೀವ್ಯಾರು ಅಂತಾ ಕೇಳಿದಾಗ ಅವಳು ನನ್ನ ಹೆಸರು ಕೇಳಬೇಡಿ ನಿಮ್ಮೊಂದಿಗೆ ಮಾತನಾಡುವುದಿದೆ ಸ್ವಲ್ಪ ಭೇಟಿಯಾಗಬೇಕಿತ್ತು ಅಂತಾ ಅಂದಳು ಆಗ ನಾನು ನೀವ್ಯಾರು ಅಂತಾ ಗೊತ್ತಿಲ್ಲ ನಿಮ್ಮೊಂದಿಗೆ ಮಾತನಾಡಲು ನನಗೇನು ಕೆಲಸವಿಲ್ಲ ಅಂದಿದ್ದಕ್ಕೆ ನೀವು ನನಗೆ ತುಂಬಾ ಪರಿಚಯ ಇದ್ದೀರಿ ನಿಮಗೆ ಮುಖಾಮುಖಿ ಭೇಟಿಯಾದ ಮೇಲೆ ಏನು ಕೆಲಸ ಇದೆ ಅಂತಾ ಹೇಳಿದಳು ಆಗ ನಾನು ಆಯಿತು ಸದ್ಯ ನಾನು ಬೆಂಗಳೂರಿಗೆ ಡ್ಯೂಟಿ ಮೇಲೆ ಹೋಗುತ್ತಿದ್ದೇನೆ ಅಂತಾ ಹೇಳಿ ಫೋನ ಕಟ್ ಮಾಡಿದೆನು. ನಂತರ ದಿನಾಂಕ 8/8/2019 ರಂದು 7.00 ಪಿಎಂ ಸುಮಾರಿಗೆ ನಾನು ಬೆಂಗಳೂರು ಬಸ್ ನಿಲ್ದಾಣದಲ್ಲಿ ಶಹಾಪೂರಕ್ಕೆ ಬರುವ ಕುರಿತು ಬಸ್ ನಿಲ್ಲಿಸಿ ನಿಂತಿದ್ದಾಗ ಮತ್ತೆ ಅದೇ ಮೊಬೈಲ ನಂಬರನಿಂದ ನನಗೆ ಫೋನ ಮಾಡಿ ಅದೇ ಹೆಣ್ಣುಮಗಳು ನೀವು ಯಾವಾಗ ಬರುತ್ತೀರಿ ಅಂತಾ ಕೇಳಿದಲು ನಾನು ಯಾಕೆ ಅಂದಾಗ ಕೆಲಸವಿದೆ ಯಾವಾಗ ಬರುತ್ತೀರಿ ಅಂದಾಗ ನಾನು ನಾಳೆ ಮುಂಜಾನೆ ಬರುತ್ತೇನೆ ಅಂತಾ ಹೇಳಿ ಫೋನ ಕಟ್ ಮಾಡಿದೆನು. ನಂತರ ದಿನಾಂಕ 9/8/2019 ರಂದು ನಾನು ಬೆಂಗಳೂರಿನಿಂದ ಶಹಾಪೂರಕ್ಕೆ ಬಂದು ಡ್ಯೂಟಿ ಮುಗಿಸಿ ಮನೆಗೆ ಹೋದೆನು. ನಂತರ ದಿನಾಂಕ 10/8/2019 ರಂದು 5.00 ಪಿಎಂ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ಇದ್ದಾಗ ಮತ್ತೆ ಅದೇ ಮೊಬೈಲ ನಂಬರನಿಂದ ನನಗೆ ಫೋನ ಮಾಡಿ ನಾನು ರೀ ನಿಮಗೆ ಮೊನ್ನೆ ಫೋನ ಮಾಡಿದ್ದೆನಲ್ಲ ಅವಳೇ ಇದ್ದೀನಿ ನಿಮ್ಮ ಹತ್ತಿರ ಅರ್ಜಂಟ ಕೆಲಸ ಇದೆ ಅಂತಾ ಹೇಳೀನೆಲ್ಲಾ ನೀವು ಇವತ್ತು ಸಂಜೆ 7.00 ಗಂಟೆಯ ಸುಮಾರಿಗೆ ದೋರನಳ್ಳಿ ರಸ್ತೆಯ ಪಕ್ಕದಲ್ಲಿನ ಕ್ಯಾನಲ್ ಬ್ರಿಜ್ ಹತ್ತಿರ ಬರ್ರಿ ನಾನು ಮತ್ತು ನನ್ನೊಂದಿಗೆ ನಮ್ಮ ಒಂದು ಹುಡುಗಿ ಕೂಡಿ ಬರುತ್ತೇವೆ ಮಾತಾಡೋಣ ಅಂದ್ರು ಆಗ ನಾನು ಅವರಿಗೆ ನಿಮ್ಮ ಹತ್ತಿರ ಏನು ಕೆಲಸ ಇದೆ ಹೇಳ್ರಿ ಏನಾದರೂ ಕೆಲಸ ಇದ್ರೆ ಶಹಾಪೂರ ಬಸ್ ನಿಲ್ದಾಣದಲ್ಲಿ ನಿಂತಿದ್ದೇನೆ ಇಲ್ಲಿಗೆ ಬರ್ರಿ ಅಂದಾಗ ಅವರು ರೀ ನೀವು ಅರ್ಜಂಟ ಬರ್ರಿ ಬಹಳ ಮುಖ್ಯವಾದ ಕೆಲಸ ಅಂದಾಗ ನಾನು ಯೋಚಿಸದೇ ದೋರನಳ್ಳಿ ರಸ್ತೆಯಲ್ಲಿರುವ ಮುಖ್ಯ ಕೆನಾಲ ಹತ್ತಿರ ಹೋದೆನು. ಅಲ್ಲಿ ಒಂದು ಹೆಣ್ಣುಮಗಳು ತನ್ನೊಂದಿಗೆ ಒಂದು ಹುಡುಗಿಯನ್ನು ಕರೆದುಕೊಂಡು ಬಂದು ನಿಂತಿದ್ದಳು ನಾನು ಅಲ್ಲಿಗೆ ಹೋದ ತಕ್ಷಣ ಬರ್ರಿ ನಿಮಗಾಗಿ ಕಾಯುತ್ತಿದ್ದೇವೆ ಅಂತಾ ಅಲ್ಲಿ ನಿಂತಿದ್ದ ಹೆಣ್ಣುಮಗಳು ನಾನೇ ರೀ ನಿಮಗೆ ಫೋನ ಮಾಡಿದವಳು ಅಂದಳು ಆಗ ನಾನು ಅವಳ ಪರಿಚಯ ಕೇಳಿದಾಗ ಅವಳ ಹೆಸರು ಮಂಜುಳಾ ಗಂಡ ರವಿ ರಾಠೋಡ ಅಂತಾ ತಿಳಿಸಿದ್ದು ಆಗ ಯಾಕಮ್ಮ ಏನಿದೆ ಕೆಲಸ ಅಂದಾಗ ಮಂಜುಳಾ ಇವಳು ನನಗೆ ತಿಳಿಸಿದ್ದೇನೆಂದರೆ, ಇಲ್ಲಿ ನಮ್ಮ ಗೆಳತಿಯಾದ ವಿಜಯಲಕ್ಷ್ಮಿ ಗಂಡ ಸುಬ್ಬಣ್ಣ ಸಾ|| ಶಹಾಬಾದ ಇವಳು ಬಂದಿದ್ದಾಳೆ ಅವಳು ನಿಮಗೆ ಪರಿಚಯವಂತೆ ನಿಮ್ಮ ಬಸ್ಸಿನಲ್ಲಿ ಬಂದಾಗ ನೋಡಿ ನಿಮ್ಮನ್ನು ಇಷ್ಟ ಪಟ್ಟಾಳಂತೆ ಅವಳೊಂದಿಗೆ ಸ್ವಲ್ಪ ಮಾತಾಡು ಹೋಗರಿ ಅಂತಾ ಹೇಳುವಷ್ಟರಲ್ಲಿ ವಿಜಯಲಕ್ಷ್ಮೀ ಇವಳು ಕೆನಾಲ ಪಕ್ಕದಲ್ಲಿ ಕೂತವಳೇ ಎದ್ದು ಬಂದು ಒಮ್ಮೆಲೇ ನನ್ನ ಹೆಗಲ ಮೇಲೆ ಕೈಹಾಕಿ ಕೆನಾಲ ರೋಡಿಗೆ ಕರೆದುಕೊಂಡು ಹೊರಟಳು ಆಗ ಹಿಂದಿನಿಂದ ನನಗೆ ಗೊತ್ತಿಲ್ಲದಂತೆ ಅಲ್ಲಿದ್ದ ಹುಡುಗಿಯು ವಿಡಿಯೋ ಮಾಡಲಾರಂಭಿಸಿದಳು. ಆಗ ನಾನು ವಿಜಯಲಕ್ಷ್ಮೀ ಇವಳಿಗೆ ಬಿಡಮ್ಮ ಕೈ ಎಂದರೆ ನೀನು ನನಗೆ ತುಂಬಾ ಇಷ್ಟವಾಗಿದ್ದಿಯಾ ನನ್ನೊಂದಿಗೆ ಮಲಗು ಅಂತಾ ನನ್ನ ಹೆಗಲ ಮೇಲೆ ಕೈ ಹಾಕಿದವಳು ಬಿಡಲಿಲ್ಲ ಅಷ್ಟರಲ್ಲಿ ಹಿಂದಿನಿಂದ ಒಬ್ಬ ಮನುಷ್ಯ ಓಡುತ್ತ ಬಂದವನೇ ಏನಲೇ ಸೂಳೆಮಗನೇ ನನ್ನ ಹೆಂಡತಿಯ ಹೆಗಲ ಮೇಲೆ ಕೈ ಹಾಕಿ ಮಲಗಲು ಕರೆದುಕೊಂಡು ಹೋಗುತ್ತಿದ್ದಿಯಾ ಅಂತಾ ಅಂದವನೇ ತನ್ನ ಕೈಯಿಂದ ನನ್ನ ಬೆನ್ನಿಗೆ ಹೊಡೆಯಲಾರಂಭಿಸಿದನು. ಆಗ ನನಗೆ ಫೋನ ಮಾಡಿ ಕರೆಸಿದ್ದ ಮಂಜುಳಾ ಕೂಡ ಹೊಡೆಯಲು ಪ್ರಾರಂಭಿಸಿದಳು ಇಬ್ಬರೂ ಹೊಡೆಯುತ್ತಿದ್ದಾಗ ಬಿಡರಿ ಏಕೆ ಹೊಡೆಯುತ್ತಿದ್ದೀರಿ ಅಂದಾಗ ಅವರೆಲ್ಲರೂ ಕೂಡಿ ನಡಿ ಮಗನೇ ನಿನಗೆ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಕೇಸು ಮಾಡುತ್ತೇವೆ ಅಂತಾ ಹೆದರಿಕೆ ಹಾಕಿ ನನಗೆ ಕೆನಾಲ ರೋಡಿನಿಂದ ಶಹಾಪೂರ ಯಾದಗೀರ ಮುಖ್ಯ ರಸ್ತೆಗೆ ಕರೆದುಕೊಂಡು ಬಂದರು ಅಲ್ಲಿ ಮೇನ ಕೆನಾಲ ಬ್ರಿಜ್ ಹತ್ತಿರ ಬರುತ್ತಿದ್ದಾಗ ನನಗೆ ಸ್ವಲ್ಪ ಪರಿಚಯವಿರುವ ಸಿದ್ದನಗೌಡ ಶಿರವಾಳ ಈತನು ತನ್ನೊಂದಿಗೆ ಇನ್ನೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದವನೇ ಏ ಬಿಡರೋ ಅವನಿಗೆ ಎನು ಮಾಡಬ್ಯಾಡರಿ ಅವನು ನಮ್ಮ ಮಾವ ಆಗಬೇಕು ಅವನಿಗೆ ಯಾಕೆ ಹೊಡೆಯುತ್ತಿದ್ದಿರಿ ಹೊಡಿಬ್ಯಾಡ್ರಿ ಅಂತಾ ಬಂದು ಮಧ್ಯಸ್ಥಿಕೆ ವಹಿಸಿ ನಾಟಕ ಮಾಡಿ ಬಿಡಿಸಿ ನನಗೆ ಸಿದ್ದನಗೌಡ ಮತ್ತು ಅವನೊಂದಿಗೆ ಬಂದಂತಹ ವ್ಯಕ್ತಿ ಕೂಡಿ ಶಹಾಪೂರ ನಗರದ ಹಳೇ ತಹಸೀಲ್ ಕಚೇರಿ ಹತ್ತಿರ ಕರೆದುಕೊಂಡು ಹೋಗಿ ನನಗೆ ಯಾಕೋ ಮಾವ ನೀನು ಸುಮ್ಮನೆ ಇಂತಹ ಕೆಲಸಕ್ಕೆ ಕೈ ಹಾಕೋದಾ ಅಂತಾ ನನಗೆ ಕೇಳಿ ನೀನು ಚಿಂತೆ ಮಾಡಬೇಡ ಎಂಟು ಲಕ್ಷ ರೂಪಾಯಿ ಕೊಡು ಸಮಸ್ಯೆ ಬಗೆಹರಿಸುತ್ತೇವೆ ಇಲ್ಲ ಅಂದ್ರೆ ಇಲ್ಲಿದ್ದಾರಲ್ಲ ಇವರೆಲ್ಲರೂ ನಿಮ್ಮ ಮನೆಗೆ ಹೋಗಿ ಹೇಳಿ ನೀನು ಅವಳೊಂದಿಗೆ ವ್ಯಭಿಚಾರ ಮಾಡಲು ಬಂದೀದಿ ಅಂತಾ ಹೇಳುತ್ತಾರೆ ನಿಮ್ಮ ಸಂಬಂಧಿಕರೆಲ್ಲರಿಗೆ ಗೊತ್ತಾಗಿ ನಿನ್ನ ಮಾನ ಮರ್ಯಾದೆ ಕಳೆಯುತ್ತಾರೆ ಅಂತಾ ಹೇಳಿದನು ಆಗ ನಾನು ಮರ್ಯಾದೆಗೆ ಅಂಜಿ 8 ಲಕ್ಷ ರೂಪಾಯಿ ಕೊಡಲು ಆಗುವುದಿಲ್ಲ 3 ಲಕ್ಷ ರೂಪಾಯಿ ಕೊಡುತ್ತೇನೆ ಅಂತಾ ಒಪ್ಪಿಕೊಂಡೆನು. ಆಗ ಮಧ್ಯಸ್ಥಿಕೆ ವಹಿಸಿ ಬಂದ ಸಿದ್ದನಗೌಡ ಮತ್ತು ಇನ್ನೊಬ್ಬರು ಆಯ್ತು ರವಿವಾರ ದಿನಾಂಕ 11/8/2019 ರಂದು ಒಂದೂವರೆ ಲಕ್ಷ ರೂಪಾಯಿ ಕೊಡು ಉಳಿದ ಹಣ ಶುಕ್ರವಾರ ದಿನಾಂಕ 23/08/2019 ರಂದು ಕೊಡು ಅಂತಾ ಹೇಳಿದರು. ಆಗ ನಾನು ಮಧ್ಯಸ್ಥಿಕೆ ವಹಿಸಿದ ಸಿದ್ದನಗೌಡನ ಜೊತೆ ಬಂದ ಇನ್ನೊಬ್ಬನ ಪರಿಚಯ ಇಲ್ಲದ ಕಾರಣ ಅವನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಮಹಾಂತಗೌಡ ಮದ್ರಿಕಿ ಅಂತಾ ತಿಳಿಸಿದ್ದು ಅವನಿಗೆ ಆಯ್ತು ಮಾತನಾಡಿದಷ್ಟು ಹಣ ಕೊಡುತ್ತೇನೆ ಅಂತಾ ಹೇಳಿ ಒಪ್ಪಿಕೊಂಡಿದ್ದು ಆ ದಿನ ಮುಂಜಾನೆ 11.00 ಗಂಟೆಗೆ ಸಿದ್ದನಗೌಡನು ನನಗೆ ಪೋನ ಮಾಡಿ ಹಣ ಕೊಡಲು ಹೇಳಿದನು ಆಯ್ತು ಅಂತಾ ನಾನು ಮರ್ಯಾದೆಗೆ ಅಂಜಿ ರವಿವಾರ ದಿನಾಂಕ 11/8/2019 ರಂದು 7.00 ಪಿಎಂ ಸುಮಾರಿಗೆ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ಹೋಗಿ ಮಹಾಂತಗೌಡ ಮತ್ತು ಸಿದ್ದನಗೌಡರವರಿಗೆ ಒಂದೂ ವರೆ ಲಕ್ಷ ರೂಪಾಯಿ ಕೊಟ್ಟೆನು. ನಾನು ಹಣ ಕೊಡುವಾಗ ಅಲ್ಲಿ ನನಗೆ ಪರಿಚಯ ಇರುವ ರಜಾಕ ಖುರೇಷಿ ಮತ್ತು ನಾಗಣ್ಣ ಸಾಹುಕಾರ ರವರು ಹಾಜರಿದ್ದರು. ಹಣ ಕೊಡುವಾಗ ವಿಡಿಯೋ ಚಿತ್ರೀಕರಣ ಕೊಡ್ರಿ ಅಂತಾ ಕೇಳಿದಾಗ ನಾವು ವಿಡಿಯೋ ಮಾಡಿಲ್ಲ ಸುಮ್ಮನೆ ವಿಡಿಯೋ ಮಾಡಿದಂತೆ ಹಿಡಿದಿದ್ದು ಇರುತ್ತದೆ ಅಂತಾ ತಿಳಿಸಿದರು. ನಂತರ ಉಳಿದ ಹಣ ಕೊಡುತ್ತೇನೆ ಅಂತಾ ಹೇಳಿ ಮನೆಗೆ ಬಂದೆನು ಮಾತಿನಂತೆ ಇಂದು ದಿನಾಂಕ 23/08/2019 ರಂದು ಉಳಿದ ಹಣ ಕೊಡಬೇಕಾಗಿದ್ದು ಮಧ್ಯಸ್ಥಿಕೆ ವಹಿಸಿದ್ದ ಸಿದ್ದನಗೌಡನು ನನಗೆ 2 ದಿನಗಳ ಹಿಂದೆ ಫೋನ ಮಾಡಿ ಉಳಿದ ಹಣ ತಂದು ಕೊಡು ಅಂತಾ ತಿಳಿಸಿದನು ಆಗ ಅವನಿಗೆ ನಾನು ಶುಕ್ರವಾರ 50 ಸಾವಿರ ರೂಪಾಯಿ ಕೊಡುತ್ತೇನೆ ಮತ್ತೆ ನಂತರ ಉಳಿದ 1 ಲಕ್ಷ ರೂಪಾಯಿ ಕೊಡುತ್ತೇನೆ ಅಂದಾಗ ಅವನು ಆದರಾಯ್ತು 50 ಸಾವಿರ ರೂಪಾಯಿ ಶುಕ್ರವಾರ ತೆಗೆದುಕೊಂಡು ಬಾ ಅಂದನು. ಆಗ ಅವನಿಗೆ ನಿನ್ನ ಜೊತೆಗೆ ಬಂದಿದ್ದ ಆ 5 ಜನರ ಬಗ್ಗೆ ಸಿದ್ದನಗೌಡನಿಗೆ ಮತ್ತೊಮ್ಮೆ ವಿಚಾರಿಸಲಾಗಿ ಯಾರ್ಯಾರು ಅಂದಾಗ ಅವನು ತಿಳಿಸಿದ್ದೇನೆಂದರೆ, ಮಹಾಂತಗೌಡ ಮದ್ರಿಕಿ, ಮಂಜುಳಾ ರಾಠೋಡ, ರಮೇಶ ರಾಠೋಡ ಶಿಕ್ಷಕ. ಮೇಘಾ ಸುರಪೂರ, ವಿಜಯಲಕ್ಷ್ಮಿ ಶಹಾಬಾದ ಅಂತಾ ತಿಳಿಸಿದ್ದು ಇರುತ್ತದೆ. ವಿಡಿಯೋ ಮಾಡಿದ ಹುಡುಗಿ ಮೇಘಾ ಸುರಪೂರ ಮತ್ತು ಗಂಡನೆಂದು ಬಂದು ನನಗೆ ಹೊಡೆದ ವ್ಯಕ್ತಿ ರಮೇಶ ರಾಠೋಡ ಅಂತಾ ತಿಳಿದು ಬಂದಿದ್ದು ಮಧ್ಯಸ್ಥಿಕೆ ವಹಿಸಿ ಹಣ ವಸೂಲಿ ಮಾಡಿದವರು ಸಿದ್ದನಗೌಡ ಶಿರವಾಳ ಮತ್ತು ಮಹಾಂತಗೌಡ ಮದ್ರಿಕಿ ಅಂತಾ ತಿಳಿದು ಬಂದಿದ್ದು ಹಾಗೂ ನನಗೆ ಫೋನ ಮಾಡಿ ಕರೆಸಿ ಹೊಡೆದವಳು ಮಂಜುಳಾ ಹಾಗೂ ನನ್ನೊಂದಿಗೆ ಮಲಗು ಬಾ ಅಂತಾ ಹೇಳಿ ಕರೆದುಕೊಂಡು ಹೋದವಳು ವಿಜಯಲಕ್ಷ್ಮೀ ಶಹಾಬಾದ ಅಂತಾ ತಿಳಿದು ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 23/08/2019 ರಂದು 7.00 ಪಿಎಂ ಸುಮಾರಿಗೆ ನಾನು ಉಳಿದ ಹಣದಲ್ಲಿ ಮಾತಿನಂತೆ 50 ಸಾವಿರ ರೂಪಾಯಿ ಕೊಡಬೇಕಾಗಿದ್ದು ಹಣ ಇಂದು ನನ್ನ ಜೊತೆಗೆ ಬಂದರೆ ಸಿದ್ದನಗೌಡನು ಬಂದು ಹಣ ತೆಗೆದುಕೊಳುವುದನ್ನು ತೋರಿಸುತ್ತೇನೆ. ದಿನಾಂಕ 10/8/2019 ರಂದು ನನ್ನ ಹತ್ತಿರ ಬಂದು ನನಗೆ ಹ್ಯಾಮಾರಿಸಿ ಬ್ಲ್ಯಾಕಮೇಲ ಮಾಡಲು ಎಲ್ಲಾ 6 ಜನರು ಕೂಡಿ 3 ಸೈಕಲ್ ಮೋಟಾರಗಳನ್ನು ತೆಗದುಕೊಂಡು ಬಂದಿದ್ದರು ಅವರು ತಂದೆ ಸೈಕಲ್ ಮೋಟಾರಗಳ ನಂಬರ ಕತ್ತಲಲ್ಲಿ ಗೊತ್ತಾಗಿಲ್ಲ ನೋಡಿದರೆ ಗುರುತಿಸುತ್ತೇನೆ. ಕಾರಣ ನನಗೆ ಹ್ಯಾಮಾರಿಸಿ ಲೈಂಗಿಕ ದೌರ್ಜನ್ಯದ ಕೇಸು ಹಾಕುವ ಮತ್ತು ಮರ್ಯಾದೆ ಧಕ್ಕೆ ತರುವ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದು ಅಲ್ಲದೇ ನನ್ನ ಹಾಗೆ ಶಹಾಪೂರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಇನ್ನೂ ಕೆಲವರಿಗೆ ಹ್ಯಾಮಾರಿಸಿ ಹಣ ವಸೂಲಿ ಮಾಡಿದ ಬಗ್ಗೆ ತಿಳಿದು ಬಂದಿದ್ದು ನನ್ನ ಹತ್ತಿರ ಮಾತಿನಂತೆ ಕೊಡಬೇಕಾಗಿರುವ ಇನ್ನುಳಿದ ಹಣ ವಸೂಲಿ ಮಾಡುತ್ತಿರುವ 1) ಸಿದ್ದನಗೌಡ ಪಾಟೀಲ ಶಿರವಾಳ, 2) ಮಹಾಂತಗೌಡ ಮದ್ರಿಕಿ, 3) ಮಂಜುಳಾ ರಾಠೋಡ, 4) ರಮೇಶ ರಾಠೋಡ ಶಿಕ್ಷಕ, 5)ಮೇಘಾ ಸುರಪೂರ ಮತ್ತು 6) ವಿಜಯಲಕ್ಷ್ಮೀ ಗಂಡ ಸುಬ್ಬಣ್ಣ ಸಾ|| ಶಹಾಬಾದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 220/2019 ಕಲಂ: 323,384,120(ಬಿ),504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using