ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-08-2019

By blogger on ಮಂಗಳವಾರ, ಆಗಸ್ಟ್ 20, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-08-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 68/2019 ಕಲಂ: 392 ಐ.ಪಿ.ಸಿ.  :-ದಿನಾಂಕ 20/08/2019 ರಂದು ಬೆಳಿಗ್ಗೆ 11-30 ಗಂಟೆಗೆ ಫಿಯರ್ಾದಿ ಶ್ರೀಮತಿ ಕವಿತಾ ಗಂಡ ಬಸವರಾಜ ಜುಗೇರಿ, ವಯ: 32 ವರ್ಷ, ಜಾತಿ:ಲಿಂಗಾಯತ, ಉ||ಸಕರ್ಾರಿ ಕೆಲಸ ಸಾ||ಲಕ್ಷ್ಮೀನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದರ ಸಾರಾಂಶ ವೇನೆಂದರೆ, ನಾನು ಸುಮಾರು 3 ವರ್ಷಗಳಿಂದ ಸ.ಹಿ.ಪ್ರಾಥಮಿಕ ಶಾಲೆ ಕೌಳೂರ ಗ್ರಾಮದಲ್ಲಿ ಸ.ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ಇದ್ದೇನೆ. ನನ್ನಂತೆ ಕವಿತಾ ಗಂಡ ರವಿಕುಮಾರ ಇವರು ಕೂಡ ನಮ್ಮ ಶಾಲೆಯಲ್ಲಿ ಸ.ಶಿಕ್ಷಕರು ಅಂತಾ ಕೆಲಸ ಮಾಡಿಕೊಡು ಇದ್ದಾರೆ. ನಾವಿಬ್ಬರು ದಿನಾಲು ನಮ್ಮ ಶಾಲೆಗೆ ಯಾದಗಿರಿಯಿಂದ ಹೋಗಿ ಬಂದು ಮಾಡುತ್ತೇವೆ. ನಮ್ಮ ಮುಖ್ಯಗುರುಗಳು ಇಂದು ನನಗೆ ಹಾಗೂ ಕವಿತಾ ಇವರಿಗೆ ಸೈದಾಪೂರದ ಹತ್ತಿರ ಇರುವ ಬೆಳಗುಂದಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಮಾಸಿಕ ಸಮಾಲೋಚನೆ ಸಭೆಗೆ ಹಾಜರಾಗಲು ತಿಳಿಸಿದರು. ಹೀಗಿದ್ದು ಇಂದು ದಿನಾಂಕ 20/08/2019 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ನಾನು ನನ್ನ ಮನೆಯಿಂದ ಹೊರಟು, ಯಾದಗಿರಿಯ ಹೊಸ ಬಸ್ ನಿಲ್ದಾಣದ ಮುಂದೆ ಸೈದಾಪೂರ, ಆಟೋ ಸ್ಟ್ಯಾಂಡದಲ್ಲಿ ನಿಂತು ನಮ್ಮ ಗೆಳತಿ ಕವಿತಾ ಗಂಡ ರವಿಕುಮಾರ ಇವರಿಗೆ ನಾನು ಬಸ್ ನಿಲ್ದಾಣದ ಹತ್ತಿರ ಬಂದಿದ್ದು, ನೀನು ಕೂಡ ಬೇಗ ಬಾ ಅಂತಾ ಪೋನ್ ಮಾಡಿದೆನು. ಆಗ ನನ್ನಿಂದ ಸ್ವಲ್ಪ ದೂರದಲ್ಲಿ ಯಾರೋ ಇಬ್ಬರು ಪಲ್ಸರ್ ನಮೂನೆಯ ಕಪ್ಪುಬಣ್ಣದ ಬೈಕ್ ಮೇಲೆ ಕುಳಿತು ನನ್ನಕಡೆ ನೋಡುತ್ತಿದ್ದರು. ನಾನು ಕೂಡ ಅವರಿಗೆ ನೋಡಲಾಗಿ ಅವರು ತಮ್ಮ ಬೈಕ್ ಚಾಲು ಮಾಡಿಕೊಂಡು ನನ್ನ ಹತ್ತಿರ ಬರುತ್ತಿರುವಾಗ ನಾನು ಗಾಡಿ ಬರುತ್ತಿದೆ ಅಂತಾ ಸೈಡ್ ಸರಿಯುವಷ್ಟರಲ್ಲಿ ಬೈಕ್ ಮೇಲೆ ಹಿಂದೆ ಕುಳಿತ್ತಿದ್ದ ವ್ಯಕ್ತಿ ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿ ಇದ್ದ 04 ತೊಳೆಯ ಬಂಗಾರ ತಾಳಿ ಚೈನ್ ಕಿತ್ತಿಕೊಂಡು ಬೈಕ್ ಮೇಲೆ ಹೋದರು. ನೋಡ ನೋಡುತ್ತಲೆ ಹೊಸ ಬಸ್ ನಿಲ್ದಾಣದ ಮುಂದಿನಿಂದ ಶಾಸ್ತ್ರಿ ಸರ್ಕಲ್ ಕಡೆಗೆ ಹೋದರು. ನೋಡಲಾಗಿ ಸದರಿ ಮೋಟರ್ ಸೈಕಲ್ಗೆ ನಂಬರ್ ಪ್ಲೇಟ್ ಇರಲಿಲ್ಲ. ಆಗ ನಾನು ಕಳ್ಳ, ಕಳ್ಳ ಅಂತಾ ಚೀರಿದೆನು. ಅಲ್ಲಿದ್ದವರು ಯಾರು ಅವರಿಗೆ ಹಿಡಿಯುವ ಪ್ರಯತ್ನ ಮಾಡಲಿಲ್ಲಿ. ನೋಡಲು ಅವರು, ಬೈಕ್ ಮೇಲೆ ಮುಂದೆ ಕುಳಿತು ಬೈಕ್ ನಡೆಸುತ್ತಿದ್ದವನು ಚೆಕ್ಸ್ ಶಟರ್್ ಹಾಕಿದ್ದು, ತಲೆಗೆ ಹೆಲ್ಮೇಟ್ ಹಾಕಿದ್ದನು. ಹಿಂದೆ ಕುಳಿತವನು ಬ್ಲಾಕ್ ಜಾಕೇಟ್ ಹಾಕಿದ್ದು, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕೆಂಪು ಮೈ ಬಣ್ಣವುಳ್ಳವನಾಗಿರುತ್ತಾನೆ. ಮುಂದೆ ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಕೂಡಲೆ ನಾನು ನನ್ನ ಗಂಡ ಬಸವರಾಜ ಜುಗೇರಿ ಇವರಿಗೆ ಪೋನ್ ಮಾಡಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಮತ್ತು ನನ್ನ ಗೆಳತಿಯಾದ ಕವಿತಾ ಗಂಡ ರವಿಕುಮಾರ ಇವರು ಕೂಡ ಅಲ್ಲಿಗೆ ಬಂದರು. ಎಲ್ಲರು ಕೂಡಿ ಅಲ್ಲಿ ಅಕ್ಕ ಪಕ್ಕದಲ್ಲಿ ನೋಡಲಾಗಿ, ನನ್ನ ಬಂಗಾರ ತಾಳಿ ಚೈನ್ ಕಿತ್ತಿಕೊಂಡು ಹೋದವನ ಸುಳಿವು ಗೊತ್ತಾಗಲಿಲ್ಲ. ಸದರ ಘಟನೆಯು ಇಂದು ಬೆಳಿಗ್ಗೆ 09:50 ರಿಂದ 10:00 ಗಂಟೆಯ ಸುಮಾರಿಗೆ ನಡೆದಿರುತ್ತದೆ. ಕಾರಣ ಇಂದು ದಿನಾಂಕ 20/08/2019 ರಂದು ಬೆಳಿಗ್ಗೆ 09-50 ರಿಂದ 10-00 ಗಂಟೆಯ ಸುಮಾರಿಗೆ ನಾನು ಸೈದಾಪೂರದ ಹತ್ತಿರ ಇರುವ ಬೆಳಗುಂದಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಮಾಸಿಕ ಸಮಾಲೋಚನೆ ಸಭೆಗೆ ಹೋಗಲು ಯಾದಗಿರಿಯ ಹೊಸ ಬಸ್ ನಿಲ್ದಾಣದ ಮುಂದೆ ಸೈದಾಪೂರ ಆಟೋ ಸ್ಟ್ಯಾಂಡದಲ್ಲಿ ನಿಂತಿದ್ದಾಗ ಯಾರೋ ಅಪರಿಚಿತರಿಬ್ಬರು ಮೋಟರ್ ಸೈಕಲ್ ಮೇಲೆ ಬಂದು ನನ್ನ ಕೊರಳಲ್ಲಿ ಇದ್ದ ಸುಮಾರು 1,20,000=00 ರೂಪಾಯಿ ಕಿಮ್ಮತ್ತಿನ 04 ತೊಲೆ ಬಂಗಾರದ ತಾಳಿ ಚೈನ್ ಕಿತ್ತಿಕೊಂಡು ಗೋಗಿದ್ದು, ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:68/2019 ಕಲಂ: 392 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 215/2019 ಕಲಂ 498(ಎ), 302 ಐಪಿಸಿ:-ದಿನಾಂಕ: 20/08/2019 ರಂದು 2.00 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀ ಸಿದ್ದಪ್ಪ ತಂ/ ಜಟ್ಟೆಪ್ಪ ಕಂಬಾರ ಸಾ|| ಶಖಾಪುರ ತಾ|| ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಕನ್ನಡದಲ್ಲಿ ಟೈಪ್ ಮಾಡಿಸಿದ ದೂರಿನ ಸಾರಾಂಶವೇನೆಂದರೆ, ನನ್ನ ಹಿರಿಯ ಮಗಳಾದ ರೇಣುಕಮ್ಮ ಇವಳಿಗೆ 12 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ರೇಣುಕಮ್ಮಳ ಹೊಟ್ಟೆಯಿಂದ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳು ಹುಟ್ಟಿರುತ್ತಾರೆ. ಆರೋಪಿತನು ಆಗಾಗ ಕುಡಿದು ಬಂದು ನನ್ನ ಮಗಳೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದನು, ಈ ವಿಷಯ ನನ್ನ ಮಗಳು ನನಗೆ ಹೇಳುತ್ತಿದ್ದಳು ನಾನು ಸಮಾದಾನ ಮಾಡಿ ಕಳುಹಿಸುತ್ತಿದ್ದೆನು. ಈ ಹಿಂದೆ ನನ್ನ ಮಗಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಬಂದು ಸ್ವಲ್ಪ ದಿವಸ ಇದ್ದು ಹೋಗುತ್ತಿದ್ದಳು. ಇಂದು ದಿ:20/08/19 ರಂದು ಬೆಳಿಗ್ಗೆ 9.40 ಎ.ಎಂ. ಸುಮಾರಿಗೆ ನಮ್ಮ ಸಂಬಂಧಿ ರವಿಕುಮಾರ ತಂ/ ಹಣಮಂತ ವರ್ಚನಳ್ಳಿ ಸಾ|| ಹತ್ತಿಗುಡೂರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ಇಂದು ಬೆಳಿಗ್ಗೆ 9.30 ಎ.ಎಂ. ಸುಮಾರಿಗೆ ನಾನು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ನಿಮ್ಮ ಅಳಿಯನ ಮನೆಯ ಕಡೆಗೆ ಚೀರಾಡುವ ಶಬ್ದ ಕೇಳಿ ಹೋಗಿ ನೋಡಲಾಗಿ ನಿಮ್ಮ ಅಳಿಯ ಯಲ್ಲಪ್ಪನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನಿಂತಿದ್ದನು, ನಿಮ್ಮ ಮಗಳು ರೇಣುಕಮ್ಮಳು ಮನೆಯ ಮುಂದಿನ ಕಟ್ಟೆಯ ಮೇಲೆ ಬಿದ್ದಿದ್ದಳು ಮೈತುಂಬಾ ರಕ್ತ ಆಗಿತ್ತು, ನಮ್ಮನ್ನು ನೋಡಿ ಯಲ್ಲಪ್ಪನು ಕೊಡಲಿಯನ್ನು ಅಲ್ಲಿಯೇ ಎಸೆದು ಓಡಿ ಹೋಗಿರುತ್ತಾನೆ. ನಿಮ್ಮ ಅಳಿಯನ ತಮ್ಮ ಭೀಮಪ್ಪನ ಹೆಂಡತಿ ಬಸಮ್ಮ ಮತ್ತು ನಿಮ್ಮ ಮೊಮ್ಮಗ ಪ್ರಜ್ವಲ್ ಇವನು ಅಲ್ಲಿಯೇ ಇದ್ದರು, ಮನೆಯ ಅಕ್ಕ ಪಕ್ಕದ ಜನರು ಬಂದು ನೋಡಿದ್ದು, ರೇಣುಕಮ್ಮಳಿಗೆ ತಲೆ, ಗದ್ದ ಮತ್ತು ಕುತ್ತಿಗೆಗೆ ಭಾರೀ ರಕ್ತಗಾಯಗಳಾಗಿದ್ದು, ಬಸಮ್ಮಳಿಗೆ ವಿಚಾರಿಸಲಾಗಿ ಯಲ್ಲಪ್ಪನು 2 ದಿವಸಗಳಿಂದ ರೇಣುಕಮ್ಮಳೊಂದಿಗೆ ಜಗಳ ಆಡುತಿದ್ದನು ಇಂದು ಬೆಳಿಗ್ಗೆ 8.30 ಎ.ಎಂ ಸುಮಾರಿಗೆ ಯಲ್ಲಪ್ಪನು ನಾಷ್ಟಾ ಮಾಡಿ ಹೊರಗೆ ಹೋದನು. 9.30 ಎ.ಎಂ. ಸುಮಾರಿಗೆ ನಾನು ಮತ್ತು ರೇಣುಕಮ್ಮ ಇಬ್ಬರು ಮನೆಯ ಮುಂದಿನ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಿದ್ದಾಗ, ನಮ್ಮೊಂದಿಗೆ ಪ್ರಜ್ವಲ್ ಮತ್ತು ಸಣ್ಣ ಮಗು ಪ್ರಶಾಂತ ಕೂಡಾ ಇದ್ದರು, ಆಗ ಹೊರಗಿನಿಂದ ಬಂದ ಯಲ್ಲಪ್ಪನು ರೇಣುಕಮ್ಮಳಿಗೆ ನನ್ನ ಮೊಬೈಲ್ ಎಲ್ಲಿದೆ ಕೊಡು ಅಂತಾ ಕೇಳಿದಾಗ ರೇಣುಕಮ್ಮಳು ನನಗೆ ಗೊತ್ತಿಲ್ಲಾ ಅಂತಾ ಹೇಳಿದ ಕೂಡಲೆ ಯಲ್ಲಪ್ಪನು ಮನೆಯೊಳಗೆ ಹೋಗಿ ಒಂದು ಕೊಡಲಿಯನ್ನು ತೆಗೆದುಕೊಂಡು ಬಂದು ಹಿಂದಿನಿಂದ ರೇಣುಕಮ್ಮಳ ತಲೆಗೆ ಜೋರಾಗಿ ಹೊಡೆದಾಗ ರೇಣುಕಮ್ಮಳು ಅಂಗಾತ ಬಿದ್ದಳು, ಪುನಃ ಯಲ್ಲಪ್ಪನು ಕೊಡಲಿಯಿಂದ ರೇಣುಕಮ್ಮಳ ಕುತ್ತಿಗೆಗೆ, ಮತ್ತು ಗದ್ದಕ್ಕೆ ಹೊಡೆದಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿಭೂತಿ ಹಳ್ಳಿಯ ಹತ್ತಿರ ರೇಣುಕಮ್ಮಳು ಮೃತಪಟ್ಟಿರುತ್ತಾಳೆ ಅಂತಾ ಹೇಳಿದಾಗ ನಾನು ಮತ್ತು ನನ್ನ ಮಗ, ನನ್ನ ತಮ್ಮ, ನನ್ನ ತಮ್ಮನ ಹೆಂಡತಿ, ನನ್ನ ಸೊಸೆ ಮತ್ತು ಮತ್ತು ಗ್ರಾಮದ ಇತರು ಕೂಡಿ ನನ್ನ ಮಗಳ ಮನೆಗೆ ಹೋಗಿ ನೋಡಲಾಗಿ ಮನೆಯ ಮುಂದೆ ಕಟ್ಟೆಯ ಮೇಲೆ ರಕ್ತ ಬಿದ್ದಿದ್ದು, ಅಲ್ಲಿಯೇ ಇದ್ದ ಭೀಮಣ್ಣನ ಹೆಂಡತಿ ಬಸಮ್ಮಳಿಗೆ ವಿಚಾರಿಸಲಾಗಿ ಮೇಲ್ಕಾಣಿಸಿದಂತೆ ಹೇಳಿದ್ದು ಇರುತ್ತದೆ. ಕಾರಣ ನನ್ನ ಮಗಳು ರೇಣುಕಮ್ಮಳಿಗೆ ಕಿರುಕುಳ ಕೊಟ್ಟು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಅವಳ ಗಂಡನಾದ ಯಲ್ಲಪ್ಪ ತಂ/ ಮಲ್ಲಪ್ಪ ವಾಚಮನ್ ಸಾ|| ಹತ್ತಿಗುಡೂರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 215/2019 ಕಲಂ 498(ಎ), 302 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                           
                                                                                     
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 214/2019. ಕಲಂ 341 323, 504, 506 ಸಂಗಡ 34ಐ.ಪಿ.ಸಿ.:- ದಿನಾಂಕ:18-08-2019 ರಂದು ಮುಂಜಾನೆ 7:00 ಗಂಟೆ ಸುಮಾರಿಗೆ ನನ್ನ ಹೆಂಡತಿ ಶ್ರೀದೇವಿಯು ಮುಖ ತೊಳೆಯುತ್ತಾ ಇರುವಾಗ ಬನ್ನಪ್ಪನ ಹಂಡತಿ ಲಕ್ಷ್ಮೀ ಇವಳು ನನ್ನ ಹೆಂಡತಿಯನ್ನು ನೋಡಿ ಒದರಾಡುತಿದ್ದಳು ಅದಕ್ಕೆ ನಾನು ಯಾಕೆ ಬೈದಾಡುತ್ತೀರಿ ಅಂತಾ ಕೇಳಿದ್ದಕ್ಕೆ ಅವರಲ್ಲಿಯ ಬನ್ನಪ್ಪನು ಹೊರಗೆ ಬಂದು ನಿಮಗೆ ಒಂದು ಕೈ ನೋಡಿಕೊಳ್ಳುತೇವೆ ಬಹಳ ಆಗಿದೆ ಅಂತಾ ಮೈಮೇಲೆ ಬಂದನು. ಆಗ ನಾನು ಇಲ್ಲ ನೀವು ಪದೇ ಪದೇ ಜಗಳ ಮಾಡುತ್ತೀರಿ ನಾನು ಪೊಲೀಸ ಠಾಣೆಗೆ ಹೋಗುತ್ತೇನೆಂದು. ಹೊರಟಾಗ ಬನ್ನಪ್ಪ ಮತ್ತು ಭೀಮರಾಯ ತಂದೆ ಹೈಯಾಳಪ್ಪ ದೋರನಳ್ಳಿ ಇಬ್ಬರೂ ಬಂದು ನನ್ನನ್ನು ತಡೆದು ಎಲ್ಲಿ ಹೋಗುತ್ತಿ ಮಗನೆ ಹೆಂಗೂ ಕೇಸ ಮಾಡುತ್ತಿ ನೀನು ಅಂತಾ ಇಬ್ಬರೂ ಕೂಡಿ ಕೈಯಿಂದ ಹೊಡೆದು ಬೆನ್ನಿಗೆ ಗುದ್ದಿರುತ್ತಾರೆ. ಆಗ ಅಲ್ಲೇ ಇದ್ದ ಸಾಯಬಣ್ಣ ತಂದೆ ಹೈಯಾಳಪ್ಪ ದೋರನಳ್ಳಿ ಇವನು ಬಿಡಬೇಡಿ ಆ ಮಕ್ಕಳಿಗೆ ಅಂತಾ ಬೈಯುತ್ತಾ ಬಂದನು. ಆಗ ನಮ್ಮ ತಮ್ಮನಾದ  ಅಂಬ್ಲಪ್ಪ ತಂದೆ ಅಂಬಣ್ಣ ಆಂದೇಲಿ ಮತ್ತು ನನ್ನ ಹೆಂಡತಿ ಶ್ರೀದೇವಿ ಇಬ್ಬರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಆಗ ಬನ್ನಪ್ಪನು ಮಗನೇ ಇನ್ನೊಮ್ಮೆ ನಿನ್ನ ಜೀವ ತೆಗಯುತ್ತೇವೆ ಅಂತಾ ಬೆದರಿಕೆ ಹಾಕಿರುತ್ತಾನೆ. ನಾನು ನಮ್ಮ ಮನೆಯಲ್ಲಿ ವಿಚಾರ  ಮಾಡಿ ಇಂದು ತಡವಾಗಿ ಠಣೆಗೆ ಬಂದಿರುತ್ತೇನೆ  ಕಾರಣ ನಮ್ಮೊಡನೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ಹೊಡೆಬಡೆ ಮಾಡಿದವರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.214/2019 ಕಲಂ. 341, 323, 504, 506, ಸಂಗಡ 34 ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 134/2019 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್:- ದಿನಾಂಕ 20.08.2019 ರಂದು ಮಧ್ಯಾಹ್ನ 1:00 ಗಂಟೆಗೆ ಆರೋಪಿತನು ಗುರುಮಠಕಲ್ ಪಟ್ಟಣದ ಕಂದೂರ ಓಣಿಯ, ಕಿಷ್ಟಯ್ಯ ಮನ್ನೆ ಇವರ ಮನೆಯ ಮುಂದಿನ ಹುಣಸೇ ಮರದ ಕೆಳಗೆ ಸಾರ್ವಜನಿಕ ಖೂಲ್ಲಾ ಸ್ಥಳದಲ್ಲಿ ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ರಾಸಾಯನೀಕ ಸಿ.ಹೆಚ್. ಪುಡಿಯಿಂದ ತಯಾರಿಸಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಓಡಿ ಹೋಗಿದ್ದು ಸ್ಥಳದಲ್ಲಿ ಬಿಟ್ಟು ಹೋಗಿದ್ದ ್ದ ಒಟ್ಟು 30 ಲೀಟರ ಹೆಂಡ ಹೀಗೆ ಒಟ್ಟು 900/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆಯ ಮತ್ತು ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 134/2019 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆದಾಖಲಿಸಿಕೊಂಡೆನು.  

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 66/2019  ಕಲಂ 87 ಕೆ.ಪಿ.ಆ್ಯಕ್ಟ್ :- ದಿನಾಂಕ 20/08/2019 ರಂದು ಸಮಯ 6-30 ಪಿ.ಎಂ.ಕ್ಕೆ ಮಾನ್ಯ ಶ್ರೀ ಮಹಾದೇವಪ್ಪ ದಿಡ್ಡಿಮನಿ ಪಿ.ಎಸ್.ಐ ಸಾಹೇಬರು ವಡಗೇರಾ ರವರು ಠಾಣೆಗೆ ಹಾಜರಾಗಿ ಸಕರ್ಾರಿ ತಪರ್ೆ ಪಿಯರ್ಾದಿಯಾಗಿ ಒಂದು ಜಪ್ತಿ ಪಂಚನಾಮೆ, ನಗದು ಹಣ ರೂ.2090/- ಹಾಗೂ 52 ಇಸ್ಪೀಟ್ ಎಲೆಗಳು ಮತ್ತು 04 ಜನ ಆರೋಪಿತರನ್ನು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶವೇನೆಂದರೆ ಇಂದು ದಿನಾಂಕ 20/08/2019 ರಂದು ಸಾಯಂಕಾಲ 3 ಪಿ.ಎಂ.ದ ಸುಮಾರಿಗೆ  ವಡಗೇರಾ ಠಾಣೆಯ ವ್ಯಾಪ್ತಿಯ ಬೀರನಕಲ್ ತಾಂಡಾದ ಶ್ರೀ ಸೇವಾಲಾಲ್ ಮರಗಮ್ಮ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು  ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಶ್ರೀ ಮಹಾದೇವಪ್ಪ ದಿಡ್ಡಿಮನಿ ಪಿ.ಎಸ್.ಐ ಸಾಹೇಬರು ವಡಗೇರಾ ರವರು ಮತ್ತು ವಡಗೇರಾ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ರಾಜಕುಮಾರ ಎಚ್.ಸಿ-179 2) ಶ್ರೀ ಸಾಯಿಬಣ್ಣ ಎಚ್.ಸಿ-103. 3) ಶ್ರೀ ರಾಜಶೇಖರ ಪಿ ಸಿ .177. 4) ಶ್ರೀ ಮಹೇಂದ್ರ ಪಿ ಸಿ. 254  ಹಾಗೂ ಇಬ್ಬರು ಪಂಚರೊಂದಿಗೆ  ವಡಗೇರಾ ಪೊಲೀಸ್ ಠಾಣೆಯ ಸಕರ್ಾರಿ ಜೀಪ್ ನಂಬರ ಕೆಎ-33, ಜಿ-115 ನೇದ್ದರಲ್ಲಿ ಠಾಣೆಯಿಂದ 3-30 ಪಿ.ಎಮ್ ಕ್ಕೆ  ಹೊರಟು  ಸ್ಥಳಕ್ಕೆ ಹೋಗಿ  ಅಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಎಲೆಗಳ ಸಹಾಯಹದಿಂದ ಇಸ್ಪಿಟ್ ಜೂಜಾಟದಲ್ಲಿ ತೋಡಗಿದ್ದ 4 ಜನ ಆರೋಪಿತರಾದ 1) ಮುದುಕಪ್ಪ ತಂದೆ ತಿಮ್ಮಯ್ಯ ವಡ್ಡೆಗೌಡ್ರು ವಯ;37 ವರ್ಷ, ಜಾ;ಬೇಡರು, ಉ;ಒಕ್ಕುಲುತನ, ಸಾ;ವಡಗೇರಾ 2) ಬುಡ್ಡಪ್ಪ ತಂದೆ ಹಣಮಂತ ಸಿರಿವಾಳ ವಯ;50 ವರ್ಷ, ಜಾ;ಬೇಡರು, ಉ;ಒಕ್ಕುಲುತನ, ಸಾ;ಹೊಸುರ (ಬಸವನಗರ) 3) ಹಾಲಪ್ಪ ತಂದೆ ರಾಮಪ್ಪ ರಾಠೋಡ ವಯ;54 ವರ್ಷ, ಜಾ;ಲಂಬಾಣಿ, ಉ;ಒಕ್ಕುಲುತನ, ಸಾ;ಬೀರನಕಲ್ ತಾಂಡ, ವಡಗೆರಾ 4) ತಿಪ್ಪಣ್ಣ ತಂದೆ ಕೇಶಪ್ಪ ರಾಠೋಡ ವಯ;52 ವರ್ಷ, ಉ;ಕೂಲಿ, ಜಾ;ಲಂಬಾಣಿ, ಸಾ; ಬೀರನಕಲ್ ತಾಂಡ, ವಡಗೇರಾ ಇವರನ್ನು ದಸ್ತಗಿರಿ ಮಾಡಿ ಆರೊಪಿತರಿಂದ ಜೂಜಾಟಕ್ಕೆ ಉಪಯೋಗಿಸಿದ ರೂ. 2090 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿಕೊಂಡು 4-30 ಪಿ.ಎಮ್ ದಿಂದ 5-30 ಪಿ.ಎಮ್ ದವರೆಗೆ ಸ್ಥಳದಲ್ಲಿಯೇ ಜಪ್ತಿ ಪಂಚನಾಮೆಯನ್ನು ಪೂರೈಸಿ ಮುದ್ದೆಮಾಲು ಮತ್ತು ಜಪ್ತಿಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 66/2019 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 
    
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 216/2019. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:-ದಿನಾಂಕ:20-08-2019 ರಂದು 2:45 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಟ್ರ್ಯಾಕ್ಟರ ಚೆಸ್ಸೀ ನಂ. ಆಊಖ3251ಊ68051 ಇಂಜಿನ್ ನಂ. ಒಇಂ8ಅಅಂ1ಆಊ2129878  ನೇದ್ದರಲ್ಲಿ ಹಳ್ಳದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಟ್ರ್ಯಾಕ್ಟರ ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.216/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 217/2019. ಕಲಂ 78 (3) ಕೆ.ಪಿ.ಆಕ್ಟ:- ದಿನಾಂಕ:20-08-2019 ರಂದು 8:00 ಪಿ.ಎಮ್.ಕ್ಕೆ  ಆರೋಪಿತರು ಶಾರದಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು  ಒಂದು ರೂಪಾಯಿಗೆ 80 ರೂ ಬರುತ್ತದೆ. ದೈವದ ಆಟಾ ಆಡಿ ರಿ ಎಂದು ಕೂಗಿ ಕರೆಯುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿ ಹಿಡಿದು ಅವರಿಂದ 1)  ನಗದು ಹಣ 2100/- 2) ಎರಡು ಬಾಲ್ ಪೆನ್ .ಕಿ.00=00 3) ಎರಡು ಮಟಕಾ ಚೀಟಿಗಳು ಅ.ಕಿ. 00=00  ಜಪ್ತಿ ಪಡಿಸಿಕೊಂಡು ಮರಳಿ ಠಣೆಗೆ ಬಂದು ಕರಮ ಜರುಗಿಸಿದ್ದು ಇದೆ.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ.;- 97/2019 ಕಲಂ 78[3] ಕೆಪಿ ಎಕ್ಟ:- ದಿನಾಂಕ 20/08/2019 ರಂದು 8.45 ಪಿ.ಎಮ್.ಕ್ಕೆ  ಹೊತಪೇಟ ನಡುವಿನ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಕಲ್ಯಾಣ ಮಟಕಾ ನಂಬರ ದೈವದ ಆಟ ಬರ್ರಿ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಹಾಗೂ ಮಟಕಾ ನಂಬರ್ ಪಡೆದು ಚೀಟಿಯಲ್ಲಿ ಬರೆದುಕೊಂಡು ತನ್ನ ಹತ್ತಿರ ಇದ್ದ ಮೊಬೈಲ್ನಲ್ಲಿನ ಎಸ್.ಎಮ್. ಗೇಮ್ಸ್ ಮತ್ತು ಎಮ್.ಕೆ. ಮಾಕರ್ೆಟ್ ಯಾಪ್ ಮೂಲಕ ಮಟಕಾ ನಂಬರ ನಮೂದಿಸಿ ಮಟಕಾ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 3000=00, 2) ಮಟಕಾ ಜೂಜಾಟಕ್ಕೆ ಬಳಸಿದ ಒಂದು ಒಪ್ಪೋ ಕಂಪನಿಯ ಮೊಬೈಲ್ ಅ.ಕಿ. 1000=00, 3)ಒಂದು ಮಟಕಾ ನಂಬರ್ ಬರೆದ ಒಂದು ಚೀಟಿ, 4) ಒಂದು ಬಾಲ್ ಪೆನ್ ನೇದ್ದವುಗಳನ್ನು 09.00 ಪಿಎಮ್ ದಿಂದ 10.00 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 10.30 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಇಂದು 11.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 97/2019 ಕಲಂ 78[3] ಕೆ.ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 94/2019  ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957:- ದಿನಾಂಕ 21.08.2019 ರಂದು ಬೆಳಿಗ್ಗೆ 02.00 ಘಂಟೆಗೆ ಪಂಡಿತ ವ್ಹಿ ಸಗರ  ಸಿ.ಪಿ.ಐ ಹುಣಸಗಿ ವೃತ್ತ ಸಹೇಬರು ಸಲ್ಲಿಸಿದ  ವರದಿ ಏನೆಂದರೆ, ಇಂದು ದಿನಾಂಕ: 21.08.2019 ರಂದು ರಾತ್ರಿ  ಗಸ್ತು ಚೆಕಿಂಗ ಕುರಿತು 00.05 ಘಂಟೆಗೆ ನಾನು ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಸುರಪುರ ಕಡೆಯಿಂದ  ಕೆಂಭಾವಿ ಕಡೆಗೆ  ಒಂದು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ಸಾ|| ಕೆಂಭಾವಿ ಈ ಎರಡು ಜನರಿಗೆ ಪಿಸಿ 195 ಭೀರಪ್ಪ ರವರ ಮುಖಾಂತರ ಠಾಣೆಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ ಸದರ ಪಂಚರು ಹಾಗೂ ಸಿಬ್ಬಂದಿಯವರಾದ 1) ಶಿವಲಿಂಗಪ್ಪ ಹೆಚ್.ಸಿ-185 2) ಬೀರಪ್ಪ ಪಿಸಿ 195 ಹಾಗೂ 3) ವಿಕಾಸ ಎ.ಪಿ.ಸಿ-244 ರವರೊಂದಿಗೆ ಕೆಂಭಾವಿ  ಠಾಣೆಯಿಂದ 00.30 ಎ.ಎಮ್ಕ್ಕೆ ಸರಕಾರಿ ಜೀಪ್ ನಂ ಕೆ.ಎ.33ಜಿ/0164 ನೇದ್ದರಲ್ಲಿ  ಹೊರಟು ಕೆಂಭಾವಿ ಪಟ್ಟಣದ ಸಮೀಪ ಇರುವ ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ಕೋರಿ ಸಿದ್ದೇಶ್ವರ ದೇವಸ್ಥಾನ ಕ್ರಾಸ್ ಹತ್ತಿರ 00.45 ಎ.ಎಮ್ಕ್ಕೆ ನಿಂತಾಗ ಸುರಪುರ ಕಡೆಯಿಂದ ಒಂದು ಟಿಪ್ಪರ್ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟಿಪ್ಪರನ್ನು ಸಿಬ್ಬಂದಿಯವರ ಸಹಾಯದೊಂದಿಗೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಪ್ರಬು ತಂದೆ ಮಲ್ಲಣ್ಣ ಸಗರ  ವಯಾ|| 21 ಜಾ|| ಗಾಣಿಗ  ಉ|| ಚಾಲಕ ಸಾ|| ಮಾಲಗತ್ತಿ  ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಮಾಲಿಕರು ಹೇಳಿದಂತೆ ಸೂಗುರ ಗ್ರಾಮದಿಂದ ಮರಳನ್ನು ತುಂಬಿಕೊಂಡು ಕೆಂಭಾವಿಗೆ ಹೊರಟಿದ್ದೇನೆ ಅಂತ ತಿಳಿಸಿದ್ದು, ನಂತರ ಟಿಪ್ಪರ ಪರಿಶೀಲಿಸಿ ನೋಡಲಾಗಿ ಟಿಪ್ಪರಗೆ ಯಾವುದೇ ನಂಬರ ಇರುವುದಿಲ್ಲ ಅದರ ಚೆಸ್ಸಿ ನಂ ನೋಡಲಾಗಿ ಎಮ್ಇಸಿ2416ಬಿಬಿಕೆಪಿ080763 ಅಂತಾ ಇದ್ದು ಅದರಲ್ಲಿ ಮರಳು ತುಂಬಿದ್ದು ಅದರ ಮಾಲಿಕರ ಬಗ್ಗೆ ಚಾಲಕನಿಂದ ವಿಚಾರಿಸಿ ತಿಳಿಯಲಾಗಿ ಬೈಲಪ್ಪಗೌಡ ಪೊಲೀಸ್ ಪಾಟೀಲ ಸಾ|| ಚಿಗರಿಹಾಳ  ಅಂತ ತಿಳಿಸಿ ಸದರಿ ಚಾಲಕನು ವಾಹನವನ್ನು ಅಲ್ಲೆ ಬಿಟ್ಟು ಕತ್ತಲಲ್ಲಿ ಓಡಿ ಹೋಗಿರುತ್ತಾನೆ. ಸದರಿ ಟಿಪ್ಪರನಲ್ಲಿ ಅಂದಾಜು 10000/- ರೂ ಕಿಮ್ಮತ್ತಿನ ಮರಳು ಇದ್ದು, ಸದರಿ ಟಿಪ್ಪರನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ 00.45 ಎಎಮ್ದಿಂದ 01.45 ಎಎಮ್ದವರೆಗೆ ಪಂಚನಾಮೆಯನ್ನು ಕೈಕೊಂಡು ಸದರಿ ವಾಹನವನ್ನು ಮರಳು ಸಮೇತ ಜಪ್ತಪಡೆಸಿಕೊಂಡಿದ್ದು ಇರುತ್ತದೆ.  ನಂತರ ಸದರಿ ಟಿಪ್ಪರ್ನ್ನು ಅದರಲ್ಲಿದ್ದ ಮರಳು ಸಮೇತ ಖಾಸಗಿ ಚಾಲಕನ ಸಹಾಯದಿಂದ  ಮರಳು ತುಂಬಿದ ಟಿಪ್ಪರ್ನ್ನು 02.00 ಎ.ಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಈ ವರದಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ರಾಜಧನ (ರಾಯಲ್ಟಿ) ತುಂಬದೆ ಟಿಪ್ಪರ್ನಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಟಿಪ್ಪರ್ ಚಾಲಕ ಹಾಗೂ ಟಿಪ್ಪರ್ ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 94/2019 ಕಲಂ  379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!