ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-08-2019

By blogger on ಸೋಮವಾರ, ಆಗಸ್ಟ್ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-08-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 212/2019 ಕಲಂ 279, 337, 338, 304(ಎ) ಐಪಿಸಿ:-ದಿನಾಂಕ: 19/08/2019 ರಂದು 3.30 ಪಿ.ಎಂ ಕ್ಕೆ ಶ್ರೀ ಅನೀಲ್ ತಂ/ ಶ್ರೀನಿವಾಸ ಅಬಕಾರಿ ಸಾ|| ಬಸ್ಟ್ಯಾಂಡ್ ಹತ್ತಿರ ದೇವದುರ್ಗ ತಾ||ದೇವದುರ್ಗ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ಏನೆಂದರೆ, ಇಂದು ದಿನಾಂಕ:19/08/2019 ರಂದು 11.00 ಎ.ಎಂ.ಕ್ಕೆ ನಾನು ಮತ್ತು ನನ್ನ ಮಾವ ಶ್ರೀನಿವಾಸ ಅಬಕಾರಿ, ಅವರ ಮಗ ವಿನಾಯಕ ಅಬಕಾರಿ ಇವರೊಂದಿಗೆ ಕಾರ.ನಂ. ಕೆಎ-32 ಪಿ-1866 ನೇದ್ದರಲ್ಲಿ ಕುಳಿತು ವಿನಾಯಕನಿಗೆ ಕಲಬುರಗಿಯ ಶಾಂತಿನಿಕೇತನ ಬಿ.ಕಾಮ್ ಕಾಲಜೇಜಿಗೆ ಬಿಟ್ಟು ಬರಲು ಹೊರಟೆವು. ಕಾರನ್ನು ಸೂಗಪ್ಪ ತಂ/ ಮಲ್ಲಪ್ಪ ಕುಂಬಾರ ಸಾ|| ಕುಂಬಾರ ಓಣಿ ದೇವದುರ್ಗ ಈತನು ನಡೆಸುತ್ತಿದ್ದನು. ದೇವದುರ್ಗದಿಂದ ತಿಂಥಣಿ ಬ್ರಿಜ್, ಸುರಪುರ ಮಾರ್ಗವಾಗಿ ಹತ್ತಿಗುಡೂರ ದಾಟಿ 1.15 ಪಿ.ಎಂ. ಸುಮಾರಿಗೆ ಹತ್ತಿಗುಡೂರ-ಶಹಾಪುರ ಮುಖ್ಯ ರಸ್ತೆಯಲ್ಲಿರುವ ರಸ್ತಾಪುರ ಕಮಾನ್ ದಾಟೀ ಅಂದಾಜು 500 ಮೀಟರ ಅಂತರದಲ್ಲಿ ಶಹಾಪುರ ಕಡೆಗೆ ಹೊರಟಿದ್ದಾಗ ಶಹಾಪುರ ಕಡೆಯಿಂದ ಒಂದು ಲಾರಿ.ನಂ.ಕೆಎ-16 ಸಿ-7283 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಒಮ್ಮಲೆ ಬಲಕ್ಕೆ ಕಟ್ ಮಾಡಿ ನಮ್ಮ ಕಾರಿನ ಎಡಸೈಡಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಮತ್ತು ಲಾರಿ ರೋಡಿನ ಪಕ್ಕದ ಹೊಲದಲ್ಲಿ ಹೋಗಿ ನಿಂತಿದ್ದು, ಅಪಘಾತದಲ್ಲಿ ಮಾವ ಶ್ರೀನಿವಾಸ ಮತ್ತು ಅವರ ಮಗ ವಿನಾಯಕ ಇಬ್ಬರು ಭಾರೀ ಗಾಯಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಸೂಗಪ್ಪ ಕುಂಬಾರ ಈತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ನನಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಪಘಾತಪಡಿಸಿದ ಲಾರಿ ಚಾಲಕನ ಹೆಸರು ಶಂಕ್ರೆಪ್ಪ ತಂ/ ದೇವಿಂದ್ರಪ್ಪ ಸಾ|| ದೋರನಳ್ಳಿ ಅಂತಾ ಗೊತ್ತಾಗಿರುತ್ತದೆ ಘಟನೆ ನಂತರ ಶಂಕ್ರೆಪ್ಪನು ಘಟನೆ ಸ್ಥಳದಿಂದ ಓಡಿ ಹೋಗಿರುತ್ತಾನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಲಾರಿ.ನಂ.ಕೆಎ-16 ಸಿ-7283 ನೇದ್ದರ ಚಾಲಕ ಶಂಕ್ರೆಪ್ಪ ತಂ/ ದೇವಿಂದ್ರಪ್ಪ ಸಾ|| ದೋರನಳ್ಳಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.212/2019 ಕಲಂ 279, 337, 338,304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ.354,504,506,509, ಐಪಿಸಿ :- ದಿನಾಂಕ: 19-08-2019 ರಂದು ಸಾಯಂಕಾ 05-00 ಗಂಟೆಗೆ ಪಿಯರ್ಾಧಿ ಶ್ರೀಮತಿ ಜಯಶ್ರೀ ಗಂಡ ಸಿದ್ರಾಮಯ್ಯಸ್ವಾಮಿ ವ|| 35 ವರ್ಷ ಜಾ|| ಜಂಗಮ ಉ|| ಹೊಲಮನೆಕೆಲಸ ಸಾ|| ಕಣೆಕಲ್ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ದಿನಾಂಕ: 18-08-2019 ರಂದು ಮದ್ಯಾಹ್ನ 03-00 ಗಂಟೆಗೆ ಕೈ ಸನ್ನೆ ಮಾಡಿ ಕರೆಯುವದನ್ನು ಮಾಡಿದನು ಆಗ ನಾನು ಮನೆಯ ಒಳಗಡೆ ಹೋದಾಗ ನನಗೆ ಕೇಳುವಂತೆ ಕೆಟ್ಟ ಪದಗಳಿಂದ ಕರೆದು ನಾನು ಹೊರಗೆ ಬರದೆ ಇದ್ದಾಗ ಶೀಳ್ಳೆ ಹೊಡೆದು ಬಾರಲೆ ಸೂಳೆ ಅಂತಾ ಕೂಗಿದನು ಆಗ ನಾನು ಹೊರಗೆ ಬಂದು ನಾನು ಆತನಿಗೆ ಯಾಕೆ ಬೈಯುತಿ ಅಂತಾ ಕೆಳಿದ್ದಕ್ಕೆ ಒಮ್ಮಲೆ ನನ್ನ ಹತ್ತಿರ ಬಂದು ನನ್ನ ಕೈಹಿಡಿದು ಜಗ್ಗಾಡಿ ಸೀರೆ ಸೇರಗನ್ನು ಹಿಡಿದು ಎಳೆದು ನನ್ನ ಮಾನ ಭಂಗ ಮಾಡಲು ಪ್ರಯತ್ನ ಮಾಡಿದನು. ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ. 
                                                                                       

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ.109,147,323,324,325,341,354,504,506,ಸಂ.149 ಐಪಿಸಿ :- ದಿನಾಂಕ: 16-07-2019 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನನ್ನ ಸ್ವಾಯಜರ್ಿತ ಆಸ್ತಿಯಾದ ಗುಡ್ಲಗುಂಟ ಗ್ರಾಮದ ಜಮೀನು ಸವರ್ೆ ನಂ. 24 ವಿಸ್ತಿರ್ಣ 04 ಎಕರೆ 2 ಗುಂಟೆ ಜಮೀನಿನ ಮಾಲಿಕಳು ಮತ್ತು ಕಬ್ಜದಾರಳು ಆಗಿರುತ್ತೇನೆ ಇದು ನನ್ನ ಸ್ವಾಯಾಜರ್ಿತ ಆಸ್ತಿಯಾಗಿರುತ್ತದೆ. ಇದನ್ನು ನೊಂದಾಯಿತಿ ದಸ್ತಾವೇಜು ಸಂಖ್ಯೆ 424/2019-2020 ದಿನಾಂಕ: 30-04-2019 ರಂದು ನೋಂದಾಯಿಸಿದ್ದು ಇದನ್ನು ಕಂದಾಯ ದಾಖಲಾತಿಗಳಲ್ಲಿ ದಿನಾಂಕ: 11-06-2019 ರಂದು ಮುಟೇಶನ್ ಸಂ.ಹೆಚ್.-12/2018-19ರ ಮೂಲಕ ವಗರ್ಾವಣೆಗೊಂಡಿದ್ದು ಇರುತ್ತದೆ. ನಾನು ಸದರಿ ನನ್ನ ಹೊಲದಲ್ಲಿ ದಿನಾಂಕ: 16-07-2019 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಸದರಿ ನನ್ನ ಹೊಲದಲ್ಲಿ ಬಿತ್ತನೆ ಮಾಡುವ ಸಲುವಾಗಿ ನಾನು ಮತ್ತು ಸಾಕ್ಷಿದಾರರು ಹೊಲದಲ್ಲಿ ಕೆಲಸ ಮಾಡುತಿದ್ದೆವು, ಆ ಸಮಯದಲ್ಲಿ ನನಗಾಗಲಿ ನನ್ನ ಸದರಿ ಹೊಲಕ್ಕಾಗಲಿ ಸಂಬಂಧ ಇಲ್ಲದೆ ಆರೋಪಿ ಸಂಖ್ಯೆ 1 ರಿಂದ 4 ರವರು ಸದರಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನನ್ನು ಆರೋಪಿ ಸಂಖ್ಯೆ 1 ರವರು ಏಲೆ ಬೋಸಡಿ ಈ ಹೊಲ ನನ್ನದು ಇದೆ ನಿನೇಕೆ ಬಂದು ಉಳಿಮೆ ಮಾಡುತಿದ್ದಿ ಹೋಗಲೆ ಇಲ್ಲದಿದ್ದರೆ ನಾನು ನನ್ನ ಮಕ್ಕಳು ಅದೆ ರೀತಿ ಆರೋಪಿ ಸಂಖ್ಯೆ 4 ರವರೊಂದಿಗೆ ನಿನ್ನನ್ನು ಹೊಡೆದು ಸಾಯಿಸಿ ಇಲ್ಲೇ ಊಳಿ ಬಿಡುತ್ತೆವೆ ಹೊಗಲೇ ಸೂಳಿ ಅಂದವನೆ ನನ್ನನ್ನು ಹೊಡೆಯ ಹತ್ತಿದ ಅದನ್ನು ನೋಡುತ್ತ ಆರೋಪಿ ಸಂಖ್ಯೆ 2 ರವರು ಈ ಸೂಳಿಗೆ ಬಿಡಬಾರದು ಎಂದವಳೇ ನನ್ನ ಎರದು ಕೈಗಳನ್ನು ಹಿಡಿದು ಜಗ್ಗಾಡಿದಳು ಆಗ ಆರೋಪಿ ಸಂಖ್ಯೆ 1 ರವರು ನನ್ನ ಕುಪ್ಪಸ ಮತ್ತು ಸೀರೆ ಹಿಡಿದು ನನ್ನ ಮಾನ ಭಂಗ ಮಾಡಲು ಪ್ರಾರಂಬೀಸಿದ ನಂತರ ಆರೋಪಿ ಸಂಖ್ಯೆ 3 ಮತ್ತು 4 ರವರು ನಮ್ಮನ್ನು ಜಗ್ಗಾಡಿ ಸೀರೆ ಮತ್ತು ಕೂದಲು ಹಿಡಿದು ಜಗ್ಗಾಡಿ ನನ್ನ ಸೀರೆಯನ್ನು ಹರಿದರು ನಾನು ಚೀರಹತ್ತಿದೆ ಆಗ ಆರೋಪಿ ಸಂಖ್ಯೆ 2 ರವರು ಈ ಸೂಳೆಯನ್ನು ಬಿಡಬೇಡಿರಿ ಅನ್ನುತ್ತ ನನ್ನ ಕಪಾಳಕ್ಕೆ ಮನಸ್ಸಿಗೆ ಬಂದಂತೆ ಹೊಡೆಯ ತೊಡಗಿದರು ಆಗ ಆರೋಪಿ ಸಂಖ್ಯೆ 3 ಮತ್ತು 4 ರವರು ಈ ಸೂಳೆಯನ್ನು ಇನ್ನೆಷ್ಟು ಹೊಡೆತ್ತಿರಿ ಇಗ ಇವಳನ್ನು ಮುಗಿಸಿಬಿಡೊಣ ಎಂದು ನನಗೆ ಕೇಳಗೆ ತಳ್ಳಿ ಜಗ್ಗಾಡಿ ಕಾಲಿನಿಂದ ಒದ್ದರು ಆಗ ನಾನು ಚಿರಾಡತೋಡಗಿದೆ ಆಗ ಸಾಕ್ಷಿದಾರರು ನನ್ನನ್ನು ಅವರಿಂದ ರಕ್ಷಿಸಿದರು ಇಲ್ಲದಿದ್ದರೆ ನನ್ನನ್ನು ಸದರಿಯವರು ಜೀವ ಸಹಿತ ಬಿಡುತ್ತಿರಲಿಲ್ಲ ಬಿಟ್ಟು ಹಓಗುತ್ತಿರುವಾಗ ಆರೋಪಿ ಸಂಖ್ಯೆ 1 ಮತ್ತು 3 ರವರು ಏ ಲೇ ಬೋಸಡಿ ಇಂದು ನೀನು ಉಳಿದುಕೊಂಡೆ ಒಂದಲ್ಲಾ ಒಂದು ದಿನ ನಿನನ್ನು ನಾವು ಬಿಡುವದಿಲ್ಲ ಅನ್ನುತ್ತ ಹೋದರು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!