ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-08-2019

By blogger on ಸೋಮವಾರ, ಆಗಸ್ಟ್ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-08-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 211/2019. ಕಲಂ 341 323, 504, 506 ಸಂಗಡ 34ಐ.ಪಿ.ಸಿ.:- ದಿನಾಂಕ:18-08-2019 ರಂದು ಮುಂಜಾನೆ 7:00 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ತನ್ನ ಮಗನಾದ ಕೇಶವ ಇಬ್ಬರೂ ಕೂಡಿ ಆಕಳ ಕರು ಹಿಡಿದುಕೊಂಡು ಹೊರಟಾಗ ದೊಡ್ಡ ಅಂಬ್ಲಪ್ಪ ತಂದೆ ದ್ಯಾವಣ್ಣ ಆಂದೇಲಿ , ಶ್ರೀದೇವಿ ಗಂಡ ದೊಡ್ಡ ಅಂಬ್ಲಪ್ಪ ಆಂದೇಲಿ, ಮಲ್ಲಪ್ಪ ತಂದೆ ದ್ಯಾವಣ್ಣ ಆಂದೇಲಿ, ಮತ್ತು ಅಂಬ್ರೇಶ ತಂದೆ ದ್ಯಾವಣ್ಣ ಆಂದೇಲಿ ಎಲ್ಲರೂ ಕೂಡಿ ತಮ್ಮನ್ನು ತಡೆದು ನಿಲ್ಲಿಸಿ ಏ ಸೂಳಿ ಮಕ್ಕಳೇ ಇಲ್ಲಿ ಬರಬೇಡಿ ಎಂದು ಬೈದು ಅವರಲ್ಲಿಯ ಶ್ರೀದೇವಿ ಇವಳು ಫಿಯರ್ಾದಿಯ ಕೇಶವ ಈತನ ಮೇಲೆ ಉಗುಳಿರುತ್ತಾಳೆ. ಆಗ ಫಿಯರ್ಾದಿ ಉಳಬೇಡಾ ಅಂದಿದ್ದಕ್ಕೆ ದೊಡ್ಡ ಅಂಬ್ಲಪ್ಪ ಈತನು ಫಿಯರ್ಾದೊಗೆ ಮಗನೇ ನಿಂದು ತಿಂಡಿ ಬಹಳ ಇದೆ ಅಂತಾ ಕೈಯಿಂದ ಹೊಡೆದಿರುತ್ತಾನೆ. ಮಲ್ಲಪ್ಪ ಆಂದೇಲಿ ಮತ್ತು ಅಂಬ್ರೇಶ ಆಂದೇಲಿ ಇಬ್ಬರೂ ನಮ್ಮ ತಂಟೆಗೆ ಬಂದರೆ ಮಕ್ಕಳೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಆಗ ಅಲ್ಲೇ ಇದ್ದ ನಮ್ಮ ಅಣ್ಣನಾದ ಬನ್ನಪ್ಪ ತಂದೆ ಅಂಬಣ್ಣ ದೋರನಳ್ಳಿ ನಮ್ಮ ಅತ್ತಿಗೆ ಲಕ್ಷ್ಮಿ ಗಂಡ ಬನ್ನಪ್ಪ ಇಬ್ಬರೂ ಬಂದು ಜಗಳ ಮಾಡುವುದು ಬೇಡಾ ಎಂದು ಹೇಳಿ ಜಗಳ ಬಿಡಿಸಿಕೊಂಡಿರುತ್ತಾರೆ.  ಕಾರಣ ನನಗೆ ತಡೆದು ನಿಲ್ಲಿಸಿ ನನ್ನ ಮಗನ ಮೇಲೆ ಉಗುಳಿ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.211/2019 ಕಲಂ.341, 323, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 65/2019 ಕಲಂ: 498(ಎ),504,323,109,506 ಸಂಗಡ 34 ಐಪಿಸಿ:-ದಿನಾಂಕ: 18/08/2019 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಶಾಂತಮ್ಮ ಗಂಡ ಸಿದ್ರಾಮರೆಡ್ಡಿ ಶೇಷಗಿರಿ, ವ:31, ಜಾ:ಲಿಂಗಾಯತರೆಡ್ಡಿ, ಉ:ಹೊಲಮನೆ ಕೆಲಸ ಸಾ:ಖಾನಾಪೂರ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನನಗೆ ನನ್ನ ತಂದೆ-ತಾಯಿ ಸುಮಾರು 12 ವರ್ಷಗಳ ಹಿಂದೆ ಶಹಾಪೂರ ತಾಲ್ಲೂಕಿನ ಖಾನಾಪೂರ ಗ್ರಾಮದ ಸಿದ್ರಾಮರೆಡ್ಡಿ ತಂದೆ ಬಸವರಾಜಪ್ಪ ಶೇಷಗಿರಿ ಈತನೊಂದಿಗೆ ಲಗ್ನ ಮಾಡಿದ್ದು, ನಾವು ಗಂಡ-ಹೆಂಡತಿ ಅನೋನ್ಯವಾಗಿದ್ದು, ನಮಗೆ ಕು: ದೇವರೆಡ್ಡಿ ವ:05 ವರ್ಷದ ಮಗ ಇರುತ್ತಾನೆ. ಹೀಗಿದ್ದು ಈಗ ಸುಮಾರು ಒಂದುವರೆ ವರ್ಷದ ಹಿಂದಿನಿಂದ ನನ್ನ ಗಂಡ ಸಿದ್ರಾಮರೆಡ್ಡಿ, ಮಾವನಾದ ಬಸವರಾಜಪ್ಪ ತಂದೆ ದೇವಿಂದ್ರಪ್ಪ ಶೇಷಗಿರಿ ಮತ್ತು ಅತ್ತೆಯಾದ ಮಹಾದೇವಿ ಗಂಡ ಬಸವರಾಜಪ್ಪ ಶೇಷಗಿರಿ ಎಲ್ಲರೂ ಸಾ:ಖಾನಾಪೂರ ಮತ್ತು ನಮ್ಮ ನಾದಿನಿ ಗಂಡನಾದ ಅನಂತರೆಡ್ಡಿ ತಂದೆ ಮಲ್ಲರೆಡ್ಡಿ ನಾಗರಬಂಡಿ ಸಾ:ಕಂದಳ್ಳಿ ಇವರುಗಳು ಸೇರಿ ನನಗೆ ವಿನಾಕಾರಣ ನೀನು ಸರಿ ಇಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ. ನಿನ್ನ ಗುಣ ಸರಿ ಇಲ್ಲ ಎಂದು ಹೊಡೆಬಡೆ ಮಾಡುವುದು ಮಾಡುತ್ತಿದ್ದರು. ಆದರೂ ಕೂಡಾ ನಾನು ಸಂಭಾಳಿಸಿಕೊಂಡು ಗಂಡನ ಮನೆಯಲ್ಲಿ ಇದ್ದೆನು. ಅವರು ಇನ್ನು ತ್ರಾಸ ಜಾಸ್ತಿ ಕೊಡಲಾರಂಭಿಸಿದಾಗ ನನ್ನ ತವರು ಮನೆಯವರಿಗೆ ವಿಷಯ ತಿಳಿಸಿದಾಗ ನನ್ನ ತಂದೆ ಬಸವರಾಜ, ತಾಯಿ ಶೇಖಮ್ಮ ಮತ್ತು ನಮ್ಮೂರ ಹಿರಿಯರಾದ ಬಸಣ್ಣಗೌಡ ತಂದೆ ಶರಣಪ್ಪಗೌಡ ಸಾವೂರ, ಶಿವರಾಜಪ್ಪಗೌಡ ತಂದೆ ಬಸವರಾಜಪ್ಪ ಗೌಡ ಬುಳ್ಳಾ ಮತ್ತು ಖಾನಾಪೂರ ಗ್ರಾಮದ ರಾಮಲಿಂಗಪ್ಪ ತಂದೆ ಯಂಕಪ್ಪ ಕೊಂಚೆಟ್ಟಿ ಇವರೆಲ್ಲರೂ ಸೇರಿ ಬಂದು ನನ್ನ ಗಂಡ, ಅತ್ತೆ ಮಾವನವರಿಗೆ ಕೂಡಿಸಿಕೊಂಡು ಬುದ್ಧಿಮಾತು ಹೇಳಿದ್ದು, ಆಗ ನನ್ನ ಗಂಡ, ಅತ್ತೆ ಮತ್ತು ಮಾವ ಇವರು ಆಯಿತು ನಮ್ಮ ಸೋಸೆಗೆ ನಾವು ತ್ರಾಸ ಕೊಟ್ಟಿದ್ದು ತಪ್ಪಾಗಿರುತ್ತದೆ. ಇನ್ನು ಮುಂದೆ ಅವಳಿಗೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿ ಒಪ್ಪಿಕೊಂಡರು. ಅದಾದ ಕೆಲವೆ ದಿನಗಳಲ್ಲಿ ಪುನ: ನನಗೆ ಅನಂತರೆಡ್ಡಿ ಈತನ ಪ್ರಚೋದನೆಯಿಂದ ನನ್ನ ಗಂಡ, ಅತ್ತೆ ಮತ್ತು ಮಾವ 3 ಜನ ಸೇರಿ ಭೊಸುಡಿ ನೀನು ಊರ ಹಿರಿಯರ ಮುಂದೆ ನಮ್ಮ ಮಯರ್ಾದೆ ಕಳಿದಿ ನಮ್ಮ ಮನೆಯಲ್ಲಿ ಇರಬೇಡ ಎಂದು ನನಗೆ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದಾಗ ಅನಿವಾರ್ಯವಾಗಿ ನಾನು ನನ್ನ ಮಗ ದೇವರೆಡ್ಡಿ ಈತನೊಂದಿಗೆ ನನ್ನ ತವರು ಮನೆಗೆ ಬಂದು ಇಂದಲ್ಲ ನಾಳೆ ನನ್ನ ಗಂಡ ಬಂದು ಕರೆದುಕೊಂಡು ಹೋಗಬಹುದು ಎಂದು ತಿಳಿದು ಅವರ ದಾರಿ ಕಾಯುತ್ತಾ ಕುಳಿತಿದ್ದೇನು. ಸುಮಾರು ದಿವಸಗಳಾದರು ನನ್ನ ಗಂಡ ಮತ್ತು ಮನೆಯವರು ಯಾರೂ ಬರದ ಕಾರಣ ದಿನಾಂಕ: 10/08/2019 ರಂದು ನಾನು ಮತ್ತು ನನ್ನ ತಂದೆ-ತಾಯಿ ಹಾಗೂ ನಮ್ಮ ಹಿರಿಯರಾದ ಬಸಣ್ಣಗೌಡ, ಶಿವರಾಜಪ್ಪಗೌಡ ಮತ್ತು ರಾಮಲಿಂಗಪ್ಪ ಹಾಗೂ ಇತರರು ಸೇರಿ ಖಾನಾಪೂರ ಗ್ರಾಮಕ್ಕೆ ನನ್ನ ಗಂಡನ ಮನೆಗೆ ಮದ್ಯಾಹ್ನ 12-30 ಗಂಟೆ ಸುಮಾರಿಗೆ ಹೋದೆವು. ಮನಗೆ ಹೋದಾಗ ನನ್ನ ಗಂಡ ಸಿದ್ರಾಮರೆಡ್ಡಿ, ಮಾವನಾದ ಬಸವರಾಜಪ್ಪ ತಂದೆ ದೇವಿಂದ್ರಪ್ಪ ಶೇಷಗಿರಿ ಮತ್ತು ಅತ್ತೆಯಾದ ಮಹಾದೇವಿ ಗಂಡ ಬಸವರಾಜಪ್ಪ ಶೇಷಗಿರಿ ನನಗೆ ಲೆ ಭೊಸುಡಿ ಮತ್ಯಾಕೆ ನಮ್ಮ ಮನೆಗೆ ಬಂದಿ, ನಮಗೆ ಮಾರಿ ತೋರಿಸಬ್ಯಾಡ ಅಂತಾ ಹೇಳಿದರು ಮತ್ತು ಬಂದಿಯಲ್ಲಾ ರಂಡಿ ಎಂದು ಜಗಳ ತೆಗೆದು ನನ್ನ ಗಂಡನು ನನ್ನ ತೆಲೆ ಮೇಲಿನ ಕೂದಲು ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ನನ್ನ ಅತ್ತೆಯು ಬಂದು ನನಗೆ ಕೈಯಿಂದ ಬೆನ್ನ ಮೇಲೆ ಹೊಡೆದಳು. ನಮ್ಮ ಮಾವ ಬಸವರಾಜಪ್ಪನು ಈ ಭೊಸುಡಿಗೆ ಮನೆಯಿಂದ ಹೊರಗೆ ಹಾಕ್ರಿ ಎಂದು ಹೇಳಿದನು. ಎಲ್ಲರೂ ಸೇರಿ ಇನ್ನೊಂದು ಸಲ ನಮ್ಮ ಮನಿಗೆ ಬಂದ್ರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿದರು. ಆಗ ಸಂಗಡ ಇದ್ದ ಹಿರಿಯರು ನನಗೆ ಹೊಡೆಯುವುದು ಬಿಡಿಸಿಕೊಂಡರು. ನನ್ನ ಗಂಡ ಇಂದಲ್ಲ ನಾಳೆ ಮನಸ್ಸು ಪರಿವರ್ತನೆ ಮಾಡಿಕೊಂಡು ನನಗೆ ಕರೆದುಕೊಂಡು ಹೋಗಬಹುದು ಎಂದು ಕಾಯ್ದು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಗಂಡ, ಅತ್ತೆ-ಮಾವ ಮತ್ತು ಇವರಿಗೆ ಪ್ರಚೋದನೆ ಕೊಟ್ಟ ಅನಂತರೆಡ್ಡಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 65/2019 ಕಲಂ: 498(ಎ),504,323,109,506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                                                                                       
ಯಾದಗರಿ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 26/2019 ಕಲಂ: 498(ಎ), 323, 504, 506, 307,  ಐ.ಪಿ.ಸಿ:- ದಿನಾಂಕ: 18.08.2019 ರಂದು 7 ಗಂಟೆ ಸುಮಾರಿಗೆ ಸಕರ್ಾರಿ ಆಸ್ಪತ್ರೆ ಯಾದಗಿರಿಯಿಂದ ಎಂ.ಎಲ್.ಸಿ ಇದೆ ಅಂತ ಪೋನ್ ಮೂಲಕ ತಿಳಿಸಿದಾಗ ನಾನು ದತ್ತಾತ್ರೇಯ ಎ.ಎಸ್.ಐ ಆಸ್ಪತ್ರೆಗೆ 7.15 ಪಿ.ಎಂಕ್ಕೆ ನಮ್ಮ ಠಾಣೆಯ ತನಿಖಾ ಸಹಾಯಕ ಹೆಚ್.ಸಿ- 116 ರವರ ಸಂಗಡ ಆಸ್ಪತ್ರೆಗೆ ಹೋಗಿ ಅಲ್ಲಿ ಹಾಜರಿದ್ದ ಘಾಯಾಳು ಶ್ರೀ ಮತಿ ಸಿದ್ದಮ್ಮ ಗಂಡ ಬಸಲಿಂಗಪ್ಪ ಸೂಗೂರು ವಯಾ-35 ಉ-ಖಾಸಗಿ ಕೆಲಸ ಜಾತಿ-ಮಾದಿಗ ಸಾ-ನಜರತ್ ಕಾಲೂನಿ ಫೀಲ್ಟರ್ ಬೆಡ್ ಹತ್ತಿರ ಯಾದಗಿರಿ ಇವರು ಹೆಳಿಕೆ ಪಿರ್ಯಾಧಿ ಕೊಟ್ಟಿದ್ದು ಅದರ ಸಾರಂಶವೇನೆಂದರೆ ನನಗೆ 13 ವರ್ಷಗಳ ಹಿಂದೆ ಗಡ್ಡೆಸೂಗೂರು ಗ್ರಾಮದ ಬಸಲಿಂಗಪ್ಪ ತಂದೆ ಯಲ್ಲಪ್ಪ ಈತನೊಂದಿಗೆ ಶ್ರೀರಂಗಪೂರ ಮಠದಲ್ಲಿ  ಮದುವೆಯಾಗಿದ್ದು ಇರುತ್ತದೆ. ನಮ್ಮ ದಾಂಪತ್ಯ ಜೀವನದಲ್ಲಿ ಸುಷ್ಮಾ ವಯಾ-13 ಮಾಯಾ ವಯಾ-7 ವರ್ಷ ಅಂತ 2 ಜನ ಹೆಣ್ಣು ಮಕ್ಕಳಿರುತ್ತಾರೆ. ಹೀಗಿದ್ದು 2 ವರ್ಷಗಳಿಂದ ನನ್ನ ಗಂಡ ಬಸಲಿಂಗಪ್ಪ ಈತನು ಕೂಲಿಕೆಲಸ ಮಾಡಿಕೊಂಡು ಇದ್ದು ಇತ್ತೀಚಿನ ದಿನಗಳಲ್ಲಿ ಮಧ್ಯ ಸೇವನೆ ಮಾಡುವ ಚಟಕ್ಕೆ ಬಿದ್ದು ಕುಡಿದು ಮನೆಗೆ ಬಂದು ನನಗೆ ಮಾನಸಿಕವಾಗಿ ಹಿಂಸೆ ನೀಡಿ ದೈಹಿಕವಾಗಿ ಹೊಡೆಬಡೆ ಮಾಡುತ್ತಾ ಬರುತ್ತಿದ್ದನು. ನಾನು ಮಕ್ಕಳ ಮುಖ ನೋಡಿ ಸಹಿಸಿಕೊಂಡು ಬಂದಿರುತ್ತೇನೆ. ಇಂದು ದಿನಾಂಕ : 18.08.2019 ರಂದು ಈ ದಿನ ಯಾದಗಿರಿಗೆ ಕರೆಯಿಸಿದ್ದು ನನ್ನ ಗಂಡ ನನ್ನ ಜೊತೆ ಗಲಾಟೆ ಮಾಡಿ ನನಗೆ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆಯುತ್ತಿದ್ದನು. ನನಗೆ ಹೊಡೆಯುವುದನ್ನು ನೋಡಿದ ನನ್ನ ಅಣ್ಣ ಶಿವುಕುಮಾರ ಇವರು ಬಿಡಿಸಲು ಬಂದಾಗ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಅಣ್ಣನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತ ಘಾಯ ಮಾಡಿ ನನ್ನ ಅಣ್ಣನಿಗೆ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ.  ಪ್ರತಿ ನಿತ್ಯ ನನ್ನ ಗಂಡ ಬಸಲಿಂಗಪ್ಪ ಈತನು ಮಧ್ಯ ಸೇವನೆ ಮಾಡಿ ಬಂದು ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು, ನನಗೆ ಅವ್ಯಾಚವಾಗಿ ಬೈಯುವುದು ಹೊಡೆಬಡೆ ಮಾಡುವುದು ನನ್ನ ಮೇಲೆ ಅನುಮಾನ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ. ಈ ದಿನ ನನ್ನ ಗಂಡ ಜಗಳ ಮಾಢುವಾಗ ನನ್ನ ಅಣ್ಣ ಮಧ್ಯ ಬಿಡಿಸಲು ಬಂದಾಗ ನನ್ನ ಗಂಡ ಒಂದು ಕಬ್ಬಿಣದ ರಾಡಿನಿಂದ ನನಗೆ ಹೊಡೆಯಲು ಬಂದಾಗ ನನ್ನ ಅಣ್ಣ ಶಿವುಕುಮಾರ ಮಧ್ಯ ಬಿಡಿಸಲು ಬಂದಾಗ ಕಬ್ಬಿಣದ ರಾಡು ನನ್ನ ಅಣ್ಣನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಘಾಯ ಮಾಡಿ ನನ್ನ ಅಣ್ಣನಿಗೆ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ: 498(ಎ), 323, 504, 506, 307,  ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಢಿಕೊಂಡು ತನಿಖೆ ಕೈಕೊಂಡೆನು. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ, 279, 283, 337, 338, ಐಪಿಸಿ  ಮತ್ತು 122, 129 177 ಐಎಂವಿ ಯಾಕ್ಟ:- ದಿನಾಂಕ: 17/08/2019 ರಂದು 09.30 ಪಿಎಮ್ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರ ರವರಿಂದ ಪೋನ ಮೂಲಕ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಎಂ.ಎಲ್.ಸಿ ವಸೂಲು ಮಾಡಿಕೊಂಡು, ಅಲ್ಲಿಯ ಗಾಯಾಳು ಶ್ರೀ. ಶಾಂತಪ್ಪ ತಂದೆ ಭೀಮರಾಯ ಪೋಸಪುಸಲ್ ವ:60 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಇಬ್ರಾಹಿಂಪೂರ ತಾ: ಶಹಾಪೂರ ಹಾ:ವ: ಗೋಗಿ ಕೆ ಗ್ರಾಮದ ಹತ್ತಿರ ಇರುವ ಹಾಲೋ ಬ್ಲಾಕ್ ಘಟಕ ತಾ: ಶಹಾಪುರ ಇವರ ಹೇಳಿಕೆ ಪಡೆದಿದ್ದು, ಸದರಿ ಹೇಳಿಕೆಯ ಸಾರಂಶ ಏನಂದರೆ, ಇಂದು ದಿನಾಂಕ: 17/08/2019 ರಂದು ಸಾಯಂಕಾಲ 06.30 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಜೋತೆಯಲ್ಲಿ ಕೆಲಸ ಮಾಡುತ್ತಿದ್ದ, ಸೋಮರಾಯ ತಂದೆ ರಾಮಣ್ಣ ದನಕಾಯವರ ವ: 56 ಜಾ: ಬೇಡರ ಉ: ಕೂಲಿ ಕೆಲಸ ಸಾ: ಇಬ್ರಾಂಪೂರ ಇಬ್ಬರು ಕೂಡಿ ಸೋಮರಾಯನ ಒಂದು ಟಿ.ವಿ.ಎಸ್-50 ವಾಹನ ನಂ: ಕೆಎ-33-ಆರ್-6504 ನೇದ್ದರ ಮೇಲೆ ಗೋಗಿ ಕೆ ಬಸ್ ನಿಲ್ದಾಣದ ಹತ್ತಿರ ಹೊಗಿ ಊಟ ಮಾಡಿಕೊಂಡು ಮರಳಿ ಶಹಾಪೂರ ಸಿಂದಗಿ ಮೇನ್ ರೋಡಿನ ಗೋಗಿ ಆಂದ್ರ ಕ್ಯಾಂಪ ಹತ್ತಿರ ಇರುವ ನಮ್ಮ ಹಾಲೋ ಬ್ಲಾಕ್ ಘಟಕಕ್ಕೆ ಹೊಗುತ್ತಿದ್ದಾಗ 07.20 ಪಿಎಂ ಸುಮಾರಿಗೆ ಸೋಮರಾಯ ಈತನು ಮೋಟಾರ್ ಸೈಕಲ ನಡೆಸುತ್ತಿದ್ದನು. ನಾನು ಹಿಂದೆ ಕುಳಿತಿದ್ದೆನು. ಸದರಿ ವಾಹನವನ್ನು ಸೋಮರಾಯನು ಹೆಲ್ಮೆಟ್ ದರಿಸದೆ ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗುತ್ತಾ ಇದ್ದಾಗ ಗೋಗಿ ಕೆಇಬಿ ದಾಟಿದ ನಂತರ ಜಿಮ್ ಹತ್ತಿರ ರೋಡಿನಲ್ಲಿ, ಒಂದು ಟ್ರ್ಯಾಕ್ಟರ ಟ್ರಾಯಿಲಿ ಮಾಲಿಕ ತನ್ನ ಟ್ರ್ಯಾಕ್ಟರ ಟ್ರಾಯಿಲಿಯನ್ನು ರೋಡಿನಲ್ಲಿ ಯಾವುದೇ ಮುಂಜಾಗ್ರತೆಯ ಕ್ರಮ ಕೈಕೊಳ್ಳದೆ, ರಿಪ್ಲೇಕ್ಟರಗಳನ್ನು ಅಳವಡಿಸದೆ, ಡಾಂಬರ ರೋಡಿನ ಎಡಗಡೆ ಭಾಗದಲ್ಲಿ ಅಲಕ್ಷತನದಿಂದ ನಿಲ್ಲಿಸಿದ್ದು, ಎದಿರುಗಡೆಯಿಂದ ಬರುವ ವಾಹನದ ಬೇಳಕಿನಲ್ಲಿ ಟ್ರ್ಯಾಯಲಿ ನೋಡದೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಡಿಕ್ಕಿ ಪಡೆಸಿದನು. ಆಗ ನಾನು ಮತ್ತು ಮೋಟಾರ ಸೈಕಲ್ ನಡೆಸುತ್ತಿದ್ದ ಸೋಮರಾಯ ಇಬ್ಬರು ಕೆಳಗೆ ಬಿದ್ದೆವು, ನನ್ನ ಎಡಗಡೆಯ ಹಣೆಗೆ ರಕ್ತಗಾಯವಾಗಿದ್ದು, ವಾಹನ ನಡೆಸುತ್ತಿದ್ದ ಸೊಮರಾಯ ಈತನಿಗೆ ಎಡಗಡೆಯ ಹಣೆಯ ಹತ್ತಿರ ತಲೆಗೆ ಭಾರಿ ರಕ್ತಗಾಯ ಆಗಿರುತ್ತದೆ. ಟ್ರ್ಯಾಕ್ಟರ ಟ್ರಾಯಿಲಿ ನೊಡಲಾಗಿ ಅದು ನೀಲ ಬಣ್ಣದ್ದು ಇದ್ದು ಅದರ ನಂ: ಕೆಎ-34-ಟಿಎ-0859 ಅಂತಾ ಇರುತ್ತದೆ. ಸದರಿ ಟ್ರ್ಯಾಯಿಲಿ ಬಗ್ಗೆ ವಿಚಾರಿಸಿದಾಗ ಹಣಮಂತ್ರಾಯ ತಂದೆ ಹಣಮಂತ ಇರಬಗೇರ ಸಾ: ಗೋಗಿ ಕೆ ಅಂತಾ ಗೊತ್ತಾಗಿರುತ್ತದೆ ಕಾರಣ ಟಿ.ವಿ.ಎಸ್. ಮೋಟಾರ್ ಸೈಕಲ್ ನಂ:ಕೆಎ-33-ಆರ್-6504 ಚಾಲಕ ಸೋಮರಾಯ ತಂದೆ ರಾಮಣ್ಣ ದನಕಾಯವರ ಮತ್ತು ಟ್ರ್ಯಾಕ್ಟರ ಟ್ರಾಯಿಲಿಯನ್ನು ರೋಡಿನಲ್ಲಿ ಯಾವುದೆ ಮುಂಜಾಗ್ರತೆಯ ಕ್ರಮ ಕೈಕೊಳ್ಳದೆ (ರಿಪ್ಲೆಕ್ಟರ ಇರದೆ) ಅಲಕ್ಷತನದಿಂದ ರೋಡಿನಲ್ಲಿ ಬಿಟ್ಟು ಅಪಘಾತಕ್ಕೆ ಕಾರಣನಾದ ಹಣಮಂತ್ರಾಯ ತಂದೆ ಹಣಮಂತ ಇರಬಗೇರ ಸಾ: ಗೋಗಿ ಕೆ. ಈ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ ಇಂದು ದಿನಾಂಕ:18/08/2019 ರಂದು 00.30 ಎಎಂ ಕ್ಕೆ  ಬಂದು ಠಾಣೆ ಗುನ್ನೆ ನಂ: 87/2019 ಕಲಂ, 279, 283, 337, 338 ಐಪಿಸಿ ಮತ್ತು 122, 129 177 ಐಎಂವಿ ಯಾಕ್ಟ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ, 143, 147, 148, 448, 323, 324, 504, 506 ಸಂ: 149 ಐಪಿಸಿ:-ದಿನಾಂಕ: 18/08/2019 ರಂದು 07.45 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರ ರವರಿಂದ ಪೋನ ಮೂಲಕ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀ ಭಿಮಣ್ಣ ಹೆಚ್,ಸಿ-146 ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಎಂ.ಎಲ್.ಸಿ ವಸೂಲು ಮಾಡಿಕೊಂಡು, ಅಲ್ಲಿಯ ಗಾಯಾಳು ಶ್ರೀ. ಹಣಮಂತ ತಂದೆ ಮಲ್ಲಪ್ಪ ಕರಿಗುಡ್ಡದವರ ವಯ:35 ಜಾ: ಕುರುಬರ ಉ: ಕೂಲಿ ಕೆಲಸ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ ಇವರ ಹೇಳಿಕೆ ಪಡೆದಿದ್ದು, ಸದರಿ ಹೇಳಿಕೆಯ ಸಾರಂಶ ಏನಂದರೆ, ನಿನ್ನೆ ದಿನಾಂಕ:17/08/2019 ರಂದು ಸಾಯಂಕಾಲ 06.30 ಪಿಎಂ ಸುಮಾರಿಗೆ ನಮ್ಮ ಒಂದು ಕುರಿ ಮರಿ ನಮ್ಮ ಪಕ್ಕದ ಮನೆಯವರಾದ ಭೀಮಣ್ಣ ತಂದೆ ಸಣ್ಣ ಹಣಮಂತ ಇವರ ಮನೆಯಲ್ಲಿ ಹೊಗಿತ್ತು ಈ ಸಂಬಂದವಾಗಿ ನಮ್ಮ ಹೆಣ್ಣು ಮಕ್ಕಳ ಜೋತೆ ಭೀಮಣ್ಣನ ಮನೆಯವರು ಬಾಯಿ ಮಾತಿನ ಜಗಳ ಮಾಡಿದ್ದರು.ನಂತರ ದಿನಾಂಕ:17/08/2019 ರಂದು ನಾನು ನಮ್ಮ ಮನೆಯಲ್ಲಿ ಬಂದು ಊಟಕ್ಕೆ ಕೂಡ ಬೇಕು ಅಂತಾ ಕೂಡುತ್ತಿದ್ದಾಗ ನಮ್ಮ ಪಕ್ಕದ ಮನೆಯವರಾದ 1) ಭೀಮಣ್ಣ ತಂದೆ ಸಣ್ಣ ಹಣಮಂತ ಕರಿಗುಡ್ಡದವರ ವಯಾ:28, 2) ಮಾಳಪ್ಪ ತಂದೆ ಸಿದ್ದಪ್ಪ ಸೈದಾಪೂರ 3) ನಿಂಗಪ್ಪ ತಂದೆ ಸಣ್ಣ ಹಣಮಂತ ಕರಿಗುಡ್ಡದವರ ವ:25 4) ಮುದಕಪ್ಪ ತಂದೆ ಸಿದ್ದಪ್ಪ ಸೈದಾಪುರ ವ:25 5) ಸಣ್ಣ ಹಣಮಂತ ತಂದೆ ದೊಡ್ಡ ಮಲ್ಲಪ್ಪ ಕರಿಗುಡ್ಡದವರ ವ:50 ಎಲ್ಲರೂ ಜಾ: ಕುರುಬರ ಸಾ: ವನದುಗರ್ಾ ಇವರೆಲ್ಲರು ಕೂಡಿ ನಮ್ಮ ಮನೆಯಲ್ಲಿ ಬಂದವರೆ ನನಗೆ ಸೂಳೆ ಮಗನೆ ಹಣಮ್ಯಾ ನಿಮ್ಮ ಕುರಿ ಮರಿ ಬಿಡಬ್ಯಾಡ ಅಂತಾ ಎಷ್ಟು ಸಲ ಹೇಳಬೇಕು ಅಂತಾ ಅವಾಚ್ಯವಾಗಿ ಬೈಯ್ದು, ನನಗೆ ಹೊರಗೆ ಎಳೆದುಕೊಂಡು ಬಂದು ಮಾಳಪ್ಪ ಮತ್ತು ನಿಂಗಪ್ಪ ಇವರುಗಳು ಕೈಯಿಂದ ನನ್ನ ಬೆನ್ನಿಗೆ ಹೊಡೆದರು. ಆಗ ಭೀಮಣ್ಣ ತಂದೆ ಸಣ್ಣ ಹಣಮಂತ ಈತನು ಒಂದು ರಾಡಿನಿಂದ ನನ್ನ ತಲೆಗೆ ಹಿಂಬಾಗದಲ್ಲಿ ಹೊಡೆದನು. ಅದರಿಂದ ತಲೆಯ ರಕ್ತಗಾಯ ಆಗಿರುತ್ತದೆ. ಮುದುಕಪ್ಪ ಮತ್ತು ಸಣ್ಣ ಹಣಮಂತ ಇಬ್ಬರು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ದಬ್ಬಿಕೊಟ್ಟರು. ಅದರಿಂದ ನನಗೆ ಎಡ ಕಪಾಳಕ್ಕೆ, ಮತ್ತು ಬಲಗಾಲಿನ ಬೆರಳಿಗೆ ತರಚಿದ ಗಾಯಗಳಾಗಿರುತ್ತವೆ. ಆಗ ಭೀಮಣ್ಣ ಈತನು ಸೂಳೆ ಮಗನೆ ನಿನಗೆ ಎಷ್ಟು ಸೊಕ್ಕು ನಮಗೆ ಎದಿರು ಹಕಿಕೊಂಡು ಬದುಕು ಹೇಗೆ ಮಾಡುತ್ತಿ ನೋಡೋಣ ಅಂತಾ ಜೀವದ ಭಯ ಹಾಕಿರುತ್ತಾನೆೆ. ಅಷ್ಟರಲ್ಲಿ ನಮ್ಮೂರಿನ ಪರಸಪ್ಪ ತಂದೆ ದೇವಿಂದ್ರಪ್ಪ ದುದಕುಂಡಿಯವರ ಮತ್ತು ದೇವಪ್ಪ ತಂದೆ ಹಳ್ಳೆಪ್ಪ ಪರಸನಳ್ಳಿ ಇವರುಗಳು ಚಾರ್ಜರ ಲೈಟಿನ ಬೆಳಕಿನಲ್ಲಿ ಸದರಿಯವರು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ, ಇನ್ನು ಹೊಡೆಯುತ್ತಿದ್ದರು. ಸದರಿ ಭೀಮಣ್ಣ ಮತ್ತು ಇತರರು ಹೊಡೆದು ಹೊಗುವಾಗ ಮಗನೆ ಇನ್ನೊಮ್ಮೆ ನಮ್ಮ ಮನೆಯಲ್ಲಿ ಕುರಿ ಬಂದರೆ ನಿನಗೆ ಮತ್ತು ಕುರಿಗೆ ಸೇರಿಸಿ ಕಡಿಯುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ.
    ಕಾರಣ ನಮ್ಮ ಕುರಿ ಮನೆಯಲ್ಲಿ ಬಂದ ವಿಷಯದಲ್ಲಿ ಜಗಳ ಮಾಡಿ ನನ್ನ ಮನೆಯಲ್ಲಿ ಅಕ್ರಮಾವಗಿ ಬಂದು ನನಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ, ರಾಡಿನಿಂದ ಹೊಡೆದು ಜೀವದ ಭಯ ಹಾಕಿದ ಮೇಲಿನ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ ಇಂದು 10.15 ಎಎಂ ಕ್ಕೆ  ಬಂದು ಈ ಹೇಳಿಕೆ ಹಾಜರ ಪಡೆಸಿದ್ದು ಸದರಿ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 88/2019 ಕಲಂ, ಕಲಂ, 143, 147, 148, 448, 323, 324, 504, 506 ಸಂ: 149 ಐಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  
    
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- 89/2019 ಕಲಂ, 341, 323, 504, 506 ಐಪಿಸಿ :- ದಿನಾಂಕ: 18/08/2019 ರಂದು 07.30 ಪಿಎಮ್ ಕ್ಕೆ ಪಿಯರ್ಾದಿ ಶ್ರೀ. ಸಣ್ಣ ಹಣಮಂತ ತಂದೆ ಮಲ್ಲಪ್ಪ ಕರಿಗುಡ್ಡದವರ ವಯ:55 ಜಾ: ಕುರುಬರ ಉ: ಒಕ್ಕಲುತನ  ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಿನ್ನೆ ದಿನಾಂಕ:17/08/2019 ರಂದು ಸಾಯಂಕಾಲ 06.30 ಪಿಎಂ ಸುಮಾರಿಗೆ ನಮ್ಮ ಮನೆಯಲ್ಲಿ ನಮ್ಮ ಪಕ್ಕದ ಮನೆಯವರಾದ ಹಣಮಂತ ತಂದೆ ಸಣ್ಣ ಮಲ್ಲಪ್ಪ ಕರಿಗುಡ್ಡದವರ ಇವರ ಒಂದು ಕುರಿ ಮರಿ ಬಂದಿತ್ತು, ಆಗ ನಾನು ಮನೆಯಿಂದ ಕುರಿ ಮರಿ ಹೊರೆಗೆ ಓಡಿಸಿದೆನು, ಮತ್ತು ಹಣಮಂತ ಈತನಿಗೆ ಮರಿ ಕಟ್ಟಿಕೊರಪ್ಪ ಏನ ದಿನಾ ಮನೆಯೋಳಗಡೆ ಬರುತ್ತೆ, ಸಾಕಾಗಿದೆ ನಮಗೆ ಅಂತಾ ಅನ್ನುತ್ತಾ ನಾನು ನಮ್ಮ ಮನೆಯಿಂದ ಹೊರಗೆ ಬಂದು ನಿಂಗಯ್ಯ ಮುತ್ಯಾನ ಕಟ್ಟಿ ಕಡೆಗೆ ಹೊಗಲು ಸಿಸಿ ರಸ್ತೆಯ ಮೇಲೆ ಹೋಗುತ್ತಿದ್ದಾಗ ಹಣಮಂತ ತಂದೆ ಸಣ್ಣ ಮಲ್ಲಪ್ಪ ಕರಿಗುಡ್ಡದವರ ಈತನು ಬಂದು ನನಗೆ ತಡೆದು ನಿಲ್ಲಿಸಿ, ಸೂಳೆ ಮಗನೆ ನಾವೇನು ಬೇಕು ಅಂತಾ ಕುರಿಮರಿ ನಿಮ್ಮ ಮನೆಯಲ್ಲಿ ಬಿಟ್ಟಿವೇನು ಅಂತಾ ಬೈಯತೊಡಿದನು, ಆಗ ನಾನು ಆಯಿತಪಾ ನೀನು ಬೇಕು ಅಂತಾ ಬಿಟ್ಟಿಲ್ಲ ಆದರೆ, ನಮ್ಮ ಮನೆಯಲ್ಲಿ ಕುರಿ ಯಾಕ ಬಂತು ನೀನು ಕಟ್ಟಿಕೊಬೇಕು ಅಂತಾ ಹೇಳಿದಾಗ ಹಣಮಂತ ಈತನು ಸಿಟ್ಟಿಗೆ ಬಂದು ಸೂಳೆ ಮಗನೆ ಅಂತಾ ಬೈಯುತ್ತಾ ಕೈಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾನೆ. ಅಷ್ಟರಲ್ಲಿ ಅಲ್ಲೆ ಹೊರಟಿದ್ದ ದೊಡ್ಡ ಹಣಮಂತ ತಂದೆ ಮಲ್ಲಪ್ಪ ಕರಿಗುಡ್ಡದವರ, ಮತ್ತು ಶೇಖಪ್ಪ ತಂದೆ ಮಲ್ಲಪ್ಪ ಕರಿಗುಡ್ಡದವರ ಇವರುಗಳು ನೋಡಿ ಬಿಡಿಸುಕೊಂಡರು ಆಗ ಹಣಮಂತ ತಂದೆ ಸಣ್ಣ ಮಲ್ಲಪ್ಪ ಈತನು ಮಗನೆ ನೀನು ಇನ್ನೊಮ್ಮೆ ನಮ್ಮ ಕುರಿಮರಿ ವಿಷಯದಲ್ಲಿ ಮಾತಾಡಿದರೆ, ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿ;18/08/2019 ರಂದು 07.30 ಪಿಎಂಕ್ಕೆ ಠಾಣೆಗೆ ಬಂದು ಹೇಳಿಕೆ ನಿಡಿರುತ್ತೇನೆ. ನನಗೆ ಗಾಯಗಳಾಗಿರುವದಿಲ್ಲ ಅದರಿಂದ ಆಸ್ಪತ್ರೆಗೆ ಹೋಗುವದಿಲ್ಲ.ಕಾರಣ ನಮ್ಮ ಮನೆಯಲ್ಲಿ ಕುರಿಮರಿ ಬಿಡಬೇಡ ಅಂತಾ ಅಂದಿದ್ದಕ್ಕೆ ನನಗೆ ದಾರಿಯಲ್ಲಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆದು ಜೀವ ಭಯ ಹಾಕಿದ ಹಣಮಂತ ತಂದೆ ಸಣ್ಣ ಮಲ್ಲಪ್ಪ ಕರಿಗುಡ್ಡದವರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2019 ಕಲಂ, ಕಲಂ, 341, 323, 504, 506 ಐಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!