ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-08-2019

By blogger on ಗುರುವಾರ, ಆಗಸ್ಟ್ 15, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-08-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 171/2019 ಕಲಂ 279 338 ಐ.ಪಿ.ಸಿ:- ದಿನಾಂಕ:15-08-2019 ರಂದು 1-30 ಪಿ..ಎಂ.ಕ್ಕೆ ಠಾಣೆಯಯಲ್ಲಿದ್ದಾಗ ಶ್ರೀ ಭವಾನಿಸಿಂಗ ತಂದೆ ಲಕ್ಷ್ಮಣಸಿಂಗ ಠಾಕೂರ ವಯಾ:35 ವರ್ಷ ಉ:ಒಕ್ಕಲುತನ ಜಾತಿ:ರಜಪೂತ ಸಾ:ದೇವಾಪೂರ ಈತನು ಠಾಣೆಗೆ ಬಂದು ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-08-2019 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಖಾಸಗಿ ಕೆಲಸ ಇದ್ದುದ್ದರಿಂದ  ಸುರಪೂರಕ್ಕೆ ಹೋಗಿ ಬಂದರಾಯಿತು ಅಂತಾ ನಾನು ನಮ್ಮೂರ ಬಸವರಾಜ ದಾವಣಗೇರಾ ಇಬ್ಬರು ಬಸವರಾಜ ಈತನ ಮೋಟಾರ ಸೈಕಲ್ ಮೇಲೆ ಹಾಗೂ ನಮ್ಮ ಕಾಕನ ಮಗನಾದ ಅಮೃತಸಿಂಗ ಈತನು ತನ್ನ ಮೋಟಾರ ಸೈಕಲ್ ನಂಬರ ಕೆಎ-33 ಹೆಚ್-3106 ನೇದ್ದರ ಮೇಲೆ ದೇವಾಪೂರದಿಂದ ಸುರಪೂರಕ್ಕೆ ಹೋರಟಿದ್ದು. ನಾನು ಬಸವರಾಜ ಈತನ ಮೋಟಾರ ಸೈಕಲ್ ಹಿಂದುಗಡೆ ಕುಳತಿದ್ದು ನನ್ನ ಕಾಕನ ಮಗನಾದ ಅಮೃತಸಿಂಗ ಈತನು ತನ್ನ ಮೋಟಾರ ಸೈಕಲ್ ಚಲಾಯಿಸಿಕೊಂಡು ನಮ್ಮ ಮುಂದುಗಡೆಗೆ ಹೊರಟಿದ್ದು ನಾವು ಅವನ ಹಿಂದುಗಡೆ ಸ್ವಲ್ಪ ಅಂತರದ ರೋಡಿನ ಎಡಗಡೆ ಬದಿಯಲ್ಲಿ ಹೊರಟಿದ್ದೆವು. ಅಂದಾಜು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕವಡಿಮಟ್ಟಿ -ಸುರಪೂರ ಮುಖ್ಯ ರಸ್ತೆಯ ಕವಡಿಮಟ್ಟಿ ಕೃಷಿ ಪಾರಂ ಮುಂದುಗಡೆಯ ರಸ್ತೆಯ ಮುಖಾಂತರ ಸುರಪೂರ ಕಡೆಗೆ ನಮ್ಮ ಎಡಗಡೆ ಸೈಡಿಗೆ ನಾವು ನಿದಾನವಾಗಿ ಹೋಗುತ್ತಿರುವಾಗ ಸುರಪೂರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಮುಂದುಗಡೆ ಸೈಕಲ್ ಮೋಟಾರ ಚಲಾಯಿಸಿಕೊಂಡು ಹೋಗುತ್ತಿದ್ದ ನನ್ನ ಕಾಕನ ಮಗ ಅಮೃತಸಿಂಗ ಈತನ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿದಾಗ ತಮ್ಮ ಅಮೃತಸಿಂಗ ಈತನು ಮೊಟಾರ ಸೈಕಲ್ ಸಮೇತ ರೋಡಿನ ಪಕ್ಕದಲ್ಲಿ ಬಿದ್ದಿದ್ದು ಕಾರ ಚಾಲಕನು ತನ್ನ ಕಾರನ್ನು ಅಲ್ಲೆ ನಿಲ್ಲಿಸಿದ್ದು, ಆಗ ಅಲ್ಲೆ ಹಿಂದುಗಡೆ ಬರುತ್ತಿದ್ದ ನಾನು ಬಸವರಾಜ ಇಬ್ಬರು ಮೋಟಾರ ಸೈಕಲ್ ನಿಲ್ಲಿಸಿ ಅಮೃತಸಿಂಗ ಹತ್ತಿರ ಹೋಗಿ ಅವನನ್ನು ಎಬ್ಬಿಸಿ ನೋಡಲು ಅವನ ಬಲಗಾಲ ಮೊಳಕಾಲ ಕೆಳಗಡೆ ಕಾಲಿಗೆ ಭಾರಿ ರಕ್ತಗಾಯವಾಗಿ ರಕ್ತಬರುತ್ತಿತ್ತು. ಆಗ ನಾವು ಅಲ್ಲೆ ನಿಲ್ಲಿಸಿದ ಕಾರನ್ನು ನೋಡಿ ಚಾಲಕನಿಗೆ ವಿಚಾರಿಸಲು ಕಾರ ನಂಬರ ಎಪಿ-25 ಎಕೆ-2229 ನೇದ್ದು ಚಾಲಕನ ಹೆಸರು ಗಂಗಾಧರರಾವ್ ತಂದೆ ಎ.ವಿ ಸುಬ್ಬರಾವ್ ಅಲಪಾಟಿ ವಯಾ:40 ವರ್ಷ ಉ:ಒಕ್ಕಲುತನ ಜಾ:ಕಮ್ಮಾರೆಡ್ಡಿ ಸಾ:ದೇವಾಪೂರ ಅಂತಾ ತಿಳಿಯಿತು. ಮೊಟಾರ ಸೈಕಲ್ ಹಾಗೂ ಕಾರ ಜಖಂಗೊಂಡಿದ್ದು, ಕಾರ ಚಾಲಕನಿಗೆ ಯಾವುದೆ ಗಾಯ ವಗೈರೆ ಯಾಗಿರುವದಿಲ್ಲ. ನಂತರ ನಾವು ಕೂಡಲೆ 108 ಅಂಬುಲೇನ್ಸ ವಾಹನಗೆ ಪೋನ ಮಾಡಿ ಕರೆಯಿಸಿ ಅಮೃತಸಿಂಗ ಈತನನ್ನು ಅಂಬುಲೇನ್ಸ ವಾಹನದಲ್ಲಿ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಮೀರಜ ಆಸ್ಪತ್ರೆಗೆ ಕಳಿಸಿಕೊಟ್ಟು ನಾನು ಅಜರ್ಿಯನ್ನು ಗಣಕೀಕರಣ ಮಾಡಿಸಿಕೊಂಡು ಠಾಣೆಗೆ ಬರಲು ತಡವಾಗಿರುತ್ತದೆ. ಈ ಅಪಘಾತ ಘಟನೆಗೆ ಕಾರ ಚಾಲಕನಾದ ಗಂಗಾಧಾರರಾವ್ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನನ್ನ ತಮ್ಮನ ಮೊಟಾರ ಸೈಕಲ್ಗೆ ಡಿಕ್ಕಿ ಪಡಿಸಿದ್ದರಿಂದ ಘಟನೆ ಸಂಬವಿಸಿದ್ದು ಇರುತ್ತದೆ. ಕಾರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ.323,324,354,504,506 ಸಂಗಡ 34 ಐಪಿಸಿ:-ದಿನಾಂಕ: 15-08-2019 ರಂದು ಸಾಯಂಕಾ 04-30 ಗಂಟೆಗೆ ರಾಯಚೂರ ರೀಮ್ಸ ಆಸ್ಪತ್ರೆಯಿಂದ ಗಾಯಾಳು ಲಕ್ಷ್ಮೀ ಗಂಡ ಯಂಕಣ್ಣ ವ|| 55 ವರ್ಷ ಜಾ|| ಉಪ್ಪಾರ ಉ|| ಹೊಲಮನೆ ಕೆಲಸ ಸಾ|| ವಂಕಸಂಬ್ರ ಇವರ ಹೇಳಿಕೆಯನ್ನು ಪಡೆದುಕೊಂಡ ಬಂದ ಸಾರಂಶವೆನೆಂದರೆ ದಿನಾಂಕ: 14-08-2019 ರಂದು ರಾತ್ರಿ 07-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇರುವಾಗ ಆರೋಪಿತರು ಸೇರಿ ಬಂದಿ ನನಗೆ ಏ ಲೇ ಸೂಳೆ ಹೊಲದಲ್ಲಿ ಯಾಕೆ ಅರ್ಧ ಭಾಗ ಕೊಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿ ಸೀರೆ ಸೇರಗು ಹಿಡಿದು ಎಳದಾಡಿ ಮಾನ ಭಂಗ ಮಾಡಲು ಪ್ರಯತ್ನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
                                                                                       
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 72/2019 ಕಲಂ. 143 147 323 324 326 504 506 ಸಂಗಡ 149 ಐಪಿಸಿ:-ದಿನಾಂಕ:14/08/2019 ರಂದು ರಾತ್ರಿ 8.40 ಗಂಟೆಯ ಸುಮಾರಿಗೆ ಗಾಯಾಳು ತನ್ನ ಅಣ್ಣನ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಕೂಡಿ ಬಂದವರೇ ಹೊಲಕ್ಕೆ ಹಾದಿಯನ್ನು ಬಿಡುವ ವಿಷಯದಲ್ಲಿ ಜಗಳವನ್ನು ತೆಗೆದು ಕಲ್ಲಿನಿಂದಾ, ಕೈಯಿಂದಾ  ಹೊಡೆಬಡೆ ಮಾಡಿ ಗಾಯಾಳು ಮೂಗಿಗೆ ರಕ್ತಗಾಯ ಹಾಗೂ ಎಡಕಪಾಳಿಗೆ ಒಳಪೆಟ್ಟು ಮತ್ತು ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯ ಮಾಡಿದ್ದು, ಕೊಡಲಿಯ ತುಂಬಿನಿಂದಾ ಬಾಯಿಗೆ ಹೊಡೆದಿದ್ದರಿಂದಾ ಗಾಯಾಳುವಿನ ಬಾಯಲ್ಲಿ ಕೆಳಗಿನಲ್ಲಿ ಹಲ್ಲು ಮುರಿದು ಭಾರಿ ಗಾಯವಾಗಿದ್ದು, ಆರೋಪಿತರೆಲ್ಲರೂ ಕೂಡಿ ಪಿಯರ್ಾದಿಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿದ್ದು ಅಂತಾ ಇಂದು ದಿನಾಂಕ:15/08/2019 ರಂದು ಗಾಯಾಳುವಿನ ಮಗ ಲಕ್ಷ್ಮಣ ಈತನು ಠಾಣೆಗೆ ಬಂದು ಹೇಳಿಕೆ  ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದಾ  ಕ್ರಮ ಜರುಗಿಸಲಾಗಿದೆ.  


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 124/2019 ಕಲಂ: 279, 338 ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ:- ದಿನಾಂಕ 13/08/2019 ರಂದು ಫಿರ್ಯಾಧಿ ಮತ್ತು ಇನ್ನೊಬ್ಬ ಇಬ್ಬರೂ ಕೂಡಿಕೊಂಡು ಸಂತೆ ಮಾಡುವ ಕುರಿತು ಮಧ್ಯಾಹ್ನ 12-00 ಗಂಟಗೆ ರಾಮಸಮುದ್ರ ಗ್ರಾಮದಲ್ಲಿ ಬ್ಯಾಂಕ ಎದುರುಗಡೆ ನಿಂತಾಗ ಅರಿಕೇರಾ(ಕೆ) ಕಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಎ.ಪಿ-22-ಎ.ಕೆ-1613 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿಯ ತಾಯಿ ಚಾಂದಿಬಾಯಿ ಇವಳಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಆಗಿರುತ್ತವೆ, ಮೋಟಾರ ಸೈಕಲ್ ಸವಾರನ ಹೆಸರು ಗೋತ್ತಾಗಿರುವದಿಲ್ಲ, ಅಂತಾ ಗುನ್ನೆ ದಾಖಲಾಗಿರುತ್ತದೆ. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 62/2019 ಕಲಂ: 279, 338 ಐಪಿಸಿ ಮತ್ತು ಕಲಂ: 304 (ಎ) ಐಪಿಸಿ ಅಳವಡಿಸಿಕೊಳ್ಳಲಾಗಿದೆ.:- ದಿನಾಂಕ: 23/06/2019 ರಂದು ಬೇಳಗ್ಗೆ  ಧನ್ವಂತರಿ ಆಸ್ಪತ್ರೆ ಕಲಬುರಗಿ ಯಿಂದ ಆರ್.ಟಿ.ಎ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ವೀರಣ್ಣ ಹೆಚ್.ಸಿ-138 ರವರು ಸದರಿ ಆಸ್ಪತೆ ಬೇಟಿ ಮಾಡಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಪಿಯರ್ಾದಿದಾರಾದ ಚಂದ್ರಕಲಾ ಗಂಡ ಮಲ್ಲಣ್ಣ ಮಲ್ಲಾಬಾದಿ ವಯಾ: 38 ಉ: ಹೊಲಮನಿ ಕೆಲಸ ಜಾ|| ಕುರುಬರ ಸಾ|| ಪಡದಳ್ಳಿ ತಾ: ಜೇವಗರ್ಿ ಜಿ: ಕಲಬುರಗಿ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಳ್ಳಲಾಗಿ ಸದರ ಹೇಳಿಕೆ ಸಾರಂಶವೆನಂದರೆ ದಿ:22/06/2019 ರಂದು ರಾತ್ರಿ 10.05. ಪಿಎಂ ಸುಮಾರಿಗೆ ನಮ್ಮ ದರ್ಶನಾಪೂರ ಗ್ರಾಮಾದ ನಮ್ಮ ತಮ್ಮನಾದ ಮಲ್ಲಿಕಾಜರ್ುನ ತಂದೆ ಶಿವಬಸಪ್ಪ ಪೂಜಾರಿ ಇವರು ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ತಾನು ಚಾಮನಾಳ ದಿಂದ ಊರಗೆ ಬರುತ್ತಿರುವಾಗ ದರ್ಶನಾಪುರ ಸಮೀಪ ಕೆನಾಲ ಹತ್ತಿರ ಒಂದು ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನಗೆ ಹಿಂದೆಹಾಕಿ ಹೋಗಿ ಸ್ವಲ್ಪ ಮುಂದೆ ಹೊಗುವಷ್ಟರಲ್ಲಿ ಕೆನಾಲಹತ್ತಿರ ನೀರುನಿಂತಿರುವ ಸ್ಥಳದಲ್ಲಿ ಜಂಪಿಗೆ ಬಿದ್ದರಿಂದ ಸದರಿ ಮೋಟಾರ ಸೈಕಲ್ ಮೇಲೆ ಕುಳಿತಿದ್ದವರೊಬ್ಬರು ಕೆಳಗೆ ಬಿದ್ದರು. ನಾನು ಕೂಡಲೆ ಹೋಗಿ ನನ್ನ  ಮೋಟಾರ ಸೈಕಲ್ ಬೆಳಕಿನಲ್ಲಿ ನೊಡಲಾಗಿ ಮೋಟಾರ ಸೈಕಲ ಹಿಂದೆ ಕುಳಿತ ವ್ಯಕ್ತಿಯು ಮಾವನವರಾದ ಮಲ್ಲಣ್ಣ ತಂದೆ ಶಿವಲಿಂಗಪ್ಪ ಮಲ್ಲಾಬಾದಿ ಸಾ|| ಪಡದಳ್ಳಿ ಅಂತಾ ಗೊತ್ತಾಯಿತು ಸದರಿಯವನಿಗೆ ತಲೆಯ ಬಲಗಡೆಯ ಮೆಲಕಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಅಂತಾ ತಿಳಿಸಿದರು. ಆಗ ಕೂಡಲೆ ನಾನು ಮತ್ತು ನಮ್ಮ ಚಿಕ್ಕಪ್ಪ ಮಲ್ಲಿಕಾಜರ್ುನ ತಂದೆ ಚಂದ್ರಾಮ ಪೂಜಾರಿ, ಬಸವರಾಜ ತಂದೆ ಖಂಡಪ್ಪ ಪೂಜಾರಿ ಎಲ್ಲರು ಸ್ಥಳಕ್ಕೆ ಹೋಗಿ ನೋಡಿದೆವು ನನ್ನ ಗಂಡನಿಗೆ ತಲೆಯ ಬಲಗಡೆಯ ಮೆಲಕಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು. ಅಷ್ಟರಲ್ಲಿ 108 ವಾಹನ ಬಂದಿದ್ದು ನಾನು, ನಮ್ಮ ಮೈದುನ, ನಮ್ಮ ಚಿಕ್ಕಪ್ಪ ಮಲ್ಲಿಕಾಜರ್ುನ ಮತ್ತು ಇತರರು ಕೂಡಿ ನನ್ನ ಗಂಡನಿಗೆ ನಾವೆಲ್ಲರು ಶಹಾಪೂರ ಸರಕಾರಿ ಆಸ್ಪತ್ರೆಗೆ ಮತ್ತು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತಾ ಕಲಬುರಗಿಯ ದನ್ವಂತರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿರುತ್ತೆವೆ. ಕಾರಣ ನಮ್ಮ ಮೈದುನ ತನ್ನ ಮೋಟಾರ ಸೈಕಲ ನಂ: ಕೆಎ-33-ಯು-6871 ನೇದ್ದರ ಮೇಲೆ ನನ್ನ ಗಂಡನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಜಂಪಿಗೆ ಹಾಕಿದ್ದರಿಂದ ಹಿಂದೆ ಕುಳಿತ ನನ್ನ ಗಂಡ ಕೆಳಗೆಬಿದ್ದು ಭಾರಿಗಾಯ ಹೊಂದಿರುತ್ತಾನೆ. ಕಾರಣ ಮೋಟಾರ ಸೈಕಲಾ ಚಲಾಯಿಸಿದ ಅಪಘಾತಕ್ಕೆ ಕಾರಣನಾದ ನಮ್ಮ ಮೈದುನ ಮಾಳಪ್ಪ ತಂದೆ ಶಿವಲಿಂಗಪ್ಪ ಮಲ್ಲಾಬಾದಿ ಸಾ: ಪಡದಳ್ಳಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಹೇಳಿಕೆಯನ್ನು ಮರಳಿ ಠಾಣೆಗೆ  07.15 ಪಿಎಂಕ್ಕೆ ಬಂದು ಹಾಜರಪಡಿಸಿದ್ದು ಸದರಿ ಹೇಳಿಕೆ ಮೆಲಿಂದ ಠಾಣೆ ಗುನ್ನೆ ನಂ: 62/2019 ಕಲಂ: 279, 338 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಲ್ಳಲಾಗಿತ್ತು. ದಿನಾಂಕ: 15/08/2019 ರಂದು 07.30 ಎಎಂ ಸುಮಾರಿಗೆ ಕಲಬುರಗಿ ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಗಾಯಾಳು ಮಲ್ಲಣ್ಣ ತಂದೆ ಶಿವಲಿಂಗಪ್ಪ ಮಲ್ಲಾಬಾದಿ ವಯಾ: 40 ವರ್ವ ಈತನು ಮೃತಪಟ್ಟ ಬಗ್ಗೆ ಡೆತ್ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಪ್ರರಕಣದಲ್ಲಿ ಪಿಯರ್ಾದಿ ಪುರವಣಿ ಹೇಳಿಕೆಯಲ್ಲಿ ಗಾಯಾಳು ಉಪಚಾರ ಪಡೆಯುತ್ತಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ದಿನಾಂಕ: 14/08/2019 ರಂದು 11.30 ಪಿಎಂ ಕ್ಕೆ  ಮೃತಪಟ್ಟಿದ್ದಾನೆ ಅಂತಾ ಪುರವಣಿ ಹೇಳಿಕೆ ಮೇಲಿಂದ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

   
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- 85/2019 ಕಲಂ: 143, 147, 148, 341, 323, 324, 354, 504, 506 ಸಂ: 149 ಐಪಿಸಿ:-ದಿನಾಂಕ: 15/08/2019 ರಂದು 08.15 ಪಿಎಂ ಸುಮಾರಿಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಹೇಲೀಕೆ ನೀಡಿದ್ದು ಅದರ ಸಾರಂಶ ಏನಂದರೆ,  ದಿನಾಂಕ:15/08/2019 ರಂದು ಬೆಳಿಗ್ಗೆ 10.30 ಎಎಂ ಸುಮಾರಿಗೆ ನಮ್ಮೂರಿನ ಸರಕಾರಿ ಶಾಲೆ ಹತ್ತಿರ ಇರುವ ಬಾಬು ಹೊಟೆಲ್ ಹತ್ತಿರ ನಾನು ಮತ್ತು ನಮ್ಮ ತಮ್ಮಂದಿರಾದ ಅನೀಲ ಕುಮಾರ ತಂದೆ ಸಾಯಿಬಣ್ಣ ವಯಾ:29 ಹೊಸಮನಿ, ಶೇಖರ ತಂದೆ ಸಾಯಿಬಣ್ಣ ವ:30 ವರ್ಷ ಹೊಸಮನಿ, ನಮ್ಮ ಅಣ್ಣ ಭೀಮಣ್ಣ ತಂದೆ ಸಾಯಿಬಣ್ಣ ವ:45 ಹೊಸಮನಿ ಹಾಗೂ ನಮ್ಮ ತಾಯಿ ಮಲ್ಲಮ್ಮ ಗಂಡ ಸಾಯಿಬಣ್ಣ ವ:65 ಹೊಸಮನಿ ಎಲ್ಲರೂ, ಕೂಡಿ ಪಂಚಾಯತಿಯ ಕಡೆಗೆ ಹೊಗುತ್ತಿದ್ದಾಗ ನಮ್ಮ ಅಣ್ಣ ತಮ್ಮಕಿಯವರಾದ ಆರೊಪಿತರೆಲ್ಲರು ಕೂಡಿ ಬಂದವರೆ ನಮಗೆ ಅಡ್ಡ ನಿಂತು ಮುಂದೆ ಹೊಗದಂತೆ ತಡೆದು ನಿಲ್ಲಿಸಿ, ಸೂಳೆ ಮಕ್ಕಳೆ ನೀವು ಎಲ್ಲಿಗೆ ಹೋಗುತ್ತಿದ್ದಿರಿ, ನೀವು ಎಲ್ಲಗೆ ಹೋದರು ನಾವು ನಮ್ಮ ಹೊಲದಲ್ಲಿ ದಾರಿ ಕೊಡುವದಿಲ್ಲ ಅಂತಾ ಅವಾಚ್ಯವಾಗಿ ಬೈಯತೊಡಗಿದರು, ಆಗ ನಾನು ಯಾಕೆ ಕೊಡುವದಿಲ್ಲ, ನಾವು ಯಾಕೆ ಕೊಡಬೇಕು ಇಬ್ಬರು ನಡುವೆ ದಾರಿ ಇದೆ ಅಂತಾ ಹೇಳಿದಾಗ ಗಂಗಪ್ಪ ಈತನು ನನಗೆ ಅಲ್ಲೆ ಇದ್ದ ಒಂದು ಕಲ್ಲಿನಿಂದ ನನ್ನ ಕಾಲಿಗೆ ಹೊಡೆದು ಗುಪ್ತ ಗಾಯ ಮಾಡಿದ, ನಮ್ಮ ತಮ್ಮ ಅನಿಲಕುಮಾರ ಈತನು ಏ, ಯಾಕೆ ಹೊಡೆಯುತ್ತಿ ಅಂತಾ ಅನ್ನುತ್ತಿದ್ದಾಗ ಮಹಾದೇವಪ್ಪ ಇತನು ಒಂದು ಕಲ್ಲಿನಿಂದ ಅನಿಲಕುಮಾರ ಈತನ ಹಳೆಗೆ ಹೊಡೆದು ತರಚಿದ ಗಾಯ ಮಾಡಿದನು ಮತ್ತು ಹೊಟ್ಟೆಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿದನು. ಶೇಖರ ಈತನಿಗೆ ಅಂಬ್ಲಪ್ಪ ಇತನು ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು, ಮತ್ತು ದಬ್ಬಿಕೊಟ್ಟನು ಅದರಿಂದ ಶೇಖರ ಈತನ ಮೊಳಕೈಗೆ ತರಚಿದ ಗಾಯವಾಯಿತು. ಅಂಬ್ರೇಶ ತಂದೆ ಭೀಮರಾಯ ಈತನು ನಮ್ಮ ತಾಯಿ ಮಲ್ಲಮ್ಮ ಇವಳಿಗೆ ಕೈ ಹಿಡಿದು ಎಳೆದು ಗೊಡೆಗೆ ದಬ್ಬಿಕೊಟ್ಟನು ಅದರಿಂದ ನಮ್ಮ ತಾಯಿಯ ಬಲಗೈಗೆ ತರಚಿದ ಗಾಯವಾಗಿರುತ್ತದೆ. ನಮ್ಮ ಅಣ್ಣ ಭಿಮಣ್ಣನಿಗೆ ರವಿಚಂದ್ರ ಮತ್ತು ಸುಬಾಸಚಂದ್ರ ಇಬ್ಬರು ಕೈಯಿಂದ ಹೊಡೆದಿರುತ್ತಾರೆ. ಮಲ್ಲಿಕಾಜರ್ುನ, ರಡ್ಡಿ, ಮತ್ತು ಹೊನ್ನಪ್ಪ ಇವರು ಕೈಯಿಂದ ಹಡೆದಿರುತ್ತಾರೆ. ಉಳಿದವರೆಲ್ಲರೂ ಹೊಡೆಯಿರಿ ಈ ಸುಳೆ ಮಕ್ಕಳಿಗೆ ಅಂತಾ ಅವಾಚ್ಯವಾಗಿ ಬೈಯ್ದು ಜೀವದ ಭಯ ಹಾಕಿರುತ್ತಾರೆ, ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 85/2019 ಕಲಂ: 143, 147, 148, 341, 323, 324, 354, 504, 506 ಸಂ: 149 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ:-ದಿನಾಂಕ: 15/08/2019 ರಂದು ಹರ್ಟ ಎಂ.ಎಲ್.ಸಿ- ಮಾಹಿತಿ ಮೇರೆಗೆ ಸಾಹಾಪುರ ಆಸ್ಪತ್ರೆ ಇಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಹೇಳಿಕೆ ಪಡೆದುಕೊಂಡು, 08.15 ಪಿಎಂ ಕ್ಕೆ ಮರಳಿ ಠಾಣೆಗೆ ಬಂದಿದ್ದು, ಸದರಿ ಪಿಯರ್ಾದಿ ಹೇಳಿಕೆ ಸಾರಂಶ ಏನಂದರೆ,  ದಿನಾಂಕ:15/08/2019 ರಂದು ಬೆಳಿಗ್ಗೆ 10.30 ಎಎಂ ಸುಮಾರಿಗೆ ನಮ್ಮೂರಿನ ಸರಕಾರಿ ಶಾಲೆ ಹತ್ತಿರ ಇರುವ ಬಾಬು ಹೊಟೆಲ್ ಹತ್ತಿರ ನಾನು ಮತ್ತು ನಮ್ಮ ತಾಯಿ ಬಾಲಮ್ಮ ಗಂಡ ಮಹಾದೇವಪ್ಪ ಹೊಸ್ಮನಿ ವ:60, ನಮ್ಮ ಚಿಕ್ಕಪ್ಪನಾದ ಮಹಾದೇವಪ್ಪ ತಂದೆ ಭಿಮರಾಯ ಬಡಿಗೇರ ವ;60 ಮತ್ತು ನಮ್ಮ ಅಳಿಯನಾದ ಭೀಮಾಶಂಕರ ತಂದೆ ಬುಸ್ಸಪ್ಪ ವ:28 ಮತ್ತು ನಮ್ಮ ತಮ್ಮನಾದ ಹೊನ್ನಪ್ಪ ತಂದೆ ಮಹಾದೇವಪ್ಪ ವ:23 ವರ್ಷ ಎಲ್ಲರೂ, ಕೂಡಿ ಪಂಚಾಯತಿಯ ಕಡೆಗೆ ಹೊಗುತ್ತಿದ್ದಾಗ ಆರೋಪಿತರೆಲ್ಲರೂ ಕೂಡಿ ಬಂದವರೆ ನಮಗೆ ಸೂಳೆ ಮಕ್ಕಳೆ ನೀವು ಏನೆ ಮಾಡಿದರೂ ನಮ್ಮ ಹೊಲದಲ್ಲಿ ನಿಮಗೆ ದಾರಿ ಕೊಡುವದಿಲ್ಲ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯತೊಡಗಿದರು, ಆಗ ನಾನು ಯಾಕೆ ಕೊಡುವದಿಲ್ಲ, ನೀವು ನಮ್ಮ ಅಣ್ಣತಮ್ಮಂದಿರು ಇದ್ದಿರಿ ನೀವೆ ದಾರಿ ಕೊಡಬೇಕು ನಮ್ಮ ಹೊಲಕ್ಕೆ ಅಂತಾ ಹೇಳಿದಾಗ ಅನಿಲಕುಮಾರ ಈತನು ನನಗೆ ಕೈಯಿಂದ ನನ್ನ ಬಾಯಿಗೆ ಒಳಪೆಟ್ಟು ಆಗಿರುತ್ತದೆ. ಎಡಗಡೆ ಬೆನ್ನಿಗೆ, ತೊಡೆಗೆ ಒದ್ದಿರುತ್ತಾನೆ ಅದರಿಂದ ಒಳಪೆಟ್ಟು ಆಗಿರುತ್ತದೆ. ಹೊನ್ನಪ್ಪ ಮಹಾದವಪ್ಪ ಈತನಿಗೆ ಜೈಪ್ರಭು ಇತನು ಬಡಿಗೆಯಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಡಿರುತ್ತಾನೆ. ಎಡಗೈಗೆ ಹೊಡೆದು ಗಾಯಮಾಡಿರುತ್ತಾರೆ. ಶೇಖಪ್ಪ ಈತನು ಮಹಾದೇವಪ್ಪ ಇತನಿಗೆ ಎಡ ಮೋಳಕೈಗೆ, ಬಲ ಮೋಳಕಾಲಿಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿರುತ್ತಾನೆ. ಬಾಲಮ್ಮ ಇವಳಿಗೆ ನಾಗರಾಜ ಮತ್ತು ಶೇಖಮ್ಮ ಇವರುಗಳು ಕೈಗಿಂದ ಹೊಡೆದು ಜೈಪ್ರಭು ಈತನು ಕೈಯಿಂದ ಬಾಲಮ್ಮ ಇವಳ ಕೈ ಹಿಡಿದು ಎಳೆದಾಡಿರುತ್ತಾನೆ. ಶ್ರೀಶೈಲ್ ಈತನು ಭೀಮಾಶಂಕರ ಈತನಿಗೆ ಕೈಯಿಂದ ಹೊಡೆದು ಎಡಗಾಲಿಗೆ ತುಳಿದು ದಬ್ಬರುತ್ತಾನೆ. ಎಡಗೈಗೆ ಮತ್ತು ಎಡಗೈ ಮೇಲೆ ಗಾಯವಾಗಿದ್ದು ಇರುತ್ತದೆ. ಉಳಿದವರೆಲ್ಲರು ಹೊಡೆಯಿರಿ ಈ ಸೂಳೆ ಮಕ್ಕಳಿಗೆ ಊರಲ್ಲಿ ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದರು. ಶೇಖಮ್ಮ ತಂದೆ ಸಾಯಿಬಣ್ಣ ಹೊಸ್ಮನಿ, ಅಮೃತಮ್ಮ ತಂದೆ ಸಾಯಿಬಣ್ಣ ಹೊಸ್ಮನಿ, ಭೀಮಬಾಯಿ ಗಂಡ ಮಲ್ಕಪ್ಪ ಮದ್ರಿಕಿ ಮತ್ತು ಮಲ್ಲಮ್ಮ ಗಂಡ ಸಾಯಿಬಣ್ಣ ಹೊಸ್ಮನಿ ಇವರುಗಳು ನನಗೆ ಕೈಯಿಂದ ಹೊಡೆದು ಎಳೆದಾಡಿರುತ್ತಾರೆ, ಇನ್ನೊಮ್ಮೆ ನಮಗೆ ದಾರಿ ಇಲ್ಲ ಅಂತ ಹೇಳರಿ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಾವು ಶಹಾಪುರ ಆಸ್ಪತ್ರೆಗೆ ಉಪಚಾರಕ್ಕೆ ಹೊಗಿ ಉಪಚಾರಕ್ಕೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣ ನಮಗೆ ಹೊಲಕ್ಕೆ ದಾರಿ ಕೊಡದೆ ಸತಾಯಿಸುತ್ತಾ ಜಗಳಾ ಮಾಡಿ ಹೊಡೆಬಡೆ ಮಾಡಿ ನಮ್ಮ ತಾಯಿಯವರಿಗೆ ಎಳೆದಾಡಿ ಜೀವ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 86/2019 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 210/2019 ಕಲಂ 457, 380 ಐಪಿಸಿ:-ದಿನಾಂಕ: 15/08/2019 ರಂದು 2.00 ಪಿ.ಎಂ.ಕ್ಕೆ ಶ್ರೀ ಸೋಫಿ ತಂ/ ಅಬ್ದುಲ್ ಕರೀಮ್ ಅತ್ತರ ಸಾ|| ಹೈಯಾಳ(ಬಿ) ಹಾ.ವ|| ಇಂದ್ರಾನಗರ ಶಹಾಪುರ ತಾ|| ಶಹಾಪುರ ಜಿ|| ಯಾದಗಿರಿ ರವರು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯೊಂದಿಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಮ್ಮ ಮಹ್ಮದ ಮುಸ್ತಫಾ ತಂ/ ಅಬ್ದುಲ್ ಖರೀಮ್ ಅತ್ತರ, ಹಾಗೂ ಖಾಜಾ ಮೈನೋದ್ದಿನ್ ತಂ/ ಅಕ್ಬರ್ ಅಲಿ ಶಜರ್ಾಬಾದಿ, ಮುಬಾರಕ ಅಲಿ ತಂ/ ಅಹ್ಮದ ಹುಣಸಗಿ, ಶೋಯಬ್ ತಂ/ ಎಸ್.ಎಂ.ಚಂದಾ ಹುಸೇನಿ ಕೋಸೊವಾರಿ,  ಮಹಿಬೂಬ ಅಲಿ ತಂ/ ಅಬ್ದುಲ್ ಗಫಾರ ಖುರಾನಗುಡ್ಡಿ ಮತ್ತು ಅಯಣ್ಣ ತಂ/ ಸಿದ್ದಲಿಂಗಪ್ಪ ಭಾಗಲಿ ಎಲ್ಲರೂ ಕೂಡಿ ಬೆಳಿಗ್ಗೆ 9.30 ಎ.ಎಂ. ಇಂದ ರಾತ್ರಿ 10.00 ಪಿ.ಎಂ. ವರೆಗೆ ಕೆಲಸ ಮಾಡಿಕೊಂಡಿರುತ್ತೇವೆ. ನಿನ್ನೆ ದಿನಾಂಕ: 14/08/2019 ರಂದು ರಾತ್ರಿ 8.30 ಪಿ.ಎಂ.ಕ್ಕೆ ನನ್ನ ತಮ್ಮ ಮಹ್ಮದ ಮುಸ್ತಫಾ ಅತ್ತರ್, ಮುಬಾರಕ ಅಲಿ ಹುಣಸಗಿ, ಮಹಿಬೂಬ ಅಲಿ ಖುರಾನಗುಡ್ಡಿ ಮತ್ತು ಅಯಣ್ಣ ಬಾಗಲಿ ಮನೆಗೆ ಹೋಗಿದ್ದು, ನಾನು ಮತ್ತು ಖಾಜಾ ಮೈನೋದ್ದಿನ್ ಶಜರ್ಾಬಾದಿ ಮತ್ತು ಶೋಯಬ್ ಕೋಸವಾರಿ 3 ಜನರು 10.00 ಪಿ.ಎಂಕ್ಕೆ ನಮ್ಮ ಅಂಗಡಿಯ ಶೆಟರ್ ಕೀಲಿ ಹಾಕಿಕೊಂಡು ಹೋಗಿದ್ದೆವು ಇಂದು ದಿನಾಂಕ: 15/08/2019 ರಂದು ಬೆಳಿಗ್ಗೆ 9.20 ಎ.ಎಂ.ಕ್ಕೆ ಖಾಜಾ ಮೊಹಿನುದ್ದಿನ್ ಶಜರ್ಾಬಾದಿ ಇವನು ಫೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಮತ್ತು ಮುಬಾರಕ್ ಅಲಿ ಹಾಗೂ ಮಹಿಬೂಬ ಅಲಿ 3 ಜನರು ಇಂದು ಬೆಳಿಗ್ಗೆ 9.15 ಎ.ಎಂ.ಕ್ಕೆ ನಮ್ಮ ಅಂಗಡಿಯ ಬಾಗಿಲು ತೆರೆದು ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿ ಎಲ್ಲಾ ಮೋಬೈಲ್ ಡಬ್ಬಿಗಳು ಹಾಗೂ ಇತರೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಮೊಬೈಲ್ ಡಬ್ಬಿಯಲ್ಲಿ ಮೋಬೈಲ್ ಇರುವುದಿಲ್ಲ, ಯಾರೋ ಕಳ್ಳರು ನಮ್ಮ ಅಂಗಡಿಯ ಹಿಂದಿನ ಸೆಟರ್ನ ಬಲ ಮೂಲೆಯಲ್ಲಿ ಒಂದು ಕಬ್ಬಿಣದ ರಾಡಿನಿಂದ ಸೆಟರ್ ಮುರಿದು ಶೇಟರ್ ಮೇಲೆ ಎತ್ತಿ ಅಂಗಡಿಯ ಒಳಗೆ ಬಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಹೇಳಿದಾಗ ನಾನು 9.30 ಪಿ.ಎಂ.ಕ್ಕೆ ನನ್ನ ಅಂಗಡಿಗೆ ಬಂದು ನೋಡಲಾಗಿ ಖಾಲಿ ಮೊಬೈಲ್ ಡಬ್ಬಿಗಳು ಹಾಗೂ ಇತರೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ನಿನ್ನೆ ದಿನಾಂಕ: 14/08/2019 ರಂದು ರಾತ್ರಿ 10.00 ಪಿ.ಎಂ ಇಂದ ಇಂದು ದಿನಾಂಕ: 15/08/2019 ರಂದು ಬೆಳಿಗ್ಗೆ 9.15 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿಯ ಹಿಂಭಾಗದ ಬಲ ಮೂಲೆಯಲ್ಲಿ ಒಂದು ಕಬ್ಬಿಣದ ರಾಡಿನಿಂದ ಸೆಟರ್ ಮುರಿದು ಸೆಟರ್ ಎತ್ತಿ ಅಂಗಡಿಯೊಳಗೆ ಪ್ರವೇಶ ಮಾಡಿ ಒಟ್ಟು 10,83500=00 ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಮತ್ತು ಇತರೆ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಆರೋಪಿ ಮತ್ತು ಮುದ್ದೆಮಾಲನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.ನಂ-210/2019 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!