ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-08-2019
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 83/2019 ಕಲಂ.143,147,148,323,324,504,506 ಸಂಗಡ 149 ಐಪಿಸಿ ;- ದಿನಾಂಕ: 12-08-2019 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿ ದಾರನಾದ ಮಶಪ್ಪ ತಂದೆ ಹಣಮಂತ ಶೆಲ್ಲೇರ ವ|| 45 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ನಾಗಲಾಪೂರ ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ: 12-08-2019 ರಂದು ಸಾಯಂಕಾಲ 03-00 ಗಂಟೆಗೆ ನಮ್ಮ ನಾಗಲಾಪೂರ ಸಿಮಾಂತರದಲ್ಲಿ ನಮ್ಮ ಹೊಲ ಸವರ್ೆ ನಂ.131 ರಲ್ಲಿನ ಕಲ್ಲು ಕಿತ್ತಿ ಹಾಕಿದ್ದರಿಂದಾರೋಪಿತರಿಗೆ ಯಾಕೆ ಕಲ್ಲು ಕಿತ್ತಿ ಹಾಕಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರು ಸೇರಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕೊಡಲಿಯಿಂದ ಹೊಡೆದು ಜೀವದ ಬೇದರಿಕೆ ಹಾಕಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡ ಗಟ್ಟ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ: 279,337,338 ಐ.ಪಿ.ಸಿ;- ದಿನಾಂಕ 12.08.2019 ರಂದು 07.00 ಪಿ.ಎಮ್ ಕ್ಕೆ ಶ್ರೀ ವಿಶ್ವನಾಥ ತಂದೆ ಬಸವರಾಜ ಹೊನ್ನಳ್ಳಿ ವಯಾ|| 23 ವರ್ಷ ಸಾ|| ಕೆಂಭಾವಿ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 12.08.2019 ರಂದು 04.30 ಪಿ.ಎಮ್ ಸುಮಾರಿಗೆ ಕುರುಕ್ಷೇತ್ರ ಸಿನಿಮಾ ನೊಡಲು ಕೆಂಭಾವಿಯಿಂದ ತಾಳಿಕೋಟಿಗೆ ಹೋಗುವ ಕುರಿತು ನಾನು ಮತ್ತು ನನ್ನ ಗೆಳೆಯರಾದ 1) ಅನ್ವರಪಾಶ ತಂದೆ ಜಿಲಾನಿ ಸುಲೆದಾರ 2) ಮೈಹಿಬೂಬ ತಂದೆ ನಬಿಸಾಬ ಬಗವಾನ 3) ಮೊಹ್ಮದ ರಫೀಕ ತಂದೆ ಹುಸೇನಬಾಷಾ ಲಾಲಬಂದಿ ಎಲ್ಲರೂ ಕೂಡಿ ಕೆಂಭಾವಿ ಕೆಂಭಾವಿ ಪಟ್ಟಣದ ನಮಗೆ ಪರಿಚಯಸ್ಥರಾದ ಮಹೇಶ ತಂದೆ ಹಣಮಂತ ಯಳವಾರ ಸಾ: ಯಾಳಗಿ ಇವರ ಸ್ವಿಪ್ಟ ಕಾರ ನಂ ಕೆ.ಎ. 33/ಎ-6704 ನೇದ್ದರಲ್ಲಿ ಎಲ್ಲರೂ ಕೂಡಿ ಸಾಯಾಂಕಾಲ 05.00 ಘಂಟೆ ಸುಮಾರಿಗೆ ತಳ್ಳಳ್ಳಿ (ಬಿ) ಗ್ರಾಮದ ದಂಡಪ್ಪಗೌಡ ವಣಿಕ್ಯಾಳ ರವರ ಹೋಲದ ಹತ್ತಿರ ತಿರುವಿನಲ್ಲಿ ಹೋಗುತ್ತಿರುವಾಗ ಸದರಿ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿತ್ತಿರುವಾಗ ನಾವೆಲ್ಲರೂ ಕಾರು ಸಾವಕಾಶವಾಗಿ ಚಲಾಯಿಸು ಅಂತಾ ಹೇಳಿದರೂ ಕೂಡಾ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕಾರನ್ನು ಒಮ್ಮೇಲೆ ಎಡಕ್ಕೆ ಕಟ್ ಮಾಡಿದಾಗ ಕಾರ ರಸ್ತೆಯ ಮೇಲೆ ಮೂರು-ನಾಲ್ಕು ಬಾರಿ ಪಲ್ಟಿಯಾಗಿ ರಸ್ತೆಯ ಪಕ್ಕದ ಹೋಲದಲ್ಲಿ ಹೋಗಿ ಬಿದ್ದಿರುತ್ತದೆ. ನಂತರ ನನಗೆ ಬಲಕಾಲು ಮೋಳಕಾಲು ಕೆಳಗೆ ರಕ್ತಗಾಯ ಆಗಿದ್ದು ಇರುತ್ತದೆ. ಗೆಳೆಯರಾದ ಅನ್ವರಪಾಶ ತಂದೆ ಜಿಲಾನಿ ಈತನಿಗೆ ತಲೆಯ ಮುಂಭಾಗಕ್ಕೆ ಭಾರೀ ರಕ್ತಗಾಯ, ಹಾಗೂ ಮೈಹಿಬೂಬ ತಂದೆ ನಬಿಸಾಬ ಈತನಿಗೆ ಎಡಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಆಗಿದ್ದು ಇರುತ್ತದೆ. ಅಲ್ಲದೇ ಮೊಹ್ಮದ ರಫೀಕ ತಂದೆ ಹುಸೇನಬಾಷಾ ಈತನಿಗೆ ಹಣೆಗೆ, ಮೂಗಿಗೆ, ತುಟಿಗೆ, ಗದ್ದಕ್ಕೆ ಭಾರೀ ರಕ್ತಗಾಯ ಆಗಿರುತ್ತದೆ. ಕಾರ ಚಲಾಯಿಸುತ್ತಿದ್ದ ಕಾರ ಚಾಲಕನಾದ ಮಹೇಶ ಈತನಿಗೆ ಕೂಡಾ ಎರಡು ಕೈಯಗಳಿಗೆ ರಕ್ತಗಾಯ ಮತ್ತು ರಕ್ತಗಾಯ ಆಗಿರುತ್ತವೆ. ನಾವೆಲ್ಲರೂ ಅಲ್ಲೆ ಬಿದ್ದು ಚಿರಾಡುವಾಗ ಹೋಲದಲ್ಲಿ ಕೆಲಸ ಮಾಡುತ್ತಿದ್ದ ಜನರು 108 ವಾಹನಕ್ಕೆ ಕರೆ ಮಾಡಿ ಉಪಚಾರ ಕುರಿತು ಕೆಂಭಾವಿ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ಸೇರಿಕೆ ಆಗಿರುತ್ತೇವೆ. ನಂತರ ಎಲ್ಲರಿಗೂ ವೈದ್ಯರ ಸಲಹೆದಂತೆ ಹೆಚ್ಚಿನ ಉಪಚಾರ ವಾಸುದೇವ ಆಸ್ಪತ್ರೆ ಬಿಜಾಪುರಗೆ ಕಳುಹಿಸಿಕೊಟ್ಟಿರುತ್ತೇನೆ. ನನಗೆ ಅಷ್ಟೇನು ರಕ್ತಗಾಯ ಆಗದೇ ಇರುವುದರಿಂದ ಕೆಂಭಾವಿ ಆಸ್ಪತ್ರೆಯಲ್ಲಿಯೇ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಈ ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಸದರಿ ಕಾರ ನಂ 33/ಎ-6704 ನೇದ್ದರ ಚಾಲಕನಾದ ಮಹೇಶ ತಂದೆ ಹಣಮಂತ ಯಳವರ ಸಾ: ಯಾಳಗಿ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೇ ಎಡಕ್ಕೆ ಕಟ್ ಮಾಡಿ ಸದರಿ ಕಾರನ್ನು ಪಲ್ಟಿಪಡಿಸಿ ಭಾರೀ ರಕ್ತಾಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಸದರಿ ಕಾರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನ ನಂ ಕೆಂಭಾವಿ ಠಾಣೆ ಗುನ್ನೆ ನಂ 88/2019 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 208/2019.ಕಲಂ 78(3).ಕೆ.ಪಿ.ಯಾಕ್ಟ;- ದಿನಾಂಕ 12-08-2019 ರಂದು 3:40 ಪಿ.ಎಮ್.ಕ್ಕೆ ಆರೋಪಿತನು ಶಹಾಪೂರದ ಕನ್ಯಾಕೋಳೂರ ಬೇಸ ಹತ್ತಿರ ಸಾರ್ವಜನಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಆರೋಪಿತನಿಂದ 1) ನಗದು 5490=00 ರೂಪಾಯಿ 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಜರುಗಿಸಲು ಸೂಚಿಸಿದ್ದು ಮಾನ್ಯನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಶಹಾಪೂರ ಠಾಣೆ ಗುನ್ನೆ ನಂ 208/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
Hello There!If you like this article Share with your friend using