ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-08-2019
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 206/2019.ಕಲಂ 78(3).ಕೆ.ಪಿ.ಯಾಕ್ಟ:- ದಿನಾಂಕ 09/08/2019 ರಂದು 2:30 ಪಿಎಂ ಕ್ಕೆ ಆರೋಪಿತನು ಶಾರದಹಳ್ಳಿ ಗಾಮದ ಆಟೋ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಆತನ ಹತ್ತಿರ ನಗದು ಹಣ 840/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ ಅವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 09/08/2019 ರಂದು 4:10 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 5.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ206/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 96/2019 ಕಲಂ 279, 338 ಐ.ಪಿ.ಸಿ:- ದಿನಾಂಕ:09/08/2019 ರಂದು 6.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯ ಅಣ್ಣನಾದ ಮಹ್ಮದ ಸಲೀಮ್ ಈತನು ತನ್ನ ಕಾರ್ ನಂ:ಕೆಎ-01, ಡಿ-7412 ನೇದ್ದರಲ್ಲಿ ತನ್ನ ಹೆಂಡತಿ ಫಿದರ್ೌಸ್ ಸುಲ್ತಾನಾ ಹಾಗೂ ಕೂಲಿ ಆಳು ಖಾಸಿಮ ಇವರನ್ನು ಕೂಡಿಸಿಕೊಂಡು ಕಾರನ್ನು ನಡೆಸಿಕೊಂಡು ಕೋಡಮನಳ್ಳಿ ರಸ್ತೆಗೆ ಇರುವ ತನ್ನ ಹೊಲದಿಂದ ಶಹಾಪುರ ಕಡೆಗೆ ಹೋಗುವ ಕುರಿತು ಕೋಡಮನಳ್ಳಿ ಕ್ರಾಸ್ ಹತ್ತಿರ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆ ದಾಟುತ್ತಿರುವಾಗ ಶಹಾಪುರ ಕಡೆಯಿಂದ ಆರೋಪಿತನು ತನ್ನ ಕಾರ್ ನಂ:ಕೆಎ-32, ಪಿ-2080 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿರುವ ಮಹ್ಮದ ಸಲೀಮ್ ಈತನ ಕಾರ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮಹ್ಮದ ಸಲೀಮ ಈತನ ಬಲ ಪಕ್ಕೆಗೆ ಭಾರಿ ಒಳಪೆಟ್ಟಾಗಿದ್ದು, ಫಿದರ್ೌಸ ಸುಲ್ತಾನಾ ಇವಳಿಗೆ ಬಲಸೊಂಟಕ್ಕೆ ಭಾರಿ ಒಳಪೆಟ್ಟಾಗಿದ್ದು, ಖಾಸಿಮ ಈತನ ತಲೆಗೆ ಭಾರಿ ಗುಪ್ತಗಾಯವಾಗಿ ಬಲ ಕಪಾಳಿಗೆ ರಕ್ತಗಾಯವಾಗಿರುತ್ತದೆ. ಕಾರಣ ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 121/19 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ: 11 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 2015 ಕಲಂ 125 ಇ 1, 2, 3, 4 ಟ್ರಾನ್ಸಪೋರ್ಟ ಆಫ್ ಎನಿಮಲ್ಸ್ ರೂಲ್ಸ್ 1978 ಕಲಂ: 46 ರಿಂದ 57, 97, 98 ಐಎಮ್ವಿ ಆ್ಯಕ್ಟ್ 192 (ಎ) ಸಂ 177 ಮತ್ತು 429 ಐಪಿಸಿ:-ದಿನಾಂಕ 09-08-2019 ರಂದು 8-30 ಪಿ.ಎಮ್ ಕ್ಕೆ ಶ್ರೀ ವೀರಣ್ಣಾ ಎಸ್.ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆ ರವರು ಠಾಣೆಗೆ ಬಂದು ಒಂದು ವರದಿ, ಒಬ್ಬ ಆರೋಪಿ ಒಂದು ವಾಹನ ಸಮೇತ 5 ಆಕಳುಗಳನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ: 09-08-2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಶ್ರೀಮರಾಮ ಸೇನೆೆಯ ಸಂಘಟನೆಯವರು ನನಗೆ ಫೋನನ ಮಾಡಿ ತಿಳಿಸಿದ್ದೆನೆಂದರೆ ರಾಮಸಮುದ್ರ ಕಡೆಯಿಂದ ಯಾದಗಿರಿ ಕಡೆಗೆ ಒಂದು ವಾಹನದಲ್ಲಿ ಅನಧಿಕೃತವಾಗಿ ದನಗಳನ್ನು ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ ಶ್ರೀ ಮಹೇಶ ಪಿಸಿ-358, ಶ್ರೀ ಬಾಪುಗೌಡ ಹೆಚ್.ಸಿ-121 ರವರನ್ನು ಕರೆದುಕೊಂಡು ನಮ್ಮ ಠಾಣೆಯ ಸಕರ್ಾರಿ ಜೀಪಿನಲ್ಲಿ ಠಾಣೆಯಿಂದ 6-45 ಪಿ.ಎಮ್ ಕ್ಕೆ ಹೊರಟು 7-15 ಪಿ.ಎಮ್ ಕ್ಕೆ ರಾಮಸಮದ್ರ ಶಾಲೆ ಹತ್ತಿರ ಬಂದಾಗ ಶಾಲೆ ಹತ್ತಿರ ಒಂದು ಅಶೋಕ ಲೈಲ್ಯಾಂಡ ಕಂಪನೀಯ ಗೂಡ್ಸ ವಾಹನ ನಂ. ಕೆಎ- 05, ಎಡಿ-7577 ನಿಂತಿದ್ದು ಅದರಲ್ಲಿ ನೋಡಲಾಗಿ ಸುಮಾರು 05 ಆಕಳುಗಳಿದ್ದು, ಆ ಆಕಳುಗಳಿಗೆ ಹಗ್ಗದಿಂದ ಬಿಗಿಯಾಗಿ ಹಿಂಸೆಯಾಗುವ ರೂಪದಲ್ಲಿ ಹಗ್ಗದಿಂದ ಕಟ್ಟಿದ್ದರು. ಐದು ಆಕಳುಗಳ ಅಂದಾಜು ಕಿಮ್ಮತ್ತು ತಲಾ 10 ಸಾವಿರ ರೂ, ಯಂತೆ ಒಟ್ಟು 50 ಸಾವಿರ ರೂಪಾಯಿ ಆಗಬಹುದು. ಸ್ಥಳದಲ್ಲಿದ್ದ ವಾಹನದ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಸದಾಶಿವ ತಂದೆ ಅಬ್ದುಲ್ ಗುತ್ತೆದಾರ ಸಾ: ಇಬ್ರಾಹಿಂಪೂರ ತಾ:ಶಹಾಪೂರ ಅಂತಾ ಹೇಳಿ ತಾನು ವಾಹನದ ಮಾಲೀಕನು ಕೂಡ ನಾನೇ ಇರುತ್ತೇನೆ ಅಂತಾ ತಿಳಿಸಿದನು. ತಾನು ಈ ಆಕಳುಗಳನ್ನು ಮಸ್ಕನಳ್ಳಿ ಗ್ರಾಮದಲ್ಲಿ ಖರೀಧಿ ಮಾಡಿದ್ದು ಈ ಆಕಳುಗಳನ್ನು ವ್ಯಾಪಾರಕ್ಕಾಗಿ ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುವುದಾಗಿ ಅಂತಾ ತಿಳಿಸಿದನು. ಚಾಲಕನಿಗೆ ಈ ಆಕಳುಗಳು ಖರೀಧಿ ಮಾಡಿದ ಬಗ್ಗೆ ಅಥವಾ ವಾಹನದಲ್ಲಿ ಸಾಗಾಣೀಕೆ ಮಾಡುವ ಸಲುವಾಗಿ ದಾಖಲಾತಿಗಳು ಇದ್ದರೇ ತೋರಿಸು ಅಂತಾ ಹೇಳಿದಾಗ ಅವನು ದನಗಳಿಗೆ ಸಂಬಂಧಪಟ್ಟ ಯಾವುದೇ ದಾಖಲಾತಿಗಳು ಅದರಂತೆ ದನಗಳನ್ನು ಸಾಗಿಸಲು ವಾಹನದ ಪರವಾನಿಗೆ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದನು. ಸ್ಥಳದಲ್ಲಿಯೇ ಶ್ರಿರಾಮ ಸೇನೆ ಸಂಘಟನೆಯವರಾದ ಸಾಬಯ್ಯಾ ಕಲಾಲ, ತೋಟೇಂದ್ರ ತಳವಾರ, ಕಾಶಪ್ಪಾ ಉಪ್ಪಾರ, ಬಾಲಪ್ಪಾ ಉಪ್ಪಾರ, ಮುಖೇಶ ಬಾಗಲಿ ಮತ್ತು ಮಲ್ಲಿಕಾಜರ್ುನ ಪೋಲಿಸ್ ಪಾಟೀಲ್ ಸಾ: ರಾಮಸಮುದ್ರ ಇವರೆಲ್ಲರೂ ಇದ್ದು ಇವರಿಗೆ ವಿಚಾರಿಸಲಾಗಿ ಈ ವಾಹನದಲ್ಲಿ ಚಾಲಕನು ದನಗಳನ್ನು ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಮಾಡುತ್ತಿದ್ದ ಬಗ್ಗೆ ಹೇಳಿದರು. ಸದರಿ ವಾಹನದೊಂದಿಗೆ ದನಗಳು ಮತ್ತು ಆರೋಪಿತನೊಂದಿಗೆ ನನ್ನ ವರದಯೊಂದಿಗೆ ತಮ್ಮ ಮುಂದೆ ಹಾಜರುಪಡಿಸಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವರದಿಯ ಸಾರಾಂಸದ ಮೇಲಿಂದ ಠಾಣೆ 121/2019 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ: 11 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 2015 ಕಲಂ 125 ಇ 1, 2, 3, 4 ಟ್ರಾನ್ಸಪೋರ್ಟ ಆಫ್ ಎನಿಮಲ್ಸ್ ರೂಲ್ಸ್ 1978 ಕಲಂ: 46 ರಿಂದ 57, 96 ರಿಂದ 98, ಐಎಮ್ವಿ ಆ್ಯಕ್ಟ್ 192 (ಎ) ಸಂ 177 ಮತ್ತು 429 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 122/2019 ಕಲಂ: ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯ್ದೆ-1964, ಕಲಂ 11, 8, 9, 4, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ 11 ಮತ್ತು ಟ್ರಾನ್ಸಪೊರ್ಟ ಆಫ್ ಎನಿಮಲ್ ಆ್ಯಕ್ಟ 1978 ಕಲಂ 46 ರಿಂದ 57, 96 ರಿಂದ 98 ಐ.ಎಂ.ವಿ ಕಾಯ್ದೆ 192(ಎ) ಸಂ 177 ಮತ್ತು 429 ಐಪಿಸಿ:-ದಿನಾಂಕ 09/08/2019 ರಂದು ರಾತ್ರಿ 9-30 ಗಂಟೆಗೆ ಶ್ರೀ ವಿಠಲ ಎ.ಎಸ್.ಐ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ, ಇಬ್ಬರೂ ಆರೋಪಿತರು ಮತ್ತು 5 ದನಗಳು ತುಂಬಿದ ವಾಹನ ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ ನಾನು ವಿಠಲ ಎ.ಎಸ್.ಐ. ಯಾದಗಿರಿ ಗ್ರಾಮೀಣ ಪೊಲೀಸ್ ಈ ಮೂಲಕ ವರದಿ ನೀಡುವುದೆನೆಂದರೆ ಇಂದು ದಿನಾಂಕ 09/08/2019 ರಂದು ಸಾಯಂಕಾಲ 7-00 ಗಂಟೆಗೆ ನಾನು ಠಾಣೆಯಲ್ಲಿರುವಾಗ ಶ್ರೀರಾಮ ಸೈನ್ಯದ ಸದಸ್ಯರಾದ 1)ನರೇಶ ತಂದೆ ಶರಣಪ್ಪ ನಿರಕಟ್ಟ ಸಾಃ ಯಾದಗಿರಿ ಇವರು ನನಗೆ ಪೋನ ಮಾಡಿ ಯಡ್ಡಳ್ಳಿ ಗ್ರಾಮದಿಂದ ಸೆಡಂ ಕಡೆಗೆ ಯಾರೋ ಇಬ್ಬರೂ ಕೂಡಿಕೊಂಡು ಒಂದು ವಾಹನದಲ್ಲಿ ಅನಧಿಕೃತವಾಗಿ 5 ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ, ನಾನು ಮತ್ತು ನಮ್ಮ ಸಂಘಟನೆಯ ಸದಸ್ಯರಾದ ಹರೀಶ ತಂದೆ ಬಸವರಾಜ ಹೂಗಾರ, ಅಂಬು ತಂದೆ ದೇವಿಂದ್ರಪ್ಪ ಶಂಕ್ರೆಪ್ಪನೊರ ಮತ್ತು ಮೌನೇಶ ತಂದೆ ಮರೇಪ್ಪ ಹೊಸಳ್ಳಿ ಎಲ್ಲರೂ ಕೂಡಿಕೊಂಡು ಹತ್ತಿಕುಣಿ ಗ್ರಾಮದ ತೋಟಗಾರಿಕಾ ಇಲಾಖೆ ಕ್ಷೇತ್ರದ ಹತ್ತಿರ ಇದ್ದಿರುತ್ತೆವೆ ನೀವು ಬೇಗನೇ ಇಲ್ಲಿಗೆ ಬನ್ನಿರಿ ಅಂತಾ ತಿಳಿಸಿದ್ದರಿಂದ ಆಗ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಅಬ್ದುಭಾಷಾ ಸಿಪಿಸಿ-237, ಶ್ರೀ ಪ್ರಭುಗೌಡ ಸಿಪಿಸಿ-361 ಮತ್ತು ಶ್ರೀ ಮಲ್ಲಪ್ಪ ಸಿಪಿಸಿ-136 ಇವರನ್ನು ಕರೆದುಕೊಂಡು ಸಾಯಂಕಾಲ 7-15 ಗಂಟೆಗೆ ಹತ್ತಿಕುಣಿ ಗ್ರಾಮದ ಕಡೆಗೆ ಎರಡು ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡು ಹೊರಟು ಹತ್ತಿಕುಣಿ ಗ್ರಾಮದ ತೋಟಗಾರಿಕೆ ಇಲಾಖೆ ಕ್ಷೇತ್ರದ ಕಡೆಗೆ ಹೋಗುವಾಗ ಅಲ್ಲಿ ಒಂದು ವಾಹನದಲ್ಲಿ ದನಗಳು ತುಂಬಿಕೊಂಡು ಹೋಗುತ್ತಿದ್ದುದನ್ನು ನೋಡಿ ಸದರಿ ವಾಹವನ್ನು ಬೆನ್ನತ್ತಿ ರಾತ್ರಿ 8-15 ಗಂಟೆಗೆ ಹಿಡಿದು ತಪಾಸಣೆ ಮಾಡಲಾಗಿ ಆ ವಾಹನದಲ್ಲಿ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತಂಬಿಕೊಂಡು ಹೋಗುತ್ತಿದ್ದರು, ಆಗ ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ಮತ್ತು ಇನ್ನೊಬ್ಬನನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಚಾಲಕನು ತನ್ನ ಹೆಸರು ಮಹ್ಮದಗೌಸ್ ತಂದೆ ಅಹ್ಮದಸಾಬ ಚೌದ್ರಿ ಸಾಃ ಶೊರಾಪೂರ ಅಂತಾ ತಿಳಿಸಿದ್ದು, ಇನ್ನೊಬ್ಬನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಹಸನ್ ತಂದೆ ಬಸಿರಸಾಬ ದಖನಿ ಸಾಃ ಶೋರಾಪೂರ ಅಂತಾ ತಿಳಿಸಿರುತ್ತಾನೆ, ವಾಹನವನ್ನು ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆಎ-56-1103 ಅಂತಾ ಇದ್ದು ಅದರಲ್ಲಿ 1)ಒಂದು ಕಂದು-ಬಿಳಿ ಹಂಡಬಂಡ ಆಕಳು ಅ.ಕಿ 8,000/ರೂ 2)ಒಂದು ಕೆಂಪು ಕಲರ ಹೊರಿ ಅ.ಕಿ 5,000/ರೂ 3)ಒಂದು ಕೋಣ ಅ.ಕಿ 4,000/ರೂ 4)ಒಂದು ಬಿಳಿ ಕಲರ ಆಕಳು ಅ.ಕಿ 6,000/ರೂ ಮತ್ತು 5)ಒಂದು ಕಂದು ಬಣ್ಣದ ಹೊರಿ ಅ.ಕಿ 8,000/ರೂ ಇವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿದ್ದರು, ಚಾಲಕನಾದ ಮಹ್ಮದಗೌಸ್ ತಂದೆ ಅಹ್ಮದಸಾಬ ಚೌದ್ರಿ ಸಾಃ ಶೋರಾಪೂರ ಇತನಿಗೆ ದನಗಳು ಎಲ್ಲಿ ಖರೀದಿ ಮಾಡಿರುತ್ತಿರಿ ಮತ್ತು ಎಲ್ಲಿಗೆ ಸಾಗಾಣೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ ಅವನು ಯಡ್ಡಳ್ಳಿ ಗ್ರಾಮದಲ್ಲಿ ಖರೀದಿ ಮಾಡಿಕೊಂಡು ಕಲಬುಗರ್ಿಗೆ ಸಾಗಾಣೆ ಮಾಡುತ್ತಿದ್ದೆವೆ ಅಂತಾ ತಿಳಿಸಿರುತ್ತಾನೆ, ಆಗ ನಾನು ದನಗಳು ಖರೀದಿ ಮಾಡಿದ ಬಗ್ಗೆ ಮತ್ತು ಸಾಗಾಣೆ ಮಾಡುವ ಬಗ್ಗೆ ದಾಖಲಾತಿ ತೊರಿಸು ಅಂತಾ ಕೇಳಿದಾಗ ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವದಿಲ್ಲ ಅಂತಾ ತಿಳಿಸಿರುತ್ತಾನೆ, ಆಗ ಚಾಲಕನು ಮತ್ತು ಇನ್ನೊಬ್ಬನು ಕೂಡಿಕೊಂಡು ಎರಡು ಆಕಳುಗಳು, ಎರಡು ಹೊರಿಗಳು ಮತ್ತು ಒಂದು ಕೊಣವನ್ನು ಅನಧಿಕೃತವಾಗಿ ತಮ್ಮ ವಾಹನದಲ್ಲಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಕಲಬುಗರ್ಿಗೆ ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತಪಡಿಸಿಕೊಂಡು ಚಾಲಕನನ್ನು, ಇನ್ನೊಬ್ಬನನ್ನು ಮತ್ತು ಅನಧಿಕೃತವಾಗಿ ದನಗಳು ತುಂಬಿದ ವಾಹನವನ್ನು ಸಿಬ್ಬಂಧಿಯವರ ಸಹಾಯದಿಂದ ನಮ್ಮ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ರಾತ್ರಿ 9-30 ಪಿ.ಎಂ. ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 122/2019 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯ್ದೆ-1964, ಕಲಂ 11, 8, 9, 4, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ 11 ಮತ್ತು ಟ್ರಾನ್ಸಪೊರ್ಟ ಆಫ್ ಎನಿಮಲ್ ಆ್ಯಕ್ಟ 1978 ಕಲಂ 46 ರಿಂದ 57, 96 ರಿಂದ 98 ಐ.ಎಂ.ವಿ ಕಾಯ್ದೆ 192(ಎ) ಸಂ 177 ಮತ್ತು 429 ಐಪಿಸಿ ನೆದ್ದರಲ್ಲಿ ಗುನ್ನೆ ದಾಖಲು ಮಾಡಿಕೊಮಡು ತನಿಖೆ ಕೈಕೊಂಡೆನು.
Hello There!If you like this article Share with your friend using