ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-08-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:-119/19 ಕಲಂ ಕಲಂ 143,147,148,323,324,326,341,504,506 ಸಂ: 149 ಐಪಿಸಿ:-ದಿನಾಂಕ 06-08-2019 ರಂದು 9-20 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿದಾಗ ಅಲ್ಲಲಿ ಉಪಚಾರ ಪಡೆಯುತ್ತಿದ್ದ ಶ್ರೀ ಸಾಬಣ್ಣಾ ತಂದೆ ಶಿವಪ್ಪಾ ಬಡಿಗೇರ ವಯಾ: 40 ಜಾ: ಕಬ್ಬಲಲಿಗೇರ ಉ: ಒಕ್ಕಲುತನ ಸಾ: ಅಬ್ಬೇತುಮಕೂರ ತಾ:ಜಿ: ಯಾದಗಿರಿ ನಮ್ಮ ಎರಡನೇ ಅಣ್ಣತಮಕಿಯವರಾದ ಸಾಬಣ್ಣಾ ತಂದೆ ಕಾಶಪ್ಪಾ ಬಡಿಗೇರ ನಮ್ಮಿಬ್ಬರ ಹೋಲಗಳು ಆಜುಬಾಜು ಇದ್ದು ನಾವು ನಮ್ಮ ಹೋಲಕ್ಕೆ ಹೋಗಬೇಕಾದರೇ ಅವರ ಹೋಲದ ಪಕ್ಕದ ದಾರಿಯಿಂದಲೇ ನಾವು ಈ ಮೊದಲಿಂದಲೇ ಹೋಗುವುದು ಬರುವುದು ಮಾಡುತ್ತೆವೆ. ಮೊನ್ನೆ ನನ್ನ ಮಗನನಾದ ನಾಗರಾಜ ಇತನು ಅದೇ ದಾರಿಯಿಂದಲೇ ನಮ್ಮ ಎತ್ತುಗಳನ್ನು ಹೋಡೆದುಕೊಂಡು ಹೋಲಕ್ಕೆ ಹೋಗುವಾಗ ಅವನಿಗೆ ಸಾಬಣ್ಣಾ ಇತನು ಅವಾಚ್ಯವಾಗಿ ಬೈದು ಇನ್ನೊಮ್ಮೆ ಇಲ್ಲಿಂದ ಹೋದರೆ ನಮಗೆ ಬಿಡುವುದಿಲ್ಲಾ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿದ್ದು ಈ ವಿಷಯ ನನ್ನ ಮಗ ನಮಗೆ ತಿಳಿಸಿದಾಗ ನಾನು ಸಾಬಣ್ಣನಿಗೆ ಅಂದೇ ಈ ಬಗ್ಗೆ ವಿಚಾರಿಸಿದಾಗ ಆತನೂ ನನಗೂ ಹಾಗೂ ನಮ್ಮಣ್ಣನಾದ ಮಲ್ಲಪ್ಪಾ ಇಬ್ಬರಿಗೂ ಬೈದು ನಮ್ಮ ಹೋಲದ ಸನಿಹ ಬಂದರೇ ನಮಗೂ ಕೂಡಾ ಖಲಾಸ ಮಾಡುತ್ತೆವೆ ಅಂತಾ ನಮಗೂ ಅಂಜಿಸಿದ್ದು ಇರುತ್ತದೆ.
ಹೀಗಿದ್ದು ದಿನಾಂಕ: 06-08-2019 ರಂದು 8-30 ಎ.ಎಮ್ ಕ್ಕೆ ನಾನು ಹೋಲದಿಂದ ಮನೆಗೆ ಬರುತ್ತಿದ್ದಾಗ ಅದೇ ವೇಳಗೆ ನಮ್ಮಣ್ಣ ಮಲ್ಲಪ್ಪಾ ಇತನೂ ಕೂಡಾ ಬೇಳಗೇರಾ ಗ್ರಾಮದಿಂದ ನಮ್ಮೂರಿಗೆ ಬಂದಿದ್ದು ಇಬ್ಬರೂ ನಮ್ಮ ಗ್ರಾಮದ ಬನ್ನಿ ಗಿಡದ ಕಟ್ಟೆಯ ಹತ್ತಿರ ಬೇಟಿಯಾಗಿ ನಮ್ಮ ಮನೆಯ ಕಡೆಗೆ ಬರೆಬೇಕೆಂದು ಹೊರಟಾಗ ಅದೇ ವೇಳೆಗೆ 1) ಸಾಬಣ್ಣಾ ತಂದೆ ಕಾಶಪ್ಪಾ ಬಡಿಗೇರ 2) ತಿಮ್ಮಣ್ಣಾ ತಂದೆ ಕಾಶಪ್ಪಾ ಬಡಿಗೇರ 3) ಈಶಪ್ಪಾ ತಂದೆ ಸಾಬಣ್ಣಾ ಬಡಿಗೇರ 4) ನಾಗಪ್ಪಾ ಸಾಬಣ್ಣಾ ಬಡಿಗೇರ 5) ಚನ್ನಮ್ಮಾ ಗಂಡ ಸಾಬಣ್ಣಾ ಬಡಿಗೇರ ಮತ್ತು 6) ಮಲ್ಲಪ್ಪಾ ತಂದೆ ಕಾಶಪ್ಪಾ ಬಡಿಗೇರ ಇವರೆಲ್ಲರೂ ಕೂಡಿ ಸಂಗನಮತ ಮಾಡಿಕೊಂಡು ಬಂದವರೇ ನಮಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಭೋಸಡಿ ಮಕ್ಕಳೇ ನೀವು ನಮ್ಮ ಹೋಲದೊಳಗಿಂದ ನಿಮ್ಮ ಹೋಲಕ್ಕೆ ಹೇಂಗೆ ಹೋಗುತ್ತಿರಿ ದಾರಿ ಇಲ್ಲಾ ಅಂದರೂ ಕೂಡಾ ಕೆಳುತ್ತಿಲ್ಲಾ, ನಿಮಗೆ ಸೊಕ್ಕು ಬಹಳ ಬಂದಿದೆ ಇವತ್ತು ನಿಮಗೆ ಬಿಡುವುದಿಲ್ಲಾ ಒಂದು ಕೈ ನೋಡೇ ಬಿಡುತ್ತೆವೆ ಅಂತಾ ಅಂದವರೇ ನನಗೆ ಹಾಗೂ ನನ್ನ ಅಣ್ಣನಿಗೆ ಈಶಪ್ಪಾ ,ನಾಗಪ್ಪಾ ಮತ್ತು ಚನ್ನಮ್ಮಾ ಈ ಮೂವರು ಹಿಡಿದುಕೊಂಡಾಗ ಸಾಬಣ್ಣನು ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ನನ್ನಣ್ಣ ಮಲ್ಲಪ್ಪಾ ಇತನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು. ಆಗ ಅವನು ಸತ್ತೆನೆಪ್ಪೋ ಅಂತಾ ಕೆಳಗೆ ಬಿದ್ದಾಗ ತಿಮ್ಮಣ್ಣನು ತನ್ನ ಕೈಯ್ಯಲಿದ್ದ ಬಡಿಗೆಯಿಂದ ಬೆನ್ನಿನ ಮೇಲೆ ಮತ್ತು ಎಡಗೈ ಮೇಲೆ ಹೊಡೆದು ಗುಪ್ತಗಾಯ ಮಾಡಿದನು. ಅಲ್ಲಿಯೇ ಇದ್ದ ನಾನು ಹೋಡೆಯಬೇಡಿರಿ ಅಂತಾ ಚೀರಾಡುತ್ತಿದ್ದಾಗ ನನಗೆ ಮಲ್ಲಪ್ಪಾ ತಂದೆ ಕಾಶಪ್ಪಾ ಬಡಿಗೇರ ಇತನು ತನ್ನ ಕೈಯ್ಯಲಿದ್ದ ಬಡಿಗೆಯಿಂದ ಎಡಪಕ್ಕೆಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಎಲ್ಲರೂ ಕೂಡಿ ನಮಗೆ ಮನಸ್ಸಿಗೆ ಬಂದ ಹಾಗೇ ಕೈಯಿಂದ ಹೊಡೆದರು. ಆಗ ನಾವಿಬ್ಬರೂ ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಈಶಪ್ಪಾ ಮಡಿವಾಳ ಮತ್ತು ಈಶಪ್ಪಾ ತಂದೆ ಬಸಲಿಂಗಪ್ಪಗೌಡ ಗೋಗಿ ಇಬ್ಬರೂ ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಅಲ್ಲಿಂದ ಹೋದರು.ನಂತರ ಗಾಯಹೊಂದಿದ ನಾವಿಬ್ಬರೂ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಈ ರೀತಿ ನಮ್ಮ ಜೋತೆಯಲ್ಲಿ ದಾರಿ ಹೋಲಕ್ಕೆ ಹೋಗುವ ದಾರಿಯ ವಿಷಯದಲ್ಲಿ ಜಗಳಾ ಮಾಡಿಕೊಂಡು ನಮಗೆ ಬಡಿಗೆ ಹಾಗೂ ಕೊಡಲಿಯಿಂದ ಹೊಡೆಬಡಿ ಮಾಡಿ ಭಾರಿ ಗಾಯಗೊಳಿಸಿದ ಮೇಲ್ಕಂಡ 6 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಫಿರ್ಯಾಧಿ ಹೇಳಿಕೆಯನ್ನು ಪಡೆದುಕೊಂಡು ಮರಳಿ 10-30 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 119/2019 ಕಲಂ 143, 147, 148, 323, 324, 326, 341, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 167/2019 ಕಲಂ.341.323,504,506 ಐಪಿಸಿ:-ದಿನಾಂಕ: 06-08-2019 ರಂದು 4 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಶ್ರೀಮತಿ ಡಿ.ಶ್ರಿದೇವಿ ಗಂಡ ಡಿ ನಾರಾಯಣ ದೇವಳ್ಳಾ ವಯಸು: 38 ವರ್ಷ ಉ:ಹೊಲ ಮನೆ ಕೆಲಸ ಜಾತಿ:ಕಮ್ಮಾ ಸಾ:ಕೊನ್ಹಾಳ ತಾ:ಸುರಪೂರ ಇವರು ಠಾಣೆಗೆ ಬಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನ್ನ ಮದುವೆಯು ಸುಮಾರು 18 ವರ್ಷಗಳ ಹಿಂದೆ ಡಿ ನಾರಾಯಣ ಇವರೊಂದಿಗೆ ಆಗಿದ್ದು ಇರುತ್ತದೆ. ಮದುವೆ ನಂತರ ನಾನು ನನ್ನ ಗಂಡನ ಜೊತೆ ಕೋನ್ಹಾಳ ಗ್ರಾಮಕ್ಕೆ ಬಂದು ಸುಮಾರು 10 ವರ್ಷ ಕೋನಾಳ ಗ್ರಾಮದಲ್ಲಿ ಸಂಸಾರ ಮಾಡಿದ್ದು ಇರುತ್ತದೆ. ನನಗೆ 16 ವರ್ಷದ ಸಾತ್ವೀಕ ಅನ್ನುವ ಒಬ್ಬ ಮಗನಿರುತ್ತಾನೆ. ನನ್ನ ಗಂಡ ಡಿ ನಾರಾಯಣ ಇವರು ಕೋನ್ಹಾಳ ಗ್ರಾಮದ ಸವರ್ೇ ನಂಬರ 35 ವಿಸ್ತ್ರಿರ್ಣ 07 ಎಕರೆ 30 ಗುಂಟೆ ಜಮೀನು ಖರೀದಿ ಮಾಡಿದ್ದು, ಅದರಲ್ಲಿ 03 ಎಕರೆ 35 ಗುಂಟೆ ಜೀಮಿನಿನ ಹಣವನ್ನು ನನ್ನ ತಂದೆ ತಾಯಿಯವರು ಕೊಟ್ಟಿದ್ದು, 03 ಎಕರೆ 35 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಖರಿಧಿ ಮಾಡಿದ್ದರು. ನಂತರ ನನ್ನ ಹೆಸರಿಗೆ ಇದ್ದ 3 ಎಕರೆ 30 ಗುಂಟೆ ಜಮೀನನ್ನು ನನ್ನ ಗಂಡನಾದ ಡಿ ನಾರಾಯಣ ಇವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು ಇರುತ್ತದೆ. ಸದರಿ ನನ್ನ ಹೆಸರಿನಲ್ಲಿರುವ 03 ಎಕರೆ 30 ಗುಂಟೆ ಜಮೀನನ್ನು ನನ್ನ ಹೆಸರಿಗೆ ಮಾಡು ಅಂತಾ ನನ್ನ ಗಂಡನಿಗೆ ಹೇಳಿದರೆ ಅವನು ನನ್ನೊಂದಿಗೆ ತಕರಾರು ಮಾಡಿದ್ದು, ಇದೇ ವಿಷಯಕ್ಕೆ ಸಂಬಂದ ಪಟ್ಟಂತೆ ನಾನು 8 ವರ್ಷಗಳ ಹಿಂದೆ ನನ್ನ ಗಂಡನೊಂದಿಗೆ ವೈಮನಸ್ಸು ಮಾಡಿಕೊಂಡ ನಂತರ ನಾನು 2015 ರಲ್ಲಿ ನನ್ನ ಗಂಡನಿಂದ ಡೈವರ್ಸ ಪಡೆದುಕೊಂಡಿದ್ದು ಇರುತ್ತದೆ. ಈ ಸಧ್ಯ ನಾನು ನನ್ನ ಗಂಡನ ಬಿಟ್ಟು ನನ್ನ ತವರು ಮನೆಯಲ್ಲಿ ನನ್ನ ಮಗನೊಂದಿಗೆ ವಾಸವಾಗಿದ್ದು, ನನ್ನ ಜಮೀನನ್ನು ಲಿಜಿಗೆ ಕೊಟ್ಟಿದ್ದು ನಾನು ಆಗಾಗ ಬಂದು ಜಮೀನನ್ನು ನೋಡಿಕೊಂಡು ಹೋಗುತ್ತೆನೆ. ಸದರಿ ಜಮೀನಿನ ವಿಷಯದಲ್ಲಿ ನಾನು ನ್ಯಾಯಾಲಯದಲ್ಲಿ ದಾವೆ ಹುಡಿದ್ದು ದಾವೆ ಸಂಖ್ಯೆ:290/2019 ನೇದ್ದು ಇರುತ್ತದೆ ಹಿಗಿದ್ದು ದಿನಾಂಕ:25-07-2019 ರಂದು ಕೊಟರ್ಿನ ಮುದ್ದತ್ತ ಇರುವದರಿಂದ ನಾನು ಸುರಪೂರಕ್ಕೆ ಬಂದು ಕೊರ್ಟ ಕೆಲಸ ಮುಗಿಸಿಕೊಂಡು ಕೊರ್ಟ ರಸ್ತೆಯ ಕೆಳಗೆ ಬರುವ ಲಕ್ಷ್ಮಿ ಗುಡಿಯ ಹತ್ತಿರ ಇರುವ ರಸ್ತೆಯಲ್ಲಿ ನಾನು ನನ್ನ ತಂದೆಯಾದ ನಾಗೇಶ್ವರಾವ ಇಬ್ಬರು 05-30 ಪಿ.ಎಂ ಕ್ಕೆ ಸುಮಾರಿಗೆ ನಡೆದುಕೊಂಡು ಬರುತ್ತಿರುವಾಗ ನನ್ನ ಗಂಡನಾದ ಡಿ ನಾರಾಯಣ ಇವರು ಬಂದವರೆ ನಮ್ಮಿಬ್ಬರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಎಲೇ ಬೋಸಡಿ ನನ್ನ ಮೇಲೆ ದಾವಾ ಮಾಡುತ್ತಿಯಾ ನೀನು ಯಾವ ದಾವ ಮಾಡಿದರು ನಾನು ಹೇದರುವದಿಲ್ಲ ನಿನ್ನ ಮತ್ತು ನಿನ್ನ ಮಗನನ್ನು ಸಾಯಿಸಿ ಆದರೂ ನಾನು ಹೊಲವನ್ನು ತಗೆದುಕೊಳ್ಳುತ್ತೆನೆ ಎಂದು ನನ್ನ ಕೂದಲನ್ನು ಹಿಡಿದು ಎಳೆದಾಡಿ ನನಗೆ ಕೈಯಿಂದ ಬೆನ್ನಿಗೆ ಹೊಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಂದೆಗೆ ಅಂಗಿಯ ಕಾಲರ ಪಟ್ಟಿ ಹಿಡಿದು ಅವರಿಗೆ ನೂಕಿಸಿ ಕೊಟ್ಟು ನನಗೆ ಹೊಡೆ ಬಡೆ ಮಾಡುತ್ತಿರುವಾಗ ಅದೇ ರಸ್ತೆಯ ಮುಖಾಂತರ ಹೋಗುತ್ತಿದ್ದ ಚೆನ್ನಾರೆಡ್ಡಿ ತಂದೆ ವಿಶ್ವನಾಥರೆಡ್ಡಿ ಸಾ:ಸುರಪೂರ ಮತ್ತು ಶಿವನಗೌಡ ತಂದೆ ನಿಂಗನಗೌಡ ಸಾ:ಮಾಲಹಳ್ಳಿ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಆಗ ಅವನು ಇವತ್ತು ಉಳದಿ ಇನ್ನೊಮ್ಮೆ ಕೊಟರ್ಿಗೆ ಬಾ ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಆಗ ನಾನು ಹೆಸರಿ ಊರಿಗೆ ವಾಪಸ್ಸ ಹೋಗಿ ಮನೆಯಲ್ಲಿ ವಿಚಾರ ಮಾಡಿ ಠಾಣೆಗೆ ಬಂದು ಪಿಯರ್ಾದಿ ಕೊಡಲು ತಡವಾಗಿರುತ್ತದೆ. ನನಗೆ ತಡೆದು ನಿಲ್ಲಿಸಿ ಅವಾಚ್ಯ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ನನ್ನ ಗಂಡ ಡಿ ನಾರಾಯಣ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 82/2019 ಕಲಂ, 78(3) ಕೆ.ಪಿ.ಆ್ಯಕ್ಟ್:- ದಿನಾಂಕ: 06/08/2019 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸುರೇಶ ಬಾಬು ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 06/08/2019 ರಂದು ಭಾತ್ಮಿ ಮೇರೆಗೆ ಸಿಬ್ಬಂದಿ ಮತ್ತು ಪಂಚರ ರವರೊಂದಿಗೆ 04.40 ಪಿಎಮ್ ಕ್ಕೆ ಹೋರಟು ವನದುಗರ್ಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಬಾಂಬೆ, ಕಲ್ಯಾಣ ಮಟಕಾ ಆಡಿರಿ 10 ರೂ ಜೋಯಿಂಟ್ ಹತ್ತಿದರೆ 800 ರೂಪಾಯಿ ಕೊಡುತ್ತೇವೆ, 01 ರೂ ಓಪನ ಹತ್ತಿದರೆ 80 ರೂ. ಕೊಡುತ್ತೇನೆ ಅಂತಾ ಕರೆಯುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಾತ್ರಿ ಪಡಿಸಿಕೊಂಡು ನಮ್ಮ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 05.15 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಶರಣಪ್ಪ ತಂದೆ ಭೀಮಣ್ಣ ಬಂಡಿ ವಯಾ:32 ಉ: ಒಕ್ಕಲುತನ ಜಾ:ಬೇಡರ ಸಾ: ವನದುಗರ್ಾ ತಾ: ಶಹಾಪುರ ಜಿ: ಯಾದಗಿರಿ ಅಂತಾ ತಿಳಿಸಿದ್ದು, ಸದರಿಯವನ ಅಂಗ ಪರಿಶೀಲಿಸಲಾಗಿ ಸದರಿಯವನ ಹತ್ತಿರ ನಗದು ಹಣ 1220/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ 05.20 ಪಿಎಂ ದಿಂದ 06.20 ಪಿಎಂ ವರಗೆ ಜಪ್ತಿ ಪಮಚನಾಮೆ ಮಾಡಿಕೊಂಡು ಬಂದು ಹಾಜರ ಪಡೆಸಿದ್ದು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 82/2019 ಕಲಂ: 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 65/2019 ಕಲಂ 78(3) ಕೆ.ಪಿ ಎಕ್ಟ್ :- ದಿನಾಂಕ: 06/08/2019 ರಂದು 8-00 ಪಿಎಮ್ ಕ್ಕೆ ಕೋರ್ಟ ಕರ್ತವ್ಯ ಸಿಬ್ಬಂದಿಯಾದ ಗಂಗಾಧರ ಪಿಸಿ-398 ರವರು ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶವೆನೆಂದರೆ, ಇಂದು ದಿನಾಂಕ:06/08/2019 ರಂದು 5-30 ಪಿಎಮ್ ಕ್ಕೆ ಶ್ರೀ ದೌಲತ್ ಎನ್.ಕೆ ಪಿ.ಐ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:06/08/2019 ರಂದು 2-45 ಪಿಎಮ್ ಸುಮಾರಿಗೆ ನಾನು ಸಿ.ಇ.ಎನ್.ಪೊಲೀಸ್ ಠಾಣೆಯಲ್ಲಿದ್ದಾಗ ಯಾದಗಿರಿಯ ಗಂಜದ ಬಸವೇಶ್ವರ ವೃತ್ತದ ಹತ್ತಿರ ಯಾರೋ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರು 3-00 ಪಿಎಂಕ್ಕೆ ಯಾದಗಿರಿ ನಗರ ಪೊಲಿಸ್ ಠಾಣೆಗೆ ಬಂದು ಶ್ರೀ ಬಾಪುಗೌಡ ಪಾಟೀಲ ಪಿ.ಎಸ್.ಐ(ಕಾ.ಸು) ನಗರ ಪೊಲೀಸ್ ಠಾಣೆ ರವರಿಗೆ ವಿಷಯ ತಿಳಿಸಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಹೋಗಿ 4-15 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಶ್ವನಾಥ ತಂದೆ ಮಲ್ಲಯ್ಯ ಚಾಪೆಲ ವ;26 ಜಾ; ಕಬ್ಬಲಿಗ ಉ; ಕೂಲಿಕೆಲಸ ಸಾ; ಕೋಲಿವಾಡ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಚೆಕ್ ಮಾಡಲಾಗಿ ನಗದು ಹಣ 7,100/- ರೂ. ಮತ್ತು ಒಂದು ಮಟಕಾ ಚೀಟಿ ಅಂ.ಕಿ.00-00, ಒಂದು ಬಾಲ ಪೆನ್ ಅಂ.ಕಿ.00-00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪಾಕೆಟದಲ್ಲಿ ಹಾಕಿ ಕಟ್ಟಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 4-15 ಪಿಎಂ ದಿಂದ 5-15 ಪಿಎಂ ದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 5-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನದೊಂದಿಗೆ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದು ಇರುತ್ತದೆ. ನಂತರ ಸದರಿ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕುರಿತು ಲೇಟರ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ಠಾಣೆ ಗುನ್ನೆ ನಂ.65/2019 ಕಲಂ.78(3) ಕೆಪಿ ಆ್ಯಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using