ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-08-2019
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 203/2019.ಕಲಂ 78(3).ಕೆ.ಪಿ.ಯಾಕ್ಟ:- ದಿನಾಂಕ 05/08/2019 ರಂದು 5.00 ಪಿಎಂ ಕ್ಕೆ ಶ್ರೀ ಹನುಮರೆಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ವಾಲ್ಮೀಕಿ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವರ ಹೆಸರು 1) ಮನೋಹರ ತಂದೆ ಈರಣ್ಣ ಪತ್ತಾರ ವ|| 40ವರ್ಷ ಜಾ|| ವಿಶ್ವಕರ್ಮ ಉ|| ಬಡಗಿತನ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಕನ್ಯಾಕೊಳೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ ನಗದು ಹಣ 560/- ರೂಪಾಯಿ, 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು, 2) ಬಸವರಾಜ ತಂದೆ ಅಂಬಲಪ್ಪ ನಾಯ್ಕೋಡಿ ವ|| 45ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಬಸವೇಶ್ವರ ನಗರ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ ನಗದು ಹಣ 1410/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 05/08/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 203/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 165/2019 ಕಲಂ 323,324,307,504,506 ಸಂ.34 ಐಪಿಸಿ:-ದಿನಾಂಕ: 05-08-2019 ರಂದು 7-15 ಪಿ.ಎಂ. ಸುಮಾರಿಗೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಸರಕಾರಿ ಆಸ್ಪತ್ರೆಯಿಂದ ಎಮ್ಎಲ್ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 7-30 ಪಿ.ಎಂ.ಕ್ಕೆ ಬೇಟಿ ನೀಡಿ ಪಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ:05-07-2019 ರಂದು ಸಾಯಂಕಾಲ 6-35 ಪಿ.ಎಂ.ಸುಮಾರಿಗೆ ನಾನು ನಮ್ಮ ಬಿಜಾಸಪೂರದ ಮನೆಯಲ್ಲಿರುವಾಗ ನನ್ನ ತಮ್ಮನಾದ ಸಂತೋಷ ತಂದೆ ವಾಲಿ ಪೂಜಾರಿ ಹಾಗೂ ನಮ್ಮ ಅತ್ತೆಯ ಮಗನಾದ ಮಹಾಂತೇಶ ತಂದೆ ರಾಜಪ್ಪ ಡಿಗ್ಗಿ ಇಬ್ಬರಿಗೂ ನಮ್ಮ ಗ್ರಾಮದ ಬೇಡರ ಜನಾಂಗದವರಾದ ಹಣಮಂತ ತಂದೆ ಶಿವಪ್ಪ ನಾಯಕ ಮತ್ತು ಮೌನೇಶ ತಂದೆ ಬಾಲಯ್ಯಾ ಬೂದ್ನೂರ ಇಬ್ಬರು ಕೂಡಿ ಕೃಷ್ಣಾಪೂರ ಬಸ್ಸ ಸ್ಟ್ಯಾಂಡ ಹತ್ತಿರ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿದ್ದಾರೆ ಅಂತಾ ಸುದ್ದಿ ತಿಳಿದು ಕೂಡಲೆ ನಾನು ನನ್ನ ತಮ್ಮನಾದ ಮಹೇಶ ತಂದೆ ವಾಲಿ ಪೂಜಾರಿ ಹಾಗೂ ನನ್ನ ಕಾಕನಾದ ಬೀಮರಾಯ ತಂದೆ ಪರಮಣ್ಣ ಪೂಜಾರಿ ಮೂವರು ಕೂಡಿ ಕೃಷ್ಣಾಪೂರ ಬಸ್ಸ ನಿಲ್ದಾಣದ ಹತ್ತಿರ ಬಂದು ನೋಡಲು ನನ್ನ ತಮ್ಮನಾದ ಸಂತೋಷ ಹಾಗೂ ಅತ್ತೆಯ ಮಗನಾದ ಮಹಾಂತೇಶ ಇಬ್ಬರು ಹೊರಳಾಡುತ್ತಿದ್ದು ನೋಡಲು ಸೋತೋಷ ಈತನ ತಲೆಯ ನೇತ್ತಿಯ ತುಂಬ ರಕ್ತಗಾಯ ಮೈಕೈಗೆ ರಕ್ತಗಾಯ ಮತ್ತು ಅತ್ತೆಯ ಮಗನಾದ ಮಹಾಂತೇಶ ಈತನಿಗೂ ಕೂಡಾ ತಲೆಗೆ ಮತ್ತು ಕೈಗೆ ಅಲ್ಲಲ್ಲಿ ರಕ್ತಗಾಯವಾಗಿದ್ದು ಚಿರಾಡುತ್ತಿದ್ದರು. ಸದರಿ ಇಬ್ಬರನ್ನು ನೋಡಿ ನಾವು ಗಾಭರಿಗೊಂಡು ಕೂಡಲೆ ಇಬ್ಬರನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸುರಪೂರಕ್ಕೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಇಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಕೃಷ್ಣಾಪೂರ ಬಸ್ಸ ನಿಲ್ದಾಣದ ಹತ್ತಿರ ಜಿದ್ದಕಟ್ಟಿ ಆಡ ಆಡುತ್ತಿದ್ದು ಆಡ ಆಡುವ ಸಮಯದಲ್ಲಿ ಒಬ್ಬರಿಗೂಬ್ಬರು ತಕರಾರು ಮಾಡಿಕೊಂಡು ಅದೇ ಉದ್ದೇಶದಿಂದ ಬೇಡರ ಜನಾಂಗದ ಹನಮಂತ ತಂದೆ ಶಿವಪ್ಪ ನಾಯಕ ಲಕ್ಕೇನವರ ಮತ್ತು ಮೌನೇಶ ತಂದೆ ಬಾಲಯ್ಯಾ ಬೂದ್ನೂರ ಇಬ್ಬರು ಕೂಡಿ ಕೊಲೆ ಮಾಡುವ ಉದ್ದೇಶದಿಂದ ನನ್ನ ತಮ್ಮ ಸಂತೋಷ ಹಾಗೂ ಅತ್ತೆಯ ಮಗ ಮಹಾಂತೇಶ ಇಬ್ಬರಿಗೂ ಕಟ್ಟಿಗೆಯಿಂದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಅಂತಾ ನನ್ನ ತಮ್ಮ ಸಂತೋಷ ಹಾಗೂ ಮಹಾಂತೇಶನಿಂದ ಕೇಳಿ ತಿಳಿದುಕೊಂಡಿದ್ದು ಇರುತ್ತದೆ. ನನ್ನ ತಮ್ಮ ಸಂತೋಷ ಹಾಗೂ ಮಹಾಂತೇಶ ಇಬ್ಬರಿಗೂ ಕೊಲೆ ಮಾಡುವ ಉದ್ದೇಶದಿಂದ ರಾಡುಗಳಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ ಹಣಮಂತ ಮತ್ತು ಮೌನೇಶ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೂಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 166/2019 ಕಲಂ 323,324,307,504,506 ಸಂ.34 ಐಪಿಸಿ :- ದಿನಾಂಕ: 05-08-2019 ರಂದು 8 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪೂರದಿಂದ ಎಮ್ಎಲ್ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 8-15 ಪಿ.ಎಂ.ಕ್ಕೆ ಬೇಟಿ ನೀಡಿ ಪಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ:05-08-2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನಮ್ಮೂರ ಮೌನೇಶ ತಂದೆ ಬಾಲಯ್ಯಾ ಬುದ್ನೂರ, ವೆಂಕಟೇಶ ತಂದೆ ರಾಮಣ್ಣ, ವೆಂಕಟೇಶ ತಂದೆ ಮಲ್ಕಣ್ಣ ಕಾಟನೇರ, ಸುರೇಶ ತಂದೆ ರಾಮಣ್ಣ ಬಾಲನವರ, ಯಂಕಪ್ಪ ತಂದೆ ಮಾನಪ್ಪ ಲಕ್ಕೇನವರ, ಅಮಿನಬಾಶಾ ತಂದೆ ಹುಸೆನಿ ಜಮಖಂಡಿ, ವೆಂಕಟೇಶ ತಂದೆ ಹಣಮಂತ ಕಾಟನೇರ ಎಲ್ಲರೂ ಕೂಡಿ ಕೃಷ್ಣಾಪೂರ ಬಸ್ಸ ನಿಲ್ದಾಣದ ಹತ್ತಿರ ಜಿದ್ದಿ ಆಟ ಆಡುತ್ತಿರುವಾಗ ನಮಗೂ ಅಲ್ಲೆ ಇದ್ದ ನಮ್ಮೂರ ಎಸ್ಸಿ ಜನಾಂಗದ ಸಂತೋಷ ತಂದೆ ವಾಲಿ ಪೂಜಾರಿ ಮತ್ತು ಮಹಾಂತೇಶ ತಂದೆ ರಾಜಪ್ಪ ಡಿಗ್ಗಿ ಈ ಇಬ್ಬರು ನಮ್ಮೊಂದಿಗೆ ಜಗಳ ಮಾಡಿ ತಕರಾರು ಮಾಡಿದವರೆ ಒಮ್ಮಿಂದೊಮ್ಮೆಲ್ಲೆ ಜಗಳ ಮಾಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದವರೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದ ಒಂದು ಬಡಿಗೆ ರಾಡಿನಿಂದ ನನ್ನ ತಲೆಗೆ ಬಲಗಡೆ ಮೆಲಕೀನ ಹತ್ತಿರ ಹಾಗೂ ಬಲಗಡೆ ಮೊಳಕೈ ಹತ್ತಿರ ರಕ್ತಗಾಯ ಮಾಡಿದ್ದು ಮೌನೇಶನಿಗೆ ತಲೆಗೆ ರಕ್ತಗಾಯ ಬಲಗೈಗೆ ಕಟಗಿಯಿಂದ ಹೊಡೆದು ರಕ್ತಗಾಯ ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ ಮೌನೇಶ ತಂದೆ ಬಾಲಯ್ಯಾ ಬುದ್ನೂರ, ವೆಂಕಟೇಶ ತಂದೆ ರಾಮಣ್ಣ, ವೆಂಕಟೇಶ ತಂದೆ ಮಲ್ಕಣ್ಣ ಕಾಟನೇರ, ಸುರೇಶ ತಂದೆ ರಾಮಣ್ಣ ಬಾಲನವರ, ಯಂಕಪ್ಪ ತಂದೆ ಮಾನಪ್ಪ ಲಕ್ಕೇನವರ, ಅಮಿನಬಾಶಾ ತಂದೆ ಹುಸೆನಿ ಜಮಖಂಡಿ, ವೆಂಕಟೇಶ ತಂದೆ ಹಣಮಂತ ಕಾಟನೇರ ಎಲ್ಲರೂ ಜಗಳ ಬಿಡಿಸಿದ್ದು ಆಗ ಅವರು ಇವತ್ತು ನಮ್ಮಿಂದ ಉಳದಿರಿ ಮಕ್ಕಳೆ ಇನ್ನೊಂದು ಸಾರಿ ಸಿಕ್ಕರೆ ನಿಮ್ಮ ಜೀವ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ನಂತರ ಎಲ್ಲರೂ ಕೂಡಿ ಗಾಯಗೊಂಡ ನನಗೂ ಮೌನೇಶ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮಿಬ್ಬರಿಗೆ ಕೋಲೆ ಮಾಡುವ ಉದ್ದೇಶದಿಂದ ಬಡಿಗೆ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ ಸಂತೋಷ ಮತ್ತು ಮಾಹಾಂತೇಶ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ: 279, 304[ಎ] ಐಪಿಸಿ ಸಂಗಡ 187 ಐ ಎಮ್ವಿ ಆಕ್ಟ:- ದಿನಾಂಕ: 05/08/2019 ರಂದು 7 ಎಎಮ್ಕ್ಕೆ ಸಂಜೀವಿನಿ ಆಸ್ಪತ್ರೆ ವಿಜಯಪೂರ ರವರಿಂದ ಆರ್ ಟಿ ಎ ಡೆತ್ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಶ್ರೀ ರಾಜಶೇಖರ ಎ ಎಸ್ ಐ ರವರು ಸದರಿ ಆಸ್ಪತ್ರೆಗೆ ಬೇಟಿ ನೀಡಿ ಮೃತ ಮೈರೂನಭೀ ಇವರ ಗಂಡನಾದ ಮದನಶಾ ಜಹಾಗೀರದಾರ ಇವರ ಹೇಳಿಕೆಯನ್ನು ಪಡೆದುಕೊಂಡು ಪಿಸಿ 188 ರವರ ಮುಖಾಂತರ ಕಳಹಿಸಿದ್ದರ ಸಾರಾಂಶವೇನಂದರೆ ದಿನಾಂಕ 02/08/2019 ರಂದು 8-30 ಎ ಎಮ್ ಕ್ಕೆ ಫಿಯರ್ಾದಿಯ ಹೆಂಡತಿ ಮೈರೂನಭೀ ಇವಳು ಕೂಲಿಕೆಲಸಕ್ಕೆಂದು ಆರೋಪಿತನ ಮೋಟರ ಸೈಕಲ ನಂಬರ ಕೆಎ-33 ಕೆ- 5149 ನೇದ್ದರಲ್ಲಿ ಹೋಗುತ್ತಿದ್ದಾಗ ಸದರಿ ಮೋಟರ ಸೈಕಲ ಚಾಲಕನು ದೇವರ ದಾಸಿಮಯ್ಯ ಕ್ಯಾಂಪ ಮುಂದಿನ ರೋಡಿನಲ್ಲಿ ಗೋಪಾಲಸಿಂಗ ಹಜಾರೆ ರವರ ಹೊಲದ ಹತ್ತಿರ ತನ್ನ ಮೋಟರ ಸೈಕಲನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಪಘಾತ ಪಡಿಸಿದ್ದು ಸದರಿ ಘಟನೆಯಲ್ಲಿ ಫಿಯರ್ಾದಿಯ ಹೆಂಡತಿ ಮೈರೂನಬಿ ಇವರಿಗೆ ತರಚಿದ ರಕ್ತಗಾಯ ಹಾಗು ಹಣೆಗೆ ಭಾರೀ ಗುಪ್ತಗಾಯವಾಗಿ ಉಪಚಾರ ಕುರಿತು ವಿಜಯಪೂರದ ಸಂಜಿವಿನಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೇ ನಿನ್ನೆ ದಿನಾಂಕ 04/08/2019 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 86/2019 ಕಲಂ 279,304[ಎ] ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using