ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 31-07-2019
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 163/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ:31-07-2019 ರಂದು 02-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಆನಂದರಾವ್ ಎಸ್.ಎನ್. ಪಿಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:31-07-2019 ರಂದು 12-15 ಪಿ.ಎಮ್. ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮನೋಹರ ಹೆಚ್.ಸಿ-105 2) ಸುಭಾಸ ಸಿಪಿಸಿ-174 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪೂರ ಪಟ್ಟಣದ ರಂಗಂಪೇಠದಲ್ಲಿರುವ ಬಡೆ ಮಜೀದಿ ಮುಂದಿನ ಪಾನಶಾಪ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಕೃಷ್ಣಾ ತಂದೆ ಸುಬ್ಬಣ್ಣ ಶೇಡಂ ವಯಾ: 26 ವರ್ಷ ಉ: ಟೇಲರ ಜಾತಿ:ಗೊಲ್ಲರ ಯಾದವ ಸಾ:ರಂಗಂಪೇಠ ಸುರಪೂರ 2) ಶ್ರಿ ವೆಂಕಟೇಶ ತಂದೆ ಜಗದೀಶ ಡೊಳ್ಳೇನವರ ವಯಾ:35 ವರ್ಷ ಉ:ಒಕ್ಕಲುತನ ಜಾತಿ:ಯಾದವ ಸಾ:ರಂಗಂಪೇಠ ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12-30 ಪಿ.ಎಮ್ ಕ್ಕೆ ಠಾಣೆಯಿಂದ ಸರಕಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಹೊರಟು 12-45 ಪಿ.ಎಮ್ ಕ್ಕೆ ಸುರಪೂರ ರಂಗಂಪೇಠದ ಬಡೆ ಮಜೀದಿ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಕಲ್ಲು ಪಾನಶಾಪ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12-50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಹಣಮಂತ ತಂದೆ ಬೀಮಣ್ಣ ಕರಿಕುರಿ ವಯಾ:30 ವರ್ಷ ಉ:ಕೂಲಿ ಜಾತಿ:ಯಾದವ ಸಾ:ತಿಮ್ಮಾಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿ ಸಾರ್ವಜನಿಕರಿಂದ ಪಡೆದುಕೊಂಡ ಹಣವನ್ನು ನಾಗಪ್ಪ ಸಾ:ಶೆಟ್ಟಿಕೇರಾ ಈತನಿಗೆ ಕೊಡುವದಾಗಿ ತಿಳಿಸಿದನು ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1980=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12-50 ಪಿ.ಎಮ್ ದಿಂದ 01-50 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 81/2019 ಕಲಂ: 447, 427, 504 ಸಂ: 34 ಐ.ಪಿ.ಸಿ:- ದಿನಾಂಕ:31/07/2019 ರಂದು 07.30 ಪಿಎಂ ಕ್ಕೆ ಪಿಯರ್ಾದಿ ಶ್ರೀ. ಗುರುಲಿಂಗಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 45 ವರ್ಷ ಉ: ಒಕ್ಕಲುತನ ಜಾ: ಕುಂಬಾರ ಸಾ: ಚನ್ನೂರ ಕೆೆ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದ್ದು, ಸದರಿ ಪಿಯರ್ಾದಿ ಸಾರಂಶ ಏನಂದರೆ, ನಾನು ಗುರುಲಿಂಗಪ್ಪ ತಂದೆ ವೀರುಪಾಕ್ಷಪ್ಪ ಕುಂಬಾರ ವಯಾ: 45 ವರ್ಷ ಉ: ಒಕ್ಕಲುತನ ಜಾ: ಕುಂಬಾರ ಸಾ: ಚನ್ನೂರ ಜೆ ತಾ: ಶಹಾಪೂರ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವದೇನಂದರೆ, ಚೆನ್ನೂರ ಸೀಮಾಂತರದ ಸವರ್ೇ ನಂ: 143 ರಲ್ಲಿ 13 21 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಮತ್ತು ನಮ್ಮ ಅಣ್ಣತಮ್ಮಂದಿರ ಹೆಸರಿನಲ್ಲಿ ಇರುತ್ತದೆ. ನಾವು ಈ ವರ್ಷ ತೋಗರಿಬೆಳೆ ಹಾಕಿರುತ್ತಾತ್ತೇವೆ. ನಮ್ಮ ದೂರದ ಸಂಬಂದಿಯವರಾದ ದೇವಪ್ಪ ತಂದೆ ಗುಂಡಣ್ಣ ಕುಂಬಾರ ಮತ್ತು ಅವರ ಅಣ್ಣತಮ್ಮಕಿಯವರು ನಮ್ಮ ಹೊಲ ತಮಗೆ ಸೇರಿದ್ದು ಎಂದು ದಾವೆ ಹೂಡಿರುತ್ತಾರೆ. ಮಾನ್ಯ ಸಿವ್ಹೀಲ್ ನ್ಯಾಯಾಲಯ ಶಹಾಪೂರ ರವರು ಸದ್ಯ ಸದರಿ ಜಮೀನು ಯಾರಿಗೂ ಮಾರಾಟ ಮಾಡಬಾರದು ಮತ್ತು ಜಮೀನಿನ ಮೇಲೆ ಯಾವುದೆ ಸಾಲ ತೆಗೆಯ ಬಾರದು ಅಂತಾ ನಮಗೆ ಆದೇಶ ಮಾಡಿದ್ದು ಇರುತ್ತದೆ. ಸದರಿ ಆದೇಶದಂತೆ ಪಾಲನೆ ಮಾಡುತ್ತಾ ನಾವು ನಮ್ಮ ಹೊಲವನ್ನು ಉಳುಮೆ ಮಾಡಿದ್ದು ಇರುತ್ತದೆ.ಹೀಗಿದ್ದು ದಿನಾಂಕ:28/07/2019 ರಂದು ಬೆಳಿಗ್ಗೆ 08.00 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ನೊಡಿದಾಗ ನಮ್ಮ ಹೊಲದಲ್ಲಿ ನಮ್ಮ ದೂರದ ಸಂಬಂದಿಯಾದ 1) ದೇವಪ್ಪ ತಂದೆ ಗುಂಡಣ್ಣ ಕುಂಬಾರ ವಯಾ: 25 ವರ್ಷ ಈತನು ತನ್ನ ಆಡುಗಳನ್ನು ತಂದು ನಮ್ಮ ಹೊಲದಲ್ಲಿ ಬಿಟ್ಟು ತೋಗರಿ ಬೆಳೆ ಮೇಯಿಸುತ್ತಿದ್ದನು. ಆಗ ನಾನು ತೊಗರಿ ಬೆಳೆ ಯಾಕೆ ಮೇಯಿಸಿದಿ ಅಂತಾ ಕೆಳುತ್ತಿದ್ದಾಗ 2) ಶಿವರಾಜಪ್ಪ ತಂದೆ ತಂದೆ ಬಸಣ್ಣ ಕುಂಬಾರ ವಯಾ:35 ವರ್ಷ 3) ರಾಜಪ್ಪ ತಂದೆ ಬಸ್ಸಣ್ಣ ಕುಂಬಾರ, ವಯಾ: 30 4) ನಿಂಗಣ್ಣ ತಂದೆ ಗುಂಡಣ್ಣ ಕುಂಬಾರ ವಯಾ: 28 ವರ್ಷ ಸಾ: ಎಲ್ಲರೂ ಚನ್ನೂರ ಕೆ ತಾ: ಶಹಾಪೂರ ಇವರುಗಳು ಬಂದರು ಎಲ್ಲರು ಕೂಡಿ ಮಗನೆ ನಿಮ್ಮ ಹೊಲದಲ್ಲಿ 2 ದಿನಗಳಿಂದ ತೋಗರಿ ಬೆಳೆ ಮೇಯಿಸಿದ್ದೇವೆ ಏನು ಮಾಡಿಕೊಳ್ಳುತ್ತಿ ಮಾಡಿಕೊ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದರು. ದೇವಪ್ಪ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನಗೆ ಹೊಡೆಯಲು ಬಂದನು, ಆಗ ನಾನು ತಪ್ಪಿಸಿಕೊಂಡಿರುತ್ತೆನೆ. ಶಿವರಾಜಪ್ಪ, ರಾಜಪ್ಪ, ನಿಂಗಣ್ಣ ಇವರು ನನಗೆ ಹೊಡೆಯಲು ನನ್ನ ಬೆನ್ನು ಹತ್ತಿದರು. ನಾನು ತಪ್ಪಿಸಿಕೊಂಡು ಓಡಿ ಬಂದಿರುತ್ತೆನೆ. ನಮ್ಮ ಪಕ್ಕದ ಹೊಲದವರಾದ 1) ಯಂಕಣ್ಣ ತಂದೆ ರಂಗಯ್ಯ ಸೊಂಡರಪಲ್ಲಿ ಸಾ: ವನದುಗರ್ಾ ಮತ್ತು 2) ಮುದುಕಪ್ಪ ತಂದೆ ರಂಗಯ್ಯ ಸೊಂಡರಪಲ್ಲಿ ಸಾ: ವನದುಗರ್ಾ ಇವರುಗಳು ಘಟನೆಯನ್ನು ನೋಡಿರುತ್ತಾರೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:31/07/2019 ರಂದು 07.30 ಪಿಎಂ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಆದ್ದರಿಂದ ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ತೋಗರಿ ಬೆಳೆ ನಾಶ ಮಾಡಿ ನನಗೆ ಅವಾಚ್ಯವಾಗಿ ಬೈದು ಹೊಡೆಯಲು ಬಂದ ಮೇಲಿನ ನಾಲ್ಕು ಜನರ ಮೇಲೆ ಸೂಕ್ತ ಕ್ರಮ ಜರುಗಿಸಲು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 81/2019 ಕಲಂ: 447, 427, 504 ಸಂ: 34 ಐಪಿಸಿ ನೇದ್ದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using