ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-07-2019

By blogger on ಸೋಮವಾರ, ಜುಲೈ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-07-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 197/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 29/07/2019 ರಂದು 5.00 ಪಿಎಂ ಕ್ಕೆ ಶ್ರೀ ಚಂದ್ರಕಾಂತ ಪಿಎಸ್ಐ(ಕಾ.ಸು) ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಹಳಿಸಗರದ ಅಂಬೇಡ್ಕರ್ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಎಸ್ಐ(ಕಾ.ಸು) ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಅಮಲಪ್ಪ ತಂದೆ ಕೃಷ್ಣಪ್ಪ ಟಣಕೆದಾರ ವ|| 52ವರ್ಷ ಜಾ|| ಬೇಡರ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ವ್ಯಾಪಾರ ಸಾ|| ಹಳಿಸಗರ ತಾ|| ಶಹಾಪೂರ ಈತನಿಂದ ನಗದು ಹಣ 920/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 29/07/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 197/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 196/2019 ಕಲಂ 41(ಡಿ),102 ಸಿಆರ್ಪಿಸಿ, 379 ಐಪಿಸಿ:-ದಿನಾಂಕ 29/07/2019 ರಂದು 3.00 ಪಿಎಂ ಕ್ಕೆ ಶ್ರೀ ಬಾಬು ಹೆಚ್.ಸಿ. 162 ರವರು ಠಾಣೆಗೆ ಬಂದು ಒಂದು ವರದಿ ನೀಡಿದ್ದು ಏನಂದರೆ ಇಂದು ದಿನಾಂಕ:29-07-2019 ರಂದು 2:30 ಪಿ.ಎಮ್.ಕ್ಕೆ ನಾನು ಮತ್ತು ಗಣಪತಿ ಪಿ.ಸಿ.294 ಇಬ್ಬರೂ ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯಕುರಿತು ಹೊಸ ಬಸ್ ನಿಲ್ದಾಣದ ಹತ್ತಿರ ಹೊರಟಾಗ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮರೆ ಮಾಚುತ್ತಾ ತನ್ನ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು  ಆಗ ನಾವು ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಡವರಿಸುತ್ತಾ ತನ್ನ ಹೇಸರನ್ನು ಹೇಳಲು ಹಿಂಜರಿಯುತ್ತಿದ್ದಾಗ ನಾವು ಪುನಃ ಕೇಳಲಾಗಿ ತನ್ನ ಹೆಸರು ನಾಸಿರಹುಸೇನ ತಂದೆ ಗುಡುಸಾಬ ಕಟಗರ ವಯ: 32 ವರ್ಷ ಜಾ: ಮುಸ್ಲಿಂ ಉ: ಮಟನ್ ವ್ಯಾಪಾರ ಸಾ: ಖುರೇಷಿ ಓಣಿ ಸುರಪೂರ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಇರುವ ಚೀಲವನ್ನು ಹಿಂದಕ್ಕೆ ಮುಂದಕ್ಕೆ ಹಿಡಿಯುತ್ತಿರುವಾಗ ನಾವು ಸಂಶಯಗೊಂಡು ಅದನ್ನು ತೆರೆದು ನೋಡಲಾಗಿ ಅದರಲ್ಲಿ 9 ಮೊಬೈಲಗಳು ಅವುಗಳ ಅಂ|| ಕಿ|| 4900/- ರೂ ಇದ್ದು ಇವು ಎಲ್ಲಿಂದ ತಂದಿದ್ದಿಯಾ ಅದರ ಖರೀದಿ ಕಾಗದ ಪತ್ರ ಇದೆಯಾ ಅಂತಾ ಕೇಳಲಾಗಿ ಆತನು ಯಾವುದೇ ಉತ್ತರ ಕೊಡಲಿಲ್ಲ. ಮತ್ತೆ ಕೇಳಲಾಗಿ ಸದರಿ ಮೊಬೈಲಗಳನ್ನು ಶಹಾಪೂರ, ಹುಣಸಗಿ ಮತ್ತು ಕೆಂಭಾವಿ ಸಂತೆ ಸಮಯದಲ್ಲಿ ಮತ್ತು ಜನಸಂದಣಿ ಸ್ಥಳಗಳಲ್ಲಿ ಕಿಸೆಗಳ್ಳತನ ಮಾಡಿದ್ದೇನೆ. ಅವುಗಳಿಗೆ ಯಾವುದೇ ಕಾಗದ ಪತ್ರಗಳಿಲ್ಲ ಎಂದು ಹೇಳಿರುತ್ತಾನೆ ಆದ್ದರಿಂದ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಮತ್ತು ಅವನಲ್ಲಿದ್ದ ಮೊಬೈಲಗಳೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿ ಮತ್ತು ಮುದ್ದೇ ಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 196/2019 ಕಲಂ 41(ಡಿ),102 ಸಿಆರ್ಪಿಸಿ, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 
                                                                                         
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 132/2019 ಕಲಂ279,337,338 ಐಪಿಸಿ:-ದಿನಾಂಕ 29.07.2019 ರಂದು ರಾತ್ರಿ 10.30 ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹೇಳಿಕೆ ನೀಡುವ ಸ್ಥಿತಿಯಲ್ಲಿರದ ಕಾರಣ ವೈದ್ಯಾಧಿಕಾರಿಗಳ ಅಭಿಪ್ರಾಯ ಪಡೆದು ಗಾಯಾಳುವಿನ ತಮ್ಮನಾದ ವಿನೋದ ತಂದೆ ಬಾಬು ತಲಾರಿ ವ|| 24ವರ್ಷ ಜಾ|| ಎಸ್.ಸಿ ಉ|| ಕಾಲೇಜ ವಿದ್ಯಾಭ್ಯಾಸ  ಸಾ|| ಗುರುಮಠಕಲ್ ತಾ||ಗುರುಮಠಕಲ್ ಜಿ||ಯಾದಗಿರಿ ಈತನ ಹೇಳಿಕೆ ಪಡೆದಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ.29.07.2019 ರಂದು ರಾತ್ರಿ 10.20 ಗಂಟೆಗೆ ನಾನು ಮನೆಯಲ್ಲಿದ್ದಾಗ ನನಗೆ ನನ್ನ ಅಣ್ಣನ ಸ್ನೇಹಿತರು ಫೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ, ನಿಮ್ಮ ಅಣ್ಣ ಪ್ರಭಾಕರ ಈತನು ಬೈಕ ಮೇಲೆ ಮನೆಗೆ ಹೊರಟಾಗ ಯಾದಗಿರಿ -ಹೈದ್ರಾಬಾದ ರೋಡ ಮೇಲೆ ಹೀರೋ ಶೋ ರೂಮ ಎದುರಿಗೆ ಇರುವ ರೋಡ ಡಿವೈಡರಗೆ ಬೈಕ ಗುದ್ದಿಸಿದ್ದು ತಲೆಗೆ ಭಾರಿ ರಕ್ತಗಾಯ ಆಗಿರುತ್ತದೆ 108 ಅಂಬುಲೆನ್ಸದಲ್ಲಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುತ್ತಿರುವದಾಗಿ ತಿಳಿಸಿದರು. ಕೂಡಲೇ ನಾನು ಮನೆಯಲ್ಲಿ ವಿಷಯ ತಿಳಿಸಿ ನನ್ನ ಇನ್ನೊಬ್ಬ ಅಣ್ಣ ಪ್ರಮೋದನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದು ಅಲ್ಲಿ ಹಾಜರಿದ್ದ ಬಸ್ಸು ತಂದೆ ಶಾಂತಕುಮಾರ ಇವರಿಗೆ ವಿಚಾರಣೆ ಮಾಡಲಾಗಿ ತಿಳಿಸಿದ್ದೇನೆಂದರೆ,ಇಂದು ದಿನಾಂಕ.29.07.2019ರಂದು 10.00 ಗಂಟೆಗೆ ನಾವು ಗುರುಮಠಕಲ ಸಾಮ್ರಾಟ ಹೊಟೇಲ್ ಕಡೆಯಿಂದ ಬಸವೇಶ್ವರ ಸರ್ಕಲ್ ಕಡೆಗೆ ಹೊರಟಿದ್ದಾಗ ಒಂದು ಆಕ್ಟೀವ ಹೋಂಡಾ ಸ್ಕೂಟಿ ಸವಾರ ಬಸವೇಶ್ವರ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹೀರೋ ಶೋ ರೂಮ ಎದುರಿಗೆ ಇರುವ ರೋಡ ಡಿವೈಡರಗೆ ಗುದ್ದಿ ಸ್ಕೂಟಿಯಿಂದ ಕೆಳಗಡೆ ಬಿದ್ದನು.ನಂತರ ನಾನು ಮತ್ತು ರಸ್ತೆಯ ಮೇಲೆ ಹೊರಟಿದ್ದ ಬೈಕ ಸವಾರರು ಮೇಲೆ ಎಬ್ಬಿಸಿ ನೋಡಲಾಗಿ ತಲೆಯ ಎದರುಗಡೆ ಹಣೆಗೆೆ ಭಾರಿ ರಕ್ತಗಾಯವಾಗಿ,ಬಲಗೈ ಮೂಳೆ ಮತ್ತು ಕಿರುಬೆರಳು ಮುರಿದಂತೆ ಕಂಡುಬಂದಿತು ಮತ್ತು ಬಾಯಿಯ ವಸಡಿನಲ್ಲಿ ಭಾರಿ ರಕ್ತಗಾಯ ಆಗಿದ್ದು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಕಂಡುಬಂದಿತು. ಅಲ್ಲಿ ಬಿದ್ದಿದ್ದ ಸ್ಕೂಟಿ ನಂಬರ ನೋಡಲಾಗಿ ಅದರ ನಂ. ಕೆ.ಎ-33 ಎಮ್-1831 ಇದ್ದಿತು.ನಂತರ ನಂತರ ಯಾರೋ 108 ಅಂಬುಲೆನ್ಸಗೆ ಫೋನ ಮಾಡಿ ಕರೆಯಿಸಿದ್ದು ಅಂಬುಲೆನ್ಸದಲ್ಲಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಲಾಗಿದೆ ಅಂತ ತಿಳಿಸಿದನು. ನಂತರ ಆಸ್ಪತ್ರೆಯ ಬೆಡ ಮೇಲೆ ಹಾಕಿದ್ದ ನನ್ನ ಅಣ್ಣ ಪ್ರಭಾಕರ ಈತನನ್ನು ನೋಡಲಾಗಿ,ಆತನ ತಲೆಯ ಮುಂದುಗಡೆ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಮತ್ತು ಕಿರುಬೆರಳು ಮುರಿದಂತೆ ಕಂಡು ಬಂದಿರುತ್ತದೆ. ಬಾಯಿ ಮತ್ತು ವಸೂಡಗಳಲ್ಲಿ ಭಾರಿ ರಕ್ತಗಾಯವಾಗಿದ್ದು ಕಂಡುಬಂದಿರುತ್ತದೆ. ಮತ್ತು ಮೈಮೇಲೆ ತರಚಿದ ರಕ್ತಗಾಯಗಳಾಗಿದ್ದು ಕಂಡುಬಂದಿರುತ್ತದೆ. ನನ್ನ ಅಣ್ಣ ಪ್ರಭಾಕರ ಈತನಿಗೆ ಗಂಭೀರ ಗಾಯಗಳಾಗಿರುವದರಿಂದ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ. ತನ್ನ ಆಕ್ಟಿವ್ ಹೋಂಡಾ ಸ್ಕೂಟಿ ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಡಿವೈಡರಗೆ ಗುದ್ದಿದ್ದು ಅದರ ಪರಿಣಾಮವಾಗಿ ತಲೆಯ ಹಣೆಗೆ,ಕೈಗೆ,ಬಾಯಿಗೆ ಆದ ಭಾರಿ ರಕ್ತಗಾಯ ಮತ್ತು ಮೈಗೆ ಸಾದಾ ತೆರಚಿದ ಗಾಯಗಳಾಗಿದ್ದು, ಸದರಿಯವನ ಮೇಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ಹೇಳಿಕೆ ಪಡೆದು ರಾತ್ರಿ 11-55 ಗಂಟೆಗೆ ಮರಳಿ ಠಾಣೆಗೆ ಬಂದು ಸದರಿಯವನ ಹೇಳಿಕೆ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.132/2019 ಕಲಂ.279.337.338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!