ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-07-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 116/2019 ಕಲಂ 143, 147, 447, 504, 506 ಸಂ: 149 ಐಪಿಸಿ:-ದಿನಾಂಕ 28-07-2019 ರಂದು 11 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಲಕ್ಷ್ಮಣ ತಂದೆ ಭೋಜ್ಯಾ ರಾಠೊಡ ವಯಾ:65 ಉ:ಒಕ್ಕಲುತನ ಜಾ: ಲಂಬಾಣಿ ಸಾ: ಸಕ್ರ್ಯಾ ನಾಯಕ ತಾಂಡಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಾಂಡಾದ ಸೀಮಾಂತರದಲ್ಲಿ ನನ್ನ ಸ್ವಂತ ಹೋಲ ಸವರ್ೇ ನಂ: 408/ಪೋ1 ರಲ್ಲಿ 1 ಎಕರೆ 3 ಗುಂಟೆ ಹೋಲವಿರುತ್ತದೆ. ಈ ಹೋಲವು ನಮ್ಮ ಪಿತ್ರಾಜರ್ಿತ ಆಸ್ತಿಯಾಗಿರುತ್ತದೆ. ಈಗ ಸುಮಾರು ಒಂದು ವರ್ಷದಿಂದ ನಮ್ಮ ಎರಡನೇ ಅಣ್ಣತಮಕಿಯವರಾದ ಸೀತ್ಯಾ ತಂದೆ ಸಕ್ರ್ಯಾ ರಾಠೋಡ ಇತನು ಮತ್ತು ಇವರ ಮನೆಯವರು ಈ ಮೇಲೆ ತೊರಿಸಿದ ಹೋಲ ನಮಗೆ ಬರುತ್ತದೆ ಅಂತಾ ನಮ್ಮ ಜೋತೆಗೆ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಆದರೂ ನಾವು ಅವರಿಗೆ ನಿಮ್ಮ ಹೋಲ ಇಲ್ಲಿ ಬರುವುದಿಲ್ಲಾ ನಿನ್ನ ಹೋಲ ಸವರ್ೇ ನಂ: 407 ರಲ್ಲಿ 18 ಗುಂಟೆ ಇದ್ದು ಅದರಲ್ಲಿ ನೀನು ಈಗಾಗಲೇ ಸಾಗುವಳಿ ಮಾಡಿಕೊಳ್ಳುತ್ತಿದ್ದಿವೀ ಹೋಲವು ಕೂಡಾ ನಿನ್ನದು ಅನ್ನುವುದಾರೇ ಧಾಖಲಾತಿ ತೊರಿಸು ಇಲ್ಲವಾದರೇ ಹೋಲ ಸವರ್ೇ ಮಾಡಿಸು ಈ ಜಮೀನಿನಲ್ಲಿ ನಿನಗೆ ಹೋಲ ಬಂದರೆ ನಾವು ನಿನಗೆ ಬಿಟ್ಟುಕೊಡುತ್ತೆವೆ ಅಂತಾ ತಿಳಿಸಿ ಹೇಳಿದರೂ ಕೂಡಾ ಅವರು ನಮ್ಮ ಜೋತೆಯಲ್ಲಿ ಜಗಳಾ ಮಾಡಿಕೊಳ್ಳುವ ಉದ್ದೇಶದಿಂದ ಅಂದಿನಿಂದ ಇಲ್ಲಿಯವರೆಗೂ ನಮ್ಮ ಜೋತೆ ಹಾಗೂ ನಮ್ಮ ಮಕ್ಕಳಾದ ಪ್ರಕಾಶ ಮತ್ತು ಮಲ್ಲು ಇವರ ಜೋತೆಯಲ್ಲಿ ಜಗಳಾ ಮಾಡುತ್ತಾ ಬಂದಿರುತ್ತಾರೆ. ಮತ್ತು ಅವರು ನಮಗೆ ಹೋಲ ಸಾಗುವಳಿ ಮಾಡಿದರೇ ನಿಮಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಅಂಜಿಕೆ ಹಾಕಿದ್ದರಿಂದ ನಾವು ಹೋಲಕ್ಕೆ ಹೋಗಿ ಸಾಗುವಳಿ ಮಾಡದೇ ಇದ್ದುದ್ದರಿಂದ ಹೋಲ ಬೀಳು ಬಿದ್ದಿರುತ್ತದೆ. ನಾನು ಈ ವಿಷಯದ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸಿದಾಗ ಮಾನ್ಯ ನ್ಯಾಯಾಲಯವು ನನಗೆ ಸಂಭಂದಿಸಿದ ಹೋಲ 408/ಪೋ1 ರಲ್ಲಿ 1 ಎಕರೆ 3 ಗುಂಟೆ ಹೋಲದಲ್ಲಿ ಸೀತ್ಯಾ ತಂದೆ ಸಕ್ರ್ಯಾ ರಾಠೋಡ ಇವರಿಗೆ ತಕರಾರು ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ (ಟೆಂಪರರಿ ಇಂಜೇಕ್ಷನ) ನೀಡಿದ್ದು ಇರುತ್ತದೆ. ಮತ್ತು ಮಾನ್ಯ ನ್ಯಾಯಾಲಯವು ಹೊರಡಿಸಿದ ಆದೇಶ ಸೀತ್ಯಾ ತಂದೆ ಸಕ್ರ್ಯಾ ಹಾಗೂ ಇತರರಿಗೂ ಗೊತ್ತಿರುತ್ತದೆ. ಹೀಗಿದ್ದು ದಿನಾಂಕ; 28-07-2019 ರಂದು ನಾನು ನನ್ನ ಮಕ್ಕಳಾದ ರವಿ, ಪ್ರಕಾಶ ಹಾಗೂ ನನ್ನ ಹೆಂಡತಿಯಾದ ಲಕ್ಷ್ಮೀಬಾಯಿ ಅಲ್ಲದೇ ಹೋಲದಲ್ಲಿ ಕಂಟಿ ಮುಳ್ಳು ಸ್ವಚ್ಚ ಮಾಡಲು ರಾಮಸಮುದ್ರ ಗ್ರಾಮದ ಮಲ್ಲು ತಂದೆ ರಾಮಲಿಂಗ ನೈಕೊಡಿ ಇವರಿಗೆ ಕೂಲಿ ಕೆಲಸಕ್ಕೆ ಹೇಳಿ ಎಲ್ಲರೂ ನಮ್ಮ ಹೋಲ 408/ಪೋ1 ರಲ್ಲಿ 1 ಎಕರೆ 3 ಗುಂಟೆ ಹೋಲದಲ್ಲಿ ಬೆಳಗ್ಗೆ 9-30 ಗಂಟೆ ಸುಮಾರಿಗೆ ಹೋಲ ಸ್ವಚ್ಚ ಮಾಡಿ ಗಳೇ ಹೊಡೆಯಬೆಕೆನ್ನುವಷ್ಟರಲ್ಲಿ ಅದೇ ವೇಳಗೆ ನಮ್ಮ ತಾಂಡಾದ 1) ಸೀತ್ಯಾ ತಂದೆ ಸಕ್ರ್ಯಾ ರಾಠೋಡ 2)ದೇವಪ್ಪಾ ತಂದೆ ಸಕ್ರ್ಯಾ ರಾಠೋಡ 3) ಗುಂಡಪ್ಪಾ ತಂದೆ ನರಸಪ್ಪಾ ರಾಠೋಡ 4) ಶಂಕರ ತಂದೆ ಸೀತ್ಯಾ ರಾಠೋಡ 5) ಲಾಲು ತಂದೆ ದೇವಪ್ಪಾ ರಾಠೊಡ ಮತ್ತು 6) ಶಾರಾಬಾಯಿ ಗಂಡ ಮಲ್ಲು ರಾಠೊಡ ಹಾಗೂ ಇತರರು ಸೇರಿಕೊಂಡು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ಎಲ್ಲರೂ ನಮಗೆ ಭೋಸಡಿ ಮಕ್ಕಳೇ ಈ ಹೋಲ ನಮಗೆ ಬರುತ್ತದೆ ಇದರಲ್ಲಿ ಏನು ಕೆಲಸ ಮಾಡಬೇಡಿರಿ ಅಂತಾ ಈ ಮೊದಲೇ ಹೇಳುತ್ತಾ ಬಂದರೂ ಕೂಡಾ ಇಂದು ನೀವು ಮತ್ತೆ ನಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದಿರಿ ಚೋದು ಸೂಳೆ ಮಕ್ಕಳೆ ಅಂತಾ ಬೈಯುತ್ತಾ ನಮ್ಮ ಹೋಲದಲ್ಲಿ ನಮಗೆ ಕೆಲಸಕ್ಕೆ ಅಡ್ಡಿಪಡಿಸಿದಾಗ ನಾವು ಅವರಿಗೆ ಇದು ಕೋರ್ಟ ಆದೇಶವಿದೆ ನಿಮಗೆ ಈ ಹೋಲ ಬೇಕಾದರೇ ಕೋಟರ್ಿಗೆ ಹೋಗಿರಿ ಅಂತಾ ಅವರಿಗೆ ಹೇಳಿದರೂ ಕೂಡಾ ಅವರು ನಮ್ಮ ಮಾತಿಗೆ ಹಾಗೂ ಮಾನ್ಯ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ನೀವು ಸ್ವಲ್ಪ ಹೋತ್ತು ಈ ಹೋಲದಲ್ಲಿದ್ದರೇ ನಿಮ್ಮ ಜೀವ ಸಹಿತ ಬೀಡುವುದಿಲ್ಲಾ ಅಂತಾ ನಮಗೆ ಜೀವದ ಭಯ ಹಾಕಿದರು. ಆಗ ನಾವು ನಮ್ಮ ಕೆಲಸವನ್ನು ಬಂಧ್ ಮಾಡಿ ನೇರವಾಗಿ ಪೋಲಿಸ್ ಠಾಣೆಗೆ ಬಂದಿರುತ್ತೆವೆ. ಆದ್ದರಿಂದ ತಾವು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಂಡು ನಮಗೆ ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಹೋಲದಲ್ಲಿ ಸಾಗುವಳಿ ಮಾಡಲು ರಕ್ಷಣೆ ನೀಡಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2019 ಕಲಂ 143, 147, 447, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 117/2019 ಕಲಂ 143, 147, 353, 504, 506 ಸಂ: 149 ಐಪಿಸಿ:-ದಿನಾಂಕ 28/07/2019 ರಂದು ಮಧ್ಯಾಹ್ನ 2-30 ಗಂಟೆಗೆ ಶ್ರೀ ಶಂಕರಗೌಡ ಎ.ಎಸ್.ಐ ಸಾಹೇಬರು ಠಾಣೆಗೆ ಬಂದು ವರದಿ ಮತ್ತು 5 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ ನಾನು ಶಂಕರಗೌಡ ಎ.ಎಸ್.ಐ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೆನೆಂದರೆ ಇಂದು ದಿನಾಂಕ 28/07/2019 ರಂದು ಬೆಳಿಗ್ಗೆ 11-00 ಗಂಟೆಗೆ ಸಕ್ರ್ಯಾ ನಾಯಕ ತಾಂಡಾದ ಶ್ರೀ ಲಕ್ಷ್ಮಣ ತಂದೆ ಭೋಜ್ಯಾ ರಾಠೋಡ ಇವರ ಹೊಲ ಸವರ್ೆ ನಂ 408/ಪೋ1 ನೆದ್ದರ ಆಕಾರ 1 ಎಕರೆ 3 ಗುಂಟೆ ಹೊಲವನ್ನು ಸಾಗುವಳಿ ಮಾಡುವದಕ್ಕೆ ಅದೇ ತಾಂಡಾದ ಸೀತ್ಯಾ ತಂದೆ ಸಕ್ರ್ಯಾ ರಾಠೋಡ ಮತ್ತು ಇತರರು ತಕರಾರು ಮಾಡುತ್ತಿದ್ದಾರೆ ಅಂತಾ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದರಿಂದ ಠಾಣೆ ಗುನ್ನೆ ನಂ 116/2019 ಕಲಂ 143, 147, 447, 504, 506 ಸಂ 149 ಐಪಿಸಿ ಪ್ರಕಾರ ಸೀತ್ಯಾ ತಂದೆ ಸಕ್ರ್ಯಾ ರಾಠೋಡ ಮತ್ತು ಇತರರ ಮೇಲೆ ಪ್ರಕರಣ ದಾಖಲು ಆಗಿರುತ್ತದೆ, ಮತ್ತು ಮಾನ್ಯ ನ್ಯಾಯಾಲಯದ ಆಧೇಶದಂತೆ ಸದರಿ ಮೇಲ್ಕಂಡ ಜಮೀನು ಸಾಗುವಳಿ ಮಾಡುವದಕ್ಕೆ ಸೂಕ್ತ ಬಂದೋಬಸ್ತ ಮಾಡುವ ಕುರಿತು ಮಾನ್ಯ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಸಾಹೇಬರ ಆಧೇಶದ ಮೇರೆಗೆ ನಾನು, ಶ್ರೀಮತಿ ಮಂಜುಳಾ ಪಿ.ಎಸ್.ಐ(ಅ.ವಿ), ಶ್ರೀ ಬಾಬುರಾವ ಎ.ಎಸ್.ಐ. ಶ್ರೀ ಹಣಮಂತ ಎ.ಎಸ್.ಐ. ಹಾಗೂ ಸಿಬ್ಬಂಧಿಯವರಾದ ಶ್ರೀ ಸಾಬರೆಡ್ಡಿ ಸಿ.ಹೆಚ್.ಸಿ-16, ಶ್ರೀ ಸಣ್ಣಕುಂಟೆಪ್ಪ ಸಿಪಿಸಿ-391, ಶ್ರೀ ಲಾಲಅಹ್ಮದ ಸಿ.ಪಿ.ಸಿ-367, ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಮಹಾದೇವ ಸಿಪಿಸಿ-178 ರವರು ಎಲ್ಲರೂ ಕೂಡಿಕೊಂಡು ಸಕ್ರ್ಯಾ ನಾಯಕ ತಾಂಡಾದ ಸೀಮೆಯಲ್ಲಿ ಬರುವ ಹೊಲ ಸವರ್ೆ ನಂ 408/ಪೋ1 ನೆದ್ದರ ಆಕಾರ 1 ಎಕರೆ 3 ಗುಂಟೆ ಹೊಲವನ್ನು ಸಾಗುವಳಿ ಮಾಡುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ ಕರ್ತವ್ಯ ಮಾಡುತ್ತಿದ್ದಾಗ ಆ ವೇಳೆಯಲ್ಲಿ ಹೊಲದ ಮಾಲೀಕರಾದ ಲಕ್ಷ್ಮಣ ತಂದೆ ಭೋಜ್ಯಾ ರಾಠೋಡ, ಇತನ ಮಕ್ಕಳಾದ ರವಿ ಮತ್ತು ಪ್ರಕಾಶ, ಆತನ ಹೆಂಡತಿಯಾದ ಲಕ್ಷ್ಮಿಬಾಯಿ ಇವರೆಲ್ಲರೂ ಇದ್ದರು, ಆಘ ಸಮಯ ಮಧ್ಯಾಹ್ನ 1-00 ಗಂಟೆ ಆಗಿತ್ತು, ಅದೇ ವೇಳೆಗೆ 1)ಸೀತ್ಯಾ ತಂದೆ ಸಕ್ರ್ಯಾ ರಾಠೋಡ 2)ದೇವಪ್ಪ ತಂದೆ ಸಕ್ರ್ಯಾ ರಾಠೋಡ 3)ಗುಂಡಪ್ಪ ತಂದೆ ನರಸಪ್ಪ ರಾಠೋಡ 4)ಶಂಕರ ತಂದೆ ಸೀತ್ಯಾ ರಾಠೋಡ 5)ಲಾಲು ತಂದೆ ದೇವಪ್ಪ ರಾಠೋಡ ಮತ್ತು ಇತರರು ಕೂಡಿಕೊಂಡು ನಮ್ಮ ಜೋತೆಗೆ ತಕರಾರು ಮಾಡಿ ನೀವು ಇಲ್ಲಿಗೆ ಯಾಕೆ ಬಂದಿರಿ ಈ ಹೊಲ ನಮದು ಇರುತ್ತದೆ, ನಾವು ಈ ಹೊಲವನ್ನು ಸಾಗುವಳಿ ಮಾಡುವದಕ್ಕೆ ಬಿಡುವದಿಲ್ಲ, ಅಂತಾ ತಕರಾರು ಮಾಡುತ್ತಿದ್ದರು, ಅಷ್ಟರಲ್ಲಿಯೇ ಶ್ರೀ ವೀರಣ್ಣ ಪಿ.ಎಸ್.ಐ(ಕಾ.ಸು) ಸಾಹೇಬರು ಅಲ್ಲಿಗೆ ಬಂದರು, ಪಿ.ಎಸ್.ಐ(ಕಾ.ಸು) ಸಾಹೇಬರು ಅವರಿಗೆ ತಿಳಿಸಿ ಹೇಳುತ್ತಿದ್ದಾಗ ಅವರೆಲ್ಲರೂ ಕೂಡಿ ಏ ರಂಡಿ ಮಕ್ಕಳೇ ನೀವು ಇಲ್ಲೆ ನಿಂತರೆ ನಿಮಗೆ ಜಿವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಅವರಲ್ಲಿ 1)ಸೀತ್ಯಾ ತಂದೆ ಸಕ್ರ್ಯಾ ರಾಠೋಡ ಇತನು ನನ್ನ ಕೈ ಹಿಡಿದು ಎಳೆದಾಡಿ ದಬ್ಬಿಕೊಟ್ಟು ಕರ್ತವ್ಯಕ್ಕೆ ಅಡೆತಡೆ ಉಂಟು ಮಾಡಿರುತ್ತಾನೆ, 2)ದೇವಪ್ಪ ತಂದೆ ಸಕ್ರ್ಯಾ ರಾಠೋಡ ಇತನು ಶ್ರೀ ಸಾಬರೆಡ್ಡಿ ಸಿ.ಹೆಚ್.ಸಿ-16 ರವರಿಗೆ ದಬ್ಬಿಕೊಟ್ಟಿರುತ್ತಾನೆ, 3)ಗುಂಡಪ್ಪ ತಂದೆ ನರಸಪ್ಪ ರಾಠೋಡ 4)ಶಂಕರ ತಂದೆ ಸೀತ್ಯಾ ರಾಠೋಡ 5)ಲಾಲು ತಂದೆ ದೇವಪ್ಪ ರಾಠೋಡ ಈ ಮೂರು ಜನರು ಕೂಡಿ ಶ್ರೀ ಸಣ್ಣಕುಂಟೆಪ್ಪ ಸಿಪಿಸಿ-391, ಶ್ರೀ ಲಾಲಅಹ್ಮದ ಸಿ.ಪಿ.ಸಿ-367 ಇವರಿಗೆ ಕೈ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡೆತಡೆ ಉಂಟು ಮಾಡಿರುತ್ತಾರೆ, ಆಗ ನಾವೆಲ್ಲರೂ ಕೂಡಿ 5 ಜನರನ್ನು ಅಲ್ಲಿಯೇ ಹಿಡಿದು ನಮ್ಮ ವಶಕ್ಕೆ ಪಡೆದುಕೊಂಡಿರುತ್ತೆವೆ, ಈ ಘಟನೆಯು ಇಂದು ದಿನಾಂಕ 28/07/2019 ರಂದು ಮಧ್ಯಾಹ್ನ 1-00 ಗಂಟೆಗೆ ಲಕ್ಷ್ಮಣ ತಂದೆ ಭೋಜ್ಯಾ ರಾಠೋಡ ಇವನ ಹೊಲದಲ್ಲಿ ನಡೆದಿರುತ್ತದೆ, ಮುಂದಿನ ಕ್ರಮಕ್ಕಾಗಿ ಆರೋಪಿತರನ್ನು ಮತ್ತು ವರದಿಯನ್ನು ಸಲ್ಲಿಸಿದ್ದು, ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 117/2019 ಕಲಂ 143, 147, 353, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 94/2019 ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 28/07/2019 ರಂದು ಆರೋಪಿತರೆಲ್ಲರೂ ಕೂಡಿ ಹೊತಪೇಟ ಸೀಮಾಂತರದ ಮರೆಮ್ಮ ದೇವಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.20 ಪಿ.ಎಮ್ ಕ್ಕೆ ದಾಳಿ ಮಾಡಿ 07 ಜನ ಆರೋಪಿತರು ಸಿಕ್ಕಿದ್ದು ಸದರಿ ಆರೋಪಿತರಿಂದ ನಗದು ಹಣ 3610/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 6.10 ಪಿ.ಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7.15 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 94/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ 78(3) ಕೆ.ಪಿ ಯಾಕ್ಟ:- ದಿನಾಂಕ:28/07/2019 ರಂದು 13.00 ಗಂಟೆಯ ಸುಮಾರಿಗೆ ಆರೋಪಿತನು ಹುಣಸಗಿ ಕೆಂಭಾವಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 184 ಪಿಸಿ-233, 248 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 840=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 160/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ: 28/07/2019 ರಂದು 6 ಪಿ.ಎಮ್. ಕ್ಕೆ ಶ್ರೀ ಆನಂದರಾವ್ ಎಸ್.ಎನ್ ಪಿ.ಐ ಸಾಹೇಬರು 3 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆಇಂದು ದಿನಾಂಕ:28-07-2019 ರಂದು 3-00 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸೂರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮಡಗಿ ಗ್ರಾಮದ ತಿಪ್ಪಣ್ಣನಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ನಾನು ಹಾಗೂ ಠಾಣೆಯ ಸಿಬ್ಬಂಧಿಯವರಾದ 1) ಸುಭಾಸ ಸಿಪಿಸಿ-174 2) ಸೋಮಯ್ಯಾ ಸಿಪಿಸಿ-235 ಹಾಗೂ ಜೀಪ್ ಚಾಲಕ 3)ಮಹಾಂತೇಶ ಎ.ಪಿ.ಸಿ-48 ಇವರೆಲ್ಲರಿಗೂ ವಿಷಯ ತಿಳಿಸಿ ಪಂಚರಾದ 1) ಶ್ರೀ ಸಂಗಣ್ಣ ತಂದೆ ಮಲ್ಲಪ್ಪ ಚಲುವಾದಿ ವಯಾ:32 ವರ್ಷ ಉ: ಸಮಾಜ ಸೇವಕ ಜಾ:ಹೊಲೆಯ ಸಾ:ಹೆಮ್ಮಡಗಿ ತಾ:ಸುರಪುರ 2) ಶ್ರೀ ಬಸವರಾಜ ತಂದೆ ಮಲ್ಲಪ್ಪ ಚಲುವಾದಿ ವಯಾ:28 ಉ: ಕೂಲಿ ಜಾತಿ: ಹೊಲೆಯ ಸಾ:ಹೆಮ್ಮಡಗಿಇವರನ್ನು ಬರಮಾಡಿಕೊಂಡು ಸದರಿಯವರಿಗೂ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3-15 ಪಿ.ಎಮ್ ಕ್ಕೆ ಸಕರ್ಾರಿ ಜೀಪ್ ನಂಬರ ಕೆ.ಎ 33 ಜಿ 0238 ನೇದ್ದರಲ್ಲಿ ಹೊರಟು 4-00 ಪಿ.ಎಮ್ ಕ್ಕೆ ಹೆಮ್ಮಡಿಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ತಿಪ್ಪಣ್ಣನ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 4-15 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ 3 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಸಂಗಣ್ಣ ತಂದೆ ಹಣಮಪ್ಪ ಕಾಂಬ್ಳೆ ವಯಾ:42 ವರ್ಷ ಉ:ಕೂಲಿ ಜಾ:ಹೊಲೆಯ ಸಾ:ಹೆಮ್ಮಡಗಿ ಇವನ ಹತ್ತಿರ 270=00 ರೂಗಳು ದೊರೆತವು 2) ಮಲ್ಲಪ್ಪ ತಂದೆ ದ್ಯಾವಪ್ಪ ಕವಳೋರ ವಯಾ:27 ವರ್ಷ ಜಾ:ಬೇಡರು ಉ:ಚಾಲಕ ಸಾ:ಅಡ್ಡೊಡಗಿ ಇವನ ಹತ್ತಿರ 210=00 ರೂಗಳು ದೊರೆತವು 3) ಬಸವರಾಜ ತಂದೆ ವಿರೂಪಾಕ್ಷಪ್ಪ ಶೆಳ್ಳಿಗಿ ವಯಾ:32ವರ್ಷ ಉ:ಕೂಲಿಕೆಲಸ ಜಾ:ಬಣಜಿಗ ಸಾ:ಹೆಮ್ಮಡಗಿ ಇವನ ಹತ್ತಿರ 240=00 ರೂಗಳು ದೊರೆತವು ಹಾಗೂ ಇದಲ್ಲದೆ ಪಣಕ್ಕೆ ಇಟ್ಟ ಹಣ 220/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 940/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4-15 ಪಿ.ಎಮ್.ದಿಂದ 5-15 ಪಿ.ಎಮ್ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, 3 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 161/2019 ಕಲಂ 323,504,506 ಸಂ.34 ಐಪಿಸಿ:-ದಿನಾಂಕ:28-07-2019 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಾನು ಸುರಪೂರಿನ ಮೇದಾರಗಲ್ಲಿಯ ನಮ್ಮ ಮನೆಯ 2ನೇ ಮಹಡಿಯಲ್ಲಿ ವಾಸವಾಗಿದ್ದು ನನ್ನ ಅಣ್ಣತಮ್ಮಂದಿರು 1ನೇ ಮಹಡಿಯಲ್ಲಿ ವಾಸವಾಗಿದ್ದು ನಾನು ನನ್ನ ಅಣ್ಣನ ಮನೆಯಲ್ಲಿದ್ದ ನನ್ನ ಮಂಚವನ್ನು ತೆಗೆದುಕೊಂಡು ಬರಲು ಹೋದಾಗ ನಮ್ಮ ಅಣ್ಣತಮ್ಮಂದಿರಾದ 1) ರಾಮಕೃಷ್ಣ ತಂದೆ ಸಿದ್ರಾಮಪ್ಪ ಚವ್ಹಾಣ ವಯ:53ವರ್ಷ, ಸಾ: ಮೇದಾರಗಲ್ಲಿ 2) ಮೋಹನ ತಂದೆ ಸಿದ್ರಾಮಪ್ಪ ಚವ್ಹಾಣ ವಯ:35, ಸಾ:ಮೇದಾರಗಲ್ಲಿ ಇಬ್ಬರೂ ಕೂಡಿ ಬಂದವರೆ ನಮ್ಮ ಮನೆಯಲ್ಲಿರುವ ಮಂಚ ನಿನ್ಯಾಕೆ ಒಯ್ಯುತ್ತಿರುವೆ ಅಂತಾ ಜಗಳ ತೆಗೆಯುವ ಉದ್ದೇಶದಿಂದ ಕೂಡಿ ಬಂದವರೆ ಎಲೇ ಬೊಸಡಿ ಮಗನೇ ಅಂತಾ ಆವಾಚ್ಯ ಶಬ್ದಗಳಿಂದ ಬೈಯ್ದು ಎದೆಯ ಮೇಲಿನ ಅಂಗಿ ಹಿಡಿದು ಹೊಡೆಯುತ್ತಿರುವಾಗ ಇದು ನನ್ನ ಮಂಚ ನಾನು ತೆಗೆದುಕೊಂಡು ಹೋಗುತ್ತೇನೆ ಯಾಕೆ ನನಗೆ ಹೊಡೆಯುತ್ತಿರಿ ಅಂತಾ ಕೇಳಿದಕ್ಕೆ ಅವರಲ್ಲಿಯ ರಾಮಕೃಷ್ಣ ಚವ್ಹಾಣ ಈತನು ನನಗೆ ಕೈ ಯಿಂದ ಎಡಗಡೆಯ ಕಪಾಳಕ್ಕೆ, ಬೆನ್ನಿಗೆ, ಹೊಡೆದು ಗುಪ್ತಗಾಯ ಮಾಡಿದನು. ಮೋಹನ ಚವ್ಹಾಣ ಈತನು ನನ್ನನ್ನು ಹಿಡಿದು ಎಳೆದಾಡಿ ಕೆಳಗೆ ತಳ್ಳುವ ಉದ್ದೇಶದಿಂದ ದೊಬ್ಬಿದನು, ನಾನು ಕೆಳಗೆ ಬಿದ್ದು ಚಿರಾಡುತ್ತಿರುವಾಗ ಆಗ ರಸ್ತೆಯಲ್ಲಿ ಹೋಗುತ್ತಿದ್ದ 1) ಮಲ್ಲು ತಂದೆ ನರಸಿಂಗಪ್ಪ, ಉ:ಕಮ್ಮಾರಿಕೆ, ಸಾ: ಕುಂಬಾರಪೇಟ 2) ಮುರಳಿಧರ ತಂದೆ ಪ್ರಕಾಶ ಭಂಡಾರಿ. ಸಾ: ಸೋಮೇಶ್ವರ ರೋಡ್ ಕರಿ ದೇವರ ಗುಡಿಯ ಹತ್ತಿರ ಗದಗ ಇವರು ಬಂದು ಜಗಳ ನೋಡಿ ಬಿಡಿಸಿದ್ದು ಇರುತ್ತದೆ. ಆಗ ಅವರು ನೀನು ನಮ್ಮ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಖಲಾಸ ಮಾಡದೆ ಬಿಡೊದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಾನು ಸಕರ್ಾರಿ ಆಸ್ಪತ್ರೆ ಸುರಪೂರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಇರುತ್ತದೆ. ನನಗೆ ಹೊಡೆಬಡೆ ಮಾಡಿದ ಮೇಲೆ ಹೇಳಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ.
Hello There!If you like this article Share with your friend using