ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-07-2019

By blogger on ಶುಕ್ರವಾರ, ಜುಲೈ 26, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-07-2019 

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 79/2019 ಕಲಂ 78 (3) ಕೆ.ಪಿ ಕಾಯ್ದೆ:- ದಿನಾಂಕ: 26-07-2019 ರಂದು 02:45 ಪಿಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಆನೂರ (ಬಿ) ಗ್ರಾಮದಲ್ಲಿ ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.79/2019 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 131/2019 ಕಲಂ:498(ಎ),494,323,504,506 ಸಂ.34 ಐಪಿಸಿ:-ಫಿರ್ಯಾದಿದಾರಳಿಗೆ ಸುಮಾರು 5 ವರ್ಷಗಳ ಹಿಂದೆ ಮದುವೆಯಾಗಿದ್ದು ಅದಾದ ನಂತರ ಸುಮಾರು 2-3 ವರ್ಷಗಳ ವರೆಗೆ ಗಂಡ ಹೆಂಡತಿ ಚನ್ನಾಗಿದ್ದರು. ನಂತರ ಫಿರ್ಯಾದಿದಾರಳ ಗಂಡ ಹಾಗೂ ಅತ್ತೆ, ಮಾವ ಮೂರು ಜನರು ಸೇರಿ ನಿನಗೆ ಚನ್ನಾಗಿ ಅಡುಗೆ, ಕೆಲಸ ಮಾಡಲು ಬರುವುದಿಲ್ಲ ಅಂತಾ ಹೇಳಿ ಹೊಡೆ-ಬಡೆ ಮಾಡುತ್ತ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡುತ್ತ ಬಂದಿರುತ್ತಾರೆ. ನಂತರ ಫಿರ್ಯಾದಿದಾರಳು ತನ್ನ ಮಗ ರಾಮಚರಣ 5 ತಿಂಗಳು ಕೂಸಿದ್ದಾಗ ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗಿದ್ದಾಗ ಫಿರ್ಯಾಧಿದಾರಳಿಗೆ ಆರೋಪಿತರು ಎಲ್ಲಾರು ಸೇರಿ ಫಿರ್ಯಾಧಿದಾರಳಿಗೆ ಪುನಃ ಹೊಡೆ-ಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಫಿರ್ಯಾದಿದಾರಳು ಪುನಃ ತನ್ನ ತವರು ಮನೆಗೆ ಹೋಗಿದ್ದು ಅದಾದನಂತರ ಫಿರ್ಯಾದಿದಾರಳ ಗಂಡ ಫಿರ್ಯಾದಿದಾರಳಿಗೆ ಗೊತ್ತಾಗದ ಹಾಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದು ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ:131/2019 ಕಲಂ:498(ಎ), 494, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
                                                                                        
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 194/2019 ಕಲಂ 78 (3) ಕೆ.ಪಿ.ಆಕ್ಟ:- ದಿನಾಂಕ 26-07-2019 ರಂದು 2.00 ಪಿ.ಎಂ ಕ್ಕೆ ಶ್ರೀ ಚಂದ್ರಕಾಂ ಮೆಕಾಲೆ ಪಿ.ಎಸ್.ಐ (ಕಾಸೂ)  ಶಹಾಪೂರ ರವರು ಪೊಲೀಸ್ ಠಾಣೆಯಲ್ಲಿದ್ದಾಗ ದಿಗ್ಗಿಬೇಸ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಯಾರೋ ಒಬ್ಬ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾರೆೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದಿದ್ದು  ಹೆಸರು ವಿಚಾರಿಸಲಾಗಿ  ಮಾನಪ್ಪ ತಂದೆ ನಿಂಗಪ್ಪ ತಳವಾರ ವಯ:48 ವರ್ಷ ಜಾ: ಎಸ್.ಸಿ. ಉ: ಮಟಕಾಬರೆದುಕೊಳ್ಳುವುದು ಸಾ: ತಳವಾರ ಓಣಿ ದಿಗ್ಗಿಬೇಸ ಶಹಾಪೂರ ಈತನಿಂದ ನಗದು ಹಣ 740/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು  ಸದರಿಯವುಗಳ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು,  ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 26/07/2019 ರಂದು 4:00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 6:00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 194/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 195/2019 ಕಲಂ 78 (3) ಕೆ.ಪಿ.ಆಕ್ಟ:- ದಿನಾಂಕ 26-07-2019 ರಂದು 4:00 ಪಿ.ಎಂ ಕ್ಕೆ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ರವರು ಪೊಲೀಸ್ ಠಾಣೆಯಲ್ಲಿದ್ದಾಗ ಎಮ್.ಕೊಳ್ಳೂರ ದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಯಾರೋ ಇಬ್ಬರು ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾರೆೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳಾದ  1) ಯಮನಪ್ಪ ತಂದೆ ಹುಲಗಪ್ಪ ಮನ್ಯಾಳ ವಯ: 38 ವರ್ಷ ಜಾ: ಬೇಡರ ಉ: ಮಟಕಾ ಬರೆದುಕೊಳ್ಳುವುದು ಸಾ: ಎಮ್.ಕೊಳ್ಳೂರ ತಾ: ಶಹಾಪೂರ   2) ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಬಾವಾ  ವಯ: 40 ವರ್ಷ ಜಾ: ಕಬ್ಬಲಿಗ ಉ:ಮಟಕಾ ಬರೆದುಕೊಳ್ಳುವುದು ಸಾ: ನಂದಳ್ಳಿ ತಾ: ಶಹಾಪೂರ  ಎಂಬ ಇಬ್ಬರು ಆರೋಪಿತರು ಮತ್ತು ಅವರಿಂದ ವಸಪಡಿಸಿಕೊಂಡ  ನಗದು ಹಣ ಒಟ್ಟು 1420- ರೂಪಾಯಿ 2 ಬಾಲ್ ಪೆನ್ ಮತ್ತು ಎರಡು ಮಟಕಾ ನಂಬರ ಬರೆದುಕೊಂಡ ಚೀಟಿಳನ್ನು    ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು,  ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 26/07/2019 ರಂದು 6:45 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 7:00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 195/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 43/2019 ಕಲಂ:78() ಕೆ ಪಿ ಆಕ್ಟ:- ದಿನಾಂಕ 25.07.2019 ರಂದು 4:30 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 25.07.2019 ರಂದು 2:30 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ  ರಾಜನಕೊಳೂರು ಗ್ರಾಮದ ಬಸ್ನಿಲ್ದಾಣದ ಮುಂದಿನ ಹುಣಸಗಿ-ನಾರಾಯಣಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕಲ್ಯಾಣಿ ಮಟಕಾ ಎಂಬುವವ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ತಿಳಿಸಿದ್ದು ಯಲ್ಲಪ್ಪ ಹೆಚ್ಸಿ ರವರು ಪಂಚರನ್ನಾಗಿ 1) ಯಂಕಪ್ಪ ತಂದೆ ಹಣಮಂತ ಘಾಟಗೇರ ಸಾ: ಕೊಡೇಕಲ್ಲ  2) ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ  ಇವರನ್ನು  2:40 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡಿದ್ದು ಅದಕ್ಕೆ ಒಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117  ಬಸನಗೌಡ ಹೆಚ್ಸಿ-100, ವೆಂಕಟೇಶ ಪಿಸಿ-132, ರವರನ್ನು ಮತ್ತು  ಪಂಚರೊಂದಿಗೆ ಠಾಣೆಯಿಂದ 2:45 ಪಿಎಮ್ ಕ್ಕೆ ಬಿಟ್ಟು  ಬಾತ್ಮಿ ಬಂದ ಸ್ಥಳವಾದ ರಾಜನಕೊಳೂರು ಗ್ರಾಮದ ಮುಂದಿನ ಹುಣಸಗಿ-ನಾರಾಯಣಪುರ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಸ್ವಲ್ಪ ದೂರದಲ್ಲಿ 3:00 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ  ಬಸ್ ನಿಲ್ದಾಣದ ಮುಂದಿನ ಹುಣಸಗಿ-ನಾರಾಯಣಪುರ ಮುಖ್ಯ ರಸ್ತೆಯ ಸಾರ್ವಜನಿಕ ಪಕ್ಕದಲ್ಲಿ ಸ್ಥಳದಲ್ಲಿ  ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕಲ್ಯಾಣೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 3:15 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಇಸ್ಮಾಯಿಲ್ ತಂದೆ ಧರೆಸಾಬ ಹೊಳಿ ವ:40 ವರ್ಷ ಉ: ಕೂಲಿಕೆಲಸ ಜಾ: ಮುಸ್ಲಿಂ ಸಾ: ಕಕ್ಕೇರಾ ತಾ: ಸುರಪೂರ ಹಾ:ವ:ರಾಜನಕೊಳೂರು ತಾ:ಹುಣಸಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಕಾ ಚೀಟಿ, ಮತ್ತು ನಗದು ಹಣ 315 ರೂಪಾಯಿಗಳು ದೊರೆತಿದ್ದು. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 3:15 ಪಿ.ಎಮ್ ದಿಂದ 4:15 ಪಿಎಮ್ ವರೆಗೆ ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 4:30 ಪಿ.ಎಮ್ ಕ್ಕೆ ಬಂದು ನಿಮಗೆ ನಾನು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ನಿಮಗೆೆ ಹಾಜರುಪಡಿಸಿದ್ದು, ಆರೋಪಿತ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದು ಕಾರಣ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಕಲಂ 78 (3) ಕೆಪಿ ಎಕ್ಟ  ಆಗುತ್ತಿದ್ದು ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪರವಾನಿಗೆಗಾಗಿ ನಿನ್ನೆ ದಿನಾಂಕ: 25.07.2019 ರಂದು ನಾನು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದು ನಿವೇದಿಸಿಕೊಂಡಿದ್ದು. ಇಂದು ದಿನಾಂಕ: 26.07.2019 ರಂದು 1:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಮೇಲಿಂದ ಇಂದು ಠಾಣಾ ಗುನ್ನೆ ನಂ: 43/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!