ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-07-2019

By blogger on ಗುರುವಾರ, ಜುಲೈ 25, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-07-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 129/2019 ಕಲಂ 379 ಐಪಿಸಿ:-ದಿನಾಂಕ 27.05.2019 ರಂದು ಸಮಯ ಬೆಳಿಗ್ಗೆ 5:00 ಗಂಟೆಗೆ ಎ-1 ಆರೋಪಿತನು ಎ-2 ಹೇಳಿದಂತೆ ಈ ಮೇಲ್ಕಂಡ ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಕಳ್ಳತನದಿಂದ ಕೊಂಕಲ್ ಸಿಮಾಂತರದ ಹಳ್ಳದಲ್ಲಿಯ ಮರಳನ್ನು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದಾಗ ಪಿಎಸ್ಐ ರವರು ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-1 ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಎ-1 ನನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 129/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 130/2019 ಕಲಂ 279, 337, 338 ಐಪಿಸಿ:-ದಿನಾಂಕ 25.07.2019 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಆರೋಪಿ ಮತ್ತು ಗಾಯಾಳು ತನ್ನ ಮೋಟಾರು ಸೈಕಲ್ ನಂ: ಕೆಎ-08-ಕೆ-1930 ನೇದ್ದರ ಮೇಲೆ ತನ್ನ ಮನೆಗೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಗುರುಮಠಕಲ್ ಪಟ್ಟಣದ ಮಾತಾ ಮಾಣಿಕೇಶ್ವರಿ ಕಾಂಪ್ಲೆಕ್ಸ್ನ ಪಕ್ಕದಲ್ಲಿ ಭಾರತ ಮೇನ್ಸ್ ವೇರ ನ ಮುಂದೆ ರೋಡಿನ ಮೆಲೆ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು ಗಾಯಾಳುವಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತ ಮತ್ತು ತರಚಿದ ಹಾಗೂ ಗುಪ್ತಗಾಯಗಳಾಗಿದ್ದ ಬಗ್ಗೆ ಫಿರ್ಯಾದಿಯ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 130/2019 ಕಲಂ 279, 337, 338 ಐ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
                                                                                         
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ 279, 337,338 ಐಪಿಸಿ ಮತ್ತು 187 ಐ,ಎಮ್,ವಿ ಕಾಯಿದೆ:- ದಿನಾಂಕ:25.07.2019 ರಂದು 6.30 ಪಿಎಂಕ್ಕೆ ಸಕರ್ಾರಿ ಆಸ್ಪತ್ರೆ ಸೈದಾಪುರದಿಂದ ಎಂಎಲ್ಸಿ ಇದೆ ಅಂತಾ ದೂರವಾಣಿ ಕರೆ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಬುಗ್ಗಮ್ಮ ಗಂಡ ಹಣಮಂತ ಕಂಬಾರ, ವಯಾ|| 55 ವರ್ಷ, ಜಾತಿ|| ಬೇಡರ, ಉ|| ಹೊಲಮನೆಕೆಲಸ, ಸಾ|| ಆರ್.ಹೊಸಳ್ಳಿ,  ತಾ|| ಜಿ|| ಯಾದಗಿರಿ ಇವರನ್ನು ವಿಚಾರಿಸಿ ಹೇಳಿಕೆ ಫಿಯರ್ಾದಿಯನ್ನು ನೀಡಿದ್ದು, ಸದರಿ ಹೇಳಿಕೆ ಫಿಯರ್ಾದಿ ಸಾರಾಂಶವೇನೆಂದರೆ,  ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತಳಿದ್ದು, ಮನೆಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡು ಇರುತ್ತೇನೆ. ನನ್ನ ಮಗ ದುಡಿಯಲು ಬೆಂಗಳೂರಿಗೆ ಹೋಗಿರುತ್ತಾನೆ. ಮನೆಯಲ್ಲಿ ನಾನು ಒಬ್ಬಳೆ ಇರುತ್ತೇನೆ. ನಾವು ಹೊಲದಲ್ಲಿ ಹತ್ತಿ ಹಚ್ಚಿದ್ದರಿಂದ ಕಸ ತೆಗೆಯಲು ಇಂದು ದಿನಾಂಕ:25-07-2019 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾಗಲಾಪೂರ ಸೀಮಾಂತರದಲ್ಲಿ ಇರುವ ಹೊಲಕ್ಕೆ ಹೋಗಿ ಹತ್ತಿ ಹೊಲದಲ್ಲಿ ಕಸ ತೆಗೆದು ಸಾಯಂಕಾಲ ಆದ ನಂತರ  ಮನೆಗೆ ಹೊಗಬೇಕಂತ ನಮ್ಮ ಹೊಲದಿಂದ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ನಾಗಲಾಪೂರ ಸಾಬಯ್ಯ ಇವರ ಹೊಲದ ಹತ್ತಿರ ಸಾಯಂಕಾಲ 05-00 ಗಂಟೆ ಸುಮಾರಿಗೆ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಬಳಿಚಕ್ರ ಕಡೆಯಿಂದ ಯಾವುದೋ ಒಂದು ಕಾರು ಬಂದು ಗುದಿದ್ದರಿಂದ ನಾನು ಕೆಳಗೆ ಬಿದ್ದೆನು. ಕಾರು ಗುದ್ದಿದ್ದರಿಂದ ನನಗೆ ಎಡಗೈಗೆ ರಕ್ತಗಾಯವಾಗಿತ್ತು ಮತ್ತು ಸೊಂಟಕ್ಕೆ ಒಳಪೆಟ್ಟು ಆಗಿತ್ತು. ನನ್ನ ಮುಂದೆ ನಮ್ಮೂರಿನ ಕುರಬರ ಶರಣಪ್ಪ ತಂದೆ ಅಯ್ಯಪ್ಪ ವ|| 15 ವರ್ಷ ಇತನಿಗೆ ಕಾರು ಗುದ್ದಿಕೊಂಡು ನಿಲ್ಲಿಸದೇ ಹೋಯಿತು. ಕಾರು ಯಾವುದು ಅಂತಾ ನೋಡಿರುವುದಿಲ್ಲ. ಶರಣಪ್ಪನಿಗೆ ನೋಡಲಾಗಿ ಎಡಮೊಣಕೈಗೆ, ಎಡಭುಜಕ್ಕೆ, ಬಲಭುಜದ ಮೇಲೆ, ತಲೆಗೆ, ಮತ್ತು ಸೊಂಟಕ್ಕೆ ರಕ್ತಗಾಯವಾಗಿತ್ತು. ಆಗ ಕುರಿ ಕಾಯಲು ಬಂದ ನಮ್ಮೂರಿನ ಬಾಲಪ್ಪ ತಂದೆ ದಂಡಪ್ಪ, ಅಯ್ಯಪ್ಪ ತಂದೆ ದಂಡಪ್ಪ ಇವರು ಬಂದು ನಮಗೆ ನೋಡಿ ಅಂಬುಲೆನ್ಸಗೆ ಫೋನ್ ಮಾಡಿದರು. ಸ್ವಲ್ಪ ಸಮಯದ ನಂತರ ಅಂಬುಲೆನ್ಸ ಸ್ಥಳಕ್ಕೆ ಬಂತು ಆಗ ಬಾಲಪ್ಪ ತಂದೆ ದಂಡಪ್ಪ, ಅಯ್ಯಪ್ಪ ತಂದೆ ದಂಡಪ್ಪ ಇವರು ನಮಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಸೈದಾಪೂರದ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಯಾವುದೋ ಒಂದು ಕಾರು ಚಾಲಕನು ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ನಮಗೆ ಅಪಘಾತಪಡಿಸಿ ಕಾರನ್ನು ನಿಲ್ಲಿಸದೆ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂತ ವಿನಂತಿ ಇರುತ್ತದೆ ಅಂತಾ ಹೇಳಿಕೆ ಪಡೆದುಕೊಂಡು 7-30 ಪಿಎಂ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿಯರ್ಾದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 78/2019 ಕಲಂ 279, 337, 338 ಐಪಿಸಿ ಮತ್ತು ಕಲಂ 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 63/2019 ಕಲಂ: 498(ಎ),504,323,506 ಸಂಗಡ 34 ಐಪಿಸಿ ಮತ್ತು ಕಲಂ: 4 ಡಿ.ಪಿ ಎಕ್ಟ್ 1965:- ದಿನಾಂಕ: 25/07/2019 ರಂದು 7-15 ಪಿಎಮ್ ಕ್ಕೆ ಶ್ರೀಮತಿ ಅಕ್ಷತಾ ಗಂಡ ಶರಣಬಸಪ್ಪ ಮಡಿವಾಳ, ವ:21, ಉ:ಮನೆಕೆಲಸ ಸಾ:ವಡಗೇರಾ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನನಗೆ ಸುಮಾರು 1 ವರ್ಷದ ಹಿಂದೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವಡಗೇರಾದ ಶರಣಬಸ್ಸಪ್ಪ ತಂದೆ ನಿಂಗಪ್ಪ ಮಡಿವಾಳ ಇವರೊಂದಿಗೆ ಯಾದಗಿರಿ ತಾಲೂಕಿನ ಹೆಡಗಿಮದ್ರಾ ಶಾಂತಶಿವಯೋಗಿ ಮಠದಲ್ಲಿ ನಮ್ಮ ಜಾತಿ ಸಂಪ್ರದಾಯದಂತೆ ನಮ್ಮ ತಂದೆ-ತಾಯಿಯವರು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ 2 ತಿಂಗಳು ಮಾತ್ರ ಸುಖ ದಾಂಪತ್ಯ ಜೀವನ ನಡೆಸಿದ್ದು ಇರುತ್ತದೆ. ನಂತರ ನನಗೆ ನನ್ನ ಅತ್ತೆಯಾದ ಶರಣಮ್ಮ ಗಂಡ ನಿಂಗಪ್ಪ ಇವರು ನಿನಗೆ ಸರಿಯಾಗಿ ಅಡುಗೆ ಮಾಡುವುದಕ್ಕೆ ಬರುವುದಿಲ್ಲವೆಂದು ಕಿರುಕುಳ ನೀಡುತ್ತಿದ್ದಳು. ಮತ್ತು ಮದುವೆಯಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೊಡುತ್ತೇನೆ ಎಂದು ನಿನ್ನ ತಂದೆ-ತಾಯಿಯವರು ಕೊಟ್ಟಿರುವುದಿಲ್ಲ ಎಂದು ಬೈಯುತ್ತಿದ್ದಳು. ಮಾವನಾದ ನಿಂಗಪ್ಪ ಮಡಿವಾಳ ಇವರು ಸಹ ನಿನಗೆ ಮಕ್ಕಳಾಗುವುದಿಲ್ಲ. ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇನೆ. ನೀನು ರೋಗಿಯಂತೆ ಕಾಣುತ್ತಿದ್ದಿ ಎಂದು ದಿನ ನಿತ್ಯ ಬೈಯುತ್ತಿದ್ದರು. ನನ್ನ ಗಂಡನಾದ ಶರಣಬಸ್ಸಪ್ಪ ಸಹ ನೀನು ನನಗೆ ತಕ್ಕ ಹೆಂಡತಿ ಸಿಕ್ಕಿಲ್ಲವೆಂದು ದಿನ ನಿತ್ಯ ಹೊಡೆಬಡೆ ಮಾಡುತ್ತಿದ್ದನು. ಆದರೂ ಸಹಾ ನಾನು ಸಹಿಸಿಕೊಂಡು ಇದ್ದೆನು. ಹೀಗೆ ಒಂದು ತಿಂಗಳ ಹಿಂದೆ ಹೊಡೆಬಡೆ ಮಾಡಿ ನೀನು ಒಂದು ಲಕ್ಷ ಹಣ ತರುವವರೆಗೂ ಬರಬೇಡವೇಂದು ಮನೆಯಿಂದ ಹೊರ ಹಾಕಿದ್ದರು. ಒಂದು ತಿಂಗಳ ಕಾಲ ನನ್ನ ತವರು ಮನೆ ಕಲಬುರಗಿಯಲ್ಲಿ ಇದ್ದೆ. ದಿನಾಂಕ: 23/07/2019 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನನ್ನ ತಂದೆ ಶರಣಪ್ಪ ತಾಯಿ ಗಿರೀಜಾ, ಮಾವನವರಾದ ಸಿದ್ರಾಮಪ್ಪ ಮತ್ತು ರವಿ ಇವರೊಂದಿಗೆ ನನ್ನ ಗಂಡನ ಮನೆಗೆ ಹೋದರೆ ನನ್ನ ಗಂಡನಾದ ಶರಣಬಸ್ಸಪ್ಪ, ಮಾವನಾದ ನಿಂಗಪ್ಪ, ಅತ್ತೆಯಾದ ಶರಣಮ್ಮ ಎಲ್ಲರೂ ಸಾ:ಅಂಬಾಮಹೇಶ್ವರಿ ದೇವಸ್ಥಾನ ವಡಗೇರಾ ತಾ:ವಡಗೇರಾದಲ್ಲಿ ಇವರೆಲ್ಲರೂ ಸೇರಿ ನನಗೆ ಕೈಯಿಂದ ಹೊಡೆಬಡೆ ಮಾಡಿ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲ. ಒಂದು ವರ್ಷವಾದರೂ ನಿನಗೆ ಮಕ್ಕಳಾಗಿರುವುದಿಲ್ಲ. ಒಂದು ಲಕ್ಷ ರೂ. ವರದಕ್ಷಿಣೆ ಹಣ ಇನ್ನು ಕೊಟ್ಟಿರುವುದಿಲ್ಲ ರಂಡಿ ಭೊಸುಡಿ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಇನೊಮ್ಮೆ ನಮ್ಮ ಮನೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಸದರಿ ಜಗಳವನ್ನು ನನ್ನ ತಂದೆ-ತಾಯಿ ಮತ್ತು ನಮ್ಮ ಮಾವನವರು ಬಿಡಿಸಿರುತ್ತಾರೆ. ಆದ ಕಾರಣ ದಯಾಳುಗಳಾದ ತಾವುಗಳು ನನಗೆ ಹೊಡೆಬಡೆ ಮಾಡಿ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಈ ಮೂಲಕ ಪ್ರಾಥರ್ಿಸುತ್ತೇನೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 63/2019 ಕಲಂ: 498(ಎ),504,323,506 ಸಂಗಡ 34 ಐಪಿಸಿ ಮತ್ತು ಕಲಂ: 4 ಡಿ.ಪಿ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 77/2019 ಕಲಂ: 447, 323, 354, 504, 506 ಸಂ: 34 ಐ.ಪಿ.ಸಿ:- ದಿನಾಂಕ:25/07/2019 ರಂದು 01.30 ಪಿಎಂ ಕ್ಕೆ  ಪಿಯರ್ಾದಿ ಶ್ರೀಮತಿ ನಿಂಗಮ್ಮ ಗಂಡ ದೇವಪ್ಪ ಶಾವಿ ವಯಾ:25 ಉ: ಮನೆಗೆಲಸ ಜಾ: ಕುರುಬರ ಸಾ: ಜೇವಗರ್ಿ ಹಾ:ವ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಠಾಣೆಗೆ ಹಾಜರಾಗಿ ಹೇಳಿ ಪಿಯರ್ಾದಿ ನೀಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಮ್ಮ ತಂದೆಯವರಿಗೆ ನಾನು ಒಬ್ಬಳೆ ಹೆಣ್ಣು ಮಗಳು ಇದ್ದು, ನನಗೆ 04 ವರ್ಷಗಳ ಹಿಂದೆ ಮದುವೆ ಮಾಡಿರುತ್ತಾರೆ, ಮದುವೆ ಆದಾಗಿನಿಂದ ನನಗೆ ನನ್ನ ಗಂಡನಿಗೆ ತಮ್ಮ ಮನೆಯಲ್ಲಿಯೇ ಅಳೆತನಕ್ಕೆ ಇಟ್ಟುಕೊಂಡಿರುತ್ತಾರೆ, ನಮ್ಮ ತಂದೆಯವರ ಹೆಸರಿನಲ್ಲಿರುವ 7 ಎಕರೆ ಹೊಲದಲ್ಲಿ ನನ್ನ ಹೆಸರಿಗೆ 5 ಎಕರೆ ನಮ್ಮ ತಾಯಿಯವರ ಹೆಸರಿಗೆ 2 ಎಕರೆ ಹೊಲ ಮಾಡಿದ್ದು ಇರುತ್ತದೆ. ನಮ್ಮ ಚಿಕ್ಕಪ್ಪ 1) ಲಕ್ಕಪ್ಪ ತಂದೆ ಜೆಟ್ಟೆಪ್ಪ ಶಾವಿ, ಚಿಕ್ಕಮ್ಮಳಾದ, 2) ಶ್ರೀದೇವಿ ಗಂಡ ಲಕ್ಕಪ್ಪ ಮತ್ತು ನಮ್ಮ ಅತ್ತೆ 3) ಅಯ್ಯಮ್ಮ ಗಂಡ ಸಿದ್ದಪ್ಪ ಬಾವೂರ ಸಾ: ಎಲ್ಲರು ಗುಂಡಾಪೂರ ಈ ಮೂರು ಜನರು ನನಗೆ ಇಲ್ಲಿ ಯಾಕೆ ಬಂದು ಇದ್ದಿಯಾ ಅಂತಾ ಸುಮಾರು 2 ವರ್ಷಗಳಿಂದ ನನಗೆ ಮತ್ತು ನನ್ನ ಗಂಡನಿಗೆ ಬೈಯುವದು, ನಿಂದಿಸುವದು ವಿನಾಕಾರಣ ನಮ್ಮ ಜೋತೆಗೆ ಜಗಳ ಮಾಡುವದು ಮಾಡುತ್ತಿದ್ದಾರೆ, ನಾನು ನಮ್ಮ ಚಿಕ್ಕಪ್ಪ ಇದ್ದಾನೆ ಅಂತಾ ಸುಮ್ಮನಿದ್ದೆನು. 
       ಹೀಗಿದ್ದು ದಿನಾಂಕ:23/07/2019 ರಂದು 10.00 ಎಎಂ ಸುಮಾರಿಗೆ ನಾನು ನನ್ನ ಗಂಡನಾದ ದೇವಪ್ಪ ಇಬ್ಬರು ನಮ್ಮ ಊರ ಮುಂದಿನ ಹೊಲದಲ್ಲಿದ್ದಾಗ 1) ಲಕ್ಕಪ್ಪ ತಂದೆ ಜೆಟ್ಟೆಪ್ಪ ಶಾವಿ, 2) ಶ್ರೀದೇವಿ ಗಂಡ ಲಕ್ಕಪ್ಪ ಶಾವಿ, 3) ಅಯ್ಯಮ್ಮ ಗಂಡ ಸಿದ್ದಪ್ಪ ಬಾವೂರ ಎಲ್ಲರು ಸಾ: ಗುಂಡಾಪೂರ ಈ ಮೂರು ಜನರು ನಮ್ಮ ಹೊಲದಲ್ಲಿ ಬಂದು, ಲಕ್ಕಪ್ಪ ಈತನು ನನಗೆ ಎಲೆ ಬೊಸಡಿ ನಿಂಗಿ ನೀನು ಇಲ್ಲಿ ಯಾರದು ಹೊಲ ಅಂತ ಬಂದು ಇದ್ದಿಯಾ ರಂಡಿ ಅಂತಾ ಅವಾಚ್ಯವಾಗಿ ಬೈಯುತ್ತಾ ಇದ್ದಾಗ ನಾನು ನನ್ನ ಹೊಲ ಇದೆ ನೀನಗೆ ನಾನು ಯಾರು ಅಂತಾ ಗೊತ್ತಿಲ್ಲ ಏನು ಅಂತಾ ಕೇಳಿದೆ, ಅದಕ್ಕೆ ಲಕ್ಕಪ್ಪ ಈತನು ನನ್ನ ಕೈ ತಿರುವಿ ಸೀರೆ ಎಳೆದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ಶ್ರೀದೇವಿ ಮತ್ತು ಅಯ್ಯಮ್ಮ ಇವರು ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈಯಿದಿರುತ್ತಾರೆ. ಅಷ್ಟರಲ್ಲಿ ನನ್ನ ಗಂಡ ದೇವಪ್ಪ ತಂದೆ ಮರಲಿಂಗಪ್ಪ, ಮತ್ತು ಅಲ್ಲೆ ಹೊರಟಿದ್ದ ಸುಗಪ್ಪ ತಂದೆ ಸಿದ್ದಪ್ಪ ಬಾವುರ ಮತ್ತು ಮಹಾದೇವಪ್ಪ ತಂದೆ ನಿಂಗಪ್ಪ ಹಳ್ಳಿ ಇಬ್ಬರು ಸಾ: ಗುಂಡಾಪೂರ ಇವರುಗಳು ಬಿಡಿಸಿಕೊಂಡರು. ಇಲ್ಲದಿದ್ದರೆ, ಇನ್ನು ಹೊಡೆಯುತ್ತಿದ್ದರು. ಸದರಿಯವರು ಹೊಡೆದು ಹೋಗುವಾಗ ಮಕ್ಕಳೆ ನೀವು ಇಲ್ಲಿಂದ ಜಾಗ ಖಾಲಿ ಮಾಡಲಿಲ್ಲ ಅಂತಾ ಅಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 25/07/2019 ರಂದು ಠಾಣೆಗೆ ಬಂದು ಹೇಳಿಕೆ ನೀಡಿರುತ್ತೇವೆ ನಮಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಅದಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ. ಕಾರಣ ನನಗೆ ಅವಾಚ್ಯವಾಗಿ ಬೈಯ್ದು, ಕೈ ಹಿಡಿದು ಜಗ್ಗಿ ಸೀರೆ ಎಳೆದು ಕೈಯಿಂದ ಹೊಡೆದು ಮಾನ ಹಾನಿ ಮಾಡಿ ಜೀವದ ಭಯ ಹಾಕಿದ 1) ಲಕ್ಕಪ್ಪ ತಂದೆ ಜೆಟ್ಟೆಪ್ಪ ಶಾವಿ, 2) ಶ್ರೀದೇವಿ ಗಂಡ ಲಕ್ಕಪ್ಪ ಶಾವಿ, 3) ಅಯ್ಯಮ್ಮ ಗಂಡ ಸಿದ್ದಪ್ಪ ಬಾವೂರ ಎಲ್ಲರು ಸಾ: ಗುಂಡಾಪೂರ ಈ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2019 ಕಲಂ: 447, 323, 354, 504, 506 ಸಂ: 34 ಐಪಿಸಿ ನೇದ್ದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ: 447, 504, 506 ಐ.ಪಿ.ಸಿ:- ದಿನಾಂಕ:25/07/2019 ರಂದು 07.30 ಪಿಎಂ ಕ್ಕೆ  ಪಿಯರ್ಾದಿ ಶ್ರೀ. ಸೈಯದ್ ಅಬ್ದುಲ ಹೈ ತಂದೆ ಸೈಯದ್ ಮಹೆಬೂಬ ಅಲಿ ವಜೀರ ವಯಾ:87 ವರ್ಷ ಉ: ನೀವೃತ್ತ ನೌಕರ ಜಾ: ಮುಸ್ಲಿಂ ಸಾ: ಮಹಲ್ ರೋಜಾ ಹಾ: ವ: ಮನೆ ನಂ: 4-601/70 ಬಿ2 ಬಾಖರ ಫಂಕ್ಷನ್ ಹಾಲ್ ಹತ್ತಿರ ರಿಂಗ್ ರೋಡ ಕಲಬುರಗಿ ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ನೀಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ಮಹಲ್ ರೋಜಾ ಸೀಮಾಂತರದಲ್ಲಿ ನನ್ನ ಹೆಂಡತಿ ಬುತುಲ್ ಬೇಗಂ ಗಂಡ ಸೈಯದ್ ಅಬ್ದುಲ್ ಹೈ ಇವರ ಹೆಸರಿನಲ್ಲಿ ಸವರ್ೇ ನಂ:175 ರಲ್ಲಿ 9 ಎಕರೆ 20 ಗುಂಟೆ ಜಮೀನು ಇರುತ್ತದೆ. ಮಗನಾದ ಸಯಯದ್ ತಾಜುದ್ದೀನ್ ಹೆಸರಿನಿಂದ 09 ಎಕರೆ 20 ಗುಂಟೆ ಜಮೀನು ಹಾಗೂ ನನ್ನ ಇನ್ನೊಬ್ಬ ಮಗನಾದ ದಿ. ಪೈಜಿಲ್ ಮುಬಿನ್ @ ಪಟೇಲ್ ಮುಜಿಬ ಇವರ ಹೆಸರಿನಿಂದ 09 ಎಕರೆ 20 ಗುಂಟೆ ಜಮೀನು ಇರುತ್ತದೆ. ಹೀಗ ಒಟ್ಟು 28.20 ಗುಂಟೆ ಜಮೀನು ಇದ್ದು ಅದನ್ನು ನಮ್ಮ ಮಹಲ್ ರೋಜಾ ಗ್ರಾಮದವರಾದ ಬಾಬು ತಂದೆ ಸಾಯಿಬಣ್ಣ ತಳವಾರ ಸಾ: ಮಹಲ್ ರೋಜಾ ಇವರಿಗೆ ಲೀಜಿಗೆ ಕೊಟ್ಟಿದ್ದು, ಅವರು ಒಂದು ವರ್ಷದಿಂದ ಲೀಜ ನಿಂದ ಮಾಡುತ್ತಿದ್ದಾರೆ, ಹೀಗಿದ್ದು ನಮ್ಮ ಹೊಲವನ್ನು ಮೊದಲು ಪಾಲಿಗೆ ಮಾಡುತ್ತಿದ್ದ, ಸೈಯದ್ ಮಹೆಮೂದ ಅಲಿ ವಜೀರ ತಂದೆ ಸೈದ್ ಮಹೆಬೂಬ ಅಲಿ ವಜೀರ ಸಾ: ಮಹಲ್ ರೋಜಾ ತಾ: ಶಹಾಪೂರ ಈತನು ಹೋದ ವರ್ಷ ನಮ್ಮ ಹೊಲ ಬಾಬು ತಂದೆ ಸಾಯಿಬಣ್ಣ ತಳವಾರ ಇವರಿಗೆ ಲೀಜಿಗೆ ಕೊಡುವಾಗ ತಕರಾರು ಮಾಡಿದ್ದನು ಆಗ ನಾವು ನಮ್ಮ ಹೊಲ ಯಾರಿಗಾದರೂ ಪಾಲಿಗೆ ಕೊಡುತ್ತೇವೆ ಅಂತಾ ಹೇಳಿದ್ದರಿಂದ ಸದರಿಯವನು ನಮ್ಮ ಹೊಲದಲ್ಲಿ ಪಾಲು ಬರುತ್ತದೆ ಅಂತಾ ಮಾನ್ಯ ಎಸಿ ಕಛೆರಿಗೆ ಅಜರ್ಿಕೊಟ್ಟು ಬಂದಿರುತ್ತಾನೆ.ಹೀಗಿದ್ದು ದಿನಾಂಕ: 25/07/2019 ರಂದು ನಾನು ಮತ್ತು ಮೊಮ್ಮಗನಾದ ಸೈಯದ್ ಮೈಬೂಬ ಮುಬಿನ್ ತಂದೆ ಸೈಯದ್ ಪೈಜುಲ್ ಮುಬಿನ್ ವಜೀರ ಮತ್ತು ಸೈಯದ್ ಶಮ್ಶುಲ್ ಮುಬಿನ್ ತಂದೆ ಪೈಜುಲ್ ಮುಬಿನ್ ಇವರೊಂದಿಗೆ ನಮ್ಮ ಹೊಲಕ್ಕೆ ಬಂದು 11.30 ಎಎಂ ಸುಮಾರಿಗೆ ನಮ್ಮ ಹೊಲಕ್ಕೆ ಬಂದ ಸೈಯದ್ ಮಹೆಮೂದ ಅಲಿ ವಜೀರ ತಂದೆ ಸೈದ್ ಮಹೆಬೂಬ ಅಲಿ ವಜೀರ ಸಾ: ಮಹಲ್ ರೋಜಾ ಈತನು ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಏ ಬೋಸುಡುಕೆ ಇದರ್ ಕೈಕು ಆಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ಮಕ್ಕಳೆ ಈ ಹೊಲದಲ್ಲಿ ನನ್ನದು ಪಾಲು ಇರುತ್ತದೆ ಅದು ನನ್ನ ಪಾಲಿಗೆ ಬರುತನಕ ನಿಮಗೆ ಹೊಲ ಬುಡುವದಿಲ್ಲ ಅಂತಾ ಅವಾಚ್ಯವಾಗಿ ಬೈಯ್ದು ನಮ್ಮ ಪಾಲಕಾರನಾದ ಬಾಬು ತಂದೆ ಸಾಯಿಬಣ್ಣ ತಳವಾರ ಸಾ: ಮಹಲ್ ರೋಜಾ ಈತನಿಗೆ ಮಗನೆ ಬಾಬ್ಯಾ ನೀನು ಈ ಹೊಲ ಇನ್ನು ಮೇಲೆ ಲೀಜ ಮಾಡುವ ಹಾಗೆ ಇಲ್ಲ ಮಗನೆ, ನೀನು ಇನ್ನು ಮುಂದೆ ಹೊಲದಲ್ಲಿ ಬಂದರೆ ಮಗನೆ ನಿನಗೆ ನಿನ್ನ ಮಾಲಿಕನಿಗೆ ಇಬ್ಬರಿಗೂ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಕಾರಣ ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನನಗೆ ಅವಾಚ್ಯವಾಗಿ ಬೈಯ್ದು, ನನಗೆ ಮತ್ತು ನಮ್ಮ ಹೊಲದ ಪಾಲಕಾರಿಗೆ ಜೀವದ ಬೇದರಿಕೆ ಹಾಕಿದ ಸೈಯದ್ ಮಹೆಮೂದ ಅಲಿ ವಜೀರ ತಂದೆ ಸೈದ್ ಮಹೆಬೂಬ ಅಲಿ ವಜೀರ ಸಾ: ಮಹಲ್ ರೋಜಾ ತಾ: ಶಹಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2019 ಕಲಂ: 447, 504, 506 ಐಪಿಸಿ ನೇದ್ದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
   
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 157/2019   ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ:25-07-2019 ರಂದು 3 ಪಿ.ಎಂ.ಕ್ಕೆ ಠಾಣೆಯ ಎಸ್ ಹೇಚ್ಡಿ  ಕರ್ತವ್ಯದಲ್ಲಿದ್ದಾಗ ಶ್ರೀ ಸೊಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು 6 ಜನ ಆಫಾಧಿತರೊಂದಿಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 25-07-2019 ರಂದು 1-30 ಪಿ.ಎಂ. ಸುಮಾರಿಗೆ ರುಕ್ಮಾಪೂರ  ಗ್ರಾಮದ ಶ್ರೀ ಶರಣಬಸವೇರ್ಶವರ ಗುಡಿಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಆರೋಪಿತರಾದ 1) ಅಂಬ್ರೇಶ ತಂದೆ ಶೀವಪ್ಪ ದಿವಳಗುಡ್ಡಾ 2) ಬಸವರಾಜ ತಂದೆ ನಾಗಪ್ಪ ಅಮ್ಮಾಪೂರ 3) ಭಿಮಶಂಕರ ತಂದೆ ಹಣಮಂತ ಮಾಲಿ ಪಾಟೀಲ 4) ಆನಂದ ತಂದೆ ಬಾಲಯ್ಯಾ ಜಾಲಹಳ್ಳಿ 5) ಹಣಮಂತ ತಂ. ಬಸವರಾಜ ಹುಬ್ಬಳ್ಳಿ 6) ಪ್ರಭು ತಂದೆ ನಂದಪ್ಪ ಕುಂಬಾರ ಎಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ್ -ಬಾಹರ್ ವೆಂಬ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಕ್ರಮ ಜರುಗಿಸಲು ವರದಿ ನಿಡಿದ್ದು ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ.:- 62/2019 ಕಲಂ 379 ಐಪಿಸಿ:-25/07/2019 ರಂದು ಬೆಳಗಿನ ಜಾವ 00.25 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ಟಿಪ್ಪರ ನಂ. ಕೆಎ-33 ಬಿ-0777 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಟಿಪ್ಪರ ಮಾಲಿಕ ಹೇಳಿದಂತೆ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವಾಗ ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿಯಾದ ಹೆಚ್.ಸಿ-130, 133, ಪಿಸಿ-233, ಪಿಸಿ-152 ರವರೊಂದಿಗೆ ಮತ್ತು ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಜಪ್ತಿ ಮಾಡಿಕೊಂಡು ತಮ್ಮ ವರದಿಯೊಂದಿಗೆ ಠಾಣೆಗೆ ತಂದು ಒಪ್ಪಿಸಿದ್ದರಿಂದಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.     



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!