ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-07-2019

By blogger on ಮಂಗಳವಾರ, ಜುಲೈ 23, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-07-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 186/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 23-07-2019 ರಂದು 1.00 ಪಿಎಂ ಕ್ಕೆ ಶ್ರೀ ಹಣಮರೆಡ್ಡೆಪ್ಪ ಪಿ.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಸಗರ ಬಿ. ಗ್ರಾಮದ ಚೌಡಿ ಕಟ್ಟೆಯ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಮಲ್ಲಪ್ಪ ತಂದೆ ತಿಪ್ಪಣ್ಣ ಕಕ್ಕೇರಿ ವಯ: 30 ವರ್ಷ ಜಾ: ಗಾಣಿಗ ಉ: ಮಟಕಾ ಬರೆದುಕೊಳ್ಳುವುದು ಸಾ: ಸಗರ .ಬಿ. ತಾ: ಶಹಾಪೂರ ಈತನಿಂದ ನಗದು ಹಣ 2500/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 23/07/2019 ರಂದು 3.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 4.30 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 186/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 187/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 23-07-2019 ರಂದು 3.00 ಪಿಎಂ ಕ್ಕೆ ಶ್ರೀ ಚಂದ್ರಕಾಂತ ಮೆಕಾಲೆ ಪಿ.ಎಸ್.ಐ (ಕಾ.ಸೂ)  ಶಹಾಪೂರ ರವರು ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರದ ಪಿ.ಎಲ್.ಡಿ ಬ್ಯಾಂಕ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಉಮೇಶ ತಂದೆ ಪರಶುರಾಮ ಕಟ್ಟಿಮನಿ ವಯ: 28 ವರ್ಷ ಜಾ: ಕಬ್ಬಲಿಗ ಉ: ಮಟಕಾಬರೆದುಕೊಳ್ಳುವುದು ಮತ್ತು ಪಾನ್ ಶಾಪ್ ಸಾ: ಬಸವೇಶ್ವರ ನಗರ ಶಹಾಪೂರ ಈತನಿಂದ ನಗದು ಹಣ 1020/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 23/07/2019 ರಂದು 5.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 5.30 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 187/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
                                                                                          
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 61/2019 78(3)  ಕೆ.ಪಿ ಯಾಕ್ಟ:- ದಿನಾಂಕ:22/07/2019 ರಂದು 13.30 ಗಂಟೆಯ ಸುಮಾರಿಗೆ ಆರೋಪಿತನು  ಹುಣಸಗಿ ಚನ್ನಮ್ಮ ಚೌಕ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 184 ಪಿಸಿ-233 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 560=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ: 323, 354, 504, 506, 509 ಐಪಿಸಿ:- ದಿನಾಂಕ: 23/07/2019 ರಂದು 01.05 ಪಿ.ಎಂ ಕ್ಕೆ ಪಿಯರ್ಾದಿ ಶ್ರೀಮತಿ. ವಾಲಿಬಾಯಿ ಗಂಡ ವಿಜಯ ಚವ್ಹಾಣ ವಯಾ; 26 ವರ್ಷ ಉ: ಮನೆಗೆಲಸ ಜಾ: ಲಂಬಾಣಿ ಸಾ: ಹೊಸ್ಕೇರಾ ಬಾಂಗ್ಲಾ ತಾಂಡಾ ತಾ: ಶಹಾಪೂರ ಇವರು ಠಾಣಗೆ ಹಾಜರಾಗಿ ಹೇಳಿಕೆ ನಿಡಿದ್ದು ಸದರಿ ಹೆಳಿಕೆಯ ಸಾರಂಶಏನದಂರೆ,  ದಿನಾಂಕ:10/07/2019 ರಂದು ನಮ್ಮ ಮಾವನವರಾದ ನಮ್ಮ ಮನೆಯವರು ಮತ್ತು ಗುರುನಾಥ ತಂದೆ ಪೋಮು ನಾಯ್ಕ ಇವರ ಮನೆಯವರಿಗೂ ಜಗಳ ಆಗಿದ್ದು ಎರಡು ಕಡೆಗೆ ಕೇಸುಗಳು ಆಗಿರುತ್ತವೆ. ಸದ್ಯ ನಮ್ಮ ಮನೆಯಲ್ಲಿ ನಾನು ನಮ್ಮ ನೆಗೆಣ್ಣಿ ಇಬ್ಬರೆ ಮಕ್ಕಳ ಸಣ್ಣ ಜೋತೆಯಲ್ಲಿ ಇರುತ್ತೇನೆ. ಹೀಗಿದ್ದು ಇಂದು ದಿನಾಂಕ: 23/07/2019 ರಂದು ನಾನು ಬೆಳಿಗ್ಗೆ 09.30 ಎಎಮ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ನೆಗೆಣ್ಣಿ ಮಂಜುಳಾ ಗಂಡ ನೀಲಕಂಠ ಚವ್ಹಾಣ ಇಬ್ಬರು ಕೆಲಸ ಮಾಡುತ್ತಿದ್ದಾಗ ನಮ್ಮ ತಾಂಡಾದವನೆ ಆದಂತಹ ಗೋವಿಂದ ತಂದೆ ಪೋಮುನಾಯ್ಕ ಚಾಧವ ವಯಾ: 47 ವರ್ಷ ಈತನು ತಮ್ಮ ಮನೆಯ ಮಾಳಗಿಯ ಮೇಲೆ ನಿಂತು ನಮ್ಮ ಅಂಗಳ ಕಡೆಗೆ ಮುಖಮಾಡಿ ಮೂತ್ರ ಮಾಡುತ್ತಿದ್ದಾಗ ನಾನು ಗೋವಿಂದನಿಗೆ, ನಿನಗೆ ನಾಚಿಕೆ ಇಲ್ಲವೆ, ನಿನಗೆ ಮಾನ ಮಯರ್ಾದೆ ಇಲ್ಲವೇನು ನಿಮ್ಮ ಮನೆಯಲ್ಲಿ ಅಕ್ಕತಂಗಿಯವರು ಇಲ್ಲ ಏನು ಅಂತಾ ಅಂದಾಗ ದೇಸು ಈತನು ಎಲೆ ರಂಡೆರೆ ನಿಮ್ಮ ಮನೆಯಲ್ಲಿಯೇ ಬಂದು ಉಚ್ಚೆ ಹೋಯ್ಯುತ್ತೇನೆ, ನೀವೇನು ಮಾಡುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಾ, ನಮ್ಮ ಮನೆಯ ಮುಂದೆ ಬಂದವನೆ ನನಗೆ ಮಾನ ಹಾನಿ ಮಾಡುವ ಉದ್ದೇಶದಿಂದ ಎಲೆ ರಂಡಿ ವಾಲಿ, ನಿನ್ನ ಗಂಡ ದವಾಖಾನಿಗೆ ಹೋಗ್ಯಾನ ನಾನು ನಿನಗೆ ಆಳತೀನಿ ಬಾ ಅಂತಾ ಅವಾಚ್ಯವಾಗಿ ಬೈಯುತ್ತಾ ಬಂದವನೆ ನನಗೆ ಕೈಹಿಡಿದು ಎಳೆದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ನನ್ನ ನೆಗೆಣ್ಣಿ ಮಂಜುಳಾ ಇವಳು ಗೊವಿಂದನಿಗೆ ಇಲ್ಲಿಂದ ಹೋಗು ಅಂದಿದ್ದಕ್ಕೆ ಅವಳಿಗೂ ಅವಾಚ್ಯವಾಗಿ ರಂಡಿ ಬೊಸಡಿ ಅಂತಾ ಬೈಯ್ದಿರುತ್ತಾನೆ. ಅಷ್ಟರಲ್ಲಿ ಅಲ್ಲೆ ಹೊರಟಿದ್ದ ನಮ್ಮ ತಾಂಡಾದ ಅಂಬ್ರಿಶ ತಂದೆ ಗೊವಿಂದ ಜಾಧವ ದೇವರಾಜ ತಂದೆ ಭೀಮಾ ಜಾಧವ ಇವರುಗಳು, ಗೋವಿಂದ ಈತನು ನನಗೆ ಕೈಹಿಡಿದು ಎಳೆದು ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದನು. ಸದರಿಯವನು ಹೋಗುವಾಗ ಬೋಸಡೇರ್ಯಾ ನಿವು ಇವತ್ತು ಉಳದೀರಿ ಇಲ್ಲಂದರೆ ನಿಮಗೆ ಇವತ್ತು ಖಲಾಸ್ ಮಾಡುತ್ತಿದ್ದೇ, ನೀವು ಇನ್ನೋಮ್ಮೆ ಸಿಗರಿ ನಿಮಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನನಗೆ ಗಾಯಗಳು ಆಗಿರುವದಿಲ್ಲ ಅದಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ.ಕಾರಣ ನನಗೆ ಅವಾಚ್ಯವಾಗಿ ಬೈಯ್ದು ಮಾನಹಾನಿ ಮಾಡುವ ಉದ್ದೇಶದಿಂದ ಕೈಹಿಡಿದು ಎಳೆದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಗೋವಿಂದ ತಂದೆ ಪೋಮುನಾಯ್ಕ ಜಾಧವ ವಯಾ: 47 ಸಾ; ಬಾಂಗ್ಲಾ ತಂಡಾ ಹೋಸ್ಕೆರಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 74/2019 ಕಲಂ: 323, 354, 504, 506, 509 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 127/2019 ಕಲಂ: 78() ಕೆ.ಪಿ. ಆಠ್ಟಿ್:- ದಿನಾಂಕ 23.07.2019 ರಂದು ಮಧ್ಯಾನ್ಹ 3.00 ಗಂಟೆಗೆ ಶ್ರೀ ವಿಜಯಕುಮಾರ ಪಿ.ಎಸ್.ಐ ಗುರುಮಠಕಲ್ ಠಾಣೆಗೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ,ಮುದ್ದೆ ಮಾಲು,ಮೂಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ ವರದಿ ನೀಡಿದ್ದು ಸದರಿ ಸಾರಾಂಶವೆನೇಂದರೆ ದಿನಾಂಕ.23.07.2019 ರಂದು ಮಧ್ಯಾಹ್ನ 1.00 ಗಂಟೆಗೆ ಗುರುಮಠಕಲ ಪಟ್ಟಣದ ನಗರೇಶ್ವರ ದೇವಸ್ಥಾನದ ಹತ್ತಿರ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ ಗುರುಮಠಕಲ ಪಟ್ಟಣದ ಚೌಡಿಕಟ್ಟಾ ಹತ್ತಿರದ ಸಮುದಾಯ ಭವನ ಬಳಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಟ್ಟು ಜನರಿಂದ ಹಣ ಸಂಗ್ರಹಿಸಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಂಚರನ್ನು ಕರೆದುಕೊಂಡು ಸಕರ್ಾರಿ ಜೀಪ ನಂ.ಕೆಎ-33-ಜಿ-0113 ನೆದ್ದರಲ್ಲಿ ಚೌಡಿಕಟ್ಟಾ ಹತ್ತಿರದ ಸಮುದಾಯ ಭವನ ಬಳಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/-ರೂ.ಗೆ 80/- ರೂಪಾಯಿ ಕಲ್ಯಾಣ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಬರೆದುಕೊಳ್ಳುತ್ತಿದ್ದನ್ನು ನೋಡಿ ದಾಳಿ ಮಾಡಿ ಆತನ ಹತ್ತಿರ ಇದ್ದ 1) ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ.ಕಿ 00=00, 2) ಒಂದು ಬಾಲ ಪೆನ್ನು ಅ.ಕಿ 00=00, 3) ನಗದು ಹಣ 9570/-ರೂಪಾಯಿ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸಮಯ 3.00 ಗಂಟೆಗೆ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣದ ಆರೋಪಿತ ಮಾಡಿದ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಂಡಿದ್ದು,ನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಂದು ದಿನಾಂಕ 23.07.2019 ರಂದು ಸಮಯ 6.00 ಪಿ.ಎಮ್ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಆರೋಪಿತನ ಮೇಲೆ ಮೂಲ ಜಪ್ತಿ ಪಂಚನಾಮೆ ಹಾಗೂ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 127/2019 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 188/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 23-07-2019 ರಂದು 5.00 ಪಿಎಂ ಕ್ಕೆ ಶ್ರೀ ಹನುಮರಡ್ಡೆಪ್ಪ ಪಿ.ಐ  ಶಹಾಪೂರ ರವರು ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರದ ಹಳಿಪೇಟ ಏರಿಯದ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಸೈಯದ ಮಶಾಕ ತಂದೆ ಸೈಯದ ಹುಸೇನಸಾಬ  ದರಬಾನ ವಯ:38 ವರ್ಷ ಜಾ: ಮುಸ್ಲಿಂ ಉ: ಮಟಕಾ ರೆದುಕೊಳ್ಳುವುದು. ಸಾ: ಹಳಿಪೇಟ ಶಹಾಪೂರ ಈತನಿಂದ ನಗದು ಹಣ 4020/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 23/07/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8:15 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 188/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!