ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-07-2019

By blogger on ಸೋಮವಾರ, ಜುಲೈ 22, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-07-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 124/2019 ಕಲಂ.,341,323,324,354,504,506 ಸಂ.34 ಐಪಿಸಿ:-ದಿನಾಂಕ 22.07.2019 ರಂದು 00.10.ಎ.ಎಮ್.ಕ್ಕೆ ಚಂದ್ರಪ್ಪ ತಂದೆ ಸಾಬಣ್ಣ ಬೊಂಬೈ ವಯ: 39ವರ್ಷ ಜಾ: ಕಬ್ಬಲಿಗ ಉ|| ಆಟೋ ಚಾಲಕ ಸಾ|| ಕಂದಕೂರ  ತಾ||ಗುರುಮಠಕಲ್ ಜಿ||ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ಒಂದು ಬಾಯಿ ಮಾತಿನ ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ.21.07.2019 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಫಿಯಾದಿ ಮತ್ತು ಆತನ ತಮ್ಮ ಶಾಂತಪ್ಪ ಇಬ್ಬರೂ ಕೂಡಿ ಸಾಬವ್ವ ಇವರ ಮನೆಯ ಮುಂದಿನ ರಸ್ತೆಯ ಮೇಲಿಂದ ಮನೆಯ ಕಡೆಗೆ ಹೊರಟಾಗ ಸಾಬವ್ವಳ ಮನೆಯ ಮುಂದೆ ಇದ್ದ, ಸಾಬವ್ವ ಗಂಡ ಶರಣಪ್ಪ, ಭೀಮಪ್ಪ ತಂದೆ ಸಾಬಣ್ಣ, ದೇವಿಂದ್ರಮ್ಮ ಗಂಡ ಭೀಮಪ್ಪ, ಹಣಮಂತ ತಂದೆ ಹಣಮಂತು, ಇವರೆಲ್ಲರೂ ಕೂಡಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೈಯಿಂದ,ಕಟ್ಟಿಗೆಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮಾಡಿದ್ದು,.ಫಿಯಾದಿ ಹೆಂಡತಿ ಸಂಜಮ್ಮ ಇವಳು ಜಗಳ ಬಿಡಿಸಲು ಬಂದಾಗ ಸೀರೆ ಹಿಡಿದು ಜಗ್ಗಿ ಎಳೆದು ಅವಮಾನ ಮಾಡಿ. ಎಲ್ಲರೂ ಸೇರಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ನೀಡಿದ ದೂರು ಹೇಳಿಕೆ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.124/2019 ಕಲಂ.341,323,324.354,504.506ಸಂ.34ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 62/2019 ಕಲಂ: 379 ಐಪಿಸಿ:-ದಿನಾಂಕ: 22/07/2019 ರಂದು 5-30 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಎರಡು ಟ್ರ್ಯಾಕ್ಟರಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ವರದಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 22/07/2019 ರಂದು ಸಾಯಂಕಾಲ 4-15 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಕಂಠಿ ತಾಂಡಾದ ಹಳ್ಳದಲ್ಲಿ ಕೆಲವರು ಟ್ರಾಕ್ಟರ್ಗಳಲ್ಲಿ ಕಳ್ಳತನದಿಂದ ಮರಳನ್ನು ತುಂಬಿ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಶ್ರೀ ವೆಂಕಟೇಶ ಪಿಸಿ 143, 2) ಶ್ರೀ ಶಂಕರರೆಡ್ಡಿ ಪಿಸಿ 389 ಮತ್ತು 3) ಶ್ರೀ ಮಹೇಂದ್ರ ಪಿಸಿ 254 ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೊರಟು ಕಂಠಿ ತಾಂಡಾದ ಹಳ್ಳದಲ್ಲಿ ಹೋಗುತ್ತಿದ್ದಾಗ 4-45 ಪಿಎಮ್ ಕ್ಕೆ ಹೋಗಿ ನೋಡಲಾಗಿ ಹಳ್ಳದಿಂದ ಎರಡು ಟ್ರಾಕ್ಟರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಹೋಗಿ ಎರಡು ಟ್ರಾಕ್ಟರಗಳನ್ನು ನಿಲ್ಲಿಸಲು ಹೋದಾಗ ಸದರಿ ಎರಡು ಟ್ರ್ಯಾಕ್ಟರಗಳ ಚಾಲಕರು ತಮ್ಮ ಟ್ರ್ಯಾಕ್ಟರಗಳನ್ನು ಪಕ್ಕದ ಹೊಲಗಳಲ್ಲಿ ತಿರುಗಿಸಿಕೊಂಡು ಹೋಗಿ ಟ್ರ್ಯಾಕ್ಟರಗಳನ್ನು ನಿಲ್ಲಿಸಿ, ಓಡಿ ಹೋದರು. ಅವರ ಹಿಂದೆ ಬೆನ್ನತ್ತಿದರೂ ಸಿಗಲಿಲ್ಲ. ಸದರಿ ಟ್ರ್ಯಾಕ್ಟರಗಳ ಚಾಲಕರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟ್ರಾಕ್ಟರಗಳನ್ನು ನೋಡಲಾಗಿ 1] ಮೆಸ್ಸಿ ಫಗರ್ುಶನ ಟ್ರಾಕ್ಟರ್ ನೊಂದಣಿ ಸಂಖ್ಯೆ ಇಲ್ಲ. ಇಂಜಿನ್ ನಂ. ಖ3251ಊ07998 ಚೆಸ್ಸಿ ನಂ. ಒಇಂ908ಂ5ಇಉ2090506 ಟ್ರಾಲಿಗೆ ನೊಂದಣಿ ನಂಬರ ಇರುವುದಿಲ್ಲ. ಚೆಸ್ಸಿ ನಂ. ಕೂಡಾ ಕಂಡುಬಂದಿರುವುದಿಲ್ಲ. ಕೆಂಪು ಬಣ್ಣದ ಟ್ರಾಲಿ ಇರುತ್ತದೆ. 2] ಟ್ರಾಕ್ಟರ್ ನೊಂದಣಿ ಸಂಖ್ಯೆ ಕೆಎ 33 ಟಿಎ 8548 ಇದ್ದು, ಟ್ರಾಲಿ ನೋಂದಣಿ ನಂ. ಕೆಎ 33 ಟಿಎ 8549 ಇರುತ್ತದೆ. ಸದರಿ ಎರಡು ಟ್ರ್ಯಾಕ್ಟರಗಳು ಅರ್ದ ಟ್ರಾಲಿ ಮರಳು ತುಂಬಿದ್ದು, ಇವುಗಳ ಚಾಲಕರು ಮತ್ತು ಮಾಲಿಕರು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದಾಗ ಟ್ರ್ಯಾಕ್ಟರಗಳ ಚಾಲಕರು ತಮ್ಮ ಹತ್ತಿರ ರಾಯಲ್ಟಿ ವೈಗೆರೆ ದಾಖಲಾತಿ ಇಲ್ಲದ ಕಾರಣ ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ. ಕಾರಣ ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 62/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                                                                                          
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 185/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 22/07/2019 ರಂದು 5.00 ಪಿಎಂ ಕ್ಕೆ ಹಣಮರೆಡ್ಡೆಪ್ಪ ಪಿ.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಮಮದಾಪೂರ ಕಾಲೋನಿಯ ಸರಕಾರಿ ಹಿರಿಯ ಪ್ರಥಮಿಕ ಶಾಲೆಯ ಹತ್ತಿರ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಸಾಯಬಣ್ಣ ತಂದೆ  ಭೀಮರಾಯ ನಾಟೇಕಾರ ವ|| 40 ವರ್ಷ ಜಾ|| ಕಬ್ಬಲಿಗ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಸಾ|| ಗಂಗಾ ನಗರ  ಶಹಾಪೂರ ಈತನಿಂದ ನಗದು ಹಣ 1080/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 22/07/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8:00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 185/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 90/2019 ಕಲಂ 78[3] ಕೆಪಿ ಎಕ್ಟ:- ದಿನಾಂಕ 22/07/2019 ರಂದು 5.15 ಪಿ.ಎಮ್.ಕ್ಕೆ ಶಿರವಾಳ ಗ್ರಾಮದ ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1840=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5.15 ಪಿಎಮ್ ದಿಂದ 6.15 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 07.45 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.50 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 90/2019 ಕಲಂ 78[3] ಕೆ.ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 26/2019 ಕಲಂ 379 ಐ.ಪಿ.ಸಿ:- ದಿನಾಂಕ: 22/07/2019 ರಂದು 00:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ದೌಲತ ಕುರಿ ಎನ್ ಕೆ ಪಿ.ಐ ಸಿಇಎನ್ ಪೊಲೀಸ್ ಠಾಣೆ ಯಾದಗಿರಿ ಇವರು ಠಾಣೆಗೆ ಬಂದು  ವರಧಿ  ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:21/07/2019 ರಂದು 11:00 ಪಿ ಎಂ ಕ್ಕೆ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ ಶ್ರೀ ಶಿಮಂತ ಸಿಂಘೆ ಹೆಚ್ಸಿ-141, ಶ್ರೀ ಶಪಿ ಹೆಚ್ಸಿ-97, ರವೊಂದಿಗೆ ನಾರಾಯಣಪೂರ ಪೊಲೀಸ್ ಠಾಣೆಯಲ್ಲಿದಾಗ ಪೊಲೀಸ್ ಬಾತ್ಮಿದಾರರಿಂದ ನಮಗೆ ತಿಳಿದು ಬಂದ ಮಾಹಿತಿ ಬಂದಿದ್ದೆನೆಂದರೆ ಕೃಷ್ಣಾನದಿ ತೀರದಿಂದ ಒಂದು ಟಿಪ್ಪರ ನಂ. ಕೆಎ-36  ಬಿ-5734 ನೇದ್ದರ ಚಾಲಕನು ತನ್ನ ಟಿಪ್ಪರದಲ್ಲಿ ಕೃಷ್ಣಾ ನದಿ ತೀರದಿಂದ ಮರಳನ್ನು ಕಳ್ಳತನದಿಂದ ಟಿಪ್ಪರದಲ್ಲಿ ತುಂಬಿಕೊಂಡು ಅಕ್ರಮವಾಗಿ ನಾರಾಯಣಪೂರ ಕಡೆಗೆ ಸಾಗಿಸುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ನಾರಾಯಣಪೂರ ಠಾಣೆಯ ಶ್ರೀ ಚಿದಾನಂದ ಕಾಸಪ್ಪಗೋಳ ಪಿ.ಎಸ್.ಐ ಮತ್ತು ನಾರಾಯಣಪೂರ ಪೊಲೀಸ್ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ವಿಶ್ವನಾಥ ಪಿಸಿ-319 2) ಬಸವರಾಜ ಪಿಸಿ-417 ಇವರೆಲ್ಲರನ್ನು ಕರೆದುಕೊಂಡು ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-0065 ನೇದ್ದರಲ್ಲಿ ಹೋರಟು ನಾರಾಯಣಪೂರ ಚೆಕ್ಕಪೊಸ್ಟ ಹತ್ತಿರ ನಿಸರ್ಗ ದಾಬಾದ ಹತ್ತಿರ 11:20 ಪಿ.ಎಂ.ಕ್ಕೆ ಹೋಗಿ ನಿಂತುಕೊಂಡಾಗ 11:30 ಪಿ.ಎಂ.ಕ್ಕೆ ನಾರಾಯಣಪೂರ ಚೆಕ್ಕಪೊಸ್ಟ ಕಡೆಯಿಂದ ಒಂದು ಟಿಪ್ಪರ್ ಮರಳು ತುಂಬಿಕೊಂಡು ಬರುತ್ತಿದ್ದದ್ದನ್ನು ನೋಡಿ ಸದರಿ ಟಿಪ್ಪರ ಚಾಲಕನಿಗೆ ಕೈ ಮಾಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ ನಮ್ಮ ಪೊಲಿಸ್ ಜೀಪನ್ನು ನೋಡಿ  ಟಿಪ್ಪರ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋದನು. ಸದರಿ ಟಿಪ್ಪರ ಚಾಲಕನ ಹೆಸರು, ವಿಳಾಸ ಗೊತ್ತಾಗಿರುವುದಿಲ್ಲ. ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆಎ-36, ಬಿ-5734 ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಟಪ್ಪರ ಚಾಲಕನು ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಟಿಪ್ಪರದಲ್ಲಿ 13 ಘನ ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ 10400=00 ರೂ ಆಗುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲಿ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2019 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 125/2019 ಕಲಂ 279,337ಐಪಿಸಿ:-ದಿನಾಂಕ 22.07.2019 ರಂದು ಬೆಳಿಗ್ಗೆ 8.15 ಗಂಟೆಗೆ ಶ್ರೀ ರಾಜೇಂದ್ರ.ಎ.ಎಸ್.ಐ ಗುರುಮಠಕಲ ಪೊಲೀಸ್ ಠಾಣೆರವರು ಠಾಣೆಗೆ ಬಂದು ಒಂದು ದೂರು ವರದಿ ಹಾಜರಪಡಿಸಿದ್ದು,ಸದರಿ ದೂರು ವರದಿ ಸಾರಾಂಶವೇನೆಂದರೆ, ದಿನಾಂಕ.21.07.2019 ರ ರಾತ್ರಿ 11.00 ಗಂಟೆ ಸುಮಾರಿಗೆ ಇಟಕಲ ಕ್ರಾಸದಿಂದ ಹೈವೇ ರೋಡಿನ ಮೇಲೆ ಗಸ್ತು ಕರ್ತವ್ಯ ಮಾಡುತ್ತಾ ಚಪೇಟ್ಲಾ ಕ್ರಾಸ ಕಡೆಗೆ ಹೊರಟಾಗ ಗುರುಮಠಕಲ ಪಟ್ಟಣದ ಆನಂದ ಕಾಂಪ್ಲೆಕ್ಸ್ ಬಳಿ ಇರುವ ರೋಡ ಡಿವೈಡರ ಹತ್ತಿರ ಒಂದು ಆಟೋ ಪಲ್ಟಿಯಾಗಿ ಬಿದ್ದಿದ್ದು ಅಲ್ಲಿ ನೆರೆದಿದ್ದವರಿಗೆೆ ಏನಾಗಿದೆ ಅಂತ ವಿಚಾರಿಸಲಾಗಿ ಇಂದು ದಿನಾಂಕ.21.07.2019 ರಂದು ರಾತ್ರಿ 10.30 ಗಂಟೆಗೆ ಒಬ್ಬ ಆಟೋ ಚಾಲಕ ತನ್ನ ಆಟೋವನ್ನು ಕಂದಕೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಡಿವೈಡರಗೆ ಗುದ್ದಿ ಆಟೋ ಪಲ್ಟಿ ಮಾಡಿರುತ್ತಾನೆ. ಆತನಿಗೆ ಗಾಯವಾಗಿ ಕೆಳಗೆ ಬಿದ್ದಿದ್ದು ಮುಖಕ್ಕೆ, ಕೈಗೆ, ಕಾಲುಗಳಿಗೆ ತೆರಚಿದ ಗಾಯಗಳಾಗಿರುತ್ತವೆ ಅಂತ ತಿಳಿಸಿದರು. ಆತನ ಹೆಸರು, ವಿಳಾಸ ವಿಚಾರಿಸಲಾಗಿ ನರಸಪ್ಪ ತಂದೆ ಸಾಬಣ್ಣ ಸಾ: ಕಂದಕೂರ ಅಂತ ಗೊತ್ತಾಗಿರುತ್ತದೆ ಸದರಿ ಆಟೋ ಪಲ್ಟಿ ಮಾಡಿದ ವ್ಯಕ್ತಿಯು ಎಲ್ಲಿಗೆ ಹೋಗಿರುತ್ತಾನೆ ಅಂತ ಗೊತ್ತಾಗಿರುವದಿಲ್ಲ. ಕಾರಣ ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಡಿವೈಡರಗೆ ಗುದ್ದಿ ಆಟೋ ಪಲ್ಟಿ ಮಾಡಿ ಗಾಯಗೊಂಡು ದು:ಖಪತನಾದ ಸದರಿ ಆಟೋಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.ಅಂತ ನೀಡಿದ ದೂರು ಅಜರ್ಿ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.125/2019 ಕಲಂ.279,337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
   
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 126/2019 ಕಲಂ:279,337,338 ಐಪಿಸಿ:-ದಿನಾಂಕ 22.07.2019 ರಂದು 1-45 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರ, ಗುರುಮಠಕಲ್ ದಿಂದ ಎಮ್.ಎಲ್.ಸಿ ಇದೆ ಅಂತಾ ಫೋನ್ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಸದರಿ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪಡೆದುಕೊಂಡು ನಂತರ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರ ಸೇಲ್ವಂ ತಂದೆ ಪೆರಿಯಾರಪ್ಪನ ವಯ:42 ವರ್ಷ, ಜಾ;ಕಬ್ಬಲಿಗ ಉ: ಪಾಪಡ ಮಾರಾಟ ಸಾ: ಮದುರೈ ತಮಿಳುನಾಡು ರಾಜ್ಯ  ಹಾ:ವ; ಕೋಡ್ಲಾ ತಾ: ಸೇಡಂ.ಜಿ: ಕಲಬುರಗಿ ಈತನನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ.22.07.2019 ರಂದು ಫಿಯರ್ಾದಿ ತನ್ನ ಮೋಟಾರ ಸೈಕಲ ನಂ.ಕೆ.ಎ-32 ಇ.ಎಮ್.-8045  ಹೀರೋ ಸ್ಪ್ಲೆಂಡರ ಪ್ಲಸ ನೇದ್ದರ ಮೇಲೆ ಮದ್ಯಾನ್ಹ 12.30. ಗಂಟೆಗೆ ಎಮ.ಟಿ.ಪಲ್ಲಿ ಗ್ರಾಮದ ಕಡೆಯಿಂದ ದುಗನೂರ ಮಾರ್ಗವಾಗಿ ಕೋಡ್ಲಾ ಗ್ರಾಮಕ್ಕೆ ಹೊರಟಿರುವಾಗ ಎಂ.ಟಿ.ಪಲ್ಲಿಯಿಂದ 1 ಕಿ.ಮೀ ದೂರದ ಅಂತರದಲ್ಲಿ ರೋಡಿನ ಮೇಲೆ ದುಗನೂರ ಗ್ರಾಮದ ಕಡೆಯಿಂದ ಎದುರಗಡೆ ಒಬ್ಬ ವ್ಯಕ್ತಿ ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಯ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿಪಡಿಸಿದನು. ಅಪಘಾತದಲ್ಲಿ ಫಿಯರ್ಾದಿಗೆ ಎಡಕಾಲತೊಡೆ ಮುರಿಯುವಂತೆ ಮಾಡಿ.ಎಡಕಾಲ ಮೊಣಕಾಲಿಗೆ ರಕ್ತಗಾಯ ಮಾಡಿ ಎಡಕೈ ಮೊಣಕೈಗೆ ತೆರಚಿದ ಗಾಯಗೊಳಿಸಿ ದು:ಖಪತ:ಗೊಳಿಸಿದ ಭಾರಿ ಹಾಗೂ ಸಾಧಾ ಸ್ವರೂಪದ ಗಾಯಗೊಳಿಸಿದ ಶಿವಪ್ಪ ತಂದೆ ಭೀಮಣ್ಣ ಸಾ: ಬಿಲಾಕಲ್ ತಾ; ಸೇಡಂ. ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 126/2019 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!