ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-07-2019

By blogger on ಶನಿವಾರ, ಜುಲೈ 20, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-07-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 77/2019 ಕಲಂ 457. 380 :- ನರಸಪ್ಪ ತಂದೆ ಬಸವರಾಜ ಬಳಿಚಕ್ರ ವ|| 29 ವರ್ಷ ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಸೈದಾಪೂರ ತಾ|| ಜಿ|| ಯಾದಗಿರಿ ಇದ್ದು  ನಾನು ಈಗ್ಗೆ ಸುಮಾರು 5 ವರ್ಷಗಳಿಂದ ಸೈದಾಪೂರದ ಬಸವೇಶ್ವರ ಚೌಕ ಹತ್ತಿರ ಇರುವ ಬಾಳಪ್ಪ ಕಂಬಾರ ಇವರ ಮನೆ (ಶಟರನ್ನು)  ಬಾಡಿಗೆ ಪಡೆದುಕೊಂಡು ಆ ಅಂಗಡಿಯಲ್ಲಿ  ನಾನು ಮೋಬೈಲ್  ವ್ಯಾಪಾರ ಮಾಡಿಕೊಂಡು ಇರುತ್ತೇನೆ.  ಆ ಅಂಗಡಿಯನ್ನು ನಾನು ಮತ್ತು ನನ್ನ ತಮ್ಮ ನಿರಂಜನ್ ಇಬ್ಬರು ಕೂಡಿ ನೋಡಿಕೊಂಡು ಹೋಗುತ್ತೇವೆ.ದಿನಾಂಕ: 18-07-2019 ರಂದು ಬೆಳಿಗ್ಗೆ 08-30 ಗಂಟೆಗೆ ನಾನು ನಮ್ಮ ಮೋಬೈಲ್ ಅಂಗಡಿಯನ್ನು ತರೆದು ವ್ಯಾಪಾರ ಮಾಡಿಕೊಂಡು  ಅಂದು ವ್ಯಾಪಾರ ಮಾಡಿ ರಾತ್ರಿ 10-00 ಗಂಟೆಗೆ ನಾನು ಮತ್ತು ನನ್ನ ತಮ್ಮ ನಿರಂಜನ್ ಇಬ್ಬರು ಕೂಡಿ ನಮ್ಮ ಅಂಗಡಿಯನ್ನು ಮುಚ್ಚಿಕೊಂಡು  ಹೋಗಿದ್ದೆವು. ದಿನಾಂಕ: 19-07-2019 ರಂದು ಬೆಳಿಗ್ಗೆ 05-30 ಗಂಟೆ ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿ ಪೂರಿ ಮಾರುವ ಬಾಬು ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ನಿಮ್ಮ ಶಟರ ಯಾಕೆ ಅರ್ಧ ತೆರದಂತೆ ಆಗಿದೆ ಯಾಕ ನೋಡ ಬಾ ಅಂತಾ ತಿಳಿದ್ದರಿಂದ ಆಗ ನಾನು ಮತ್ತು ನಮ್ಮ ತಮ್ಮ ನಿರಂಜನ್ ಹೋಗಿ ನೋಡಲಾಗಿ ನಮ್ಮ ಅಂಗಡಿಯ ಶಟರ ಅರ್ಧ ತೆರೆದಿದ್ದು ಕಳುವಾಗಿದ್ದು ಇರುತ್ತದೆ.. ಅಂಗಡಿಯಲ್ಲಿ  ಮಾರಾಟ ಮಾಡಲು ಇಟ್ಟ ಮೋಬೈಲಗಳು ಅವುಗಳ ಅಂದಾಜು ಕಿಮ್ಮತ್ತು 20000=00 ಮತ್ತು ಮೋಬೈಲ್ ಅಂಗಡಿಯಲ್ಲಿ ಇದ್ದ ಹಣ 4000=00 ರೂಪಾಯುಗಳು ಹೀಗೆ ಒಟ್ಟು  24000=00 ರೂಪಾಯಿಗಳು ಕಳ್ಳತನವಾಗಿದ್ದು. ದಿನಾಂಕ 18-07-2019 ರಂದು ರಾತ್ರಿ  10 ಗಂಟೆಯಿಂದ ದಿನಾಂಕ: 19-07-2019 ರಂದು ಬೆಳೆಗ್ಗೆ 5-00 ಗಂಟೆಯ ಅವಧಿಯಲ್ಲಿ  ಯಾರೋ ಕಳ್ಳರು ನಮ್ಮ ಅಂಗಡಿಯ ಶಟರನ್ನು ಅರ್ಧಕ್ಕೆ ತೆಗೆದು ಅಂಗಡಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ತಾವು ನಮ್ಮ ಅಂಗಡಿಯನ್ನು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾಧಿ. 

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 25/2019 ಕಲಂ 87 ಕೆ.ಪಿ. ಕಾಯಿದೆ:- ದಿನಾಂಕ:20/07/2019 ರಂದು 6:10 ಪಿಎಮ್ಕ್ಕೆ  ಪಿರ್ಯಾದಿಯವರು ಠಾಣೆಯಲ್ಲಿದ್ದಾಗ ನಾರಾಯಣಪೂರ ಗ್ರಾಮದ ಬೊರಕಾ ವಿದ್ಯುತ್ ಕಂಪನಿಯ ಕ್ಯಾನಲ್ ಗೋಡೆಯ ಪಕ್ಕದಲ್ಲಿ ಸರಕಾರಿ ಖುಲ್ಲಾಜಾಗೆಯಲ್ಲಿ ಬೆಳೆದ ಜಾಲಿಕಂಟಿಯ  ಮರೆಯಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ 1) ಬಸವರಾಜ ಪಿಸಿ-417 2) ವಿಶ್ವನಾಥ ಪಿಸಿ-319 3) ರವಿಕಿರಣ ಪಿಸಿ-308 ರವರಿಗೆ ಸದರಿ ವಿಷಯವನ್ನು ತಿಳಿಸಿ ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು 6:50 ಪಿ.ಎಂ ಕ್ಕೆ ದಾಳಿಮಾಡಿ ಇಸ್ಪೆಟ ಆಟ ಆಡುತ್ತಿದ್ದ 1)ಸುಭಾಶ ತಂದೆ ಕೃಷ್ಣರಾವ ಕುಲಕಣರ್ಿ ವ:30 ವರ್ಷ ಉ:ವ್ಯಾಪಾರ ಜಾ:ಬ್ರಾಹ್ಮಣ ಸಾ:ನಾರಾಯಣಪೂರ 2) ಬಂದೇನವಾಜ ತಂದೆ ಮೈಹಿಬೂಬಸಾಬ ಮಕಾಂದರ ವ:26 ವರ್ಷ ಉ:ವ್ಯಾಪಾರ ಜಾ:ಮುಸ್ಲಿಂ ಸಾ:ನಾರಾಯಣಪೂರ 3) ದಾವಲಸಾಬ ತಂದೆ ಇಬ್ರಾಹಿಂಸಾಬ ನಾರಾಯಣಪೇಠ ವ:30 ವರ್ಷ ಉ:ಡ್ರೈವರ ಜಾ:ಮುಸ್ಲಿಂ ಸಾ:ನಾರಾಯಣಪೂರ 4) ರಮಜಾನ ತಂದೆ ದಸ್ತಗೀರಸಾಬ ಗುಡ್ನಾಳ ವ:28 ವರ್ಷ ಉ:ಡ್ರೈವರ ಜಾ:ಮುಸ್ಲಿಂ ಸಾ:ನಾರಾಯಣಪೂರ  ರವರಿಗೆ ಹಿಡಿದುಕೊಂಡು ಸದರಿಯವರಿಂದ 750/- ರೂ ನಗದು ಹಣ ಹಾಗೂ ಕಣದಲ್ಲಿ ಇದ್ದ 200/- ರೂ ಸೇರಿ ಒಟ್ಟು ನಗದು ಹಣ 950/- ರೂ ಹಾಗೂ 52 ಎಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿದ್ದು 6:50 ಪಿ.ಎಂ ದಿಂದ 7:50 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು ಪೂರೈಸಿ ಆರೋಪಿ, ಮುದ್ದೆಮಾಲು ಹಾಗೂ ಜಪ್ತಿಪಂಚನಾಮೆಯೊಂದಿಗೆ 8:05 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು ಈ ಜ್ಞಾಪನ ಪತ್ರ ನೀಡುತ್ತಿದ್ದು ಸದರಿ ಆರೋಪಿತರ ಮೇಲೆ ಕಾನೂನು  ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರ ಹಾಗೂ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 25/2019 ಕಲಂ 87 ಕೆ ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                                         
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 183/2019 ಕಲಂ 143, 147, 326, 323, 324, 504, 506 ಸಂಗಡ 149 ಐ.ಪಿ.ಸಿ:- ದಿನಾಂಕ: 20-07-2019 ರಂದು 6:15 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ಶೇಖಪ್ಪ ತಂದೆ ಬಸಪ್ಪ ಹಡಪದ ವಯ: 31 ವರ್ಷ ಜಾ: ಹಡಪದ ಉ: ಒಕ್ಕಲುತನ ಸಾ: ಗುಂಡಗುತರ್ಿ ತಾ: ಶಹಾಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದೇನಂದರೆ  ನಮ್ಮೂರ ಸೀಮಾಂತರದಲ್ಲಿ ನಮ್ಮ ಸಂಭಂದಿ ಹಣಮಂತ ಇವರ ಹೊಲ ಸವರ್ೆ ನಂ.147 ರಲ್ಲಿ 1 ಎಕರೆ ಜಮೀನನ್ನು ಲೀಜ ಹಾಕಿಕೊಂಡಿದ್ದು ನಿನ್ನೆ ದಿನಾಂಕ: 19-07-2019 ರಂದು ಮಳೆ ಬಂದಿದ್ದರಿಂದ  ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ಸದರಿ  ಹೊಲಕ್ಕೆ ಹೋಗಿದ್ದೆನು ನಮ್ಮ ಇನ್ನೊಬ್ಬ ಸಹೋದರ ಸಂಭಂದಿಕರಾದ ಗೋಪಾಲ ತಂದೆ ಲಚಮಪ್ಪ ಹಡಪದ ಇವರದ್ದು ಅದೇ ಜಮೀನಿಗೆ ಹೊಂದುಕೊಂಡು ಅವರ ಹೊಲವಿದ್ದು ಅವರು ಅದೇ ಹೊಲದಲ್ಲಿ ಮನೆಮಾಡಿಕೊಂಡು ವಾಸವಾಗಿದ್ದಾರೆ. ನಾನು ಸದರಿ ನನ್ನ ಹೊಲದಲ್ಲಿ ನೋಡಲಾಗಿ ಗೋಪಾಲ ಹಡಪದ ಇವರು ತಮ್ಮ ಹೊಲದಲ್ಲಿನ ಮಳೆ ನೀರನ್ನು ನಮ್ಮ ಹೊಲದ ಒಡ್ಡನ್ನು ಕಡಿದು ನಮ್ಮ ಹೊಲದಲ್ಲಿ ಹರಿಯುವಂತೆ ಮಾಡಿದ್ದನು ನೀರು ಹರಿಯುತ್ತಿತ್ತು. ಅದನ್ನು ನೋಡಿದ ನಾನು ಆತನನ್ನು ಕರೆದು ಒಡ್ಡನ್ನು ಹೊಡೆದು ನೀರು ಯಾಕೆ ಬಿಟ್ಟಿದ್ದಿ ಈ ರೀತಿ ಮಾಡಿದರೆ ಹೇಗೆ ಪಕ್ಕದಲ್ಲಿ ನಿಮ್ಮ ತಮ್ಮನ ಹೊಲದ ಮೂಲಕ ನೀರು ಕಳಿಸು ಅಂತಾ ಹೇಳಿದೆನು. ಮತ್ತು ಹೊಡೆದ ಒಡ್ಡನ್ನು ನಾನು ಕೈಯಿಂದ  ಸರಿ ಮಾಡುತ್ತಿರುವಾಗ  ಗೋಪಾಲ ಈತನು ತನ್ನ ಕೈಯಲ್ಲಿದ್ದ ಸಲಿಕೆಯಿಂದ ನನ್ನ ಹಿಂದೆಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದನು. ನಾನು ಆಗ ಕೇಳಗೆ ಬಿದ್ದಾಗ ಮತ್ತೆ ಆತನು ಅದೇ ಸಲಿಕೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ ಅವರ ಮನೆಯವರಾದ ಆತನ ಮಗ ಲಚಮಣ್ಣ , ಆತನ ಹೆಂಡತಿ ತಾಯಮ್ಮ, ಮಗಳು ಅನಿತಾ ತಂದೆ ಗೋಪಾಲ, ಮತ್ತು ಶಿಲ್ಪಾ ತಂದೆ ಗೋಪಾಲ ಎಲ್ಲರೂ ಬಂದು ಈ ಸೂಳೆ ಮಗಂದು ಬಹಳ ಆಗಿದೆ ಹೊಡಿರಿ ಅಂತಾ ಕೈಯಿಂದ ಕಾಲಿನಿಂದ ನೆಲಕ್ಕೆ ಹಾಕಿ ಹೊಡೆದಿದ್ದು ಅದರಿಂದ ನನಗೆ ಎಡಗೈ ಮುಂಗೈಗೆ ಬಲಗೈಗೆ ಮುಂಗೈಗೆ ಎರಡೂ ಕಾಲುಗಳಿಗೆ ಗುಪ್ತ ಗಾಯಗಳಾಗಿವೆ. ನಾನು ಚೀರಾಡುತ್ತಿರುವಾಗ ಅಲ್ಲೇ ಹೊರಟಿದ್ದ ನಮ್ಮೂರ ಮಲ್ಲಪ್ಪ ತಂದೆ ಸಾಬಣ್ಣ ನಾಯ್ಕೋಡಿ ಮತ್ತು ಗುಡೆಸಾ ತಂದೆ ಅಲ್ಲಿಸಾಬ ಪಿಂಜಾರ ಇಬ್ಬರೂ ಬಂದು ಏ ಅವನಿಗೇಕೆ ಹೊಡೆಯುತ್ತೀರಿ ಅಂತಾ ಹೇಳಿ ಜಗಳ ಬಿಡಿಸಿಕೊಂಡಿರುತ್ತಾರೆ. ಆಗ ಸದರಿಯವರೆಲ್ಲರೂ ಮಗನೇ ನಮ್ಮ ತಂಟೆಗೆ ಬಂದರೆ ಇದೇ ಗತಿ ಇನ್ನೊಮ್ಮೆ ನಮ್ಮ ತಂಡೆಗೆ ಬಂದರೆ ಅಷ್ಟ ಅಂತಾ ನನಗೆ ಜೀವದ ಭಯ ಹಾಕಿರುತ್ತಾರೆ ನಾನು ಅಲ್ಲಿಂದ ಮೆನೆಗೆ ಬಂದು ನಮ್ಮ ತಮ್ಮ ನಾದ ಹೊನ್ನಪ್ಪ ತಂದೆ ಬಸಪ್ಪ ಹಡಪದ ಈತನಿಂದಿಗೆ  ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರಕ್ಕೆ ಸೇರಿಕೆಯಾಗಿದ್ದುಇದೆ ನಾನು ನೆನ್ನೆ ಪೊಲೀಸರು ಬಂದಾಗ ನಮ್ಮ ಮನೆಯವರನ್ನು ವಿಚಾರ ಮಾಡಿ ಕೇಸು ಕೊಡುತ್ತೇನೆಂದು ಹೇಳಿದ್ದು ಅದರಂತೆ ನಾನು ನಮ್ಮ ತಂದೆ ಮತ್ತು ಮನೆಯವರನ್ನು ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನಮ್ಮ ಹೊಲದ ಒಡು ಕೆಡಿಸಿದ್ದರ ವಿಷಯವಾಗಿ ಜಗಳ ತೆಗೆದು ಸಲಿಕೆಯಿಂದ ಹೊಡದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಸ್ವೀಕರಿಸಿಕೊಂಡು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 183/2019 ಕಲಂ. 143, 147, 326, 323, 324, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!