ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-07-2019

By blogger on ಶುಕ್ರವಾರ, ಜುಲೈ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-07-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 61/2019 ಕಲಂ; 506 ಐಪಿಸಿ:-ದಿನಾಂಕ; 19/07/2019 ರಂದು 6-15 ಪಿಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಾದ ಶ್ರೀ ಅನಂತರೆಡ್ಡಿ ಪಿಸಿ-168 ಯಾದಗಿರಿ ನಗರ ಪೊಲೀಸ ಠಾಣೆ ರವರು ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ದಿನಾಂಕ; 13/06/2019 ರಂದು ರಾತ್ರಿ 2-00 ಎಎಮ್ ಸುಮಾರಿಗೆ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ಕುಟುಂಬದವರು ಆಡ್ಮಿಟ್ ಇದ್ದು, ಇಲ್ಲಿಗೆ ಭೇಟಿ ನೀಡಿ ವಾಪಾಸ ಮನೆಗೆ ಹೋಗುವಾಗ ಚಾಮಾ ಲೇಔಟ್  ಹತ್ತಿರ ಹಿಂದಿನಿಂದ ಆಟೋ ಬಂದು ಆಟೋದಲ್ಲಿ ಜೋರಾಗಿ ಕಿರುಚಾಡುತ್ತಿದ್ದರು. ನಾನು ಹೆದರಿ ಮನೆಗೆ ಹೋದೆನು. ನಂತರ ಒಂದು ಗಂಟೆಯಾದರು ನಿದ್ದೆ ಬರದೇ ಇದ್ದಾಗ ನೋಡಲು ಹೊರಗೆ ಬಂದೆ ನಮಗೆ ನಾಜೀಮ್ ಮೇಲೆ ಅನುಮಾನ ಇರುವುದರಿಂದ ಅವರು ಲಿಜಿಗೆ ತೆಗೆದುಕೊಂಡ ಶಾಸ್ತ್ರೀಚೌಕ ಹತ್ತಿರದ ಪೆಟ್ರೋಲ ಬಂಕನಲ್ಲಿ ನೋಡಿದಾಗ ಸಾಲು-ಸಾಲು ಆಟೋ ನಿಂತಿದ್ದು ಕೆಳಗಡೆ 7-8 ಜನರು ಮಲಗಿಕೊಂಡಿದ್ದರು. ಆಗ ಸಮಯ 3-00 ಎಎಮ್ ಆಗುತ್ತಿತ್ತು. ಈ ಹಿಂದೆ ನಾಜೀಮ ಇವರ ಕಾರ ನಂಬರ ಕೆಎ.33.ಎನ್. 6450 ನೇದ್ದು ಇದ್ದು ನಾನು ರಸ್ತೆ ಸೈಡಿಗೆ ಇದ್ದಾಗ ಈ ಕಾರ ನಿಸಾರ ಈತನು ಸ್ಪೀಡಾಗಿ ಮೈಮೇಲೆ ತಂದಾಗ ನಾನು ಹಿಂದಕ್ಕೆ ಹೆಗರಿದೆನು. ನಾಸೀರ ಮತ್ತು ನಾಜೀಮ 1 ಕೋಟಿ ಹೋಗಲಿ ನಿನ್ನ ಜೀವ ತೆಗೆಯುತ್ತೇವೆ ಅಂತಾ ಹೇಳುತ್ತಾರೆ. ಈ ಹಿಂದಿನ ಕೇಸ ವಾಪಾಸ ತೆಗೆದುಕೊಳ್ಳುವ ಸಲುವಾಗಿ ಬೇರೆಯವರಿಂದ ಹೇಳಿಸುತ್ತಾರೆ. ನಮಗೆ ಜೀವ ಭಯವಿರುತ್ತದೆ ಕಾರಣ ಸೂಕ್ತ ತನಿಖೆ ನಡೆಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.61/2019 ಕಲಂ.506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.  

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 61/2019 ಕಲಂ: 87 ಕೆ.ಪಿ ಎಠ್ಟಿ್:- ದಿನಾಂಕ: 19/07/2019 ರಂದು 5 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ರವರು ಹಾಜರಾಗಿ 5 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 19/07/2019 ರಂದು ದೇವಮ್ಮ ಆಯಿ ಗುಡಿ ಮುಂದಿನ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಚಂದ್ರಶೇಖರ ತಂದೆ ಸಾಹೇಬಗೌಡ ಮಾಲಿಪಾಟಿಲ್, ವ:53, ಜಾ:ಕುರುಬರ ಸಾ:ಹೊರಟೂರು ಇವನ ಹತ್ತಿರ 520=00 ರೂ. ನಗದು ಹಣ ಮತ್ತು ಕೈಯಲ್ಲಿ 19 ಇಸ್ಪೇಟ್ ಎಲೆಗಳು ಇದ್ದವು, 2) ಚಂದ್ರು ತಂದೆ ನೇಮಜಿ ರಾಠೋಡ, ವ:35, ಜಾ:ಲಮ್ಮಾಣಿ, ಉ:ಕೂಲಿ ಸಾ:ಉಳ್ಳೆಸೂಗೂರು ತಾಂಡಾ ಇವನ ಹತ್ತಿರ ನಗದು ಹಣ 300=00 ರೂ., 3) ಮಲ್ಲಯ್ಯ ತಂದೆ ರಂಗಯ್ಯ ಗುತ್ತೆದಾರ, ವ:35, ಜಾ:ಇಳಿಗೇರ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ ನಗದು ಹಣ 280=00 ರೂ, 4) ಮೋಹನ ತಂದೆ ತೇಜಪ್ಪ ಚವ್ಹಾಣ, ವ:35, ಜಾ:ಲಮ್ಮಾಣಿ ಉ:ಒಕ್ಕಲುತನ ಸಾ:ಉಳ್ಳೆಸೂಗುರು ತಾಂಡಾ ಇವನ ಹತ್ತೀರ ನಗದು ಹಣ 360=ರೂ, ಮತ್ತು 5) ಬೀರಪ್ಪ ತಂದೆ ಚಂದ್ರಾಮಪ್ಪ ಪೂಜಾರಿ, ವ:44, ಜಾ:ಕುರುಬರ, ಉ:ಒಕ್ಕಲುತನ ಸಾ:ಹೊರಟೂರು ಈತನ ಹತ್ತಿರ ನಗದು ಹಣ 325=00 ರೂ. ಇಸ್ಪೀಟ ಆಡುತ್ತಿದ್ದ ಸ್ಥಳದಲ್ಲಿ ಎಲ್ಲರ ಮದ್ಯದ ನಗದು ಹಣ 320=00 ರೂ. ಹಾಗೂ 33 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಹೀಗೆ ಒಟ್ಟು 2105=00 ರೂ.ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಸದರಿ 5 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲ ಮಾಡಿಕೊಳ್ಳಲು ಅನುಮತಿ ನೀಡಿದ್ದರಿಂದ 7-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 61/2019 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                                                                                        
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 112/2019 ಕಲಂ: 279, 337, 338 ಐಪಿಸಿ:-ದಿನಾಂಕ 18/07/2019 ರಂದು ಫಿರ್ಯಾಧಿ ಮತ್ತು ಇನ್ನೊಬ್ಬ ಇಬ್ಬರೂ ಕೂಡಿಕೊಂಡು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಮ್ಮ ಹೊಲದಲ್ಲಿ ಇರುವ ಹೆಸರು ಬೆಳೆಗೆ ಕ್ರಿಮಿನಾಶಕ ಔಷಧಿಯನ್ನು ಹೊಡೆದು ಮರಳಿ ರಾತ್ರಿ 9-00 ಗಂಟೆಗೆ ತಮ್ಮ ಮನೆಗೆ ಹೋಗುವ ಕುರಿತು ಆಶನಾಳ ತಾಂಡಾ-ರಾಮಸಮುದ್ರ ತಾಂಡಾ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಎದುರುಗಡೆ ರಾಮಸಮುದ್ರ ತಾಂಡಾ ಕಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-33-ಜೆ-6328 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿಗೆ ಮತ್ತು ಇನ್ನೊಬ್ಬನಿಗೆ ಹಾಗೂ ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ ಅಂತಾ ಗುನ್ನೆ ದಾಖಲಾಗಿರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 37/2019  ಕಲಂ 279, 337, 338, 304(ಎ) ಐಪಿಸಿ:-ದಿನಾಂಕ 02/06/2019 ರಂದು ಬೆಳಿಗ್ಗೆ 7-15 ಎ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ  ಗಾಯಾಳು ಪಿಯರ್ಾದಿ ಕುಮಾರಿ  ಆಯೇಷಾ ತಂದೆ ಫಾರುಕ್ ಮಹಿಮೂದ  ವಯ;28 ವರ್ಷ, ಜಾ;ಮುಸ್ಲಿಂ, ಉ;ಪ್ರೊಫೆಸರ್, ಸಾ;ಮೋಮಿನಪುರ, ಕಲಬುರಗಿ, ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದನ್ನು ಸಮಯ 8-15 ಎ.ಎಂ. ದಿಂದ 9-15 ಎ.ಎಂ ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂಧರೆ ನಾನು ಕಲಬುರಗಿಯ ಒಂದು ಕಾಲೇಜಿನಲ್ಲಿ ಪ್ರೊಫೆಸರ್ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮ ಸಂಬಂಧಿ ಮಾಮನವರಾದ ಶ್ರೀ ಅಹ್ಮದ್ ಫಯಾಜುದ್ದೀನ್ ತಂದೆ ಯಾಕುಬ್ ಅಲಿ ಮನಿಯಾರ್ ಇವರು ನಿನ್ನೆ ದಿನಾಂಕ 01/06/2019 ರಂದು ಸಾಯಂಕಾಲ ನಮ್ಮ ಮನೆಗೆ ಬಂದು ನಾಳೆ ಗದ್ವಾಲ್ದಲ್ಲಿ ನಮ್ಮ ಸಮಾಜದ ಗುರುಗಳಿದ್ದು ಅವರಿಗೆ ಭೇಟಿಯಾಗಿ ಬರೋಣ ಅಂದಾಗ ಅದಕ್ಕೆ ನಾನು ಮತ್ತು ನನ್ನ ತಾಯಿ ಇಬ್ಬರು ಅವರೊಂದಿಗೆ ಒಪ್ಪಿಕೊಂಡೆವು. ಹೀಗಿದ್ದು ದಿನಾಂಕ 02/06/2019 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನಮ್ಮ ಮಾಮನವರು ಅವರ ತಂಗಿಯಾದ ನಸೀಮಾ ತಂದೆ ಯಾಕುಬ್ ಅಲಿ ಮನಿಯಾರ್ ಇವರಿಗೆ ಕರೆದುಕೊಂಡು ಕಾರ್ ನಂಬರ ಕೆಎ-36, ಎನ್-4669 ನೇದ್ದರಲ್ಲಿ ಬಂದು ನಡೀರಿ ಗದ್ವಾಲ್ಗೆ ಹೋಗೋಣ ಅಂತಾ ನಮ್ಮ ಮನೆ ಹತ್ತಿರ ಬಂದಾಗ ನಾನು ಮತ್ತು ನನ್ನ ತಾಯಿ ತಸ್ಲೀಮಾರವರು  ಅದೇ ಕಾರಿನಲ್ಲಿ ಕುಳಿತೆವು. ನಾವು ಹೊರಟ ಕಾರಿನ ಚಾಲಕ ನಮಗೆ ಈ ಮೊದಲೇ ಪರಿಚಯವಿದ್ದು ಆತನ ಹೆಸರು ಮಹ್ಮದ್ ಹಯಾಜ್ ತಂದೆ ಮಹಮದ್ ಇಬ್ರಾಹಿಂ ಶೇಕ್ ಸಾ;ಶಹಾಬಾದ್ ಇರುತ್ತಾನೆ. ನಾವು ಕಲಬುರಗಿಯಿಂದ ಕಾರಿನಲ್ಲಿ ಹೊರಟೆವು ಮಾರ್ಗ ಮದ್ಯೆ ಯಾದಗಿರಿ ಸಮೀಪ ಅಲ್ಲಿಪುರ ಕ್ರಾಸ್ ದಾಟಿದ ನಂತರ ನಮ್ಮ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ  ಕಾರಿನಲ್ಲಿದ್ದ ನಾವು ನಿದಾನವಾಗಿ ಹೋಗು ಅಂತಾ ಹೇಳಿದೆವು ಅದೇ ಸಮಯಕ್ಕೆ ಯಾದಗಿರಿ ಕಡೆಯಿಂದ ಬರುತ್ತಿದ್ದ ಒಬ್ಬ ಲಾರಿ ಚಾಲಕನು ಕೂಡ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಮ್ಮೆದುರಿಗೆ ಬರುತ್ತಿದ್ದು ನಾವುಗಳು ನೋಡು ನೋಡುತ್ತಿದ್ದಂತೆ ನಮ್ಮ ಕಾರಿನ ಚಾಲಕ ಮತ್ತು ಲಾರಿ ಚಾಲಕನ ನಿರ್ಲಕ್ಷ್ಯತನದಿಂದ ಒಂದಕ್ಕೊಂದು ಡಿಕ್ಕಿಕೊಟ್ಟುಕೊಂಡಾಗ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಾಲು ತೊಡೆಗೆ, ಸೊಂಟಕ್ಕೆ, ಎದೆಗೆ, ಕುತ್ತಿಗೆಗೆ, ಹೊಟ್ಟೆಗೆ ಗುಪ್ತಗಾಯವಾಗಿದ್ದು, ಕಾರಿನಲ್ಲಿದ್ದ ನನ್ನ ತಾಯಿ ತಸ್ಲೀಮಾ ಇವರಿಗೆ ತಲೆಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿ ಬೇವುಶ್ ಆಗಿದ್ದು ಅವರ ಬಲಗಾಲಿನ ಪಾದದ ಮೇಲೆ ಬಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ. ನಸೀಮಾ ಇವರಿಗೆ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಎಡಗೈಗೆ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು ಇರುತ್ತದೆ, ನಮ್ಮ ಮಾಮ ಅಹ್ಮದ್ ಫಯಾಜುದ್ದೀನ್ ಇವರಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯ, ಮುಖಕ್ಕೆ, ಕಣ್ಣುಗಳಿಗೆ ತರಚಿದ ರಕ್ತಗಾಯವಾಗಿ ಬೇವುಶ್ ಆಗಿರುತ್ತಾರೆ, ನಮ್ಮ ಕಾರ್ ಚಾಲಕ ಮಹ್ಮದ್ ಹಯಾಜ್ ಇವರಿಗೆ ಎದೆಗೆ ಬಾರೀ ಗುಪ್ತಗಾಯವಾಗಿದ್ದು ಇರುತ್ತದೆ. ನಾನು ಕಾರಿನಿಂದ ಕೆಳಗೆ ಬಂದು ನೋಡಲಾಗಿ ನಮಗೆ ಅಪಘಾತ ಪಡಿಸಿದ ಲಾರಿ ಸ್ಥಳದಲ್ಲಿದ್ದು ಅದರ ನಂಬರ ಕೆಎ-34, ಬಿ-5467 ನೇದ್ದು ಇದ್ದು ಅದರ ಚಾಲಕನು ಕೂಡ ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಾಗರಾಜ ತಂದೆ ಮಾನಪ್ಪ ಅನೆಹೊಸುರ ಸಾ;ಉಪ್ಪೇರಿ, ತಾ;;ಲಿಂಗಸೂಗುರ ಅಂತಾ ತಿಳಿಸಿರುತ್ತಾನೆ ಈ ಘಟನೆ ಬಗ್ಗೆ ನಾನು ನಮ್ಮ ಸಂಬಂಧಿಯಾದ ಶ್ರೀ ಮಹ್ಮದ್ ಅಜರ್ ತಂದೆ ಮಹ್ಮದ್ ಫಯಾಜುದ್ದೀನ್ ಮನಿಯಾರ್ ಈತನಿಗೆ ತಿಳಿಸಿದಾಗ ಆತನು ನೀವು ಸಮೀಪದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಿ ನಾನು ಅಲ್ಲಿಗೆ ಬರುತ್ತೇನೆ ಅಂತಾ ತಿಳಿಸಿದನು.  ಸದರಿ ಘಟನೆಯು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ ಅಂದಾಜು 6-15 ಎ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರ ಹಳ್ಳಿ ಗೇಟ್ ಹತ್ತಿರ ಜರುಗಿದ್ದು, ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲೆಯ ಪೊಲಿಸರ ಹೈವೆ ಪೆಟ್ರೋಲ್ ವಾಹನ ಮತ್ತು 108 ಅಂಬುಲೆನ್ಸ್ ಸ್ಥಳಕ್ಕೆ ಬಂದಾಗ ಅವುಗಳಲ್ಲಿ ನಾವುಗಳು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಬಂದು ಸೇರಿಕೆ ಆಗಿರುತ್ತೇವೆ. ನಂತರ ಆಸ್ಪತ್ರೆಗೆ ಶ್ರೀ ಮಹಮದ್ ಅಜರ್  ಹಾಗು ಆತನ ಸಂಗಡ ಶ್ರೀ ಸೋಹಿಲ್ ತಂದೆ ಪಾಶಾಮಿಯಾ ಖಾನ್ ಸಾ;ಕಲಬುರಗಿ ಇವರು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ 6-15 ಎ.ಎಂ ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರ ಹಳ್ಳಿ ಗೇಟ್ ಹತ್ತಿರ ಕಾರ್ ನಂಬರ ಕೆಎ-36, ಎನ್-4669  ಮತ್ತು ಲಾರಿ ನಂಬರ ಕೆಎ-34, ಬಿ-5467 ನೇದ್ದರ ಇಬ್ಬರು ಚಾಲಕರುಗಳ ಅತೀವೇಗ ಮತ್ತು ಅಲಕ್ಷ್ಯತನದಿಂದ ಈ ಅಪಘಾತ ಜರುಗಿದ್ದು ಇಬ್ಬರು ಚಾಲಕರುಗಳ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಸಮಯ 8-15 ಎ.ಎಂ. ದಿಂದ 9-15 ಎ.ಎಂ ದ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ  9-30 ಎ.ಎಂ.ಕ್ಕೆ ಬಂದು  ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 37/2019 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ 18/07/2019 ರಂದು ರಾತ್ರಿ 8-30 ಪಿ.ಎಂ.ಕ್ಕೆ ಸನರೈಸ್ ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ ವಸೂಲಾಗಿದ್ದು ಇಂದು ದಿನಾಂಕ 19/07/2019 ರಂದು ಬೆಳಿಗ್ಗೆೆಮ್.ಎಲ್.ಸಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಈ ಕೇಸಿನ ಮೃತನ ಮಗನಾದ ಸಾಕ್ಷಿದಾರ ಶ್ರೀ ಮಹ್ಮದ್ ಅಜರ್ ರವರು ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ತನ್ನ ತಂದೆಯಾದ ಮಹ್ಮದ್ ಫಯಾಜುದ್ದೀನ್ ಇವರಿಗೆ  ದಿನಾಂಕ 02/06/2019 ರಂದು ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಆಸ್ಪತೆಯಿಂದ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ನಂತರ ಕಲಬುರಗಿಯ ಸನರಯಸ್ ಆಸ್ಪತೆಗೆ  ಕರೆದುಕೊಂಡು  ಬಂದು ಉಪಚಾರ ಕುರಿತು ಸೇರಿಕೆ  ಮಾಡಿದ್ದು ಇಲ್ಲಿಯವರೆಗೆ ಗಾಯಾಳು ಮಹದ್ಮ ಫಯಾಜುದ್ದೀನ್ ಇವರು ಉಪಚಾಋ ಪಡೆದುಕೊಂಡಿದ್ದು,  ಅಪಘಾತದಲ್ಲಾದ ಗಾಯಗಳ ಬಾಧೆಯಿಂದ ನಿನ್ನೆ ದಿನಾಂಕ 18/07/2019 ರಂದು ಸಾಯಂಕಾಲ 5-45 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕ್ರಮ ಜರುಗಿಸಿರಿ ಅಂತಾ ಪುರವಣಿ ಹೇಳಿಕೆ ನೀಡಿದ್ದು ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 154/2019 ಕಲಂ: 279, 337,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್:- ದಿನಾಂಕಃ 19/07/2019 ರಂದು 11-00 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿರುವ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀಮತಿ ಮಾನಮ್ಮ ಗಂಡ ಹಣಮಂತ ಸಂಗಟಿ ಸಾ: ಕುರುಬರಗಲ್ಲಿ ಸುರಪೂರ ಇವಳ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 19/07/2019 ರಂದು ಮುಂಜಾನೆ ನಮಗೆ ಪರಿಚಯದ ನಿಂಗಪ್ಪ ತಂದೆ ಬಸಣ್ಣ ಬಸಾಪೂರ ಸಾ: ಕಾಟಮನಳ್ಳಿ ಇವರು ನಮ್ಮ ಓಣಿಯಲ್ಲಿ ಬಂದು ತಮ್ಮ ಹತ್ತಿ ಬೆಳೆಯಲ್ಲಿ ಕಳೆ ತಗೆಯಲು ಕೂಲಿ ಕೆಲಸಕ್ಕೆ ಬರುವಂತೆ ಕೇಳಿಕೊಂಡಿದ್ದರಿಂದ ನಾನು ಕೆಲಸಕ್ಕೆ ಹೋಗಲು ತಯಾರಾದೇನು. ನನ್ನಂತೆ 1) ಅಂಬ್ರಮ್ಮ ಗಂಡ ನಿಂಗಪ್ಪ ಉತ್ತಪ್ಪೋರ, 2) ದೇವಮ್ಮ ಗಂಡ ಶಿವಲಿಂಗಪ್ಪ ಪ್ರದಾನಿ, 3) ಹಣಮವ್ವ ಗಂಡ ಭೀಮಪ್ಪ ಎಮ್ಮೇರ, 4) ಮಣಿ ತಂದೆ ಹಣಮಂತ ಗುಡ್ಡಕಾಯಿ 5) ಬಸಲಿಂಗಮ್ಮ ಗಂಡ ಹೊನ್ನಪ್ಪ ಕುರಕುಂದಿ, 6) ರೇಖಾ ತಂದೆ ಹಣಮಂತ ಎಮ್ಮೇರ, 7) ಮರೆಮ್ಮ ಗಂಡ ಮಲ್ಲಪ್ಪ ಎಮ್ಮೇರ, 8) ಬನ್ನಮ್ಮ ತಂದೆ ಭೀಮಪ್ಪ ಸಿದ್ದಾಪೂರ, 9) ಮಲ್ಲಮ್ಮ ಗಂಡ ಮಲ್ಲಪ್ಪ ಪ್ರದಾನಿ 10) ನಿಂಗಮ್ಮ ಗಂಡ ಬೀರಪ್ಪ ಎಮ್ಮೇರ ಎಲ್ಲರೂ ಕೂಲಿ ಕೆಲಸಕ್ಕೆ ಹೋಗಲು ತಯಾರಾದರು. ನಾವೆಲ್ಲ 11 ಜನ ಹೆಣ್ಣು ಮಕ್ಕಳು ಮುಂಜಾನೆ 9-30 ಗಂಟೆಗೆ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 33-9124 ನೇದ್ದರಲ್ಲಿ ಕುಳಿತುಕೊಂಡು ಕುರುಬರಗಲ್ಲಿಯಿಂದ ಕುಂಬಾರಪೇಟ ಕ್ರಾಸ್ ಮಾರ್ಗವಾಗಿ ಹಸನಾಪೂರ ಕಡೆಗೆ ಹೋಗುವ ಬೈಪಾಸ್ ರಸ್ತೆಯ ಮೇಲೆ ನಿಧಾನವಾಗಿ ಹೊರಟಿದ್ದಾಗ 9-45 ಎ.ಎಮ್ ಸುಮಾರಿಗೆ ಸಿಬರಬಂಡಿ ಗುಡ್ಡದ ಹನುಮಾನ ದೇವಸ್ಥಾನದ ಹತ್ತಿರ ನಮ್ಮ ಹಿಂದಿನಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ವೇಗದಲ್ಲಿ ಹಿಂದಿನಿಂದ ನಮ್ಮ ಅಟೋರಿಕ್ಷಾಕ್ಕೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ ಅಟೋರಿಕ್ಷಾದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ನಿಂಗಮ್ಮ ಗಂಡ ಬೀರಪ್ಪ ಎಮ್ಮೇರ ವಯಃ 53 ವರ್ಷ ಇವಳು ರಸ್ತೆಯ ಮೇಲೆ ಬಿದ್ದಾಗ ಭಾರವಾದ ಲಾರಿಯ ಗಾಲಿಗಳು ನಿಂಗಮ್ಮಳ ಹೊಟ್ಟೆ, ಮಮರ್ಾಂಗ, ಕಾಲುಗಳ ಮೇಲೆ ಹಾದು ಹೋಗಿದ್ದರಿಂದ, ಹೊಟ್ಟೆಯಿಂದ ಎರಡು ಕಾಲಿನ ಪಾದದ ಮಣಿಕಟ್ಟಿನ ವರೆಗೆ ದೇಹ ಸಂಪೂರ್ಣ ನುಜ್ಜು-ಗೊಜ್ಜಾಗಿ ಮಾಂಸ, ಕರಳು, ದೇಹದ ಅಂಗಗಳು ರಸ್ತೆಯ ಮೇಲೆ ಚದುರಿ ಹೋಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ. ಹಾಗು ಅಟೋರಿಕ್ಷಾ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಹೋಗಿ ಬಿದ್ದಿದ್ದರಿಂದ ಅದರಲ್ಲಿ ಕುಳಿತಿದ್ದ ನನಗೆ ಮತ್ತು ಇನ್ನುಳಿದ ಎಲ್ಲಾ ಹೆಣ್ಣುಮಕ್ಕಳಿಗೆ, ಅಟೋರಿಕ್ಷಾ ಚಾಲಕ ಎಲ್ಲರಿಗೂ ಸಾದಾ ಹಾಗು ಭಾರಿ ಸ್ವರೂಪದ ರಕ್ತಗಾಯ, ಗುಪ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಲಾರಿ ಚಾಲಕನು ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋಗಿದ್ದು, ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಲಾರಿ ನಂಬರ ನೋಡಲಾಗಿ ಕೆ.ಎ 17 ಡಿ 4761 ಇರುತ್ತದೆ. ನಮಗೆ 108 ಅಂಬ್ಯೂಲೇನ್ಸ್ ವಾಹನ ಹಾಗು ರಸ್ತೆಯಲ್ಲಿ ಹೊರಟಿದ್ದ ಬೇರೆ ಬೇರೆ ಖಾಸಗಿ ವಾಹನಗಳಲ್ಲಿ ಹಾಕಿ ಉಪಚಾರ ಕುರಿತು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಪಘಾತ ಪಡಿಸಿ ಓಡಿ ಹೋಗಿರುವ ಲಾರಿ ಚಾಲಕನ ವಿರುದ್ದ ಕಾಯ್ದೇ ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 154/2019 ಕಲಂ. 279, 337,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 113/2019 ಕಲಂ 326, 307 ಸಂ 34 ಐಪಿಸಿ:-ದಿನಾಂಕ 19/07/2019 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಕಾಶಿಬಾಯಿ ಗಂಡ ನರಸಿಂಗ ಪವ್ಹಾರ ಸಾಃ ಆಶನಾಳ ತಾಂಡಾ ಇವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ಕೊಟ್ಟಿದ್ದೆನೆಂದರೆ ನಾನು ಶ್ರೀಮತಿ ಕಾಶಿಬಾಯಿ ಗಂಡ ನರಸಿಂಗ್ ಸಾಃ ಆಶನಾಳ ತಾಂಡಾ ವಯಾಃ 29 ವರ್ಷ ಇದ್ದು, ದೂರು ನೀಡುವದೆನೆಂದರೆ, ನನ್ನ ಪತಿಯಾದ ಶ್ರೀ ನರಸಿಂಗ ತಂದೆ ಹೇಮ್ಲಾ ಸಾಃ ಆಶನಾಳ ತಾಂಡಾ ವಯಾಃ 33 ವರ್ಷ ಇದ್ದು, ಇವರು ದಿನಾಂಕ 18/07/2019 ರಂದು ರಾಮಸಮುದ್ರ ಗ್ರಾಮದಿಂದ ಆಶನಾಳ ತಾಂಡಾಕ್ಕೆ ಕೆ.ಎ. 33 ಜೆ-6328 ದ್ವಿ ಚಕ್ರ ವಾಹನದ ಮೇಲೆ ತಾಂಡಾಕ್ಕೆ ಬರುತ್ತಿರುವಾಗ ರಾಮಸಮುದ್ರ ಗ್ರಾಮದ 4 ಜನ ಯುವಕರಾದ 1)ಬಂಗಾರೆಪ್ಪ 2)ಸಾಬರೆಡ್ಡಿ ಇನ್ನಿಬ್ಬರು ರಾತ್ರಿ 9-00 ಗಂಟೆಗೆ ರಸ್ತೆಗೆ ಅಡ್ಡವಾಗಿ ನಿಂತು ಕಲ್ಲುಗಳಿಂದ ತಲೆಗೆ ಜಜ್ಜಿ ಬರ್ಬರವಾಗಿ ಮಾರಣಾಂತಿಕವಾಗಿ ಹಲ್ಲೆ ಮಡಿರುತ್ತಾರೆ, ನನ್ನ ಗಂಡ ಸತ್ತನೆಂದು ತಿಳಿದು ಓಡಿ ಹೋಗಿರುತ್ತಾರೆ, ಈ ರಸ್ತೆಯಲ್ಲಿ ನಮ್ಮ ತಾಂಡಾದವರು ಬರುತ್ತಿದ್ದಾಗ ನನ್ನ ಗಂಡ ಬಿದ್ದಿರುವದನ್ನು ನೋಡಿ ನಮ್ಮ ಮನೆಗೆ ಬಂದು ಬಿದ್ದ ವಿಷಯ ಹೇಳಿರುತ್ತಾರೆ, ನಾನು ಹಾಗೂ ನನ್ನ ಮೈದುನ ಚಂದು ನಾವಿಬ್ಬರೂ ತೆರಳಿ ನೋಡಿದಾಗ ನರಸಿಂಗ ರವರು ಮೂಛರ್ೆ ಹೋಗಿ ರಕ್ತಪಾತವಾಗಿ ರಸ್ತೆಯ ಬದಿಯಲ್ಲಿ ಬಿದ್ದಿರುತ್ತಾರೆ, ತಕ್ಷಣ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಾದಗಿರಿಯಲ್ಲಿ ದಾಖಲಿಸಿರುತ್ತೆನೆ, ಸದರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಶಿಫಾರಸ್ಸು ಮಾಡಿದ್ದರಿಂದ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೋಮಾದಲ್ಲಿರುತ್ತಾರೆ, ಈ ಯುವಕರು ನನ್ನ ಗಂಡನ ಮೇಲೆ ತುಂಬಾ ದಿನಗಳಿಂದ ಹಲ್ಲೆ ಮಾಡಲು ಕಾಯುತ್ತಿದ್ದರು ಎಂದು ನ್ನನ ಗಂಡ 2-3 ದಿನದ ಹೇಳಿಕೊಂಡಿದ್ದರು, ಹಾಗೂ ನನ್ನ ಗಂಡನು ನಾವು ಅಪಘಾತದಲ್ಲಿ ಬಿದ್ದನೆಂದು ತಿಳಿದು ಯಾದಗಿರಿಯಲ್ಲಿ ಎಂ.ಎಲ್.ಸಿ. ಕೇಸ್ ಮಾಡಿರುವದಿಲ್ಲ, ಕಲಬುರಗಿಯಲ್ಲಿ ಎಂ.ಎಲ್.ಸಿ. ಆಗಿರುತ್ತದೆ. ಆದರೆ ನನ್ನ ಗಂಡ ಅಂಬುಲೆನ್ಸ ಮೂಲಕ ಹೋಗುವಾಗ ಶಹಾಬಾದ ದಾಟುವಾಗ ಸ್ವಲ್ಪ ಹೊತ್ತು ನಿದ್ರಾವಸ್ಥೆಯಿಂದ ಕಣ್ಣು ಬಿಟ್ಟಾಗ ಬಂಗಾರಪ್ಪ ಮತ್ತು ಇತರರು ನನಗೆ ಹೊಡೆದಿದ್ದಾರೆ ಎಂದು ಹೇಳುತ್ತಿದ್ದರು, ಆಗ ಅದೇ ಸಮಯದಲ್ಲಿ ನನ್ನ ಗಂಡನ ಮೇಲೆ ಹಲ್ಲೆ ಮಡಿದ 2 ಜನರು ನನ್ನ ಗಂಡನ ಅಪಘಾತ ಮಾಡಿದ್ದಾನೆ ಎಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂ.ಎಲ್.ಸಿ ಮಾಡಿರುತ್ತಾರೆ, ಇವರು ಎಂ.ಎಲ್.ಸಿ. ಮಾಡಿದ ನಂತರ ನಮಗೆ ಇವರ ಮೇಲೆ ಪಕ್ಕಾ ಸಂಶಯ ಬಂದಿರುತ್ತದೆ. ಈಗ ನನ್ನ ಗಂಡನ ಸ್ಥತಿ ಬಹಳ ಗಂಭೀರವಾಗಿದ್ದು, ಈ ಕಿಡಿಗೇಡಿಗಳನ್ನು ತಕ್ಷಣ ಬಂದಿಸಿ ನನಗೆ ನ್ಯಾಯ ಮತ್ತು ರಕ್ಷಣೆ ಕೊಡಬೇಕೆಂದು ನಮಗೆ ನ್ಯಾಯ ಒದಗಿಸಿ ಕೊಡುತ್ತಿರೆಂದು ನಂಬಿ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತೆನೆ, ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 113/2019 ಕಲಂ 326, 307 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 182/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 19/07/2019 ರಂದು 5.00 ಪಿಎಂ ಕ್ಕೆ ಶ್ರೀ ಅಜರ್ುನಪ್ಪ ಪಿಎಸ್ಐ(ಅ.ವಿ) ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಹಳಿಸಗರ ಗ್ರಾಮದ ಅಂಬಿಗರ ಚೌಡಯ್ಯನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಎಸ್ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಮಲ್ಲಪ್ಪ ತಂದೆ ಮಹಾದೇವಪ್ಪ ಅಪಲೇರ ವ|| 37 ವರ್ಷ ಜಾ|| ಕಬ್ಬಲಿಗ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಸಾ|| ಹಳಿಸಗರ ತಾ|| ಶಹಾಪೂರ ಈತನಿಂದ ನಗದು ಹಣ 1080/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 19/07/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 424 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 7.30 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 182/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!