ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-07-2019

By blogger on ಬುಧವಾರ, ಜುಲೈ 17, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-07-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 111/2019 ಕಲಂ 498(ಎ), 306 ಐಪಿಸಿ:- ಎರಡು ವರ್ಷದ ಹಿಂದೆ ಮೃತಳಿಗೆ  ತೊರಣತಿಪ್ಪ ಗ್ರಾಮದ  ಆರೋಪಿ ಲಚಮಯ್ಯ ತಂದೆ ಕೃಷ್ಣಪ್ಪ ಹಲಗೇರ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಅವನಿಗೆ ಈಗಾಗಲೇ ಎರಡು ಮದುವೆ ಆಗಿದ್ದು ಗೋತ್ತಿತ್ತು, ಮದುವೆಯಾದ ನಂತರ ನನ್ನ ಮಗಳು ಅನೀತಾ ಇವಳು ನಾಲ್ಕು, ಐದು ತಿಂಗಳವರೆಗೆ ಅವಳ ಗಂಡನ ಮನೆಯಲ್ಲಿ ಸರಿಯಾಗಿ ಇದ್ದಳು ನಂತರ ಬರುಬರುತ್ತಾ ಆರೋಪಿತನು ಮೃತಳಿಗೆ ನೀನು ಬೇರೆಯವನ ಜೋತೆಗೆ ಅನೈತಿಕ ಸಂಬಂದ ಇದೆ, ನೀನು ಬೇರೆಯವರ ಜೋತೆಗೆ ಮಾತಾಡುತ್ತಿ, ನೀನು ನಮ್ಮ ಮನೆಯಲ್ಲಿ ಇರಬೇಡ ಎಲ್ಲಾದರೂ ಹೋಗಿ ಸಾಯಿ ಅಂತಾ ನನ್ನ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದುದರಿಂದ  ಈಗ ಒಂದೂವರೆ ವರ್ಷದ ಹಿಂದೆ ವರ್ಕನಳ್ಳಿ ಗ್ರಾಮದ ತನ್ನ ತಾಯಿಯ ಮನೆಯಲ್ಲಿಯೇ ಇರುತ್ತಾಳೆ.  ದಿನಾಂಕ 13/07/2019 ರಂದು ಬೆಂಗಳೂರಿನಲ್ಲಿ ಇರುವ ಫಿರಾಧಿಯ್ನ ಅಕ್ಕನ ಮಕ್ಕಳಿಗೆ ಆರಾಮ ಇಲ್ಲದ ಕಾರಣ ಫೀರ್ಯಾಧಿಯು ಮಾತಾಡಿಸುವದಕ್ಕೆ ಅಂತಾ ಬೆಂಗಳುರಗೆ ಹೋದಾಗ        ಆ ಸಮಯದಲ್ಲಿ ಮೃತಳು ನೆಯಲ್ಲಿ ಒಬ್ಬಳೆ ಇದ್ದಾಗ ಆರೋಪಿತನು ಫಿರಯಾಧಿಯ ಮನೆಗೆ ಬಂದು ಮೃತ ಅನೀತಾಳ ಸಂಗಡ ಜಗಳ ಮಾಡಿಕೊಂಡು ಹೋಗಿದ್ದು, ಮೃತಳು ಆರೋಪಿತು ಕೊಡುವ ಕಿರಕುಳ ತಾಳಲಾರದೇ ಮನೆಯಲ್ಲಿ ಸೀರೆಯಿಂದ ಮನೆಯ ಕಬ್ಬಿಣದ ಪೈಪಿಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು  ಮೃತಳು ಆರೋಫಿತನು ಕೊಡುತ್ತಿದ್ದ ಕಿರುಕೊಳದಿಂದ ಮತ್ತು ಪ್ರಚೋದನೆಯಿಂದ ಸತ್ತಿರುತ್ತಾಳೆ,  ಈ ಘಟನೆಯು ನಿನ್ನೆ ದಿನಾಂಕ 16/07/2019 ರಂದು ಮಧ್ಯಾಹ್ನ 3-30 ಗಂಟೆಯಿಂದ ಸಾಯಂಕಾಲ 4-15 ಗಂಟೆಯ ಒಳಗೆ ನಡೆದಿರುತ್ತದೆ ಅಂತಾ ಫಿರ್ಯಾಧೀಯ ಸಾರಾಂಸವಿದ.ೆ 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 180/2019 ಕಲಂ 324 504 506 ಐ.ಪಿ.ಸಿ:- ದಿನಾಂಕ 17/07/2019 ರಂದು ಸಾಯಂಕಲ 16-40 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ಮಾಡಿ ಉಪಚಾರ ಪಡೆಯುತಿದ್ದ ಗಾಯಾಳು ಫಿರ್ಯಾದಿ ಶ್ರೀ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಒಂಟಿ ವಯ 28 ವರ್ಷ ಜಾತಿ ಪ.ಜಾತಿ ಹೊಲೆಯ ಉಃ ಹೊಲ ಮನೆ ನೋಡಿಕೊಳ್ಳುವದು ಸಾಃ ದೋರನಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರಿಗೆ ವಿಚಾರಣೆ ಮಾಡಲಾಗಿ ಹೇಳಿದ್ದೆನೆಂದರೆ ಇಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಫಿಯರ್ಾದಿಯು ಗ್ರಾಮದ ಜೈ ವೈನ್ ಶಾಪ ಎದರುಗಡೆ ಹೋಗುತಿದ್ದಾಗ ಗ್ರಾಮದ ರೋಹಿತ್ ತಂದೆ ಶರಣಪ್ಪ ಜುಟೇರ್ ಈತನು ಫಿರ್ಯಾದಿಯ ಬಲ ಮುಡ್ಡಿ ತಾಗಿಸಿದ್ದು ಆಗ ಫಿರ್ಯಾದಿಯು  ರೋಹಿತನಿಗೆ ಕಣ್ಣೇನು ನೇತ್ತಿಯ ಮೇಲೆ ಬಂದಾವೇನು ನೋಡಿ ನಡೆಯಲಿಕ್ಕೆ ಆಗುವುದಿಲ್ಲ ಅಂತ ಅಂದಿದ್ದಕ್ಕೆ ಏ ಬೋಸ್ಡಿ ಮಗನೆ ಏನಂತಿ ಅಂತ ಅಂದವನೆ ಅಲ್ಲಿಯೇ ಬಿದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಫಿರ್ಯಾದಿ ಚಿರಾಡುತಿದ್ದಾಗ ಗ್ರಾಮದ ಭೀಮಪ್ಪ ತಂದೆ ಮರೆಪ್ಪ ಹುಲಕಲ್, ಹಣಮಂತ ತಂದೆ ಮರೆಪ್ಪ ಹುಲಸೂರ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ನಂತರ ರೋಹಿತ್ ಈತನು ಫಿರ್ಯಾದಿಗೆ ಈ ದಿನ ನಿನಗೆ ಖಲಾಸ್ ಮಾಡುತಿದ್ದೆ ಮಗನೇ ಅವರು ಬಂದು ಬಿಡಿಸಿಕೊಂಡರು ಅಂತ ಬಚಾವ್ ಆದಿ ಅಂತ ಜೀವ ಬೆದರಿಕೆ ಹಾಕಿ ಹೋಗುವಾಗ ತನಗೆ ಹೊಡೆದ ಕಲ್ಲ ಅಲ್ಲಿಯೇ ಪಕ್ಕಕ್ಕೆ ಎಸೆದು ಹೋಗಿದ್ದು. ನಂತರ  ಭೀಮಪ್ಪ ಮತ್ತು ಹಣಮಂತ ಇಬ್ಬರೂ ಕೂಡಿ ಫಿರ್ಯಾದಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ತನಗೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ರೋಹಿತ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 18-15 ಗಂಟೆಗೆ ಬಂದು ಫಿರ್ಯಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 180/2019 ಕಲಂ 324 504 506 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 179/2019.ಕಲಂಃ 78(3) ಕೆ.ಪಿ.ಆ್ಯಕ್ಟ:- ದಿನಾಂಕ 17/07/2019 ರಂದು 13-30 ಗಂಟೆಗೆ ಸ|| ತ|| ಪಿಯರ್ಾದಿ ನಾಗರಾಜ. ಜಿ, ಪಿ.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 17/07/2019 ರಂದು 10-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಹಳಿಸಗರದ ಗ್ಯಾಸ್ ಪಂಪ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಚಂದ್ರಕಾಂತ ಪಿ,ಎಸ್,ಐ, (ಕಾ,ನೂ,) ಮತ್ತು ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಗಂಜೇಂದ್ರ ಪಿ,ಸಿ, 313, ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಬಾಬು ಹೆಚ್,ಸಿ,162, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 10-50 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿ,ವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಠಾಣೆಯ ಸಿಬ್ಬಂದಿಯವರು ಠಾಣೆಯ ಜೀಪ ನಂ ಕೆಎ-33-ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 11-00 ಗಂಟೆಗೆ ಹೊರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ., 161, ಇವರು ಚಾಲಾಯಿಸುತ್ತ ನೇರವಾಗಿ ಹಳಿಸಗರದ ಗ್ಯಾಸ ಪಂಪ  ಹತ್ತಿರ  ಸ್ವಲ್ಪ ದೂರದಲ್ಲಿ 11-10 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ಗ್ಯಾಸ್ ಪಂಪ ಹತ್ತಿರ ಹೋಗಿ ಮನೆಗಳ ಮತ್ತು ಅಂಗಡಿಗಳ ಗೋಡೆಯ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಗ್ಯಾಸ್ ಪಂಪ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 11-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ, ನಾನು, ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಂಬಣ್ಣ ತಂದೆ ಮಲ್ಲಪ್ಪ ಕೋನೆರ ವ|| 50 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳೂವದು ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 410/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 11-30 ರಿಂದ 12-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 12-45 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 13-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 45/2019 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಪ್ಪ ಪಿ,ಸಿ, 424. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 14-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 179/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 181/2019.ಕಲಂಃ 78(3) ಕೆ.ಪಿ.ಆ್ಯಕ್ಟ:- ದಿನಾಂಕ 17/07/2019 ರಂದು 19-30 ಗಂಟೆಗೆ ಸ|| ತ|| ಪಿಯರ್ಾದಿ ನಾಗರಾಜ. ಜಿ, ಪಿ.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 17/07/2019 ರಂದು 17-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಗಂಗಾನಗರ ಶಹಾಪೂರದ ಅಂಬಿಗರ ಚೌಡಯ್ಯ ಕಟ್ಟೆಯ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಗಣೇಶ ಪಿ,ಸಿ, 294, ಗಜೇಂದ್ರ ಪಿ,ಸಿ, 313, ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಬಾಬು ಹೆಚ್,ಸಿ,162, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 17-10 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.ಮಾನ್ಯ ಡಿ,ವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಠಾಣೆಯ ಸಿಬ್ಬಂದಿಯವರು ಠಾಣೆಯ ಜೀಪ ನಂ ಕೆಎ-33-ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 17-15 ಗಂಟೆಗೆ ಹೊರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ., 161, ಇವರು ಚಾಲಾಯಿಸುತ್ತ ನೇರವಾಗಿ ಗಂಗಾನಗರ ಶಹಾಪೂರದ ಅಂಬಿಗರ ಚೌಡಯ್ಯ ಕಟ್ಟೆಯ ಹತ್ತಿರ ಸ್ವಲ್ಪ ದೂರದಲ್ಲಿ 17-20 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ಅಂಬಿಗರ ಚೌಡಯ್ಯ ಕಟ್ಟೆಯ ಹತ್ತಿರ ಹೋಗಿ ಮನೆಗಳ ಮತ್ತು ಅಂಗಡಿಗಳ ಗೋಡೆಯ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಚೌಡಯ್ಯನ ಕಟ್ಟಿ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 17-25 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ, ನಾನು, ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮುದಕಪ್ಪ ತಂದೆ ಮಡಿವಾಳಪ್ಪ ಜೈನಾಪೂರ ವ|| 50 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳೂವದು ಸಾ|| ಗಂಗಾನಗರ ಶಹಾಪೂರ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 680/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 17-30 ರಿಂದ 18-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-45 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 19-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 46/2019 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಪ್ಪ ಪಿ,ಸಿ, 424. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 20-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 181/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 73/2019 ಕಲಂ, 78(3) ಕೆ.ಪಿ.ಆ್ಯಕ್ಟ್:- ದಿನಾಂಕ: 17/07/2019 ರಂದು 07.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸುರೇಶ ಬಾಬು ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 17/07/2019 ರಂದು 05.45 ಪಿ.ಎಮ್ ಕ್ಕೆ ವನದುಗರ್ಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾಧ ದೇವರಾಜ ತಂದೆ ಹಳ್ಳೆಪ್ಪಾ ಪರಸನಳ್ಳಿ ವಯಾ: 26 ಜಾ: ಬೇಡರ ತಾ: ಶಹಾಪೂರ ಜಿ: ಯಾದಗಿರ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 630/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ: 73/2019 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 151/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ:17-07-2019 ರಂದು 3 ಪಿ.ಎಂ.ಕ್ಕೆಠಾಣೆಯಎಸ್ಹೇಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸೊಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು16ಜನಆಫಾಧಿತರೊಂದಿಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ: 17-07-2019 ರಂದು1-30 ಪಿ.ಎಂ. ಸುಮಾರಿಗೆಲಕ್ಷ್ಮಿಪೂರಗ್ರಾಮದ ಸಿಮಾಂತರದ ಶ್ರೀ ಬನಶಂಕರಿಗುಡಿಯ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ1) ದೇವಿಂದ್ರತಂದೆ ಸಿದ್ದಪ್ಪ ಕೋಲಕುಂದಿ ವಯಾ:35 2) ನಾಗರಾಜತಂದೆ ನಿಂಗಪ್ಪ ಪೊಲೀಸ್ ಪಾಟೀಲ ವಯಾ:28 ವರ್ಷ 3) ಖದೀರತಂದೆ ಮೌಲಾನಸಾಬ ಲಾಲ್ಕೋಟಿ ವಯಾ:21 4) ದೇವರಾಜತಂದೆ ನಿಂಗಪ್ಪಟೋಕಾಪೂರ ವಯಾ:33 5) ಅಜುಮೊದ್ದಿನತಂದೆ ಸೋಪಿಸಾಬ ಸೋಪಿಸಾಬ ಮಾಟಿಖಾನ ವಯಾ:30 6) ಪರಶುರಾಮತಂದೆ ಹಣಮಂತಗಡ್ಡಿಮನಿ ವಯಾ:34 7) ಮಾಳಪ್ಪ ತಂದೆ ನಿಂಗಪ್ಪ ಮಲ್ಲಿಬಾವಿ ವಯಾ:30 8) ಶರಣಪ್ಪತಂದೆ ಸಿದ್ದಪ್ಪ ಮಟ್ಲರ್ ವಯಾ:29 ವರ್ಷ 9) ತಿಮ್ಮಯ್ಯಾತಂದೆ ಮಾನಪ್ಪ ದೇವರಗೋನಾಳ ವಯಾ:32 10) ಭೀಮಣ್ಣತಂದೆ ಬಸಣ್ಣ ಮಟ್ಲರ ವಯಾ:50 11) ಶರಣಪ್ಪತಂದೆ ಮಲ್ಲಪ್ಪ ಪೂಜಾರಿ ವಯಾ:31 12) ಶರಣಪ್ಪತಂದೆ ನಾಗಪ್ಪಕೋಟಾ ವಯಾ:28 ವರ್ಷ 13) ಭೀಮಣ್ಣತಂದೆ ಬಸಣ್ಣ ಮಟ್ಲರ ವಯಾ:50 14) ಹಸನ್ಸಾಬ ತಂದೆ ನಬಿಸಾಬ ದುಬೈ ವಯಾ:32 15) ಸುರೇಶತಂದೆ ನಿಂಗಪ್ಪ  ಪೀರಬಾಯಿ ವಯಾ: 25 ವರ್ಷ 16) ಸಂಗಣ್ಣತಂದೆ ದೊಡ್ಡಶಿವಲಿಂಗಪ್ಪ ಪಾಲ್ಕಿ ವಯಾ:40  ಸಾ:ಎಲ್ಲರೂ ಲಕ್ಷ್ಮಿಪೂರಎಲ್ಲರೂದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದಅಂದರ್ -ಬಾಹರ್ ವೆಂಬ ಜೂಜಾಟಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿಕ್ರಮಜರುಗಿಸಲು ವರದಿ ನಿಡಿದ್ದುಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 152/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ:18-07-2019 ರಂದು1-45ಎ.ಎಂ.ಕ್ಕೆ ಠಾಣೆಯಎಸ್ಹೇಚ್ಡಿಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ಎಸ್.ಎನ್. ಪಿ ಐಸಾಹೇಬರು7ಜನಆಫಾಧಿತರೊಂದಿಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ: 18-07-2019 ರಂದು12-15 ಪಿ.ಎಂ. ಸುಮಾರಿಗೆಸತ್ಯಂಪೇಠಏರಿಯಾದ ನಂದಿ ವೇ ಬ್ರಿಡ್ಜ ಹತ್ತಿರ ಸಾರ್ವಜನಿಕರಸ್ತೆಯ ಪಕ್ಕದಖುಲ್ಲಾ ಸ್ಥಳದಲ್ಲಿ1) ಆನಂದತಂದೆ ಭೀಮಣ್ಣ ವಿಶ್ವಕರ್ಮ ವಯಾ:42 ವರ್ಷ ಉ:ಒಕ್ಕಲುತನ ಜಾ:ವಿಶ್ವಕರ್ಮ ಸಾ:ಲಕ್ಷ್ಮೀಪೂರ2) ರಾಮಕೃಷ್ಣತಂದೆ ಬಸಪ್ಪದೇಸಾಯಿ ವಯಾ:32 ವರ್ಷಜಾ:ಬೇಡರು ಉ:ವ್ಯಾಪಾರ ಸಾ:ಡೊಣ್ಣಿಗೇರಾ ಸುರಪುರ3) ಬಲಭೀಮತಂದೆಕನಕಪ್ಪ ಪೂಜಾರಿ ವಯಾ:32ವರ್ಷ ಉ:ಕೂಲಿಕೆಲಸ ಜಾ:ಕ್ವರವರು ಸಾ:ದೇವಿಕೇರಿ 4) ಯಲ್ಲಪ್ಪತಂದೆ ಹಣಮಂತಕಡಿಮನಿ ವಯಾ:48 ವರ್ಷ ಉ:ಕೂಲಿ ಜಾ:ಮಾದಿಗ ಸಾ:ಲಕ್ಷ್ಮೀಪೂರ5) ಬಸವರಾಜತಂದೆದೇವಿಂದ್ರಪ್ಪ ಹುದ್ದಾರ ವಯಾ:26 ವರ್ಷ ಉ:ಕೂಲಿ ಜಾ:ಕುರುಬರ ಸಾ:ಹುದ್ದಾರಓಣಿ ಸುರಪುರ6) ಭಾಗಣ್ಣತಂದೆತಿಪ್ಪಣ್ಣಯಾದಗಿರಿ ವಯಾ:35 ವರ್ಷ ಉ:ಕೂಲಿ ಜಾ:ಕಬ್ಬಲಿಗ ಸಾ:ರತ್ತಾಳ 7) ಮಹೇಶ ತಂದೆ ವೀರಣ್ಣಕಂಬಾರ ವಯಾ:25 ವರ್ಷ ಉ:ವ್ಯಾಪಾರ ಜಾ:ವಿಶ್ವಕರ್ಮ ಸಾ:ದೇವಿಕೇರಾಎಲ್ಲರೂದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದಅಂದರ್ -ಬಾಹರ್ ವೆಂಬ ಜೂಜಾಟಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿಕ್ರಮಜರುಗಿಸಲು ವರದಿ ನಿಡಿದ್ದುಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!