ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-07-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 110/2019 ಕಲಂ ಕಲಂ 447, 506 ಐಪಿಸಿ:- ದಿನಾಂಕ: 13-07-2019 ರಂದು 4 ಪಿ.ಎಮ್ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರಿಂದ ಮಾನ್ಯ ಅಫರ್ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಿಂದ ಖಾಸಗಿ ಪ್ರಕರಣದ ಸಂಖ್ಯೆ 39/2019 ದಿನಾಂಕ 11-07-2019 ನೆದ್ದನ್ನು ವಸೂಲಾಗಿದ್ದು, ಸದರಿ ಖಾಸಗಿ ಪ್ರರಕರಣದಲ್ಲಿಯ ಫಿರ್ಯಾಧಿದಾರರಾದ ಶ್ರೀ ಅಶೋಕ ತಂದೆ ಬಸಣ್ಣಾ ವಯಾ: 47 ಉ: ಸುಪರವೈಸರ್ ಸಾ: ಯಾದಗಿರಿ ತಾ:ಜಿ: ಯಾದಗಿರಿ ಇವರು ಸಲ್ಲಿಸಿದ ಫಿರ್ಯಾಧಿಯ ಸಾರಾಂಶವೆನಂದರೆ ನಾನು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹಳಗೇರಾ ಗ್ರಾಮದ ಸಿದ್ದಲಿಂಗ.ಎಸ್ ಪಾಟೀಲ್ ಇವರ ಮಾಲೀಕತ್ವದಲ್ಲಿದ್ದ ಸೋಮೇಶ್ವರ ಸ್ಟೋನ ಕ್ರಷರ್ದಲ್ಲಿ ಸೂಪರವೈಸರ್ ಅಂತಾ ಕೆಲಸ ಮಾಡುತ್ತಿದ್ದೆನೆ. ಸದರಿ ಸ್ಟೋನ ಕ್ರಷರ್ ದಿನಾಂಕ 24-01-2018 ರಿಂದ ಚಾಲ್ತಿಯಲ್ಲಿರುತ್ತದೆ.ಸದರಿ ಫಿರ್ಯಾಧಿದಾರರು ಸೋಮೇಶ್ವರ ಸ್ಟೋನ ಕ್ರಷರ್ದ ಮೇಲ್ವೀಚಾರಕರಿದ್ದು, ಮತ್ತು ಸದರಿ ಕ್ರಷರದ ಎಲ್ಲಾ ವ್ಯವಹಾರಗಳು ನೋಡಿಕೊಳ್ಳುತ್ತಾರೆ. ಕಳೆದ 2019 ನೇ ಸಾಲಿನ ಮೇ ತಿಂಗಳಿಂದ ಆರೋಪಿಗಳು ಮೇಲಿನ ಕಲ್ಲಿನ ಕ್ರಷರದಲ್ಲಿ ಅತೀಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಆಗ ಫಿರ್ಯಾಧಿ ಮತ್ತು ಕಲ್ಲು ಕ್ರಷರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮಧ್ಯಸ್ಥಿಕೆಯಿಂದಾಗಿ ಆರೋಪಿಗಳ ಪ್ರಯತ್ನವನ್ನು ನಿಲ್ಲಿಸಿದಾಗ ಆ ಸಮಯದಲ್ಲಿ ಆರೋಪಿಗಳು ಇವರಿಗೆ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಅಲ್ಲದೇ ಆರೋಪಿತರು ದೂರವಾಣಿ ಮೂಲಕ ಕ್ರಷರ್ ಮಾಲೀಕರಿಗೆ ಕರೆ ಮಾಡಿ ಸ್ಟೋನ ಕ್ರಷರ್ ನಿಲ್ಲಿಸುವಂತೆ ಜೀವದ ಭಯ ಹಾಕಿರುತ್ತಾರೆ. ಆರೋಪಿಗಳು ಕಾನೂನು ಬಾಹೀರ ಕೃತ್ಯವೆಸಗಿ ಕಲ್ಲು ಕ್ರಷರಿನ ಕೆಲಸಕ್ಕೆ ಸಂಪೂರ್ಣವಾಗಿ ತೊಂದರೆ ಮಾಡುತ್ತಿದ್ದಾರೆ. ಇವರಿಂದ ಕ್ರಷರ್ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಭಯ ಮತ್ತು ಬೆದರಿಕೆಗೆ ಒಳಗಾಗಿದ್ದಾರೆ. ನಂತರ ದಿನಾಂಕ 07-07-2019 ರಂದು ಮಧ್ಯಾಹ್ನ ಮತ್ತು ಸಾಯಂಕಾಲ 7 ಗಂಟೆ ಸುಮಾರಿಗೆ ಆರೋಪಿ ನಂ: 1 ಮತ್ತು 4 ಇವರು ಕಲ್ಲಿನ ಕ್ರಷರದಲ್ಲಿ ಬಂದು ಫಿರ್ಯಾಧಿದಾರರಿಗೆ ನಿಮ್ಮ ವ್ಯವಹಾರ ಬಂಧ ಮಾಡಿದರೇ ಒಳ್ಳೆಯದು ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ. ಫಿರ್ಯಾಧಿದಾರರು ಆರೋಪಿ ನಂ: 1 ಮತ್ತು 4 ನೆದ್ದವರ ಬೆದರಿಕೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಇದ್ದಾಗ ಆರೋಪಿತರು ಬಲವಂತವಾಗಿ ಕಾನೂನು ಬಾಹೀರವಾಗಿ ಕಲ್ಲು ಕ್ರಷರನ್ನು ಬಂಧ್ ಮಾಡಿದರು. ಆ ಸಮಯದಲ್ಲಿ ಕಲ್ಲು ಕ್ರಷರದಲ್ಲಿ ಕೆಲಸ ಮಾಡುವ ಟಿಪ್ಪರ ಚಾಲಕ ರವಿ ತಂದೆ ಸಿದ್ದಣ್ಣಾ ಹವಾಲ್ದಾರ, ಮತ್ತು ಸದ್ದಾಂ ತಂದೆ ಹುಸೇನ್ ಮಷೀನ ಆಪರೇಟರ್ ಮತ್ತು ಇತರೇ ಸಿಬ್ಬಂದಿಗಳು ಹಾಜರಿದ್ದರು. ದಿನಾಂಕ 07-07-2019 ರಂದು ಆರೋಪಿ ನಂ: 1 ನೆದ್ದವನು ಕಲ್ಲು ಕ್ರಷರ್ ಆವರಣದಲ್ಲಿ ಫಿರ್ಯಾಧಿಯೊಂದಿಗೆ ಕುಳಿತ ಫೋಟೋ ತೆಗೆಯಲಾಗಿದೆ. ಅಲ್ಲದೇ ಆರೋಪಿ ನಂ: 4 ಇವನೂ ಕೂಡಾ ಕಲ್ಲು ಕ್ರಷರ್ ಆವರಣದಲ್ಲಿ ಇದ್ದನು. ಕ್ರಷರ್ ಮಾಲೀಕರು ಸುಮಾರು ಕೆಲವು ದಿವಸಗಳಿಂದ ಅವರು ತಮ್ಮ ವ್ಯಯಕ್ತಿಕ ಕೆಲಸಗಳ ಸಂಬಂಧ ಕ್ರಷರದಿಂದ ಹೊರಗಡೆ ಹೋಗಿದ್ದು, ಈ ಸಮಯದಲ್ಲಿ ಫಿರ್ಯಾಧಿದಾರರು ದಿನಾಂಕ 07-07-2019 ರಂದು ರಾತ್ರಿ 9 ಗಂಟೆಗೆ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಗೆ ತೆರಳಿ ಆರೋಪಿಗಳು ಮಾಡಿದ ಅಪರಾಧಗಳ ಬಗ್ಗೆ ಮೌಖಿಕ ದುರು ನೀಡಿದ್ದು ಇರುತ್ತದೆ. ಆದರೇ ಆರೋಪಿ ನಂ: 2 ಇತನು ಹಳಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷ್ಯರಾಗಿದ್ದು ಹಾಗೂ ರಾಜಕೀಯವಾಗಿ ಪ್ರಭಲರಾಗಿದ್ದು, ಸ್ಥಳಿಯ ಒತ್ತಡಕ್ಕೆ ಪೋಲಿಸರು ಮಣಿದು ಅವರ ಪ್ರಕರಣ ದಾಖಲಿಸಲು ವಿಫಲರಾಗಿದ್ದಾರೆ. ಫಿರ್ಯಾಧಿದಾರರು ಸೋಮೇಶ್ವರ ಕಲ್ಲು ಕ್ರಷರದ ಮೇಲ್ವಿಚಾರಕನಾಗಿರುವುದರಿಂದ ನ್ಯಾಯ ಪಡೆದುಕೊಳ್ಳಲು ಮತ್ತು ದೂರು ದಾಖಲಿಸಲು ಸಮರ್ಥನಾಗಿರುತ್ತಾರೆ. ಮೇಲೆ ತೋರಿಸಿದ ಆರೋಪಿತರು ಕಾನೂನಿನ ಪ್ರಕಾರ ಅಪರಾಧವೆಸಗಿದ್ದು ಕಲಂ 447, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣ 39/2019 ನೆದ್ದರ ಆದೇಶದ ಮೇರೆಗೆ ಠಾಣೆ ಗುನ್ನೆ ನಂ: 110/2019 ಕಲಂ 447. 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ 279, 304(ಎ) ಐಪಿಸಿ:- ದಿನಾಂಕ 13/07/2019 ರಂದು 4 ಪಿ.ಎಂ.ಕ್ಕೆ ಶ್ರೀ ರಾಘವೇಂದ್ರ ಸಿಪಿಸಿ-347 ಯಾದಗಿರಿ ಸಂಚಾರಿ ಠಾಣೆರವರು ಖುದ್ದಾಗಿ ಹಾಜರಾಗಿ ತಮ್ಮದೊಂದು ಸಕರ್ಾರಿ ತಪರ್ೆ ಫಿಯರ್ಾದುದಾರರಾಗಿ ವರದಿ ನೀಡಿದ್ದರ ಸಾರಾಂಶವೇನೆಂದರೆ ಈ ಮೂಲಕ ನಾನು ರಾಘವೇಂದ್ರ ಸಿಪಿಸಿ-347 ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಾಗಿದ್ದು ಈ ವರದಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಇಂದು ದಿನಾಂಕ 13/07/2019 ರಂದು ಬೆಳಿಗ್ಗೆ 9 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದಂತೆ ನಾನು ಯಾದಗಿರಿ ನಗರದ ಸುಭಾಷ್ ವೃತ್ತ ಪಾಯಿಂಟ್ ಕರ್ತವ್ಯಕ್ಕೆ ನೇಮಿಸಿದ್ದು ಇರುತ್ತದೆ. ನಾನು ಬೆಳಿಗ್ಗೆ 9 ಗಂಟೆಯಿಂದ ಸುಭಾಷ್ ವೃತ್ತದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಸಮಯ ಅಂದಾಜು 11-45 ಎ.ಎಂ.ಕ್ಕೆ ನಾನು ನೋಡು ನೋಡುತ್ತಿದ್ದಂತೆ ಯಾದಗಿರಿ ಹೊಸ ಬಸ್ ನಿಲ್ದಾಣದ ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-34, ಎಫ್-1170 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಒಬ್ಬ ವ್ಯಕ್ತಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದನು. ಆಗ ನಾನು ಅಪಘಾತಕ್ಕೊಳಗಾದ ವ್ಯಕ್ತಿ ಹತ್ತಿರ ಬಂದು ನೋಡಲು ಸದರಿ ಅಪಘಾತದಲ್ಲಿ ಆ ವ್ಯಕ್ತಿಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿದ್ದು ಮೂಚರ್ೆ ಹೋಗಿರುತ್ತಾನೆ. ಆ ವ್ಯಕ್ತಿಯು ಅಪರಿಚಿತನಾಗಿದ್ದು ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ ಆತನ ಅಂದಾಜು ವಯಸ್ಸು 50 ರಿಂದ 55 ವರ್ಷ ಇರುತ್ತದೆ. ಇದೇ ಸಮಯಕ್ಕೆ ಅಪಘಾತವನ್ನು ಕಂಡು ಸುಭಾಷ್ ವೃತ್ತದಲ್ಲಿ ವ್ಯಾಪಾರ ಹಣ್ಣಿನ ಮತ್ತು ಭಜಿ ಮಾರಾಟ ಮಾಡುವ ಇಬ್ಬರು ವ್ಯಕ್ತಿಗಳಾದ ಶ್ರೀ ಮಹ್ಮದ್ ಗೌಸ್ ತಂದೆ ಮಹೀಬೂಬ ಖುರೇಷಿ ಹಾಗೂ ಶ್ರೀ ಅಬ್ದುಲ್ ತಂದೆ ಮಹ್ಮದ್ ಖಾಸಿಂ ಚಾವುಸ್ ಸಾ;ಇಬ್ಬರು ಲಾಡೇಸ್ ಗಲ್ಲಿ, ಯಾದಗಿರಿ ಇವರು ಬಂದು ನೋಡಿರುತ್ತಾರೆ. ಅಪಘಾತ ಪಡಿಸಿದ ಸಕರ್ಾರಿ ಬಸ್ ನಂಬರ ಕೆಎ-34, ಎಫ್-1170 ನೇದ್ದು ಸ್ಥಳದಲ್ಲಿದ್ದು ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ನಾಗೇಶ್ ತಂದೆ ಮಲ್ಲಪ್ಪ ಏಬರೆಡ್ಡಿ ಸಾ;ಸಂಕನಾಳ, ತಾ;ಬಸವನ ಬಾಗೇವಾಡಿ, ಜಿ;ಬಿಜಾಪುರ, ಹಾ;ವ;ಅಜೀಜ್ ಕಾಲೋನಿ ಯಾದಗಿರಿ ಅಂತಾ ತಿಳಿಸಿರುತ್ತಾನೆ. ಸ್ಥಳದಲ್ಲಿ ವ್ಯಕ್ತಿಯ ವಾರಸುದಾರರು ಯಾರು ಇಲ್ಲದ ಕಾರಣ ನಾನು ಮತ್ತು ಮಹ್ಮದ್ ಗೌಸ್ ತಂದೆ ಮಹೀಬೂಬ ಖುರೇಷಿ ಹಾಗೂ ಅಬ್ದುಲ್ ತಂದೆ ಮಹ್ಮದ್ ಖಾಸಿಂ ಚಾವುಸ್ ಹಾಗೂ ಬಸ್ ಚಾಲಕ ಮತ್ತು ನಿವರ್ಾಹಕರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಉಪಚಾರ ಕುರಿತು ಗಾಯಾಳು ವ್ಯಕ್ತಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ವ್ಯಕ್ತಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದು ವ್ಯಕ್ತಿಯು ಅಪರಿಚಿತ ವ್ಯಕ್ತಿಯಾಗಿದ್ದರಿಂದ ಆತನ ಸಂಗಡ ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದಂತೆ ನಮ್ಮ ಠಾಣೆಯ ಶ್ರೀ ಸಣ್ಣಕ್ಕೆಪ್ಪ ಎಚ್.ಸಿ-27 ರವರ ಬೆಂಗಾವಲಿನಲ್ಲಿ ಕಳಿಸಿದ್ದು ಇರುತ್ತದೆ. ನಾನು ಅಪರಿಚಿತ ವ್ಯಕ್ತಿ ಗಾಯಾಳುವಿನ ಪತ್ತೆಗಾಗಿ ಯಾದಗಿರಿ ನಗರದ ಲಾಡೇಸ್ ಗಲ್ಲಿ, ಮುಸ್ಲಿಂಪುರ, ಗಾಂಧಿಚೌಕ್, ಇತರೆ ಕಡೆಗಳಲ್ಲಿ ವಿಚಾರಿಸಲು ಗಾಯಾಳುವಿನ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಶ್ರೀ ಸಣ್ಣಕ್ಕೆಪ್ಪ ಎಚ್.ಸಿ- 27 ರವರು ಸಾಯಂಕಾಲ 3-45 ಪಿ.ಎಂ.ಕ್ಕೆ ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂಧರೆ ಅಪರಿಚಿತ ವ್ಯಕ್ತಿಯ ಉಪಚಾರಕ್ಕಾಗಿ ಯಾದಗಿರಿಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ನಾನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದಾಗ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಗಾಯಾಳುವಿಗೆ ಪರಿಕ್ಷೀಸಿ ಈತನು ಅಪಘಾತದಲ್ಲಾದ ಗಾಯದ ಭಾದೆಯಿಂದ ಇಂದು ದಿನಾಂಕ 13/07/2019 ರಂದು ಸಮಯ 3-30 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದ್ದು ಈ ಬಗ್ಗೆ ಮಾನ್ಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರಿಂದ ಅವರ ಆದೇಶದಂತೆ ಸದರಿ ಘಟನೆ ಬಗ್ಗೆ ನಾನೇ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ನೀಡುತ್ತಿದ್ದು ಅಪರಿಚಿತ ವ್ಯಕ್ತಿಯ ವಯಸ್ಸು ಅಂದಾಜು 50 ರಿಂದ 55 ವರ್ಷವಿದ್ದು, ಗಂಡಸು ವ್ಯಕ್ತಿಯ ಚಹರೆಯು ಕೋಲು ಮುಖವಿದ್ದು, ಕಪ್ಪು ಮೈಬಣ್ಣ, ತಲೆಯ ಮೇಲೆ ಸಣ್ಣ ಕಪ್ಪು-ಬಿಳುಪು ಕೂದಲಿದ್ದು, ವ್ಯಕ್ತಿಯು ಬಿಳಿ ಬಣ್ಣದ ಪುಲ್ ಶಟರ್ು, ಬೂದು ಬಣ್ಣದ ಪ್ಯಾಂಟು ಧರಿಸಿರುತ್ತಾನೆ ಕಾರಣ ಇಂದು ದಿನಾಂಕ 13/07/2019 ರಂದು ಬೆಳಿಗ್ಗೆ 11-45 ಎ.ಎಂ. ಸುಮಾರಿಗೆ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಅಪರಿಚಿತ ವ್ಯಕ್ತಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-34, ಎಫ್-1170 ನೇದ್ದು ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ತಲೆಗೆ ಭಾರೀ ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿನ ವೈದ್ಯರು ಗಾಯಾಳುವಿಗೆ ಪರಿಶೀಲಿಸಿ ಇಂದು ದಿನಾಂಕ 13/07/2019 ರಂದು ಮದ್ಯಾಹ್ನ 3-30 ಪಿ.ಎಂ.ಕ್ಕೆ ಮೃತಪಟ್ಟ ಬಗ್ಗೆ ತಿಳಿಸಿದ್ದು ಅಪಘಾತ ಪಡಿಸಿದ ಬಸ್ ಚಾಲಕನ ಮೇಲೆ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2019 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 57/2019 ಕಲಂ. 143, 448, 323, 324, 354, 504 ಸಂಗಡ 149 ಐಪಿಸಿ:-ದಿನಾಂಕ:09/07/2019 ರಂದು ಸಂಜೆ 7.00 ಗಂಟೆ ಸುಮಾರಿಗೆ ಪಿಯರ್ಾದಿ ಮನೆಯಲ್ಲಿದ್ದಾಗ ಅವಳ ಗಂಡ ಇಲ್ಲದ ಸಮಯದಲ್ಲಿ ಆರೋಫಿತರು ಮನೆಯೊಳಗೆ ಬಂದು ಏಕಾಏಕಿ ಏನು ಎಂತ ಎಂದು ಕೇಳದೆ ಏನೆ ರೇಣಿ ಸೂಳೀ ರಂಡಿ ನಿಮ್ಮ ತಮ್ಮಂದಿರನ್ನು ಮುಂದೆ ಇಟ್ಟಕೊಂಡು ನಮ್ಮ ಜೊತೆ ಜಗಳಕ್ಕೆ ಕಳುಹಿಸುದ್ದಿಯಾ, ನಿಮ್ಮ ತಮ್ಮಂದಿರಗೆ ಹೊಡೆದ ಹಾಗೆ ನಿನ್ನನ್ನು ಸಹ ಹೊಡೆದು ಹಾಕುತ್ತೇವೆ ಎಂದು ಪಿಯರ್ಾದಿ ಕೂದಲು ಹಿಡಿದು ಎಳೆದು ನೆಲಕ್ಕೆ ಒಗೆದು ಕಾಲಿನಿಂದಾ ಒದ್ದಿದ್ದು. ಅಲ್ಲದೇ ಕಟ್ಟಿಗೆಯನ್ನು ಎಳೆದುಕೊಂಡು ಬಂದು ಮನಬಂದಂತೆ ಹೊಡೆದು ಗುಪ್ತ ಗಾಯ ಮಾಡಿದ್ದು ಈ ಚಿತ್ರ ಹಿಂಸೆಯನ್ನು ತಾಳಲಾರದೆ ಚಿರಾಡುವಾಗ ಸಾಕ್ಷಿದಾರರು ಬಂದು ಬಿಡಿಸಿರುತ್ತಾರೆ ಅಂತಾ ಇತ್ಯಾದಿ ಟೈಪ್ ಮಾಡಿಸಿದ ಅಜರ್ಿ ದೂರಿನ ಮೇಲಿಂದಾ ಕ್ರಮ ಜರುಗಿಸಿದೆ.
ಯಾದಗಿರಿ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ: 498(ಎ), 323, 504, 506, 114 ಸಂ/ 149 ಐ.ಪಿ.ಸಿ:- ದಿನಾಂಕ: 13.07.2019 ರಂದು ಮದ್ಯಾಹ್ನ 12.30 ಪಿ.ಎಂಕ್ಕೆ ಪಿರ್ಯಾಧಿ ಶ್ರೀಮತಿ ಸುಮಂಗಲ ಗಂಡ ಮರಲಿಂಗ ಬೆಳ್ಳಿ ವಯಾ-23 ಉ-ಮನೆಕೆಲಸ ಜಾತಿ- ಹರಿಜನ ಸಾ-ಬಸವಂತಪೂರ ಹಾ.ವ. ರಾಜೀವಗಾಂಧಿ ನಗರ ಯಾದಗಿರಿ ನಿವಾಸಿಯಾಗಿರುತ್ತೇನೆ. ನನಗೆ ದಿನಾಂಕ: 22.05.2017 ರಂದು ಯಾದಗಿರಿ ನಗರದ ಲುಂಬಿನ ಗಾರ್ಡನ ಮುಂದುಗಡೆ ಇರುವ ಶಾದಿ ಮಹಲ್ನಲ್ಲಿ ನಮ್ಮ ಗುರು ಹಿರಿಯರ ಸಮ್ಮುಖದಲ್ಲಿ ಬಸವಂತಪೂರ ಗ್ರಾಮದ ಮರಲಿಂಗ ತಂದೆ ಚಂದ್ರಪ್ಪ ಬೆಳ್ಳಿ ಇವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ಗಂಡನ ಮನೆಗೆ ಹೋದಾಗ ಸ್ವಲ್ಪ ದಿನ ಮಾತ್ರ ನನಗೆ ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನಗೆ ನನ್ನ ಗಂಡ ಮರಲಿಂಗ, ನನ್ನ ಅತ್ತೆ ಚಂದ್ರಮ್ಮ, ನನ್ನ ಮಾವ ಚಂದ್ರಪ್ಪ ಇವರು ನನಗೆ ಮಾನಸಿಕವಾಗಿ ಕಿರುಕುಳ ಕೊಡಲು ಶುರು ಮಾಡಿದ್ದರು. ನನ್ನ ಅತ್ತೆ ಮತ್ತು ನನ್ನ ಮಾವ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ. ನೀನು ದಿನಾಲು ಹೊಲಕ್ಕೆ ಹೋಗಿ ಕೆಲಸ ಮಾಡಬೇಕು ಕೂಲಿ ಕೆಲಸ ಮಾಡು ಅಂತ ನನ್ನ ಅತ್ತೆ ಸೂಳಿ, ರಂಡಿ ಎಂದು ಅವ್ಯಾಚವಾಗಿ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತತಿದ್ದರು. ನನ್ನ ಮಾವ ಚಂದ್ರಪ್ಪ ಇವರು ನೀನು ಸುಮ್ಮನೇ ಮನೆಯಲ್ಲಿ ಕುಳಿತು ಊಟ ಮಾಡುತ್ತಿಂ ಯಾರೂ ತಂದು ಹಾಕಬೇಕು ನಿನಗೆ ಅಂತ ನನ್ನ ಮಾವ ಕೂಡ ಹೊಲಸು ಶಬ್ದಗಳಿಂದ ಬೈಯುತ್ತಿದ್ದನು. ನನ್ನ ಗಂಡ ಮರಲಿಂಗ ಈತನು ತನ್ನ ತಂದೆ ತಾಯಿ ಮಾತು ಕೇಳಿ ಸೂಳಿ ನಿನಗೆ ಕೆಲಸ ಮಾಢಲು ಬರುವುದಿಲ್ಲ ನೀನು ನಮ್ಮ ಮನೆಯಲ್ಲಿ ಇರಬ್ಯಾಡ ಅಂತ ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ. ದಿನಾಂಕ: 25.06.2019 ರಂದು ಪುನಃ ನ್ಯಾಯಾ ಪಂಚಾಯಿತಿ ಮಾಡಲು ಕರೆಯಿಸಿದ್ದು ಯಾದಗಿರಿಯ ರಾಜೀವಗಾಂಧಿ ನಗರದ ನಮ್ಮ ಮನೆಯ ಮುಂದೆ ಈ ಮೇಲ್ಕಂಡವರು ನ್ಯಾಯ ಪಂಚಾಯತಿ ಮಾಡುವಾಗ ಮಾತಿಗೆ ಮಾತು ಬೆಳೆದು ನನ್ನ ಗಂಡ ಮರಲಿಂಗ ಈತನು ನನಗೆ ಕೈಯಿಂದ ಹೊಡೆದಿದ್ದು ಅಲ್ಲದೆ ನಾನು ಮತ್ತೊಂದು ಮದುವೆ ಮಾಡಿಕೋಳ್ಳುತ್ತೇನೆ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದನು. ನನ್ನ ಅತ್ತೆ ಮತ್ತು ಮಾವ ಇವರು ಕೂಡಾ ನನಗೆ ಈ ಸೂಳೆಗೆ ಬಿಟ್ಟು ಬಿಡು ಅಂತಾ ಅಂದಿದ್ದು ಅದೇ ರೀತಿ ನನ್ನ ನಾದನಿಯಾದ ಮರೇಮ್ಮ ಈಕೆಯು ನನ್ನ ತಲೆ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈ ಯಿಂದ ಹೋಡೆ ಬಡೆ ಮಾಡಿರುತ್ತಾಳೆ. ಅಲ್ಲದೆ ನನ್ನ ನಾದನಿ ಗಂಡ ಸಿದ್ದಪ್ಪ ಇತನು ನನ್ನ ಅಳಿಯನಿಗೆ ಮತ್ತೊಂದು ಮದುವೆ ಮಾಡುತ್ತೇವೆ ಏನು ಮಾಡುಕೋತ್ತಿರಿ ಮಾಡಕೋಳ್ಳಿ ಅಂತಾ ನಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದ್ದರೆ ನಿಮಗೆ ಜೀವ ಸಮೇತ ಬಿಡಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೊಡೆ ಬಡೆ ಮಾಡಿ ಕಿರುಕುಳ ಕೊಟ್ಟು ಮಗು ಹುಟ್ಟಿದರೂ ಕೂಡಾ ಮಗುವಿನ ಮುಖ ನೋಡದೆ ಒಂದುವರೆ ವರ್ಷದಿಂದ ತವರು ಮನೆಯಲ್ಲಿ ಬಿಟ್ಟು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮತ್ತು ನನಗೆ ಹೊಡೆ ಬಡೆ ಮಾಡಲು ಕಿರುಕುಳ ಕೊಡಲು ಪ್ರಚೋದನೆ ಮಾಡಿದ ನನ್ನ ಗಂಡ ಮರಲಿಂಗ ಅತ್ತೆ ನಾಗಮ್ಮ ಮಾವ ಚಂದ್ರಪ್ಪ ನಾದನಿ ಮರೇಮ್ಮ ಮತ್ತು ನಾದನಿ ಗಂಡ ಸಿದ್ದಪ್ಪ ಲಿಂಗೇರಿ ಇವರ ಮೇಲೆ ಕಾನೂನು ರೀತಿ ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಿಕೊಡಲು ವಿನಂತಿಸಿಕೊಳ್ಳುತ್ತೆನೆ ಅಂತ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆನಂ: 23/2019 ಕಲಂ: 498(ಎ), 323, 504, 506, 114 ಸಂ/ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ:87 ಕೆ ಪಿ ಆಕ್ಟ:- ದಿನಾಂಕ:13.07.2019 ರಂದು 6:30 ಪಿಎಮ್ ಕ್ಕೆ ಸಿಪಿಐ ಸಾಹೇಬರು ಹುಣಸಗಿ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಇಸೀಟ್ ಜೂಜಾಟದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರವನ್ನು 3 ಜನ ಆರೋಪಿತರನ್ನು ಹಾಗೂ ಅವರಿಂದ ಜಪ್ತು ಮಾಡಿದ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸಿದ್ದು ಸಿಪಿಐ ಸಾಹೇಬರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ತಾವು ತಮ್ಮ ಕಛೇರಿಯಲ್ಲಿದ್ದಾಗ ಕಕ್ಕೇರಾ ಸೀಮಾಂತರ ಬಸವರಾಜ ಕಂಚಿ ರವರ ಹೊಲದ ಹತ್ತಿರ ಕೆನಾಲ ಪಕ್ಕದ ಖುಲ್ಲಾ ಜಾಗೆಯಲ್ಲಿ ಅಂದಬಾಹರ ಎಂಬ ನಶೀಭದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಖಚಿತ ಭಾತ್ಮಿ ಬಂದ ಮೇರೆಗೆ ಸಿಪಿಐ ಸಾಹೇಬರು ಮತ್ತು ಸಂಗಡ ಸಿಬ್ಬಂದಿಯಾದ ಪರಮಾನಂದ ಹೆಚ್.ಸಿ-159, ಬಸವರಾಜ ಪಿಸಿ-173, ರವಿಕುಮಾರ ಪಿಸಿ-317, ಶಿವರಾಜ ಪಿಸಿ-310, ವಿಕಾಸ ಎಪಿಸಿ-144 ಮತ್ತು ಕೊಡೇಕಲ್ಲ ಠಾಣೆಯ ಪ್ರಕಾಶ ಹೆಚ್.ಸಿ-143 ರವರೊಂದಿಗೆ ಮತ್ತು ಪಂಚರಾದ 1)ಶ್ರೀ.ಕೆಂಚಪ್ಪ ತಂದೆ ಬಸಣ್ಣ ಶಿರಗೊಂಡ ಸಾ:ಹೆಬ್ಬಾಳ(ಬಿ), 2)ಶ್ರೀ.ಗೋವಿಂದ ತಂದೆ ನಾರಾಯಣ ರಾಠೋಡ ಸಾ:ಹುಣಸಗಿ ತಾಂಡಾ ರವರೊಂದಿಗೆ ಸ್ಥಳಕ್ಕೆ ಹೋಗಿ ಅಂದಬಾಹರ ಎಂಬ ನಶೀಭದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಲು 3 ಜನರು ಸಿಕ್ಕಿದ್ದು, ಒಬ್ಬನು ಓಡಿಹೋಗಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ನಂದಪ್ಪ ಕಂಚಿ ವ;32 ವರ್ಷ ಜಾ: ಹಿಂದೂ ಕುರುಬರ ಉ:ಒಕ್ಕಲುತನ 2) ತಿಪ್ಪಣ್ಣ ತಂದೆ ಬಸಪ್ಪ ಶಾಂತಪೂರ ವ:35 ವರ್ಷ ಜಾ: ಹಿಂದೂ ಕುರುಬರ ಉ:ಒಕ್ಕಲುತನ 3) ಮಹ್ಮದಸರವರ ತಂದೆ ಲಾಳೆಸಾಬ ನದಾಫ್ ವ: 34 ವರ್ಷ ಜಾ: ಮುಸ್ಲಿಂ ಉ: ಡ್ರೈವರ್ ಎಲ್ಲರೂ ಸಾ: ಕಕ್ಕೇರಾ ತಾ: ಸುರಪೂರ ಇದ್ದು. ಒಬ್ಬನು ಓಡಿ ಹೋಗಿದ್ದು ಹೆಸರು ಮತ್ತು ವಿಳಾಸವನ್ನು ಸಿಕ್ಕವರಿಗೆ ವಿಚಾರಿಸಲು 4) ಸಂಗನಬಸಯ್ಯ ತಂದೆ ಗುರಯ್ಯಸ್ವಾಮಿ ಸಾ:ಕಕ್ಕೇರಾ ಎಂದು ತಿಳಿಸಿದ್ದು ಸಿಕ್ಕ ಆರೋಪಿತರಿಂದಾ ಮತ್ತು ಸ್ಥಳದಿಂದಾ ಒಟ್ಟು 3850=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಪಂಚನಾಮೆಯನ್ನು ಬರೆದುಕೊಂಡು 3 ಜನ ಆರೋಪಿತರಿಗೆ ಹಾಗೂ ಮುದ್ದೆ ಮಾಲನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದೆ ಅಂತಾ ಇದ್ದು ಸಿಪಿಐ ಸಾಹೇಬರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 40/2019 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using