ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-07-2019

By blogger on ಬುಧವಾರ, ಜುಲೈ 10, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-07-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 174/2019.ಕಲಂ 279.337.338 ಐ.ಪಿ.ಸಿ.:- ದಿನಾಂಕ 10/07/2019 ರಂದು 19-30 ಗಂಟೆಗೆ ಶ್ರೀ ರುದ್ರಗೌಡ ತಂದೆ ಬಸವರಾಜ ಮಲ್ಹಾರ ವ|| 45 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಗೋಗಿ (ಕೆ)  ಹಾ||ವ|| ಚಾಹುಸ್ ಲೇಹೌಟ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ನಿಡಿದ್ದೆನೆಂದರೆೆ. ನನ್ನ ಹೆಂಡತಿ ಗಂಗಾ ಇವರು ಯಾದಗಿರಿಯಲ್ಲಿ ತರಬೇತಿ ಇರುತ್ತದೆ ಅಂತಾ ತಿಳಿಸಿದ್ದರಿಂದ ದಿನಾಂಕ-02/07/2019 ರಂದು ಬೆಳಿಗ್ಗೆ 08-00 ಗಂಟೆಗೆ ನಾನು ಮತ್ತು ಹೆಂಡತಿ ಗಂಗಾಳನ್ನು ಕರೆದುಕೊಂಡು ಶಹಾಪೂರಕ್ಕೆ ಬಂದು ಯಾದಗಿರಿ ಬಸ್ಸಿಗೆ ಕೂಡಿಸಿ ಕಳುಸಿದ್ದು ಇರುತ್ತದೆ. ನಂತರ ನಾನು ಗೋಗಿ ಗ್ರಾಮಕ್ಕೆ ಹೋದೆನು. ಸಾಯಂಕಾಲ 06-20 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಗಂಗಾ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಯಾದಗಿರಿಗೆ ಹೋಗಿ ತರಬೇತಿ ಮುಗಿಸಿಕೊಂಡು ಮರಳಿ ಶಹಾಪೂರಕ್ಕೆ ಬಂದು ಒಂದು ಆಟೋದಲ್ಲಿ ನನ್ನ ಮನೆಗೆ ಬರುತ್ತಿರುವಾಗ ಶಹಾಪೂರ-ಭೀ,ಗುಡಿ ಮುಖ್ಯ ರಸ್ತೆಯ ಗೋವಿಂದರಾಜ ನಗರದ ಕಮಾನ ಹತ್ತೀರ ಆಟೋ ನಿಲ್ಲಿಸಿ ಆಟೋದಿಂದ ಇಳಿದು ಮನೆಗೆ ಹೋಗುವ ಸಂಬಂಧ ರಸ್ತೆ ದಾಟುವಾಗ ಭೀ ಗುಡಿ ಕಡೆಯಿಂದ ಒಂದು ಮೋಟಾರು ಸೈಕಲ್ ಚಾಲಕನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ನಾನು ಮತ್ತು ಸದರಿ ಮೋಟಾರು ಚಾಲಕನು ರಸ್ತೆ ಮೇಲೆ ಬಿದ್ದಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ಮೂಗಿನ ಹತ್ತೀರ ರಕ್ತಗಾಯ, ಬಲಗಡೆ ಕಪಾಳಕ್ಕೆ, ಎಡಗಣ್ಣಿನ ಹತ್ತೀರ, ಎಡಗಡೆ ಮೇಲಕಿನ ಹತ್ತಿರ ತರಚಿದ ರಕ್ತಗಾಯ, ಎರಡು ಕೈಗಳಿಗೆ ತರಚಿದ ಗಾಯ, ಎರಡು ಮೋಣಕಾಲಿಗೆ ತರಚಿದ ರಕ್ತಗಾಯ ಎಡಗಾಲಿನ ತೊಡಿಕಿಲಿಗೆ ಬಾರಿ ಗುಪ್ತಗಾಯ, ಬೆನ್ನಿಗೆ ಗುಪ್ತಗಾಯವಾಗಿರುತ್ತದೆ. ನನಗೆ ಅಪಘಾತ ಮಾಡಿದ ಮೋಟರ್ ಸೈಕಲ್ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಮರೆಪ್ಪ ವಡ್ಡರ ಸಾ|| ಟೋಕಾಪೂರ ಅಂತಾ ತಿಳಿಸಿದನು, ಸದರಿಯವನಿಗೆ ಎಡಗಣ್ಣಿನ ಕೆಳಗಡೆ, ಮೆಲಕಿಗೆ ರಕ್ತಗಾಯ, ಎಡಗೈ ಬೆರಳುಗಳಿಗೆ, ಎಡ ಮೋಣಕಾಲಿಗೆ, ಎಡಗಾಲ ಪಾದಕ್ಕೆ ತೆರಚಿದ ಗಾಯವಾಗಿರುತ್ತದೆ. ಅಪಘಾತ ಮಾಡಿದ ಮೋಟಾರ ಸೈಕಲ್ ನಂಬರ ಕೆಎ-33 ಯು-5542 ನೇದ್ದು ಇರುತ್ತದೆ. ಸದರಿ ಅಪಘಾತವಾಗಿದ್ದನ್ನು ನೋಡಿ ಅಲ್ಲೆ ನಿಂತಿದ್ದ ನನಗೆ ಪರಿಚಯದವರಾದ ರಾಮನಗೌಡ ತಂದೆ ಅಪ್ಪಾಸಾಹೇಬ ಅಯ್ಯಪ್ಪಗೋಳ ಸಾ|| ಗೋಗಿ (ಕೆ) ಮತ್ತು ನಾನು ಕುಳಿತು ಬಂದಿದ್ದ ಆಟೋ ಚಾಲಕನಾದ ಅಂಬ್ರೀಶ ತಂದೆ ಭೀಮರಾಯ ಬನ್ನಟ್ಟಿ ಸಾ|| ಬೆನಕನಳ್ಳಿ ಇವರು ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಸದರಿ ಅಪಘಾತವು ಸಾಯಂಕಾಲ 6-00 ಗಂಟೆಗೆ ಜರುಗಿರುತ್ತದೆ, ಅಂತಾ ಪೋನ ಮಾಡಿ ನನಗೆ ತಿಳಿಸಿದ್ದರಿಂದ. ನಾನು ಸದರಿ ಅಪಘಾತವಾಗಿದ್ದ ಸ್ಥಳಕ್ಕೆ ಬಂದು ನೋಡಿ ವಿಚಾರಿಸಿದ್ದು ನನ್ನ ಹೆಂಡತಿಗೆ ಸದರಿ ಅಪಘಾತದಲ್ಲಿ ಮೇಲಿನಂತೆ ಗಾಯಗಳಾಗಿದ್ದು ಇರುತ್ತದೆ. ಆಗ ನನ್ನ ಹೆಂಡತಿಯಾದ ಗಂಗಾ ಗಂಡ ರುದ್ರಗೌಡ ಮತ್ತು ನಿಂಗಪ್ಪ ತಂದೆ ಮರೆಪ್ಪ ವಡ್ಡರ ಇವರಿಗೆ ಉಪಚಾರ ಕುರಿತು ನಾನು ಮತ್ತು ರಾಮನಗೌಡ ಆಟೋ ಚಾಲಕನಾದ ಅಂಬ್ರೀಶ ಮೂರು ಜನ ಒಂದು ಟಂಟಂ ಆಟೋ ನಿಲ್ಲಿಸಿ ಆಟೋದಲ್ಲಿ ಕುಡಿಸಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಹೆಂಡತಿಗೆ ಬಾರಿ ಗಾಯವಾಗಿದ್ದರಿಂದ ಸೊಲ್ಲಾಪೂರದ ಸ್ಪಷರ್ಾ ನೀರೊ ಕೇರ ಸೆಂಟರ್ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಇರುತ್ತದೆ. ನನ್ನ ಹೆಂಡತಿಗೆ ಉಪಚಾರ ಮಾಡಿಸುವುದು ಅವಶ್ಯಕತೆ ಇದ್ದುದರಿಂದ ಉಪಚಾರ ಮಾಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು. .ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 174/2019 ಕಲಂ 279,337,338, ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 68/2019  ಕಲಂ: ಮನುಷ್ಯ ಕಾಣೆಯಾದ ಬಗ್ಗೆ.:- ದಿನಾಂಕ: 10/07/2019 ರಂದು 10.30 ಎಎಮ್ ಕ್ಕೆ ಶ್ರೀಮತಿ. ಜ್ಯೋತಿಬಾಯಿ ಗಂಡ ವಿಜಯಕುಮಾರ ಜಾಧವ ವಯಾ: 30 ವರ್ಷ ಉ: ಕೂಲಿ ಜಾ: ಲಂಬಾಣಿ ಸಾ: ಮೇಲಿನ ತಾಂಡಾ ಹೋಸ್ಕೇರಾ ತಾ: ಶಹಾಪೂರ ಜಿ: ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನಾನು ಜ್ಯೋತಿಬಾಯಿ ಗಂಡ ವಿಜಯಕುಮಾರ ಜಾಧವ ವಯಾ: 38 ವರ್ಷ ಉ: ಕೂಲಿ ಜಾ: ಲಂಬಾಣಿ ಸಾ: ಮೇಲಿನ ತಾಂಡಾ ಹೋಸ್ಕೇರಾ ತಾ: ಶಹಾಪೂರ ಜಿ: ಯಾದಗಿರ ಇದ್ದು, ನಮ್ಮ ತಂದೆ ಯಾಯಿಯವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದು ನನಗೆ ಹೋಸ್ಕೇರಾ ಬಾಂಗ್ಲಾ ತಾಂಡಾದ ವಿಜಯಕುಮಾರ ತಂದೆ ಗಂಗಾರಾಮ ಜಾದವ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ನನ್ನ ತಾಯಿ ಒಬ್ಬಳೆ ಇದ್ದುದರಿಂದ ನಾವು ಮದುವೆ ಆದಾಗಿನಿಂದ ನಮ್ಮ ಮನೆಯಲ್ಲಿ ಗಂಡ ಹೆಂಡತಿ ಸಂಸಾರ ಮಾಡಿಕೊಮಡು ನಮ್ಮ ಮೇಲಿನ ತಾಂಡಾದಲ್ಲಿಯೇ ಇದ್ದೇವು. ಮತ್ತು ನಾವು ಗಂಡ ಹೆಂಡತಿ ಇಬ್ಬರು ದುಡಿಯಲು ಪುನಾಕ್ಕೆ ಹೋಗಿದ್ದೇವು. ನನ್ನ ಗಂಡ ಸ್ವಲ್ಪ ಯತಾರ್ಥ ಅಂದರೆ ವ್ಯವಹಾರ ಜ್ಜಾನ ಕಡಿಮೆ ಇದ್ದು ದುಡಿಯುವದು ಊಟ ಮಾಡುವದು ಮಾತ್ರ ಮಾಡುತ್ತಿದ್ದ. ನಮಗೆ 3 ಜನ ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನಿಗೆ ಯಾವುದೆ ಚಟಗಳು ಇರುವದಿಲ್ಲ. ಇಗ್ಗೆ 2-3 ವರ್ಷಗಳ ಹಿಂದೆ ಮನೆಯಿಂದ ಆಗಾಗಾ ಸುಮ್ಮಸುಮ್ಮನೆ ಎರಡು ಮೂರು ದಿನ ಮನೆ ಬಿಟ್ಟು ಹೋಗುತ್ತಿದ್ದ. ಆಗ ನಾನು ಮತ್ತು ನಮ್ಮ ತಾಯಿ ಹುಡುಕಾಡಿದ್ದೇವು ಆಗ ಸಿಕ್ಕಿದ್ದನು ಮನೆಗೆ ಕರೆದುಕೊಂಡು ಬಂದಿದ್ದೆವು. ಹೀಗಿದ್ದು ದಿನಾಂಕ 23/06/2019 ರಂದು ಬೆಳಿಗ್ಗೆ 10.00 ಎಎಂ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ಮನೆಯಲ್ಲಿ ಇದ್ದಾಗ ನನ್ನ ಗಂಡನಾದ ವಿಜಯಕುಮಾರ ತಂದೆ ಗಂಗಾರಾಮ ಜಾಧವ ವಯಾ: 38 ಉ: ಕೂಲಿ ಜಾ: ಲಂಬಾಣಿ ಸಾ: ಹೋಸ್ಕೇರಾ ಮೇಲಿನ ತಾಂಡಾ ಈತನು ಎಂದಿನಂತೆ ಮನೆಯಿಂದ ಹೊರಗೆ ಹೋಗುತ್ತಾ ಹೋಸ್ಕೇರಾ ಊರಲ್ಲಿ ಹೋಗಿ ಬರುತ್ತೇನೆ ಅಂತಾ ಹೋಗಿದ್ದನು. ನಂತರ ರಾತ್ರಿಯಾದರು ಮನೆಗೆ ಬರಲಿಲ್ಲ. ಆಗ ನಾನು ನಮ್ಮ ತಾಯಿ ಇಬ್ಬರು ನಮ್ಮ ಬಾಂಗ್ಲಾತಾಂಡಾದಲ್ಲಿ, ಹೋಸ್ಕೇರಾದಲ್ಲಿ, ಕಾಡಂಗೆರಾದಲ್ಲಿ ವನದುಗರ್ಾ ಮತ್ತು ಶೇಟ್ಟಿಕೇರಾದಲ್ಲಿ ಹುಡುಕಾಡಿದ್ದು, ಸಿಕ್ಕಿರುವದಿಲ್ಲ. ನಂತರ ನಾನು ನಮ್ಮ ತಾಯಿ ಹುನಿಬಾಯಿ ಮತ್ತು ನಮ್ಮ ಚಿಕ್ಕಪ್ಪ ಗುಂಡಪ್ಪ ತಂದೆ ಕೇಸು ಚವ್ಹಾನ ಮತ್ತು ನರಸಿಂಗ ತಂದೆ ಗೇನುಸಿಂಗ್ ಚವ್ಹಾಣ ಎಲ್ಲರೂ ಕೂಡಿ ನನ್ನ ಗಂಡನಾದ ವಿಜಯಕುಮಾರ ಈತನನ್ನು ಶಹಾಪೂರ, ಸುರಪೂರ, ಪುನಾಃ ಮತ್ತು ಚಾಮನಾಳ, ಸಿಂದಗಿ, ಮತ್ತು ನಮ್ಮ ಸಂಬಂದಿಕರುಗಳ ಊರುಗಳಾದ ಯಾದಗಿರಿ, ದೇವದುಗರ್ಾ ಹುಣಸಗಿ ಮತ್ತು ಕೆಂಬಾವಿ ಮುಂತಾದ ಕಡೆ ಹುಡುಕಾಡಿದರೂ ಇಲ್ಲಿಯ ವರೆಗೆ ಸಿಕ್ಕಿರುವದಿಲ್ಲ. ನಮ್ಮ ಗಂಡನನ್ನು ಎಲ್ಲಾಕಡೆ ಹುಡಕಾಡಿ ಸಿಗದಿದ್ದ ಕಾರಣ ತಡವಾಗಿ ಬಂದು ಅಜರ್ಿ ನೀಡಿದ್ದು ಇರುತ್ತದೆ. ನಮ್ಮ ಗಂಡನು ಸಾದಾರಣವಾದ ಮೈಕಟ್ಟು, 05.2 ಅಡಿ ಎತ್ತರ ಸಾದಗಪ್ಪು ಬಣ್ಣ ಇದ್ದು ಮನೆಯಿಂದ ಹೊಗುವಾಗ ಹಸಿರು ಬಣ್ಣದ ಪೂಲ್ ಶರ್ಟ ಮತ್ತು ನಾಸಿ ಬಣ್ಣದ ಪ್ಯಾಂಟ ಹಾಕಿಕೊಂಡಿದ್ದು ಲಂಬಾಣಿ, ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಮಾತಾಡುತ್ತಾನೆ. ಕಾರಣ ಮಾನ್ಯರವರು ನನ್ನ ಗಂಡನಾದ ವಿಜಯಕುಮಾರ ತಂದೆ ಗಂಗಾರಾಮ ಜಾಧವ ವಯಾ: 38 ಉ: ಕೂಲಿ ಜಾ: ಲಂಬಾಣಿ ಸಾ: ಹೋಸ್ಕೇರಾ ಮೇಲಿನ ತಾಂಡಾ ಇವರು ದಿನಾಂಕ: 23/06/2019 ರಂದು 10.00 ಎಎಂ ಕ್ಕೆ ಮನೆಯಿಂದ ಹೋದವರು ಮರಳಿ ಮನೆಗೆ ಬರದೆ ಕಾಣೆೆಯಾಗಿದ್ದು ನನ್ನ ಗಂಡನನ್ನು ಹುಡಿಕಿಕೊಡಲು ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 68/2019 ಕಲಂ:ಮನುಷ್ಯ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                                                                                                                      
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 69/2019 ಕಲಂ: 143, 147, 148, 323, 326, 307, 504, 506 ಸಂ; 149 ಐಪಿಸಿ:-ದಿನಾಂಕ: 10/07/2019 ರಂದು 12.20 ಪಿಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದ ವೈದ್ಯಾದಿಕಾರಿಗಳಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳುದಾರರಾದ ಶ್ರೀ. ದೇಸು ತಂದೆ ಲೋಕುನಾಯ್ಕ ಚವ್ಹಾಣ ವಯಾ:60 ವರ್ಷ ಜಾ: ಲಂಬಾಣಿ ಉ: ಒಕ್ಕಲುತನ ಸಾ: ಬಾಂಗ್ಲಾ ತಾಂಡಾ ಹೋಸ್ಕೇರಾ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಪಿಯರ್ಾದಿ ಸಾರಂಶ ಏನಮದರೆ, ದಿನಾಂಕ:10/07/2019 ರಂದು ನಾನು ಮತ್ತು ಶರಣಪ್ಪ ಟಿಪಿ ಮೇಂಬರ ಮತ್ತು ಗುಂಡಪ್ಪ ಗ್ರಾಮ ಪಂಚಾಯಿತಿ ಸದಸ್ಯ ಎಲ್ಲರು ನಮ್ಮ ಹೋಸಕೇರಿ ಬಾಂಗ್ಲಾ ತಾಂಡಾದ ಸೇವಲಾಲ ಗುಡಿಯ ಹಿಂದೆ ಬೆಳಿಗ್ಗೆ 09.30 ಎಎಂ ಸುಮಾರಿಗೆ ಬಂದು ಸೇರಿ ಗುರುನಾಥಥೀತನಿಗೆ ಬರಲು ಹೇಳಿದೆವು. ಆಗ ಅಂದರೆ ಅಂದಾಜು 10.00 ಎಎಂ ಸುಮಾರಿಗೆ ಆರೋಪಿತರೆಲ್ಲರೂ ಕೂಡಿ ಗುಂಪಾಗಿ ಬಂದು ಸುಳೇ ಮಗನೆ ದೇಸ್ಯಾ ನಿಂದು ಸೊಕ್ಕು ಬಹಳ ಆಗಿದೆ ನಿನ್ನವೌನ ನಿನಗ ನಿನ್ನ ಮಕ್ಕಳಿಗೆ ಖಲಾಸ್ ಮಾಡಿ ಮನಿ ಕಟ್ಟುತ್ತೇವೆ, ಏನು ಕಿತ್ತಿಕೋತಿ ನೋಡುತ್ತೇವೆ ಅಂತಾ ಅವಾಚ್ಯವಾಗಿ ಬೈಯುತ್ತಾ ನನಗೆ ಕೋಲೆ ಮಾಡುವ ಉದ್ದೇಶದಿಂದ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ, ಗುರುನಾಥ ಈತನು ನನಗೆ ಕೋಲೆ ಮಾಡುವ ಉದ್ದೇಶ ದಿಂದ ಒಂದು ಕಲ್ಲಿನಿಂದ ನನ್ನ ತಲೆಯ ಅಳ್ಳೆತ್ತಿಯ ಮೇಲೆ ಹೊಡೆದನು. ಅದರಿಂದಾಗಿ ತಲೆಯಲ್ಲಿ ಭಾರಿ ರಕ್ತಗಾಯವಾಗಿ ರಕ್ತಸ್ರಾವ ಆಗಿರುತ್ತದೆ. ತನ್ನ ಮಗ ಅಂಬ್ರೇಶ ಈತನಿಗೆ ಈ ಸೂಳೆ ಮಗನಿಗೆ ಹೊಡೆದು ಖಲಾಸ್ ಮಾಡು ಅಂತಾ ಹೇಳಿದ ಆಗ ಅಂಬ್ರೇಶ ಈತನು ತನ್ನ ಕೈಯಲ್ಲಿ ಇದ್ದ ಒಂದು ಬಡಿಗೆಯಿಂದ ನನ್ನ ಎದೆಗೆ ಹೊಡೆದನು ಎದೆಗೆ ಗುಪ್ತಪೆಟ್ಟಾಯಿತು. ಅದೆ ಬಡಿಗೆಯಿಂದ ನನ್ನ ಬಲಗಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ನನ್ನ ಮಗ ನಿಲೇಶ ತಂದೆ ದೇಸುನಾಯ್ಕ ಈತನಿಗೆ ರೂಪಸಿಂಗ್ ಜಾಧವ ಈನತನು ಒಂದು ಕಲ್ಲಿನಿಂದ ಮುಖಕ್ಕೆ ಮತ್ತು ತಲೆಗೆ ಹಿಡೆದು ರಕ್ತಗಾಯ ಮಾಡಿರುತ್ತಾನೆ. ಕಿಶನ ತಂದೆ ದೇಸುನಾಯ್ಕ ಈತನಿಗೆ ದೇವರಾಜ ತಂದೆ ಗುರುನಾಥ ಈತನು ಒಂದು ಬಡಿಗೆಯಿಂದ ಎರಡು ಕಾಲುಗಳಿಗೆ ಹೊಡೆದು ತರಚಿದ ಗಾಯಗಳನ್ನು ಮತ್ತು ಎದೆಗೆ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ವಿಜಯಕುಮಾರ ತಂದೆ ದೇಸುನಾಯ್ಕ ಈತನಿಗೆ ಅಜರ್ುನ ತಂದೆ ಗುರುನಾಥ ಈತನು ಒಂದು ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ ಮಾಡಿದನು. ಅರಣಕುಮಾರ ತಂದೆ ದೇಸುನಾಯ್ಕ ಈತನಿಗೆ ಅಂಬ್ರೇಶ ಈತನು ಒಂದು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಸದರಿಯವರೆಲ್ಲರು ಹೊಡೆಯುವಾಗ ರೇಣುಕಾಬಾಯಿ ಇವಳು ಈ ಸೂಳೆ ಮಕ್ಕಳಿಗೆ ಖಲಾಸ್ ಮಾಡಿರಿ ಅಂತಾ ಬೈಯುತ್ತಾ ಕಾಲಿನಿಂದ ನನ್ನ ಬೆನ್ನಿಗೆ ಒದ್ದಿರುತ್ತಾಳೆ. ಕಾರಣ ನಮಗೆ ಕೋಲೆ ಮಾಡಬೇಕು ಎಂಬ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದು ಕಲ್ಲು ಬಡೆಯಿಂದ ಹೊಡೆದು ಕೋಲೆಮಾಡಲು ಪ್ರತ್ನಿಸಿ ಭಾರಿ ಗಾಯಗೊಳಿಸದ ಮೇಲಿನ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ 02.45 ಪಿಎಂ ಕ್ಕೆ ಠಾಣೆಗೆ ಬಂದು ಠಾಣೆ ಗುನ್ನೆ ನಂ: 69/2019 ಕಲಂ: : 143, 147, 148, 323, 326, 307, 504, 506 ಸಂ; 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 70/2019 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ:-ದಿನಾಂಕ: 10/07/2019 ರಂದು 12.30 ಪಿಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದ ವೈದ್ಯಾದಿಕಾರಿಗಳಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳುದಾರರಾದ ಶ್ರೀ. ಗುರುನಾಥ ತಂದೆ ಪೋಮುನಾಯಕ ಜಾಧವ ವಯಾ:45 ವರ್ಷ ಜಾ: ಲಂಬಾಣಿ ಉ: ಒಕ್ಕಲುತನ ಸಾ: ಬಾಂಗ್ಲಾ ತಾಂಡಾ ಹೋಸ್ಕೇರಾ ತಾ: ಶಹಾಪೂರ ಜಿ: ಯಾದಗಿರಿ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಪಿಯರ್ಾದಿ ಸಾರಂಶ ಏನಮದರೆ, ನಮ್ಮ ತಾಂಡಾದ ಸಜನಿಬಾಯಿ ಗಂಡ ಲೋಕುನಾಯಕ ಇವರ ತಂಗಿಯಾದ ರಮಕಿಬಾಯಿ ಗಂಡ ಉಮಲಾನಾಯಕ ಸಾ: ಹಾರಣಗೇರಾ ತಾಂಡಾ ಇವರುಗಳಿಗೆ ನಮ್ಮ ತಾಂಡಾದಲ್ಲಿ ಒಂದೊಂದು ಪ್ಲಾಟ ಜಾಗ ಬಂದಿದ್ದು ಇರುತ್ತದೆ. ರಮಕಿಬಾಯಿ ಗಂಡ ಉಮಲಾನಾಯಕ ಸಾ: ಹಾರಣಗೇರಾ ತಾಂಡಾ ಇವರ ಜಾಗವನ್ನು ಉಮಲಾನಾಯಕ ಈತನು 2012 ರಲ್ಲಿ ನನಗೆ ಮಾರಾಟ ಮಾಡಿ ನನ್ನ ಹೆಸರಿಗೆ ಸ್ಟಾಂಪ ಬರೆಯಿಸಿಕೊಟ್ಟಿದ್ದು ಇರುತ್ತದೆ. ಸದ್ಯ ನಾನು ಖರೀದಿಸಿದ ಪ್ಲಾಟನಲ್ಲಿ ಮನೆ ಕಟ್ಟಲು ಆರಂಬಿಸಿದಾಗ ನಮ್ಮ ತಾಂಡಾದ ರಮಕಿಬಾಯಿ ಮತ್ತು ಅವರ ಮಗ ನರಸಿಂಗ ಮತ್ತು ಅವರ ಅಣ್ಣತಮ್ಮಮದಿರು ಕೂಡಿ ನಮಗೆ ನೀನು ಜಾಗ ಖರಿದಿ ಮಾಡಿಲ್ಲ ಅಂತಾ ತಕರಾರು ತಗೆದು ಇನ್ನು 20,000=00 ರೂ ಕೊಡಬೇಕು ಅಂದರೆ ನಿಮಗೆ ಜಾಗ ಬಿಡುತ್ತೇವೆ ಅಂತಾ ಹೇಳಿದರು. ಅದಕ್ಕೆ ನಾವು ಒಪ್ಪಿರಲಿಲ್ಲ. ಮತ್ತೆ ಪಂಚಾಯತಿ ಮಾಡೋಣ ಬನ್ನಿ ಅಂತಾ ನಮ್ಮ ಬಾಂಗ್ಲಾ ತಾಂಡಾದ ಸೇವಾಲಾಲ ಗುಡಿಯ ಹಿಂದೆ ಕರೆದಿದ್ದು ನಾವು ಅಲ್ಲಿಗೆ ಹೋದಾಗ ಅಂದಾಜು ಸಮಯ 10.00 ಗಂಟೆ ಆಗಿತ್ತು. ಆಗ 1) ದೇಸು ತಂದೆ ಲೋಕುನಾಯಕ ಚವ್ಹಾಣ 2) ಕಿಶನ ತಂದೆ ದೇಸು ಚವ್ಹಾಣ 3) ವಿಜಯ ತಂದೆ ದೇಸು ಚವ್ಹಾಣ 4) ನೀಲಕಂಠ ತಂದೆ ದೇಸು ಚವ್ಹಾಣ 5) ಅರುಣ ತಂದೆ ದೇಸು ಚವ್ಹಾಣ 6) ನರಸಿಂಗ ತಂದೆ ಶಂಕರ ಜಾಧವ ಎಲ್ಲರು ಸಾ: ಬಾಂಗ್ಲಾ ತಾಂಡಾ ಹೋಸ್ಕೆರಾ ಮತ್ತು 7) ಭೀಮ್ಲು ತಂದೆ ಉಮಲಾ 8) ವಾಸು ತಂದೆ ಉಮಲಾ 9) ರಮಕಿಬಾಯಿ ಗಂಡ ಉಮಲಾ ಎಲ್ಲರೂ ಸಾ: ಹಾರಣಗೇರಾ ತಾಂಡಾ ಇವರುಗಳು ಕೂಡಿ ನಮಗೆ ಬರ್ರಿ ಸೂಳೆ ಮಕ್ಕಳೆ ನಮ್ಮ ಪ್ಲಾಟನಲ್ಲಿ 20,000=00 ರೂ ಇಟ್ಟು ಮುಂದೆ ಹೆಜ್ಜಿ ಇಡಬೇಕು ಇಲ್ಲ ಅಂದರೆ ಅಲ್ಲಿ ಕಾಲ ಇಟ್ಟರೆ ನಿಮಗೆ ಖಡದು ಖಲಾಸ್ ಮಾಡುತ್ತೇವೆ ಅಂತಾ ಬೈಯತೊಡಗಿದರು, ಆಗ ನಾನು, ನಾವು ಖರೀದಿ ಮಾಡಿ 7 ವರ್ಷ ಆಗಿದೆ ಈಗ ಯಾಕೆ ನಿಮಗೆ ಮತ್ತೆ ಹಣ ಕೊಡಬೇಕು ಅಂತಾ ಮತ್ತು ನೀವು ಇಷ್ಟು ಸೊಕ್ಕಿನಿಂದ ಕೇಳಿದರೆ ಒಂದು ನೈಯಾಪೈಸಾ ಕೋಡುವದಿಲ್ಲ ಅಂತಾ ಅಂದಾಗ ದೇಸು ಈತನು ಕೆಳಗೆ ಕುಳಿತಲ್ಲಿಂದಲೆ ಒಂದು ಕಲ್ಲು ತಗೆದುಕೊಂಡು ಹೊಡೆದನು ನನಗೆ ತಲೆಯ ಮದ್ಯದಲ್ಲಿ ಬಡೆದು ರಕ್ತಗಾಯ ಆಯಿತು. ಆಗ ಕಿಶನ ತಂದೆ ದೇಸು ಈತನು ಒಂದು ಬಡಿಗೆಯಿಂದ ನನ್ನ ಎರಡು ಮುಡ್ಡಿಗಳಿಗೆ ಹೊಡೆದು ಪೆಟ್ಟು ಮಾಡಿದನು. ರೂಪಸಿಂಗ ಈತನಿಗೆ ವಿಜಯ ಈತನು ಒಂದು ಕಲ್ಲಿನಿಂದ ತಲೆಗೆ ಹೊಡೆದನು. ಆಗ ತಲೆಗೆ ರಕ್ತಗಾಯ ಆಗಿದ್ದು ಕಿಶನ ಈತನು ಬಡಿಗೆಯಿಂದ ಕಿವಿಯ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಅಂಬ್ರೇಶ ಈತನಿಗೆ ನೀಲಕಂಠ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ ಮತ್ತು ಮೋಳಕಾಲಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು. ದೇವರಾಜ ಮತ್ತು ಅಜರ್ುನ ಇವರುಗಳಿಗೆ ಬೀಮ್ಲಾ ಮತ್ತು ಕಿಶನ ಇವರುಗಳು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಗೊಳಿಸಿದರು. ನರಸಿಂಗ್ ಈತನು ರೇಣುಕಾಬಾಯಿ ಇವಳಿಗೆ ಕೈಹಿಡಿದು ಎಳೆದು ಟೊಂಕಕ್ಕೆ ಗುಮ್ಮಿ ಒಳಪೆಟ್ಟು ಮಾಡಿರುತ್ತಾನೆ. ಎಲ್ಲಾ 9 ಜನರು ಈ ಸೂಳೆ ಮಕ್ಕಳು 20,000=00 ರುಪಾಯಿ ಕೊಡದಿದ್ದರೆ ಜಾಗದಲ್ಲಿ ಬರಲಿ ಮಕ್ಕಳಿಗೆ ಖಡಿದು ಖಲಾಸ್ ಮಾಡೋಣ ಅಂತಾ ನಮಗೆ ಜೀವದ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಿರುಪತಿ ತಂದೆ ತುಕಾರಾಮ, ನೀರು ತಂದೆ ರುಕ್ಮಾ ಇವರುಗಳು ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಕಾರಣ ನಮಗೆ ವಿನಾಕಾರಣ ದುಡ್ಡು ಕೊಡು ಅಂತಾ ಪೀಡಿಸಿ ಪಂಚಾಯತಿ ಮಾಡೋಣ ಅಂತಾ ಕರೆದು ಮೇಲಿನ ಆರೋಪಿತರೆಲ್ಲರು ಕೂಡಿ ಅವಾಚ್ಯವಾಗಿ ಬೈದು ಕಲ್ಲು ಬಡೆಯಿಂದ ಹೊಡೆದು, ರೇಣುಕಾಬಾಯಿ ಇವಳ ಕೈ ಹಿಡಿದು ಎಳೆದು ಹೊಡೆದು ನಮಗೆಲ್ಲ ಗಾಯಗೊಳಿಸಿ ಜೀವದ ಭಯ ಹಾಕಿದ ಮೇಲಿನ 9 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ 02.50 ಪಿಎಂ ಕ್ಕೆ ಠಾಣೆಗೆ ಬಂದು ಠಾಣೆ ಗುನ್ನೆ ನಂ: 70/2019 ಕಲಂ: : 143, 147, 148, 323, 324, 354, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 55/2019 279, 337, 304(ಎ) ಐಪಿಸಿ & 187 ಐಎಂವಿ  ಕಾಯ್ದೆ:- ದಿನಾಂಕ: 10/07/2019 ರಂದು  ಮದ್ಯಾಹ್ನ 01.30 ಗಂಟೆಗೆ ಮೃತ ಮಡಿವಾಳಪ್ಪ ಹಾಗೂ ಗಾಯಾಳು ಮಹಾಂತೇಶ ಕೂಡಿ ತಮ್ಮ ಮೋಟರ ಸೈಕಲ್ ನಂ:ಕೆಎ-28 ಇ.ಕ್ಯೂ-9178 ನೇದ್ದರ ಮೇಲೆ ವಜ್ಜಲ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಹುಣಸಗಿ ಪಟ್ಟಣಕ್ಕೆ ಹೊರಟು ಹುಣಸಗಿ ಬಸವೇಶ್ವರ ವೃತ್ತ ದಾಟಿ ಹೊರಟಾಗ ಹಿಂದಿನಿಂದ ಆರೋಪಿತನು ತನ್ನ ವಿಆರ್ಎಲ್  ಲಾರಿ ನಂ: ಕೆ.ಎ.25ಎ.2376 ನೇದ್ದನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೃತನು ಚಲಾಯಿಸುತ್ತಿದ್ದ ಮೋಟರ ಸೈಕಲ್ ಗೆ ಡಿಕ್ಕಿ ಪಡಿಸಿದಾಗ ಗಾಯಾಳು ಎಡಗಡೆ ರೋಡಿನ ಮೇಲೆ ಬಿದ್ದಿದ್ದು, ಮೃತನು ಬಲಗಡೆ ರೋಡಿಗೆ ಬಿದ್ದಾಗ ಸದರಿ ಲಾರಿಯ ಗಾಲಿಯು ಮೃತ ಮಡಿವಾಳಪ್ಪನ ತಲೆಯ ಮೇಲೆ ಹೋಗಿ ತೆಲೆಯು ಚಪ್ಪಟ್ಟೆಯಾಗಿ ಮೃತನ ಮೆದಳು ಹೊರಗಡೆ ಬಂದು ಸ್ಥಳದಲ್ಲೆ ಮೃತಪಟ್ಟಿದ್ದು, ಆರೋಪಿತನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಇತ್ಯಾದಿ ದೂರಿನ ಸಾರಾಂಶದ  ಮೇಲಿಂದಾ ಕ್ರಮ ಜರುಗಿಸಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 175/2019 ಕಲಂ 143, 147, 341, 504, 506 ಸಂ 149  ಐ.ಪಿ.ಸಿ :- ದಿನಾಂಕ 10/07/2019 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿ ಶ್ರೀಮತಿ ಬಸಮ್ಮ ಗಂಡ ಯಂಕಾರೆಡ್ಡಿ ಮಕಾಶಿ ವಯ 39 ವರ್ಷ ಜಾತಿ ಪ.ಜಾತಿ (ಬೇಡರ) ಉಃ ಕೂಲಿ ಕೆಲಸ ಸಾಃ ಮರಕಲ್ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿ ಹಾಜರ ಪಡಿಸಿದ ಸಾರಾಂಶವೆನೆಂದರೆ,  ಮರಕಲ್ ಗ್ರಾಮದಲ್ಲಿ ದಿನಾಂಕ 08/07/2019 ರಂದು ಗ್ರಾಮದ ಹರಿಜನ ಜನಾಂಗದ ಶ್ರೀಮತಿ ಗೌರಮ್ಮ ಗಂಡ ಭೀಮರಾಯ ದೋರನಳ್ಳಿಕರ ಇವರ ಮಗ ಮಹಾಂತೇಶನ ಮದುವೆ ಕಾರ್ಯಕ್ರಮವಿದ್ದು, ಮದುವೆ ಮುಗಿದ ನಂತರ ರಾತ್ರಿ ಸಮಯದಲ್ಲಿ  ಮರಕಲ್ ಮತ್ತು ಎಮ್.ಕೊಳ್ಳುರ ಮದ್ಯ ರೋಡಿನ ಮೇಲೆ  ಎಸ್.ಟಿ ಮತ್ತು ಎಸ್.ಸಿ ಜನಾಂಗದವರ ಮದ್ಯ ಜಗಳವಾಗಿದ್ದು ಯಾರು ಯಾರಿಗೆ ಹೊಡೆದಿರುತ್ತಾರೆ ಅಂತ ಫಿರ್ಯಾದಿಯವರಿಗೆ ಗೊತ್ತಾಗಿರುವುದಿಲ್ಲ. ಹೀಗಿರುವಾಗ ದಿನಾಂಕ 09/07/2019 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿಯವರು ತಮ್ಮ ಮನೆಯ ಮುಂದೆ ಓಣಿಯ ರೇಣುಕಾ ಗಂಡ ಮರೆಪ್ಪ ಮಕಾಶಿ ಇವರ ಜೊತೆಯಲಿ ಬಹಿದರ್ೇಶೆಗೆ ಹೋಗುತಿದ್ದಾಗ  ಗ್ರಾಮದ ಹರಿಜನವಾಡ 1) ಶಿವಮಾನಪ್ಪ ತಂದೆ ರಾಯಪ್ಪ ಹೊಸ್ಮನಿ ವಯ 32 ವರ್ಷ 2) ಖಂಡಪ್ಪ ತಂದೆ ಮಲ್ಲಯ್ಯ ಹರಿಜನ 3) ಮಲ್ಲಪ್ಪ ತಂದೆ ಮರೆಪ್ಪ ಭಂಡಾರಿ ವಯ 22 ವರ್ಷ  4) ಮರೆಪ್ಪ ತಂದೆ ರಾಯಪ್ಪ ಹೊಸ್ಮನಿ 5) ದಶರಥ ತಂದೆ ಮಲ್ಲಪ್ಪ ಭಂಡಾರಿ 6) ಮರೆಪ್ಪ ತಂದೆ ಮಲ್ಲಯ್ಯ ಬಡಿಗೇರ ಎಲ್ಲರೂ ಸಾಃ ಮರಕಲ್ ಹಾಗೂ 7)  ಶರಣರೆಡ್ಡಿ ಸಾಃ ಹತ್ತಿಗೂಡುರ ಇವರೆಲ್ಲರೂ ಗುಂಪುಕಟ್ಟಿಕೊಂಡು ಬಂದು ಫಿರ್ಯಾದಿಯವರಿಗೆ ತಡೆದು ನಿಲ್ಲಿಸಿ ಶಿವಮಾನಪ್ಪನು  ಏ ರಂಡೆರೆ ನಿಮ್ಮವರು ನಮ್ಮ ಹುಡಗರಿಗೆ ಹೊಡೆದು ದವಾಖಾನಿಗೆ ಸೇರಿಸಿದ್ದಾರೆ ನಿಮ್ಮ ಮಕ್ಕಳು ಎಲ್ಲಿದ್ದಾರೆ  ಅವರಿಗೂ ಒಂದು ಗತಿ ಕಾಣಿಸುತ್ತೆವೆ ಅಂತ ಅಂದರು. ಆಗ ಫಿರ್ಯಾದಿಯವರು  ನಮ್ಮ ಗಂಡ ಮತ್ತು ಮಕ್ಕಳು ನಿನ್ನೆಯಿಂದ ಮನೆಗೆ ಬಂದಿರುವುದಿಲ್ಲ ಅಂತ ಅಂದಿದ್ದಕ್ಕೆ  ಆರೋಪಿತರೆಲ್ಲರೂ ಫಿರ್ಯಾದಿಯವರಿಗೆ ಅಡ್ಡಗಟಿ ಮನಬಂದತೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಗಂಡ ಮತ್ತು ಮಕ್ಕಳಿಗೆ ಒಂದು ಕಾಣಿಸದೆ ಬಿಡುವುದಿಲ್ಲ  ಅಂತ ಬೆದರಿಕೆ ಹಾಕಿ ಸುತ್ತುಗಟ್ಟಿ ಇನ್ನೇನು ಫಿರ್ಯಾದಿಯವರ ಮೇಲೆ ಹಲ್ಲೆ ಮಾಡುವಷ್ಟರಲ್ಲಿ  ಫಿರ್ಯಾದಿಯವರು ಭಯದಿಂದ ಚಿರಾಡಿದ್ದು ಆಗ ಓಣಿ ವೆಂಕಟೇಶ ಮಕಾಶಿ, ಶಿವಪ್ಪ ಮಕಾಶಿ, ನಾಗಪ್ಪ ಮಕಾಶಿ ರವರೆಲ್ಲರೂ ಬಂದು ಜಗಳ ಬಿಡಿಸಿಕೊಂಡಿರುತ್ತಾರೆ ಸದರಿ ಮೇಲ್ಕಂಡವರಿಂದ ನಮ್ಮ ಕುಟುಂಬಕ್ಕೆ ಜೀವಭಯವಿರುತ್ತದೆ ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 175/2019 ಕಲಂ 143 147 341 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!