ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-07-2019

By blogger on ಭಾನುವಾರ, ಜುಲೈ 7, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-07-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 121/2019 ಕಲಂ 279, 304(ಎ):- ದಿನಾಂಕ.07.07.2019 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಿಂದ ಫೋನ ಮುಖಾಂತರ ವಸೂಲಾದ ಎಮ್.ಎಲ್.ಸಿ ಕುರಿತು ಸದರಿ ಆಸ್ಪತ್ರೆಗೆ ಭೇಟಿ ಮಾಡಿದ ಶ್ರೀ ರಾಜೇಂದ್ರ ಎ.ಎಸ್.ಐ ರವರು ಫಿಯರ್ಾದಿಯಾದ ಶ್ರೀಮತಿ ರಾಧಿಕಾ ಗಂಡ ರೇವಯ್ಯ ಸ್ವಾಮಿ ವ:29 ಜಾ:ವೀರಶೈವ ಲಿಂಗಾಯತ ಉ:ಖಾಸಗಿ ಆಸ್ಪತ್ರೆಯಲ್ಲಿ ಅಟೆಂಡರ ಕೆಲಸ  ಸಾ:ಶೆಟ್ಟಿಉಡಾ ತಾ|| ಸೇಡಂ ಹಾ||ವ|| ಗುರುಮಠಕಲ ತಾ:ಗುರುಮಠಕಲ ಜಿ:ಯಾದಗಿರಿ ಇವರು ನೀಡಿದ ಬಾಯಿ ಮಾತಿನ ಹೇಳಿಕೆ ಪಡೆದುಕೊಂಡು ಮಹಾದೇವ ಪಿಸಿ-334 ಇವರ ಸಂಗಡ ಪೊಲೀಸ್ ಠಾಣೆಗೆ ಕಳಿಸಿಕೊಟ್ಟ ಹೇಳಿಕೆ ಮೂಲ ಪ್ರತಿಯನ್ನು ಸ್ವೀಕರಿಸಿಕೊಂಡಿದ್ದು ಸಾರಾಂಶವೇನೆಂದರೆ,ದಿನಾಂಕ.05.07.2019 ರಂದು ಶೆಟ್ಟಿ ಉಡಾ ಗ್ರಾಮದಿಂದ ಮರಳಿ ಗುರುಮಠಕಲಗೆ ಬರುವಾಗ ಗಾಜರಕೋಟ -ಚಪೆಟ್ಲಾ ಮಧ್ಯದ ರೋಡಿನ ಮೇಲೆ ಲಕ್ಷ್ಮೀ ಗುಡಿ ಹತ್ತಿರ ಸಂಗಯ್ಯ ಸ್ವಾಮಿ ಈತನು ನನ್ನ ಗಂಡನಿಗೆ ಹಿಂದೆ ಕೂಡಿಸಿಕೊಂಡು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆ.ಎ-33 ಎಕ್ಷ-2273 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ಟ ಹೊಡೆದಿದದ್ದರಿಂದ ಮೋಟಾರ ಸೈಕಲ ಸ್ಕಿಡ್ಡಾಗಿ ಹಿಂದೆ ಕುಳಿತ ನನ್ನ ಗಂಡ ರೇವಯ್ಯ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ ವಯ: 36 ವರ್ಷ, ಈತನು ಕೆಳಗೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಾ ಸಾವನ್ನಪ್ಪಿರುತ್ತಾನೆ. ಸದರಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಸಂಗಯ್ಯ ಸ್ವಾಮಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿ ಬರೆಯಿಸಿದ ಫಿರ್ಯಾಧಿ ಹೇಳಿಕೆ ಸಾರಾಂಶ ಮೇಲಿಂದ ಮಧ್ಯಾನ್ಹ 1-00 ಗಂಟೆಗೆ ಠಾಣೆ ಗುನ್ನೆ ನಂ:121/2019 ಕಲಂ 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 122/2019 ಕಲಂ: 341, 323, 504, 506 ಸಂಗಡ 34 ಐಪಿಸಿ:-ದಿನಾಂಕ 07.07.2019 ರಂದು ಬೆಳಿಗ್ಗೆ 11:00 ಗಂಟೆಗೆ ಫೀರ್ಯದಿದಾರನಾದ ನರಸಪ್ಪ ಈತನು ತಮ್ಮ ಮನೆಯಿಂದ ಚಿಂತಕುಂಟಾ ಗ್ರಾಮದ ಅಗಸೆ ಕಡೆಗೆ ಬರುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಪಿರ್ಯಾದಿಗೆ ತಡೆದು ನಿಲ್ಲಿಸಿ ಫಿರ್ಯಾದಿಯ ಪಾಲಿಗೆ ಬಂದ ಜಮೀನು ಹೆಚ್ಚಿದೆ ಅಂತಾ ಹೇಳಿ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 122/2019 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
                                                                                                                         
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 168/2019 ಕಲಂ 279, 337, 338, 304(ಎ) ಐಪಿಸಿ:-ದಿನಾಂಕ: 07/07/2019 ರಂದು 07.00 ಎ.ಎಂ ಕ್ಕೆ ಶ್ರೀ ಈರಣ್ಣ ತಂ/ ಭೀಮರಾಯ ಗಾಂಜಿ ಸಾ|| ಹಳಿಸಗರ, ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ಏನೆಂದರೆ, ನನ್ನ ಅಣ್ಣ ನಿಂಗಣ್ಣ ತಂ/ ಭೀಮರಾಯ ವ|| 50 ವರ್ಷ ಸಾ|| ಹಳಿಸಗರ, ಶಹಾಪುರ ಈತನು ಶಹಾಪುರ-ಯಾದಗಿರಿ ರಸ್ತೆಯ ಮಗನಲಾಲ್ ಸ್ಕೂಲ್ ಹತ್ತಿರ ಪಾನಶಾಪ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಉಪ ಜೀವನ ಸಾಗಿಸುತ್ತಾನೆ. ನಿನ್ನೆ ದಿನಾಂಕ: 06/07/2019 ರಂದು ಸಾಯಂಕಾಲ 5.30 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಅಣ್ಣ ನಿಂಗಣ್ಣ, ಅತ್ತಿಗೆಯಾದ ಶಾಂತಮ್ಮ ಗಂ/ ನಿಂಗಣ್ಣ ಗಾಂಜಿ 3 ಜನರು ನನ್ನ ಅಣ್ಣನ ಪಾನಶಾಪ್ ಹತ್ತಿರ ಇದ್ದಾಗ, ನನ್ನ ಅಣ್ಣ ನಿಂಗಣ್ಣನು ಬಹಿದರ್ೆಸೆಗೆ ಹೋಗಿ ಮರಳಿ ಬರುತ್ತಿದ್ದಾಗ ಶಹಾಪುರ-ಯಾದಗಿರಿ ರಸ್ತೆಯ ಮಗನಲಾಲ್ ಸ್ಕೂಲ್ ಹತ್ತಿರ ರಸ್ತೆ ದಾಟುತಿದ್ದಾಗ ಶಹಾಪುರ ಕಡೆಯಿಂದ ಒಂದು ಮೋಟರ ಸೈಕಲ್ ಚಾಲಕನು ತನ್ನ ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಅಣ್ಣನಿಗೆ ಡಿಕ್ಕಿಪಡಿಸಿ ಮೋಟರ ಸೈಕಲ್ ಸಮೇತ ರೋಡಿನಲ್ಲಿ ಬಿದ್ದಾಗ ನಾನು ಮತ್ತು ಅತ್ತಿಗೆ ಶಾಂತಮ್ಮ ಇಬ್ಬರು ಓಡಿ ಹೋಗಿ ನೋಡಲಾಗಿ ಅಪಘಾತದಲ್ಲಿ ನನ್ನ ಅಣ್ಣನಿಗೆ ಬಲಗಣ್ಣಿಗೆ ತಲೆಯ ಮೇಲೆ, ತಲೆಯ ಹಿಂದೆ ಭಾರೀ ರಕ್ತಗಾಯವಾಗಿದ್ದು, ಎಡಗಾಲ ಹಿಮ್ಮಡಿಗೆ ರಕ್ತಗಾಯ, ಬೆನ್ನಿಗೆ ತರಚಿದಗಾಯವಾಗಿದ್ದು, ಮೋಟರ ಸೈಕಲ್ ನಡೆಸುತ್ತಿದ್ದವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಲ್ಲಪ್ಪ ತಂ/ ಚಂದಪ್ಪ ಸಾವುರ ಸಾ|| ದೋರನಳ್ಳಿ ಅಂತಾ ಹೇಳಿದ್ದು, ಅವನಿಗೆ ಬಲಗಾಲಿನ ಪಾದಕ್ಕೆ ರಕ್ತಗಾಯ, ಬಲಗಾಲ ಮೊಳಕಾಲಿಗೆ ತರಚಿದ ಗಾಯ, ಬಲ ಕಪಾಳಕ್ಕೆ, ಎಡಗಣ್ಣಿನ ಹತ್ತಿರ ರಕ್ತಗಾಯವಾಗಿದ್ದವು, ಮೋಟರ್ ಸೈಕಲ್ದಲ್ಲಿ ಹಿಂದೆ ಕುಳಿತಿದ್ದವನ ಹೆಸರು ಶಿವರಾಜ ತಂ/ ರಾಜಶೇಖರ ಅಲ್ಲಿಪುರ ಸಾ|| ದೋರನಳ್ಳಿ ಅಂತಾ ಗೊತ್ತಾಗಿದ್ದು, ಅವನಿಗೆ ಬಲ ಬುಜಕ್ಕೆ, ಕಪಾಳಕ್ಕೆ ತರಚಿದಗಾಯ, ತುಟಿಗೆ ರಕ್ತಗಾಯವಾಗಿದ್ದು, ಮೋಟರ ಸೈಕಲ್ ನಂಬರ ನೋಡಲಾಗಿ ಕೆಎ-33 ಎಕ್ಸ್-0536 ಅಂತಾ ಇದ್ದು, ಅದೇ ಸಮಯಕ್ಕೆ ಶಹಾಪುರ ಕಡೆಯಿಂದ ಒಂದು ಅಟೋ ಬಂದಿದ್ದು, ಅದರಲ್ಲಿ ಸ್ಥಳಕ್ಕೆ ಬಂದ 108 ವಾಹನದಲ್ಲಿ ಗಾಯಾಳುಗಳಿಗೆ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಪರೀಕ್ಷೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದಾಗ ಗಾಯಾಳುವಿಗೆ ಕಲಬುರಗಿಗೆ ಕರೆದುಕೊಂಡು ಹೋಗಿ ಕಲಬುರಗಿಯ ಯುನೆಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ನಿಮ್ಮ ಅಣ್ಣ ಗುಣಮುಖನಾಗುವ ಸಾಧ್ಯತೆ ಕಡಿಮೆ ಇರುತ್ತದೆ ಅಂತಾ ಹೇಳಿದ್ದರಿಂದ ನನ್ನ ಅಣ್ಣನಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿಕೊಂಡು ಬರುತ್ತಿದ್ದಾಗ ಇಂದು ದಿನಾಂಕ:07/07/2019 ರಂದು ಬೆಳಗಿನ ಜಾವ 2.35 ಎ.ಎಂ. ಸುಮಾರಿಗೆ ಶಹಾಪುರ ಕೆ.ಇ.ಬಿ ಹತ್ತಿರ ಮೃತಪಟ್ಟಿರುತ್ತಾನೆ. ಮೃತ ದೇಹವನ್ನು ಶಹಾಪುರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಮಲ್ಲಪ್ಪ ತಂ/ ಚಂದಪ್ಪ ಸಾವುರ ಸಾ|| ದೋರನಳ್ಳಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.168/2019 ಕಲಂ 279, 337, 338,304(ಎ) ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 169/2019.ಕಲಂ 4, 5, 8, 11,  ಪ್ರಾಣೀ ಹಿಂಸೆ ಪ್ರತಿಬಂದಕ ಕಾಯ್ದೆ 1964 ಮತ್ತು 177 ಐ,ಎಂ,ವಿ, ಕಾಯ್ದೆ:- ದಿನಾಂಕ 07/07/2019 ರಂದು ಸಾಯಂಕಾಲ 16-00 ಗಂಟೆಗೆ ಫಿರ್ಯಾಧಿ ಶ್ರೀ ಮಾರುತಿ ತಂದೆ ಪುರುಷೊತ್ತಮ್ಮ ಹೆದರುಮನಿ ವ|| 23 ಜಾ|| ಮಾದಿಗ ಉ|| ಶ್ರೀರಾಸೇನೆ ಉಪಾದ್ಯಕ್ಷ ಸಾ|| ಇಂದಿರಾನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕರಣಮಾಡಿದ ಅಜರ್ಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/07/2019 ರಂದು ಬೆಳಿಗ್ಗೆ 11-45 ಗಂಟೆಗೆ ಹಳಿಸಗರ ಶಹಾಪೂರ ಗ್ಯಾಸ ಪಂಪಹತ್ತಿರ ನಾನು ಮತ್ತು ಮಲ್ಲಿಕಾಜರ್ುನ ತಂದೆ ಅಂಬ್ಲಯ್ಯ ದೋರನಳ್ಳಿ, ನರಸಿಂಹರೆಡ್ಡಿ ತಂದೆ ಶಿವರೆಡ್ಡಿ ಪಾರೆದ, ರವಿ ತಂದೆ ಮಲ್ಲಿಕಾಜರ್ುನ ಮ್ಯಾಗಡಿ, ಎಲ್ಲರು ನಿಂತಾಗ ಯಾದಗಿರಿಕಡೆಯಿಂದ ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಒಂದು ಟಾಟಾಎಸಿಇ ನೇದ್ದರಲ್ಲಿ ಅದರ ಚಾಲಕನು ಗೋವುಗಳನ್ನು ಸಾಗಿಸುತ್ತಿರುವದನ್ನು ನೋಡಿ ವಾಹನ ನಿಲ್ಲಿಸಿ ನೋಡಿದಾ ಮನಕಲಕುವ, ತಲೆ ತಗ್ಗಿಸುವಂತ ಕಾನೂನು ಬಾಹಿರವಾಗಿ ಹಿಂಸಾತ್ಮಕವಾಗಿ ಕಸಾಯಿಕಾನೆಗೆ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವಾಗ ನಾವೆ ನೋಡಿ ವಾಹನ ನಿಲ್ಲಿಸಿರುತ್ತೆವೆ, ಈ ಗೋವುಗಳನ್ನು ಸಾಗಾಣಿಕೆ ಮಾಡಲು ವೈದ್ಯರಿಂದ ಯಾವದೆ ಬರವಣಿಗೆ ಪಡೆದಿರುವದಿಲ್ಲಾ ಪಾರಿಸ್ಟ ಬೆಟಿಸ್ಟ ಪೆಟ್ಟಿಗೆ ಇರುವದಿಲ್ಲಾ, ವಾಹನದ ನಂ ಕೆಎ-33ಎ-0759 ಈ ವಾಹನದಲ್ಲಿ ಗೋವುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯೆವಸ್ಥೆ ಇರುವದಿಲ್ಲಾ  ಹಾಗೂ ಗೋವುಗಳ ಕಾಲಿನ ಅಡಿಯಲ್ಲಿ ನೋವುಆಗದಂತೆ ಒಣಹುಲ್ಲು ಇಲ್ಲಾ ಹಾಗು ಸರಿಯಾಗಿ ಹುಸಿರಾಡಲುವ್ಯೆವಸ್ಥೆ ಇಲ್ಲಾ ಒಂದು ಗುಡ್ಸ ವಾಹನದಲ್ಲಿ ಎರಡಕಿಂತ ಹೆಚ್ಚು ಗೋವುಗಳನ್ನು ಸಾಗಾಣಿಕೆ ಮಾಡುವಂತಿಲ್ಲಾ ಆದರೆ ಇವರು 6 ಗೋವುಗಳ ಕಾಲುಗಳನ್ನು ಕಟ್ಟಿ ಒಂದರಮೇಲೊಂದರಂತೆಹಾಕಿ ಚಿತ್ರಹಿಂಸೆಯಾಗಿ ಗೋವುಗಳನ್ನು ಸಾಗಿಸುತ್ತಿದ್ದರು ಇದರಿಂದಾಗಿ 3 ಗಂಡು ಹೋರಿಕರುಗಳು, 3 ಹೇಣ್ಣು ಕರುಗಳಿಗೆ ತುಳಿದುತುಳಿದು ಗಾಯವಾಗಿ ಚಿತ್ರಹಿಂಸೆ ಕೊಟ್ಟು ದೈಹಿಕ ನೋವು ಹುಂಟುಮಾಡಿ ಸಾಗಿಸುತ್ತಿದ್ದಾನೆ, ಸದರಿ ವಾಹನದ ಚಾಲನು ಹೆಸರು ವಿಚಾರಿಸುವಾಗ ಹೇಸರು ಹೇಳದೆ ಓಡಿಹೋಗಿದು ಇರುತ್ತದೆ, ಸದರಿ ಗೋವುಗಳನ್ನು ಶಹಾಪೂರದ ನಂದಿ ಗೋಶಾಲೆಯಲ್ಲಿ 6 ಗೋವುಗಳನ್ನು ಮತ್ತು ಸಾಗಿಸುತ್ತಿದ್ದ ವಾಹನ ಕುಡಾ ಗೋಶಾಲೆ ಹತ್ತಿರ ನಿಲ್ಲಿಸಿದ್ದು ಇರುತ್ತದೆ, ಸದರಿ ಗೋವುಗಳಿಗೆ ಪಶುವೈದ್ಯರಿಂದ ತಪಾಸಣೆ ಮಾಡಿಸಬೆಕು, ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 169/2019 ಕಲಂ 4, 5, 8, ಮತ್ತು 11 ಪ್ರಾಣಿ ಹಿಂಸೆ ಪ್ರತಿಬಂದಕ ಕಾಯ್ದೆ 1964 ಮತ್ತು ಕಲಂ 177 ಐ,ಎಂ,ವಿ, ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು,

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 148/2019 ಕಲಂ 324,504,506 ಐಪಿಸಿ :- ದಿನಾಂಕ:07-07-2019 ರಂದು 2-15 ಪಿ.ಎಮ್.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ  ಶ್ರೀ ಗೋಪಾಲ ತಂದೆ ಹಣಂಂತ ಸಕ್ರೆತ್ತಿ ಸಾ:ಹೇಮನೂರ ಹಿಗಿದ್ದು ದಿನಾಂಕ:01-07-2019 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ಹೆಮನೂರ ಗ್ರಾಮದ ಹೊಸ ಮನೆಯ ಮುಂದಿನ ಅಂಗಳದಲ್ಲಿ ನಾನು ನನ್ನ ಅಣ್ಣನಾದ ಬೀಮರಾಯ ಹಾಗೂ ಅಕ್ಕಳಾದ ಬೀಮಮ್ಮ ಗಂಡ ಬೀಮರಾಯ ಸಕ್ರೆತ್ತಿ ಮೂವರು ಮಾತಾಡುತ್ತಾ ಕುಳಿತಿರುವಾಗ ನನ್ನ ತಮ್ಮನಾದ ಸಿದ್ದಪ್ಪ ತಂದೆ ಹಣಮಂತ ಸಕ್ರೆತ್ತಿ ಈತನು ಬಂದವನೆ ಎಲೆ ಬೋಸಡಿ ಸುಳಿಮಗನೆ ನಮ್ಮ ತಂದೆ ಮಾಡಿದ ಸಾಲ ನಮ್ಮ ಅಣ್ಣತಮ್ಮನಾದ ನೀನು ಯಾಕೇ ಕಟ್ಟುವದಿಲ್ಲ ಅಂತಾ ಬೈದವನೆ ಅಲ್ಲೆ ಬಿದ್ದ ಒಂದು ಬಡಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿ ಮತ್ತೆ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ ನನ್ನ ಅಣ್ಣನಾದ ಬೀಮರಾಯ ಅಕ್ಕಳಾದ ಬೀಮಮ್ಮ ಇವರು ಜಗಳ ಬಿಡಿಸಿದ್ದು ಇರುತ್ತದೆ. ಆಗ ಅವನು ನೀನು ಸಾಲ ಕೊಡದಿದ್ದರೆ ನಿನ್ನನ್ನು ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋದನು. ನಂತರ ನನ್ನ ಅಣ್ಣ ಬೀಮರಾಯ ಈತನು  ನನ್ನನ್ನು ಉಪಚಾರ ಕುರಿತು ಸರಕಾರಿ ಆಸ್ತಪ್ರೆ ಸುರಪೂರಕ್ಕೆ ಕರೆದುಕೊಂದು ಬಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಉಪಚಾರ ಪಡೆದುಕೊಂಡು ಇಂದು ಠಾಣೆಗೆ ಬಂದಿದ್ದು ನನಗೆ ಹೊಡೆದವನು ನನ್ನ ಖಾಸ ತಮ್ಮನಾಗಿದ್ದರಿಂದ ನಾನು ಅಣ್ಣ ಬೀಮರಾಯ ಇಬ್ಬರು ವಿಚಾರ ಮಾಡಿ ಠಾಣೆಗೆ ತಡವಾಗಿ ಬಂದು ಪಿಯರ್ಾದಿ ನಿಡಿದ್ದು ಇರುತ್ತದೆ. ನನಗೆ ಅವಾಚ್ಯ ಬೈದು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ ತಮ್ಮ ಸಿದ್ದಪ್ಪ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 149/2019 ಕಲಂ,323,324,447,504,506 ಸಂ.34  ಐಪಿಸಿ:-ದಿನಾಂಕ:07-07-2019 ರಂದು 4 ಪಿ.ಎಮ್.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ  ಶ್ರೀ ತಮ್ಮಣಗೌಡ ತಂದೆ ದೇವಿಂದ್ರಪ್ಪಗೌಡ ನವಿಲಗುಡ್ಡಾ ವಯಾ:80 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ರುಕ್ಮಾಪೂರ ತಾ:ಸುರಪೂರ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಹಿಗಿದ್ದು ದಿನಾಂಕ:05-07-2019 ರಂದು 2-30 ಪಿ.ಎಂ. ಸುಮಾರಿಗೆ ನಾನು ನಮ್ಮ ಎಸ್ ಹೆಚ್ ಲಿಂಗದಳ್ಳಿ ಸಿಮಾಂತರದ ಸವರ್ೇ ನಂಬರ 38 ರ ಹೊಲದಲ್ಲಿರುವ ಆರಗೇನ ಗಿಡದ ಕೆಳಗಡೆ ನಾನು ಹೊಲದಲ್ಲಿ ಕೆಲಸ ಮಾಡಲು ಬಂದ ದುರ್ಗಪ್ಪ ತಂದೆ ಹುಲಗಪ್ಪ, ತಾಯಪ್ಪ ತಂದೆ ದುರ್ಗಪ್ಪ, ಬೀಮಪ್ಪ ತಂದೆ ದುರ್ಗಪ್ಪ ಸಾ:ಮೂವರು ಕುಪ್ಪಗಲ್ಲ ಹಾಗೂ ಲಕ್ಷ್ಮಣ ತಂದೆ ಹುಲಿಗಪ್ಪ ಯಲಗಟ್ಟಿ ಸಾ:ರುಕ್ಮಾಪೂರ ಐದು ಜನರು ಊಟ ಮಾಡುತ್ತಾ ಕುಳಿತಿರುವಾಗ ನಮ್ಮ ಹೊಲದ ಪಕ್ಕದ ಹೊಲದವರಾದ ಕುಪಗಲ್ಲ ಗ್ರಾಮ ಹಾವ ಸತ್ಯಂಪೇಠದ ರಾಮಪ್ಪ ತಂದೆ ಮರೆಪ್ಪ ಮಕಾಶಿ ಹಾಗೂ ರಾಮಪ್ಪನ ಹೆಂಡತಿಯಾದ ಮಲಕಮ್ಮ ಇಬ್ಬರೂ ಕೂಡಿ ನಮ್ಮ ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿದವರೆ ನಮ್ಮ ಹೊಲದ ಡ್ವಾಣಿನ ಹತ್ತಿರ ನಾವು ಕಸ ಹಾಕಿದರ ನೀನು ಹಾಕಬೇಡ ಅಂತಾ ಹೇಳುತ್ತಿ ಮಗನೆ ಅಂತಾ ಅವಾಚ್ಯ ಬೈದವರೆ ರಾಮಪ್ಪ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕೊಡಲಿಕಾವಿನಿಂದ ನನ್ನ ಮುಖಕ್ಕೆ ಹಾಗೂ ಬಲಗೈಗೆ ಹೊಡೆಗು ಗುಪ್ತಗಾಯ ಪಡಿಸಿ ಎಡಗಾಲು ಮತ್ತು ಬಲಗಾಲಿಗೆ ಕೊಡಲಿ ಕಾವಿನಿಂದ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ  ದುರ್ಗಪ್ಪ ತಂದೆ ಹುಲಗಪ್ಪ, ತಾಯಪ್ಪ ತಂದೆ ದುರ್ಗಪ್ಪ, ಬೀಮಪ್ಪ ತಂದೆ ದುರ್ಗಪ್ಪ ಸಾ:ಮೂವರು ಕುಪ್ಪಗಲ್ಲ ಹಾಗೂ ಲಕ್ಷ್ಮಣ ತಂದೆ ಹುಲಿಗಪ್ಪ ಯಲಗಟ್ಟಿ ಸಾ:ರುಕ್ಮಾಪೂರ ಇವರು ಜಗಳವನ್ನು ನೋಡಿ ಬಡಿಸಿದ್ದು ಇರುತ್ತದೆ. ನಂತರ ನಾನು ಉಪಚಾರ ಕುರಿತು ಸುರಪೂರ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಪಿಜಿಶಹಾ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡು ಠಾಣೆಗೆ ಇಂದು ತಡವಾಗಿ ಬಂದು ಪಿಯರ್ಾದಿ ನಿಡಿದ್ದು ಇರುತ್ತದೆ. ರಾಮಪ್ಪ ಹಾಗೂ ಅವನ ಹೆಂಡತಿಯಾದ ಮಲಕಮ್ಮ ಇಬ್ಬರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನನಗೆ ಅವಾಚ್ಯ ಬೈದು ಹೊಡೆ ಬಡೆ ಮಾಡಿದ ರಾಮಣ್ಣ ಮಕಾಶಿ ಹಾಗೂ ಅವನ ಹೆಂಡತಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕೀಕರಿಸಿದ್ದು ನಿಜವಿರುತ್ತದೆ .ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 37/2019 ಕಲಂ: 143,147,148, 323, 324, 504, 506  ಖ/ಘ 149  ಕಅ:- ದಿನಾಂಕ:07.07.2019 ರಂದು ಮುಂಜಾನೆ 10:00 ಎಎಮ್ಕ್ಕೆ ಪಿರ್ಯಾಧಿ ಶ್ರೀ.ನರಸಿಂಹಮೂತರ್ಿ ತಂದೆ ರಾಮಮೂತರ್ಿ ಮನ್ನೆ ವ:70 ವರ್ಷ ಉ: ಒಕ್ಕಲುತನ ಜಾ: ಕಮ್ಮ ಸಾ: ಯುಕೆಪಿ ಕ್ಯಾಂಪ್ ಕಕ್ಕೇರಾ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ ನಾನು ನನ್ನ ಹೆಂಡತಿ ಮಕ್ಕಳು ಸೋಸೆ ಮೊಮ್ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೇನೆ ನನ್ನ ಮಗನಾದ ಸುರೇಶರೆಡ್ಡಿ ಇತನ  ಹೆಂಡತಿಯಾದ ನವೀನ್ಕುಮಾರಿ ಇವರ ತವರೂರು ಮಾನ್ವಿ ತಾಲೂಕಿನ ಶಿರವಾರ ಹತ್ತಿರದ ಸೂರ್ಯನಾರಾಯಣ ಕ್ಯಾಂಪ್ (ಜಲಾಪೂರ) ತಾ: ಮಾನ್ವಿ ಜಿ:ರಾಯಚೂರು ಇದ್ದು ಅವನಿಗೆ ನರೆಂದ್ರ ಕೃಷ್ಣಮೂತರ್ಿ ಅಂತಾ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ. ಹೀಗಿರುವಾಗ ದಿನಾಂಕ:02.02.2019 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಸುರೆಶರೆಡ್ಡಿ ನನ್ನ ಹೆಂಡತಿ ಮಂಗಾಯಮ್ಮ ಸುರೇಶರೆಡ್ಡಿಯ ಹೆಂಡತಿ ನವೀನಾಕುಮಾರಿ ಹಾಗೂ ಮೊಮ್ಮಕ್ಕಳಾದ ನರೇಂದ್ರ, ಕೃಷ್ಣಮೂತರ್ಿ ಇವರೆಲ್ಲರೂ ನಮ್ಮ ಮನೆಯಲ್ಲಿದ್ದಾಗ. ನನ್ನ  ಮಗ ಸುರೇಶರೆಡ್ಡಿಯ ಹೆಂಡತಿಯ ತಾಯಿಯಾದ ಸೂರ್ಯಕುಮಾರಿ ಗಂಡ ಸುಬ್ಬಾರಾವ್ ಕುಣದಲ್ ವ:58 ವರ್ಷ, ಆಕೆಯ ಮಗನಾದ ಹರೀಶರಾವ್ @ ರವಿ @ ಪಾಪರಾಯ್ಡು ತಂದೆ ಸುಬ್ಬರಾವ್ ಕುಣಗಲ್ ವ:30 ವರ್ಷ ಹಾಗೂ ಅವರ ಸಂಬಂದಿಕರಾದ 4 ನೇ ಮೈಲ್ಕ್ಯಾಂಪ್ ತಾ: ಸಿಂದನೂರ ಜಿ:ರಾಯಚೂರಿನ ವೆಂಕಟೇಶ ತಂದೆ ವೆಂಕಟನಾರಾಯಣ ಗೊಡವತರ್ಿ ವ:52 ವರ್ಷ, ವೆಂಕಟೇಶ್ವರರಾವ್ ತಂದೆ ಸತ್ಯನಾರಾಯಣ ಬೊರುಪಲ್ಲಿ ವ:55 ವರ್ಷ, ಹಾಗೂ 7 ನೇ ಮೈಲ್ಕ್ಯಾಂಪ್ (ಬನ್ನಟ್ಟಿ ಕ್ಯಾಂಪ್) ತಾ: ಸಿಂದನೂರು ಜಿ: ರಾಯಚೂರದದ ಭುಲಕ್ಷ್ಮೀ ಗಂಡ ಸತ್ಯನಾರಾಯಣ ಬಲಸು ವ: 60 ವರ್ಷ, ಗೋಪಿ ತಂದೆ ಸತ್ಯನಾರಾಯಣ ಬಲಸು ವ:40 ವರ್ಷ, ಶ್ರೀಲಕ್ಷ್ಮೀ ಗಂಡ ರಮೇಶ ಮೂವ್ವಾ ವ: 35 ವರ್ಷ, ಸಾ:ಶಿರಗುಪ್ಪ ತಾ: ಶಿರಗುಪ್ಪ ಜಿ: ಬಳ್ಳಾರಿ, ಬಿ ಗೋಪಾಲ ಕೃಷ್ಣ ಸಾ: ಕಂಪ್ಲಿ ಜಿ: ಬಳ್ಳಾರಿ ರವರೊಂದಿಗೆ ಗುಂಪಾಗಿ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದವರೇ ಬೋಸಡಿ ಮಗನ್ಯಾ ಸೂರ್ಯಾ ನಿನ್ನ ಸೋಕ್ಕು ಬಹಳಾಗಿದೆ ನಿನ್ನ ಹೆಂಡತಿಗೆ ತವರು ಮನೆಗೆ ಕಳುಹಿಸಿಕೊಡು ಅಂತ ಅಂದರೂ ಕಳುಹಿಸಿ ಕೊಡುತ್ತಿಲ್ಲಾ ಸೂಳೆ ಮಗನೇ ಇವತ್ತು ನಿನಗೆ ಒಂದು ಗತ್ತಿ ಕಾಣಿಸುತ್ತೇವೆ ಅಂತಾ  ಒದರಾಡ ಹತ್ತಿದ್ದು ಆಗ ನಾನು ಮತ್ತು ನನ್ನ ಮಗ ಸುರೆಶರೆಡ್ಡಿ ಇಬ್ಬರೂ ಮನೆಯ ಒಳಗಿನಿಂದ ಹೊರಗೆ ಬಂದು ಅವರಿಗೆ ಯಾಕೆ ಮನೆಯ ಮುಂದೆ ನಿಂತು ಒದರಾಡುತ್ತಿರಿ ಒಳಗೆ ಬರ್ರಿ ನಿಮ್ಮ ಮಗಳನ್ನು ಮನೆಯಲ್ಲಿ ಅಡುಗೆ ಮಾಡಲು ಯಾರು ಇಲ್ಲದ್ದರಿಂದ ಕಳುಹಿಸದಿಲ್ಲಾ ಅಂತಾ ಅಂದಿದ್ದು. ಆಗ ಅವರಲ್ಲಿಯ ಗೋಪಿ ತಂದೆ ಸತ್ಯನಾರಾಯಣ ಬಲಸು ಇತನು  ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಮಗ ಸುರೇಶರೆಡ್ಡಿಯ ಬೆನ್ನಿನ ಮೇಲೆ ಮತ್ತು ಟೊಂಕದ ಮೇಲೆ ಹೊಡೆದಿದ್ದು ಇದರಿಂದ ನನ್ನ ಮಗ ಸುರೇಶರೆಡ್ಡಿಗೆ ಗುಪ್ತಗಾಯಗಳಾಗಿದ್ದು ಸೂರ್ಯಕುಮಾರಿ, ಭೂಲಕ್ಷ್ಮಿ, ಶ್ರೀಲಕ್ಷ್ಮೀ ಮತ್ತು ಬಿ ಗೋಪಾಲ ಕೃಷ್ಣ   ನನ್ನ ಮಗನ ತೆಕ್ಕೆಗೆ ಬಿದ್ದು ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿ ಎಲ್ಲರು ಮೈಮೆಲೆಲ್ಲಾ ಕಾಲಿನಿಂದ ಒದ್ದು ತುಳಿದು ಗುಪ್ತಗಾಯಗೊಳಿಸಿದ್ದು ಆಗ ನಾನು ಬಿಡಿಸಲು ಹೋದಾಗ ವೆಂಕಟೇಶ್ವರರಾವ್ ತಂದೆ ಸತ್ಯನಾರಾಯಣ ಹಾಗೂ ವೆಂಕಟೇಶ ತಂದೆ ವೆಂಕಟನಾರಯಣ ಗೋಡವತರ್ಿ ಇವರುಗಳು ನನಗೆ ಬೋಸಡಿ ಮಗ ಬಿಡಿಸಲಿಕ್ಕೆ ಬಂದಿದ್ದಾನೆ ಈ ಮಗನಿದ್ದು ಸೊಕ್ಕು ಬಹಳ ಆಗಿದೆ ಅಂತಾ ಬೈದು ಎಲ್ಲರು ಕೈಯಿಂದ ಮೈಮೇಲೆಲ್ಲಾ ಹೊಡೆದಿದ್ದು ಹರಿಶರಾವ್ @ ರವಿ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ  ಸೊಂಟದ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು ಆಗ ನಾನು ಮತ್ತು ನನ್ನ ಮತ್ತು ನನ್ನ ಮಗ  ಇಬ್ಬರು ನಮ್ಮನ್ನು ಉಳಿಸಿರಿ ಎಂದು ಚಿರಾಡುತ್ತಿದ್ದಾಗ ಅಲ್ಲಿಯೇ ಇದ್ದ ಬಸವರಾಜ ತಂದೆ ಸೋಮಣ್ಣ ಮೇಲಾ ಸಾ/ ಮೇಲಾರದೊಡ್ಡಿ ಕಕ್ಕೆರಾ , ಸಿದ್ದಪ್ಪ ತಂದೆ ಸೋಮನಿಂಗಪ್ಪ ಕಟ್ಟಿಮನಿ ಸಾ/ ಕಕ್ಕೆರಾ ಹಾಗೂ ನಂದಪ್ಪ ತಂದೆ ನಿಂಗಪ್ಪ ಆಸ್ಕಿ ಸಾ/ ಅಸ್ಕೇರದೊಡ್ಡಿ ಕಕ್ಕೆರಾ ಇವರು ಬಂದು ನೋಡಿ ಬಿಡಿಸಿದ್ದು ಹೋಗುವಾಗ ಮೇಲೆ ನಮೂದಿಸಿದ 8 ಜನರು ನನಗೆ ಮತ್ತು ನನ್ನ ಮಗನಿಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೇದರಿಕೆ ಹಾಕಿ ಹೋಗಿದ್ದು ಈ ಘಟನೆಯಲ್ಲಿ ನನಗೆ ಮತ್ತು ನನ್ನ ಮಗನಿಗೆೆ ಅಷ್ಟೆನು ಪೆಟ್ಟು ಆಗಿರುವದಿಲ್ಲ ನಾವು ಉಪಚಾರಕ್ಕೆ ಹೋಗುವದಿಲ್ಲಾ. ನಮಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದವರು ನಮಗೆ ಬೀಗರಾಗಬೇಕಾಗಿದ್ದರಿಂದ ಇಲ್ಲಿಯ ವರೆಗೆ ವಿಚಾರ ಮಾಡಿ ತಡವಾಗಿ ಈ ದಿವಸ ಬಂದು ದೂರು ಕೊಡುತ್ತಿದ್ದು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಸದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ: 37/2019 ಕಲಂ: 143, 147, 148, 323, 324, 504, 506 ಸಂಗಡ 149  ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
   
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 38/2019 ಕಲಂ:87 ಕೆ ಪಿ ಆಕ್ಟ:- ದಿನಾಂಕ:07.07.2019 ರಂದು 5:30 ಪಿಎಮ್ ಕ್ಕೆ ಸಿಪಿಐ ಸಾಹೇಬರು ಹುಣಸಗಿ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಇಸೀಟ್ ಜೂಜಾಟದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರವನ್ನು 6 ಜನ ಆರೋಪಿತರನ್ನು ಹಾಗೂ ಅವರಿಂದ ಜಪ್ತು ಮಾಡಿದ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸಿದ್ದು ಸಿಪಿಐ ಸಾಹೇಬರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ತಾವು ತಮ್ಮ  ಕಛೇರಿಯಲ್ಲಿದ್ದಾಗ ಕೊಡೇಕಲ್ ಸೀಮಾಂತರ ಮಧು@ಮಡಿವಾಳಪ್ಪ ಹೆಬ್ಬಾಳ ರವರ ಹೊಲದ ಪಕ್ಕ ಇರುವ ಕೆನಾಲ ರಸ್ತೆಯ ಗೀಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಅಂದಬಾಹರ ಎಂಬ ನಶೀಭದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಖಚಿತ ಭಾತ್ಮಿ ಬಂದ ಮೇರೆಗೆ ಸಿಪಿಐ ಸಾಹೇಬರು ಮತ್ತು ಸಂಗಡ ಸಿಬ್ಬಂದಿಯಾದ 1) ಪರಮಾನಂದ ಹೆಚ್.ಸಿ-159, 2) ಯಲ್ಲಪ್ಪ ಹೆಚ್.ಸಿ-117, 3) ಬಸವರಾಜ ಪಿಸಿ-173, 4) ರವಿಕುಮಾರ ಪಿಸಿ-317 5) ಶಿವರಾಜ ಪಿಸಿ-310 6) ವಿಕಾಶ ಎಪಿಸಿ-144 ರವರೊಂದಿಗೆ ಮತ್ತು ಪಂಚರೆಂದು 1) ಕೆಂಚಪ್ಪ ತಂದೆ ಬಸಣ್ಣ ಸೀರಗೊಂಡ ಸಾ:ಹೆಬ್ಬಾಳ(ಬಿ) 2) ಗೋವಿಂದ ತಂದೆ ನಾರಾಯಣ ರಾಠೋಡ ಸಾ:ಹುಣಸಗಿ ತಾಂಡಾ ರವರೊಂದಿಗೆ ಸ್ಥಳಕ್ಕೆ ಹೋಗಿ ಅಂದಬಾಹರ ಎಂಬ ನಶೀಭದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಲು 6 ಜನರು ಸಿಕ್ಕಿದ್ದು, 11 ಜನರು ಓಡಿಹೋಗಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲು1) ಶಿವಶಂಕರ ತಂದೆ ಶರಣಗೌಡ ಆಲಗೂರ ಸಾ:ಬಲಶೆಟ್ಟಿಹಾಳ 2) ಚಂದಪ್ಪ ತಂದೆ ಸಣ್ಣ ಹಯ್ಯಾಳಪ್ಪ ಹೊಸರು ಸಾ:ಬಲಶೆಟ್ಟಿಹಾಳ 3) ಶಿವಣ್ಣ ತಂದೆ ಭೀಮಣ್ಣ ತಂದೆ ನಗಶೆಟಟ್ಟಿ ಸಾ:ಶೆಳ್ಳಗಿ 4) ತಿರುಪತಿ ತಂದೆ ದೊಡ್ಡಪ್ಪ ನರಬೋಳಿ 5) ಬಸಣ್ಣ ತಂದೆ ನಾನಾಸಾಬ ಹವಾಲ್ದಾರ ಸಾ:ಇಸ್ಲಾಂಪೂರ 6) ದೇವಪ್ಪ ತಂದೆ ಮಲ್ಲಪ್ಪ ಯಾಳವಾರ ಸಾ:ಕೊಡೇಕಲ್ಲ ಇದ್ದು ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಸಿಕ್ಕವರಿಗೆ ವಿಚಾರಿಸಲು 7) ಮಧು@ಮಡಿವಾಳಪ್ಪ ತಂದೆ ಸಣ್ಣಪ್ಪ ಹೆಬ್ಬಾಳ ಸಾ:ಕೊಡೇಕಲ್ಲ 8) ಗಂಗಪ್ಪ ತಂದೆ ಬಸಪ್ಪ ಮನಗೂಳಿ ಸಾ:ಶೆಳ್ಳಗಿ 9) ಯಲ್ಲಪ್ಪ ತಂದೆ ಬಸಪ್ಪ ಮ್ಯಾಗೇರಿ ಸಾ:ಕೊಡೇಕಲ್ಲ 10) ಬಸವರಾಜ ತಂದೆ ಲಕ್ಷ್ಮಣ ಕುಳಗೇರಿ ಸಾ:ಹಗರಟಗಿ 11) ನಂದಪ್ಪ ತಂದೆ ಮಲ್ಲಪ್ಪ ಕುರಿ ಸಾ:ಕಕ್ಕೇರಾ 12) ಕೂಲಯ್ಯ ತಂದೆ ನಿಜಪ್ಪ ಗುತ್ತೇದಾರ ಸಾ:ರಾಜನಕೋಳೂರು 13) ಕೆಂಪಯ್ಯ @ ಸೋಮಣ್ಣ ತಂದೆ ಮಲ್ಲಪ್ಪ ಕುರಿ ಸಾ: ಕಕ್ಕೇರಾ 14) ವಿಜಯಕುಮಾರ @ ಗಂಗಾಧರ ವಿಜಯ ತಂದೆ ಚನ್ನಪ್ಪ ತುಮರಿಕೊಪ್ಪ ಸಾ:ಕೊಡೇಕಲ್ಲ 15) ಬಾಲಪ್ಪ ತಂದೆ ಬಿಷಪ್ಪ ಹೆಬ್ಬಾಳ ಸಾ:ಇಸ್ಲಾಂಪೂರ 16) ತಿರುಪತಿ ತಂದೆ ಚಂದಪ್ಪ ಸುರಪೂರ ಸಾ:ಕೊಡೇಕಲ್ಲ 17) ಈರಣ್ಣ ತಂದೆ ಮಾದೇವಪ್ಪ ಬೂದಿಹಾಳ ಸಾ:ಹುಣಸಗಿ ಎಂದು ತಿಳಿಸಿದ್ದು ಸಿಕ್ಕ ಆರೋಪಿತರಿಂದಾ ಮತ್ತು ಸ್ಥಳದಿಂದಾ ಒಟ್ಟು 50840=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಪಂಚನಾಮೆಯನ್ನು ಬರೆದುಕೊಂಡು 6 ಜನ ಆರೋಪಿತರಿಗೆ ಹಾಗೂ ಮುದ್ದೆ ಮಾಲನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದು  ಇರುತ್ತದೆ ಅಂತಾ ಇದ್ದು ಸಿಪಿಐ ಸಾಹೇಬರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶ  ಮೇಲಿಂದ ಠಾಣೆ ಗುನ್ನೆ ನಂ: 38/2019 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 39/2019 ಕಲಂ: 304 ಐಪಿಸಿ:-ದಿನಾಂಕ: 07.07.2019 ರಂದು 7:45 ಪಿಎಮ್ ಕ್ಕೆ ಪಿರ್ಯಾದಿ ಮಹ್ಮದ ಅಜ್ಮಲ್ ಹುಸೇನ್ ತಂದೆ ಮಹ್ಮದ ಸಬ್ದುಲ್ ಹಕ್ಕ ವ:19 ವರ್ಷ ಜಾತಿ :ಮುಸ್ಲಿಂಉ: ಕೂಲಿಕೆಲಸ ಸಾ: ಚಪ್ರಾ ಪೋಸ್ಟ ಬಕೀರ ಕಾಫ್ ಜಿಲ್ಲಾ ಮಲ್ದಾ ಪೊಲೀಸ್ ಠಾಣೆ ಜಿಲ್ಲಾ ರತ್ರಾ ರಾಜ್ಯ ಪಶ್ಚಿಮ ಬಂಗಾಳ ಇವರು ಠಾಣೆಗೆ ಹಾಜರಾಗಿ ಹಿಂದಿ ಬಾಷೆಯಲ್ಲಿ ಹೇಳಿದ್ದನ್ನು ಮಲ್ಕಿಕ್ಸಾಬ ತಂದೆ  ಅಲ್ಲಿಸಾಬ ತೆಳಗಿನ ಮನಿ ಸಾ: ರಾಜನಕೊಳೂರು ಇವರಿಂದ ಕನ್ನಡಕ್ಕೆ ಅನುವಾದಿಸಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಮಾವನಾಗಬೇಕಾದ ಕಬೀರ್ ಮಹ್ಮದ ತಂದೆ ಮಹ್ಮದ ಮುಸ್ತಾಪ ವ:28 ವರ್ಷ ಉ: ಕೂಲಿಕೆಲಸ ಜಾ: ಮುಸ್ಲಿಂ ಸಾ: ಲಕ್ಷ್ಮಿಮನಿಯ ಮಂಡು ಜಿಲ್ಲಾ ಪೊಲೀಸ್ ಠಾಣೆ ಉತ್ತರ ಕಿನ್ನಾಸಪುರ ರಾಜ್ಯ ಪಶ್ಚಿಮ ಬಂಗಾಳ ಇತನು ಈಗ 2-3 ವರ್ಷಗಳಿಂದ ಕನರ್ಾಟಕ ರಾಜ್ಯದ ತಾಳಿಕೋಟಿಯವರಾದ ಗುತ್ತಿಗೆದಾರ ಅಸ್ಪಕ್ ತಂದೆ ಖಾಜಾಹುಸೇನ್ ತಾರಾಗಾರ ಇವರ ಹತ್ತಿರ ನೀರಿನ ಟ್ಯಾಂಕಗಳನ್ನು ಕೆಡುವುವ ಕಾಮಗಾರಿ ಕೆಲಸಕ್ಕಾಗಿ ಬರುತ್ತಿದ್ದು. ಈಗ 15 ದಿವಸಗಳ ಹಿಂದೆ ನಮ್ಮ ಮಾವ ಕಬೀರ್ ಮಹ್ಮದನು ನನಗೆ ಮತ್ತು ತಮ್ಮೂರ ಸಂದೀಪ್ಕುಮಾರ ಹಾಗೂ ನಮ್ಮೂರ ಸೈರೂದ್ದೀನ್ ಮತ್ತು ನಮ್ಮರ ಪಕ್ಕದ ಊರಾದ ಜಾಹಿದಾದಪೂರ ಜಿಲ್ಲಾ ದುಖಿನ್ ದಿನಾಸಪೂರ ರವರಿಗೆ ತನ್ನ ಜೊತೆಗೆ ಕನರ್ಾಟಕಕ್ಕೆ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಬಂದಿದ್ದು ನಮಗೆ ಅಸ್ಪಕ್ ಗುತ್ತಿಗೆದಾರರು ಕಾರವಾರಕ್ಕೆ ಬರಲು ತಿಳಿಸಿದ್ದರಿಂದ ನಾವು ಕಾರವಾರಕ್ಕೆ ಬಂದಿದ್ದು ನಿನ್ನೆ ದಿನ ನಮ್ಮ ಮಾವ ಕಬೀರ ಮಹ್ಮದ ರವರಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳುರು ಗ್ರಾಮಕ್ಕೆ  ತಾನುಗುತ್ತಿಗೆ ಇಡಿದ ನೀರಿನ ಟ್ಯಾಂಕ ಕೆಡುವುವ ಕೆಲಸಕ್ಕೆ ಬರಲು ತಿಳಿಸಿದ್ದರಿಂದ ನಮ್ಮ ಮಾವ ಕಬೀರ ಮಹ್ಮದನು ನನ್ನನ್ನು ಕರೆದುಕೊಂಡು ಬಂದಿದ್ದು ನಾನು  ಮತ್ತು ನಮ್ಮ ಮಾವ ಕಬೀರ್ ಮಹ್ಮದ ರವರು ಇಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ರಾಜನಕೊಳುರು ಗ್ರಾಮಕ್ಕೆ ಬಂದು ಪಂಚಾಯತಿ ಕಾರ್ಯಲಯದಲ್ಲಿ ಇದ್ದಾಗ ಗುತ್ತಿದಾರರಾದ ನಮ್ಮ ಮಾವನಿಗೆ ಪರಿಚಯದವರಾದ ಅಸ್ಪಕ್ ತಂದೆ ಖಾಜಾಹುಸೇನ್ ತಾರಗಾರ ವ: 25 ವರ್ಷ ಉ: ಗುತ್ತಿಗೆದಾರ ಸಾ: ತಾಳಿಕೋಟಿ ಇವರು ಒಂದು ಜೆಸಿಬಿ ತೆಗೆದುಕೊಂಡು 9:30 ಗಂಟೆಯ ಸುಮಾರಿಗೆ ಬಂದಿದ್ದು ನಂತರ ನಾನು ಮತ್ತು ನಮ್ಮ ಮಾವ ಕಬೀರ ಮಹ್ಮದ ರವರು  ಅವರ ಜೊತೆಗೆ ನೀರಿನ ಟ್ಯಾಂಕ ಇರುವ ಜಾಗಕ್ಕೆ ಹೋಗಿದ್ದು ನಮಗೆ ಮತ್ತು ಜೆಸಿಬಿ ಚಾಲಕ ಅಮೀರ ತೊರಗಲ್ಲ ಸಾ: ಮುಕಿಹಾಳ ತಾ: ಮುದ್ದೇಬಿಹಾಳ ರವರಿಗೆ ಗುತ್ತಿಗೆದಾರ ಅಸ್ಪಕ್ ರವರು ಕೆಡವುಬೇಕಾದ ನೀರಿನ ಟ್ಯಾಂಕನ್ನು ತೋರಿಸಿದ್ದು ನಾವು 10:00 ಗಂಟೆಯ ಸುಮಾರಿಗೆ ಕೆಲಸ ಪ್ರಾರಂಬಿಸಿದ್ದು. ಗುತ್ತಿಗೆದಾರ ಅಸ್ಪಕ್ನು ಅಲ್ಲಿಯೇ ಇದ್ದು ಕೆಲಸದ ಉಸ್ತುವಾರಿ ಮಾಡುತ್ತಿದ್ದು. ಜೆಸಿಬಿ ಚಾಲಕ ಅಮೀರ ತೊರಗಲ ಟ್ಯಾಂಕ ಕೆಡವಲು ಜೆಸಿಬಿಗೆ ತಂತಿ ಕಟ್ಟಿ ತಂತಿ ತುದಿಗೆ ಕೊಂಡಿ ಮಾಡಿ ಜಿಸಿಬಿಯಿಂದ ಟ್ಯಾಂಕನ್ನು  ಆಕಡೆ ಈಕಡೆ ವಾಲದಂತೆ ಹಿಡಿದಿದ್ದು. ಕೆಳಗಡೆ ನಾನು ಮತ್ತು ನಮ್ಮ ಮಾವ ಕಬೀರ್ ಮಹ್ಮದ ರವರು ಗ್ಯಾಸ್ ಕಟ್ಟರ್ನಿಂದ ಟ್ಯಾಂಕಿನ ಕಬ್ಬಿಣದ ರಾಡುಗಳನ್ನು ಕಟ್ ಮಾಡುತ್ತಿದ್ದು ನಮ್ಮ ಸಹಾಯಕ್ಕೆ  ನಾಗೇಶ ತಂದೆ ಮಲ್ಲಪ್ಪ ಸುರಪೂರ ಪಂಪ್  ಆಪ್ರೇಟರ್ ಮತ್ತು ಮಲ್ಲಿಕಸಾಬ ತಂದೆ ಅಲ್ಲಿಸಾಬ ತೆಳಗಿನಮನಿ ರವರು ಇದ್ದು ನಾವೆಲ್ಲರೂ ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ನೀರಿನ ಹಳೆ ಟ್ಯಾಂಕ ಕೆಡವುವ ಕೆಲಸ ಮಾಡುತ್ತಿರುವಾಗ ಜಿಸಿಬಿ ಚಾಲಕನು ಟ್ಯಾಂಕ ಕೆಳಗಡೆ ಕೆಲಸ ಮಾಡುವ ನಮ್ಮ ಕಡೆಗೆ ಟ್ಯಾಂಕ ವಾಲದಂತೆ ಜಿಸಿಬಿಗೆ ಕಟ್ಟಿದ ತಂತಿಯ ಕೊಂಡಿಯಿಂದ ಬಿಗಿಯಾಗಿ ಹಿಡಿಯದೆ ಬಿಟ್ಟಿದ್ದರಿಂದ ಒಮ್ಮಲೇ ನೀರಿನ ಟ್ಯಾಂಕ ನನ್ನ ಮಾವ ಕಬೀರ ಮಹ್ಮದ ಇವರ ಮೇಲೆ ಕುಸಿದು ಬಿದ್ದಿದ್ದು ಇದರಿಂದಾಗಿ ನನ್ನ ಮಾವನು ಟ್ಯಾಂಕಿನ ಒಳಗಡೆ ಸಿಕ್ಕಿಹಾಕಿಕೊಂಡು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿದ್ದು. ನನ್ನ ಮಾವನ ಶವವು ಟ್ಯಾಂಕ ಕೆಳಗಡೆಯೇ ಇದ್ದು ಟ್ಯಾಂಕ ಕೆಡವುವಾಗ ಮನುಷ್ಯನ ಮೇಲೆ ಬಿದ್ದರೆ ಸಾಯಿಯುತ್ತಾನೆ ಅಂತಾ ಗೊತ್ತಿದ್ದು ಟ್ಯಾಂಕನ್ನು ಕೆಡುವುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಜಿಸಿಬಿ ಆಪ್ರೇಟರ್ ಮತ್ತು ಗುತ್ತಿಗೆದಾರನು ಸೇರಿ ಟ್ಯಾಂಕ ಬಿಳಿಸುವಾಗ ಕೆಳಗಡೆ ಗ್ಯಾಸ್ ಕಟ್ಟರ್ನಿಂದ ಕಬ್ಬಿಣದ ರಾಡುಗಳನ್ನು ಕತ್ತಿರಿಸುತ್ತಿದ್ದ ಕೂಲಿ ಕಾಮರ್ಿಕನಾದ ನನ್ನ ಮಾವ ಕಬೀರ್ ಮಹ್ಮದ ತಂದೆ ಮಹ್ಮದ ಮುಸ್ತಾಪ ವ:28 ವರ್ಷ ಉ: ಕೂಲಿಕೆಲಸ ಜಾ: ಮುಸ್ಲಿಂ ಸಾ: ಲಕ್ಷ್ಮಿಮನಿಯ ಮಂಡು ಜಿಲ್ಲಾ ಪೊಲೀಸ್ ಠಾಣೆ ಉತ್ತರ ಕಿನ್ನಾಸಪುರ ರಾಜ್ಯ ಪಶ್ಚಿಮ ಬಂಗಾಳ ಇತನು ನೀರಿನ ಟ್ಯಾಂಕ ಕೆಳಗೆ ಸಿಲುಕಿ ಮೃತಪಟ್ಟಿದ್ದು. ನನ್ನ ಮಾವನು ನೀರಿನ ಟ್ಯಾಂಕ್ ಕೆಳಗೆ ಸಿಲುಕಿ ಸತ್ತ ನಂತರ ಜಿಸಿಬಿ ಚಾಲಕ ಅಮೀರ್ ತೋರಗಲ್ಲ ಹಾಗೂ ಗುತ್ತಿಗೆದಾರ ಅಸ್ಪಕ್ ತಾರಗಾರ ರವರು ಜಿಸಿಬಿ ಸಮೇತ ಅಲ್ಲಿಂದ  ಹೋಗಿದ್ದು ನಾನು ಜಿಸಿಬಿಯ ನಂಬರ ನೋಡಿರುವದಿಲ್ಲಾ ಟ್ಯಾಂಕ ಕೆಡವುವಾಗ ಮನುಷ್ಯನ ಮೇಲೆ ಬಿದ್ದರೆ ಸಾಯಿಯುತ್ತಾನೆ ಅಂತಾ ಗೊತ್ತಿದ್ದು ಟ್ಯಾಂಕನ್ನು ಕೆಡುವುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನನ್ನ ಮಾವನ ಸಾವಿಗೆ ಕಾರಣರಾದ ಗುತ್ತಿಗೆದಾರ ಅಸ್ಪಕ್ ತಂದೆ ಖಾಜಾಹುಸೇನ್ ತಾರಗಾರ ಹಾಗೂ ಜಿಸಿಬಿ ಚಾಲಕ ಅಮೀರ್ ತೋರಗಲ್ ಸಾ: ಮುಕಿಹಾಳ ಇವರ ಮೇಲೆ ಕಾನುನು ಪ್ರಕಾರ ಕ್ರಮ ಜರುಗಿಸ ಬೇಕು  ಕಾರವಾರದಲ್ಲಿರುವ ನಮ್ಮ ಜೋತೆಗೆ ಕೆಲಸಕ್ಕೆ ಬಂದ ಸಂದೀಪ್ಕುಮಾರ, ಸೈರುದ್ದೀನ್ ಅನ್ವರ್ ಅಲಿ ರವರಿಗೆ ಪೋನ್ನಲ್ಲಿ ವಿಷಯ ತಿಳಿಸಿ ಅವರು ಬರುವ ದಾರಿ ಕಾಯ್ದಿದ್ದರಿಂದ ತಡವಾಗಿರುತ್ತದೆ. ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 39/2019 ಕಲಂ: 304 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!