ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-07-2019

By blogger on ಬುಧವಾರ, ಜುಲೈ 3, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-07-2019 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ: 323, 353 504 ಐಪಿಸಿ :- ದಿನಾಂಕ: 03/07/2019 ರಂದು 4:15 ಪಿಎಂ ಕ್ಕೆ ಪಿಯರ್ಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ಹಾಜರ ಪಡೆಸಿದ್ದು,  ನಾನು ಚಂದ್ರಶೇಖರ ತಂದೆ ಕಾಳಪ್ಪ ವಿಶ್ವಕರ್ಮ ವ|| 43 ಜಾ|| ವಿಶ್ವಕರ್ಮ ಉ|| ಕರವಸೂಲಗಾರ ಗ್ರಾಮ ಪಂಚಾಯತ ಚಾಮನಾಳ ಸಾ|| ದರ್ಶನಾಪೂರ ಇದ್ದು,  ನಾನು 2002 ರಿಂದ 2014 ರವರಿಗೆ ಚಾಮನಾಳ ಗ್ರಾಮ ಪಂಚಯಾತಿಯಲ್ಲಿ ಪಂಪ ಅಪೇರಟರ್ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ:26/03/2014 ರಂದು ಸಕರ್ಾರ ನನಗೆ ಕರ ವಸೂಲಿಗಾರ ಅಂತಾ ಅನುಮೋದಿಸಿದ್ದು ಇರುತ್ತದೆ, ನಾನು ಸಕರ್ಾರಿ ಕೆಲಸಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು.ಚಾಮನಾಳ ರಮೇಶ ತಂದೆ ಗೋಲ್ಲಾಳಪ್ಪ ಸಾ|| ಚಾಮನಾಳ ಇತನು ಪದೆ ಪದೇ ಕುಡಿದು ಗ್ರಾಮ ಪಂಚಾಯತಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು, ಸದರಿಯವನಿಗೆ ನಾವು ಸಮದಾನ ಮಾಡಿ ಕಳಿಸುತ್ತದ್ದೆವು,ಹೀಗಿದ್ದು ದಿನಾಂಕ:02/07/2019 ರಂದು ಮದ್ಯಾಹ್ನ 1:30 ಪಿ.ಎಂ ಸುಮಾರಿಗೆ ನಾನು ಮತ್ತು ನಮ್ಮ ಪಿ.ಡಿ.ಓ ಅಜೀತಕುಮಾರ ಇವರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಗ್ರಾಮ ಪಂಚಾಯತಯಲ್ಲಿ ಕೆಲಸ ಮಾಡುತ್ತಿದ್ದಾಗ ಅಂದಾಜು ಸಮಯ 1:30 ಪಿ.ಎಂ ಸುಮಾರಿಗೆ ಸದರ ರಮೆಶ ತಂದೆ ಗೋಲ್ಲಾಳಪ್ಪ ಇತನು ಪಂಚಾಯತಿಗೆ ಬಂದು ಸೂಳೆ ಮಕ್ಕಳೆ ಏನು ಮಾಡುತ್ತಿದ್ದರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು ಆಗ ನಾನು ಏಕೆ ಬೈಯುತ್ತಿದ್ದಿ ಅಂತಾ ಕೇಳಲು ಹೋದಾಗ ನನಗೆ ನೀ ಏನು ಕೆಳುತ್ತಿ ನನಗೆ ಸೂಳೆ ಮಗನೆ ಅಂತಾ ಎದೆ ಮೇಲಿನ ಅಂಗಿ ಹಿಡಿದು ಕೈ ಯಿಂದ ಮುಡ್ಡಿಗೆೆ ಹೋಡಿದನು, ಬಿಡಸಲು ಬಂದ ನಮ್ಮ ಪಂಚಾಯತಿಯ ಸಫಾಯಿಗಾರ ಸಿದ್ದಪ್ಪ ತಂದೆ ಶರಣಪ್ಪ ಇತನಿಗ ಕೂಡು ಸುಳೆ ಮಕ್ಕಳೆ ಯಾರು ಅಡ್ಡ ಬರಬೇಡರ ಅಂತಾ ಚೀರಾಡುತ್ತಿದ್ದನು, ಆಗ ನಾವು ಸಕರ್ಾರಿ ಕೆಲಸ ಮಾಡುತ್ತಿದ್ದು ಅಡ್ಡಿ ಪಡಿಸುವದು ತಪ್ಪು ಅಂತಾ ಹೇಳಿದರು ಕೂಡ ನಮ್ಮ ಕೆಲಸ ಅಡ್ಡಿ ಪಡಿಸುತ್ತಾ ನಮ್ಮ ಮೇಲೆ ಹಲ್ಲೇ ಮಾಡುತ್ತಿದ್ದನು, ಅಲ್ಲೆ ಇದ್ದ ಪಿ.ಡಿ.ಓ ಅಜೀತಕುಮಾರ, ಮತ್ತು ರಮೇಶ ಕಾರ್ಯದಶರ್ಿ, ಲಕ್ಷ್ಮಿಕಾಂತ ಪಂಪ ಆಪರೇಟರ್ ಚಾಮನಾಳ ಗ್ರಾಮ, ಧನಶಟ್ಟಿ ಪಂಪ ಆಪರೇಟರ್, ವಿಜಯಕುಮಾರ ತಂದೆ ಕಿಸನ್ ರಾಠೋಡ ಗ್ರಾಮ ಪಂಚಾಯತ ಸದ್ಯಸರು, ಈರಣ್ಣ ತಂದೆ ಮಡಿವಾಳಪ್ಪ, ದೇವಣ್ಣಗೌಡ ಪಾಟೀಲ, ಸಾಮ್ಯಯಲ್ ತಂದೆ ಧನರಾಜ, ದೇವಿಂದ್ರಪ್ಪ ತಂದೆ ಹಣಮಂತ ಬಡಿಗೇರ ಸಾ|| ನಡಿಹಾಳ ಇವರೇಲ್ಲರು ಬಿಡಿಸಿಕೊಂಡು ಕಳಿಸಿದ್ದು ಇರುತ್ತದೆ.ಕಾರಣ ರಮೇಶ ತಂದೆ ಗೋಲ್ಲಾಳಪ್ಪ ಇತನು ಪಂಚಾಯತಿಗೆ ಬಂದು ನಮ್ಮ ಕೆಲಸಕ್ಕೆ ಅಡ್ಡ ಪಡಿಸಿ ನಮ್ಮ ಮೇಲೆ ಹಲ್ಲೆಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ತೊಂದರೆ ಕೊಡುತ್ತಿದ್ದನು, ನಾವು ಮೇಲಾಧೀಕಾರಿ ಜೋತೆಯಲ್ಲಿ ವಿಚಾರಮಾಡಿ ತಡವಾಗಿ ಬಂದು ಅಜರ್ಿ ನೀಡಿದ್ದು ಇರುತ್ತದೆ, ಕಾರಣ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 66/2019 ಕಲಂ: 323, 353, 504 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 104/2019 ಕಲಂ 457, 380 ಐಪಿಸಿ:-ದಿನಾಂಕ 02/07/2019 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಾನು, ನನ್ನ ತಮ್ಮಂದಿರಾದ ದೊಡ್ಡಭೀಮರಾಯ ತಂದೆ ಹಣಮಂತ ಅಲ್ಲಿಪೂರ, ಸಣ್ಣಭೀಮರಾಯ ತಂದೆ ಹಣಮಂತ ಅಲ್ಲಿಪೂರ, ಮತ್ತು ನಿಂಗಪ್ಪ ತಂದೆ ಹಣಮಂತ ಅಲ್ಲಿಪೂರ ಮತ್ತು ಉಳಿದ ನಮ್ಮ ಮನೆಯವರು ಎಲ್ಲರೂ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಮನೆಯ ಪಡಸಾಲೆಯಲ್ಲಿ ಮತ್ತು ಮನೆಯ ಕೋಣೆಯಲ್ಲಿ ಮಲಗಿಕೊಂಡಿದ್ದೆವು, ಮಲಗುವ ಸಮಯದಲ್ಲಿ ಕೋಣೆಯ ಬಾಗಿಲದ ಕೊಂಡಿಯನ್ನು ಹಾಕಿ ಮಲಗಿಕೊಂಡಿದ್ದೆವು, ದಿನಾಂಕ 03/07/2019 ಬೆಳಿಗ್ಗೆ 6-00 ಗಂಟೆಗೆ ನಾನು ಎದ್ದು ನನ್ನ ಹೆಸರಿಗೆ ಇದ್ದ ಎರಡು ಬಂದೂಕಗಳಲ್ಲಿ ಎಸ್.ಬಿ.ಎಮ್.ಎಲ್ ಗನ್ ನಂ ಬಿ.ಇ./204/95 ನೆದ್ದು ತೆಗೆದುಕೊಂಡು ಹೊಲಕ್ಕೆ ಹೋಗಬೇಕು ಅಂತಾ ಕೋಣೆಯಲ್ಲಿ ಹೋಗಿ ನೋಡಲಾಗಿ ಆ ಬಂದೂಕ ಅಲ್ಲಿ ಇರಲಿಲ್ಲ, ನಂತರ ನಾನು ನಮ್ಮ ಮನೆಯವರಿಗೆ ಎಲ್ಲರಿಗೂ ವಿಷಯ ತಿಳಿಸಿದೆನು, ಎಲ್ಲರೂ ಕೂಡಿ ನಮ್ಮ ಮನೆಯ ತುಂಬಾ ಹುಡುಕಾಡಿದರೂ ಕೂಡಾ ಸಿಗಲಿಲ್ಲ, ದಿನಾಂಕ 02/07/2019 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 03/07/2019 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲನ್ನು ತೆರೆದು ನಮ್ಮ ಮನೆಯಲ್ಲಿ ಪ್ರವೇಶ ಮಾಡಿ ನನ್ನ ಒಂದು ಎಸ್.ಬಿ.ಎಮ್.ಎಲ್ ಗನ್ ನಂ ಬಿ.ಇ./204/95 ನೆದ್ದು ಮತ್ತು 12 ನಂಬರದ 4 ತೊಟೆಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ, ಒಂದು ಎಸ್.ಬಿ.ಎಮ್.ಎಲ್ ಗನ್ ನಂ ಬಿ.ಇ./204/95 ನೆದ್ದರ ಕಿಮ್ಮತ್ತು 8000/ರೂ ಮತ್ತು 12 ನಂಬರದ 4 ತೊಟೆಗಳು ಕಿಮ್ಮತ್ತು 100/ರೂ ಆಗುತ್ತದೆ ಆದ್ದರಿಂದ ನನ್ನ ಎಸ್.ಬಿ.ಎಮ್.ಎಲ್ ಗನ್ ನಂ ಬಿ.ಇ./204/95 ನೆದ್ದು ಮತ್ತು 12 ನಂಬರದ 4 ತೊಟೆಗಳು ಹುಡುಕಾಡಿ ಕೊಟ್ಟು ಅಪರಿಚಿತ ಕಳ್ಳರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಪ್ರಕರಣ ದಾಖಲು ಮಾಡಿದ ಬಗ್ಗೆ.
                                                                                                                         
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 116/2019 ಕಲಂ: 447, 504, 506 ಐಪಿಸಿ:-ದಿನಾಂಕ 03.07.2019 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿದಾರನಾದ ಐ.ಮಲ್ಲಾರಡ್ಡಿ ತಂದೆ ಹಣಮೀರಡ್ಡಿ ಶಹಾಪೂರ ವ|| 80 ವರ್ಷ ಜಾ||ರಡ್ಡಿ ಉ||ಮನೆ ನಿಗರಾಣಿ ಸಾ||ಚಂಡ್ರಕಿ ತಾ||ಗುರುಮಠಕಲ್ ಜಿ||ಯಾದಗಿರಿ ಇವರು ಒಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ದೂರು ಸಾರಾಂಶವೆನೇಂದರೆ ಕೆಳಗೆ ಸಹಿ ಮಡಿದ ನಾನು ವಯೋವೈದ್ದನೂ (ವಯಸ್ಸು 80 ವರ್ಷ) ಮತ್ತು ಅಂಗವಿಕಲನೂ ಆಗಿದ್ದು ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೇಂದರೆ ನನ್ನ ಮಗನಾದ ಲಕ್ಷ್ಮಾರಡ್ಡಿ (ವಯಸ್ಸು 53 ವರ್ಷ) ಇವನು ನನ್ನ ಹೊಲಗಳಲ್ಲಿ (ಸ.ವರ್ೆ ನಂ: 586, 617, 638, 46, 49/1, 52/1 ಮತ್ತು 282) ಬಿತ್ತನೆ ಮಾಡಿಕೊಳ್ಳಲು ಅಡ್ಡಿ ಪಡಿಸುತ್ತಿದ್ದು, ಹೊಲಗಳಲ್ಲಿ ಕೆಲಸ ಮಾಡಲು ಹೋದವರನ್ನು ಬಯುವುದು ಮತ್ತು ಹೆದರಿಕೆ ಹಾಕುವದು ಮಾಡುತ್ತಿದ್ದಾನೆ. ದಿನಾಂಕ 25.06.2019 ರಂದು ಸಮಯ 11:30 ಎ.ಎಮ್ ನಡೆದಿದ್ದು, ವಿಚಾರ ಮಾಡಿ ತಡವಾಗಿ ಬಂದು ಅಜರ್ಿ ಕೊಟ್ಟಿರುತ್ತೇನೆ. ಆದ್ದರಿಂದ ನನ್ನ ಮಗನಾದ ಲಕ್ಷ್ಮಾರಡ್ಡಿ ಇವನ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಿ ರಕ್ಷಣೆ ಕೊಡಬೇಕಾಗಿ ವಿನಂತಿ ಅಂತಾ ಸಲ್ಲಿಸಿದ ಲಿಖಿತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2019 ಕಲಂ: 447, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!