ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-07-2019

By blogger on ಮಂಗಳವಾರ, ಜುಲೈ 2, 2019

                      

ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-07-2019 

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 71/2019 ಕಲಂ. 420.182.355.218  ಐಪಿಸಿ :- ದಿನಾಂಕ: 02-07-2019 ರಂದು  07-00 ಪಿ.ಎಮ್ ಕ್ಕೆ ಮಾನ್ಯ ಸಿವಿಲ್ ಜಡ್ಜ ಮತ್ತು ಜೆ.ಎಮ್. ಎಫ್.ಸಿ ಯಾದಗಿರಿ ನ್ಯಾಯಾಲಯರವರಿಂದ ಒಂದು ಖಾಸಗಿ ಪಿಯರ್ಾಧಿ ಸಂಖ್ಯೆ 29/2019 ನೆದ್ದನ್ನು ನಮ್ಮ ಠಾಣೆಯ ಕೊರ್ಟ ಕರ್ತವ್ಯದ ಬಂದಪ್ಪ ಪಿಸಿ-383 ರವರು ಠಾನೆಗೆ ತಂದು ಹಾಜರುಪಡಿಸಿದ ಸಾರಂಶವೆನೆಂದರೆ ದಿನಾಂಕ: 21-03-2019 ರಂದು ಸಮಯ ಮದ್ಯಾಹ್ನ 03-00 ಗಂಟೆಗೆ ಆನೂರ (ಕೆ) ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶ್ರೀಮತಿ ರಾಧಾ ಸಿ.ಡಿ.ಪಿ.ಓ ಯಾದಗಿರಿಯವರು ಭೆಟಿ ನೀಡಿದಾಗ ಸದರಿ ಅಂಗನವಾಡಿ ಕೇಂದ್ರಕ್ಕೆ ಭೀಗ ಹಾಕಲಾಗಿತ್ತು. ಬೀಗದ ಕೈ  ಸಾಬವ್ವ ಗಂಡ ತಮ್ಮಣ್ಣ ಇವರ ಕೈಯಲ್ಲಿ ಅವರ ಉಸ್ತವಾರಿಯಲ್ಲಿತ್ತು ಮತ್ತು ಸದರಿ ಅಂಗನವಾಡಿ ಕೇಂದ್ರದ ಸಂಬಂಧಪಟ್ಟ ದಾಖಲಾತಿಗಳು ಕೋಣೆಯಲಿದ್ದವು.ಶ್ರೀಮತಿ ರಾಧಾ ಸಿ.ಡಿ.ಪಿ.ಓ ಯಾದಗಿರಿ ರವರು ಯಾವುದೇ ಮುನ್ಸೂಚನೆ ನೀಡದೆ ನೋಟಿಸು ಕೊಡದೆ ಪ್ರಭಾರಿಯಲ್ಲಿ ಇದ್ದವರನ್ನು ವಿಚಾರಿಸದೆ ಊರಿನ ಹಿರಿಯರು ಮತ್ತು ಪಂಚರು ಯಾರ ಸಮಕ್ಷಮವನ್ನು ಕರೆಯದೆ ಸದರಿ ಗ್ರಾಮದ ಅಂಗನವಾಡಿ ಕೇಂದ್ರದ ಬೀಗವನ್ನು ದಿನಾಂಕ: 21-03-2019 ರಂದು ಸಮಯ 03-00 ಗಂಟೆಗೆ ಹೊಡೆಉ ಹಾಕಿರುತ್ತಾರೆ. ಶ್ರೀಮತಿ ರಾಧಾ ಸಿ.ಡಿ.ಪಿ.ಓ ಯಾದಗಿರಿಯವರು ತಮ್ಮ ದುರುದ್ದೇಶವನ್ನು ಇಟ್ಟುಕೊಂಡು ನನ್ನ ಹೆಸರನ್ನು ಗ್ರಾಮದಲ್ಲಿ ಹಾಳು ಮಾಡಬೇಕು ಮಾನಸಿಕ ಹಿಂಸೆ ಕೊಡುವ ದೃಷ್ಠಿಯಿಂದ ನನಗೆ ನೋಟಿಸು ಕೊಡದೆ ಊರಿನ ಗ್ರಾಮದ ಹಿರಿಯರನ್ನು ಕರೆಯದೆ ಬೀಗವನ್ನು ಹೊಡೆದು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿರುತ್ತಾರೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 46/2019  ಕಲಂ 279, 337, 338 ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್:- ದಿನಾಂಕ 02/07/2019 ರಂದು ಬೆಳಿಗ್ಗೆ 6-30 ಎ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಮುಂಡರಗಿ ಗ್ರಾಮದ ಹತ್ತಿರ ಈ ಕೇಸಿನ ಪಿಯರ್ಾದಿ ಮತ್ತು ಗಾಯಾಳುಗಳು ಆರೋಪಿತನ  ಆಟೋ ಟಂ,ಟಂ ನಂಬರ ಕೆಎ-33, 5131 ನೇದ್ದರಲ್ಲಿ ಯಾದಗಿರಿಯಿಂದ ಮೈಲಾಫುರಕ್ಕೆ ಹೋಗುವಾಗ ಮಾರ್ಗ ಮದ್ಯೆ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು  ಸ್ಕಿಡ್ ಮಾಡಿ ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಆಟೋದಲ್ಲಿದ್ದವರಿಗೆ ಭಾರೀ ಮತ್ತು ಸಾದಾ ಗಾಯಗಳಾಗಿದ್ದು  ಇರುತ್ತದೆ ಅಪಘಾತ ಪಡಿಸಿದ ಆಟೋ ಟಂ,ಟಂ ಚಾಲಕನು  ಘಟನಾ ಸ್ಥಳದಲ್ಲಿ ವಾಹನವನ್ನು ಬಿಟ್ಟು  ಓಡಿ ಹೋಗಿದ್ದರ ಬಗ್ಗೆ ಪಿಯರ್ಾದಿ ಇರುತ್ತದೆ. 
                                                                                                                           
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 79/19 ಕಲಂ: 448, 323, 354, 504, 506 ಸಂ 34 ಐಪಿಸಿ:-ದಿನಾಂಕ 02/07/2019 ರಂದು 12-45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಾಂತಮ್ಮ ಗಂಡ ಬಾಪುಗೌಡ ಪಾಟೀಲ ವಯಾ|| 35 ಜಾ|| ಲಿಂಗಾಯತ ರಡ್ಡಿ ಉ|| ಮನೆಗೆಲಸ ಸಾ|| ಏವೂರ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿ: 02/07/2019 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಾನು ಒಬ್ಬಳೇ ಮನೆಯಲ್ಲಿದ್ದಾಗ ನಮ್ಮ ಪಕ್ಕದ ಮನೆಯ 1] ಮಲೀಕಸಾಬ ತಂದೆ ಬಂದಗೀಸಾಬ ಗಾಣದ 2] ಖಾದರಸಾಬ ತಂದೆ ಬಂದಗೀಸಾಬ ಗಾಣದ 3] ರಾಜಮಾ ಗಂಡ ಮಲೀಕಸಾಬ ಗಾಣದ 4] ಬಿಸ್ಮಿಲ್ಲಾ ಗಂಡ ಖಾದರಸಾಬ ಗಾಣದ ಈ ನಾಲ್ಕು ಜನರು ನಮ್ಮ ಮನೆಯ ಮುಂದೆ ಬಂದು ನಮ್ಮ ಮನೆಯ ಮುಂದೆ ನೀರು ಏಕೇ ಬಿಡುತ್ತೀ ಸೂಳಿ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಮೋರಿಯ ನೀರು ನಿಮ್ಮ ಮನೆಯ ಮುಂದೆ ಎಲ್ಲಿ ಬಿಟ್ಟಿದ್ದೇವೆ ಅಂತ ನಾನು ಅಂದಾಗ ಸದರಿ ನಾಲ್ಕು ಜನರು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಸೂಳಿ ನಿನ್ನದು ಹಾಗು ನಿನ್ನ ಗಂಡನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಖಾದರಸಾಬ ಹಾಗು ಮಲೀಕಸಾಬ ಇವರು ನನ್ನ ಕೂದಲು ಹಾಗು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಷ್ಟರಲ್ಲಿ ನನ್ನ ಗಂಡ ಬಾಪುಗೌಡ ಹಾಗೂ ನಮ್ಮ ಸಂಬಂದಿ ಬಸನಗೌಡ ವಣಿಕ್ಯಾಳ ಇವರು ಬಿಡಿಸಲು ಬಂದಾಗ ನನ್ನ ಗಂಡನಿಗೂ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಬಸನಗೌಡ ವಣಿಕ್ಯಾಳ ಈತನು ಬಿಡಿಸಿಕೊಂಡಿದ್ದು ನಂತರ ಸದರಿಯವರು ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮ್ಮ ಮನೆಯ ಮುಂದೆ ನೀರು ಬಿಟ್ಟರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ. ಕಾರಣ ಮೇಲ್ಕಾಣಿಸಿದ ನಾಲ್ಕು ಜನರು ವಿನಾ ಕಾರಣ ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಕೈಯಿಂದ ಹೊಡೆಬಡೆ ಮಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಬಿಡಿಸಲು ಬಂದ ನನ್ನ ಗಂಡನಿಗೂ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 79/2019 ಕಲಂ 448,323,354,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


 ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 55/2019 ಕಲಂ 454, 380 ಐಪಿಸಿ.:- ದಿನಾಂಕ. 02/07/2019 ರಂದು 2-30 ಪಿಎಮ್ ಕ್ಕೆ  ಫಿಯರ್ಾದಿ ಸಾಹಿರಾಬಾನು ಗಂಡ ಶಫಿಉಲ್ಲ ಕೊಲ್ಲೂರ ವಯಾ 30 ವರ್ಷ, ಜಾ|| ಮುಸ್ಲಿಂ ಉ|| ಮನೆ ಕೆಲಸ ಸಾ|| ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇವರು ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ನನ್ನ ಮೂರು ಸಣ್ಣ ಮಕ್ಕಳೊಂದಿಗೆ ವಾಸಾವಾಗಿರುತ್ತೇವೆ. ನನ್ನ ಗಂಡನಾದ ಶಫಿಉಲ್ಲಾ ಈತನು ಸೌದಿ ಅರೆಬಿಯಾದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡು ಇದ್ದು, ಆಗಾಗ ಊರಿಗೆ ಬಂದು ಹೋಗುತ್ತಾನೆ. ನನ್ನ ಮಕ್ಕಳು ಯಾದಗಿರಿಯ ಮಹಾತ್ಮಗಾಂಧಿ ಶಾಲೆಯಲ್ಲಿ ಓದುತ್ತಿದ್ದಾರೆ. ಮನೆಯ ಖಚರ್ಿಗಾಗಿ ನಾನು ಮನೆಯಲ್ಲಿ 11,000/ ರೂಪಾಯಿಗಳು ತಂದು ಕಿಚನ್ ರೂಮಿನ ಡಬ್ಬಾದಲ್ಲಿ ಇಟ್ಟಿದ್ದೆನು. ಹೀಗಿದ್ದು ಇಂದು ದಿನಾಂಕ 02/07/2019 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ಮನೆಯ ಬೀಗ ಹಾಕಿಕೊಂಡು, ಮಹಾತ್ಮಗಾಂಧಿ ಶಾಲೆಯಲ್ಲಿ ಓದುತ್ತಿರುವ ನನ್ನ ಮಕ್ಕಳಿಗೆ ಟಿಫಿನ್ ತೆಗೆದುಕೊಂಡು ಹೋದೆನು. ನಂತರ ಮರಳಿ ಮನೆಗೆ ಇಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ನಮ್ಮ ಮನೆಯ ಬೀಗ ಮುರಿದು ಬಾಗಿಲು ತೆರೆದಿದ್ದು ಕಂಡು ಬಂತು. ನಂತರ ನಾನು ಗಾಭರಿಯಾಗಿ ಅಜೀಜ್ ಕಾಲೋನಿಯಲ್ಲಿ ಇರುವ ನನ್ನ ತಂದೆಯಾದ ಖಾಜಾಹುಸೇನಿ ತಂದೆ ಬಾಬಾಸಾಬ ಬೀಮಕೊಂದ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಆಗ ಇಬ್ಬರು ಕೂಡಿ ಮನೆಯ ಒಳಗಡೆ ಹೋಗಿ ನೋಡಲಾಗಿ ಬೆಡ್ ರೂಮಿನಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಿಚನ್ ರೂಮಿನಲ್ಲಿಯ ಡಬ್ಬಾಗಳು ಚೆಕ್ ಮಾಡಿದ್ದು ಕಂಡು ಬಂತು. ಪರಿಶೀಲಿಸಿ ನೋಡಲಾಗಿ ಒಂದು ಸ್ಟೀಲ್ ಡಬ್ಬಾದಲ್ಲಿ ಇಟ್ಟಿದ್ದ ನಗದು ಹಣ 11,000/ ರೂಪಾಯಿಗಳು, 2) ಹುಡುಗರ ಒಂದು ಜೊತೆ 03 ತೊಲೆ ಬೆಳ್ಳಿಯ ಕಾಲು ಚೈನ್, ಅ.ಕಿ 14,00/ ನೇದ್ದವುಗಳು ಕಾಣಲಿಲ್ಲ. ನಂತರ ಸುದ್ದಿ ತಿಳಿದು ನಮ್ಮ ಮನೆಯ ಪಕ್ಕದಲ್ಲಿ ಇದ್ದ ಮನೆಯವರಾದ ಚಂದ್ರಶೇಖರ ತಂದೆ ಹಣಮಂತ ಕಡೇಚೂರ ಇವರು ಕೂಡ ಮನೆಗೆ ಬಂದು ನೋಡಿದರು. ನಮ್ಮ ಮನೆಯ ಬೀಗ ಹಾಕಿಕೊಂಡು ಹೋದಾಗ ಯಾರೋ ಕಳ್ಳರು ಬೀಗ ಮುರಿದು, ಮನೆ ಒಳಗೆ ಬಂದು ನಗದು ಹಣ ಹಾಗೂ ಬೆಳ್ಳಿಯ ಚೈನ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 55/2019 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 56/2019 ಕಲಂ 454, 380 ಐಪಿಸಿ.:- ದಿನಾಂಕ 02/07/2019 ರಂದು 4-00 ಪಿಎಮ್ ಕ್ಕೆ  ಫಿಯರ್ಾದಿ ಚಂದ್ರಶೇಖರ ತಂದೆ ಹಣಮಂತ ಕಡೇಚೂರ ವಯಾ 39 ವರ್ಷ, ಜಾ|| ಪ.ಜಾತಿ ಉ|| ಖಾಸಗಿ ಶಿಕ್ಷಕ ಸಾ|| ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇವರು ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ಶಿವಗಂಗಮ್ಮ ಮತ್ತು ನನ್ನ ಇಬ್ಬರು ಸಣ್ಣ ಮಕ್ಕಳೊಂದಿಗೆ ವಾಸಾವಾಗಿರುತ್ತೇನೆ. ನಾನು ಜವಾಹರ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ಉಪನ್ಯಾಸಕ ಅಂತಾ ಕೆಲಸ ಮಾಡಿಕೊಂಡು ಇದ್ದು, ನನ್ನ ಹೆಂಡತಿ, ಬಸವೇಶ್ವರ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ಉಪನ್ಯಾಸಕಿ ಅಂತಾ ಕೆಲಸ ಮಾಡಿಕೊಂಡು ಇದ್ದಾಳೆ. ಇನ್ನೂ ಕಾಲೇಜ್ ಪ್ರಾರಂಭವಾಗದ ಕಾರಣ ನಾನು & ನನ್ನ ಹೆಂಡತಿ ಮನೆಯಲ್ಲಿ ಇದ್ದೆವು. ನಮ್ಮ ಮಕ್ಕಳು ರತ್ನಂ ಹಿರಿಯ ಪ್ರಾಥಮಿಕ ಶಾಲೆ ಹೊಸಳ್ಳಿ ಕ್ರಾಸ್ ಯಾದಗಿರಿಯಲ್ಲಿ ಓದುತ್ತಿದ್ದಾರೆ. ಇಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಶಿವಗಂಗಮ್ಮ ಇಬ್ಬರು ಕೂಡಿ ನಮ್ಮ ಮಕ್ಕಳಿಗೆ ಟಿಫಿನ್ ತೆಗೆದುಕೊಂಡು ರತ್ನಂ ಶಾಲೆಗೆ ಹೋದೆವು. ನಂತರ ಮಕ್ಕಳಿಗೆ ಊಟ ಮಾಡಿಸಿ ಮರಳಿ 01-15 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದಾಗ ನಮ್ಮ ಮನೆಯಿಂದ ಒಬ್ಬ ವ್ಯಕ್ತಿ ಹೊರಗಡೆ ಓಡಿ ಬಂದನು. ಆಗ ನಾನು ಕಳ್ಳ ಕಳ್ಳ ಅಂತಾ ಅವನಿಗೆ ಬೆನ್ನು ಹತ್ತಿದಾಗ ನಮ್ಮ ಮನೆಯ ಅಕ್ಕ ಪಕ್ಕದವರಾದ ಹಣಮಂತ ತಂದೆ ನರಸಪ್ಪ ಹಡಪದ ಮತ್ತು ಇತರರು ಕೂಡಿಕೊಂಡು ಅವನಿಗೆ ಹಿಡಿದು ವಿಚಾರಿಸಲು ಅವನ ಹೆಸರು ಶಿವರಾಜ ತಂದೆ ನಾಗರಾಜ ವಯಾ 22 ವರ್ಷ, ಜಾ|| ಲಿಂಗಾಯತ ಉ|| ಕೂಲಿ ಸಾ|| ಚಿಕ್ಕಬಾಣವಾರ 8 ನೇ ಮೈಲ್ ಬೆಂಗಳೂರು, ಹಾ|| ವ|| ಎ.ಪಿ.ಎಂ.ಸಿ ಹಿಂದುಗಡೆ ರಾಯಚೂರ ಅಂತಾ ತಿಳಿಸಿದನು. ನಮ್ಮ ಮನೆಯೊಳಗಿನಿಂದ ಓಡಿಬಂದಾಗ ಅವನ ಮೇಲೆ ಸಂಶಯ ಬಂದು ಅವನೊಂದಿಗೆ ನಾವು ನಮ್ಮ ಮನೆಗೆ ಹೋಗಿ ನೋಡಿದಾಗ ನಮ್ಮ ಮನೆಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಬೆಡ್ ರೂಮಿನಲ್ಲಿ ಇದ್ದ ಅಲಮರಿ ಕೂಡ ತೆರೆದಿತ್ತು. ಚೆಕ್ ಮಾಡಿ ನೋಡಿದಾಗ ಅದರಲ್ಲಿ ಇಟ್ಟಿದ್ದ 1) 5 ಗ್ರಾಂ. ಬಂಗಾರದ ಉಂಗುರ, ಅ.ಕಿ 15,000/ ರೂ|| 2) 5 ಗ್ರಾಂ. ಬಂಗಾರದ ಒಂದು ಜೊತೆ ಜುಮಕಿ ಬೆಂಡೋಲಿ, ಅ.ಕಿ 15,000/ ರೂ||  3) 3 ಗ್ರಾಂ. ಬಂಗಾರದ ಕಿವಿಯೋಲೆ, ಅ.ಕಿ 9000/ ರೂ|| 4) ತಲಾ 3 ತೊಲೆಯ 02 ಬೆಳ್ಳಿಯ ಹುಡುಗರ ಉಡುದಾರಗಳು, ಅ.ಕಿ 2400/ ರೂ||, ಹಾಗೂ 5) ತಲಾ 02 ತೊಲೆಯ ಎರಡು ಬೆಳ್ಳಿಯ ಲಿಂಗದ ಕಾಯಿಗಳು, ಅ.ಕಿ 1600/ ರೂ|| ಹೀಗೆ ಒಟ್ಟು 43,000/ ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಕಾಣಲಿಲ್ಲ. ಆಗ ಅವನಿಗೆ ಚೆಕ್ ಮಾಡಿದಾಗ ಈ ಮೇಲ್ಕಂಡ ವಸ್ತುಗಳು ಇದ್ದವು. ಆಗ ಕಳ್ಳ ಸಿಕ್ಕ ಬಗ್ಗೆ ಸುದ್ದಿ ತಿಳಿದು ರಾಜಪ್ಪ ತಂದೆ ಕಿಷ್ಠಪ್ಪ ಹಡಪದ ಇವರು ಕೂಡ ಬಂದು ಅಲ್ಲಿಗೆ ಬಂದರು. ಅವರು, ನಮ್ಮ ಮನೆ ಕೂಡ ಕಳುವಾಗಿರುತ್ತದೆ ಅಂತಾ ತಿಳಿಸಿ, ಸದರಿಯವರ ಮನೆಯಲ್ಲಿ ಕಳುವಾದ ವಸ್ತುಗಳು ಅವನ ಹತ್ತಿರ ಇದ್ದವು. ನಂತರ ನಾವು ಪೊಲೀಸರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಠಾಣೆಗೆ ಕರೆದುಕೊಂಡು ಹೋದರು. ಕಾರಣ ಕಳ್ಳತನ ಮಾಡಿದವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2019 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
                                                                           
  
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 57/2019 ಕಲಂ 454, 380 ಐಪಿಸಿ.:- ದಿನಾಂಕ. 02/07/2019 ರಂದು ಸಾಯಂಕಾಲ 8-15 ಗಂಟೆಗೆ ಫಿಯರ್ಾದಿ ರಾಜಪ್ಪ ತಂದೆ ಕಿಷ್ಠಪ್ಪ ಹಡಪದ ವಯಾ 42 ವರ್ಷ, ಜಾ|| ಹಡಪದ ಉ|| ಕುಲಕಸುಬು ಸಾ|| ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇವರು ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ, ತಮ್ಮ ಶ್ರೀನಿವಾಸ ತಂದೆ ಕಿಷ್ಠಪ್ಪ ಇರುತ್ತೇವೆ. ನಮ್ಮ ಮನೆಯವರು ಇಂದು ದಿನಾಂಕ 02/07/19 ರಂದು ಬೆಳಿಗ್ಗೆ ಅಮವಾಸಿ ಇದ್ದ ಕಾರಣ ಮನೆ ದೇವರಾದ ಕೊಲಕುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ನಾನು ಮನೆ ಬೀಗ ಹಾಕಿಕೊಂಡು ಅಂಗಡಿಗೆ ಹೋಗಿದ್ದೆನು. ನಂತರ ಮಧ್ಯಾಹ್ನ 01-15 ಗಂಟೆಯ ಸುಮಾರಿಗೆ ಊಟಕ್ಕೆಂದು ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬೀಗ ಮುರಿದು ಬಾಗಿಲು ತೆಗೆದಿದ್ದು, ಕಂಡು ಗಾಭರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದವು. ನೋಡಲಾಗಿ ಮನೆಯ ಹಾಲದಲ್ಲಿ ಇದ್ದ ಅಲಮರಿ ತೆರೆದಿದ್ದು, ಒಳಗಡೆ ಇದ್ದ 1) 5 ಗ್ರಾಂ. ಬಂಗಾರದ ಒಂದು ಜೊತೆ ಬೆಂಡೋಲಿ, ಅ.ಕಿ 15,000/ ರೂ||, 2) ಒಂದು 2 ತೊಲೆಯ ಬಂಗಾರದ ನೆಕ್ ಲೆಸ್, ಅ.ಕಿ 60,000/ 3) 3 ತೊಲೆಯ ಬೆಳ್ಳಿಯ ಮಕ್ಕಳ ಕಾಲ ಕಡಗ, ಅ.ಕಿ 1200/ ರೂ||, 4)  2 ತೊಲೆವುಳ್ಳ 3 ಬೆಳ್ಳಿಯ ಉಡುದಾರಗಳು, ಅ.ಕಿ 2400/ ರೂ||,  ಹೀಗೆ ಒಟ್ಟು 78,600/ ರೂಪಾಯಿಯ ಸಾಮಾನುಗಳು ಇರಲಿಲ್ಲ. ನಂತರ ನಾನು ಅಕ್ಕ ಪಕ್ಕದವರಿಗೆ ಕೇಳಿದರಾಯಿತು ಅಂತಾ ಹೊರಗೆ ಬಂದಾಗ ನಮ್ಮ ಕಾಲೋನಿಯ ಚಂದ್ರಶೇಖರ ಕಡೇಚೂರ ಇವರ ಮನೆಯ ಹತ್ತಿರ ಕಳ್ಳ ಸಿಕ್ಕಿರುತ್ತಾನೆ ಅಂತಾ ಸುದ್ದಿ ತಿಳಿದು ನಾನು ಹೋದಾಗ ಅಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ಕೂಡಿಸಿದ್ದರು. ಹಿಡಿದವ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶಿವರಾಜ ತಂದೆ ನಾಗರಾಜ ವಯಾ 22 ವರ್ಷ, ಜಾ|| ಲಿಂಗಾಯತ ಉ|| ಕೂಲಿ ಸಾ|| ಚಿಕ್ಕಬಾಣವಾರ 8 ನೇ ಮೈಲ್ ಬೆಂಗಳೂರು, ಹಾ|| ವ|| ಎ.ಪಿ.ಎಂ.ಸಿ ಹಿಂದುಗಡೆ ರಾಯಚೂರ ಅಂತಾ ತಿಳಿಸಿದನು. ಅವನ ಹತ್ತಿರ ಕಳ್ಳತನ ಮಾಡಿದ ಕೆಲವು ವಸ್ತುಗಳು ಇದ್ದವು. ನಂತರ ಎಲ್ಲರು ಕೂಡಿ ಪೊಲೀಸರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಕಳುವು ಮಾಡಿದ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋದರು. ಕಾರಣ ಕಳ್ಳತನ ಮಾಡಿದವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 57/2019 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!