ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-07-2019

By blogger on ಸೋಮವಾರ, ಜುಲೈ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-07-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 164/2019 ಕಲಂ 279,337,338,304[ಎ] ಐ.ಪಿ.ಸಿ:- ದಿನಾಂಕ:01/07/2019 ರಂದು ಮಧ್ಯಾಹ್ನ ಫಿಯರ್ಾದಿ ಶ್ರೀ ದೇವಪ್ಪ ತಂ/ ಬಸಪ್ಪ ಚಿಕ್ಕಮೇಟಿ ಸಾ|| ಬೀರನೂರ ಇವರು  ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದರ ಸಾರಾಂಶ ಏನೆಂದರೆ, ಇಂದು ದಿನಾಂಕ: 01/07/2019 ರಂದು ಬೆಳಿಗ್ಗೆ 11.00 ಎ.ಎಂ. ಸುಮಾರಿಗೆ ಫಿಯರ್ಾದಿಯ ಮಗ ರಂಗಪ್ಪ ಚಿಕ್ಕಮೇಟಿ ಈತನು ಟಾಟಾ ಏಸ್ ವಾಹನ ಸಂ. ಕೆಎ-33 ಎ-1779 ನೇದ್ದರಲ್ಲಿ ಶಹಾಪುರಕ್ಕೆ ಹೊರಟಿದ್ದಾಗ ದೇವದುರ್ಗ-ಶಹಾಪುರ ಮುಖ್ಯ ರಸ್ತೆಯ ವೆಂಕಟರಡ್ಡಿ ಸುರಡ್ಡಿ ಸಾ|| ಸಾವೂರ ಇವರ ಹೊಲದ ಹತ್ತಿರ ಇದ್ದಾಗ ದೇವದುರ್ಗ ಕ್ರಾಸ್ ಕಡೆಯಿಂದ ಟಾಟಾ ಸುಮೋ ವಿಕ್ಟಾ ವಾಹನ ಸಂ.ಕೆಎ-28 ಎನ್-1341 ನೇದ್ದರ ಚಾಲಕ ಸಾಯಬಣ್ಣ ಪಾಲಕಗೋಳ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಒಂದು ಆಕಳು ಬರುತ್ತಿದ್ದುದನ್ನು ತನ್ನ ವಾಹನವನ್ನು ಬಲಕ್ಕೆ ಕಟ್ ಮಾಡಿದಾಗ ಎದುರಿನಿಂದ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಟಾಟಾ ಏಸ್ದಲ್ಲಿದ್ದ ಚಾಲಕ ಮತ್ತು ಗಾಯಾಳುಗಳಿಗೆ, ಟಾಟಾ ಸುಮೋದಲ್ಲಿದ್ದವರಿಗೆ ಬಾರಿ, ಸಾಧಾ ಸ್ವರೂಪದ ಗಾಯಪೆಟ್ಟಾಗಿದ್ದು, ಗಾಯಾಳುಗಳಿಗೆ ಉಪಚಾರ ಕುರಿತು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಟಾಟಾ ಏಸ್ ಚಾಲಕ ರಂಗಪ್ಪ ತಂ/ ದೇವಪ್ಪ ಚಿಕ್ಕಮೇಟಿ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ರಂಗಪ್ಪನಿಗೆ ಒಂದು ಅಂಬ್ಯೂಲೈನ್ಸದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ 12.20 ಪಿ.ಎಂ ಸುಮಾರಿಗೆ ಚಿಗರಳ್ಳಿ ಕ್ರಾಸ್ ಹತ್ತಿರ ರಂಗಪ್ಪನು ಮೃತಪಟ್ಟಿದ್ದ ಮೃತ ದೇಹವನ್ನು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಅಪಘಾತಕ್ಕೆ ಕಾರಣಿಭೂತನಾದ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.164/2019 ಕಲಂ 279, 337, 338, 304(ಎ) ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 45/2019  ಕಲಂ 279, 304(ಎ) ಐಪಿಸಿ :- ದಿನಾಂಕ 01/07/2019 ರಂದು ಸಮಯ 5 ಪಿ.ಎಂ.ಕ್ಕೆ  ಜಿಜಿಎಚ್ ಆಸ್ಪತ್ರೆ ಯಾದಗಿರಿಯಿಂದ ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಅಪಘಾತದಲ್ಲಿ ತೀರ್ವಗಾಯಗೊಂಡ ಗಾಯಾಳು ಶಾಂತಮ್ಮ ಗಂಡ ಮರೆಪ್ಪ ಮಾನೇಗಾರ ವಯ;30 ವರ್ಷ, ಜಾ;ಪ.ಜಾತಿ(ಎಚ್), ಉ;ಕೂಲಿ, ಸಾ;ಹೈಕೂರ, ಹಾ;ವ;ಕೊಟಗಾರ ವಾಡಿ ಯಾದಗಿರಿ ಇವರು  ಅಪಘಾತದಲ್ಲಾದ ಗಾಯ ಭಾದೆಯಿಂದ ಮೃತಪಟ್ಟಿದ್ದು, ಮೃತಳ ತಮ್ಮನಾದ ಪಿಯರ್ಾದಿ ಶ್ರೀ ನಾಗಪ್ಪ ತಂದೆ ಯಲ್ಲಪ್ಪ ಟೊಣ್ಣುರ ವಯ;27 ವರ್ಷ, ಜಾ;ಪ,ಜಾತಿ(ಎಚ್), ಉ;ಖಾಸಗಿ ಶಾಲೆ ಶಿಕ್ಷಕರು, ಸಾ; ಕೊಟಗಾರವಾಡಿ, ಯಾದಗಿರಿ  ತಮ್ಮದೊಂದು ಲಿಖಿತ ಅಜರ್ಿಯ ಫಿಯರ್ಾದು ಬರೆದು ಕೊಟ್ಟಿದ್ದನ್ನು  9 ಪಿ.ಎಂ. ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಸ್ವೀಕೃತ ಮಾಡಿಕೊಂಡಿದ್ದು ಅಜರ್ಿಯ ಸಾರಾಂಶವೇನೆಂದರೆ ನಾನು ಖಾಸಗಿ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತಿದ್ದು, ನನ್ನ ಸ್ವಂತ ಅಕ್ಕಳಾದ ಶಾಂತಮ್ಮ ಗಂಡ ಮರೆಪ್ಪ ಮಾನೇಗಾರ ವಯ;30 ವರ್ಷ, ಜಾ;ಪ.ಜಾತಿ(ಎಚ್), ಉ;ಕೂಲಿ, ಸಾ;ಹೈಕೂರ, ಹಾ;ವ;ಕೊಟಗಾರ ವಾಡಿ ಯಾದಗಿರಿ ಈಕೆಗೆ ಹೈಕೂರ ಗ್ರಾಮದ ಮರೆಪ್ಪ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಆಕೆಗೆ ಮೂರು ಮಕ್ಕಳಿದ್ದು, ಆಕೆಯ ಗಂಡ ಅನಾರೋಗ್ಯದಿಂದ 2 ವರ್ಷದ ಹಿಂದೆ ತೀರಿಕೊಂಡಿದ್ದು ಅಲ್ಲಿಂದ ನನ್ನ ಅಕ್ಕಳು ನಮ್ಮ ಮನೆಯಲ್ಲಿಯೇ ಬಂದು ಮಕ್ಕಳೊಂದಿಗೆ ವಾಸವಾಗಿರುತ್ತಾಳೆ. ಹೀಗಿದ್ದು ಇಂದು ದಿನಾಂಕ 01/07/2019 ರಂದು ಬೆಳಿಗ್ಗೆ ಸುಮಾರಿಗೆ ನನ್ನ ಅಕ್ಕಳು ಎಂದಿನಂತೆ ದಾಲ್ ಮಿಲ್ ಕೆಲಸಕ್ಕೆ ಹೋಗಿದ್ದು ಇರುತ್ತದೆ. ನಾನು ಮದ್ಯಾಹ್ನ 4-15 ಪಿ.ಎಂ. ಸುಮಾರಿಗೆ ವಡಗೇರಾದ ಶಾಲೆಯಲ್ಲಿದ್ದಾಗ ನಮ್ಮ ಸಂಬಂಧಿಕರಾದ ಶ್ರೀ ಸುರೇಶನಾಯಕ ತಂದೆ ಹಾಜಪ್ಪನಾಯಕ ರವರು ಪೋನ್ ಮಾಡಿ ವಿಷಯ ತಿಳಿಸಿದ್ದೇನಂದರೆ ನಾನು ಮತ್ತು ರಮೇಶ ತಂದೆ ಹಣಮಂತ ನೂಲ್ ಇಬ್ಬರು ಸೇರಿಕೊಂಡು ಯಾದಗಿರಿ ನಗರದ ಎ.ಪಿ.ಎಂ.ಸಿ ಯಾರ್ಡನಲ್ಲಿರುವ ಕುರಿ/ದನ ಮಾರುವ ಸ್ಥಳದಲ್ಲಿ ಮಾತನಾಡುತ್ತಾ ನಿಂತಿದ್ದಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಒಂದು ಆಟೋ ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಭಾಗಕ್ಕೆ ಸ್ಕಿಡ್ ಮಾಡಿ ಪಲ್ಟಿ ಮಾಡಿದನು ಆಗ ನಾವಿಬ್ಬರು ಓಡೋಡಿ ಆಟೋದ ಹತ್ತಿರ ಹೋಗಿ ನೋಡಲಾಗಿ ಆಟೋ ಕೆಳಗೆ ಒಬ್ಬ ಮಗಳಿದ್ದು ಆಟೋವನ್ನು ಎತ್ತಿ ನೋಡಲಾಗಿ ಆ ಹೆಣ್ಣು ಮಗಳು ನಿನ್ನ ಅಕ್ಕಳಾದ ಶಾಂತಮ್ಮ ಈಕೆಯು ಇದ್ದು ಈ ಅಪಘಾತದಲ್ಲಿ ಈಕೆಗೆ ಹಣೆಯ ಬಲಭಾಗಕ್ಕೆ, ತಲೆಯ ಮೇಲೆ ಬಾರೀ ರಕ್ತಗಾಯ ಹಾಗೂ ಬಲಗೈನ ಮೊಣಕೈಗೆ ತರಚಿದ ರಕ್ತಗಾಯವಾಗಿ ಪ್ರಜ್ಞೆ ತಪ್ಪಿರುತ್ತಾಳೆ ಅಪಘಾತ ಪಡಿಸಿದ ಆಟೋ ಟಂ,ಟಂ ನಂಬರ ಕೆಎ-33, ಎ-8695 ನೇದ್ದು ಇದ್ದು, ಅದರ ಚಾಲಕನು ಸ್ಥಳದಲ್ಲಿದ್ದು  ಹೆಸರು, ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸುರೇಶ ತಂದೆ ಬಾಗಪ್ಪ ಭಂಡಾರಿ ಸಾ;ನಾಯ್ಕಲ್ ಅಂತಾ ತಿಳಿಸಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 01/07/2019 ರಂದು ಅಂದಾಜು 4 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ನಿನ್ನ ಅಕ್ಕಳಾದ ಶಾಂತಮ್ಮ ಈಕೆಗೆ ಉಪಚಾರ ಕುರಿತು ಸರಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ನೀನು ಕೂಡಲೇ ಬಾ ಎಂದು ತಿಳಿಸಿರುತ್ತಾರೆ. ನಾನು ಯಾದಗಿರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಅಕ್ಕಳಾದ ಶಾಂತಮ್ಮ ಈಕೆಯು ಅಪಘಾತದಲ್ಲಿ ಆದ ಗಾಯಗಳಿಂದ ಸಮಯ 4-45 ಪಿ.ಎಂ.ಕ್ಕೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ ಅಂತಾ ಆಸ್ಪತ್ರೆಯಲ್ಲಿದ್ದ ಸುರೇಶ ರವರಿಂದ ಗೊತ್ತಾಗಿದ್ದು, ಆಸ್ಪತ್ರೆಯಲ್ಲಿದ್ದ ನನ್ನ ಅಕ್ಕಳ ಮೃತದೇಹವನ್ನು ನಾನು ಗುತರ್ಿಸಿರುತ್ತೇನೆ ಈ ಘಟನೆ ಬಗ್ಗೆ  ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಪಿಯರ್ಾದು ನೀಡುತ್ತಿದ್ದು, ಆಟೋ ಟಂಟಂ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಎಂದು ವಿನಂತಿಸಿಕೊಳ್ಳುತ್ತೇನೆ ಅಂತಾ ಬರೆದುಕೊಟ್ಟಿದ್ದರ ಪಿಯರ್ಾದು ಲಿಖಿತ ಅಜರ್ಿ ಸಾರಾಂಶದ ಮೇಲಿಂದ ಮರಳಿ ಠಾಣೆಗೆ ಸಮಯ 9-15 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಲಿಖಿತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2019 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.    
                                                                                                                           
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ: 506 ಸಂ 34 ಐಪಿಸಿ ಮತ್ತು ಕಲಂ:25 (1ಎ) ಆರ್ಮ್ಸ್ ಎಕ್ಟ್ 1959:- ದಿನಾಂಕ: 01/07/2019 ರಂದು 10-30 ಎಎಮ್ ಕ್ಕೆ ಶ್ರೀ ಮಹೇಶಗೌಡ ತಂದೆ ವಿಶ್ವನಾಥರೆಡ್ಡಿ ಕಾಮರೆಡ್ಡಿ, ವ:29, ಜಾ:ಲಿಂಗಾಯತರೆಡ್ಡಿ, ಉ:ಖಾಸಗಿ ಕೆಲಸ ಸಾ:ಎಮ್. ಹೊಸಳ್ಳಿ ತಾ:ಜಿ: ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ: 30/06/2019 ರಂದು ರಾತ್ರಿ 9-45 ಗಂಟೆ ಸುಮಾರಿಗೆ ವಡಗೇರಾ ಕ್ರಾಸ ಹತ್ತಿರ ಇರುವ ಮಯೂರ ದಾಭಾಕ್ಕೆ ನಾನು ಮತ್ತು ನನ್ನ ಗೆಳೆಯನಾದ ಹನುಮಂತರಾಯ ಕೂಲುರು ಇಬ್ಬರೂ ಊಟಕ್ಕೆ ಹೋಗಿದ್ದೇವು. ಆಗ ನಾವು ಕೌಂಟರ ಮುಂದುಗಡೆ ಇರುವ ಟೇಬಲನಲ್ಲಿ ಊಟ ಮಾಡುತ್ತಿದ್ದಾಗ ಬೇರೆ 4 ಜನ ಅಪರಿಚಿತ ವ್ಯಕ್ತಿಗಳು ಕೂಡಾ ಧಾಬಾಕ್ಕೆ ಊಟ ಮಾಡಲು ಬಂದರು. ರಾತ್ರಿ 10 ಗಂಟೆ ಸುಮಾರಿಗೆ ನಾವು ಊಟ ಮಾಡುತ್ತಿದ್ದಾಗ ಆ 4 ಜನ ಅಪರಿಚಿತ ವ್ಯಕ್ತಿಗಳು ಕ್ಯಾಶ ಕೌಂಟರ ಹತ್ತಿರ ನಿಂತಿದ್ದು, ಅವರಲ್ಲಿ ಒಬ್ಬನು ವಿನಾಕಾರಣ ನಮ್ಮ ಕಡೆ ದುರುಗಟ್ಟಿ ನೋಡುವುದು, ಕ್ಯಾಕರಿಸಿ ಉಗಿಯುವುದು ಮಾಡಿ ಬೈಯುತ್ತಿದ್ದನು. ಆಗ ನಾನು ಮೈಯಲ್ಲಿ ರಕ್ತನೆ ಇಲ್ಲ ಹೆಂಗ ಸೆಟಿತಾನ ನೋಡು ಅಂತಾ ನನ್ನ ಗೆಳೆಯನಿಗೆ ಹೇಳುತ್ತಿದ್ದಾಗ ಅದನ್ನು ಕೇಳಿಸಿಕೊಂಡ ಅವನು ನನಗೆ ಏ ಭೊಸುಡಿ ಮಗನೆ ನೀನು ಇದಿಗ ನನಗೆ ನೋಡಿ ಏನೊ ಅಂದಿಯಲ್ಲ ಅಂತಾ ಅಂದಾಗ ನಾನು ಏನು ಅಂದಿಲ್ಲ ನಾವು ನಮ್ಮ ವಿಷಯ ಮಾತನಾಡುತ್ತಿದ್ದೇವು ಎಂದು ಹೇಳಿದಾಗ ಮಕ್ಕಳೆ ಹುಷಾರ ನನ್ನ ಹತ್ತಿರ ಪಿಸ್ತೂಲು ಇದೆ ಯಾವನಾದರೂ ಉಸಿರು ಬಿಟ್ಟರೆ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೇನೆ ಎಂದು ಕ್ಯಾಶ ಕೌಂಟರ ಹತ್ತಿರ ನಿಂತು ತನ್ನಲ್ಲಿದ್ದ ಪಿಸ್ತೂಲು ತೆಗೆದು ಮೇಲೆ ಮಾಡಿದವನೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ನಮಗೆ ಜೀವ ಭಯ ಹಾಕಿದನು. ಅವನ ಸಂಗಡ ಇದ್ದ 3 ಜನರು ಅವನಿಗೆ ಧಾಬಾದ ಹೊರಗಡೆ ಕರೆದುಕೊಂಡು ಹೋಗಿ ತಾವು ತಂದಿದ್ದ ಸ್ವಿಫ್ಟ ರಿಟ್ಜ್ ಕಾರ ನಂ. ಕೆಎ 53 ಝಡ್ 9635 ನೇದ್ದರಲ್ಲಿ ಯಾದಗಿರಿ ಕಡೆ ಹೋದರು. ಕಾರಣ ಸದರಿಯವರು ಅಕ್ರಮವಾಗಿ ಪಿಸ್ತೂಲನ್ನು ಸ್ವಾಧಿನಲ್ಲಿ ಹೊಂದಿದ್ದು, ಅದನ್ನು ತೋರಿಸಿ, ಸಾರ್ವಜನಿಕವಾಗಿ ಜೀವ ಭಯ ಹಾಕಿದ್ದಲ್ಲದೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿರುತ್ತಾನೆ. ನಾನು ಸದರಿಯವರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 59/2019 ಕಲಂ: 506 ಸಂ 34 ಐಪಿಸಿ ಮತ್ತು ಕಲಂ:25 (1ಎ) ಆರ್ಮ್ಸ್ ಎಕ್ಟ್ 1959 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ 380 ಐಪಿಸಿ:-ದಿನಾಂಕ 01/07/2019 ರಂದು 7-30 ಪಿಎಮ್ ಕ್ಕೆ ಫಿರ್ಯಾದಿದಾರರು ಒಂದು ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿದಾರರು ತಾವು ಲೀಜಿಗೆ ಮಾಡಿದ ಹೊಲಗಳಲ್ಲಿ ಹತ್ತಿಬೆಳೆ ಮಾಡಲು 80 ಪಾಕೆಟ್ ಹತ್ತಿಬೀಜಗಳನ್ನು ತಂದು ತಾವು ವಾಸವಿರುವ ಶಿರವಾಳ ಕ್ಯಾಂಪಿನ ಜೋಪಡಿಯಲ್ಲಿ ಇಟ್ಟಿದ್ದು, ದಿನಾಂಕ 28/06/2019 ರಂದು ಬೆಳಿಗ್ಗೆ 10:00 ಗಂಟೆಗೆ ದಿನಸಿ ಸಾಮಾನುಗಳನ್ನು ತರಲು ಶಹಾಪೂರಕ್ಕೆ ಹೋಗುವ ಕುರಿತು ಜೋಪಡಿಗೆ ಕೀಲಿ ಹಾಕಿ, ಕೀಲಿಕೈಯನ್ನು ಜೋಪಡಿಯ ಬಾಗಿಲ ಹತ್ತಿರ ಇರುವ ಒಂದು ಮಳಿಗೆ(ಗೂಟಕ್ಕೆ) ನೇತುಹಾಕಿ ಶಹಾಪೂರಕ್ಕೆ ಹೋಗಿ ಮರಳಿ ಮಧ್ಯಾಹ್ನ 03:00 ಗಂಟೆಗೆ ಬಂದು ನೋಡಿದಾಗ ಜೋಪಡಿಯ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಲಾಗಿ ಹತ್ತಿಬೀಜದ 80 ಪಾಕೆಟಗಳು ಇರಲಿಲ್ಲಾ. ಯಾರೋ ಕಳ್ಳರು ಜೋಪಡಿಗೆ ಹಾಕಿದ ಕೀಲಿಯನ್ನು ತೆರೆದು 40,000=00 ರೂ. ಕಿಮ್ಮತ್ತಿನ ಹತ್ತಿ ಬೀಜದ 80 ಪಾಕೆಟಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2019 ಕಲಂ 380 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ 447,341 323,504,506 ಸಂಗಡ 34 ಐ.ಪಿ.ಸಿ :- ದಿನಾಂಕ 01/07/2019 ರಂದು 3-30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ದೇವಕ್ಕೆಮ್ಮೆ ಗಂಡ ಬಸವರಾಜ ಬಾಸಪ್ಪನವರ ವ|| 45 ಜಾ|| ಲಿಂಗಾಯತ ರಡ್ಡಿ ಉ|| ಹೊಲಮನೆಗೆಲಸ ಸಾ|| ದೇವಾಪೂರ ಹಾ||ವ|| ಮಾಲಗತ್ತಿ ತಾ|| ಸುರಪೂರ  ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ನನಗೆ ದೇವಾಪೂರಕ್ಕೆ ಕೊಟ್ಟು ಮದುವೆ ಮಾಡಿದ್ದು ನಮ್ಮ ತಾಯಿಯವರ ಹೆಸರಿನಲ್ಲಿ ಮಾಲಗತ್ತಿ ಸೀಮಾಂತರದಲ್ಲಿ ಹೊಲ ಸವರ್ೆ ನಂಬರ 218/2 ರಲ್ಲಿ 7 ಎಕರೆ 14 ಗುಂಟೆ ಹೊಲವಿದ್ದು ಸದರಿ ಹೊಲದಲ್ಲಿ ನಮ್ಮ ತಾಯಿಯವರು ನನ್ನ ಹೆಸರಿನಲ್ಲಿ 3 ಎಕರೆ 22 ಗುಂಟೆ ಹೊಲ ಹಾಗು ಉಳಿದ 3 ಎಕರೆ 14 ಗುಂಟೆ ನಮ್ಮ ತಮ್ಮನಾದ ಬಸವಂತ್ರಾಯ ತಂದೆ ಮಾನಪ್ಪ ಕಮತಗಿ ರವರ ಹೆಸರಿನಲ್ಲಿ ಮಾಡಿರುತ್ತಾಳೆ. ಸುಮಾರು ವರ್ಷಗಳಿಂದ ಸದರಿ ಹೊಲ ನಮ್ಮ ಕಬ್ಜಾದಲ್ಲಿದ್ದು ಆದರೆ ಸದರಿ ಹೊಲದಲ್ಲಿ ತಮಗೂ ಪಾಲು ಬರುತ್ತದೆ ಅಂತ ನಮ್ಮ ಸಂಬಂದಿಕರಾದ ಶರಣಮ್ಮ ಗಂಡ ಅಯ್ಯಪ್ಪ ಚಿಂತನಳ್ಳಿ ಇವರು ನಮ್ಮ ಜೊತೆಯಲ್ಲಿ ತಕರಾರು ಮಾಡುತ್ತಾ ಬಂದಿರುತ್ತಾರೆ. ಸದರಿಯವಳ ಹೆಸರಿನಲ್ಲಿ ಯಾವದೇ ದಾಖಲಾತಿಗಳು ಇಲ್ಲದಿದ್ದರು ವಿನಾಕಾರಣ ನಮಗೆ ತೊಂದರೆ ಕೊಡುತ್ತಾ ಬಿತ್ತುವ ಸಮಯದಲ್ಲಿ ತಕರಾರು ಮಾಡುತ್ತಾ ಬಂದಿರುತ್ತಾಳೆ.ಹೀಗಿದ್ದು ದಿನಾಂಕ 01/07/2019 ರಂದು 11-30 ಎಎಮ್ ಕ್ಕೆ  ನಾನು ಹಾಗು ನಮ್ಮ ತಮ್ಮ ಬಸವಂತ್ರಾಯ ಕಮತಗಿ ನಾವಿಬ್ಬರೂ ಹೊಲ ಬಿತ್ತಿದರಾಯಿತು ಅಂತ ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದಾಗ ನಮ್ಮ ಸಂಬಂದಿಕರಾದ 1] ಶರಣಮ್ಮ ಗಂಡ ಅಯ್ಯಪ್ಪ ಚಿಂತನಳ್ಳಿ 2] ಮಲ್ಲಮ್ಮ ತಂದೆ ಅಯ್ಯಪ್ಪ ಚಿಂತನಳ್ಳಿ 3] ಬಸಮ್ಮ ತಂದೆ ಅಯ್ಯಪ್ಪ ಚಿಂತನಳ್ಳಿ 4] ಮಹಾದೇವಪ್ಪ ತಂದೆ ಅಯ್ಯಪ್ಪ ಚಿಂತನಳ್ಳಿ ಸಾ|| ಎಲ್ಲರೂ ಮಾಲಗತ್ತಿ ಇವರೆಲ್ಲರೂ ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನಾವು ಬಿತ್ತನೆ ಮಾಡುವದನ್ನು ತಡೆದು ಎನಲೇ ಸೂಳಿ ಈ ಹೊಲದಲ್ಲಿ ನಮಗೆ ಹೊಲ ಬರುತ್ತದೆ ನೀವು ಯಾಕೇ ಬಿತ್ತುತ್ತಿದ್ದರೀ ಅಂತ ಕೇಳಿದಾಗ ನಾನು ನಿನ್ನ ಹೆಸರಿನಲ್ಲಿ ಏನಾದರೂ ಕಾಗದ ಪತ್ರಗಳು ಇದ್ದಲ್ಲಿ ತೋರಿಸು ನಾನು ಬಿತ್ತುವದನ್ನು ಬಿಡುತ್ತೇನೆ ಅಂತ ಅಂದಾಗ ಈ ಸೂಳಿಯದು ಬಹಾಳ ಆಗಿದೆ ಅಂತ ಎಲ್ಲರೂ ಬೈಯುತ್ತಿದ್ದಾಗ ಶರಣಮ್ಮ,ಮಲ್ಲಮ್ಮ ಹಾಗು ಬಸಮ್ಮ ಈ ಮೂರು ಜನರು ಸೇರಿ ನನಗೆ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಕೈಯಿಂದೆ ಹೊಡೆಬಡೆ ಮಾಡುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊಲದ ಬಾಂದಾರಿಯಲ್ಲಿದ್ದ ನಮ್ಮ ತಮ್ಮ ಬಸವಂತ್ರಾಯ ಹಾಗು ನಮ್ಮ ಸಂಬಂದಿಯಾದ ಯಂಕೂಬಾ ತಂದೆ ನಿಂಗಪ್ಪ ಜಾಲಿಬೆಂಚಿ ಇವರು ಓಡಿ ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಸದರಿ ಹೊಲದಲ್ಲಿ ನಮಗೆ ಪಾಲು ಕೊಟ್ಟರೆ ಸರಿ ಇಲ್ಲದಿದ್ದರೆ ನಿನ್ನ ಹಾಗು ನಿನ್ನ ತಮ್ಮ ಬಸವಂತ್ರಾಯ ನಿಮ್ಮಿಬ್ಬರ ಜೀವ ನನ್ನ ಕೈಯಲ್ಲಿದೆ ಅಂತ ಜೀವದ ಭಯ ಹಾಕಿ ಹೋದರು.ಕಾರಣ ಮೇಲ್ಕಾಣಿಸಿದ ಎಲ್ಲಾ ಜನರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಯಾವದೇ ಹೊಲದ ಕಾಗದ ಪತ್ರಗಳು ಇಲ್ಲದೆಯೇ ಸದರಿ ಹೊಲದಲ್ಲಿ ತಮಗೆ ಪಾಲು ಬರುತ್ತದೆ ಅಂತ ಜಗಳಾ ತೆಗೆದು ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 78/2019 ಕಲಂ 447,341,323,504,506 ಸಮಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                            
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 144/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ. ಆರ್.ಆಕ್ಟ 1957:- ದಿನಾಂಕ:01-07-2019 ರಂದು 2-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:01-07-2019 ರಂದು 10 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಹೆಮನೂರ ಕಡೆಗೆ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ವೆಂಕೋಬಾ ತಂದೆ ರಂಗಯ್ಯಾ ಬಿರೆದಾರ ವಯಾ:55 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಹೇಮನೂರ 2) ಶ್ರೀ ಬೀಮಣಗೌಡ ತಂದೆ ವೆಂಕೊಬಾ ಲಕ್ಷ್ಮಿ ವಯಾ:36 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಹೇಮನೂರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ 1) ಶ್ರೀ ಮನೋಹರ ಸಿಹೆಚ್ಸಿ-105 2) ಸೋಮಯ್ಯ ಸಿ.ಪಿಸಿ-235 ಹಾಗೂ ಜೀಪ ಚಾಲಕನಾದ 3) ಶ್ರೀ ಮಾಹಾಂತೇಶ ಎಪಿಸಿ-48 ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ವಾಹನದಲ್ಲಿ ಠಾಣೆಯಿಂದ 10-15 ಎ.ಎಎಮ್ಕ್ಕೆ ಹೊರಟು 11 ಎ.ಎಮ್ ಕ್ಕೆ ಹೇಮನೂರ ಗ್ರಾಮದ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಹೇಮನೂರ ಕೃಷ್ಣಾ ನದಿಯ ರಸ್ತೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ಜೀಪನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಸದರಿ ಟಿಪ್ಪರನ್ನು ಕೈ ಮಾಡಿ ತಡೆದು ನಿಲ್ಲಿಸಲಾಗಿ ಸದರಿ ಟಿಪ್ಪರ ಚಾಲಕನು ನಾವು ಕೈ ಮಾಡುತ್ತಿದಂತೆ ನಮ್ಮನ್ನು ನೋಡಿ ಸ್ವಲ್ಪ ದೂರದಲ್ಲಿಯೆ ಟಿಪ್ಪರನ್ನು ಸೈಡಿಗೆ ನಿಲ್ಲಿಸಿ ಟಿಪ್ಪರ ಬಿಟ್ಟು ಕೆಳಗೆ ಇಳಿದು ಓಡಿಹೊದನು ನಂತರ ನಾವು ಟಿಪ್ಪರ ಹತ್ತಿರ ಹೋಗಿ ಪರೀಶಿಲಿಸಿ ನೋಡಲು ಒಂದು ಬಾರತಬೆಂಜ ಕಂಪನಿಯ ಟಿಪ್ಪರ ಕೆಎ-32 ಸಿ-4002 ನೇದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಹೇಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 11-30 ಎ.ಎಮ್ ದಿಂದ 12-30 ಪಿ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಓಡಿ ಹೋದ ಚಾಲಕನ ಹೆಸರು ಸುರೇಶ ತಂದೆ ಶೇಖಪ್ಪ ಹೂಗಾರ ವಯಾ:22 ವರ್ಷ ಉ:ಡ್ರೈವರ ಜಾತಿ:ಹೂಗಾರ ಸಾ:ಐಕೂರ  ತಾ:ವಡಗೇರಾ ಅಂತಾ ನಂತರ ಗೊತ್ತಾಗಿದ್ದು ಇರುತ್ತದೆ.ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ  ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!