ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-06-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 54/2019 ಕಲಂ 341.504.506.34 ಐಪಿಸಿ.:-ದಿನಾಂಕ; 29/06/2019 ರಂದು 10-30 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಯ ಕೋರ್ಟ ಸಿಬ್ಬಂದಿ ಶ್ರೀ ಅನಂತರೆಡ್ಡಿ ಪಿಸಿ-168 ರವರು ಮಾನ್ಯ ಸಿ.ಜೆ.ಎಮ್ ನ್ಯಾಯಾಲಯ ಯಾದಗಿರಿಯಿಂದ ಶ್ರೀ ಸುರೇಶ ತಂದೆ ಗೋವಿಂದರಾವ ದೇಶಪಾಂಡೆ ವ;67 ಉ; ವ್ಯಾಪಾರ, ಒಕ್ಕಲುತನ ಸಾ; ರಾಘವೇಂದ್ರ ಕಾಲೋನಿ ಹೊಸಳ್ಳಿಕ್ರಾಸ ಯಾದಗಿರಿ ರವರ ನ್ಯಾಯಾಲಯದ ಉಲ್ಲೇಖಿತ ಪ್ರಕರಣ ಸಂಖ್ಯೆ 01/2019 ನೇದ್ದು ತಂದು ಹಾಜರುಪಡಿಸಿದ್ದು ಸದರಿ ಉಲ್ಲೇಖಿತ ಪ್ರಕರಣದ ಸಾರಾಂಶವೆನೆಂದರೆ, ನಾನು ಯಾದಗಿರಿ ನಗರದ ರಾಘವೇಂದ್ರ ಕಾಲೋನಿಯ ನಿವಾಸಿಯಾಗಿದ್ದು ನಾನು ಸುಮಾರು 5 ವರ್ಷಗಳಿಂದ ಶ್ರೀಮದ್ ಯೋಗಿಶ್ವರ ಯಜ್ಞವಾಲ್ಕ್ಯ ಸೇವಾಸಂಘ ರಾಘವೇಂದ್ರ ಕಾಲೋನಿ ಯಾದಗಿರಿ ಇದರ ಅಧ್ಯಕ್ಷನಾಗಿದ್ದು ಆರೋಪಿ ನಂ.1 ಅನಿಲಕುಮಾರ ದೇಶಪಾಂಡೆ ಇವರು ಈ ಮೊದಲು ಸದರಿ ಸಂಘದ ಕಾರ್ಯದಶರ್ಿಗಳಾಗಿದ್ದು ಸಂಘಕ್ಕೆ ಮೋಸ ಮಾಡುವ ಉದ್ದೇಶದಿಂದ ಸಂಘದ ಯಾದಗಿರಿ (ಬಿ) ಸವರ್ೆ ನಂ.141/ಅ ವಿಸ್ತೀರ್ಣ 5 ಎಕರೆ 18 ಗುಂಟೆ ಕಾನೂನಿನ ಪ್ರಕಾರ ನಿವೇಶನ ಮಾಡಿಸಿದ್ದು ಇವುಗಳನ್ನು ಮಾರಾಟ ಮಾಡಿ ಸಂಘದ ಅಭಿವೃಧ್ದಿಗೆ ಬಳಸುವುದು ಸಂಘದ ಸದಸ್ಯರ ಕರ್ತವ್ಯವಾಗಿರುತ್ತದೆ. ಆದರೆ ಆರೋಪಿ ನಂ.1 ಮತ್ತು 2 ನೇಯವರಾದ ವೆಂಕಟೇಶ ತಂದೆ ಗಣಪತರಾವ್ ರವರು ಸಂಘಕ್ಕೆ ಮೋಸ ಮಾಡಿ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಬೇರೆಯವರಿಗೆ ನನ್ನದೇ ವಯಕ್ತಿಕ ಸ್ವತ್ತು ಇರುವುದೆಂದು ಮಾರಾಟ ಮಾಡಿದ್ದು ಇರುತ್ತದೆ. ಈ ಉದ್ದೇಶವಾಗಿ ಆರೋಪಿ ನಂ.1 ಮತ್ತು 2 ರವರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಕಲಂ.409,420 ಐಪಿಸಿ ಇವುಗಳ ಮೇಲೆ ದಿನಾಂಕ; 11/04/2014 ರಂದು ದೂರನ್ನು ದಾಖಲಿಸಿದ್ದು ಸದರಿ ಗುನ್ನೆ ನಂ.93/2014 ನೇದ್ದು ಇರುತ್ತದೆ. ಪ್ರಕರಣ ಚಾರ್ಜಶೀಟ ಆಗಿ ಸಿಸಿ ನಂ.183/2015 ಅಂತಾ ಇರುತ್ತದೆ. ಸದರಿ ಆರೋಪಿತರು ಪ್ರ.ವ.ವ ಸಂಖ್ಯೆ ಇರುವಾಗ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು ಸದರಿ ಜಾಮೀನಿನ ಪ್ರಕಾರವಾಗಿ ಷರತ್ತುಗಳು ಇರುತ್ತವೆ. ಆದರೆ ಆರೋಪಿತರು ಮಾನ್ಯ ಘನ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡಿ ಸಂಘದ ದಾಖಲಾತಿಗಳನ್ನು ಮತ್ತು ಸಂಘಕ್ಕೆ ಸೇರಿದ ಆಸ್ತಿಯ ದಾಖಲಾತಿಗಳನ್ನು ತನ್ನ ಹೆಸರಿಗೆ ಒಳಸಂಚಿನಿಂದ ಹಾಗೂ ಬೆದರಿಕೆಯಿಂದ ತಿದ್ದುಪಡಿ ಮಾಡಿ ದಾಖಲಾತಿಗಳನ್ನು ನಾಶಪಡಿಸಿ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘನೆ ಮಾಡಿ ಸಾಕ್ಷಿಗಳನ್ನು ನಾಶಪಡಿಸಿರುತ್ತಾರೆ. ಕೇಳಿದರೆ ನಿವ್ಯಾರೆಲೇ ಬೋಸಡೀ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಾನು ಇಲ್ಲಿಯವರೆಗೆ ಸಾಕಷ್ಟು ಕೋರ್ಟ ಕಛೇರಿಗಳನ್ನು ನೋಡಿದ್ದೇನೆ ನಿವೇನು ಕಿತ್ತುಕೊಳ್ಳುತ್ತೀರೆಂದು ನಿಂದಿಸಿರುತ್ತಾರೆ. ನಮಗೆ ಮತ್ತು ಸಾಕ್ಷಿ ಜನರಿಗೆ ಹೆದರಿಸಿ ಈಗಾಗಲೇ ನಮ್ಮ ವಿರುದ್ದ ಕೇಸು ಮಾಡಿದ್ದು ಇದೆ ನೀವು ಯಾದಗಿರಿ ನಗರದಲ್ಲಿ ಹೇಗೆ ಜೀವನ ಮಾಡುತ್ತೀರಿ ನಿಮ್ಮನ್ನು ಒಂದು ಕೈ ನೋಡಿಕೊಳ್ಳುತ್ತೇವೆ ಒಂದು ವೇಳೆ ನಮ್ಮ ವಿರುದ್ದ ಸಾಕ್ಷಿ ನುಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಬೋಸಡೀ ಮಕ್ಕಳೇ ಅಂತಾ ಬೈದಿರುತ್ತಾರೆ. ನಾವು ಯಾವುದೇ ಸಮಯದಲ್ಲಿ ಎದುರಿಗೆ ಕಂಡಾಗ ನಮ್ಮನ್ನು ಕೊಲೆ ಮಾಡುವ ರೀತಿಯಲ್ಲಿ ವಕ್ರ ದೃಷ್ಠಿಯಲ್ಲಿ ನೋಡುತ್ತಾರೆ ಮತ್ತು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನುಕು-ನುಗ್ಗಲು ಮಾಡಿರುತ್ತಾರೆ. ಅಷ್ಟರಲ್ಲಿ ಜಗಳ ಬಿಡಿಸಲು ಬಂದ ಹಾಲಿ ಕಾರ್ಯದಶರ್ೀಗಳಾದ ಪ್ರಶಾಂತ ದೇಶಮುಖ ಇವರಿಗೂ ಸಹಾ ಬಾಯಿಗೆ ಬಂದ ಹಾಗೆ ಬೈದು ಯಾರಲೇ ಬೋಸಡೀ ಮಗನೇ ನಮಗೆ ಅಡ್ಡ ಬರಲಿಕ್ಕೆ ನೀವೆನಾದರು ಅಡ್ಡ ಬಂದರೇ ನಿಮ್ಮ ಕೈ ಕಾಲು ಕಡಿಸುತ್ತೇನೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಬೈದಿರುತ್ತಾರೆ. ಸಂಘದ ವಿರುದ್ದ ಅಪ ಪ್ರಚಾರ ಮಾಡುತ್ತಾ ಈತ ಮತ್ತು ಈತನ ಗುಂಪಿನವರಿಂದ ಹಸ್ತಕ್ಷೇಪ ಮಾಡುತ್ತಾ ನಮ್ಮ ಬಡಾವಣೆಗೆ ಸಂಪೂರ್ಣ ಸಾಮರಸ್ಯವನ್ನು ತಪ್ಪಿಸಿ ಶಾಂತಿಭಂಗ ಹಾಗೂ ಗುಂಡಾಗಿರಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಯಾವ ಸಮಯದಲ್ಲಿ ನಮಗೆ ಏನಾಗುತ್ತದೆಯೋ ಅಂತಾ ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ. ಈಗಾಗಲೇ ಮಾಡಿದ ಪ್ರಕರಣ ಮರಳಿ ಪಡೆಯದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳುತ್ತಿದ್ದಾರೆ. ಇದರ ಸಂಭಂದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ಅವರು ಪ್ರಕರಣ ತೆಗೆದುಕೊಳ್ಳದೇ ನಿರಾಕರಿಸಿರುತ್ತಾರೆ. ಕಾರಣ ಮಾನ್ಯ ನ್ಯಾಯಾಲಯಕ್ಕೆ ಮೋರೆ ಹೋಗುವ ಪ್ರಸಂಗ ಬಂದಿರುತ್ತದೆ. ಕಾರಣ ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತವಾದ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಾನ್ಯ ಘನ ನ್ಯಾಯಾಲಯದಲ್ಲಿ ಪ್ರಾಥರ್ಿಸಿಕೊಳ್ಳುತ್ತೇನೆ. ಮೇಲೆ ಹೇಳಿದ ಆರೋಪಿತರು ಕಲಂ.341,504506 ಸಂ.34 ಭಾ.ದಂ.ಸಂ. ಕೆಳಗಡೆ ಅಪರಾಧವೆಸಗಿರುತ್ತಾರೆ. ಆದ ಕಾರಣ ಮಾನ್ಯ ನ್ಯಾಯಾಲಯವು ಈಗಾಗಲೇ ಜಾಮೀನಿನ ಮೇಲೆ ಬಿಟ್ಟಿರುವ ಅಪರಾಧಿ ಸಂ.1 ಮತ್ತು 2 ರವರಿಗೆ ಜಾಮೀನು ಷರತ್ತು ಉಲ್ಲಂಘನೆ ಮಾಡಿದ್ದಕ್ಕೆ ಸದರಿ ಪ್ರಕರಣದಲ್ಲಿ ನೀಡಿದ ಜಾಮೀನು ರದ್ದು ಮಾಡಬೇಕೆಂದು ಪ್ರಾರ್ಥನೆ. ಸದರಿ ವಿಷಯದಲ್ಲಿ ನಮಗೆ ನ್ಯಾಯ ದೊರಕಿಸಿ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕಾಗಿ ಪ್ರಾರ್ಥನೆ ಮತ್ತು ಆರೋಪಿತರನ್ನು ನ್ಯಾಯಾಲಯಕ್ಕೆ ಕರೆದು ಅವರು ಎಸಗಿರುವ ಅಪರಾಧಗಳಿಗೇ ಕಲಂ.341,504506 ಸಂ.34 ಭಾ.ದಂ.ಸಂ. ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಕೇಳಿಕೊಳ್ಳುತ್ತೇನೆ. ಅಂತಾ ಇದ್ದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.54/2019 ಕಲಂ.341,504,506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 63/2019 ಕಲಂ: 279, 304 (ಎ) ಐಪಿಸಿ ಸಂ: 187 ಐಎಂವಿ ಯಾಕ್ಟ:- ದಿನಾಂಕ: 29/06/2019 ರಂದು ಬೇಳಗ್ಗೆ 09.30 ಎಎಂ ಕ್ಕೆ ಪಿಯರ್ಾದಿ ಶ್ರೀಮತಿ ಜ್ಯೋತಿಬಾಯಿ ಗಂಡ ಲಕ್ಷ್ಮಣ ರಾಠೋಡ ವಯ 24 ವರ್ಷ ಜಾತಿ: ಲಂಬಾಣಿ ಉ: ಕೂಲಿಕೆಲಸ ಸಾ: ಕಕ್ಕಸಗೇರಾ ತಾಂಡಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ಸಲ್ಲಿಸಿದ್ದು, ಸದರಿ ಅಜರ್ಿ ಸಾರಂಶ ಏನದಂರೆ, ನನಗೆ ಮೂರು ಜನ ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನನ್ನ ತವರು ಮನೆ ಹಾರಣಗೇರಾ ಕಾರಬಾರಿ ತಾಂಡಾ ಇದ್ದು ನನ್ನ ಗಂಡನಾದ ಲಕ್ಷ್ಮಣ ರಾಠೋಡ ಇತನೊಂದಿಗೆ ನಾನು ಮತ್ತು ನನ್ನ ಮಕ್ಕಳು ಕೂಡಿ ದುಡಿದುಕೊಂಡು ಬರಲು ಈಗ ಒಂದು ವರ್ಷದಿಂದ ಬೆಂಗಳೂರಿಗೆ ಹೋಗಿ ಇದ್ದೆವು. ಅಲ್ಲಿಂದ ಈಗ ಒಂದು ವಾರದ ದಿಂದ ಹಿಂದೆ ಹಾರಣಗೇರಾ ಕಾರಬಾರಿ ತಾಂಡಾದಲ್ಲಿ ನಮ್ಮ ಸಂಬಂದಿಕರಲ್ಲಿ ಮದುವೆ ಇದ್ದುದ್ದರಿಂದ ನಾನು ಮತ್ತು ನನ್ನ ಮಕ್ಕಳೊಂದಿಗೆ ಬಂದು ಇದ್ದೇನು. ನನ್ನ ಗಂಡನು ಅಲ್ಲೇ ಬೆಂಗಳೂರಿನಲ್ಲಿ ಇದ್ದನು. ದಿನಾಂಕ 28-06-2019 ರಂದು ಬೆಳಿಗ್ಗೆ 9-30 ಎ.ಎಂಕ್ಕೆ ನಮ್ಮ ಮನೆಯ ಹತ್ತೀರ ರೋಡಿನ ಮೇಲೆ ಚಂದ್ರಾಮ ಚಿನ್ನಾರಾಠೋಡ ಇತನ ಮನೆಯ ಮುಂದೆ ರೋಡಿನ ಬಾಜು ನನ್ನ ಹಿರಿಯ ಮಗನಾದ ಕುಮಾರ ಅಶ್ವೀತ ವಯಸ್ಸು 06 ವರ್ಷ ಇತನು ಸಂಡಾಸಕ್ಕೆ ಕೂಡಲಿಕ್ಕೆ ಹೋಗಿ ಬಾಜು ಕುಳಿತಿದ್ದನು. ಆಗ ಹಾರಣಗೇರಾ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಇಂಜನಕ್ಕೆ ಹಿಂದುಗಡೆ ನೇಗಿಲನ್ನು ಹಾಕಿಕೊಂಡು ಟ್ರಾಕ್ಟರ ಇಂಜಿನೆದ್ದನ್ನು ಅತಿವೇಗವಾಗಿ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೇ ನನ್ನ ಮಗನ ಹತ್ತೀರ ಒಂದು ಸೈಡಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತ ಮಾಡಿದ ನಂತರ ಟ್ರಾಕ್ಟರ ಇಂಜಿನ ನೆದ್ದನ್ನು ಬಿಟ್ಟು ಅಲ್ಲಿಂದ ಅದರ ಚಾಲಕ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಆಗ ಅಲ್ಲೇ ಇದ್ದ ನಾನು ಹೋಗಿ ನೋಡಲಾಗಿ ಅಪಘಾತದಲ್ಲಿ ನನ್ನ ಮಗನಾದ ಕುಮಾರ ಆಸ್ವೀತ ಇತನಿಗೆ ತಲೆಗೆ ಭಾರಿ ಗಾಯವಾಗಿದ್ದು ಇತ್ತು. ಅಲ್ಲಿಯೇ ರೋಡಿನ ಬಾಜು ಇದ್ದ ನಮ್ಮ ತಾಂಡೆಯ ಸೀತಾಬಾಯಿ ಗಂಡ ತಿಪ್ಪಣ್ಣ, ಸೋಮನಾಥ ತಂದೆ ತಾರು, ಅನೀಲ ತಂದೆ ಲಾಲು ರಾಠೋಡ, ಆನಂದ ತಂದೆ ಬಸವರಾಜ, ಇವರು ಸಹಿತ ಘಟನೆಯನ್ನು ನೋಡಿರುತ್ತಾರೆ. ಆಗ ಅಲ್ಲಿಂದ ನನ್ನ ಮಗನಿಗೆ ಉಪಚಾರ ಕುರಿತು ನನ್ನ ತಮ್ಮನಾದ ಆನಂದ ಮತ್ತು ಆಕಾಶ ಇವರು ಮೋಟಾರ ಸೈಕಲ ಮೇಲೆ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೇಟೆಡ್ ಆಸ್ಪತ್ರೆ ಕಲಬುರಿಗೆ ನಾನು ಮತ್ತು ಆನಂದ, ಆಕಾಶ, ನಮ್ಮ ತಾಂಡಾದ ಸುಂತಾನ, ಇವರೊಂದಿಗೆ ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಯ ಯುನೇಟೆಡ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಆಗ ನನ್ನ ಮಗ ಕುಮಾರ ಅಶ್ವತ ಇತನು ಉಪಚಾರ ಹೊಂದುತ್ತಾ ಇದ್ದಾಗ ಆಗ ಗುಣಮುಖನಾಗದೇ ದಿನಾಂಕ 28-09-2019 ರಂದು 6-30 ಪಿ.ಎಂಕ್ಕೆ ಮೃತಪಟ್ಟಿರುತ್ತಾನೆ. ನಂತರ ಮೃತಪಟ್ಟ ನನ್ನ ಮಗನ ಶವವನ್ನು ಸರಕಾರಿ ಆಸ್ಪತ್ರೆ ಶಹಾಪೂರದ ಶವಗಾರ ಕೋಣೆಯಲ್ಲಿ ತಂದು ಹಾಕಿದ್ದು ಇರುತ್ತದೆ. ನನ್ನ ಮಗನಾದ ಕುಮಾರ ಅಶ್ವೀತ ವಯ: 06 ಇತನು ಮೃತಪಟ್ಟ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದೇನು. ಅಪಘಾತ ಮಾಡಿದ ಟ್ರಾಕ್ಟರ ಇಂಜಿನ ನಂಬರ ಇರುತ್ತದೆ. ಸದರಿ ಟ್ರಾಕ್ಟರ ಇಂಜಿನ ಬಣ್ಣ ಹಸಿರು ಬಣ್ಣ ಇರುತ್ತದೆ. ಟ್ರಾಕ್ಟರ ನೆದ್ದು ಎಲ್&ಟಿ ಕಂಪನಿಯದ್ದು ಇರುತ್ತದೆ. ಅಪಘಾತ ಮಾಡಿದ ಚಾಲಕನ ಹೆಸರು ಮತ್ತು ವಿಳಾಸವನ್ನು ನಮ್ಮ ತಾಂಡಾದವರಿಂದ ವಿಚಾರಿಸಿದ್ದು ಅವನ ಹೆಸರು ನಿಂಗಪ್ಪ ತದೆ ಮರೆಪ್ಪ ಸಾ: ಉಕ್ಕನಾಳ ಇರುತ್ತದೆ. ನನ್ನ ಮಗನ ಸಾವಿಗೆ ಇದೇ ವ್ಯಕ್ತಿಯು ಕಾರಣನಾಗಿದ್ದು ಸದರಿ ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಪಘಾತ ಮಾಡಿದ ಟ್ರ್ಯಾಕ್ಟರ ಇಂಜಿನ ನಂಬರ ಕೆಎ-33-ಟಿಎ-9598 ಇರುತ್ತದೆ. ಅಂತಾ ಅಜರ್ಿ ನೀಡಿದ್ದು. ಸದರಿ ಅಜರ್ಿ ಸಾರಂಶದ ಮೆಲಿಂದ ಠಾಣೆ ಗುನ್ನೆ ನಂ: 63/2019 ಕಲಂ:279, 304(ಎ) ಐಪಿಸಿ ಮತ್ತು 187 ಐ.ಎಂ.ವ್ಹಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ: 143, 147, 148, 323, 324, 504 506 ಸಂ: 149 ಐಪಿಸಿ:-ದಿನಾಂಕ: 29/06/2019 ರಂದು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀ ಭೀಮಣ್ಣ ಹೆಚ್.ಸಿ-146 ರವರು ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳಯ ಶ್ರೀ. ಸಿದ್ದಪ್ಪ ತಂದೆ ತಿರುಪತಿ ಕೋಸಗೇರ ವಯಾ:20 ವರ್ಷ ಉ: ಕುರಿಕಾಯುವದು, ಜಾ: ಗೋಲ್ಲರ ಸಾ: ಕಾಡಂಗೇರಾ ಹಾ: ವ: ಗೋಲಗೇರಾ ದೋಡ್ಡಿ ತಾ: ಶಹಾಪೂರ ಈತನ ಹೇಳಿಕೆ ಪಡೆದುಕೊಂಡು ಮರಳಿ 05.45 ಪಿಎಂ ಕ್ಕೆ ಠಾಣಗೆ ಬಂದು ಹಾಜರ ಪಡೆಸಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ದಿನಾಂಕ:28/06/2019 ರಂದು 04.00 ಪಿಎಂ ಸುಮಾರಿಗೆ ನಾನು, ನಮ್ಮ ಮಾವನಾದ ಮಲ್ಕಪ್ಪ ತಂದೆ ತಿಪ್ಪಣ್ಣ ಆಡಿನೋರ, ಇಬ್ಬರು ನಮ್ಮ ಕುರಿಗಳನ್ನು ಕಾಯುತ್ತಾ ಶೆಟ್ಟಿಕೇರಾ ಸೀಮಾಂತರದ ದೇವಿಂದ್ರಪ್ಪ ಜೋಗಿನ ಇವರ ಹೊಲದಲ್ಲಿ ಇದ್ದಾಗ, ಈಗ್ಗೆ 15 ದಿನಗಳ ಹಿಂದೆ ನಮ್ಮ ಮಾವನ ಜೋತೆಯಲ್ಲಿ ಜಗಳ ತಗೆದಿದ್ದ ಆರೋಪಿತರೆಲ್ಲರು ಕೂಡಿ ಬಂದವರೇ ನನಗೆ ಸೂಳೆ ಮಗನೆ ಮೊನ್ನೆ ಜಗಳದಲ್ಲಿ ಬಹಳ ಹಾರುಡುತ್ತಿದ್ದಿ ಈಗ ಏನ ಅಂತಲೆ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಬಂದವರೆ ಜೆಟ್ಟೆಪ್ಪ ದೋಡ್ಮನಿ ಈತನು ಕೈಮುಷ್ಠಿಮಾಡಿ ನನ್ನ ಮುಖಕ್ಕೆ ಹೊಡೆದನು. ಅದರಿಂದ ನನ್ನ ಮೇಲಿನ ತುಟಿಗೆ ಗಾಯವಾಗಿರುತ್ತದೆ. ಆಗ ಹಣಮಂತ ತಂದೆ ಜೆಟ್ಟೆಪ್ಪ, ದೇವಪ್ಪ ತಂದೆ ಜೆಟ್ಟೆಪ್ಪ ಇವರುಗಳು ರಂಡಿ ಮಗನೆ ಅಂತಾ ಬೈಯ್ದು, ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ. ಸಾಯಿಬಣ್ಣ ತಂದೆ ಜೆಟ್ಟೆಪ್ಪ ಮತ್ತು ಹಣಮಂತ ತಂದೆ ಹಣಮಂತ ಇಬ್ಬರು ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದಿರುತ್ತಾರೆ. ಆಗ ಹಣಮಂತ ತಂದೆ ಜೆಟ್ಟೆಪ್ಪ ಈತನು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಎದೆಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ಆಗ ಅಲ್ಲೆ ನೀರು ಕುಡಿಯಲು ಹೋಗಿದ್ದ ನಮ್ಮ ಮಾವ ಮಲ್ಕಪ್ಪ ತಂದೆ ತಿಮ್ಮಣ್ಣ ಆಡಿನೋರ, ಮತ್ತು ಅಲ್ಲೆ ಹೊರಟಿದ್ದ ಬಲಭೀಮ ತಂದೆ ತಿಮ್ಮಯ್ಯ ಆಡಿನ ಸಾ: ದೇವಿಕೇರಿ ಮತ್ತು ಯಂಕಪ್ಪ ತಂದೆ ಭೀಮಣ್ಣ ಕೋಸಗೇರ ಸಾ: ಕಾಡಂಗೇರಾ ಇವರುಗಳು ಓಡಿ ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಸದರಿಯವರು ಮಗನೆ ಇವತ್ತು ಉಳದಿದಿ ಇನ್ನೊಮ್ಮೆ ಸಿಗು ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ ನನಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ ಮೇಲಿನ 5 ಜನರ ವಿರುದ್ದಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜ ಇರುತ್ತದೆ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2019 ಕಲಂ: 143, 147, 148, 323, 324, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ 279, 337 ಐ.ಪಿ.ಸಿ ಸಂ 187 ಐಎಮ್ವಿ ಆಕ್ಟ:- ದಿನಾಂಕ: 28/06/2019 ರಂದು 10 ಪಿಎಮ್ ಕ್ಕೆ ಫಿಯರ್ಾದಿದಾರರು ಹಾಗು ಅವರ ಗೆಳೆಯ ಹನುಮಂತಗೌಡ ಇಬ್ಬರು ಕೂಡಿ ಕಾರ ಟಿಪಿ ನಂ:ಕೆಎ:34ಟಿಎಮ್ಪಿ2018/10328 (ಚೆಸ್ಸಿನ ನಂ:ಒಂಖಿ627163ಎಐಅ14976) ನೇದ್ದರಲ್ಲಿ ಕಲಬುರಗಿಯಿಂದ ಶಹಾಪೂರಕ್ಕೆ ಬರುತ್ತಿದ್ದಾಗ ಮದ್ರಕಿ ಕ್ರಾಸ ಹತ್ತಿರ ಎದುರಿನಿಂದ ಲಾರಿ ನಂ ಎಮ್.ಹೆಚ್:09, ಎ:9477 & ಲಾರಿ ನಂ ಕೆಎ:36, ಬಿ:4824 ನೇದ್ದರ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸುತ್ತ ಒಂದಕ್ಕೊಂದು ಓರ್ ಟೇಕ್ ಮಾಡುತ್ತ ಬಂದು ಮುಂದೆ ಇದ್ದ ಲಾರಿ ನಂ ಎಮ್.ಹೆಚ್.09, ಎ:9477 ನೇದ್ದರ ಚಾಲಕ ಹನುಮಂತಗೌಡ ಇವರು ನಡೆಸುತ್ತಿದ್ದ ಕಾರಿಗೆ ಎಡಗಡೆ ಡಿಕ್ಕಿಪಡಿಸಿದನು. ಹಿಂದೆ ಇದ್ದ ಲಾರಿ ನಂ ಕೆಎ:36, ಬಿ:4824 ನೇದ್ದರ ಚಾಲಕ ಕಾರಿಗೆ ಬಲಭಾಗಕ್ಕೆ ಡಿಕ್ಕಿಪಡಿಸಿ ಲಾರಿ ನಿಲ್ಲಿಸುವ ಹಾಗೆ ಮಾಡಿ ವಾಹನದೊಂದಿಗೆ ಓಡಿ ಹೋಗಿದ್ದು, ಲಾರಿ ನಂ::ಎಮ್.ಹೆಚ್:09, ಎ:9477 ನೇದ್ದರ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಹನುಮಂತಗೌಡ ಇವರಿಗೆ ಗದ್ದಕ್ಕೆ ಹಾಗು ಹಣೆಗೆ ರಕ್ತಗಾಯವಾಗಿದ್ದು, ಧರ್ಮಣ್ಣನವರ ವೈದ್ಯಕೀಯ ಉಪಚಾರ ಕುರಿತು ಜಿಜಿಹೆಚ್ ಶಹಾಪೂರಕ್ಕೆ ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಅಮರಖೇಡ ಆಸ್ಪತ್ರೆ ರಾಯಚೂರದಲ್ಲಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 58/2019 ಕಲಂ: 379 ಐಪಿಸಿ:-ದಿನಾಂಕ: 29/06/2019 ರಂದು 8-15 ಪಿಎಮ್ ಕ್ಕೆ ಶ್ರೀ ಶರಣಗೌಡ ಎಮ್. ನ್ಯಾಮಣ್ಣವರ್ ಆರಕ್ಷಕ ವೃತ್ತ ನಿರೀಕ್ಷಕರು, ಯಾದಗಿರಿ ವೃತ್ತ ರವರು ಎರಡು ಜೆ.ಸಿ.ಬಿ ಗಳು, ಒಂದು ಟಿಪ್ಪರ ಮತ್ತು ಇಬ್ಬರು ಆರೋಪಿತರಿಗೆ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ವರದಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 29/06/2019 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ವಡಗೇರಾ ಕ್ರಾಸ್ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ನನಗೆ ಕುಮನೂರು ಸೀಮಾಂತರದ ಭೀಮಾ ನದಿ ಪಾತ್ರದಿಂದ ಕೆಲವರು ಕಳ್ಳತನದಿಂದ ಮರಳನ್ನು ಟಿಪ್ಪರಗಳಲ್ಲಿ ತುಂಬಿ ಸಾಗಿಸುತ್ತಿರುವದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಶ್ರೀ ಸೈಯದ್ ಅಲಿ ಹೆಚ್.ಸಿ-191 ಯಾದಗಿರಿ ವೃತ್ತ ಕಛೇರಿ 2) ಶ್ರೀ ಸೈದಪ್ಪ ಹೆಚ್.ಸಿ-34 ಯಾದಗಿರಿ ವೃತ್ತ ಕಛೇರಿ ಮತ್ತು ಜೀಪ ಚಾಲಕ 3) ಶ್ರೀ ಅಮರೇಶ ಎಪಿಸಿ-114 ಯಾದಗಿರಿ ವೃತ್ತ ಕಛೇರಿ ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-161 ನೆದ್ದರಲ್ಲಿ ಹೊರಟು ಕುಮನೂರು ಗ್ರಾಮದ ಭೀಮಾ ನದಿ ಪಾತ್ರಕ್ಕೆ ಸಾಯಂಕಾಲ 6-30 ಗಂಟೆ ಸುಮಾರಿಗೆ ಹೋಗಿ ನೋಡಲಾಗಿ ನದಿಯಲ್ಲಿ ಒಂದು ಟಿಪ್ಪರ ನಂ. ಕೆಎ 33 ಎ 9452 ನೇದ್ದು ನಿಂತಿದ್ದು, ಅದರಲ್ಲಿ ಎರಡು ಜೆ.ಸಿ.ಬಿ ಗಳಿಂದ ಕಳ್ಳತನದಿಂದ ಮರಳು ತುಂಬುತ್ತಿದ್ದರು. ಒಬ್ಬ ಮನುಷ್ಯನು ನಿಂತು ಮರಳು ತುಂಬಿಸುತ್ತಿದ್ದನು. ನಾನು ಮತ್ತು ಸಿಬ್ಬಂದಿಯವರು ಹೋಗಿ ಎರಡು ಜೆ.ಸಿ.ಬಿ ಮತ್ತು ಟಿಪ್ಪರ ಹತ್ತಿರ ಹೋಗುವಷ್ಟರಲ್ಲಿ ಎರಡು ಜೆ.ಸಿ.ಬಿ ಗಳ ಆಪರೇಟರಗಳು ಜೆ.ಸಿ.ಬಿ ಗಳನ್ನು ಬಿಟ್ಟು ಓಡಿ ಹೋದರು. ಟಿಪ್ಪರ ಚಾಲಕ ವಿರೇಶ ತಂದೆ ಅಮಲಪ್ಪ ನಾಸೇರ, ವ:35, ಜಾ:ಬೇಡರ, ಉ:ಡ್ರೈವರ ಸಾ:ಕುರುಕುಂದಾ ತಾ:ವಡಗೇರಾ ಮತ್ತು ಮರಳು ತುಂಬಿಸುತ್ತಿದ್ದ ಬಸವರಾಜ ತಂದೆ ಸಿದ್ದಪ್ಪ ಕಾವಲಿ, ವ:52, ಜಾ:ಬೇಡರ, ಉ:ಒಕ್ಕಲುತನ ಸಾ:ಕುಮನೂರು ತಾ:ವಡಗೇರಾ ಇವರಿಬ್ಬರಿಗೆ ವಶಕ್ಕೆ ಪಡೆದುಕೊಂಡೆವು. ಜೆ.ಸಿ.ಬಿ ನಂ. ಕೆಎ 32 ಸಿ 7106 ನೇದ್ದು ಇದ್ದು, ಇನ್ನೊಂದು ಜೆ.ಸಿ.ಬಿ ನಂ. ಕೆಎ 33 ಎಮ್ 7375 ನೇದ್ದು ಇರುತ್ತದೆ. ಸದರಿ ಜೆ.ಸಿ.ಬಿ ಆಪರೇಟರಗಳಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟಿಪ್ಪರದಲ್ಲಿ ಅಂದಾಜು 3-4 ಜೆ.ಸಿ.ಬಿ ಬಕೆಟ ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ತುಂಬುತ್ತಿದ್ದ ಬಗ್ಗೆ ರಾಯಲ್ಟಿ ವಿಚಾರಿಸಿದಾಗ ತಮ್ಮ ಹತ್ತಿರ ಸದರಿ ಜಾಗದಲ್ಲಿ ಮರಳು ತುಂಬಲು ರಾಯಲ್ಟಿ ಇರುವುದಿಲ್ಲವೆಂದು ಹೇಳಿದನು. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಜೆ.ಸಿ.ಬಿ ಗಳ ಆಪರೇಟರಗಳು ಹಾಗೂ ಟಿಪ್ಪರ ಮತ್ತು ಜೆ.ಸಿ.ಬಿ ಗಳ ಮಾಲಿಕರು ಅಕ್ರಮವಾಗಿ ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ಸದರಿ ಟಿಪ್ಪರ ಮತ್ತು ಟಿಪ್ಪರ ಚಾಲಕ, ಮರಳು ತುಂಬಿಸುತ್ತಿದ್ದ ಬಸವರಾಜ ಹಾಗೂ ಎರಡು ಜೆ.ಸಿ.ಬಿ ಗಳನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ, ಮರಳು ತುಂಬಿಸುತ್ತಿದ್ದ ಬಸವರಾಜ ಮತ್ತು ಜೆ.ಸಿ.ಬಿ ಆಪರೇಟರಗಳು ಹಾಗೂ ಟಿಪ್ಪರ ಮತ್ತು ಜೆ.ಸಿ.ಬಿ ಗಳ ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 58/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using