ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-06-2019

By blogger on ಶುಕ್ರವಾರ, ಜೂನ್ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-06-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:-53/2019 ಕಲಂ 379 ಐಪಿಸಿ:- ದಿನಾಂಕ; 28/06/2019 ರಂದು 8-15ಪಿಎಮ್ ಕ್ಕೆ ಪಿರ್ಯಾಧಿ  ಶ್ರೀ ಲಿಂಗರಾಜ ತಂದೆ ಕುಪ್ಪೇರಾಯ ವ;28 ಉ; ಭೂವಿಜ್ಞಾನಿ ಸಾ; ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ಸಲ್ಲಿಸಿದ್ದು ಸದರಿ ದೂರು ಅಜರ್ಿಯ ಸಾರಾಂಸವೆನೆಂದರೆ, ದಿನಾಂಕ; 28/06/2019 ರಂದು ಸಾಯಂಕಾಲ 5-30 ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮ ಇಲಾಖೆಯ ಶ್ರೀ ರಾಜೇಂದ್ರಗೌಡ ತಂದೆ ವೀರಭದ್ರಗೌಡ ಶಾನಬೋಗ ಫ್ರಥಮ ದಜರ್ೆ ಸಹಾಯಕರು ಹಾಗೂ ಜೀಪ ಚಾಲಕ ಬಾಬು  ಅಲಿ ಬಹಾದೂರ ಮೂವರು ಕೂಡಿಕೊಂಡು ನಮ್ಮ ಸರಕಾರಿ ಜೀಪ ನಂಬರ ಕೆಎ.32.ಜಿ.437 ನೇದ್ದರಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿ ಬರುವ  ಡಾನಬೊಸ್ಕೋ ಶಾಲೆಯ ಹ್ತತಿರ ನಿಂತುಕೊಂಡಾಗ ಅದೇ ಸಮಯಕ್ಕೆ ಗುರುಸಣಗಿ ಬ್ಯಾರೆಜ ಕಡೆಯಿಂದ ಯಾದಗಿರಿ ನಗರಕ್ಕೆ ಹೋಗುವ ರಸ್ತೆಯಲ್ಲಿ ಡಾನಬೊಸ್ಕೋ ಶಾಲೆಯ ಹತ್ತಿರ ಟಿಪ್ಪರ ಬರುತ್ತಿರುವುದನ್ನು ಕಂಡು ನಾನು ಕೈ ಮಾಡಿ ನಿಲ್ಲಿಸಲು ಸದರಿ ಟಿಪ್ಪರ ಚಾಲಕನು ತನ್ನ ಟ್ಟಿಪ್ಪರನ್ನು ಸೈಡಿಗೆ ನಿಲ್ಲಿಸಿ ಕೆಳಗಿಳಿದಿದ್ದು ಸದರಿಯವನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು (ಎಮ್.ಡಿ.ಪಿ) ನಮ್ಮ ಮಾಲೀಕನು ತಿಳಿಸಿದಂತೆ ಭಿಮಾ ನದಿಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಹೊರಟಿರುತ್ತೇನೆ ಅಂತಾ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ನಂತರ ಸದರಿ ಟಿಪ್ಪರನ್ನು ಪರಿಶೀಲಿಸಿದ್ದು ಟಾಟಾ ಕಂಪನಿಯ ಟಿಪ್ಪರ ನಂಬರ ಎಮ್.ಹೆಚ್.05 ಡಿಕೆ.3796 ನೇದ್ದು ಇರುತ್ತದೆ. ಸದರಿ ಟಿಪ್ಪರನಲ್ಲಿ ಅಂದಾಜು 12 ಘನ ಮೀಟರ ಮರಳು ಇದ್ದು  ಅದರ ಅಂದಾಜು ಕಿಮ್ಮತ್ತು 9,600/- ರೂ ಆಗಿರುತ್ತದೆ. ಸದರಿ ಟಿಪ್ಪರ ಚಾಲಕನು ಭೀಮಾ ನದಿಯ ತೀರದಿಂದ ನೈಸಗರ್ಿಕ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಮತ್ತು ಸಂಭಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ ಪಡೆದುಕೊಳ್ಳದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಮರಳನ್ನು ಸಾಗಣೆ ಮಾಡುತ್ತಿದ್ದದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಬೇರೆ ಚಾಲಕನ ಸಹಾಯದಿಂದ ಠಾಣೆಗೆ ತಂದಿದ್ದು ಇರುತ್ತದೆ.  ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕರು ಇಬ್ಬರು ಕೂಡಿ ಸರಕಾರಕ್ಕೆ  ಯಾವುದೇ ರಾಜಧನ ತುಂಬದೇ ಮತ್ತು ಸಂಭಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ  ಒಟ್ಟು 9,600/- ರೂ ಕಿಮ್ಮತ್ತಿನ ಅಂದಾಜು 12 ಘನ ಮೀಟರ ಮರಳನ್ನು ಕಳ್ಳತನದಿಂದ ಸಾಗಣೆ ಮಾಡುತ್ತಿದ್ದು ಚಾಲಕ ಮತ್ತು ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತಾ ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ಸಲ್ಲಿಸಿದ ದೂರು ಅಜರ್ಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ. 53/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
   
ಗುರುಮಠಕಲ್ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 114/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ:-ದಿನಾಂಕ 28.06.2019 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿ ಮತ್ತು ಆಕೆಯ ಗಂಡ ತನ್ನ ಹೊಲದಲ್ಲಿ ತೊಗರಿ ಬಿತ್ತುವ ಕೆಲಸ ಮಾಡುತ್ತಿದ್ದಾಗ ಹೊಲದ ಡೋಣ ಹೊಡೆದ ವಿಷಯಕ್ಕೆ ಸಂಬಂಧವಾಗಿ ಆರೋಪಿತರು ಬಂದು ಫಿರ್ಯಾದಿ ಹಾಗೂ ಆಕೆಯ ಗಂಡನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಕೊಡಲಿಯಿಂದ ಹೊಡೆದು ಸಾಧಾ ಸ್ವರೂಪದ ಗಾಯಗೊಳಿಸಿದ್ದು ಅಲ್ಲದೇ ಫಿರ್ಯಾದಿದಾರಳಿಗೆ ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು  ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿದಾರಳು ನೀಡಿದ ಬಾಯಿ ಮಾತಿನ ಹೇಳೀಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 114/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  
                                                                                                                           
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 115/2019 ಕಲಂ: 341, 323, 504, 506 ಸಂಗಡ 34 ಐಪಿಸಿ:-ದಿನಾಂಕ 27.06.2019 ರಂದು ಫಿರ್ಯಾದಿ ತನ್ನ ಹೊಲದಲ್ಲಿ ಟ್ರ್ಯಾಕ್ಟರನಿಂದ ತೊಗರಿ ಬಿತ್ತಿದ್ದು ಆಗ ಆರೋಪಿ ಮತ್ತು ಫಿರ್ಯಾದಿದಾರರ ಹೊಲಗಳ ನಡುವೆ ಇರುವ ಡೋಣಕ್ಕೆ ಟೈಯರನಿಂದ ಸ್ವಲ್ಪ ಕೆಟ್ಟಂತೆ ಆಗಿದ್ದರಿಂದ ಆರೋಪಿತರು ಇಂದು ದಿನಾಂಕ 28.06.2019 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿ ಮತ್ತು ಆತನ ಮಗನಿಗೆ ಅವಾಚ್ಯವಾಗಿ ಬೈದಿದ್ದು ಅದಕ್ಕೆ ಫಿರ್ಯಾದಿಯು ಅದನ್ನು ಸರಿಪಡಿಸಿಕೊಡುವುದಾಗಿ ಹೇಳಿದಕ್ಕೆ ಆರೋಪಿತರು ಫಿರ್ಯಾದಿ ಮತ್ತು ಆತನ ಮಗನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 115/2019 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  

 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 161/2019 ಕಲಂ  323 504 363 ಸಂ 34 ಐ.ಪಿ.ಸಿ:- ದಿನಾಂಕ 28/06/2019 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಶ್ರೀ ಬಸವರಾಜ ತಂದೆ ವಿಠ್ಠಲ ದಿವಟೆ ವಯ 46 ಸಾಃ ಎಕ್ಸೀಸ್ ಬ್ಯಾಂಕ್ ಹತ್ತಿರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ,  ಫಿರ್ಯಾದಿಯ ಮಗನಾದ ಪವನಕುಮಾರ ಈತನು ಶಹಾಪೂರ ಡಿ.ಡಿ.ಯು ಕಾಲೇಜಿನಲ್ಲಿ ಪಿ.ಯು.ಸಿ ದ್ವೀತಿಯ ವರ್ಷದ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಕೆಲವು ದಿನಗಳಹಿಂದೆ ಕಾಲೇಜಿನ್ ದಯಾನಂದ ಶಿಕ್ಷಕರು ತನ್ನ ಮಗನಿಗೆ ಅನಾವಶ್ಯಕವಾಗಿ ವಿದ್ಯಾಥರ್ಿಗಳ ಸಮ್ಮುಖದಲ್ಲಿ  ಪವನಕುಮಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ಮಾಡಿ ವಿದ್ಯಾಥರ್ಿಗಳ ಸಮ್ಮುಖದಲ್ಲಿ ಕ್ಷಮಾಪಣೆ ಯಾಚಿಸುವಂತೆ ಕೇಳಿ ತರಗತಿಯಿಂದ ಹೊರಗೆ ಹಾಕಿರುತ್ತಾರೆ, ಅಲ್ಲದೆ ಅಂದಾಜು 10 ದಿನಗಳ ಹಿಂದೆಯು ಇದೆ ರೀತಿ ಹಲ್ಲೆ ಮಾಡಿದ್ದರಿಂದ ಫಿರ್ಯಾದಿಯವರು ಕಾಲೇಜಿಗೆ ಹೋಗಿ ಪ್ರೀನ್ಸಿಪಲ್ ರವರಿಗೆ ಭೇಟಿಯಾಗಿ ವಿಚಾರಿಸಿದಾಗ ಇನ್ನೊಮ್ಮೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೆವೆ ಅಂತ ಹೇಳಿದ್ದರಿಂದ ಫಿರ್ಯಾಧಿಯವರು ಸುಮ್ಮನೆ ಇದ್ದರು. ದಿನಾಂಕ 25/06/2019 ರಂದು ಮುಂಜಾನೆ  08-00 ಗಂಟೆಗೆ ತಮ್ಮ ಮಗ ಪವನಕುಮಾರ ಇವನು ಎಂದಿನಂತೆ ಮನೆಯಿಂದ ಡಿ.ಡಿ.ಯು ಕಾಲೇಜಿಗೆ ಹೋದವನು ಸಾಯಂಕಾಲ ಮರಳಿ ಮನೆಗೆ ಬಂದಿರುವುದಿಲ್ಲ. ಕಾಲೇಜಿಗೆ  ಹೋಗಿ ವಿಚಾರಿಸಿದಾಗ ಪವನಕುಮಾರನು ಬೆಳಿಗ್ಗೆ ಕಾಲೇಜಿಗೆ ಬಂದು ಸ್ವಲ್ಪ ಸಮಯದ ನಂತರ ತನಗೆ ಹೊಟ್ಟೆ ಬೆನೆಯಾಗುತ್ತಿದೆ ಅಂತ ಹೇಳಿ ಒಂದು ದಿನ ರಜೆ ಬರೆದು ಮುಂಜಾನೆ 10-30 ಗಂಟೆಯ ಸುಮಾರಿಗೆೆ ಹೋಗಿದ್ದು ಈ ಬಗ್ಗೆ ಫಿಯರ್ಾದಿಯವರು ತಮ್ಮ ಸಂಬಂಧಿಕರಲ್ಲಿ ವಿಚಾರಣೆ ಮಾಡಿದ್ದು ತಮ್ಮ ಮಗ ಪತ್ತೆಯಾಗಿರುವುದಿಲ್ಲ. ದಯಾನಂದ ಶಿಕ್ಷಕರು ತನ್ನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದರಿಂದ ಮನನೊಂದು ಮನೆಗೆ ಬಾರದೆ ಎಲ್ಲಿಗೆ ಹೋಗಿರುತ್ತಾನೆ ಅಥವಾ ಯಾರಾದು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿರಬಹದು ಸದರಿ ತನ್ನ ಮಗ ಮನೆಗೆ ಬಾರದಕ್ಕೆ ಡಿ.ಡಿ.ಯು ಕಾಲೇಜಿನ್ ಆಡಳಿತ ಮಂಡಳಿ ಮತ್ತು  ಪ್ರೀನ್ಸಿಪಲ್ ಹಾಗೂ ದಯಾನಂದ ಶಿಕ್ಷಕರು ಇವರ ಮೇಲೆ ಸಂಶಯವಿದ್ದು.  ಬಗ್ಗೆ ಕ್ರಮ ಕೈಕೊಂಡು ಅಪಹರಣವಾದ ತನ್ನ ಮಗನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 161/2019 ಕಲಂ 323 504 363 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 163/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 28/06/2019 ರಂದು 2.30 ಪಿಎಂ ಕ್ಕೆ ಶ್ರೀ ನಾಗರಾಜ ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಸಗರ(ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಅಮರೇಶ ತಂದೆ ಹಣಮಂತ ಹೊಸಳ್ಳಿ @ ಯಕ್ಷಿಂತಿ ವ|| 42ವರ್ಷ ಜಾ|| ಬೇಡರ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಚಾಲಕ ಸಾ|| ಸಗರ(ಬಿ) ತಾ|| ಶಹಾಪೂರ ಈತನಿಂದ ನಗದು ಹಣ 670/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 28/06/2019 ರಂದು 2.30 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 3.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 163/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                                                                                  
  
ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ 78[3] ಕೆಪಿ ಯ್ಯಾಕ್ಟ:- ದಿನಾಂಕ 28/06/2019 ರಂದು 5.30 ಪಿಎಮ್ ಕ್ಕೆ  ಹೋತಪೇಟ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ   ಮಲ್ಲಣ್ಣ ತಂದೆ ಬಸಣ್ಣ ಗೌಡಗೇರಿ ವ:45, ಜಾ:ಲಿಂಗಾಯತ, ಉ:ಹೋಟಲಕೆಲಸ ಸಾ:ಹೋತಪೇಟ  ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಂಡು ಮಲ್ಲಪ್ಪ ತಂದೆ ನಾಗಪ್ಪ ಸಾ:ಹುಲಕಲ್ ಈತನಿಗೆ ಕೊಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1620=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5-40 ಪಿಎಮ್ ದಿಂದ 6-40 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 7 ಪಿಎಮ್ ಕ್ಕೆ ಠಾಣೆಗೆ ತಂದು 7-15 ಪಿಎಮ್ ಕ್ಕೆ ವರದಿ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7-45 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 86/2019 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 162/2019  ಕಲಂ ಮಹಿಳೆ ಮತ್ತು ಮಕ್ಕಳು ಕ್ಫಣೆ:- ದಿನಾಂಕ 28/06/2019 ರಂದು 2.30 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಸುಶಿಲಾಬಾಯಿ ಗಂ. ರತ್ನು ಚವ್ಹಾಣ ವ|| 55 ವರ್ಷ ಜಾ|| ಲಂಬಾಣಿ ಉ|| ಮನೆಕೆಲಸ ಸಾ|| ಕಲ್ಲೂರ ತಾಂಡಾ ತಾ|| ಅಪಜಲಪೂರ ಜಿ|| ಕಲಬುಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ  ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 27/06/2019 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ನನ್ನ ಮಗ ಮಹೇಶ ಈತನು ರಾಯಚೂರದಲ್ಲಿ ಮೀಟಿಂಗ ಇದ್ದ ಕಾರಣ ಹೋದನು, ನಾನು ನನ್ನ ಸೊಸೆ ಅಶ್ವಿನಿ ಮತ್ತು ನನ್ನ ಮೊಮ್ಮಕ್ಕಳನ್ನು ವಿದ್ಯಾರಣ್ಯ ಶಾಲೆಗೆ ಕಳುಹಿಸಿ ಮನೆಯಲ್ಲೆ ಇದ್ದೇವು ನಂತರ ನನ್ನ ಸೊಸೆ 12.05 ಪಿ ಎಮ್ ಸುಮಾರಿಗೆ ನನ್ನ ಮೊಮ್ಮಕ್ಕಳಿಗೆ ಊಟಮಾಡಿಸಿ ಬರುತ್ತೇನೆ ಎಂದು ಹೇಳಿ ವಿದ್ಯಾರಣ್ಯ ಶಾಲೆಗೆ ಹೋದಳು ನಾನು ಒಬ್ಬಳೇ ಮನೆಯಲ್ಲಿ ನನ್ನ ಸೊಸೆ ಮತ್ತು ಮೊಮ್ಮಕ್ಕಳು ಬತುರ್ತಾರೆ ಎಂದು ಅವರ ಬರುವ ದಾರಿ ನೋಡುತ್ತಾ ಕುಳಿತಿದ್ದೆ ನಂತರ ನನ್ನ ಮಗ ಮಹೇಶ ಈತನು 5 ಗಂಟೆಗೆ ಮನೆಗೆ ಬಂದು ನನ್ನ ಹೆಂಡತಿ ಅಶ್ವಿನಿ ಮಕ್ಕಳು ಎಲ್ಲಿದ್ದಾರೆ ಎಂದು ವಿಚಾರಿಸಿದನು ಮದ್ಹಾನ ಮಕ್ಕಳಿಗೆ ಊಟ ಮಾಡಿಸಿ ಬರುತ್ತೇನೆ ಎಂದು ಹೋದವ ಇನ್ನು ಮನೆಗೆ ಬಂದಿಲ್ಲ ಎಂದು ತಿಳಿಸಿದೇನು ನಂತರ ನನ್ನ ಮಗ ತನ್ನ ಸೈಕಲ್ ಮೋಟರ ತೆಗೆದುಕೊಂಡು ಶಾಲೆ ಕಡೆಗೆ ಹೋಗುತ್ತಿರುವಾಗ ಶ್ರವಣ ಕುಮಾರ ಈತನು ಅಳುತ್ತಾ ಮನೆಯ ಕಡೆಗೆ ಬರುತ್ತಿರುವದನ್ನು ನೋಡಿ ಅವನನ್ನು ಸೈಕಲ್ ಮೋಟರ ಮೇಲೆ ಕೂಡಿಸಿಕೊಂಡು ಶಾಲೆ ಕಡೆಗೆ ಹೋಗಿ ಶಾಲೆಯಲ್ಲಿ ವಿಚಾರಿಸಲಾಗಿ ಮದ್ಹಾನ 12.30 ಗಂಟೆ ಸುಮಾರಿಗೆ ಮಕ್ಕಳಿಗೆ ಊಟ ಮಾಡಿಸಿ ತನ್ನ ಕಿರಿಯ ಮಗ ಸೋಹನ ಅಳುತ್ತಿದೆ ಆದ್ದರಿಂದ  ಅವನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದಳು ಅಂತ ತಿಳಿಸಿದನು ನಂತರ ನನ್ನ ಮಗ ಮನೆಗೆ ಬಂದು ವಿಷಯ ತಿಳಿಸಿ ಶ್ರವಣನನ್ನು ಮನೆಯಲ್ಲೆ ಬಿಟ್ಟು ಶಹಾಪೂರ ನಗರದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾನ, ಬಿ ಗುಡಿ ಎಲ್ಲಾ ಕಡೆ ಹುಡುಕಾಡಿ ಎಲ್ಲಿ ಇಲ್ಲ ಅಂತ ಮನೆಗೆ ಬಂದನು ನಂತರ ನಾವು ನಮ್ಮ ಊರಿಗೆ ಮತ್ತು ಸಂಬಂದಿಕರು ಇರುವ ಊರುಗಳಿಗೆ ಪೋನ ಮಾಡಿ ವಿಚಾರಿಸಲಾಗಿ ಬಂದಿರುವದಿಲ್ಲ ಎಲ್ಲಾಕಡೆ ಹುಡುಕಾಡಿ ತಡವಾಗಿ ಇಂದು ಠಾಣೆಗೆ ಬಂದಿದ್ದು ಇರುತ್ತದೆ. ಕಾಣೆಯಾದ ನನ್ನ ಅಶ್ವಿನಿ ಗಂ. ಮಹೇಶ ಚವ್ಹಾಣ ವ|| 26 ವರ್ಷ ಜಾ|| ಲಂಬಾಣಿ ಉ|| ಮನೆಕೆಲಸ ಹಾಗೂ  ಮೊಮ್ಮಗ ಸೋಹನ ಕುಮಾರ ತಂ. ಮಹೇಶ ಚವ್ಹಾಣ ವ|| 4 ವರ್ಷ ಸಾ|| ಕಲ್ಲೂರ ತಾಂಡಾ ತಾ|| ಅಪಜಲಪೂರ ಜಿ|| ಕಲಬುಗರ್ಿ ಹಾ|| ವ|| ಎಸ್ ಬಿ ನಗರ ಶಹಾಪೂರ ತಾ|| ಶಹಾಪೂರ ಜಿ|| ಯಾದಗಿರ ಇವರು ಶಹಾಪೂರದ ವಿದ್ಯಾರಣ್ಯ ಶಾಲೆಯಿಂದ ಮನೆಗೆ ಬರದೆ ಕಾಣೆಯಾಗಿದ್ದು ಇರುತ್ತದೆ ಕಾಣೆಯಾದ ಇವರನ್ನು ಪತ್ತೆ ಮಾಡಿಕೊಡಲು ವಿನಂತಿ.       


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!