ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-06-2019

By blogger on ಗುರುವಾರ, ಜೂನ್ 27, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-06-2019 

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 84/2019 ಕಲಂ 279,337,338, 304(ಎ) ಐ.ಪಿ.ಸಿ:- ದಿನಾಂಕ 26/06/2019 ರಂದು 7-40 ಪಿಎಮ್ ಸುಮಾರಿಗೆ ಮೃತ ಮಂಜುನಾಥ ಈತನು ತನ್ನ ಪಲ್ಸರ್ ಮೋ/ಸೈ ನಂ ಕೆಎ:33, ಯು:1489 ನೇದ್ದರ ಮೇಲೆ ಭೀ.ಗುಡಿ ಬಾಪುಗೌಡ ಚೌಕಿನ ಕಡೆಯಿಂದ ಬರುತ್ತ ಭೀ.ಗುಡಿ ಹೆಲ್ತ ಕ್ವಾಟ್ರಸ ಹತ್ತಿರ ರೋಡ ಕ್ರಾಸ ಮಾಡುತ್ತಿದ್ದಾಗ ಹಿಂದಿನಿಂದ ಒಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋ/ಟೈ ಚೆಸ್ಸಿ ನಂ: ಎಮ್ಬಿಎಲ್ಹೆಚ್ಎಡಬ್ಲು083ಕೆಹೆಚ್ಸಿ03111 ನೇದ್ದರ ಚಾಲಕ ಭೀಮಾಶಂಕರ ತಂದೆ ಮಲ್ಲಪ್ಪ ಸಾ:ಹುಲಕಲ್ ಈತನು ತನ್ನ ಮೋಟರ್ ಸೈಕಲನ ಹಿಂದೆ ಪರಶುರಾಮ ಈತನಿಗೆ ಕೂಡಿಸಿಕೊಂಡು ಮೋ/ಸೈ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ರೋಡ್ ಕ್ರಾಸ ಮಾಡುತ್ತಿದ್ದ ಮಂಜುನಾಥ ಈತನ ಮೋಟರ್ ಸೈಕಲ್ಲಿಗೆ ಡಿಕ್ಕಿಪಡಿಸಿದ್ದರಿಂದ ಮಂಜುನಾಥ ಈತನಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೂಗು ಹಾಗು ಬಾಯಿಯಿಂದ ರಕ್ತಸ್ರಾವವಾಗಿದ್ದು, ಅದರಂತೆ ಆರೋಪಿತನಿಗೆ ಎಡಗಿವಿಗೆ ರಕ್ತಗಾಯ ಹಾಗು ಪರಶುರಾಮ ಈತನಿಗೆ ತರಚಿದ ಗಾಯಗಳಾಗಿದ್ದು, ಗಾಯಾಳು ಮಂಜುನಾಥ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಒಯ್ದಾಗ 10 ಪಿಎಮ್ ಸುಮಾರಿಗೆ ಮೃತಪಟ್ಟಿದ್ದು, ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:84/2019 ಕಲಂ 279, 337, 338, 304(ಎ) ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.   
   
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 103/2019 ಕಲಂ: 143, 147, 323, 354, 504, 506 ಸಂ/ 149 ಐ.ಪಿ.ಸಿ :- ದಿನಾಂಕ 27-06-2019 ರಂದು 5 ಪಿ.ಎಮ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ಸಣ್ಣ ಯಂಕಪ್ಪಾ ಪೂಜಾರಿ ವಯಾ:50 ಜಾ: ಉಪ್ಪಾರ ಉ: ಕೂಲಿ ಸಾ: ಶೇಟ್ಟಿಗೇರಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡದ್ದೆನೆಂದರೆ ನಮಗೆ ಮೂವರು ಗಂಡು ಮಕ್ಕಳಿದ್ದು ಎಲ್ಲರೂ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಾರೆ. ನನ್ನ ಗಂಡನಿಗೆ ಸುಮಾರು 5-6 ವರ್ಷಗಳಿಂದ ಮೈಯಲ್ಲಿ ಹುಷಾರಿಲ್ಲದ ಕಾರಣ ಮೂರು ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನ್ನ ಗಂಡನಿಗೆ ಹುಷಾರಿಲ್ಲದ ಸಮಯದಲ್ಲಿ ಅವರಿಗೆ ಬೆಂಗಳೂರು ಹಾಗೂ ಇತರೇ ಕಡೆಗಳಲ್ಲಿ ತೋರಿಸಿದಾಗ ಅವರ ದವಾಖಾನೆಗೆ ಸುಮಾರು ಹಣ ಖಚರ್ು ಆಗಿದ್ದು ಸಾಲ ಮಾಡಿಕೊಂಡಿರುತ್ತೆವೆ. ನಮ್ಮ ಪಿತ್ರಾಜರ್ಿತ ಆಸ್ತಿ 3 ಎಕರೆ 8 ಗುಂಟೆ ಹೋಲವನ್ನು ನಮ್ಮ ಅಣ್ಣತಮಕಿಯವರಾದ ಭೀಮರೆಡ್ಡಿ ತಂದೆ ಸೋಮಣ್ಣಾ ಹುಚ್ಚೇರ ಇವರಿಗೆ ಮಾರಾಟ ಮಾಡಿ ಕೇವಲ ಅಂಗ್ರಮೇಂಟ ಮಾಡಿ ಅವರಿಂದ ಸ್ವಲ್ಪ ಹಣ ಪಡೆದು ನಮ್ಮ ಅಲ್ಪ ಸ್ವಲ್ಪ ಸಾಲವನ್ನು ತೀರಿಸಿಕೊಂಡಿರುತ್ತವೆ. ಇನ್ನೂ ಸಾಲ ತೀರಿಸುವುದು ಬಾಕಿ ಇತ್ತು. ನಮ್ಮ ಎರಡನೇ ಅಣತಮಕಿಯವರಾದ 1) ಯಂಕಪ್ಪಾ ತಂದೆ ತಿಪ್ಪಣ್ಣಾ ಹುಚ್ಚೇರ 2) ರಾಘಪ್ಪಾ ತಂದೆ ಗೀರೆಪ್ಪಾ ಹುಚ್ಚೇರ  3) ಸೀನಪ್ಪಾ ತಂದೆ ಗಿರೇಪ್ಪಾ ಹುಚ್ಚೇರ 4) ಗಿರೇಪ್ಪಾ ತಂದೆ ತಿಪ್ಪಣ್ಣಾ ಹುಚ್ಚೇರ 5) ತಿಪ್ಪಣ್ಣಾ ತಂದೆ  ಯಂಕಪ್ಪಾ ಹುಚ್ಚೇರ 6) ಶರಣಪ್ಪಾ  ತಂದೆ ಯಂಕಪ್ಪಾ ಹುಚ್ಚೇರ ಈ 6 ಜನರು ಸುಮಾರು ದಿವಸಗಳಂದ ನನ್ನ ಜೋತೆಯಲ್ಲಿ ಜಗಳಾ ಮಾಡುತ್ತಾ ರಜಿಷ್ಠೇಷನ ಮಾಡಿಕೊಡಲು ತೊಂದರೆ ಮಾಡುತ್ತಿದ್ದಾರೆ. ನಿನ್ನೆ ದಿನಾಂಕ 26-06-2019 ರಂದು ಸಾಯಂಕಾಲ  5-30 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಕ್ಕಳಾದ ಯಂಕಪ್ಪಾ ಮತ್ತು ಹಳ್ಳೆಪ್ಪಾ ಮೂವರು ಕೂಡಿ ಮೇಲ್ಕಂಡವರ ನಾವು ಅವರಿಗೆ ನಮಗೆ ಇನ್ನೂ ಸಾಲ ಬಹಳವಿದೆ ಸಾಲಗಾರರು ಮನೆಯ ತನಕ ಬಂದು ಹೋಗುತ್ತಿದ್ದಾರೆ ನೀವು ಕೋಟರ್ಿನಿಂದ ತಡೆಯಾಜ್ಞೇ ವಾಪಾಸ ಪಡೆದುಕೊಳ್ಳಿರಿ ವಿನಾಕಾರಣ ನಮಗೆ ಏಕೆ ತೊಂದರೆ ಕೊಡುತ್ತಿದ್ದಿರಿ ಅಂತಾ ಕೇಳಿದಾಗ ಒಮ್ಮಲೇ ಅವರೆಲ್ಲರೂ ನಮಗೆ ಭೋಸಡಿ ಮಕ್ಕಳೆ ನಮಗೇನು ಹೇಳುತ್ತಿರಿ ಕೋಟರ್ಿಗೆ ಹೋಗಿ ಹೇಳಿರಿ ಅಂತಾ ಬೈಯ್ಯುತ್ತಾ ಕೈಯಿಂದ ಹೊಡಬಡೆ ಮಾಡಿ ಜೀವದ ಬೆದರಿಕೆ ಹಾಕಿ ನನಗೆ ಕೈ ಹಿಡಿದು ಎಳೆದಾಡಿ ಅಪಮಾನ ಮಾಡಿ ಮಾನಭಂಗ ಮಾಡಲು ಪ್ರಯತನ್ ಪಟ್ಟಿರುತ್ತಾರೆ. ಆದ್ದರಿಂದ ಮೇಲ್ಕಂಡ 6 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ದೂರಿನ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 102/2019 ಕಲಂ 143, 147 323, 354, 504. 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕ್ಯಗೊಂಡೆನು.
                                                                                                                           
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 141/2019 ಕಲಂ.143,147,148,323,324,504,506 ಸಂ.149 ಐಪಿಸಿ:-ದಿನಾಂಕ:27-06-2019 ರಂದು 5 ಪಿ.ಎಂ. ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶಿವಪ್ಪ ತಂದೆ ಕೋತಲಪ್ಪ ಹಾವಿನ್ ವಯಸ್ಸು:60 ವರ್ಷ ಉದ್ಯೋಗ:ಒಕ್ಕಲುತನ ಸಾ|| ಬಾದ್ಯಾಪುರ ಇವರು ಠಾಣೆಗೆ ಬಂದು ದಿನಾಂಕ: 25-06-2019 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಮ್ಮೂರ ಸಂಗೋಳ್ಳಿ ರಾಯಣ್ಣ ಕಟ್ಟೆ ಹತ್ತಿರ ನಾನು ನನ್ನ ಮಗ ಬಲಬೀಮ ಹಾಗೂ ಗ್ರಾಮದ ನಿಂಗಯ್ಯಾ ತಂದೆ ಮಲಪ್ಪ ಶಹಾಪೂರ ಮೂವರು ಮಾತಾಡುತ್ತಾ ನಿಂತಿರುವಾಗ  ನಮ್ಮೂರ ಹರಿಜನ ಹುಡುಗರಾದ 1) ದೇವಿಂದ್ರಪ್ಪ ತಂದೆ ಹರಿಶ್ಚಂದ್ರಪ್ಪ ಬಡಿಗೇರ ವಯಸ್ಸು:55 ವರ್ಷ 2) ಹರಿಶ್ಚಂದ್ರಪ್ಪ ತಂದೆ ದೇವಿಂದ್ರಪ್ಪ ಬಡಿಗೇರ ವಯಸ್ಸು:21 ವರ್ಷ 3) ಭೀಮಪ್ಪ ತಂದೆ ದೇವಿಂದ್ರಪ್ಪ ಬಡಿಗೇರ ವಯಸ್ಸು:30 ವರ್ಷ 4) ಹಣಮಂತ್ರಾಯ ಹೆಗ್ಗಿನದೊಡ್ಡಿ ವಯಸ್ಸು: 30 ವರ್ಷ 5) ಬಾಲಪ್ಪ ತಂದೆ ಹೊನ್ನಪ್ಪ ಗುಂಡಗುತರ್ಿ ವಯಸ್ಸು: 22 ವರ್ಷ 6) ರಾಜು ತಂದೆ ದೇವಿಂದ್ರಪ್ಪ ಬಡಿಗೇರ ವಯಸ್ಸು: 19 ವರ್ಷ 7) ಹಣಮಂತ್ರಾಯ ತಂದೆ ದ್ಯಾವಪ್ಪ ಬಡಿಗೇರ ವಯಸ್ಸು: 19 ವರ್ಷ 8) ಮಲ್ಲಪ್ಪ ತಂದೆ ಬೀಮಪ್ಪ ಬಡಿಗೇರ (ಚೆಕ್ಯಾ) ವಯಸ್ಸು: 50 ವರ್ಷ 9) ಭೀಮಪ್ಪ ತಂದೆ ಮಲ್ಲಪ್ಪ ಬಡಿಗೇರ ವಯಸ್ಸು: 45 ವರ್ಷ ಇವರೆಲ್ಲರೂ ಜೊತೆಗೂಡಿ ಬಂದವರೆ ಎಲೇ ಕುರುಬ ಸುಳೆ ಮಕ್ಕಳೆ ನೀವು ಬಸ್ಸು ಹತ್ತುವಾಗ ನಮ್ಮ ಹುಡುಗರೊಂದಿಗೆ ತಕರಾರು ಮಾಡಿರುತ್ತಿರಿ ಇವತ್ತು ಒಂದು ಕೈ ನೋಡೆ ಬಿಡುತ್ತೆವೆ ಅಂತಾ ಅವಾಚ್ಯವಾಗಿ ಬೈದವರೆ ನನ್ನ ಮಗನಾದ ಬಲಬೀಮ ಈತನನ್ನು  ತೆಕ್ಕೆಯಲ್ಲಿ ಹಿಡಿದುಕೊಂಡು ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದೆಯಲು ಪ್ರಾರಂಬಿಸಿದವರೆ ಅವರಲ್ಲಿಯ ದೇವಿಂದಪ್ಪ ತಂದೆ ಹರಿಶ್ಚಂದ್ರ ಈತನು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಒಂದು  ಬಡಿಗೆಯಿಂದ ನನ್ನ ಮಗ ಬಲಬೀಮನ  ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ಬಿಡಿಸಲು ಬಂದ ನಿಂಗಯ್ಯಾ ಶಹಾಪೂರ ಈತನಿಗೂ ಕೂಡಾ  ಉಳಿದವರೆಲ್ಲರೂ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ಬಲಬೀಮ ಹಾಗೂ ನಿಂಗಯ್ಯಾ ಇಬ್ಬರಿಗೂ ಕಾಲಿನಿಂದ ಒದೆಯುತ್ತಿರುವಾಗ ಅಲ್ಲೆ ಇದ್ದ ನಾನು ಗ್ರಾಮದ ಮಾರ್ಥಂಡಪ್ಪ ತಂದೆ ಹಣಮಂತ್ರಾಯ ಮಗ್ಗದ, ಮಲ್ಲಪ್ಪ ತಂದೆ ಹೊನ್ನಪ್ಪ ಶಹಾಪೂರ, ನಿಂಗಪ್ಪ ತಂದೆ ಶಿವಪ್ಪ ಕವಲ್ದಾರ ಇವರು ಜಗಳವನ್ನು ನೋಡಿ ಬಡಿಸಿಕೊಂಡರು ಆಗ ಅವರು ಇವತ್ತು ಉಳದಿರಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಹೊಡೆಯದೆ ಬಿಡುವದಿಲ್ಲ ಇವತ್ತು ನಿಮ್ಮ ಜೀವ ನಮ್ಮ ಕೈಯಲ್ಲಿತ್ತು ತಪ್ಪಿಸಿಕೊಂಡಿರಿ ಮುಂದೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ ಎಂದವರೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊರಟು ಹೊಗಿದ್ದು ಇರುತ್ತದೆ. ನಾನು ಮನೆಯಲ್ಲಿಯ ನನ್ನ ಮಗನಾದ ಬಲಬೀಮ ಇವರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಆದ್ದರಿಂದ ದಯಾಳುಗಳಾದ ತಾವುಗಳು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ ಅಂತಾ  ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 27/06/2019 ರಂದು ಆರೋಪಿತರೆಲ್ಲರೂ ಕೂಡಿ ಸಲಾದಪೂರ ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5 ಪಿ.ಎಮ್ ಕ್ಕೆ ದಾಳಿ ಮಾಡಿ 05 ಜನ ಆರೋಪಿತರು ಸಿಕ್ಕಿದ್ದು ಸದರಿ ಆರೋಪಿತರಿಂದ ನಗದು ಹಣ 1820/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 6.45 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 85/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!