ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-06-2019

By blogger on ಬುಧವಾರ, ಜೂನ್ 26, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-06-2019 

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 70/2019 ಕಲಂ498(ಎ),323.504.506. ಸಂ 34 ಐಪಿಸಿ:- ದಿನಾಂಕ:26.06.2019 ರಂದು 3 ಗಂಟೆಗೆ ಫಿಯರ್ಾದಿ ಶ್ರೀಮತಿ ಬಸಮ್ಮ ಗಂಡ ಸಿದ್ದಣ್ಣ ಶೆಟ್ಟಿ ವಯಾ|| 32 ವರ್ಷ ಜಾ|| ಲಿಂಗಾಯತ, ಉ|| ಹೊಲ-ಮನೆಕೆಲಸ, ಸಾ|| ಆನೂರು(ಬಿ) ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿಯರ್ಾದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:26.06.2019 ರಂದು ಮದ್ಯಾಹ್ನ 3 ಗಂಟೆಗೆ ಫಿಯರ್ಾದಿ ಶ್ರೀಮತಿ ಬಸಮ್ಮ ಗಂಡ ಸಿದ್ದಣ್ಣ ಶೆಟ್ಟಿ ವಯಾ|| 32 ವರ್ಷ ಜಾ|| ಲಿಂಗಾಯತ, ಉ|| ಹೊಲ-ಮನೆಕೆಲಸ, ಸಾ|| ಆನೂರು(ಬಿ) ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿಯರ್ಾದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ ಹೆಸರು ಮತ್ತು ವಿಳಾಸದವಳಿದ್ದು, ಹೊಲ-ಮನೆಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ನನ್ನ ತವರೂರು ಶಹಾಪುರ ತಾಲೂಕಿನ ಸಗರ (ಬಿ) ಗ್ರಾಮವಿದ್ದು,  ನನ್ನ ತಂದೆ-ತಾಯಿಗೆ ನಾವು 5 ಜನರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇರುತ್ತೇವೆ. ನಾನು 4 ನೇ ಮಗಳಾಗಿದ್ದು, ಈಗ್ಗೆ ಸುಮಾರು 9 ವರ್ಷಗಳ ಹಿಂದೆ ಆನೂರು (ಬಿ) ಗ್ರಾಮದ  ಸಿದ್ದಣ್ಣ ತಂದೆ ಬಸವರಾಜ ಶೆಟ್ಟಿ ಇವರೊಂದಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಮಕ್ಕಳಾಗಿರುವುದಿಲ್ಲ. ಮದುವೆಯಾಗಿ ಗಂಡನ ಮನೆಯಲ್ಲಿ 4-5 ವರ್ಷ ಚೆನ್ನಾಗಿ ಇದ್ದೆ. ನಂತರ ನನಗೆ ಗಂಡ ಸಿದ್ದಣ್ಣ, ಮೈದುನರಾದ ಸತೀಶ ತಂದೆ ಬಸವರಾಜ ಮತ್ತು ಮಲ್ಲಿಕಾಜರ್ುನ ತಂದೆ ಬಸವರಾಜ, ನನ್ನ ಮೈದುನನ ಹೆಂಡತಿಯಾದ ಶಶಿಕಲಾ ಗಂಡ ಸತೀಶ ಇವರುಗಳು ವಿನಾಕಾರಣ ನನಗೆ ಮನೆಗೆಲಸ ಬರುವದಿಲ್ಲಾ. ಹೊಲದ ಕೆಲಸ ಬರುವದಿಲ್ಲಾ. ನಿನಗೆ ಮಕ್ಕಳಾಗುವುದಿಲ್ಲ. ನೀನು ಸರಿಯಾಗಿ ಇಲ್ಲಾ. ಭೊಸುಡಿ ರಂಡಿ ನೀನು ನಿನ್ನ ತವರು ಮನೆಗೆ ಹೋಗು ನಾವು ಮತ್ತೊಂದು ಮದುವೆ ಮಾಡಿಕೊಳ್ಳುತ್ತೇವೆ ಅಂತಾ ಮಾನಸಿಕ ದೈಹಿಕ ಕಿರಕುಳ ನೀಡುತ್ತಾ ಬಂದಿದ್ದು. ನಾನು ತಾಳಿಕೊಂಡು ಬಂದಿರುತ್ತೇನೆ. ಈ ವಿಷಯವನ್ನು ನಾನು ತವರು ಮನೆಗೆ ಹೋದಾಗ ನನ್ನ ತಾಯಿಯಾದ ಶರಣಮ್ಮ, ಅಣ್ಣನಾದ ಮಹಾದೇವಪ್ಪ ಇವರಿಗೆ ತಿಳಿಸಿದ್ದೆ. ಅವರು ನನಗೆ ಸಮಾದಾನ ಮಾಡಿದ್ದು ಇರುತ್ತದೆ. ಆದರು ನಾನು ತಾಳಿಕೊಂಡು ಬಂದಿದ್ದೆ. ಒಂದು ತಿಂಗಳು ತವರು ಮನೆಯಲ್ಲಿ ಒಂದು ತಿಂಗಳು ಗಂಡನ ಮನೆಯಲ್ಲಿ ಕಾಲ ಕಳೆಯುತ್ತಾ ಬಂದಿದ್ದು ಇರುತ್ತದೆ. ಸುಮಾರು ಒಂದು ತಿಂಗಳಿನಿಂದ ನಾನು ನನ್ನ ತವರು ಮನೆಯಲ್ಲಿಯೇ ಇದ್ದು, ನಮ್ಮ ತವರು ಮನೆಯವರು ನಿನ್ನ ಗಂಡನಿಗೆ ಬುದ್ದಿ ಹೇಳಿ ನಿನಗೆ ಬಿಟ್ಟು ಬರುತ್ತೇವೆ ಅಂತಾ ಹೇಳಿದರು. ದಿನಾಂಕ:16-05-2019 ರಂದು ನನ್ನ ತಾಯಿ ಶರಣಮ್ಮ, ನಮ್ಮ ಅಣ್ಣ ಮಹಾದೇವಪ್ಪ, ಮತ್ತು ನಮ್ಮೂರಿನ ಹಿರಿಯರಾದ ಮಲ್ಲಾರೆಡ್ಡಿ ತಂದೆ ಗುರಣ್ಣ ಮಲ್ಲೇದ, ಮಲ್ಕಣ್ಣ ತಂದೆ ಮೇಲಪ್ಪ ಕೂಡ್ಲೂರು ಇವರೊಂದಿಗೆ ಮದ್ಯಾಹ್ನ 12.30 ಗಂಟೆ ಸುಮಾರಿಗೆ ಆನೂರು(ಬಿ) ಗ್ರಾಮದ ನನ್ನ ಗಂಡನ ಮನೆಗೆ ಬಂದು ಮನೆಯ ಮುಂದೆ ನಿಂತಾಗ ನನ್ನ ಗಂಡ ನನಗೆ ಇಷ್ಟು ದಿನ ತವರು ಮನೆಗೆ ಹೋಗಿ ಈಗ ಯಾಕೆ ಬಂದಿದ್ದಿ ಬೋಸಡಿ ರಂಡಿ ನಿನಗೆ ಮಕ್ಕಳಾಗುವುದಿಲ್ಲ. ಹೊಲಮನೆ ಕೆಲಸ ಬರುವದಿಲ್ಲಾ ಅಡುಗೆ ಮಾಡಲು ಸರಿಯಾಗಿ ಬರುವದಿಲ್ಲಾ. ನೀನು ಬಂದ ದಾರಿಗೆ ತವರು ಮನೆಗೆ ಹೋಗು ಅಂತಾ ಅವಾಚ್ಯವಾಗಿ ಬೈದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ನನ್ನ ಮೈದುನರಾದ ಸತೀಶ ಮತ್ತು ಆತನ ಹೆಂಡತಿ ಶಶಿಕಲಾ ಇವರುಗಳು ಬಂದು ಈ ಬಂಜೆ ಭೊಸುಡಿ ರಂಡಿ ನಮ್ಮ ಮನೆಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ ಇವಳಿಗೆ ಮನೆಯಲ್ಲಿ ಸೇರಿಸಿಕೊಳ್ಳಬೇಡಿರಿ ಅಂತಾ ಬೈದರು. ಇನ್ನೊಬ್ಬ ಮೈದುನನಾದ ಮಲ್ಲಿಕಾಜರ್ುನ ಈತನು ನನಗೆ ಭಂಜೆ ಸೂಳೆ ನಿನಗೆ ಮಕ್ಕಳಾಗುವುದಿಲ್ಲ ಅಂತಾ ಬೈದು ನೀನು ಇಲ್ಲಿಯೇ ಇದ್ದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲ ಅಂತಾ ಬೈಯುತ್ತಾ ಎಲ್ಲರೂ ಕೂಡಿ ನನಗೆ ಕೈಯಿಂದ ಕಪಾಳಕ್ಕೆ. ಬೆನ್ನಿಗೆ ಹೊಡೆ-ಬಡೆ ಮಾಡಿ ಮಾಡಿದರು. ಆಗ ಜಗಳವನ್ನು ನನ್ನ ತಾಯಿ ಶರಣಮ್ಮ, ಅಣ್ಣ ಮಹಾದೇವಪ್ಪ, ನಮ್ಮೂರಿನ ಹಿರಿಯರಾದ ಮಲ್ಲಾರೆಡ್ಡಿ ತಂದೆ ಗುರಣ್ಣ ಮಲ್ಲೇದ, ಮಲ್ಕಣ್ಣ ತಂದೆ ಮೇಲಪ್ಪ ಕೂಡ್ಲೂರು ಇವರುಗಳು ಕೂಡಿಕೊಂಡು ಜಗಳ ಬಿಡಿಸಿಕೊಂಡು ಪುನಃ ತವರು ಮನೆಗೆ ಕರೆದುಕೊಂಡು ಹೋದರು. ಜಗಳದ ಸಮಯದಲ್ಲಿ ನನಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಉಪಚಾರ ಕುರಿತು ಯಾವುದೇ ಆಸ್ಪತ್ರೆಗೆ ಹೋಗಿರುವುದಿಲ್ಲ. ನನ್ನ ಸಂಸಾರದ ಬಗ್ಗೆ ಮನೆಯಲ್ಲಿ ಹಿರಿಯರನ್ನು ವಿಚಾರಿಸಿಕೊಂಡು ಇಂದು ಠಾಣೆಗೆ ತಡವಾಗಿ ಬಂದಿದ್ದು, ಕಾರಣ ನನಗೆ ಮಾನಸಿಕ ದೈಹಿಕ ಕಿರಕುಳ ನೀಡಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿ ಗಣಕೀಕರಣ ಮಾಡಿಸಿದ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:70/2019 ಕಲಂ 498(ಎ), 323,504,506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
  
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 112/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ:-ದಿನಾಂಕ 26.06.2019 ರಂದು ಮಧ್ಯಾಹ್ನ 2:00 ಗಂಟೆಗೆ ಫಿರ್ಯಾದಿದಾರಳು ಕೂಲಿ ಆಳುಗಳನ್ನು ಕರೆದುಕೊಂಡು ತನ್ನ ಹೊಲದ ಸವರ್ೇ ನಂ: 200 ನೇದ್ದರಲ್ಲಿ ಬಿತ್ತುವ ಸಲುವಾಗಿ ಹೊಲವನ್ನು ಹಸನು ಮಾಡಲು ಹೋಗಿದ್ದು ಆಗ ಆರೋಪಿತರು ಅಲ್ಲಿಗೆ ಹೋಗಿ ಅವರು ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು ಆಗ ಫಿರ್ಯಾಧಿದಾರಳು ತನ್ನ ಮಗನಾದ ಗಾಯಾಳುವನ್ನು ಫೋನ್ ಮಾಡಿ ಕರೆದಿದ್ದು ನಂತರ ಮಾತಿಗೆ ಮಾತು ಬೆಳೆದಿದ್ದು ಆಗ ಆರೋಪಿತರು ಗಾಯಾಳುವಿಗೆ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ  ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
                                                                                                                          
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 160/2019.ಕಲಂ 323 324 504 506 ಸಂ 34 ಐ.ಪಿ.ಸಿ.:- ದಿನಾಂಕ 26/06/2019 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ಶಿವಶಂಕರ ತಂದೆ ಬಸವಂತ್ರಾಯ ಆಂದೇಲಿ ವ|| 39 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕೊರವಾರ ತಾ|| ಸಿಂದಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ 24/06/2019 ರಂದು ಶಹಾಪೂರದಲ್ಲಿರುವ ನಮ್ಮ ವಕೀಲರಿಗೆ ಭೇಟಿಯಾಗಲು ನಾನು ಮತ್ತು ನಮ್ಮ ಸಂಭಂದಿಕನಾದ ಬಸವರಾಜ ತಂದೆ ಗುರುಲಿಂಗಪ್ಪ ಬೇವಿನಮಟ್ಟಿ ಇಬ್ಬರೂ ಕೂಡಿಕೊಂಡು ಶಹಾಪೂರಕ್ಕೆ ಬಂದು ಶಹಾಪೂರದ ಹಳೆ ಬಸನಿಲ್ದಾಣದಿಂದ ಕೋರ್ಟ ಕಡೆಗೆ ನಾವಿಬ್ಬರೂ ನಡೆದುಕೊಂಡು ಹಳ್ಳದ ಬ್ರೀಜ ಹತ್ತೀರದಲ್ಲಿ ಸಾಯಂಕಾಲ 05-00 ಗಂಟೆಯ ಸುಮಾರಿಗೆ ಹೋಗುತ್ತೀರುವಾಗ ಅಲ್ಲೆ ಹೋರಟಿದ್ದ 1) ಮಲ್ಲೇಶಪ್ಪ ತಂದೆ ನಿಂಗಪ್ಪ ಆಂದೇಲಿ 2) ಸಂಗಮೇಶ ತಂದೆ ಬಸವರಾಜ ಟೋಕಾಪೂರ 3) ಮಲ್ಲಕಾಜರ್ುನ ತಂದೆ ಬಸವರಾಜ ಟೋಕಾಪೂರ ಇವರೆಲ್ಲರೂ ನನ್ನ ಹತ್ತೀರ ಬಂದವರೇ ಲೇ ಶಿವ್ಯಾ ಸೂಳೆ ಮಗನೇ ನಮ್ಮ ಅಣ್ಣ ತಮ್ಮಕಿಯ ಪಾಲಿನ ಹೋಲದಲ್ಲಿ ನಮಗೆ ಪಾಲು ಬರುತ್ತದೆ ಪಾಲು ಕೊಡದೇ ನನ್ನೊಂದಿಗೆ ತಕರಾರು ಮಾಡುತ್ತಿಯಾ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನಗೆ ಬಲಗಣ್ಣಿನ ಮೆಲುಕಿನ ಹತ್ತೀರ ಹೋಡೆದು ರಕ್ತ ಗಾಯ ಮಾಡಿದನು. ಮಲ್ಲೇಶಪ್ಪನು ತನ್ನ ಕೈಯಿಂದ ನನಗೆ ಬಲಗೈ ಮೋಳಕೈಗೆ ಹೊಡೆದು ಗುಪ್ತಗಾಯ ಮಾಡಿದನು, ಸಂಗಮೇಶ ಮತ್ತು ಮಲ್ಲಿಕಾಜರ್ುನ ಇಬ್ಬರೂ ನನಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಬಲಗೈ ಮೋಳಕೈಗೆ ಮತ್ತು ಬಲಗಾಲು ಮೋಣಕಾಲಿನ ಮೇಲೆ ತರಚಿದ ರಕ್ತ ಗಾಯವಾಗಿರುತ್ತದೆ. ಅಲ್ಲೆ ಇದ್ದ ಬಸವರಾಜ ತಂದೆ ಗುರುಲಿಂಗಪ್ಪ ಮತ್ತು ಅಲ್ಲೆ ಹೋರಟಿದ್ದ ಗುರುಲಿಂಗಪ್ಪ ತಂದೆ ಮಲ್ಲೇಶಪ್ಪ ಇವರು ಸದರಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂ ಇವತ್ತು ಉಳಿದುಕೊಂಡಿದಿ ಮಗನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವ ಬೆದರಿಕೆ ಹಾಕಿ ಹೋದರು, ಸದರಿ ಜಗಳವು ಹಳೆ ಬಸ ನಿಲ್ದಾಣದ ಹತ್ತೀರ ಇರುವ ಹಳ್ಳದ ಬ್ರೀಜ್ ಹತ್ತೀರ ರಸ್ತೆಯ ಮೇಲೆ ಸಾಯಂಕಾಲ 05-00 ಗಂಟೆಯಿಂದ 05-15 ಗಂಟೆಯ ವರೆಗೆ ಜರುಗಿರುತ್ತದೆ. ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಉಪಚಾರ ಪಡೆದಿದ್ದು, ನಮ್ಮ ಊರಿನ ಹೀರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು. ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 160/2019 ಕಲಂ 323.324.504.506. ಸಂ.34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 113/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ:-ದಿನಾಂಕ 26.06.2019 ರಂದು ಮಧ್ಯಾಹ್ನ 2:00 ಗಂಟೆಗೆ ಫಿರ್ಯಾದಿದಾರಳು ತನ್ನ ಗಂಡ ಗಾಯಾಳುವಿನೊಂದಿಗೆ ಹೊಲದ ಸವರ್ೇ ನಂ: 200 ನೇದ್ದರಲ್ಲಿ ಹೋಗಿದ್ದಾಗ ಕ್ರ.ಸಂ-01 ಮತ್ತು 02 ನೇದ್ದವರು  ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಫಿರ್ಯಾದಿದಾರಳ ತಲೆ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು ಆಗ ಗಾಯಾಳು ತನ್ನ ಮಕ್ಕಳಿಗೆ ಫೋನ್ ಮಾಡಿ ಹೊಲಕ್ಕೆ ಕರೆಯಿಸಿದ್ದು ಆಗ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೋಗಿದ್ದು ಅಲ್ಲದೇ ರಾತ್ರಿ 9:20 ಕ್ಕೆ ಕ್ರ.ಸಂ-02 ಮತ್ತು ಕ್ರ.ಸಂ-03 ಆರೋಪಿತರು ಫಿರ್ಯಾದಿದಾರಳ ಮನೆಗೆ ಬಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೊಗಿದ್ದ ಬಗ್ಗೆ ಫಿರ್ಯಾದಿದಾರಳು ನಮೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 113/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 140/2019 ಕಲಂ. 143,147,148,323,324,341,504,506 ಸಂಗಡ 149 ಐ.ಪಿ.ಸಿ ಹಾಗು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989:- ದಿನಾಂಕಃ 26/06/2019 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ 3-00 ಪಿ.ಎಮ್ ಕ್ಕೆ ಆಸ್ಪತ್ರೆಗೆ ಭೇಟಿನೀಡಿ ಜಗಳದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀ ಹರಿಶ್ಚಂದ್ರ ತಂದೆ ದೇವಿಂದ್ರಪ್ಪ ಬಡಿಗೇರ ಸಾ: ಬಾದ್ಯಾಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ಮೊನ್ನೆ ದಿನಾಂಕಃ 24/06/2019 ರಂದು ನಾನು ನನ್ನ ತಮ್ಮನಾದ ಬಸವರಾಜ ತಂದೆ ಹಾಗು ನಮ್ಮ ಅಣ್ಣ-ತಮ್ಮಕಿಯ ಹಣಮಂತರಾಯ ತಂದೆ ದ್ಯಾವಪ್ಪ ಬಡಿಗೇರ ಮತ್ತು ನಮ್ಮೂರಿನ ಕುರುಬ ಜನಾಂಗದ ಬಲಭೀಮ ತಂದೆ ಶಿವಪ್ಪ ಹಾವಿನ್, ನಿಂಗಪ್ಪ ತಂದೆ ಮಲ್ಲಪ್ಪ ಶಹಾಪೂರ ಮುಂತಾದವರು ಸುರಪೂರ ಬಸ್ ನಿಲ್ದಾಣದಿಂದ ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಹೋಗುವ ಬಸ್ಸಿನಲ್ಲಿ ಹತ್ತಿ ಬಾದ್ಯಾಪೂರ ಕ್ರಾಸ್ ಹತ್ತಿರ ನಾವು ಬಸ್ಸಿನಿಂದ ಕೆಳಗಡೆ ಇಳಿಯುವಾಗ ನನ್ನ ಜೊತೆಗಿದ್ದ ಹಣಮಂತರಾಯ ತಂದೆ ದ್ಯಾವಪ್ಪ ಇತನು ಆಕಸ್ಮಿಕವಾಗಿ ಬಲಭೀಮ ತಂದೆ ಶಿವಪ್ಪ ಹಾವಿನ್ ಇವರ ಕಾಲು ತುಳಿದಿದ್ದರಿಂದ ಬಸ್ ಹೋದ ಬಳಿಕ ಬಲಭೀಮ ಹಾವಿನ್ ಇತನು ಒಮ್ಮೆಲೆ ಲೇ ಹೊಲೆಯ ಸೂಳೆ ಮಗನೇ ನೋಡಿ ನಿಧಾನ ಇಳಿಯಲು ಆಗುವದಿಲ್ಲೇನು, ನನಗೆ ಬೇಕಂತಲೇ ಮೈ ತಾಕಿಸಿ ಕಾಲು ತುಳಿಯುತ್ತಿ ಏನಲೇ ಕೀಳು ಜಾತಿ ಮಗನೇ ಅಂತ ಬೈದಿದ್ದರಿಂದ ನಾನು ಆತನಿಗೆ ಬಸ್ಸಿನಲ್ಲಿ ಇಳಿಯುವಾಗ ಆಕಸ್ಮಿಕವಾಗಿ ತುಳಿದಿರಬಹುದು, ಅಷ್ಟಕ್ಕೆ ಜಾತಿ ಎತ್ತಿ ಬೈಯ್ಯುತ್ತಿ ಏನು ಅಂತ ಕೇಳಿದ್ದಕ್ಕೆ, ನಿಂಗಪ್ಪ ತಂದೆ ಮಲ್ಲಪ್ಪ ಶಹಾಪೂರ ಇತನು ನಿನ್ಯಾಕೆ ನಡುವೆ ಮಾತಾಡುತ್ತಿ ಲೇ, ಊರಲ್ಲಿ ನಿಮಗೆ ಬಹಳ ಸೊಕ್ಕು ಬಂದಿದೆ ಮಗನೇ ಅಂತ ಬೈಯ್ಯುತ್ತಿದ್ದನು. ಆಗ ಅವರು ಉದ್ದೇಶಪೂರ್ವಕವಾಗಿ ಜಗಳ ತಗೆಯುತ್ತಿದ್ದಾರೆ ಅಂತ ತಿಳಿದು ನಾವು ಮನೆಗೆ ಬಂದಿದ್ದು ಇರುತ್ತದೆ. ನಂತರ ನಿನ್ನೆ ದಿನಾಂಕಃ 25/06/2019 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಬಸವರಾಜ ತಂದೆ ದೇವಿಂದ್ರಪ್ಪ ಬಡಿಗೇರ ಹಾಗು ನಮ್ಮ ಜನಾಂಗದ ಹಣಮಂತರಾಯ ತಂದೆ ದ್ಯಾವಪ್ಪ ಬಡಿಗೇರ, ಬಾಲಪ್ಪ ತಂದೆ ಹೊನ್ನಪ್ಪ ಗುಂಡಗುತರ್ಿ, ಆನಂದ ತಂದೆ ಭೀಮಪ್ಪ ಬಡಿಗೇರ ಎಲ್ಲರೂ ಮನೆಯಿಂದ ಸುರಪೂರಕ್ಕೆ ಹೋಗುವ ಸಲುವಾಗಿ ನಮ್ಮೂರಲ್ಲಿ ಇರುವ ಸಂಗೋಳ್ಳಿ ರಾಯಣ್ಣ ಕಟ್ಟೆ ಹತ್ತಿರ  ಹೊರಟಿದ್ದಾಗ 9-30 ಎ.ಎಮ್ ಸುಮಾರಿಗೆ ನಮ್ಮೊಂದಿಗೆ ತಕರಾರು ಮಾಡಿರುವ ಕುರುಬ ಜನಾಂಗದ 1) ಬಲಭೀಮ ತಂದೆ ಶಿವಪ್ಪ ಹಾವಿನ್ ಹಾಗು 2) ನಿಂಗಪ್ಪ ತಂದೆ ಮಲ್ಲಪ್ಪ ಶಹಾಪೂರ, 3) ಭೀಮಾಶಂಕರ ತಂದೆ ಕೋತಲಪ್ಪ ಹಾವಿನ್, 4) ಸಣ್ಣ ಭಾಗಪ್ಪ ತಂದೆ ಹಣಮಂತ ಹಾವಿನ್, 5) ಬಲಭೀಮ ತಂದೆ ಮಲ್ಕಪ್ಪ ಬುದನೂರ 6) ಹಣಮಂತ ತಂದೆ ಭೀಮಣ್ಣ ಪೂಜಾರಿ 7) ದೊಡ್ಡ ಭಾಗಪ್ಪ ತಂದೆ ಹಣಮಂತ ಹಾವಿನ್ 8) ಸಂತೋಷ ತಂದೆ ಬಸವರಾಜ ಹಾವಿನ್ 9) ಹಣಮಂತ ತಂದೆ ಮಾರ್ತಂಡಪ್ಪ ಮಗ್ಗದ 10) ಕೋತಲಪ್ಪ ತಂದೆ ಶಿವಪ್ಪ ಹಾವಿನ್ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ನಮಗೆ ತಡೆದು ನಿಲ್ಲಿಸಿ ನಮಗೆಲ್ಲರಿಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕೈಯಿಂದ, ಬಡಿಗೆ ಹಾಗು ಕಲ್ಲುಗಳಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 140/2019 ಕಲಂ. 143,147,148,323,324,341,504,506 ಸಂಗಡ 149 ಐ.ಪಿ.ಸಿ ಹಾಗು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.  
  
ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 84/2019 ಕಲಂ 279,337,338, 304(ಎ) ಐ.ಪಿ.ಸಿ:- ದಿನಾಂಕ 26/06/2019 ರಂದು 7-40 ಪಿಎಮ್ ಸುಮಾರಿಗೆ ಮೃತ ಮಂಜುನಾಥ ಈತನು ತನ್ನ ಪಲ್ಸರ್ ಮೋ/ಸೈ ನಂ ಕೆಎ:33, ಯು:1489 ನೇದ್ದರ ಮೇಲೆ ಭೀ.ಗುಡಿ ಬಾಪುಗೌಡ ಚೌಕಿನ ಕಡೆಯಿಂದ ಬರುತ್ತ ಭೀ.ಗುಡಿ ಹೆಲ್ತ ಕ್ವಾಟ್ರಸ ಹತ್ತಿರ ರೋಡ ಕ್ರಾಸ ಮಾಡುತ್ತಿದ್ದಾಗ ಹಿಂದಿನಿಂದ ಒಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋ/ಟೈ ಚೆಸ್ಸಿ ನಂ: ಎಮ್ಬಿಎಲ್ಹೆಚ್ಎಡಬ್ಲು083ಕೆಹೆಚ್ಸಿ03111 ನೇದ್ದರ ಚಾಲಕ ಭೀಮಾಶಂಕರ ತಂದೆ ಮಲ್ಲಪ್ಪ ಸಾ:ಹುಲಕಲ್ ಈತನು ತನ್ನ ಮೋಟರ್ ಸೈಕಲನ ಹಿಂದೆ ಪರಶುರಾಮ ಈತನಿಗೆ ಕೂಡಿಸಿಕೊಂಡು ಮೋ/ಸೈ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ರೋಡ್ ಕ್ರಾಸ ಮಾಡುತ್ತಿದ್ದ ಮಂಜುನಾಥ ಈತನ ಮೋಟರ್ ಸೈಕಲ್ಲಿಗೆ ಡಿಕ್ಕಿಪಡಿಸಿದ್ದರಿಂದ ಮಂಜುನಾಥ ಈತನಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೂಗು ಹಾಗು ಬಾಯಿಯಿಂದ ರಕ್ತಸ್ರಾವವಾಗಿದ್ದು, ಅದರಂತೆ ಆರೋಪಿತನಿಗೆ ಎಡಗಿವಿಗೆ ರಕ್ತಗಾಯ ಹಾಗು ಪರಶುರಾಮ ಈತನಿಗೆ ತರಚಿದ ಗಾಯಗಳಾಗಿದ್ದು, ಗಾಯಾಳು ಮಂಜುನಾಥ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಒಯ್ದಾಗ 10 ಪಿಎಮ್ ಸುಮಾರಿಗೆ ಮೃತಪಟ್ಟಿದ್ದು, ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:84/2019 ಕಲಂ 279, 337, 338, 304(ಎ) ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!