ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-06-2019

By blogger on ಮಂಗಳವಾರ, ಜೂನ್ 25, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-06-2019 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 44/2019  ಕಲಂ 279, 338, 304(ಎ) ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್:- ದಿನಾಂಕ 24/06/2019 ರಂದು ಸಾಯಂಕಾಲ 7ಪಿ.ಎಂ.ಕ್ಕೆ ಯಾದಗಿರಿ ನಗರದ ಶಿರಡಿ ಹೊಟೆಲ್  ಹತ್ತಿರ ಮುಖ್ಯ ರಸ್ತೆ ಮೇಲೆ ಗಾಯಾಳು ಹಣಮಂತ ಈತನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ  ಮೋಟಾರು ಸೈಕಲ್ ನಂಬರ ಕೆಎ-04, ಇ.ಎಲ್-6391 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ, ಮೋಟಾರು ಸೈಕಲನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು  ಸದರಿ ಅಪಘಾತದಲ್ಲಿ ಗಾಯಾಳು ಹಣಮಂತ  ಈತನಿಗೆ ತಲೆಯ ಮೇಲೆ ಹಣ್ಣೆತ್ತಿಗೆ ಭಾರೀ ಗುಪ್ತಗಾಯ, ಎಡಗೈ ಮೊಣಕೈಗೆ, ಬಲಗಣ್ಣಿನ ಉಬ್ಬಿನ ಮೇಲೆ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನು ಘಟನಾ ಸ್ಥಳದಿಂದ ಓಡಿ ಹೋಗಿದ್ದರ ಬಗ್ಗೆ ಕಾನೂನಿನ ಕ್ರಮ ಜರುಗಿಸುವ ಬಗ್ಗೆ  ದಿನಾಂಕ 25/06/2019 ರಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 44/2019 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ 25/06/2019 ರಂದು ಸಾಯಂಕಾಲ 7-45 ಪಿ.ಎಂ.ಕ್ಕೆ ಪಿಯರ್ಾದಿಯವರು ಠಾಣೆಗೆ ಹಾಜರಾಗಿ ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ತನ್ನ ಗಂಡನಿಗೆ ಉಪಚಾರ ಕುರಿತು ಹೈದ್ರಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮತ್ತೆ ಹೆಚ್ಚಿನ ಉಪಚಾರಕ್ಕಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ ತನ್ನ ಮಗ ಸಂತೋಷ ಈತನು ಯಾದಗಿರಿಗೆ ಬಂದು ಹೋದರಾಯಿತು ಅಂತಾ ಅಂಬುಲೆನ್ಸ್ ಮೂಲಕ ಯಾದಗಿರಿಗೆ ಬೆಂಗಳೂರಿಗೆ ಹೋಗಲು ತಯಾರಾದಾಗ  ಸಾಯಂಕಾಲ ಅಂದಾಜು  7-10 ಪಿ.ಎಂ. ಸುಮಾರಿಗೆ ಪ್ರಕರಣದ ಗಾಯಾಳು ಹಣಮಂತನು ಅಪಘಾತದಲ್ಲಾದ ಗಾಯಗಳ ಬಾಧೆಯಿಂದ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದು ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
   
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 83/2019 ಕಲಂ 323, 498(ಎ),504,506 ಸಂ. 34 ಐಪಿಸಿ:-ದಿನಾಂಕ: 24/11/2011 ರಂದು ಫಿರ್ಯಾದಿದಾರಳಿಗೆ ಆರೋಪಿ ಚಾಂದಪಾಶಾ ತಂದೆ ನವಾಬಸಾಬ ಸಾ:ಸುರಪೂರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2-3 ವರ್ಷ ಸರಿಯಾಗಿ ನೋಡಿಕೊಂಡಿದ್ದು ನಂತರದ ದಿವಸಗಳಲ್ಲಿ  ಫಿಯರ್ಾದಿ ಹಾಗು ಆತನ ತಾಯಿ ಕುರಾನಬಿ ಹಾಗು ಮೈದುನ ಪೀರಪಾಶಾ ಇವರು ನಿನ್ನ ಕಾಲುಗುಣ ಸರಿಯಾಗಿರುವುದಿಲ್ಲಾ. ಮತ್ತು ನಿನ್ನ ಕೈ ಬೆರಳುಗಳು ಸರಿ ಇರುವುದಿಲ್ಲಾ ಮತ್ತು ಅಡುಗೆ ಮಾಡಲು ಬರುವುದಿಲ್ಲಾ ಅಂತಾ ಮಾನಸಿಕ ಕಿರುಕುಳ ನೀಡುತ್ತ ಬಂದಿದ್ದು, ಮದುವೆಯಾಗಿ 8-9 ವರ್ಷವಾದರು ಮಕ್ಕಳಾಗದೇ ಇರುವದರಿಂದ ಆರೋಪಿತರು ಎಲೇ ರಂಡಿ ನಿನಗೆ ಮಕ್ಕಳಾಗುವುದಿಲ್ಲಾ, ನೀನು ನಿನ್ನ ತವರು ಮನೆಗೆ ಹೋಗು ನಾವು ಬೇರೆ ಮದುವೆ ಮಾಡಿಕೊಳ್ಳುತ್ತೇವೆ ಅಂತ ದಿನಾಂಕ 17/06/2019 ರಂದು ಸಾಯಂಕಾಲ ನನಗೆ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ನಾನು ಈ ವಿಷಯ ನನ್ನ ತವರು ಮನೆಯವರಿಗೆ ತಿಳಿಸಿ ನಾನು ನನ್ನ ತವರು ಮನೆಯಾದ ಭೀ.ಗುಡಿಗೆ ಬಂದಿದ್ದು ದಿನಾಂಕ 18/06/2019 ರಂದು 7 ಪಿಎಮ್ ಸುಮಾರಿಗೆ ಫಿಯರ್ಾದಿ ಭೀ.ಗುಡಿಯಲ್ಲಿ ನಮ್ಮ ಅಣ್ಣನ ಮನೆಯಲ್ಲಿ ಇರುವಾಗ ಅದೇ ಸಮಯಕ್ಕೆ ಆರೋಪಿತರು ಬಂದು  ಎಲೇ ರಂಡಿ ಹೇಳದೇ ಕೇಳದೆ ನೀನು ನಿನ್ನ ತವರು ಮನೆಗೆ ಬಂದೀದಿ. ರಂಡಿ ನೀನು ಇಲ್ಲಿಯೇ ಇರು ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ನನಗೆ ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ.  
                                                                                                                          
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 159/2019.ಕಲಂ 420,504,506 ಐ.ಪಿ.ಸಿ ಮತ್ತು 125(ಎ) ಜನತಾ ಪ್ರಾತಿನಿಧ್ಯ ಕಾಯ್ದೆ 1951:- ದಿನಾಂಕ 25/06/2019 ರಂದು 3.00 ಪಿಎಂ ಕ್ಕೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಪಿ.ಸಿ 344 ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಪಿಯರ್ಾದಿ ಶ್ರೀ ಸೋಪಣ್ಣ ತಂದೆ ಮಲ್ಲಪ್ಪ ದರಿಯಾಪೂರ ವ|| 56 ಉ|| ಒಕ್ಕಲುತನ ಸಾ|| ದೇವಿನಗರ ಶಹಾಪೂರ ತಾ|| ಶಹಾಪೂರ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಪೂರ ರವರಲ್ಲಿ ಕನ್ನಡದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 33/2019 ನೇದ್ದನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಶಹಾಪೂರ ನಗರದ ವಾರ್ಡ ನಂ 03 ರಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಫಿಯರ್ಾದಿಯು ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿ ಆರೋಪಿತನಾದ ಮತ್ತು ಅದೇ ವಾರ್ಡನಲ್ಲಿ ಬಿಜೆಪಿ ಪಕ್ಷದಿಂದ ಸ್ಪಧರ್ೆ ಮಾಡಿ ಗೆದ್ದಿರುವ ಧರ್ಮಣ್ಣ ತಂದೆ ಶರಣಪ್ಪ ದಶವಂತ ವ|| 32 ಸಾ|| ದೇವಿನಗರ ಶಹಾಪೂರ ತಾ|| ಶಹಾಪೂರ ಈತನು ವಾರ್ಡ ನಂ 02 ಮತ್ತು ವಾರ್ಡ ನಂ 04 ರಲ್ಲಿ 2 ಕಡೆಗೆ ಮತದಾನದ ಗುರುತಿನ ಚಿಟಿ ಹೊಂದಿದ್ದು ಚುನಾವಣೆಯ ನಾಮಪತ್ರ ಸಲ್ಲಿಸುವಾಗ ಅದರ ಬಗ್ಗೆ ನಮೂದಿಸದೇ ಮೋಸ ಮಾಡಿದ್ದು ಅಲ್ಲದೇ ಜನತಾ ಪ್ರಾತಿನಿಧ್ಯ ಕಾಯ್ದೆ ಉಲ್ಲಂಘನೆ ಮಾಡಿರುತ್ತಾನೆ. ಇದರ ಬಗ್ಗೆ ತಹಸೀಲ್ದಾರ ರವರಿಗೆ ದೂರು ನೀಡಿದ್ದು ಜಿಲ್ಲಾಧಿಕಾರಿಗಳಿಗೂ ರಾಜ್ಯ ಚುನಾವಣಾಧಿಕಾರಿಗಳಿಗೂ ದೂರು ನೀಡಿದ್ದು ಆರೋಪಿತನಿಗೆ ಗೊತ್ತಾಗಿದ್ದುದು ಇರುತ್ತದೆ. ಹೀಗಿದ್ದು ದಿನಾಂಕ 20/06/2019 ರಂದು 8.00 ಎಎಂ ಸುಮಾರಿಗೆ ಫಿಯರ್ಾದಿಯು ಕಲಬುರಗಿಗೆ ಹೋಗುವ ಕುರಿತು ಶಹಾಪೂರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ನಿಂತಿದ್ದಾಗ ಆರೋಪಿತನು ಅಲ್ಲಿಗೆ ಬಂದು ನನ್ನ ಮೇಲೆ ಯಾರಿಗಾದರೂ ದೂರು ಕೊಟ್ಟರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜಗಳಕ್ಕೆ ಬಿದ್ದಾಗ ಅಲ್ಲಿಯೇ ಇದ್ದ ವೆಂಕಟೇಶ ತಂದೆ ಹಣಮಂತ ಆಲೂರ ಮತ್ತು ಇಸ್ಮಾಯಿಲ್ಸಾಬ ತಂದೆ ಕುತುಬುದ್ದೀನಸಾಬ ಇವರು ಬಂದು ಜಗಳ ಬಿಡಿಸಿದ್ದು ಆರೋಪಿತನು 2 ಕಡೆಗೆ ಗುರುತಿನ ಚೀಟಿ ಹೊಂದಿ, ಮೋಸ ಮಾಡಿ, ಜನತಾ ಪ್ರಾತಿನಿಧ್ಯ ಕಾಯ್ದೆ ಉಲ್ಲಂಘನೆ ಮಾಡಿದ್ದು ಕೇಳಲು ಹೋಗಿದ್ದಕ್ಕೆ ಜಿವ ಬೆದರಿಕೆ ಹಾಕಿದ್ದು ಸದರಿ ಆರೋಪಿತನ ಮೇಲೆ ಕ್ರಮ ಜರುಗಿಸಬೇಕು ಅಂತಾ ಖಾಸಗಿ ಪಿಯರ್ಾದಿ ಇದ್ದು ಸದರಿ ಖಾಸಗಿ ಪಿಯರ್ಾದಿ ಆಧಾರದ ಮೇಲೆ ಆರೋಪಿತರ ವಿರುದ್ದ ಗುನ್ನೆ ನಂ 159/2019 ಕಲಂ 420.504.506 ಐ.ಪಿ.ಸಿ. ಮತ್ತು 125(ಎ) ಜನತಾ ಪ್ರಾತಿನಿಧ್ಯ ಕಾಯ್ದೆ ನೇದ್ದರಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!