ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-06-2019

By blogger on ಸೋಮವಾರ, ಜೂನ್ 24, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-06-2019 

ಭೀ. ಗುಡಿ  ಪೊಲೀಸ್ ಠಾಣೆ ಗುನ್ನೆ ನಂ:- 82/2019 ಕಲಂ 279, 338 ಐ.ಪಿ.ಸಿ:- ದಿನಾಂಕ: 23/06/2019 ರಂದು 8 ಎಎಮ್ ಕ್ಕೆ ಫಿಯರ್ಾದಿದಾರಳು ಹಾಗು ಅವರ ಚಿಕ್ಕಮ್ಮಳ ಮಗಳಾದ ಶೃಂಗಾ ಹಾಗು ಫಿರ್ಯಾದಿಯ ಗಂಡ ಮಹೇಂದ್ರಕುಮಾರ ಇವರೆಲ್ಲರೂ ಕೂಡಿ ತಮ್ಮ ಮಗನಾದ ವ್ಯಾಸಮಣಿ ಈತನಿಗೆ ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬರಲು ತಮ್ಮ ಕಾರ ನಂ ಕೆಎ:33 ಎ:4963 ನೇದ್ದರಲ್ಲಿ ಮುಡಬೂಳ ಕ್ರಾಸ ಹತ್ತಿರ ಹೊರಟಾಗ ಕಾರ ನಡೆಸುತ್ತಿದ್ದ ಆರೋಪಿ ಮಹೇಂದ್ರಕುಮಾರ ಇವರು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಗಾಯಗೊಂಡವರು ಕಲಬುರಗಿಯ ಕುರಾಳ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆಯಾಗಿದ್ದರಿಂದ ಇಂದು ದಿನಾಂಕ 24/06/19 ರಂದು ಎಮ್.ಎಲ್.ಸಿ ಪಡೆದುಕೊಂಡು ಬಂದು ಪ್ರಕರಣ ದಾಖಲಿಸಿಕೊಂಡು  ತನಿಖೆ  ಕೈಕೊಂಡಿದ್ದು ಅದೆ.
  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 76/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ:- ದಿನಾಂಕ 24/06/2019 ರಂದು 11.30 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ನಿಂಗಮ್ಮ ಗಂಡ ಕಾಂತಪ್ಪ  ಮಾಡಬಾಳ  ವಯಸ್ಸು 32 ಜಾತಿ: ಕುರಬರ  ಉ: ಕೂಲಿ  ಸಾ: ಮುನೀರ ಬೊಮ್ಮನಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆ  ಮೂರು ಜನ ಮಕ್ಕಳಿರುತ್ತಾರೆ.  ಅವರಲ್ಲಿ ಒಬ್ಬಳು ಹೆಣ್ಣು ಮಗಳು ಹಾಗು ಎರಡು ಜನ ಗಂಡು ಮಕ್ಕಳಿರುತ್ತಾರೆ. ನಾನು ಹಾಗು ನನ್ನ ಗಂಡ ಇಬ್ಬರೂ ಕೂಡಿ ಕೂಲಿ ಕೆಲಸ ಮಾಡಿಕೊಂಡು ಇದ್ದೆವು . ನನ್ನ ಗಂಡನು ಆಗಾಗ ಮಹಾರಾಷ್ಟ್ರದ ಹಾಗು ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದನು. ಸುಮಾರು ಆರು ತಿಂಗಳ ನಂತರ ಮರಳಿ ಮನೆಗೆ ಬರುತ್ತಿದ್ದನು. ಆತನ ಹೆಸರಿನಲ್ಲಿ 7 ಎಕರೆ ಹೊಲವಿದ್ದು ಸದರಿ ಹೊಲವನ್ನು ನಾನು ನನ್ನ ಮಕ್ಕಳೊಂದಿಗೆ ನೋಡಿಕೊಂಡು ಹೋಗುತ್ತಿದ್ದೆನು. ಹೀಗಿದ್ದು ಸುಮಾರು ಆರು ವರ್ಷಗಳ ಹಿಂದೆ ನನ್ನ ಗಂಡನಾದ ಕಾಂತಪ್ಪ ಗಂಡ ಪ್ರಶಾಂತ ಮಾಡಬಾಳ ವ|| 38 ವರ್ಷ ಈತನು ದುಡಿಯಲೆಂದು ಬೆಂಗಳುರಿಗೆ ಹೋಗುತ್ತೇನೆ ಅಂತ ಹೇಳಿ ಹೋದನು. ಒಂದು ವರ್ಷವಾದರೂ ನನ್ನ ಗಂಡ ಮರಳಿ ಮನೆಗೆ ಬರಲಿಲ್ಲ ಹಾಗು ಆತನ ಹತ್ತಿರ ಪೋನ ಸಹ ಇರಲಿಲ್ಲ ನಾನು ಆತನೊಂದಿಗೆ ಯಾವದೇ ಸಂಪರ್ಕದಲ್ಲಿ ಇದ್ದಿರಲಿಲ್ಲ. ನನ್ನ ಗಂಡನು ದುಡಿಯಲು ಹೋಗಿ ಬಹಾಳ ದಿನಗಳ ನಂತರ ಬರುವದು ಮಾಡುತ್ತಿದ್ದನು ಕಾರಣ ಮತ್ತೆ ಮರಳಿ ಮನೆಗೆ ಬರಬಹುದು ಅಂತ ನಾನು ಸುಮ್ಮನೆ ಇದ್ದೆನು. ನಂತರ ನನ್ನ ಗಂಡನು ಮನೆಗೆ ಬಾರದೇ ಇದ್ದಾಗ ನಾನು ಸದರ ವಿಷಯವನ್ನು ನನ್ನ ಅಣ್ಣನಾದ ಖಂಡಪ್ಪ ತಂದೆ ಬೀರಲಿಂಗ ಮಕಾಶಿ ಸಾ|| ಅಂತರಗಂಗಿ ತಾ|| ಸಿಂದಗಿ ಈತನಿಗೆ  ತಿಳಿಸಿದಾಗ ಸದರಿಯವನು ನನ್ನ ಗಂಡನ ಪತ್ತೆ ಕುರಿತು ಬೆಂಗಳುರಿಗೆ ಹೋಗಿ ಎಲ್ಲಾ ಕಡೆ ಹುಡುಕಾಡಿ ಎಲ್ಲಿಯೂ ಸಿಕ್ಕಿರುವದಿಲ್ಲ ಅಂತ ಮರಳಿ ಊರಿಗೆ ಬಂದಿರುತ್ತಾನೆ. ಹಾಗೆಯೇ ನಾನು  ನನ್ನ ಗಂಡ ಎಲ್ಲಯೂ ಸಿಗದೇ ಇದ್ದುದರಿಂದ ತಾನಾಗಿಯೇ ಮರಳಿ ಊರಿಗೆ ಬರಬಹುದು ಅಂತ ತಿಳಿದು ಇಲ್ಲಿಯವರೆಗೆ ಸುಮ್ಮನಿದ್ದೆನು. ಆದರೆ ನನ್ನ ಗಂಡನಾದ ಕಾಂತಪ್ಪ ಈತನು ದುಡಿಯಲೆಂದು ಸುಮಾರು ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಹೋದವನು ಮರಳಿ ಮನಗೆ ಬಾರದೇ ಕಾಣೆಯಾಗಿದ್ದರಿಂದ ಸದರ ವಿಷಯವಾಗಿ  ನಮ್ಮ ಸಂಬಂದಿಕರಲ್ಲಿ ಹಾಗು ಮನೆಯಲ್ಲಿ ನಮ್ಮ ಮಕ್ಕಳಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ. . ನನ್ನ ಗಂಡ ಕಾಂತಪ್ಪ ತಂದೆ ಪ್ರಶಾಂತ ಮಾಡಬಾಳ  ಇವರ ಚಹರೆ ಪಟ್ಟಿ ಉದ್ದನೆಯ ಮುಖ, ಸಾದಗಪ್ಪು ಬಣ್ಣ, ನೀಟಾದ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಫೀಟ್ ,ಇದ್ದು ಸದರಿಯವನು ಮನೆಯಿಂದ ಹೋಗುವಾಗ  ಬಿಳಿ  ಶರ್ಟ , ನೀಲಿ ಪ್ಯಾಂಟ ಉಟ್ಟುಕೊಂಡು ಹೋಗಿದ್ದು  ಇರುತ್ತದೆ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 76/2019 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                                                                                                                          
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 87/2018 ಕಲಂ. 406, 420 ಐಪಿಸಿ ಸಂ 3(1) (ಜಿ) ಎಸ್ಸಿ/ಎಸ್ಟಿ ಪಿಎ ಎಕ್ಟ್ 1989:- ದಿನಾಂಕ: 13/10/2017 ರಂದು 6:15 ಪಿ.ಎಮ್ ಕ್ಕೆ ಫಿರ್ಯಾದಿ ಶ್ರೀ ಪರಮಣ್ಣ ತಾಯಿ ಸಾಬವ್ವ ದೊಡ್ಮನಿ ವ: 45 ವರ್ಷ ಜಾ: ಮಾದಿಗ ಉ: ಒಕ್ಕಲುತನ ಸಾ: ಹಂದ್ರಾಳ ಎಸ್.ಡಿ ತಾ: ಸುರಪೂರ ಇವರು ಸುರಪೂರ ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಅಜರ್ಿಯನ್ನು ತಂದು ಹಾಜರಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನಂದರೆ ಹಂದ್ರಾಳ ಎಸ್ ಡಿ ಸೀಮೆಯಲ್ಲಿ ನನ್ನದು ಸುಮಾರು 3 ಎಕರೆ ಜಮೀನು ಇದ್ದು ಇದು ನೀರಾವರಿ ಯೋಜನೆಗೆ ಒಳಪಟ್ಟಿದ್ದರು ನೀರಾವರಿಯಿಂದ ವಂಚಿತನಾಗಿ ಒಣ ಬೇಸಾಯಿ ಮಾಡಿಕೊಂಡು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವಿಸುತ್ತಿದ್ದೆನು. 2010 -11 ನೇ ಸಾಲಿನಲ್ಲಿ ಮಾನ್ಯ ಕನರ್ಾಟಕ ಸರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ರೈತರ ಕ್ಷೇಮಾಬಿವೃದ್ದಿಗಾಗಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಗಳ ಮುಖಾಂತರ ಜಮೀನುಗಳಿಗೆ ಸಮೀಪದ ಹಳ್ಳಗಳಿಗೆ ಪಂಪಸೆಟ್ಟ ಕುಡಿಸಿ ಇವುಗಳಿಗೆ ವಿದ್ಯುತ್ ಅಳವಡಿಸಿ ರೈತರ ಜಮೀನುಗಳಿಗೆ ಪೈಪಲೈನ ಜೊಡಣೆ ಮಾಡಿ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶವಾಗಿತ್ತು, ಇದರಂತೆ 2010-11 ನೇ ಸಾಲಿನಲ್ಲಿ ಉಪವಿಭಾಗ ನಂ-5 ಕೃ.ಭಾ.ಜ.ನಿ.ನಿ ಕಕ್ಕೇರಾ ಕಾಯರ್ಾಲಯದಿಂದ ಈ ಯೋಜನೆಗಳ ಅಡಿಯಲ್ಲಿ ಅಜರ್ಿಗಳು ಕರೆದಿದ್ದರಿಂದ ನಾನು ನನ್ನ ಜೊತೆ ಕೋನಾಳ ಮತ್ತು ಹಂದ್ರಾಳ ಎಸ್.ಡಿ ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರಾವರಿ ವ್ಯಾಪ್ತಿಗೆ ಸೇರಿದ್ದು ನೀರಾವರಿಯಿಂದ ವಂಚಿತರಾದ ರೈತರು ಈ ಕಾಯರ್ಾಲಯಕ್ಕೆ ದಾಖಲೆಗಳೊಂದಿಗೆ ಅಜರ್ಿಗಳನ್ನು ಸಲ್ಲಿಸಿದ್ದರಿಂದ ನಮ್ಮ ಅಜರ್ಿಗಳನ್ನು ಅಂಗಿಕರಿಸಿ ಫಲಾನುಭವಿಗಳನ್ನಾಗಿ ಆಯ್ಕೆಮಾಡಿ ಸರಕಾರದಿಂದ ಮಂಜೂರಾತಿ ಪಡೆದು ನಮ್ಮಗಳಿಗೆ ಆಯ್ಕೆಯಾದ ಬಗ್ಗೆ ಮಾಹತಿ ಕೊಟ್ಟರು ಇದರಿಂದ ನಿರಾವರಿಯಿಂದ ವಂಚಿತರಾದ ನಮ್ಮೆಲ್ಲಾ ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ನೀರಾವರಿ ಸೌಲಭ್ಯ ಪಡೆದು ನಾವೇಲ್ಲರು ಹೆಚ್ಚಿನ ಬೆಳೆ ಬೆಳೆದು ಎಲ್ಲರಂತೆ ನಾವು ಕೂಡಾ ನೇಮ್ಮದಿಯಿಂದ ಬಾಳಬಹುದೆಂದು ಆಸೆಯನ್ನು ಇಟ್ಟುಕೊಂಡು 2010-11 ರಿಂದ 2012-13 ರ ವರೆಗೆ ನಿರಂತರವಾಗಿ ಉಪವಿಭಾಗ-05 ಕೃ.ಭಾ.ಜ.ನಿ.ನಿ ಕಕ್ಕೇರಾ ಕಛೇರಿಗೆ ಅಲೆದಾಡುತ್ತಿದ್ದೇವು ಆದರೇ ಈ ಕಛೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಮಹ್ಮದ ಶಫಿಕ ಅಹ್ಮದ ಖುರೇಶಿ ಮತ್ತು ಸಹಾಯಕ ಅಭಿಯಂತರರಾದ ಶ್ರೀ ಹೀರಾಲಾಲ ಇರ್ವರು ಕೂಡಿ ನಮಗೆ ಸ್ಪಷ್ಟವಾಗಿ ಆಯ್ಕೆಯಾದ ಫಲಾನುಭವಿಗಳ ಯಾದಿಯನ್ನು ಸರಕಾರ ರದ್ದುಮಾಡಿದೆ ಅಂತಾ ಹೇಳಿದರು. ನಾನು ಮತ್ತು ನೊಂದ ವಂಚಿತರಾದ ಪರಿಶಿಷ್ಟ ಜಾತಿಯ ಕೊನಾಳ ಮತ್ತು ಹಂದ್ರಾಳ ಎಸ್ ಡಿ ಗ್ರಾಮಗಳ ರೈತರು ಕೂಡಿ ಯಾದಗೀರಿಗೆ ಹೋಗಿ ಶ್ರೀ ಮಲ್ಲಿಕಾಜರ್ುನ ಕ್ರಾಂತಿ ಜಿಲ್ಲಾ ಶಾಖೆ ಸಂಚಾಲಕರು ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗೀರ ಇವರನ್ನು ಖುದ್ದಾಗಿ ಬೇಟಿಯಾಗಿ ನಮಗಾದ ಅನ್ಯಾಯದ ಬಗ್ಗೆ ವಿವರವಾಗಿ ಹೇಳಿದ್ದರಿಂದ ಇವರು ಉಪವಿಭಾಗ-05 ಕೃ.ಭಾ.ಜ.ನಿ.ನಿ ಕಕ್ಕೇರಾದಲ್ಲಿ  ಮಾಹಿತಿ ಹಕ್ಕು ಅಧಿನಿಯಮಗಳ ಅಡಿ ಅಜರ್ಿ ಸಲ್ಲಿಸಿ ಮಾಹಿತಿ ಪಡೆದ ಮೇಲೆ ನಮ್ಮ ಸೌಲಭ್ಯಗಳನ್ನು ಕೋನಾಳ ಮತ್ತು ಹಂದ್ರಾಳ ಎಸ್.ಡಿ ಗ್ರಾಮಗಳ ಈ ಕೆಳಗೆ ತೋರಿಸಿದ ಸಾಮಾನ್ಯ ವರ್ಗಕ್ಕೆ ಸೇರಿದ ರೆಡ್ಡಿ ಲಿಂಗಾಯತರಾದ 1) ಬಸವಲಿಂಗಪ್ಪ ತಂದೆ ಮುದಕಪ್ಪ ಸವರ್ೆ ನಂ 7/44 ಸಾ:ಕೋನಾಳ 2) ಶಾಂತಗೌಡ ತಂದೆ ಅಪಣ್ಣ ಧನರೆಡ್ಡಿ ಸವರ್ೆ ನಂ 3 ರಲ್ಲಿ ಸಾ:ಕೋನಾಳ 3) ಶಾಂತಗೌಡ ತಂದೆ ಅಪ್ಪಣ್ಣ ಧನರೆಡ್ಡಿ ಸವರ್ೆ ನಂ -96/1 4) ಮಲ್ಲಿಕಾಜರ್ುನ ತಂದೆ ಬಸಣ್ಣ ಸವರ್ೆ ನಂ 22/44 ಸಾ:ಕೋನಾಳ 5) ಈರಣ್ಣ ತಂದೆ ಬಸಣ್ಣ ಸವರ್ೆ ನಂ 22/44 ಸಾ:ಹಂದ್ರಾಳ ಎಸ್ ಡಿ 6) ಶರಣು ತಂದೆ ಬಸಣ್ಣ ಸವರ್ೆ ನಂ 22/14 ಸಾ:ಕೋನಾಳ 7) ನಂದಪ್ಪ ತಂದೆ ಬಸಣ್ಣ ಸವರ್ೆ ನಂ 22/44 ಸಾ:ಕೋನಾಳ 8) ಭೀಮನಗೌಡ ತಂದೆ ಗೌಡಪ್ಪಗೌಡ ಬಿರಾದಾರ ಸವರ್ೆ ನಂ: 10/02 ಸಾ: ಪೀರಾಪೂರ ತಾ:ಮುದ್ದೆಬಿಹಾಳ ಜಿ:ವಿಜಯಪೂರ 9) ಈರಣ್ಣ ತಂದೆ ಬಸವಲಿಂಗಪ್ಪ ಸವರ್ೆ ನಂ 22/25 ಸಾ:ಹಂದ್ರಾಳ 10) ಸರಸ್ವತಿ ಗಂಡ ಮಲ್ಲಣ್ಣ ಯಾಳವಾರ ಸವರ್ೆ ನಂ 52 ಸಾ:ಕೋನಾಳ 11) ಈರಣ್ಣ ತಂದೆ ಬಸವಲಿಂಗಪ್ಪ ಸತ್ಯಪ್ಪನವರ ಸವರ್ೆ ನಂ 22/ಇ ಸಾ:ಕೋನಾಳ ಇವರುಗಳೊಂದಿಗೆ ಶಾಮಿಲಾಗಿ ಇವರಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಮ್ಮಗಳ ಆಯ್ಕೆ ಯಾದಿಯನ್ನು ಬದಲಾಯಿಸಿ ಹೊಸದಾಗಿ ಇವರುಗಳನ್ನು ಹೆಸರು ಸೇರಿಸಿ ಸರಕಾರದಿಂದ ಮಂಜೂರಾತಿ ಪಡೆದು ಸಾಮಾನ್ಯ ವರ್ಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾಗಿರುತ್ತದೆ. ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಸಂಚಾಲಕರು ತನಿಖೆ ಕೈಕೊಂಡು ತಪ್ಪಿಸ್ಥರ ಮೇಲೆ ಕ್ರಮಕ್ಕಾಗಿ ಮಾನ್ಯ ಅಧಿಕ್ಷಕ ಅಭಿಯಂತರರು ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ನಿ.ಮ.ಪೋ.ವೃತ್ತ-1 ನಾರಾಯಣಪೂರ ರವರಿಗೆ ದೂರು ಸಲ್ಲಿಸಿದ್ದರಿಂದ ಮಾನ್ಯರವರು ತಮ್ಮ ಅಧಿನ ಅಧಿಕಾರಿಯಾದ ಮಾನ್ಯ ಕಾರ್ಯನಿವರ್ಾಹಕ ಅಭಿಯಂತರರು  ಕೃ.ಭಾ.ಜ.ನಿ.ನಿ ಆಣೆಕಟ್ಟು ವಿಭಾಗ ನಾರಾಯಣಪೂರ ರವರಿಗೆ ತನಿಖೆ ಮಾಡಿ ವರದಿ ಸಲ್ಲಿಸಲು ತಿಳಿಸಿದ್ದರಿಂದ ಇವರು ಸ್ಥಳ ತನಿಖೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಮೇಲಾಧಿಕಾರಿಯವರಿಗೆ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆ ಅಡಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಲ್ಲಬೇಕಾದ ಸೌಲತ್ತುಗಳನ್ನು ಬೇರೆ ವರ್ಗಕ್ಕೆ ನೀಡಿ ತಪ್ಪೇಸಗಿರುವದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅಲ್ಲದೆ ಸಿಸಿಎ ನಿಯಾಮವಳಿ ಪ್ರಕಾರ ಸೂಕ್ತ ಹಾಗೂ ಶಿಸ್ತು ಕ್ರಮಕ್ಕೆ ಶಿಪಾರಸುಮಾಡಿದ್ದಾಗಿರುತ್ತದೆ ಈ ವರದಿಯಂತೆ ಸಂಬಂದಪಟ್ಟ ಎಲ್ಲಾ ನಿರಾವರಿ ಇಲಾಖೆಯ ಅಧಿಕಾರಿಗಳ ವರದಿಯಂತೆ ಕನರ್ಾಟಕ ಸರಕಾರದ ಸಚಿವಾಲಯ ವಿಕಾಸ ಸೌದ ಬೆಂಗಳೂರ ಸರಕಾರದ ಅಧಿನ ಕಾರ್ಯದಶರ್ಿ ಜಲ ಸಂಪನ್ಮೂಲ ಇಲಾಖೆ (ಸೇವೆಗಳು-ಎ) ಇವರಿಂದ ವಿಚಾರಣೆಗೆ ಆದೇಶ ನೀಡಿದ್ದರಿಂದ ಮಾನ್ಯ ಮಹ್ಮದ ಶಫಿಕ್ ಅಹ್ಮದ ಖುರೇಶಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಎಡದಂಡೆ ಕಾಲುವೆ ಉಪವಿಭಾಗ-5 ಕಕ್ಕೇರಾ ಮತ್ತು ಶ್ರೀ ಹೀರಾಲಾಲ ಸಹಾಯಕ ಅಭಿಯಂತರರವರು ಈ ಇರ್ವರು ಕೂಡಿ ನಮಗೆ ಅನೇಕ ಸಲ ಕೇಸು ವಾಪಸ್ಸು ಪಡೆಯಲು ಸಾಕಷ್ಟು ಸಲ ಆಸೆ ಆಮೀಷ ತೋರಿಸಿ ಮನವೊಸಲಿಸಲು ಪ್ರಯತ್ನಿಸಿದ್ದರು. ಇದ್ದಕ್ಕೆ ನಾವು ಒಪ್ಪದಿದ್ದಾಗ ನಮ್ಮ ದೂರಿನಲ್ಲಿ ತೋರಿಸಿದ ಕೋನಾಳ ಮತ್ತು ಹಂದ್ರಾಳ ಎಸ್ ಡಿ ಗ್ರಾಮಗಳ ರೈತರು ಸಾಮನ್ಯ ವರ್ಗಕ್ಕೆ ಸೆರಿದ ರೈತರು ನಮಗೆ ಸಿಗಬೇಕಾದ ಸೌಲಭ್ಯವನ್ನು ಮೋಸ ಮಾಡಿ ತಾವು ಪಡೆದುಕೊಂಡಿರುತ್ತಾರೆ. ದಯಾಪರರಾದ ತಮ್ಮಲ್ಲಿ ಪ್ರಾಥರ್ಿಸುವದೆನೆಂದರೆ, ನಮ್ಮಭಾರತ ಸಂವಿಧಾನ ಕೊಡ ಮಾಡಿದ ಮೂಲಭೂತ ಹಕ್ಕು (ಈಣಟಿಜಚಿಟಜಟಿಣಚಿಟ  ಖರಣ ) ಗಳ ನಿಯಮದಡಿಯಲ್ಲಿ ನಮಗೆ ನೀಡಿದ ಹಕ್ಕುಗಳನ್ನು  ಉಲ್ಲಂಘನೆ ಮಾಡಿದ್ದು ಮಹಾ ಆಕ್ಷೇಮ್ಯ ಅಪರಾಧವಾಗಿದ್ದು  ಇವರುಗಳ ಮೇಲೆ ಮೋಸ ವಂಚನೆ ನಿಯಮ ಉಲ್ಲಂಘನೆ ಅಲ್ಲದೆ ಈ ಇಬ್ಬರು ಅಧಿಕಾರಿಗಳು ಒಬ್ಬರು ಪ್ರ ವರ್ಗ-1 ಎಕ್ಕೆ ಸೇರಿದ್ದು ಇನ್ನೊಬ್ಬರು ಪ್ರ ವ ವರ್ಗ 2-ಎ ಗೆ ಸೇರಿದವರಾಗಿದ್ದರಿಂದ ಇವರ ಮೇಲೆ ಕಾನೂನು ಅಡಿಯಲ್ಲಿ ಕ್ರಮ ತಗೆದುಕೊಳ್ಳಬೇಕು ಅಲ್ಲದೆ ನಮಗೆ ಮೊದಲು ಕೊಟ್ಟ ಅವಕಾಶ ಪುನಃ ಕಲ್ಪಿಸಿಕೊಡಲು ಸಹಕರಿಸಬೇಕೆಂದು ತಮ್ಮಲ್ಲಿ ನಾನು ಪ್ರಾಥರ್ಿಸುತ್ತೆನೆ ಅಂತಾ ಸಲ್ಲಿಸಿದ ಫಿರ್ಯಾದಿಯನ್ನು ಶ್ರೀ ಶರಣಪ್ಪ ಹವಲ್ದಾರ ಪಿ.ಎಸ್.ಐ (ಕಾ.ಸು) ಸುರಪೂರ ಪೊಲೀಸ್ ಠಾಣೆ ರವರು ಪಡೆದುಕೊಂಡು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 289/2017 ಕಲಂ: 406, 420 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ದಿನಾಂಕ: 14/10/2017 ರಂದು ಶ್ರೀ ಶರಣಪ್ಪ ಹವಲ್ದಾರ ಪಿ.ಎಸ್.ಐ (ಕಾ.ಸು) ಸುರಪೂರ ಪೊಲೀಸ್ ಠಾಣೆ ರವರುಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿ, ಪ್ರಕರಣದಲ್ಲಿ ಗುನ್ನೆ ಸ್ಥಳವಾದ ಕಕ್ಕೇರಾ ಕ್ಕೆ ಬೇಟಿ ನೀಡಿ, ಪ್ರಕರಣದಲ್ಲಿ ಫಿರ್ಯಾದಿದಾರರು ತೋರಿಸಿದ ಗುನ್ನೆ ಸ್ಥಳವನ್ನು ಇಬ್ಬರೂ ಪಂಚರ ಸಮಕ್ಷಮ ಪಂಚನಾಮೆ ಕೈಕೊಂಡಿದ್ದು ಇರುತ್ತದೆ. ಸದರಿ ಘಟನಾ ಸ್ಥಳವಾದ ಕೃ.ಭಾ.ಜ.ನಿ.ನಿ ಉಪವಿಭಾಗ ನಂ-5 ಕಕ್ಕೇರಾ ಕಾಯರ್ಾಲಯವು ಕೊಡೇಕಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತಿದ್ದರಿಂದ ಪ್ರಕರಣದಲ್ಲಿ ಹದ್ದಿಯ ಆಧಾರದ ಮೇಲಿಂದ ಪ್ರಥಮ ವರ್ತಮಾನ ವರದಿ ಮತ್ತು ಕಡತವನ್ನು ಕೊಡೇಕಲ್ ಪೊಲೀಸ್ ಠಾಣೆಗೆ ಸಮೂಚಿತ ಮರ್ಗವಾಗಿ ಕೊಡೇಕಲ್ ಪೊಲೀಸ್ ಠಾಣೆಗೆ ವಗರ್ಾಯಿಸಿದ್ದು ಇರುತ್ತದೆ. ದಿನಾಂಕ 26/04/2018 ರಂದು 6:20 ಪಿ.ಎಮ್ ಕ್ಕೆ ಸುರಪೂರ ಠಾಣೆಯ ಪಿಸಿ-271 ಮಂಜುನಾಥ ಇವರು ಕೊಡೇಕಲ್ ಪೊಲೀಸ್ ಠಾಣೆಗೆ ಹೋಗಿ ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ: 289/2017 ಕಲಂ: 406, 420 ಐ.ಪಿ.ಸಿ ನೇದ್ದರ ಪ್ರಥಮ ವರ್ತಮನ ವರದಿ ಮತ್ತು ಕಡತವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರಿ ಕಡತವನ್ನು ಶ್ರೀ ಶಹಾಜಹಾನ್ ಹೆಚ್.ಸಿ-141 ಕೊಡೇಕಲ್ ಠಾಣೆ ರವರು ಪಡೆದುಕೊಂಡು, ಸದರಿ ಫಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 87/2018 ಕಲಂ 406, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ಸದರ ಪ್ರಕರಣದ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ನಂತರ ಪ್ರಕರಣದಲ್ಲಿ ಶ್ರೀ ಕೃಷ್ಣಕುಮಾರ ಪಾಟೀಲ್ ಪಿಎಸ್ಐ ಕೊಡೇಕಲ್ ಮತ್ತು ಶ್ರೀ ಕಾಳಪ್ಪ ಎಮ್ ಬಡಿಗೇರ ಪಿಎಸ್ಐ ಕೊಡೇಕಲ್ ರವರು ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರದಲ್ಲಿ ನಾನು ಪ್ರಕರಣದಲ್ಲಿ ತನಿಖೆ ಕೈಕೊಂಡಿರುತ್ತೇನೆ. ಪ್ರಕರಣದಲ್ಲಿ ಎಲ್ಲಾ ಹಂತದ ತನಿಖೆ ಪೂತರ್ಿಗೊಂಡಿದ್ದು ಇಲ್ಲಿಯವರೆಗೂ ಕೈಕೊಂಡ ತನಿಖೆಯಿಂದ ಮತ್ತು ಸಾಕ್ಷಾದಾರಗಳ ಮೇಲಿಂದ ಆರೋಪಿತ ವಿರುದ್ದ ಕಲಂ 406, 408, 420, 120(ಬಿ) & 201 ಐಪಿಸಿ ಪ್ರಕಾರ ಆರೋಪ ಸಾಭಿತಾಗಿದ್ದರಿಂದ 10 ಜನ ಆರೋಫಿತರ ಮೇಲೆ ದೊ, ಪತ್ರವನ್ನು ತಯಾರಿಸಿ, ದೊ,ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವ ಕುರಿತು ಪರಿಶೀಲನೆಗಾಗಿ ಮಾನ್ಯ ಎಡಿಪಿ ಯಾದಗಿರಿವರವ ಕಡೆಗೆ ಕಳುಹಿಸಿದ್ದು ಇರುತ್ತದೆ.ಸದರ ಪ್ರಕರಣದಲ್ಲಿ  ತನಿಖೆಯನ್ನು ಮುಂದುವರೆಸಿ, ಎಡಿಪಿ ಯಾದಗಿರಿ ರವರು ಸದರ ಪ್ರಕರಣದ ದೋ, ಪತ್ರದ ಮೇಲೆ ಷರಾ ಮಾಡಿ ಪ್ರಕರಣದಲ್ಲಿ ಕಲಂ-3(1) (ಜಿ) ಎಸ್ ಸಿ /ಎಸ್ ಟಿ ಆಕ್ಟ ಅನ್ವಯವಾಗುತ್ತಿದ್ದು ಕಾರಣ ಸದರ ದೋ, ಪತ್ರವನ್ನು ಪಿಪಿ ರವರಿಂದ ಪರಿಶೀಲನೆ ಮಾಡಿಸುವಂತೆ ಹಿಂದಿರುಗಿಸಿದ್ದು ಇರುತ್ತದೆ. ಮಾನ್ಯ ಎ.ಡಿ.ಪಿ ಸಾಹೇಬರ ಆದೆಶದಂತೆ ಕೊಡೇಕಲ್ ಪೊಲೀಸ್ ಠಾಣಾ ಗುನ್ನೆ ನಂ: 87/2018 ಕಲಂ: 406, 408, 120(ಬಿ), 201 ಐ.ಪಿ.ಸಿ ಪ್ರಕರಣದಲ್ಲಿ ತನಿಖೆ ಕೈಕೊಂಡು ಅರೋಪಿತರ ವಿರುದ್ಧ ದೋ,ಪತ್ರ ತಯಾರಿಸಿ ಪರಿಶೀಲನೆಗಾಗಿ ಪಿ.ಪಿ ಯಾದಗಿರಿ ರವರಲ್ಲಿ ಸಲ್ಲಿಸಿದ್ದು, ಪಿ.ಪಿ ಯಾದಗಿರಿ ರವರು ಪ್ರಕರಣದ ದೋ,ಪತ್ರವನ್ನು ಪರಿಶೀಲಿಸಿ, ಪ್ರಕರಣದಲ್ಲಿ ಕಲಂ: 3(1)(ಜಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದನ್ನು ಅಳವಡಿಸಿಕೊಂಡು ದೋ,ಪತ್ರ ಸಲ್ಲಿಸಲು ಕಡತವನ್ನು ಹಿಂದಿರುಗಿಸಿದ್ದು ಇರುತ್ತದೆ. ಪ್ರಕರಣದಲ್ಲಿ ಎಸ್.ಸಿ/ಎಸ್.ಟಿ ಸಮೂದಾಯದವರಿಗೆ ಮಂಜೂರಾದ ಸರಕಾರದ ನೀರಾವರಿ ಸೌಲಭ್ಯಗಳನ್ನು ಸಾಮಾನ್ಯ ವರ್ಗದ ಜನರಿಗೆ ಮಂಜೂರು ಮಾಡಿ ಎಸ್.ಸಿ/ಎಸ್.ಟಿ ಜನರಿಗೆ ನೀರಾವರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದ್ದು ಇರುತ್ತದೆ. ಕಾರಣ ಪ್ರಕರಣದಲ್ಲಿ ಕಲಂ:  3(1)(ಜಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದನ್ನು ಅಳವಡಿಸಿಕೊಳ್ಳುಲು ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಯಾದಿ ಬರೆದು ವಿನಂತಿಸಿಕೊಂಡು. ಸದರ ಪ್ರಕರಣದಲ್ಲಿ  ಕಲಂ: 3(1)(ಜಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದನ್ನು ಅಳವಡಿಸಿಕೊಳ್ಳಸಿಕೊಂಡಿದ್ದು ಇರುತ್ತದೆ. ಅಂತಾ ಮಾನ್ಯರವರಲ್ಲಿ ವಿನಂತಿ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!