ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-06-2019
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 42/2019 ಕಲಂ 279, 304(ಎ) ಐಪಿಸಿ:- ದಿನಾಂಕ 18/06/2019 ರಂದು ಬೆಳಿಗ್ಗೆ 9-30 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ ಡೆತ್ ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಮೃತನ ಮಗನಾದ ಪಿಯರ್ಾದಿ ಹಣಮಂತ ತಂದೆ ಗುಂಡಪ್ಪ ಬೆಟಗೇರಿ ವಯ;35 ವರ್ಷ, ಜಾ;ಬೇಡರು, ಉ;ಒಕ್ಕುಲುತನ, ಸಾ;ಯಂಪಾಡ, ತಾ;ಗುರಮಿಠಕಲ್, ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದನ್ನು ಸಮಯ 9-45 ಎ.ಎಂ. ದಿಂದ 10-45 ಎ.ಎಂ. ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 18/06/2019 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನನ್ನ ತಂದೆಯಾದ ಗುಂಡಪ್ಪ ತಂದೆ ಖತಲಪ್ಪ ಬೆಟಗೇರಿ ವಯ;58 ವರ್ಷ ಇವರು ನಮ್ಮ ಸಂಬಂಧಿಯಾದ ಶ್ರೀ ಹಣಮಂತ ತಂದೆ ದೇವಪ್ಪ ಬೇಡರ ಇವರೊಂದಿಗೆ ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆಂದು ನಮ್ಮ ಮನೆಯಲ್ಲಿ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಸ್ವಲ್ಪ ಸಮಯದ ನಂತರ ನಾನು ಮತ್ತು ನನ್ನ ತಮ್ಮನಾದ ಮಲ್ಲಪ್ಪ ಇಬ್ಬರು ಮನೆಯಲ್ಲಿದ್ದಾಗ ನಮ್ಮ ಸಂಬಂಧಿಯಾದ ಶ್ರೀ ಹಣಮಂತ ತಂದೆ ದೇವಪ್ಪ ಬೇಡರ ಈತನು ಪೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ ನಾನು ಮತ್ತು ನಿಮ್ಮ ತಂದೆಯಾದ ಗುಂಡಪ್ಪ ಇಬ್ಬರು ಕೂಡಿಕೊಂಡು ಸಂತೆ ಮಾಡಲು ಯಾದಗಿರಿಗೆ ಬಸ್ಸಿನಲ್ಲಿ ಬಂದು ಯಾದಗಿರಿಯ ಗಂಜ್ ಕ್ರಾಸ್ ಹತ್ತಿರ ಇಳಿದುಕೊಂಡು ಹೊಟೆಲ್ನಲ್ಲಿ ಚಹಾ ಕುಡಿದರಾಯಿತು ಅಂತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ನಾನು ನೋಡು ನೋಡುತ್ತಿದ್ದಂತೆ ನಮ್ಮ ಎದುರುಗಡೆಯಿಂದ ಮುಂಡರಗಿ ಗ್ರಾಮದ ಕಡೆ ಹೋಗುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಮ್ಮಿಬ್ಬರಲ್ಲಿ ನಿಮ್ಮ ತಂದೆಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ನಿಮ್ಮ ತಂದೆ ರಸ್ತೆ ಮೇಲೆ ಸಿಡಿದು ಬಿದ್ದಾಗ ಲಾರಿ ಟಯರು ಅವರ ದೇಹದ ಮೇಲೆ ಹೋಗಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು ಈ ಅಪಘಾತದಲ್ಲಿ ನಿಮ್ಮ ತಂದೆಗೆ ತಲೆಗೆ ಭಾರೀ ರಕ್ತಗಾಯವಾಗಿ ಮೂಗಿನಿಂದ, ಬಾಯಿಂದ, ಕಿವಿಯಿಂದ ರಕ್ತ ಬರುತ್ತಿದ್ದು, ಬೆನ್ನಿಗೆ ಸಂಪೂರ್ಣವಾಗಿ ತರಚಿದ ಭಾರೀ ರಕ್ತಗಾಯ, ಸೊಂಟಕ್ಕೆ ಭಾರೀ ರಕ್ತಗಾಯವಾಗಿದ್ದು, ಎಡ ಪಕ್ಕೆಗೆ ಭಾರೀ ಗುಪ್ತಗಾಯವಾಗಿದ್ದು, ಎಡಗೈ ತೋಳಿನಿಂದ ಮೊಣಕೈಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ ಈ ಅಪಘಾತದಲ್ಲಿ ಆದ ಗಾಯಗಳಿಂದ ನಿಮ್ಮ ತಂದೆ ಗುಂಡಪ್ಪನವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅದೇ ಮಾರ್ಗವಾಗಿ ಹೊರಟಿದ್ದ ನಮ್ಮ ಯಂಪಾಡ ತಾಂಡಾದ ಶ್ರೀ ಜಯೇಂದ್ರ ತಂದೆ ತುಕಾರಾಮ ಚವ್ಹಾಣ, ಶ್ರೀ ಹಣಮ್ಯಾ ತಂದೆ ಸಕ್ರು ರಾಠೋಡ ಇವರು ಈ ಅಪಘಾತವನ್ನು ಕಂಡು ಸ್ಥಳಕ್ಕೆ ಬಂದಿರುತ್ತಾರೆ. ಸದರಿ ಅಪಘಾತವು ಇಂದು ದಿನಾಂಕ 18/06/2019 ರಂದು ಬೆಳಿಗ್ಗೆ ಅಂದಾಜು 8-45 ಎ.ಎಂ.ಕ್ಕೆ ಯಾದಗಿರಿಯ ಗಂಜ್ ಕ್ರಾಸ್ ಹತ್ತಿರ ಮುಖ್ಯ ರಸ್ತೆ ಮೇಲೆ ಜರುಗಿದ್ದು ಅಪಘಾತ ಪಡಿಸಿದ ಲಾರಿ ಮತ್ತು ಚಾಲಕ ಸ್ಥಳದಲ್ಲಿದ್ದು ಲಾರಿ ನಂಬರ ಎಪಿ-21, ಟಿ.ಎಕ್ಸ್-3930 ನೇದ್ದು ಇದ್ದು ಅದರ ಚಾಲಕನಿಗೆ ಹೆಸರು ಮತ್ತು ವಿಳಾಸವನ್ನು ನಾವುಗಳು ವಿಚಾರಿಸಿದ್ದು ಚಾಲಕನು ತನ್ನ ಹೆಸರು ಸಯ್ಯದ್ ಹಾಜಿ ತಂದೆ ಕಾಸಿಂ ಸಾ;ಕೃಷ್ಣಾ ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಸಂಚಾರಿ ಠಾಣೆಯ ಪೊಲೀಸರು ಬಂದು ಅಪಘಾತದ ಬಗ್ಗೆ ವಿಚಾರಿಸಿದ ನಂತರ ಅವರು ಮತ್ತು ನಾವುಗಳು ನಿಮ್ಮ ತಂದೆಯ ಮೃತ ದೇಹವನ್ನು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದು ನೀವು ಬೇಗನೇ ಯಾದಗರಿ ಸಕರ್ಾರಿ ಆಸ್ಪತ್ರೆಗೆ ಬರಬೇಕು ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ಮನೆಯಲ್ಲಿದ್ದ ನನ್ನ ತಮ್ಮ ಮಲ್ಲಪ್ಪನಿಗೆ ವಿಷಯ ತಿಳಿಸಿ ನನ್ನ ಸಂಗಡ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಶವಗಾರಕ್ಕೆ ಬಂದು ನೋಡಲು ನನಗೆ ಈ ಮೇಲೆ ಪೋನಿನಲ್ಲಿ ಹೇಳಿದಂತೆ ಘಟನೆ ಜರುಗಿದ್ದು ನಿಜವಿರುತ್ತದೆ. ಆಸ್ಪತ್ರೆಯಲ್ಲಿ ನಮ್ಮ ತಂದೆಯ ಮೃತದೇಹವನ್ನು ನಾನು ಮತ್ತು ನನ್ನ ತಮ್ಮನಾದ ಮಲ್ಲಪ್ಪ ಇಬ್ಬರು ಗುತರ್ಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 18/06/2019 ರಂದು ಸಮಯ ಬೆಳಿಗ್ಗೆ 8-45 ಎ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಗಂಜ್ ಕ್ರಾಸ್ ಹತ್ತಿರ ಆರೋಪಿತನು ತನ್ನ ಲಾರಿ ನಂಬರ ಎಪಿ-21, ಟಿ.ಎಕ್ಸ್-3930 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನನ್ನ ತಂದೆಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು, ಸದರಿ ಅಪಘಾತದಲ್ಲಿ ನಮ್ಮ ತಂದೆಗೆ ಆದ ಗಂಭೀರ ಗಾಯಗಳಿಂದ ಘಟನಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಪಘಾತ ಪಡಿಸಿದ ಲಾರಿ ಚಾಲಕನ ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಸಮಯ 9-45 ಎ.ಎಂ. ದಿಂದ 10-45 ಎ.ಎಂ. ದ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 11 ಎ.ಎಂ.ಕ್ಕೆ ಬಂದು ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2019 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 151/2019 ಕಲಂ 506 ಐ.ಪಿ.ಸಿ:- ದಿನಾಂಕ 18/06/2019 ರಂದು ಸಾಯಂಕಾಲ 19-00 ಗಂಟೆಗೆ ಅಜರ್ಿದಾರ ಶ್ರೀ ರಾಯಪ್ಪ ತಂದೆ ಶಿವಪ್ಪ ಸಾಲಿಮನಿ ಸಾಃ ಹಾರಣಗೇರಾ ತಾಃಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅಜರ್ಿ ಸಲ್ಲಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ರವರಲ್ಲಿ ಮಾಹಿತಿ ಕೇಳಿದ್ದು, ದಿನಾಂಕ 16/06/2019 ರಂದು ಸಾಯಂಕಾಲ 7 ಗಂಟೆ 12 ನಿಮಿಷಕ್ಕೆ ಶಹಾಪೂರದ ದಿಗ್ಗಿ ಬೇಸ್ ಹತ್ತಿರ ತಮ್ಮ ಕೆಲಸದ ನಿಮಿತ್ಯ ಬಂದಾಗ ಶ್ರೀ ಹಣಮಂತ ನಾಟೇಕಾರ ಇವರು ಏ ರಾಯಪ್ಪ ನಾನು (ಃಇಔ) ಮಾತಾಡುತಿದ್ದು ನನನ್ನ ಬಗ್ಗೆ ನಿನಗೆ ಗೊತ್ತಿಲ್ಲದೆ ಇರಬಹುದು ನಾನು ಯಾರು ಎಂದು ನಿನಗೆ ಬೆಳಿಗ್ಗೆ ನಮ್ಮ ಜನಾಂಗದವರಿಂದ ನಿನಗೆ ಕೈಕಾಲು ಮುರಿದು ನಿನನ್ನು ಜೀವಂತವಾಗಿ ಕೊಲೆ ಮಾಡಿಸುತ್ತೆನೆ ಅಂತ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದು, ಇದರಿಂದ ಫಿಯರ್ಾದಿಯವರು 2 ದಿನದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಭಯಗೊಂಡಿದ್ದು ತನ್ನ ಜೀವಕ್ಕೆ ಯಾವ ಸಂದರ್ಭದಲ್ಲಿಯಾದರು ಆಪತ್ತು ಇದೆ. ಈ ಗೂಂಡಾ ಅಧಿಕಾರಿಯ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಫಿಯರ್ಾದಿ ಸಲ್ಲಿಸಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಆರೋಪಿತನ ವಿರುದ್ದ ಠಾಣೆಯ ಎನ್.ಸಿ ಸಂಖ್ಯೆ 39/2019 ಕಲಂ 506 ಐ.ಪಿ.ಸಿ ಅಡಿಯಲ್ಲಿ ನೊಂದಣಿ ಮಾಡಿಕೊಂಡಿದ್ದು, ಸದರಿ ಆರೋಪಿತನ ವಿರುದ್ದ ಕಲಂ 506 ಐ.ಪಿ.ಸಿ ಅಡಿಯ್ಲಲಿ ಪ್ರಕರಣ ದಾಖಲಮಾಡಿಕೊಂಡು ಮುಂದಿನ ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಅನುಮತಿ ಪಡೆದುಕೊಂಡು ರಾತ್ರಿ 20-30 ಗಂಟೆಗೆ ಠಾಣೆ ಗುನ್ನೆ ನಂ 151/2019 ಕಲಂ 506 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 56/2019 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ:- ದಿನಾಂಕ: 18/06/2019 ರಂದು 7-30 ಪಿಎಮ್ ಕ್ಕೆ ಶ್ರೀ ಬಾಷಾಸಾಬ ತಂದೆ ಕಾಸಿಂಸಾಬ ಜಾಗಿರದಾರ, ವ:54, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಸಿದ್ದಾಪೂರ ತಾ:ಶೋರಾಪೂರ ಹಾ:ವ: ಚನ್ನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನನ್ನ ಸ್ವಂತ ಊರು ಶೋರಾಪೂರ ತಾಲೂಕಿನ ಸಿದ್ದಾಪೂರ ಗ್ರಾಮ ಇದ್ದು, ಈಗ ಸುಮಾರು 6-7 ತಿಂಗಳ ಹಿಂದೆ ಕುಟುಂಬ ಸಮೇತ ಚನ್ನೂರು ಗ್ರಾಮಕ್ಕೆ ಬಂದು ಬಸನಗೌಡ ತಮ್ಮರೆಡ್ಡಿ ಚನ್ನೂರು ಇವರ ಕವಳೆ ಗದ್ದೆಯನ್ನು ಲೀಜಿಗೆ ಮಾಡುತ್ತಾ ಗದ್ದೆಯಲ್ಲಿಯೇ ಶೆಡ್ಡ ಹಾಕಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 12/06/2019 ರಂದು ಮದ್ಯಾಹ್ನ ಸಮಯದಲ್ಲಿ ನನ್ನ ಮಗ ಮಹ್ಮದ ಗೌಸ ಈತನು ಮೋಟರ್ ಸೈಕಲ್ ನಂ. ಕೆಎ 33 ಹೆಚ್ 8398 ನೇದ್ದನ್ನು ತೆಗೆದುಕೊಂಡು ಸದರಿ ಮೋಟರ ಸೈಕಲ್ ಮೇಲೆ ಚನ್ನೂರು ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ತಾನೆ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋದನು. ಮದ್ಯಾಹ್ನ 2-35 ಗಂಟೆ ಸುಮಾರಿಗೆ ನಾನು ನಮ್ಮ ಶೆಡ್ಡನಲ್ಲಿ ಇದ್ದಾಗ ನಮ್ಮೊಂದಿಗೆ ಕೆಲಸ ಮಾಡಲು ಬಂದಿರುವ ಯಲ್ಲಪ್ಪ ತಂದೆ ಭೀಮಣ್ಣ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಕೊಂಕಲದಿಂದ ಚನ್ನೂರಕ್ಕೆ ಹೋಗುತ್ತಿದ್ದಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಿಮ್ಮ ಮಗ ಮಹ್ಮದ ಗೌಸನು ಮೋಟರ ಸೈಕಲ್ ಮೇಲೆ ಚನ್ನೂರು ಗ್ರಾಮದಿಂದ ನಿಮ್ಮ ಶೆಡ್ಡ ಕಡೆ ಬರುತ್ತಿದ್ದಾಗ ಚನ್ನೂರು-ಕೊಂಕಲ್ ಕಚ್ಚಾ ರೋಡಿನ ಮೇಲೆ ಕೊಂಕಲ್ ಕಡೆಯಿಂದ ಒಂದು ಚಾಲಕನು ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ಮಗನಿಗೆ ಅಪಘಾತಪಡಿಸಿರುತ್ತಾನೆ. ನೀವು ಬೇಗನೆ ಬರ್ರಿ ಅಂತಾ ಅಂದಾಗ ನಾನು ಮತ್ತು ನನ್ನ ಇನ್ನೊಬ್ಬ ಮಗ ಮಹ್ಮದ ಅನ್ವರ ಇಬ್ಬರೂ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಮಹ್ಮದ ಗೌಸನಿಗೆ ಅಪಘಾತದಲ್ಲಿ ತೆಲೆಗೆ ಭಾರಿ ಹರಿದ ರಕ್ತಗಾಯ ಮತ್ತು ಬಲಗಡೆ ಪಕ್ಕೆಗೆ ಭಾರಿ ಒಳಪೆಟ್ಟು ಆಗಿದ್ದು, ಬಲಗೈ ಮೊಳಕೈಗೆ ರಕ್ತಗಾಯವಾಗಿತ್ತು. ಮೋಟರ್ ಸೈಕಲ್ ಮತ್ತು ಟ್ರ್ಯಾಕ್ಟರ ಸ್ಥಳದಲ್ಲಿಯೇ ಇದ್ದವು. ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದನು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ಯಲ್ಲಪ್ಪನಿಗೆ ಕೇಳಿದಾಗ ಟ್ರ್ಯಾಕ್ಟರ ನಂ. ಕೆಎ 33 ಟಿಎ 4109 ಮತ್ತು ಟ್ರ್ಯಾಲಿ ನಂ. ಕೆಎ 33 ಟಿಎ 4808 ನೇದ್ದನ್ನು ಅದರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಕೊಂಕಲ್ ಕಡೆಯಿಂದ ಚಲಾಯಿಸಿಕೊಂಡು ಬಂದು ನಿಮ್ಮ ಮಗನಿಗೆ ಡಿಕ್ಕಿಪಡಿಸಿ, ಸ್ವಲ್ಪ ಮುಂದೆ ಹೋಗಿ ಟ್ರ್ಯಾಕ್ಟರ ನಿಲ್ಲಿಸಿ, ಕೆಳಗೆ ಇಳಿದು ಬಂದು ನೋಡಿ ಅಲ್ಲಿಂದ ಓಡಿ ಹೋದನು. ಆಗ ತಕ್ಷಣ ನಾನು ಹೋಗಿ ನೋಡಲಾಗಿ ನಿಮ್ಮ ಮಗನಿಗೆ ಅಪಘಾತದಲ್ಲಿ ತೆಲೆಗೆ ಭಾರಿ ಹರಿದ ರಕ್ತಗಾಯ ಮತ್ತು ಅಲ್ಲಲ್ಲಿ ಗಾಯಗಳಾಗಿರುತ್ತವೆ ಅಂತಾ ಹೇಳಿದನು. ಆಗ ನನ್ನ ಮಗನಿಗೆ ಕೂಡಲೇ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರಕ್ಕೆ ಬಂದು ಅಲ್ಲಿಂದ 108 ಅಂಬುಲೇನ್ಸನಲ್ಲಿ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ವಿಚಾರಣೆ ಮಾಡಲು ಬಂದಾಗ ನನ್ನ ಮಗನು ಇನ್ನು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಇದ್ದುದ್ದರಿಂದ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ನಂತರ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೆವೆ. ಕಾರಣ ಮೋಟರ್ ಸೈಕಲ್ ಮೇಲೆ ಹೊರಟ ನನ್ನ ಮಗನಿಗೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ್ದರಿಂದ ಭಾರಿ ಗಾಯಗೊಂಡು ಪ್ರಜ್ಞಾಹಿನ ಸ್ಥಿತಿಯಲ್ಲಿ ಉಪಚಾರ ಪಡೆಯುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2019 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 57/2019 ಕಲಂ: 87 ಕೆ.ಪಿ ಆ್ಯಕ್ಟ್:- ದಿನಾಂಕ: 18/06/2019 ರಂದು 5-30 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ರವರು ಹಾಜರಾಗಿ 4 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 18/06/2019 ರಂದು ಗೊಂದೇನೂರ ಗ್ರಾಮದ ಪಂಪಯ್ಯ ಸ್ವಾಮಿ ಯವರ ಹೋಟೆಲ್ ಮುಂದಿನ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಹಣಮಂತ ತಂದೆ ಕೃಷ್ಣಪ್ಪ ಅಗಸಲರ್ ವ:35, ಜಾ:ಅಕ್ಕಸಾಲಿಗ ಉ: ಅಕ್ಕಸಾಲಿಗ ಕೆಲಸ ಸಾ:ಗೊಂದೆನೂರ ಇವನ ಹತ್ತಿರ 1520=00 ರೂ. ನಗದು ಹಣ ಮತ್ತು ಕೈಯಲ್ಲಿ 19 ಇಸ್ಪೇಟ್ ಎಲೆಗಳು ಇದ್ದವು, 2) ಹುಸೇನಭಾಷ ತಂದೆ ಬಾಬು ಅಂಗಡಿ, ವ:30, ಜಾ:ಮುಸ್ಲಿಂ, ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಚನ್ನೂರ ಇವನ ಹತ್ತಿರ ನಗದು ಹಣ 1300=00 ರೂ., 3) ಕಲ್ಲಪ್ಪ ತಂದೆ ದೊಡ್ಡಬಸಣ್ಣ ವರಿಕೇರಿ, ವ:37, ಜಾ:ಕುರುಬರ, ಉ:ಒಕ್ಕಲುತನ ಸಾ:ಗೊಂದೆನೂರ ಇವನ ಹತ್ತಿರ ನಗದು ಹಣ 980=00 ರೂ, 4) ಉಸ್ಮಾನಸಾಬ ತಂದೆ ನಬಿಸಾಬ ಚೌದರಿ ವ:60 ಜಾ:ಮುಸ್ಲಿಂ ಉ:ಕಟುಗರ ಸಾ:ಗೊಂದೆನೂರ ಇವನ ಹತ್ತೀರ ನಗದು ಹಣ 560=ರೂ, ಇಸ್ಪೀಟ ಆಡುತ್ತಿದ್ದ ಸ್ಥಳದಲ್ಲಿ ಎಲ್ಲರ ಮದ್ಯದ ನಗದು ಹಣ 320=00 ರೂ. ಹಾಗೂ 33 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಹೀಗೆ ಒಟ್ಟು 4680=00 ರೂ.ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಸದರಿ 4 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲ ಮಾಡಿಕೊಳ್ಳಲು ಅನುಮತಿ ನೀಡಿದ್ದರಿಂದ 9-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 57/2019 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ದಿನಾಂಕ:18/06/2019 ರಂದು 4 ಎ.ಎಮ್. ಸುಮಾರಿಗೆ ಪಿ.ಎಸ್.ಐ ರವರು ಮುಡಬೂಳ ಗ್ರಾಮದಲ್ಲಿ ಎನ್.ಆರ್.ಸಿ ಕರ್ತವ್ಯ ನಿರ್ವಹಿಸುತ್ತಿರುವಾಗ ಯಾರೋ ಟ್ರಾಕ್ಟರದಲ್ಲಿ ಅಕ್ರಮವಾಗಿ ಹಳ್ಳದ ಮರಳನ್ನು ತುಂಬಿಕೊಂಡು ಶಹಾಪುರದಿಂದ ಕೋಡಮನಳ್ಳಿಯ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ 4.30 ಎ.ಎಮ್.ಕ್ಕೆ ಹುಲಕಲ್ ಗ್ರಾಮದ ಹೊತಪೇಟ ಕ್ರಾಸ್ ಹತ್ತಿರ ಬಂದು ನಿಂತಾಗ ಶಹಾಪುರ ಕಡೆಯಿಂದ ಐಷರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ್ ಇರುವದಿಲ್ಲ, ಅದರ ಇಂಜಿನ್ ನಂ:ಜೆ69911, ಚೆಸ್ಸಿ ನಂ:927213095240 ನೇದ್ದರಲ್ಲಿ ಆರೋಪಿ ಬಸವರಾಜ ತಂದೆ ಮಲ್ಲಪ್ಪ ಭಾವಿಮನಿ ವ:22ವರ್ಷ, ಜಾ:ಹೊಲೆಯ, ಉ:ಟ್ರಾಕ್ಟರ್ ಚಾಲಕ, ಸಾ:ಕನ್ಯಾಕೋಳೂರ ತಾ:ಶಹಾಪುರ ಈತನು ಟ್ರ್ಯಾಕ್ಟರ್ದಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಹಳ್ಳದ ಮರಳು ತುಂಬಿಕೊಂಡು ಬಂದಾಗ ಸದರಿ ಮರಳಿನ (ಉಸಿಕಿ) ನ ಬಗ್ಗೆ ಹಾಗು ಹಾಗೂ ಟ್ರ್ಯಾಕ್ಟರ್ ಮಾಲೀಕನ ಬಗ್ಗೆ ಮತ್ತು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿದ ಬಗ್ಗೆ ಚಾಲಕನಿಗೆ ವಿಚಾರಿಸಲಾಗಿ ಅವನು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿರುವುದಿಲ್ಲ, & ಸದರಿ ಟ್ರ್ಯಾಕ್ಟರ್ ಮಾಲಿಕ ಶರಬಣ್ಣ ತಂದೆ ಬಸವರಾಜ ನಾಯ್ಕೋಡಿ ಸಾ:ಕನ್ಯಾಕೋಳೂರ ಇರುವದಾಗಿ ತಿಳಿಸಿದ್ದು ಆಗ ಆರೋಪಿತನಿಗೆ ಮತ್ತು ವಾಹನ ಹಾಗು ಅದರಲ್ಲಿದ್ದ ಮರಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದರಿಂದ ಅದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಡಿದ್ದು ಇರುತ್ತದೆ.
ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 79/2019 ಕಲಂ 323, 324, 504, 506 ಐಪಿಸಿ :- ದಿನಾಂಕ 18/06/2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಫಿಯರ್ಾದಿಯ ಅಣ್ಣನಾದ ಆರೋಪಿತನು ತನ್ನ ತಾಯಿಯೊಂದಿಗೆ ಜಗಳ ಮಾಡುತ್ತ ಕೈಯಿಂದ ಹೊಡೆದು ದಬ್ಬಿಸಿಕೊಡುತ್ತಿದ್ದಾಗ, ಫಿಯರ್ಾದಿ ಹೋಗಿ ಯಾಕೆ ತಂದೆ ತಾಯಿಯೊಂದಿಗೆ ಜಗಳ ಮಾಡುತ್ತಿ ಅಂತ ಹೇಳಿ ಬಿಡಿಸಿಕೊಳ್ಳಲು ಹೋದಾಗ, ಆರೋಪಿತನು ಎಲೇ ಶರಣ್ಯಾ ಅದನ್ನು ಕೇಳಲು ನೀನ್ಯಾರಲೇ ಸೂಳೇ ಮಗನೆ ಅಂತ ಅಂದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಬೆನ್ನಿಗೆ, ಎದೆಗೆ ಹೊಡೆಬಡೆ ಮಾಡಿ ಇನ್ನೊಮ್ಮೆ ನನ್ನ ಕೈಯಲ್ಲಿ ಸಿಗು ಖಲಾಸ ಮಾಡುತ್ತೇನೆ ಅಂತ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ.:- 48/2019 ಕಲಂ. 143 420 468 471 ಸಂ. 149 ಐಪಿಸಿ:-ದಿನಾಂಕ:18/06/2019 ರಂದು 14.45 ಪಿ.ಎಮ್ ಗಂಟೆಗೆ ಠಾಣೆಯ ಅಯ್ಯುಭಖಾನ ಪಿಸಿ-305 ರವರು ಮಾನ್ಯ ಸಿಪಿಐ ಹುಣಸಗಿ ರವರ ಕಾಯರ್ಾಲದಿಂದಾ ಒಂದು ಜ್ಞಾಪನ ಪತ್ರದೊಂದಿ ಮಾನ್ಯೆ ಜೆ.ಎಂ.ಎಫ್.ಸಿ ಕೋರ್ಟ ಶೋರಾಪುರ ರವರ ಖಾಸಗಿ ದೂರು ನಂ.07/2017 ದಿನಾಂಕ:09/02/2019 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ ಆರೋಪಿತರು ಪಿಯರ್ಾದಿಗೆ ಸೇರಿದ ಹುಣಸಗಿ ಸೀಮಾಂತರ ಜಮೀನು ಸವರ್ೆ ನಂ. 164/ಅ ರಲ್ಲಿ ಮೋಸತನದಿಂದಾ ಕೃತಕ ದಸ್ತವೇಜಗಳನ್ನು ತಯಾರಿಸಿ ಪಿಯರ್ಾದಿ ಜಮೀನದಲ್ಲಿ ನಿವೇಶನಗಳನ್ನು ತಮ್ಮ ಹೆಸರಿಗೆ ವಗರ್ಾವಣೆ ಮಾಡಿಕೊಂಡಿರುತ್ತಾರೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ.:-49/2019 ಕಲಂ. 143 420 468 471 ಸಂ. 149 ಐಪಿಸಿ:-ದಿನಾಂಕ:18/06/2019 ರಂದು 15.30 ಪಿ.ಎಂ ಗಂಟೆಗೆ ಠಾಣೆಯ ಅಯೂಬ್ಖಾನ ಪಿಸಿ-305 ರವರು ಮಾನ್ಯ ಸಿಪಿಐ ಹುಣಸಗಿ ರವರ ಕಾಯರ್ಾಲದಿಂದಾ ಒಂದು ಜ್ಞಾಪನ ಪತ್ರದೊಂದಿ ಮಾನ್ಯೆ ಜೆ.ಎಂ.ಎಫ್.ಸಿ ಕೋರ್ಟ ಶೋರಾಪುರ ರವರ ಖಾಸಗಿ ದೂರು ನಂ.41/2017 ದಿನಾಂಕ:14/06/2019 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ ಆರೋಪಿತರು ಪಿಯರ್ಾದಿಗೆ ಸೇರಿದ ಹುಣಸಗಿ ಸೀಮಾಂತರ ಜಮೀನು ಸವರ್ೆ ನಂ. 164/ಅ ರಲ್ಲಿ ಮೋಸತನದಿಂದಾ ಕೃತಕ ದಸ್ತವೇಜಗಳನ್ನು ತಯಾರಿಸಿ ಪಿಯರ್ಾದಿ ಜಮೀನದಲ್ಲಿ ನಿವೇಶನಗಳನ್ನು ತಮ್ಮ ಹೆಸರಿಗೆ ವಗರ್ಾವಣೆ ಮಾಡಿಕೊಂಡಿರುತ್ತಾರೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 137/2019 ಕಲಂ: 498(ಎ), 304(ಬಿ), ಸಂ. 34 ಐಪಿಸಿ ಮತ್ತು 3, 4 ಡಿ.ಪಿ ಆಕ್ಟ್:- ದಿನಾಂಕಃ 18/06/2019 ರಂದು 11-30 ಎ.ಎಮ್ ಕ್ಕೆ ಫಿಯರ್ಾದಿ ಶ್ರೀ ಅಲ್ಲಾವುದ್ದಿನ್ ತಂದೆ ಪೀರ ಮಹ್ಮದ ಪಿಂಜಾರ ಸಾ: ಸೋಮನಮರಡಿ ತಾ: ದೇವದುರ್ಗ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಹಿರಿಯ ಮಗಳಾದ ಹಫೀಜಾ ಬೇಗಂ ಇವಳಿಗೆ ದಿನಾಂಕಃ 21/12/2018 ರಂದು ಸೋಮನಮರಡಿ ಗ್ರಾಮದಲ್ಲಿರುವ ನಮ್ಮ ಮನೆಯ ಮುಂದೆ ಮುಸ್ಲಿಂ ಸಂಪ್ರದಾಯದಂತೆ ಹಾಲಬಾವಿ ಗ್ರಾಮದ ಖಾಸಿಂಸಾಬ ತಂದೆ ಮೈನೊದ್ದಿನ್ ನದಾಫ್ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆ ಸಮಯದಲ್ಲಿ ನಿಶ್ಚಯ ಕಾಲಕ್ಕೆ ಮಾತನಾಡಿದ ಪ್ರಕಾರ ವರನ ಕಡೆಯವರಿಗೆ 2 ತೊಲೆ ಬಂಗಾರ, 20 ಸಾವಿರ ರೂ. ಹಾಗೂ ಅಂದಾಜು 30 ಸಾವಿರ ರೂಪಾಯಿ ಕಿಮ್ಮತ್ತಿನ ಗೃಹ ಉಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತೇವೆ. ಮದುವೆ ನಂತರ ನನ್ನ ಮಗಳು ಸುಮಾರು ಎರಡು ತಿಂಗಳು ತನ್ನ ಗಂಡನೊಂದಿಗೆ ಚೆನ್ನಾಗಿ ಜೀವನ ನಡೆಸಿದ್ದು, ಬಳಿಕ ಆವಾಗಾವಾಗ ನಮ್ಮ ಮಗಳು ಹಬ್ಬ ಹರಿದಿನಗಳಿಗೆ ನಮ್ಮ ಮನೆಗೆ ಬಂದಾಗ ಮತ್ತು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮಗಳನ್ನು ನೋಡಲು ಅವಳ ಗಂಡನ ಮನೆಗೆ ಹೋದಾಗ, ಅವಳು ನಮಗೆ, ತಿಳಿಸುತ್ತಿದ್ದೇನೆಂದರೆ, ನನ್ನ ಗಂಡನಾದ ಖಾಸಿಂಸಾಬ ತಂದೆ ಮೈನೊದ್ದಿನ್ ನದಾಫ್, ಅತ್ತೆ ಹುಸೇನಬೀ ಗಂಡ ಮೈನೊದ್ದಿನ್ ನದಾಫ, ಗಂಡನ ಅಜ್ಜಿ ಸೈದಾಬೀ ಗಂಡ ಲಾಲಸಾಬ ನದಾಫ, ಹಾಗು ನನ್ನ ಗಂಡನ ಚಿಕ್ಕಪ್ಪನಾದ ಸುಭಾನಸಾಬ ತಂದೆ ಲಾಲಸಾಬ ನದಾಫ ಇವರು ನನಗೆ ದಿನನಿತ್ಯ ಮನೆಯಲ್ಲಿ ವರದಕ್ಷಿಣೆ ವಿಷಯದಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕಳ ನೀಡಲು ಪ್ರಾರಂಭಿಸಿದ್ದು, ನೀನು ನಮ್ಮ ಮನೆತನಕ್ಕೆ ಒಪ್ಪುವ ಹಾಗೆ ಹಣ, ಬಂಗಾರ ಕೊಟ್ಟಿಲ್ಲಾ, ಇನ್ನೂ 1 ಲಕ್ಷ ರೂಪಾಯಿ ವರದಕ್ಷಿಣೆ ಹಾಗು ಫ್ರಿಜ್, ಎರಕೂಲರ್, ಬಟ್ಟೆ ಹೊಲೆಯುವ ಮಶೀನ್ ತರುವಂತೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಅಂತಾ ವಿಷಯವನ್ನು ತಿಳಿಸಿದಾಗ ನಾವು ಅವಳಿಗೆ ಸಮಾಧಾನ ಮಾಡಿ ಗಂಡನ ಮನೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಬುದ್ಧಿ ಹೇಳಿರುತ್ತೇವೆ. ಈಗ 10-15 ದಿನಗಳ ಹಿಂದೆ ಸಹ ಅವರೆಲ್ಲರೂ ವರದಕ್ಷಿಣೆ ವಿಷಯವಾಗಿ ತುಂಬಾ ಕಿರುಕುಳ ನೀಡುತ್ತಿದ್ದಾರೆ ನನಗೆ ಬದುಕಲು ಆಗುತ್ತಿಲ್ಲ, ನೀವು ಬಂದು ಅವರಿಗೆ ವರದಕ್ಷಿಣೆ ಕೊಡ್ರಿ ಅಂತಾ ತಿಳಿಸಿದಾಗ, ನಾವು ಅವಳಿಗೆ ಆಯಿತು ಇನ್ನು ನಾಲ್ಕೈದು ದಿನ ಬಿಟ್ಟು ಹಾಲಬಾವಿಗೆ ಬಂದು ನಿನ್ನ ಗಂಡ ಅತ್ತೆಯವರಿಗೆ ಭೇಟಿ ಮಾಡಿ ಸಮಾಧಾನದಿಂದ ಇರುವಂತೆ ಹೇಳಿ ಬರುತ್ತೇವೆ ಅಂತ ಸಮಾಧಾನ ಮಾಡಿ ಹಬ್ಬ ಆದ ನಂತರ ನಾವು ಹಾಲಬಾವಿ ಗ್ರಾಮಕ್ಕೆ ಹೋಗಿ ನನ್ನ ಅಳಿಯ ಹಾಗು ಬೀಗರಾದ ಹುಸೇನಬೀ, ಸೈದಾಬೀ, ಸುಭಾನಸಾಬ ಇವರನ್ನು ಭೇಟಿಮಾಡಿ ನನ್ನ ಮಗಳು ಹೇಳಿದ ವಿಷಯವನ್ನು ತಿಳಿಸಿ ಅವರಿಗೆ ನನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳಿ, ನೀವು ಕೇಳಿದ 1 ಲಕ್ಷ ರೂಪಾಯಿ ಹಾಗು ಗೃಹ ಉಪಯೋಗಿ ವಸ್ತುಗಳು ನಮಗೆ ಕೊಡಲು ಆಗುವದಿಲ್ಲ, ಮದುವೆ ಕಾಲಕ್ಕೆ ನೀವು ಕೇಳಿದ ಹಣ, ಬಂಗಾರ ಕೊಟ್ಟಿರುತ್ತೇವೆ ಅಂತಾ ಹೇಳಿದಾಗ, ಅವರು ಹಾಗೋ, ಕೋಡಲಾಗದಿದ್ದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿರಿ ಅಂತಾ ಹೆದರಿಸಿದಾಗ, ಆಗ ನನ್ನ ಚಿಕ್ಕಪ್ಪನಾದ ದೊಡ್ಡಹುಸೇನಸಾಬ ಇವರು ನಮ್ಮ ಬೀಗರನ್ನು ಸಮಾಧಾನ ಮಾಡಿ, ಈಗಾಗಲೇ ಹುಡುಗಿಯ ತಂದೆ, ಮತ್ತು ಅಣ್ಣಂದಿರು ಬೆಂಗಳೂರಿಗೆ ದುಡಿಯಲು ಹೋಗಿದ್ದು, ಆದಷ್ಟು ಬೇಗನೆ 50 ಸಾವಿರ ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಮಗಳನ್ನು ಗಂಡನ ಮನೆಯಲ್ಲಿಯೇ ಬಿಟ್ಟು ಬಂದಿದ್ದು ಇರುತ್ತದೆ. ದಿನಾಂಕಃ 12/06/2019 ರಂದು ನ್ನನ ಮಗಳು ನಮಗೆ ಫೋನ್ ಮಾಡಿ ನನ್ನ ಗಂಡ, ಅತ್ತೆ, ನಾನಿ ಸೈದಾಬಿ ಮತ್ತು ಮಾಮು ಸುಭಾನಸಾಬ ಇವರುಗಳು 1 ಲಕ್ಷ ಹಣ ತರುವಂತೆ ದಿನ ನಿತ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕಳ ನೀಡುತ್ತಿದ್ದಾರೆ ಅಂತಾ ವಿಷಯ ತಿಳಿಸಿದಾಗ ನಾವು ಆಯಿತು ಆದಷ್ಟು ಬೇಗನೆ ಕೊಡುತ್ತೇವೆ ಅಲ್ಲಿಯವರೆಗೂ ತಾಳಿಕೊಂಡು ಇರು ಅಂತ ತಿಳಿಸಿದ್ದೇವು. ದಿನಾಂಕ: 15/06/2019 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ನನ್ನ ಅಳಿಯನ ಚಿಕ್ಕಪ್ಪನಾದ ಸುಭಾನಸಾಬ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಇಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ನಿಮ್ಮ ಮಗಳಾದ ಹಫೀಜಾ ಬೇಗಂ ಇವಳು ಮನೆಯಲ್ಲಿ ಯಾರು ಇರಲಾರದ ಸಮಯದಲ್ಲಿ ತಮ್ಮ ಮನೆಯಲ್ಲಿರುವ ಕಬ್ಬಿಣದ ಪೈಪಿಗೆ ಓಡಣಿ ಕಟ್ಟಿ ಕುತ್ತಿಗೆಗೆ ಉರಲು ಹಾಕಿಕೊಂಡಿದ್ದರಿಂದ ಆಕೆಯ ಗಂಡ ಅದನ್ನು ನೋಡಿ ಉರಲು ತಗೆದಿದ್ದು, ನಂತರ ಆಕೆಗೆ ನಾವು ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಲಿಂಗಸುಗೂರ ಸಕರ್ಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಪರೀಕ್ಷಿಸಿ ಬಾಗಲಕೋಟ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿರುವದರಿಂದ ಬಾಗಲಕೋಟಿಗೆ ಹೊರಟಿದ್ದೇವೆ ಅಂತ ತಿಳಿಸಿದನು. ಆಗ ಅವತ್ತು ಬೆಂಗಳೂರಿನಲ್ಲಿ ಇದ್ದುದ್ದರಿಂದ ಊರಲ್ಲಿದ್ದ ನನ್ನ ಹೆಂಡತಿ ಹಾಗು ಮಗನಾದ ನಬೀ ರಸೂಲ್ ಇಬ್ಬರಿಗೆ ಹೋಗಲು ತಿಳಿಸಿದಾಗ ಅವರಿಬ್ಬರೂ ಅಂದೇ ರಾತ್ರಿ 10 ಗಂಟೆಗೆ ಬಾಗಲಕೋಟ ನಗರದಲ್ಲಿರುವ ಕೆರೂಡಿ ಆಸ್ಪತ್ರೆಗೆ ಹೋಗಿ ನೋಡಿದ್ದು ನನ್ನ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ತೀವೃನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನನಗೆ ಫೋನ್ ಮಾಡಿ ಹೇಳಿದ್ದರಿಂದ, ನಾನು ಮತ್ತು ಪೀರ್ ಮಹ್ಮದ್ ಇಬ್ಬರೂ ಬೆಂಗಳೂರಿನಿಂದ ಹೊರಟು ಮರುದಿವಸ ದಿನಾಂಕಃ 16/06/2019 ರಂದು 2 ಪಿ.ಎಮ್ ಕ್ಕೆ ಬಾಗಲಕೋಟ ಆಸ್ಪತ್ರೆಗೆ ಹೋಗಿ ನೋಡಿರುತ್ತೇವೆ. ಕೆರೂಡಿ ಆಸ್ಪತ್ರೆಯಲ್ಲಿ ನನ್ನ ಮಗಳು ಉಪಚಾರ ಪಡೆಯುತ್ತಿದ್ದರೂ ಸ್ವಲ್ಪವು ಚೇತರಿಕೆ ಕಾಣಲಾರದ ಕಾರಣ ನಾವು ಗಂಡ-ಹೆಂಡತಿ, ಮಕ್ಕಳು ನನ್ನ ಮಗಳಿಗೆ ರಾಯಚೂರಿಗೆ ಕರೆದುಕೊಂಡು ಹೋಗಬೇಕೆಂದು ಇಂದು ದಿನಾಂಕಃ 18/06/2019 ರಂದು ರಾತ್ರಿ 00-30 ಎ.ಎಮ್ ಸುಮಾರಿಗೆ ಕೆರೂಡಿ ಆಸ್ಪತ್ರೆಯಿಂದ ನಾವು ಬಿಡುಗಡೆ ಮಾಡಿಸಿಕೊಂಡು ಅಂಬುಲೇನ್ಸ್ ವಾಹನದಲ್ಲಿ ನನ್ನ ಮಗಳಿಗೆ ಹಾಕಿಕೊಂಡು ರಾಯಚೂರ ಕಡೆಗೆ ಹೊರಟಿದ್ದಾಗ 2-20 ಎ.ಎಮ್ ಸುಮಾರಿಗೆ ಲಿಂಗಸೂಗೂರ ಹತ್ತಿರ ನನ್ನ ಮಗಳು ಮೃತಪಟ್ಟಿದ್ದರಿಂದ ಅಲ್ಲಿಂದ ನನ್ನ ಮಗಳ ಶವವನ್ನು ಅಲ್ಲಿಂದ ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ನನ್ನ ಮಗಳಾದ ಹಫೀಜಾಬೇಗಂ ಗಂಡ ಖಾಸಿಂಸಾಬ ನದಾಫ್ ಇವಳಿಗೆ ಆಕೆಯ ಗಂಡ, ಅತ್ತೆ, ಗಂಡನ ಅಜ್ಜಿ ಹಾಗು ಗಂಡನ ಚಿಕ್ಕಪ್ಪ ಇವರು ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದರಿಂದ ಅವರ ಕಿರುಕುಳ ತಾಳಲಾರದೆ ತಮ್ಮ ಮನೆಯಲ್ಲಿ ಉರಲು ಹಾಕಿಕೊಂಡಿದ್ದರಿಂದ ಉಪಚಾರ ಕೊಡಿಸಿದರೂ ಗುಣಮುಖವಾಗದೇ ಮೃತಪಟ್ಟಿದ್ದು, ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 137/2019 ಕಲಂ. 498(ಎ), 304(ಬಿ), ಸಂ. 34 ಐಪಿಸಿ ಮತ್ತು 3, 4 ಡಿ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
Hello There!If you like this article Share with your friend using