ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-06-2019
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 41/2019 ಕಲಂ 279, 337 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್:- ದಿನಾಂಕ 17/06/2019 ರಂದು ಬೆಳಿಗ್ಗೆ 7 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ ಗಾಯಾಳುಗಳು ಮಾತನಾಡದ ಸ್ಥಿತಿಯಲ್ಲಿರದ ಕಾರಣ ಗಾಯಾಳುವಿನ ತಾಯಿಯಾದ ಪಿಯರ್ಾದಿ ಶ್ರೀಮತಿ ಮರೆಮ್ಮ ಗಂಡ ಹಂಪಯ್ಯ ಬಂದಳ್ಳೇರ ವಯ;45 ವರ್ಷ, ಜಾ;ಪ.ಜಾತಿ(ಹೊಲೆಯ), ಉ;ಕೂಲಿ ಕೆಲಸ, ಸಾ;ಅಲ್ಲಿಪುರ, ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 17/06/2019 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನನ್ನ ಮಗನಾದ ಅಜರ್ುನ ವಯ;23 ವರ್ಷ ಈತನು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ತಯಾರಾಗಿ ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಯು-1601 ನೇದ್ದನ್ನು ತೆಗೆದುಕೊಂಡು ತನ್ನ ಸಂಗಡ ನಮ್ಮ ಸಂಬಂಧಿ ಹುಡುಗನಾದ ಸಾಬಣ್ಣ ತಂದೆ ಹಣಮಂತ ಬಂದಳ್ಳೇರ ವಯ;20 ವರ್ಷ, ಈತನಿಗೆ ಕೂಡಿಸಿಕೊಂಡು ನನ್ನ ಮಗ ಅಜರ್ುನ ಈತನು ಮೋಟಾರು ಸೈಕಲ್ ನಡೆಸಿಕೊಂಡು ಹೋಗಿದ್ದು ಇರುತ್ತದೆ. ಹೀಗಿದ್ದು ಸ್ವಲ್ಪ ಸಮಯದ ನಂತರ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿಯಾದ ಶ್ರೀ ಮರೆಪ್ಪ ತಂದೆ ರಾಮಣ್ಣ ಬಂದಳ್ಳೇರ ಈತನು ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನಾನು ಮತ್ತು ಸಾಬಣ್ಣ ತಂದೆ ಭಾಗಪ್ಪ ಬಂದಳ್ಳೇರ ಇಬ್ಬರು ಕೂಡಿಕೊಂಡು ಅಲ್ಲಿಪುರ ಕ್ರಾಸ್ ಹತ್ತಿರ ಹೊಟೆಲ್ನಲ್ಲಿ ಚಹಾ ಕುಡಿಯುತ್ತಿರುವಾಗ ನಿಮ್ಮ ಮಗ ಮತ್ತು ಸಾಬಣ್ಣ ಬಂದಳ್ಳೇರ ಇಬ್ಬರು ಮೋಟಾರು ಸೈಕಲ್ ಮೇಲೆ ಯಾದಗಿರಿ ಕಡೆಗೆ ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ವಾಡಿ ರಸ್ತೆಯಿಂದ ಯಾದಗಿರಿಗೆ ಹೊರಟಿದ್ದ ಒಂದು ಭಾರತ್ ಬೆಂಜ್ ಟಿಪ್ಪರ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ಮಗ ಅಜರ್ುನ ನಡೆಸಿಕೊಂಡು ಹೊರಟಿದ್ದ ಮೋಟಾರು ಸೈಕಲ್ ನೇದ್ದಕ್ಕೆ ಲಾರಿ ಚಾಲಕನು ಹಿಂದಿನಿಂದ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ನಿಮ್ಮ ಮಗ ಅಜರ್ುನ ಮತ್ತು ಸಾಬಣ್ಣ ಇಬ್ಬರು ಮೋಟಾರು ಸೈಕಲ್ ಮೇಲಿಂದ ಸಿಡಿದು ರಸ್ತೆ ಮೇಲೆ ಬಿದ್ದಾಗ ನಾವಿಬ್ಬರು ಓಡೋಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಿಮ್ಮ ಮಗ ಅಜರ್ುನ ಈತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ ಮೋಟಾರು ಸೈಕಲ್ ಹಿಂದೆ ಕುಳಿತಿದ್ದ ಸಾಬಣ್ಣ ತಂದೆ ಹಣಮಂತ ಬಂದಳ್ಳೇರ ಈತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತಗಾಯ ಬಂದಿದ್ದು, ಹಣೆಗೆ, ಬಲಗಾಲಿನ ತೊಡೆಗೆ, ಎಡಗಾಲು ಪಾದದ ಮೇಲೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಇರುತ್ತವೆ. ಸದರಿ ಅಪಘಾತವು ಇಂದು ದಿನಾಂಕ 17/06/2019 ರಂದು ಬೆಳಿಗ್ಗೆ 5-45 ಎ.ಎಂ.ಕ್ಕೆ ಜರುಗಿದ್ದು ಅಪಘಾತ ಪಡಿಸಿದ ಟಿಪ್ಪರ್ ಸ್ಥಳದಲ್ಲಿದ್ದು ಅದರ ನಂಬರ ಕೆಎ-32, ಡಿ-3291 ನೇದ್ದು ಇದ್ದು, ಟಿಪ್ಪರ್ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನನ್ನು ನಾವುಗಳು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಆಗ ನಾನು 108 ಅಂಬುಲೆನ್ಸ್ ಗೆ ಪೋನ್ ಮಾಡಿ ನಿಮಗೆ ಕರೆಯಲು ಬಂದಿದ್ದು ನಡೀರಿ ಸ್ಥಳಕ್ಕೆ ಹೋಗೋಣ ಅಂದಾಗ ನಾನು ಮರೆಪ್ಪ ಇವರ ಮೋಟಾರು ಸೈಕಲ್ ಮೇಲೆ ಹೊರಟು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ಇರುತ್ತದೆ. ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಾಗ ಉಪಚಾರ ಕುರಿತು ನಾನು, ಮರೆಪ್ಪ ಹಾಗೂ ಸಾಬಣ್ಣ ತಂದೆ ಭಾಗಪ್ಪ ಕೂಡಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಇಂದು ದಿನಾಂಕ 17/06/2019 ರಂದು ಸಮಯ ಬೆಳಿಗ್ಗೆ 5-45 ಎ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆ ಮೇಲೆ ಬರುವ ಅಲ್ಲಿಪುರ ಕ್ರಾಸ್ ಹತ್ತಿರ ಆರೋಪಿತನು ತನ್ನ ಟಿಪ್ಪರ್ ನಂಬರ ಕೆಎ-32, ಡಿ-3291 ನೇದ್ದರ ಚಾಲಕನು ನಮ್ಮ ಮಗನ ಮೋಟಾರು ಸೈಕಲ್ ನಂಬರ ಕೆಎ-33, ಯು-1601 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಅಪಘಾತ ಪಡಿಸಿದ ಟಿಪ್ಪರ್ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 8-30 ಎ.ಎಂ.ಕ್ಕೆ ಬಂದು ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 41/2019 ಕಲಂ 279, 337, 338 ಐಪಿಸಿ ಸಂಗಡ ಕಲಂ 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 60/2019 ಕಲಂ: 279, 304(ಎ) ಐಪಿಸಿ ಸಂಗಡ 187 ಐ.ಎಂ. ವ್ಹಿ ಆಕ್ಟ್:- ದಿನಾಂಕ: 17/06/2019 ರಂದು 3.30 ಪಿಎಂಕ್ಕೆ ಪಿಯರ್ಾದಿ ನಾಗಪ್ಪ ತಂದೆ ಶರಣಪ್ಪ ಕೋಟಿ ವಯಾ:55 ವಷರ್್ ಉ: ಹೋಟೆಲ ಕೆಲಸ ಜಾ: ಸಾಳೇರ ಸಾ: ಲಕ್ಷ್ಮಾಂಪೂರ ತಾ: ಸುರಪೂರ ಜಿ: ಯಾದಗಿರಿ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದರ ಸಾರಂಶವೆನಂದರೆ, ಹೋಟೆಲ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ,. ಹೀಗಿದ್ದು, ನಮ್ಮ ತಾಯಿಯ ತಂಗಿಯಾದ ಸೋನಾಬಾಯಿ @ ರಂಗಮ್ಮ ಗಂಡ ಹಣಮಂತ ಶ್ರೀರಾಮ ವಯಾ:65 ವರ್ಷ ಉ: ಕೂಲಿ ಜಾ: ಸಾಳೇರ ಸಾ: ಲಕ್ಷ್ಮಂಪೂರ ತಾ: ಸುರಪೂರ ಇವರಿಗೆ ಮದುವೆ ಆದ ನಂತರ ಮಕ್ಕಳು ಆಗಿರುವದಿಲ್ಲ. ಗಂಡ ಬಹಳ ದಿನಗಳ ಹಿಂದೆಯೇ ಬಿಟ್ಟಿರುತ್ತಾನೆ. ಗಂಡ ಬಿಟ್ಟಾಗಿಂದ ನಮ್ಮ ತಂಗಿಯಾದ ಸಿದ್ದಮ್ಮ ಇವಳಿಗೆ ದತ್ತು ತಗೆದುಕೊಂಡಿರುತ್ತಾಳೆ. ನಮ್ಮ ತಂಗಿ ಮತ್ತು ಅವಳ ಗಂಡ ಹಣಮಂತ್ರಾಯ ಇಬ್ಬರು ಬೆಂಗಳೂರಿಗೆ ದುಡಿಯಲು ಹೋಗಿರುತ್ತಾರೆ. ಊರಲ್ಲಿ ನಮ್ಮ ಚಿಕ್ಕಮ್ಮ ಒಬ್ಬಳೆ ಇರುತ್ತಾಳೆ. ಹಿಗಿದ್ದು ಇಂದು ದಿನಾಂಕ:17/06/2019 ರಂದು ಬೆಳಿಗ್ಗೆ 09.00 ಎಎಂ ಸುಮಾರಿಗೆ ತನ್ನ ಕೆಲಸ ಇದೆ ಅಂತಾ ಹೇಳಿ ರಾಜಾಪೂರಕ್ಕೆ ಹೋಗಿ ಬರುವದಾಗಿ ಹೇಳಿ ಹೋಗಿದ್ದಳು. ನಮ್ಮ ಉರಲ್ಲಿ ಸುದ್ದಿಯಾಗಿ ನಮ್ಮ ಚಿಕ್ಕಮ್ಮ ರಾಜಾಪೂರಕ್ಕೆ ಹೋಗುವಾಗ ಒಂದು ಟಂಟಂ ಅಟೋದಲ್ಲಿ ಹೋಗಿದ್ದು ಸದರಿ ಅಟೋ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಇಂದು ದಿನಾಂಕ:17/06/2019 ರಂದು ಬೆಳಿಗ್ಗೆ 11.30 ಎಎಂ ಸುಮಾರಿಗೆ ಹೋಸ್ಕೇರಾ ದಾಟಿ ರಾಜಶೇಖರ ಕೋರಿ ಇವರ ಹೊಲದ ಪಕ್ಕದಲ್ಲಿ ರೋಡಿನಲ್ಲಿ ಅಪಘಾತ ಮಾಡಿದ್ದು ಅಟೋ ಟಂಟಂ ರೋಡಿನ ಪಕ್ಕದಲ್ಲಿ ತಗ್ಗಿನಲ್ಲಿ ಬಿದ್ದಿರುವದಾಗಿ ಗೋತ್ತಾಗಿ, ನಾನು ಮತ್ತು ನಮ್ಮ ಮಗನಾದ ಶರಣಪ್ಪ ಮತ್ತು ನಮ್ಮೂರಿನ ಮಲ್ಲಯ್ಯ ತಂದೆ ಭಿಮರಾಯ ಮಟ್ಟಾ, ಸಾಹೇಬಗೌಡ ತಂದೆ ಮಲ್ಕಪ್ಪ ಗಡ್ಡಿಮನಿ ಎಲ್ಲರೂ ಕೂಡಿ 01.30 ಪಿಎಂ ಸುಮಾರಿಗೆ ಸ್ಥಳಕ್ಕೆ ಬಂದು ನೋಡಲಾಗಿ ಹೋಸ್ಕೆರಾ ರಾಜಾಪೂರ ರೋಡಿನಲ್ಲಿನ ರಾಜಶೇಖರ ಕೋರಿ ಇವರ ಹೊಲದ ಪಕ್ಕದಲ್ಲಿ ರೋಡಿನ ಪಕ್ಕದಲ್ಲಿ ಟಂಟಂ ಅಟೋ ಪಲ್ಟಿಯಾಗಿ ತಗ್ಗಿನಲ್ಲಿ ಬಿದ್ದಿದ್ದು, ಅದರ ಕೆಳಗೆ ನಮ್ಮ ಚಿಕ್ಕಮ್ಮ ಸೋನಾಬಾಯಿ @ ರಂಗಮ್ಮ ಇವಳು ಬಿದ್ದಿದ್ದು, ನಾವುಗಳೂ ಅಟೋ ಎತ್ತಿ ನಿಲ್ಲಿಸಿ ಕೆಳಗೆ ಬಿದ್ದಿದ್ದ ನಮ್ಮ ಚಿಕ್ಕಮ್ಮ ಇವಳನ್ನು ನೋಡಲಾಗಿ ಎಡಗಡೆಯ ಮೆಲಕಿಗೆ, ರಕ್ತಗಾಯ, ತರಚಿದ ಗಾಯಗಳಾಗಿದ್ದು, ಎಡಗಡೆಯ ಹಣೆಗೆ, ತಲೆಗೆ ಗುಪ್ತ ಪೆಟ್ಟಾಗಿ ಎರಡು ಕಿವಿಯಿಂದ ಮೂಗಿನಿಂದ ರಕ್ತ ಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು, ನಂತರ ನಾವು ಅದರಿ ಟಂಟಂ ಅಟೋ ನಂಬರ ನೋಡಲಾಗಿ ಕೆಎ-33-ಎ-7162 ಅಂತಾ ಇತ್ತು. ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಮಾನಪ್ಪ ತಂದೆ ಮಲ್ಲಪ್ಪ ಹವಾಲ್ದಾರ ಸಾ: ರಾಜಾಪೂರ ಅಂತಾ ತಿಳಿದು ಬಂದಿತು. ಸದರಿಯವನು ಅಪಘಾತ ಮಾಡಿ ಸ್ಥಳದಲ್ಲಿಂದ ಓಡಿ ಹೋಗಿರುತ್ತಾನೆ. ಮತ್ತು ಅಟೋದಲ್ಲಿ ಯಂಕೋಬಾ ತಂದೆ ನಿಂಗಪ್ಪ ಹಾವಿನಾಳ ಸಾ: ರಾಜಾಪುರ ಇವರು ಇದ್ದು ಸದರಿಯವರಿಗೆ ಯಾವುದೆ ಗಾಯಗಳಾಗಿರುವದಿಲ್ಲ ಅಂತಾ ತಿಳಿದು ಬಂದಿರುತ್ತದೆ. ನಮ್ಮ ಚಿಕ್ಕಮ್ಮಳ ಶವವನ್ನು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಈಗ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ನಮ್ಮ ಚಿಕ್ಕಮ್ಮ ಇವಳು ಕುಳಿತು ಹೋಗುತ್ತಿದ್ದ ಟಂಟಂ ಅಟೋ ನಂ: ಕೆಎ-33-ಎ-7162 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿ ನಮ್ಮ ಚಿಕ್ಕಳ ಸಾವಿಗೆ ಕಾರಣನಾದ ಮಾನಪ್ಪ ತಂದೆ ಮಲ್ಲಪ್ಪ ಹವಾಲ್ದಾರ ಸಾ: ರಾಜಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 60/2019 ಕಲಂ:279, 304(ಎ) ಐಪಿಸಿ 187 ಐ.ಎಂ.ವ್ಹಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 97/2019 ಕಲಂ ಕಲಂ 323, 326, 504, 506 ಸಂಗಡ 34 ಐಪಿಸಿ:-ದಿನಾಂಕ 17-06-2019 ರಂದು 7-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾರ ಶ್ರೀಮತಿ ಹಣಮಿಬಾಯಿ ಗಂಡ ಲಕ್ಷ್ಮಣ ಚವ್ಹಾಣ ವಯಾ: 55 ಉ: ಕೂಲಿ ಜಾ: ಲಂಬಾಣಿ ಸಾ: ಕ್ಯಾಸಪ್ಪನಳ್ಳಿ ತಾಂಡಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ ನಮ್ಮ ತಾಂಡಾದ ಬೋಜು ತಂದೆ ಸಕ್ರು ರಾಠೋಡ ಇತನು ನಮ್ಮ ತಾಂಡಾದಲ್ಲಿ ಪಂಪ ಆಪರೇಟರ್ ಅಂತಾ ಕೆಲಸ ಮಾಡುತ್ತಾರೆ. ನಮ್ಮ ತಾಂಡಾದ ಗೋಪು ಪವಾರ ತಂದೆ ಥಾವರು ಮತ್ತು ಇವರ ಮಗನಾದ ಮೋಹನ ತಂದೆ ಗೋಪು ಪವಾರ ಇವರಿಬ್ಬರೂ ಬೋಜು ಇತನಿಗೆ ನಮ್ಮ ಮನೆಯ ಕಡೆಗೆ ನೀನು ಸರಿಯಾಗಿ ಬೀಡುವುದಿಲ್ಲಾ ನೀನು ಹೀಗೆ ಮಾಡಿದರೆ ನಿನ್ನ ಪರಣಾಮ ನೆಟ್ಟಗಿರೋಲ್ಲ ಅಂತಾ ಆತನಿಗೆ ಅಂಜಿಸುತ್ತಾ ಬಂದಿರುತ್ತಾರೆ. ದಿನಾಂಕ 16-06-2019 ರಂದು ರಾತ್ರಿ 8 ಗಂಟೆ ಸುಮಾರಿಗೆ ಬೋಜು ತಂದೆ ತಂದೆ ಸಕ್ರು ರಾಠೋಡ ಮತ್ತು ನನ್ನ ಗಂಡನಾದ ಲಕ್ಷ್ಮಣ ತಂದೆ ಗಂಗಾರಾಮ ಚವ್ಹಾಣ ಇಬ್ಬರೂ ಮಾತಾಡುತ್ತಾ ಬೋಜು ಇವರ ಮನೆಯ ಮುಂದೆ ನಿಂತಿದ್ದರು. ನಾನು ಕೂಡಾ ಅಲ್ಲಿಯೇ ಸಮೀಪ ನಿಂತಿದ್ದೆನು. ಅದೇ ವೇಳೆಗೆ ಗೋಪು ತಂದೆ ಥಾವರು ಮತ್ತು ಇವರ ಮಗನಾದ ಮೋಹನ ತಂದೆ ಗೋಪು ಇವರಿಬ್ಬರೂ ಬಂದವರೇ ಬೋಜು ತಂದೆ ಸಕ್ರು ರಾಠೋಡ ಇತನಿಗೆ ಒಮ್ಮೇಲೆ ಎಲೇ ಚಿನಾಲಿ ಸೂಳೆ ಮಗನೇ ನಿನಗೆ ಮೊದಲಿನಿಂದಲೂ ನಮ್ಮ ಮನೆಯ ಕಡೆಗೆ ನೀರು ಸರಿಯಾಗಿ ಬಿಡುತ್ತಿಲ್ಲಾ ಬೋಳಿ ಮಗನೇ ತಂಡಾದಲ್ಲಿ ನಿನ್ನ ಸೊಕ್ಕು ಜಾಸ್ತಿ ಆಗಿದೆ ಅಂತಾ ಬೈಯಹತ್ತಿದನು. ಆಗ ಬೋಜು ತಂದೆ ಸಕ್ರು ರಾಠೋಡ ಇವನು ಮತ್ತು ನನ್ನ ಗಂಡ ಇಬ್ಬರೂ ಅವರಿಗೆ ಹಿಗೇಲ್ಲಾ ಬೈಯ್ಯುವುದು ಸರಿಯಲ್ಲಾ ಒಂದೊಂದು ಸಲ ಹೀಗಾಗುತ್ತದೆ ಸ್ವಲ್ಪ ನೋಡಿಕೊಂಡು ಮಾತಾಡಬೇಕು ಅಂತಾ ಅನ್ನುವಷ್ಟರಲ್ಲಿ ಮಕ್ಕಳೇ ನಮಗೆ ಎದರು ಮಾತಾಡುತ್ತಿರೇನು ಅಂತಾ ಅಂದವರೇ ಅವರಲ್ಲಿ ಮೋಹನ ತಂದೆ ಗೋಪು ಇತನು ಬೋಜು ತಂದೆ ಸಕ್ರು ರಾಠೋಡ ಇತನಿಗೆ ಹೊಡೆಯಲು ಹೋದಾಗ ಅಲ್ಲಿಯೇ ಇದ್ದ ನನ್ನ ಗಂಡ ಲಕ್ಷ್ಮಣ ಇತನು ಜಗಳಾ ಬಿಡಿಸಲು ಮಧ್ಯ ಹೋದಾಗ ಆಗ ಗೋಪು ತಂದೆ ಥಾವರು ಇತನು ಮಗನೇ ನಿನಾಕೇ ನಮ್ಮ ಜಗಳದಲ್ಲಿ ಬಂದಿದ್ದಿ ಭೋಸಡಿ ಮಗನೇ ಅಂತಾ ಅಂದವನೇ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ನನ್ನ ಗಂಡನ ಬಲಗಾಲು ತೊಡೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಮತ್ತು ಇಬ್ಬರೂ ಕೂಡಿ ನನ್ನ ಗಂಡನಿಗೆ ಕೈಯಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಗುದ್ದಿದರು. ಆಗ ಅಲ್ಲಿಯೇ ಇದ್ದ ನಾನು ಮತ್ತು ಬೋಜು ತಂದೆ ಸಕ್ರು ರಾಠೋಡ, ರಮೇಶ ತಂದೆ ಥಾವರು ಚವ್ಹಾಣ, ಜಗಧೀಶ ತಂದೆ ಭೋಜು ರಾಠೊಡ ಎಲ್ಲರೂ ಕೂಡಿ ನನ್ನ ಗಂಡನಿಗೆ ಹೋಡೆಯುವುದನ್ನು ಬಿಡಿಸಿಕೊಂಡೆವು. ಆಗ ಅವರು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದರು. ನನ್ನ ಗಂಡನಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು, ನನ್ನ ಗಂಡನಿಗೆ ಹೊಡೆಬಡಿ ಮಾಡಿ ಭಾರಿರಕ್ತಗಾಯ ಗೊಳಿಸಿದ್ದರ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸಿದ್ದು ಈ ಬಗ್ಗೆ ಗೋಪು ತಂದೆ ಥಾವರು ಮತ್ತು ಇವರ ಮಗನಾದ ಮೋಹನ ತಂದೆ ಗೋಪು ಇವರಿಬ್ಬರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಫಿರ್ಯಾಧಿ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 96/2019 ಕಲಂ 323, 326, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 33/2019 ಕಲಂ: 143,147,148,323,324,504,506 ಸಂಗಡ 149 ಐಪಿಸಿ:-ದಿನಾಂಕ:17.06.2019 ರಂದು ಹೆಸಿ-143 ಪ್ರಕಾಶ ರವರು ಲಿಂಗಸೂರು ಸಕರ್ಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರ ಪಿರ್ಯಾಧಿಯ ಹೇಳಿಕೆಯನ್ನು ಮುಂದಿನ ಕ್ರಮಕ್ಕಾಗಿ ಇಂದು ದಿನಾಂಕ:17.06.2019 ರಂದು ರಾತ್ರಿ 8:30 ಪಿಎಮ್ಕ್ಕೆ ಠಾಣೆಗೆ ತಂದು ನನ್ನ ಮುಂದೆ ಹಾಜರ ಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ ಹೆಂಡತಿ ಶ್ರೀದೇವಿ, ತಾಯಿ ಶ್ರೀದೇವಿಯವರೊಂದಿಗೆ ವಾಸವಾಗಿದರಿತ್ತೇನೆ. ನಾನು ಸಿಂದನೂರು ಕೆಎಸ್ಆರ್ಟಿಸಿ ಬಸ್ ಡೀಪೂದಲ್ಲಿ ಕಂಡಕ್ಟರ್ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಸಿಂದನೂರದಿಂದ ಕಕ್ಕೇರಾಕ್ಕೆ ಹೋಗಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸುಮಾರು 16-17 ವರ್ಷಗಳ ಹಿಂದೆ ನಮ್ಮ ಅಕ್ಕನಾದ ಅಮೃತಬಾಯಿ ಗಂಡ ಮಾನಪ್ಪ ಸಾ: ಕಕ್ಕೇರಾ ರವರ ಮಗಳಾದ ಶ್ರೀದೇವಿಯೊಂದಿಗೆ ಲಗ್ನವಾಗಿದ್ದು ಇರುತ್ತದೆ. ಈಗ ಕೆಲವು ತಿಂಗಳುಗಳಿಂದ ನಮಗೂ ಮತ್ತು ನನ್ನ ಹೆಂಡತಿ ಶ್ರೀದೇವಿಗೂ ಸಂಸಾರದ ವಿಷಯದಲ್ಲಿ ಮನಸ್ತಾಪವಾಗಿ ನನ್ನ ಹೆಂಡತಿ ತನ್ನ ತವರೂ ಮನೆಯಲ್ಲಿ ತನ್ನ ತಾಯಿ ಅಮೃತಬಾಯಿಯೊಂದಿಗೆ ವಾಸವಾಗಿರುತ್ತಾಳೆ. ನಾನು ಮತ್ತು ನನ್ನ ತಾಯಿ ಶ್ರೀದೇವಿ ಕಕ್ಕೇರಾದ ಕಾಳಮ್ಮ ಗಂ ದೇವಿಂದ್ರಪ್ಪ ಬಡಿಗೇರ ರವರ ಮನೆಯಲ್ಲಿ ಬಾಡಿಗೆ ಇರುತ್ತೇವೆ.ಹೀಗಿದ್ದು ನಾನು ದಿನಾಂಕ;10.06.2019 ರಂದು ನನ್ನ ಕರ್ತವ್ಯ ಮುಗಿಸಿಕೊಂಡು ಸಿಂದನೂರದಿಂದ ರಾತ್ರಿ 10;00 ಗಂಟೆಯ ಸುಮಾರಿಗೆ ಕಕ್ಕೇರಾದ ಮನೆಗೆ ಬಂದಿದ್ದು. ನನ್ನ ತಾಯಿ ಶ್ರೀದೇವಿಯು ಅಳುತ್ತಾ ನನ್ನ ಹೆಂಡತಿ ಶ್ರೀದೇವಿಯು ನಮ್ಮ ಮನೆಯಿಂದ 5:00 ಪಿಎಮ್ ಕ್ಕೆ ಬಂದು ಸೂಳಿ ರಂಡಿ ಬೋಸಡಿ ನಿನ್ನ ಮಗ ನನಗೆ ದುಡಿದು ಪಗಾರ ಕೊಡುವದಿಲ್ಲಾ ಎಲ್ಲಾ ತಿಂಗಳ ಪಗಾರ ನಿನಗೆ ಕೊಡುತ್ತಾನೆ. ಹೇಗೆ ಜೀವನ ಸಾಗಿಸಬೇಕು ಅಂತಾ ಮನಸ್ಸಿಗೆ ಬಂದಂತೆ ಅವಾಚ್ಯವಾಗಿ ಬೈದು ಹೋಗಿದ್ದಾಳೆ ಅಂತಾ ನನ್ನ ತಾಯಿ ತಿಳಿಸಿದ್ದು. ನಾನು ಮತ್ತು ನನ್ನ ತಾಯಿ ಊಟ ಮಾಡಿ ಮಲಗಿದ್ದು ಇರುತ್ತದೆ. ದಿನಾಂಕ;11.06.2019 ರಂದು ಮುಂಜಾನೆ 11;00 ಎಎಮ್ಕ್ಕೆ ಸುಮಾರಿಗೆ ನನ್ನ ಹೆಂಡತಿ ಶ್ರೀದೇವಿಯು ನನ್ನ ಮನೆಗೆ ಕರೆದು ನನ್ನ ತಾಯಿಗೆ ಯಾಕೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಿ ಅಂತಾ ಕೇಳಿದಕ್ಕೆ ಏಲೇ ಬಸ್ಯಾ ನೀನು ನನ್ನ ಗಂಡ, ಅಲ್ಲಾ ನನಗೇಕೆ ಪಗಾರು ಕೊಡುವದಿಲ್ಲಾ, ಎಲ್ಲಾ ಪಗಾರ ನಿನ್ನ ತಾಯಿಗೆ ಕೊಡುತ್ತಿ ಅಂದವಳೇ ನನ್ನ ಕಣ್ಣಲ್ಲಿ ಖಾರದ ಪುಡಿ ಉಗ್ಗಿದಳು. ಅಷ್ಟರಲ್ಲಿ ಅವಳ ತಾಯಿ ಅಮೃತಬಾಯಿ ಗಂಡ ಮಾನಪ್ಪ ಹಾಗೂ ಗುರಪ್ಪ ತಂದೆ ಲಚುಮಪ್ಪ ಪತ್ತಾರ ಹಾಗೂ ದೇವಿಂದ್ರಪ್ಪ ತಂದೆ ಯಮನಪ್ಪ, ಸಂಗಪ್ಪ ಬಡಿಗೇರ ರವರು ನಾವು ವಾಸಿಸುವ ಬಾಡಿಗೆ ಮನೆಯ ಹತ್ತಿರದಲ್ಲಿ ಬಂದವರೇ ಶ್ರೀದೇವಿ ಮತ್ತು ಗುರಪ್ಪ ನನಗೆ ಹಿಡಿದ್ದಿದ್ದು. ನನ್ನ ಹೆಂಡತಿಯ ಕಣ್ಣಲ್ಲಿ ಖಾರದ ಪುಡಿ ಹಾಕಿದಳು. ದೇವೀಂದ್ರಪ್ಪ ತಂದೆ ಯಮನಪ್ಪ ಬಡಿಗೇರ ಹಾಗೂ ಸಂಗಪ್ಪ ಬಡಿಗೇರ ಇಬ್ಬರೂ ಕೂಡಿ ಅಲ್ಲಯೇ ಬಿದ್ದ ಕಲ್ಲು ಬಡಿಗೆಗಳಿಂದ ಹೊಡೆದಿದ್ದು. ನನಗೆ ಬಲಗಾಲಿನ ಮೊಲಕಾಲಿನ ಕೆಳಗೆ ಕಲ್ಲಿನಿಂದ ಹೊಡೆದ ಗಾಯವಾಗಿದ್ದು. ಗುದ್ದು ಬಿದ್ದು ರಕ್ತಗಾಯವಾಗಿರುತ್ತದೆ. ಎಡಗೈ ಮೊಲಕೈಗೆ ಎಡಬುಜಕ್ಕೆ, ತೆಲೆಯ ಮೇಲೆ ಎಡಕಪಾಳಕ್ಕೆ ಕಟ್ಟಿಗೆಯಿಂದ ಹೊಡೆದು ತೆರೆಚಿದ ಗಾಯ ಪಡಿಸಿರುತಾಳೆ. ಸೊಂಟಕ್ಕೆ ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ಸುರೇಶ ರೆಡ್ಡಿ ತಂದೆ ನರಸಿಂಹಮೂತರ್ಿ ಹಾಗೂ ನನ್ನ ಅಣ್ಣ ದೇವೀಂದ್ರಪ್ಪ ತಂದೆ ಆದಪ್ಪ ನನ್ನ ತಾಯಿ ಶ್ರೀದೇವಿ ಗಂಡ ಆದಪ್ಪ ರವರು ಜಗಳ ಬಿಡಿಸಿರುತ್ತಾರೆ. ಇವರು ಬಂದು ಜಗಳ ಬಿಡಿಸದಿದ್ದರೆ ನನಗೆ ಇನ್ನೂ ಹೊಡೆಯುತ್ತಿದ್ದರು ಹೋಗುವಾಗ ಎಲ್ಲರೂ ಎಲೇ ಸೂಳೆ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಮ್ಮೆ ನಮ್ಮ ಕೈಗೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ. ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇಬ್ಬರೇ ಇರುವದರಿಂದ ಆಸ್ಪತ್ರೆಗೆ ಹೋಗಿರುವದಿಲ್ಲಾ. ದಿನಾಂಕ:16.06.2019 ರಂದು ನಮ್ಮ ಅಣ್ಣ ದೇವಿಂದ್ರಪ್ಪನು ನನಗೆ ತಾಲೂಕ ಕಛೇರಿ ಆಸ್ಪತ್ರೆ ಲಿಂಗಸೂದಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ವಿನಾ ಕಾರಣ ನಮ್ಮ ಮನೆಗೆ ಬಂದು ನನಗೆ ಅವಾಚ್ಯಾ ಶಬ್ದಗಳಿಂದ ಬೈದು ಕಲ್ಲಿನಿಂದ ಬಡಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 33/2019 ಕಲಂ 143,147,148,323,324,504,506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
Hello There!If you like this article Share with your friend using