ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-06-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 96/2019 ಕಲಂ 447 ಐಪಿಸಿ:-ದಿನಾಂಕ 14-06-2019 ರಂದು ಬೆಳಿಗ್ಗೆ 9-00 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಜಿನಕೇರಾ ಗ್ರಾಮದ ಸೀಮೆಯಲ್ಲಿ ಬರುವ ಫಿರ್ಯಾಧಿ ತಂದೆಯ ಹೆಸರಿಗೆ ಇದ್ದ ಹೊಲ ಸವರ್ೆ ನಂ 205/ಅ ನೆದ್ದರ ಆಕಾರ 3 ಎಕರ 17 ಗುಂಟೆ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಗಳೆ ಹೊಡೆದಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 150/2019 ಕಲಂ 279,338 ಐಪಿಸಿ ಮತ್ತು 187 ಐಎಂವಿ ಯಾಕ್ಟ:- ದಿನಾಂಕ 16/06/2019 ರಂದು 4.00 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ಟರಕಿ ವ|| 34ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ದಿವಳಗುಡ್ಡ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 15/06/2019 ರಂದು 4.00 ಪಿಎಮ್ ಸುಮಾರಿಗೆ ನಾನು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಹತ್ತಿಗುಡೂರ ಹತ್ತಿರದ ದೇವದುರ್ಗ ಕ್ರಾಸಿಗೆ ಬಂದು ನನ್ನ ಕೆಲಸ ಮುಗಿಸಿಕೊಂಡು ನಂತರ ಮರಳಿ ನಮ್ಮೂರಾದ ದಿವಳಗುಡ್ಡ ಗ್ರಾಮಕ್ಕೆ ನನ್ನ ಟಂ ಟಂ ಅಟೋ ನಂ ಕೆಎ 33 ಎ 9261 ನೇದ್ದನ್ನು ನಾನು ನಡೆಸಿಕೊಂಡು ಹೋಗುತ್ತಿದ್ದಾಗ ದೇವದುರ್ಗ ಕ್ರಾಸಿನಲ್ಲಿ ನನಗೆ ಪರಿಚಯವಿರುವ ಬಿಜಾಸ್ಪೂರ ಗ್ರಾಮದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ವ|| 58ವರ್ಷ ಈತನು ನನ್ನ ಅಟೋಗೆ ಕೈ ಮಾಡಿ ಬಿಜಾಸ್ಪೂರ ವರೆಗೂ ಬರುತ್ತೇನೆ ಅಂದಿದ್ದಕ್ಕೆ ನಾನು ನನ್ನೊಂದಿಗೆ ನನ್ನ ಅಟೋದಲ್ಲಿ ಹಣಮಂತನಿಗೆ ಕರೆದುಕೊಂಡು ಹೋಗುತ್ತಿದ್ದಾಗ 6.00 ಪಿಎಂ ಸುಮಾರಿಗೆ ಶಹಾಪೂರ- ಸುರಪೂರ ರಸ್ತೆಯ ಮಂಡಗಳ್ಳಿ ಪೆಟ್ರೋಲ್ ಪಂಪ ಹತ್ತಿರ ಇರುವ ರೋಡ ಹಂಪನ್ನು ನಿಧಾನವಾಗಿ ದಾಟುತ್ತಿದ್ದಾಗ ಹಿಂದಿನಿಂದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಟಂ ಟಂ ಅಟೋಕ್ಕೆ ಡಿಕ್ಕಿಪಡಿಸಿದನು. ಆಗ ನಮ್ಮ ಅಟೋ ಪಲ್ಟಿಯಾಗಿ ಬಿದ್ದಿದ್ದು ಅಟೋದಲ್ಲಿ ಕುಳಿತಿದ್ದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ಈತನು ಕೆಳಗೆ ಬಿದ್ದಿದ್ದು ಆತನ ಬಲಗೈಗೆ ಭಾರೀ ಒಳಪೆಟ್ಟಾಗಿ ಕೈ ಮುರಿದಂತೆ ಆಗಿದ್ದು, ಗದ್ದಕ್ಕೆ, ಮೂಗಿನ ಹತ್ತಿರ, ಹಣೆಗೆ ತರಚಿದ ರಕ್ತಗಾಯ, ತಲೆಯ ಬಲಗಡೆಗೆ ರಕ್ತಗಾಯ, ಬೆನ್ನಿಗೆ, ಭುಜಕ್ಕೆ ಒಳಪೆಟ್ಟು ಮತ್ತು ಬಲಗಾಲಿಗೆ ಭಾರೀ ಒಳಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ನನಗೆ ಯಾವುದೇ ಗಾಯಗಳಾಗಿರಲಿಲ್ಲ. ನಂತರ ನಾನು ಮತ್ತು ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ನಮ್ಮೂರ ಗುರುರಾಜ ತಂದೆ ಬೀರಪ್ಪ ಕುರಿ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಣಮಂತನಿಗೆ ಕರೆದುಕೊಂಡು ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಶಹಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ವೈದ್ಯರ ಸಲಹೆಯ ಮೇರೆಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಮ್ಮ ಅಟೋಕ್ಕೆ ಡಿಕ್ಕಿಪಡಿಸಿ ಅಪಘಾತ ಮಡಿದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ನಾನು ನಿನ್ನೆ ದಿನಾಂಕ 15/06/2019 ರಂದು ಅವಸರದಲ್ಲಿ ಹಣಮಂತನಿಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.ಆದ್ದರಿಂದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ನನ್ನ ಸ್ವಂತ ಟಂ ಟಂ ಅಟೋ ನಂ ಕೆಎ 33 ಎ 9261 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರೀ ಸ್ವರೂಪದ ಗಾಯವಾಗಲು ಕಾರಣನಾದ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 150/2019 ಕಲಂ 279,338 ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using