ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-06-2019

By blogger on ಗುರುವಾರ, ಜೂನ್ 13, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-06-2019 

ಯಾದಗಿರಿ ಮಹಿಳಾ  ಪೊಲೀಸ್ ಠಾಣೆ ಗುನ್ನೆ ನಂ:- 19/2019 ಕಲಂ: 341, 323.504.506.354 ಸಂ/ 34  ಐ.ಪಿ.ಸಿ ಮತ್ತು 3(1) (ಆರ್) (ಎಸ್) (ಡಬ್ಲೂ) ಎಸ್. ಸಿ/ ಎಸ್.ಟಿ ಎಕ್ಟ್ -ಪಿ.ಎ ಎಕ್ಟ್ -1989:- ದಿನಾಂಕ: 13.06.2019 ರಂದು ಮದ್ಯಾಹ್ನ 1.30 ಪಿ.ಎಂಕ್ಕೆ ಪಿರ್ಯಾಧಿ ಲತಾ ಗಂಡ ದಿ|| ವಿನೋಧ ಜಾಧವ ವಯಾ-25 ಸಾ- ಗಾಂಧಿ ನಗರ ತಾಂಡಾ ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಏನೆಂದರೆ ಯಾಧಗಿರಿ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಬರುವ ಡಿ.ಹೆಚ್.ಓ ಕಾಯರ್ಾಲಯದಲ್ಲಿ ನಾನು ಡಿ. ಗ್ರೂಫ್ ನೌಕರಳೆಂದು ಕೆಲಸ ಮಾಡಿಕೊಂಡು ಇರುತ್ತೇನೆ. ಅದೇ ರೀತಿ ನಮ್ಮ ತಾಂಡದ ನಮ್ಮ ಮನೆಯ ಹತ್ತಿರ ಇರುವ ಎಂ.ಡಿ ಖಾಜಾ ತಂದೆ ಯಾಕೂಬ್ ಎಂಬುವನು ಕೂಡ .ಜಿಲ್ಲಾ ಪಂಚಾಯತಿ ಕಾರ್ಯಲಯದಲ್ಲಿ ಡಿ. ಗ್ರೂಫ್ ಅಂತ ಕೆಲಸ ಮಾಢಿಕೊಂಡು ಇದ್ದು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದು ಇರುತ್ತದೆ. ಇಬ್ಬರಿಗೂ ಸುಮಾರು ದಿವಸಗಳಿಂದ ಪರಿಚಯವಿರುತ್ತದೆ. ಸದರಿ ಎಂ.ಡಿಖಾಜಾ ಈತನು ನನಗೆ ಆಗಾಗೆ ಲೈಗಿಂಕ ಕಿರುಕುಳ ಕೊಡುವುದು ಮತ್ತು ನಾನು ಮನೆಯಿಂದ ಕೆಲಸಕ್ಕೆ ಹೋಗುವಾಗ ನನಗೆ ತಡೆದು ನಿಲ್ಲಿಸಿ ಅವ್ಯಾಚವಾಗಿ ಬೈಯುವುದು ಮಾಡುತ್ತಿದ್ದನು. ದಿನಾಂಕ: 06.06.2019 ರಂದು ನಾನು ಡಿ.ಹೆಚ್.ಓ ಆಫೀಸನಲ್ಲಿ ಕೆಲಸ ಮಾಡಿ ನನ್ನ ಮೊಬೈಲ್ ನೋಡುತ್ತಾ ಕುಳಿತ್ತಿದ್ದಾಗ ಏಕಾಏಕಿ ಅವನು ನನ್ನ ಹತ್ತಿರ ಬಂದು ನನ್ನ ಮೊಬೈಲನ್ನು ಕಸಿದುಕೊಂಡು ಓಡಿ ಹೋದನು. ನಾನು ಅವನಿಗೆ ಬೆನ್ನು ಹತ್ತಿ ಮೊಬೈಲ್ ಕೊಡು ಅಂತ ಕೇಳಿದರೆ ಕೊಡುವುದಿಲ್ಲಾ ಅಂತ ಹೇಳಿ ನನಗೆ ಅವ್ಯಾಚವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಕುತ್ತಿಗೆ ಹಿಸಕಲು ಬಂದು ನನ್ನ ಕಪಾಳಕ್ಕೆ ಹೊಡೆದು ಅಲ್ಲಿಂದ ಓಡಿ ಹೋದನು. ಪುನಃ ದಿನಾಂಕ: 07.06.2019 ರಂದು ನಾನು ನನ್ನ  ಮನೆಯ ಹತ್ತಿರ ಇದ್ದಾಗ ಅವನ ತಾಯಿ ಜಲಾಲಬೀ ಗಂಡ ಯಾಕೂಬ್ ಈಕೆಯು ಬಂದು ನನ್ನ ಮಗನ ಮೇಲೆ ಕೇಸು ಮಾಡಬ್ಯಾಡ ಅಂತ ಕೈಮುಗಿದು ಕೇಳಿಕೊಂಡಳು ಆಗ ನಾನು ನನ್ನ ಮೊಬೈಲ್ ಕೊಡಸಿರಿ ನಾನು ಏನು ಮಾಡುವುದಿಲ್ಲಾ ಅಂತ ಅಂದಾಗ ಅವಳು ಮನೆಗೆ ಹೋಗಿ ತನ್ನ ಮಗನಿಗೆ ಕರೆದುಕೊಂಡು ಬಂದಳು ಆಗ ನನ್ನ ಮೊಬೈಲ್ ಕೇಳಿದಾಗ ಅವನು ನನ್ನ ಹತ್ತಿರ ಇರುವುದಿಲ್ಲಾ ಅಂತ ಹೇಳಿದನು ಮಾತಿಗೆ ಮಾತು ಬೆಳೆದು ಇಬ್ಬರೂ ಕೂಡಿ ನನ್ನ ಸಂಗಡ ಜಗಳಕ್ಕೆ ಬಿದ್ದು ನನಗೆ ಹೊಡೆಬಡೆ ಮಾಡಿದ್ದು ಅವ್ಯಾಚವಾಗಿ ಬೈದು ಅವನು ನನ್ನ ಕೈ ಹಿಡಿದು ಜಗ್ಗಾಡಿ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಕ್ರಮ ಜರುಗಿಸಬೇಕು ಅಂತ ಕೊಟ್ಟ ದೂರಿನ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 341, 323.504.506.354 ಸಂ/ 34  ಐ.ಪಿ.ಸಿ ಮತ್ತು 3(1) (ಆರ್) (ಎಸ್) (ಡಬ್ಲೂ) ಎಸ್. ಸಿ/ ಎಸ್.ಟಿ ಎಕ್ಟ್ -ಪಿ.ಎ ಎಕ್ಟ್ -1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.                        

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ: 78() ಕೆ.ಪಿ ಯಾಕ್ಟ್:- ದಿನಾಂಕ: 13/06/2019 ರಂದು ಆರೋಪಿತನು ನಾರಾಯಣಪೂರ ಗ್ರಾಮದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಹೋಗಿ ದಾಳಿ ಮಾಡಿ ಈ ಬಗ್ಗೆ 10:40 ಎ.ಎಮ್. ದಿಂದ 11:40 ಎ.ಎಮ್.ದವರೆಗೆ ಪಂಚನಾಮೆ ಕೈಗೊಂಡು ಆರೋಪಿತನಿಂದ  2330/-ರೂ ನಗದು ಹಣ, ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಸಂಖ್ಯೆಗಳನ್ನು ಬರೆದ ಎರಡು ಚೀಟಿಯನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ನೀಡಿದ ಜಪ್ತಿ ಪಂಚನಾಮೆಯ ಹಾಗೂ ಜ್ಞಾಪನ ಪತ್ರದ  ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಕ್ರಮ ಜರುಗಿಸಿದ್ದು ಅದೆ.  

                                                                                                                         
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 145/2019 ಕಲಂ 279,283 ಐಪಿಸಿ:-ದಿನಾಂಕ 13/06/2019 ರಂದು 5.00 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಶಹಾಪೂರದಿಂದ ದೂರವಾಣಿ ಮೂಲಕ ಎಂಎಲ್ ಸಿ ವಸೂಲಾದ ಮೇರೆಗೆ ಸರ್ಕರಿ ಆಸ್ಪತ್ರೆಗೆ ಹೋಗಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುವಾದ ವೀರೇಶ ನೇರಡಗಿ ಈತನಿಗೆ ವಿಚಾರಿಸಲಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಅಲ್ಲಿ ಹಾಜರಿದ್ದ ಅಪಘಾತದ ಪ್ರತ್ಯಕ್ಷ ಸಾಕ್ಷಿದಾರರಾದ ಸಿದ್ದಪ್ಪ ತಂದೆ ಶರಣಪ್ಪ ಜೇವಗರ್ಿ ವ|| 21ವರ್ಷ ಜಾ|| ಕುರುಬರ ಉ|| ವಿದ್ಯಾಥರ್ಿ ಸಾ|| ಹೊನಗುಂಟಾ ತಾ|| ಶಹಾಬಾದ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಳ್ಳಲಾಗಿ ಸಿದ್ದಪ್ಪನು ಐಸಿಐಸಿಐ ಬ್ಯಾಂಕಿನ ಹತ್ತಿರ ರಸ್ತೆಯ ಮೇಲೆ 4.40 ಪಿಎಂ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಐಸಿಐಸಿಐ ಬ್ಯಾಂಕಿನ ಮುಂದಿನ ಮುಖ್ಯ ರಸ್ತೆಯ ಮೇಲೆ ಸಿದ್ರಾಮಯ್ಯ ಗುರುವಿನಮಠ ಈತನು ತನ್ನ ಮೋಟಾರ ಸೈಕಲ್ಲನ್ನು ಯಾವುದೇ ಮುನ್ಸೂಚನೆ ಇಲ್ಲದೇ ಅಲಕ್ಷತನದಿಂದ ರಸ್ತೆಯ ಮೇಲೆ ಅಡ್ಡವಾಗಿ ನಿಲ್ಲಿಸಿದ್ದು ಆಗ ವೀರೇಶ ನೇರಡಗಿ ಈತನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಿಲ್ಲಿಸಿದ್ದ ಸಿದ್ರಾಮಯ್ಯನ ಮೋಟಾರ ಸೈಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ವೀರೇಶನು ಕೆಳಗೆ ಬಿದ್ದಿದ್ದು ತಲೆಗೆ, ಎಡಗಿವಿಯ ಹಿಂದೆ ಮತ್ತು ಎರಡೂ ಕಣ್ಣುಗಳ ಮೇಲೆ ರಕ್ತಗಾಯವಾಗಿದ್ದು ತಕ್ಷನ ಅವನಿಗೆ ಎಬ್ಬಿಸಿ ಸಿದ್ದಪ್ಪನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿ ಅಪಘಾತಕ್ಕೆ ಸಿದ್ರಾಮಯ್ಯನು ಯಾವುದೇ ಮುನ್ಸೂಚನೆ ಇಲ್ಲದೇ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲ್ಲನ್ನು ಅಡ್ಡಲಾಗಿ ನಿಲ್ಲಿಸಿ ಅಲಕ್ಷತನ ಮಾಡಿದ್ದು ಮತ್ತು ವೀರೇಶನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಿದ್ರಾಮಯ್ಯನ ಮೋಟಾರ ಸೈಕಲ್ಲಿಗೆ ಡಿಕ್ಕಿಪಡಿಸಿ ಅಪಘತ ಮಾಡಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 145/2019 ಕಲಂ 279,283 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 132/2019 ಕಲಂ 323,324,341,504,506 ಸಂ. 34 ಐಪಿಸಿ:-ದಿನಾಂಕ:13-06-2019 ರಂದು 4-45 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಸುರಪುರ ಸರಕಾರಿ ಆಸ್ಪತ್ರೆಯಿಂದ ಎಮ್ಎಲ್ಸಿ ಇದೆ ಅಂತಾ ಬಾತ್ಮಿ ಬಂದ ಮೇರೆಗೆ 5 ಪಿ.ಎಂ.ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ಕಾಸಿಂ ಅಲಿ ಪಿರಾಪೂರ ಈತನ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸಾರಾಂಶವೆನೆಂದರೆ ಚಿಕ್ಕನಳ್ಳಿ ಸೀಮಾಂತರದ ಸವರ್ೆ ನಂ. 155/*/5 ನೇದ್ದರಲ್ಲಿ ನಮ್ಮ ತಮ್ಮನಾದ ಖಾಜೇಸಾಬ ತಂದೆ ಪೀರಸಾಬ್ ಇವನ ಹೆಸರಿನಿಂದ 10 ಎಕರೆ 6 ಗುಂಟೆ ಜಮಿನಿದ್ದು ಅದರಲ್ಲಿ ತಮ್ಮ ಖಾಜಾಸಾಬ ಈತನು ಸುಮಾರು 20 ವರ್ಷಗಳ ಹಿಂದೆ 3 ಎಕರೆ ಜಮೀನು ನಮ್ಮೂರ ಬಸಣಗೌಡ ತಂದೆ ಅಮರಣಗೌಡ ಬಾಚಿಮಟ್ಟಿ ಈತನಿಗೆ ಮಾರಾಟ ಮಾಡಿದ್ದು ಇರುತ್ತದೆ. ಸದರಿ ಜಮೀನಿಗೆ ಹೊಂದಿಕೊಂಡು ಸವರ್ೇ ನಂಬರ 156 ರಲ್ಲಿಯ ನಮಗೆ ಸಂಬಂಧಿಸಿದ 13 ಎಕರೆ ಜಮೀನನ್ನು  ಬಸಣಗೌಡ ಈತನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಮಾನ್ಯ ನ್ಯಾಯಾಲಯ ಯಾದಗಿರದಲ್ಲಿ ಸಿವ್ಹಿಲ್ ದಾವೆ ಹೂಡಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ:12-06-2019 ರಂದು ಸಾಯಂಕಾಲ  5-30 ಪಿ.ಎಂ ಸುಮಾರಿಗೆ ನಾನು ನನ್ನ ಮಗನಾದ ರಪೀಕಸಾಬ ಇಬ್ಬರೂ ಕೂಡಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ಬರುವಾಗ ಬಸಣಗೌಡ ಬಾಚಿಮಟ್ಟಿ ಇವರು ನಮ್ಮ ಜಮೀನಿನ  ಡ್ವಾಣದ ಹತ್ತಿರ ಗಳೆ ಹೊಡೆದಿದ್ದನ್ನು ಕಂಡು ನಾವು ಅವನಿಗೆ ಇಲ್ಲಿ ಯಾಕೇ ಗಳೆ ಹೊಡದಿರಿ ಅಂತಾ ಕೇಳಿದ್ದಕ್ಕೆ 1) ಬಸಣಗೌಡ ತಂದೆ ಅಮರಪ್ಪಗೌಡ ಮಾಲೀ ಪಾಟೀಲ ಅವನ ತಮ್ಮನಾದ 2) ಶಾಂತಗೌಡ ತಂದೆ ಅಮರಪ್ಪಗೌಡ ಮಾಲೀ ಪಾಟೀಲ ಹಾಗೂ ಅವನ ದೊಡ್ಡಪ್ಪನ ಮಗನಾದ  3) ಮಲ್ಲಣ್ಣಗೌಡ ತಂದೆ ಬೀಮಣಗೌಡ ಮಾಲೀ ಪಾಟೀಲ ಹಾಗೂ ಸಂಬಂಧಿಕನಾದ 4) ಗುರುನಾಥಗೌಡ ತಂದೆ ಶರಣಗೌಡ ಜಾಟಕಲ್ಲ ಇವರೆಲ್ಲರೂ ಕೂಡಿ ಬಂದವರೆ ಈ ಹೋಲ ನಮ್ಮದು ಇದೆ ನೀವೆನು ಕೇಳುತ್ತಿರಿ ಬೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದವರೆ ಹೊಗುತ್ತಿದ್ದ ನಮ್ಮನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಬಸಣಗೌಡ ಈತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ಶಾಂತಗೌಡ, ಮಲ್ಲಣಗೌಡ, ಗುರುನಾಥಗೌಡ ಈ ಮೂವರು ನಮ್ಮಿಬ್ಬರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಹೊದಲ್ಲಿದ್ದ ನನ್ನ ತಮ್ಮನಾದ ಖಾಜೆಸಾಬ ತಂದೆ ಪೀರಸಾಬ ಪಿರಾಪೂರ, ನಮ್ಮ ಮಾವನಾದ ಹಜರತ ಪಟೇಲ ತಂದೆ ರಾಜಾಸಾಬ ಅಲ್ದಾಳ ಇಬ್ಬರು ಜಗಳ ಬಿಡಿಸಿದ್ದು ಇರುತ್ತದೆ ಆಗ ಅವರು ಇವತ್ತು ಉಳದಿ ಇನ್ನೊಮ್ಮೆ ಸಿಕ್ಕರೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಿನ್ನೆ ಸಂಜೆಯಾಗಿದ್ದರಿಂದ ಊರಿಗೆ ಹೋಗಿ ನನ್ನ ಮಕ್ಕಳಾದ ಮಹೀಬೂಬ ಈತನೊಂದಿಗೆ ವಿಚಾರ ಮಾಡಿ ನನ್ನ ಮೈ ಕೈ ನೊವಾಗಿದ್ದರಿಂದ ಇಂದು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನನ್ನ ಮಗ ರಪೀಕಸಾಬ ಈತನು ಆಸ್ಪತ್ರೆಗೆ ತೋರಿಸಿರುವದಿಲ್ಲ ನನಗೂ ನನ್ನ ಮಗ ರಪೀಕ ಇಬ್ಬರಿಗೂ ಹೊಡೆ ಬಡೆ ಮಾಡಿದ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 108/2019 ಕಲಂ. ಮನುಷ್ಯ ಕಾಣೆಯಾದ ಬಗ್ಗೆ:- ದಿನಾಂಕ 13.06.2019 ರಂದು ಮದ್ಯಾಹ್ನ 12.15 ಪಿ.ಎಂ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ 10.06.2019 ರಂದು ಸಾಯಂಕಾಲ 6.00 ಪಿ.ಎಂ ಸುಮಾರಿಗೆ ತನ್ನ ಮಗನಾದ ಗೋಪಾಲಲಾಲ ಈತನು ಮನೆಯಲ್ಲಿ ತನ್ನ ತಾಯಿ ಹತ್ತಿರ ಆಧಾರ ಕಾರ್ಡ ತೆಗೆದುಕೊಂಡು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ನನ್ನ ಮಗನಿಗೆ ಎಲ್ಲಾ ಕಡೆ ಹುಡುಕಾಡಿ ಸಿಕ್ಕಿರುವುದಿಲ್ಲ ಕಾಣೆಯಾದ ನನ್ನ ಮಗ ಗೋಪಾಲಲಾಲ ಈತನಿಗೆ ಹುಡುಕಿಕೋಡಬೇಕು ಅಂತಾ ಪಿರ್ಯಾಧಿ ಅದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 109/2019  ಕಲಂ323, 324, 504, 506 ಐಪಿಸಿ :- ಸುಮಾರು ಒಂದೂವರೆ ತಿಂಗಳಿಂದ ಪಿರ್ಯಾಧಿಯ ಮಗಳಿಗೆ ಮೈಯಲ್ಲಿ ಹುಷಾರಿಲ್ಲ ಮನೆಯಲ್ಲಿ ಯಾರು ಕೆಲಸ ಮಾಡುವವರು ಯಾರು ಇಲ್ಲ ಅಂತಾ ತಿಳಿದು ಪಿರ್ಯಾಧಿಯು ಮಗಳ ಮನೆಯಾದ ಹಿಮ್ಲಾಪೂರ ಗ್ರಾಮಕ್ಕೆ ಬಂದಾಗ ಪಿರ್ಯಾಧಿಯ ಮೊಮ್ಮಗನಾದ ನರಸಪ್ಪ ಈತನು ಇಂದು ದಿನಾಂಕ 13.06.2019 ರಂದು ಸಾಯಂಕಾಲ 5.00 ಗಂಟೆಗೆ ಕುಡಿದು ಬಂದು ಪಿರ್ಯಾಧಿಗೆ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆದು ತರಚಿದ ರಕ್ತಗಾಯ ಗುಪ್ತಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 110/2019 ಕಲಂ: 427, 431 ಸಂಗಡ 34 ಐಪಿಸಿ:-ದಿನಾಂಕ 13.06.2019 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ಒಂದು ಒಬ್ಬ ಆರೋಪಿ ಮತ್ತು ಒಂದು ಜೆ.ಸಿ.ಬಿ ವಾಹನವನ್ನು ತಂದು ಹಾಜರುಪಡಿಸಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೇಂದರೆ ಇಂದು ದಿನಾಂಕ 13.06.2019 ರಂದು ಸಂಜೆ 7:15 ಗಂಟೆಯ ಸುಮಾರಿ ಆರೋಪಿತನು ಎ-2 ಆರೋಪಿ ಗುತ್ತಿಗೆದಾರ ಹೇಳಿದಂತೆ ಜೆ.ಸಿ.ಬಿ ಯಿಂದ ಸಾರ್ವಜನಿಕ ರಸ್ತೆಯನ್ನು ಅನಧಿಕೃತವಾಗಿ ಲೋಕೋಪಯೋಗಿ ಇಲಾಖೆಯ ಅನುಮತಿ ಇಲ್ಲದೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನಾನುಕೂಲ ಮಾಡಿ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಸುಮಾರು 65,000/- ರೂ ಹಾನಿಯನ್ನುಂಟು ಮಾಡಿರುತ್ತಾರೆ. ಹಾಗೂ ನಿಯಮಾನುಸಾರ ಲೋಕೋಪಯೊಗಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಂಡಿರುವುದಿಲ್ಲ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2019 ಕಲಂ: 427, 431 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
  
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ.:- 54/2019 ಕಲಂ: 78(3) ಕೆ.ಪಿ.ಆಕ್ಟ್:- ದಿನಾಂಕ: 13/06/2019 ರಂದು 3-45 ಪಿಎಮ್ ಕ್ಕೆ ಶ್ರೀ ದೌಲತ ಎನ್.ಕೆ. ಪಿ.ಐ, ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 13/06/2019 ರಂದು ಸಮಯ 13-15 ಗಂಟೆಗೆ ನಾನು ಸಂಗಡ ಸಿಬ್ಬಂದಿಯವರಾದ ಶ್ರೀ ಈರಣ್ಣ ಹೆಚ.ಸಿ 144 ಶ್ರೀ ಸಾಯಿಬಣ್ಣ ಪಿ.ಸಿ 145 ಮತ್ತು ಜೀಪ ಚಾಲಕ ಶ್ರೀ ರಾಮಲಿಂಗ ಎಪಿಸಿ 112 ರವರೊಂದಿಗೆ ಮಾಹಿತಿ ಸಂಗ್ರಹ ಕುರಿತು ವಡಗೇರಾ ಠಾಣಾ ವ್ಯಾಪ್ತಿಯ ವಡಗೇರಾ ಗ್ರಾಮದಲ್ಲಿ ಇದ್ದಾಗ ಸಾಯಿಬಣ್ಣ ಪಿ.ಸಿ 145 ರವರಿಗೆ ಒಂದು ಖಚಿತ ಮಾಹಿತಿ ಬಂದಿದ್ದು, ಅದು ನನಗೆ ತಿಳಿಸಿದ್ದೇನೆಂದರೆ ಬೀರನಾಳ ಗ್ರಾಮದ ಭೀಮರಾಯ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ವಡಗೇರಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಬೀರನಾಳ ಗ್ರಾಮದ ಬೀಟ ಹೆಚ್.ಸಿ 87, ಗುಪ್ತ ಮಾಹಿತಿ ಪಿಸಿ 254 ರವರೊಂದಿಗೆ ಸಮಯ 13-45 ಗಂಟಗೆ ಬೀರನಾಳ ಗ್ರಾಮದ ಭೀಮರಾಯ ದೇವಸ್ಥಾನ ಇನ್ನು ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನೋಡಲು ಅಲ್ಲಿ ಭೀಮರಾಯ ದೇವರ ಗುಡಿ ಮುಂದಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದಾಗ ಸಮಯ 13-50 ಗಂಟಗೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಲಿಂಗ ತಂದೆ ತಾಯಪ್ಪ ಅಗಸರ ವ:48 ವರ್ಷ ಜಾ: ಅಗಸರ ಉ: ಕಿರಾಣಿ ವ್ಯಾಪಾರ ಸಾ: ಬಿರನಾಳ ತಾ: ವಡಗೇರಾ ಜಿ: ಯಾದಗಿರ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಮಟಕಾಕ್ಕೆ ಸಮಬಂದಿಸಿದಂತೆ 1) ಒಂದು ಮಟಕಾ ಚೀಟಿ ಅ.ಕಿ.00=00 2) ನಗದು ಹಣ 8100/- ರೂಪಾಯಿಗಳು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 8100/- ರೂ ಮುದ್ದೇಮಾಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಘಟನೆ ಸ್ಥಳವು ಬಿರನಾಳ ಗ್ರಾಮದ ಭೀಮರಾಯನ ದೇವಸ್ಥಾನದ ಮುಂದಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಸದರಿ ಸ್ಥಳದಿಂದ ಪೂರ್ವ:- ಸಾರ್ವಜನಿಕ ಕಟ್ಟೆ ಇರುತ್ತದೆ. ಪಶಿಮಕ್ಕೆ:- ಸಾರ್ವಜನಿಕ ಕಟ್ಟೆ ಇರುತ್ತದೆ. ಉತ್ತರಕೆ:್ಕ- ಬೀಮಪ್ಪ ಮುಂಬೈಯಿ ಇವರ ಹೋಲ ಇರುತ್ತದೆ. ದಕ್ಷಿಣ:-ಭೀಮರಾಯ ದೇವಸ್ಥಾನ ಅಂಗಳ ಇರುತ್ತದೆ. ಸದರಿ ಆರೋಪಿತನು ಮಟಕಾ ಬರೆದುಕೊಂಡು ಅಲ್ಲಿಂದ ಹೋರಟು ಹೋಗುವ ಸಾದ್ಯತೆ ಇರುವುದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲು ಸಾದ್ಯವಾಗಿರುವುದಿಲ್ಲಾ. ನಂತರ ಠಾಣೆಗೆ ಬಂದು ತಮ್ಮ ಮುಂದೆ ಆರೋಪಿ ಮತ್ತು ಈ ಮೇಲ್ಕಂಡ ಮುದ್ದೇಮಾಲನ್ನು ಹಾಜುರು ಪಡಿಸಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 13/06/2019 ರಂದು 7 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 54/2019 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.   ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!