ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-06-2019
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 53/2019 ಕಲಂ: 143,147,148,504,324,354 ಸಂ 149 ಐಪಿಸಿ:-ದಿನಾಂಕ: 12/06/2019 ರಂದು 5-15 ಪಿಎಮ್ ಕ್ಕೆ ಶ್ರೀಮತಿ ನಾಗಮ್ಮ ಗಂಡ ಮಹಾದೇವಪ್ಪ ಕೂಲುರು, ವ:35, ಜಾ:ಕಬ್ಬಲಿಗೇರ, ಉ:ಹೊಲಮನೆ ಕೆಲಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ದಿನಾಂಕ: 12/06/2019 ರಂದು ಬೆಳಗ್ಗೆ 2 ಗಂಟೆ ಸುಮಾರಿಗೆ ನಮ್ಮ ಗ್ರಾಮದಲ್ಲಿ ನನ್ನ ಸೋದರತ್ತೆ ಮಕ್ಕಳಾದ ಮುದುಕಪ್ಪ ತಂದೆ ಸಿದ್ದರಾಮಪ್ಪ ಅಂಬಿಗೇರ ಮತ್ತು ದೇವಿಂದ್ರಪ್ಪ ತಂದೆ ಸಿದ್ದರಾಮಪ್ಪ ಅಂಬಿಗೇರ ಇವರು ಮರೆಮ್ಮ ಆಯಿ ದೇವರನ್ನು ಮಾಡಿದ್ದು, ನಮಗೆ ಊಟಕ್ಕೆ ಹೇಳಿದ್ದರಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕರು ಹಾಗೂ ನಮ್ಮ ಮನೆಯ ನೆರೆ ಹೊರೆಯವರು ಕೂಡಿ ಮರೆಮ್ಮ ಆಯಿ ಗುಡಿ ಹತ್ತಿರ ಊಟಕ್ಕೆ ಹೋಗಿದ್ದೇವು. ಬೆಳಗ್ಗೆ 11 ಗಂಟೆ ಸುಮಾರಿಗೆ ನಾವೆಲ್ಲರೂ ಊಟ ಮಾಡುತಿದ್ದಾಗ ನಮ್ಮಂತೆಯೇ 1) ಈಶಪ್ಪ ತಂದೆ ಹಂಪಣ್ಣ ಹಾದಿಮನಿ, 2) ಮಲ್ಲಪ್ಪ ತಂದೆ ಹಂಪಣ್ಣ ಹಾದಿಮನಿ ಮತ್ತು 3) ಚನ್ನಪ್ಪ ತಂದೆ ಹಂಪಣ್ಣ ಹಾದಿಮನಿ ಈ ಮೂರು ಜನ ಅಣ್ಣತಮ್ಮಂದಿರು ಕೂಡಾ ಊಟಕ್ಕೆ ಬಂದಿದ್ದವರು, ವಿನಾಕಾರಣ ನಮಗೆ ನೋಡಿ ಯಾವುದೋ ಹಳೆ ವೈಮನಸ್ಸಿನಿಂದ ಈ ಭೋಸಡಿಯರಿಗೆ ನೋಡಬಾರದು ಯಾಕೆ ಇವರ ಸೊಕ್ಕು ಮುರಿಯಬೇಕು ಎಂದು ಇಲ್ಲಸಲ್ಲದ ಶಬ್ದಗಳನ್ನು ಬೈಯುವಾಗ ನಾನು ಮತ್ತು ಇಂದಿರಮ್ಮ ಮತ್ತು ಇತರರು ಹೋಗಿ ಹೀಗ್ಯಾಕೆ ಬೈಯುತ್ತಿದ್ದಿರಿ ದೇವರಿಗೆ ಬಂದಿರಿ ಊಟ ಮಾಡಿಕೊಂಡು ಹೋಗಬೇಕು ಎಂದು ಹೇಳಿದಾಗ ಮತ್ತಷ್ಟು ಜೋರು ಬಾಯಿ ಮಾಡಿ ಈ ಛೀನಾಲಿ ಸೂಳೆಯರಿಗೆ ಇವತ್ತು ಒಂದು ಗತಿ ಕಾಣಿಸಬೇಕೆಂದು ತಮ್ಮ ಗೆಳೆಯರಾದ ಎಸ್.ಸಿ ಮಂದಿಯ ಹುಡುಗರಿಗೆ ಫೋನ ಮಾಡಿ ನಮಗೆ ಹೊಡೆಯುತ್ತಿದ್ದಾರೆ ನೀವು ಬಡಿಗೆ, ಕಲ್ಲು ತಗೊಂಡು ಬೇಗ ಬರಬೇಕು ಎಂದು ಈಶಪ್ಪನು ಫೋನ ಮಾಡಿ ಹೇಳಿದಾಗ 4) ಶರಣಪ್ಪ ತಂದೆ ಅಯ್ಯಪ್ಪ ಹರಿಜನ, 5) ಸದಾನಂದ ತಂದೆ ಅಯ್ಯಪ್ಪ ಹರಿಜನ ಮತ್ತು 6) ಬಸಪ್ಪ ತಂದೆ ಹುಲೆಯಪ್ಪ ಹರಿಜನ ಎಲ್ಲರೂ ಸಾ:ನಾಯ್ಕಲ್ ಇವರುಗಳು ಬಂದಿದ್ದು, ಈ ಎಲ್ಲಾ 6 ಜನರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಟ್ಟಿಗೆಗಳು ಹಿಡಿದುಕೊಂಡು ಬಂದವರೆ ಮತ್ತೆ ನಮಗೆ ಎಲೇ ಭೊಸಡಿಯರೆ ಈಗ ನಿಮಗೆಲ್ಲರಿಗೆ ಅಡ್ಡ ಹಾಕಿ ಹಡುತ್ತೇವೆ ಯಾವ ಗಂಡಸ ಮಗ ಬರುತ್ತಾನೆ ಅವನಿಗೆ ನೋಡಿಕೊಳ್ಳುತ್ತೇವೆ ಎಂದು ಜಗಳ ತೆಗೆದವರೆ ಶರಣಪ್ಪನು ನನಗೆ ನೆಲಕ್ಕೆ ದಬ್ಬಿಸಿ, ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಕೈಯಿಂದ ಕಪಾಳಕ್ಕೆ ಹೊಡೆದನು. ಬಿಡಿಸಲು ಬಂದ ಇಂದಿರಮ್ಮ ಗಂಡ ಸಿದ್ದರಾಮಯ್ಯ ಓಂಕಾರ ಈಕೆಗೆ ಈಶಪ್ಪನು ಈ ಭೋಸುಡಿ ನಡುವೆ ಬರುತ್ತಾಳೆ ಬಿಡಬೇಡ ಇವಳಿಗೆ ಎಂದು ಜಾಡಿಸಿ, ದಬ್ಬಿಸಿ ಕೊಟ್ಟನು. ಹಳ್ಳೆಮ್ಮ ಗಂಡ ಯಂಕೋಬ ಅಂಬಿಗೇರ ಇವಳು ಬಂದರೆ ಅವಳಿಗೆ ಚನ್ನಪ್ಪನು ಬಲಗೈ ಒಡ್ಡು ಮುರಿದು ಬಳೆಗಳನ್ನು ಒಡೆದನು. ಮಾನಮ್ಮ ಗಂಡ ಮರೆಪ್ಪ ಕೂಲುರು ಇವಳು ಬಿಡಿಸಲು ಬಂದು ಹೆಣ್ಣು ಮಕ್ಕಳಿಗೆ ಯಾಕೆ ಹೊಡೆಯುತ್ತಿರಿ ಎಂದು ಕೇಳಿದರೆ ಶರಣಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವಳ ಟೊಂಕಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಸಾಬಮ್ಮ ಗಂಡ ತಮ್ಮಣ್ಣ ಗಡ್ಡಿಮನಿ ಈಕೆಗೆ ಸದಾನಂದನು ಹೊಗಲೇ ಸೂಳೆ ಎಂದು ಜಾಡಿಸಿ ದಬ್ಬಸಿಕೊಟ್ಟಿದ್ದರಿಂದ ಬೋರಲು ಬಿದ್ದು ಬಿಟ್ಟಳು. ಮಲ್ಲಮ್ಮ ಗಂಡ ಭೀಮರಾಯ ಕೂಲುರು ಇವಳು ಬಿಡಿಸಲು ಬಂದರೆ ಅವಳಿಗೆ ಚನ್ನಪ್ಪನು ಕೈಯಿಂದ ಹೊಡೆದಿರುತ್ತಾನೆ. ಆಗ ಭೀಮವ್ವ ಗಂಡ ಮಲ್ಲಪ್ಪ ದಿಡ್ಡಿಮನಿ ಜಾ:ಕುರುಬರ ಮತ್ತು ಇತರರು ಜಗಳ ನೋಡಿ ಬಿಡಿಸಿರುತ್ತಾರೆ. ಆದ್ದರಿಂದ ಸದರಿಯವರು ವಿನಾಕಾರಣ ಹಳೆ ವೈಮನಸ್ಸಿನಿಂದ ಜಗಳ ತೆಗೆದು ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆಗಳು ಹಿಡಿದುಕೊಂಡು ಬಂದು ನಮಗೆ ಹೆಣ್ಣು ಮಕ್ಕಳಿಗೆ ಬಾಯಿಗೆ ಬಂದಂತೆ ಬೈದು ನಮಗೆ ಸೀರೆಗಳು ಹಿಡಿದು ಜಗ್ಗಾಡಿ ಮನಸ್ಸಿಗೆ ಬಂದಂತೆ ಗಲಾಟೆ ಮಾಡಿ ಹೊಡೆಬಡೆ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 53/2019 ಕಲಂ: 143,147,148,504,324,354 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ: 323.504.506.354 ಐ.ಪಿ.ಸಿ:- ದಿನಾಂಕ: 12.06.2019 ರಂದು ಸಂಜೆ 6.30 ಪಿಎಂಕ್ಕೆ ಮಹಿಳಾ ಠಾಣೆಗೆ ಹಾಜರಾಗಿ ದೂರು ಕೊಟ್ಟಿದದು ಸಾರಂಶವೇನೆಂದರೆ ನಮ್ಮ ಹಿರಿಯರ ಆಸ್ತಿ ಅಂದರೆ ನಮ್ಮ ತಾತನ ಹೆಸರಿನಲ್ಲಿ 6 ಎಕರೆ ಜಮೀನು ಇದ್ದು ಅದರಲ್ಲಿ 3 ಎಕರೆ ನಮ್ಮ ತಂದೆಗೆ 3 ಎಕರೆ ನನ್ನ ದೊಡ್ಡಪ್ಪನಿಗೆ ಹಂಚಿಕೆಯಾಗಿರುತ್ತದೆ. 6 ಎಕರೆ ಜಮೀನಿನ ಪೈಕಿ 1 ಎಕರೆ ನನ್ನ ಹೆಸರಿನಲ್ಲಿ ಮಾಡಿರುತ್ತದೆ. ಇನ್ನೂಳಿದ 2 ಎಕರೆ ನನ್ನ ತಾತನ ತಂದೆಯ ಹೆಸರಿನಲ್ಲಿರುತ್ತದೆ. ನಮ್ಮ ದೊಡ್ಡಪ್ಪನಿಗೆ 4 ಜನ ಹೆಣ್ಣು ಮಕ್ಕಳು ಒಬ್ಬನು ಗಂಡು ಮಗನಿರುತ್ತಾನೆ. ನನ್ನ ದೊಡ್ಡಪ್ಪನ ಮಗನಾದ ನಾರಾಯಣ ತಂದೆ ಶಂಕರ ಮನ್ನೆ ಇತನೇ 5 ಎಕರೆ ಜಮೀನು ಉಳಿಮೆ ಮಾಡುತ್ತಿದ್ದಾನೆ. ಆದರೆ 5 ಎಕರೆ ಜಮೀನು ಇನ್ನೂ ನಮ್ಮ ಮುತ್ತಾತನ ಹೆಸರಿನಲ್ಲಿಯೇ ಇರುತ್ತದೆ. ನನಗೆ ಬರಬೇಕಾದ 2 ಎಕರೆ ಜಮೀನು ನನ್ನ ಹೆಸರಿನಲ್ಲಿ ಮಾಡು ಅಂತ ನಮ್ಮ ದೊಡ್ಡಪ್ಪನ ಮಗನಾದ ನಾರಾಯಣ ಈತನಿಗೆ ಕೇಳಿದರೆ ಅವನು ನನಗೆ ವಿನಾಃಕಾರಣ ತೊಂಧರೆ ಕೊಡುವುದು ನನಗೆ ಬೈಯುವುದು , ನೀನು ಹೆಣ್ಣು ಮಗಳಿದ್ದು ನಿನಗೆ ಯಾವುದೇ ಆಸ್ತಿ ಬರುವುದಿಲ್ಲ ರಂಡಿ ಬೊಸಡಿ ಅಂತ ಅವ್ಯಾಚವಾಗಿ ಬೈಯುತ್ತಾ ಬಂದಿರುತ್ತಾನೆ. ದಿನಾಂಕ: 10.06.2019 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಅರವಿಂದಕುಮಾರ ತಂದೆ ಬಾಬು ದ್ಯಾವರಹಳ್ಳಿ ಮತ್ತು ನಮ್ಮ ತಾಯಿಯ ತಂಗಿಯ ಗಂಡನಾದ ಚಿಕ್ಕಪ್ಪ ರಾಮುಲು ತಂದೆ ಕನಕಪ್ಪ ಕೂಡಿ ಯಾದಗಿರಿ ನ್ಯಾಯಾಲಯಕ್ಕೆ ಬಂದಿದ್ದೇವು. ನಾರಾಯಣ ತಂದೆ ಶಂಕರ ಈತನು ಕೂಡ ಯಾದಗಿರಿ ಕೋಟರ್ಿಗೆ ಬಂದಿದ್ದನು. ನಾನು ಜಮೀನಿನ ವಿಷಯವಾಗಿ ಮಾತಾಡುತ್ತಾ ಕೋರ್ಟ ಮುಂದೆ ನಿಂತಿದ್ದಾಗ ನಾರಾಯಣ ಈತನು ನನ್ನ ಹತ್ತಿರ ಬಂದು ಏನಲೇ ಸೂಳಿ ನಮ್ಮ ಆಸ್ತಿಯಲ್ಲಿ ಪಾಲು ಬೇಕಾ ನಿನಗೆ ಬೀಡಿ ಕಾಸು ಕೊಡುವುದಿಲ್ಲಾ ರಂಡಿ ನೀನು ನಿನ್ನ ಗಂಡನ ಮನೆ ಬಿಟ್ಟು ನಮ್ಮ ಮನೆಯಲ್ಲಿ ಆಸ್ತಿ ಕೇಳಲು ಬಂದಿದ್ದಿ ಬೊಸಡಿ ಅಂತ ಅವ್ಯಾಚವಾಗಿ ಬೈದಾಡುತ್ತಿದ್ದನು. ಆಗ ನಾನು ಸೀದಾ ಮಾತಾಡು ನನಗೆ ಬರಬೇಕಾದ ಪಾಲದಲ್ಲಿ ನಾನು ಕೇಳಿತ್ತಿದ್ದೇನೆ ಅಂತ ಅಂದಾಗ ನನಗೆ ಕೈಯಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಜಗ್ಗಾಡಿ ಕೈಹಿಡಿದು ಎಳೆದಾಡಿ ಅಪಮಾನ ಮಾಡಿರುತ್ತಾನೆ. ನಮ್ಮ ಆಸ್ತಿಯಲ್ಲಿ ಮತ್ತೊಂದು ಸಲ ಪಾಲು ಕೇಳಿದರೆ ನಿನಗೆ ಜೀವ ಸಮೇತ ಬಿಡಲ್ಲಾ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ. ಸದರಿ ನಾರಾಯಣ ತಂದೆ ಶಂಕರ ಮನ್ನೆ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ದೂರಿನ ಮೇಲಿಂದ ಠಾಣೆಯ ಗುನ್ನೆ ನಂ: 18/2019 ಕಲಂ: 323, 504, 506, 354 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ: 143, 147, 148, 323, 324, 354, 504, ಸಂಗಡ 149 ಐಪಿಸಿ:-ಪಿಯರ್ಾದಿಯು ಮಾರನಾಳ ತಾಂಡಾದಲ್ಲಿ ಒಂದು ಕಿರಾಣಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಈ ಅಂಗಡಿಯು ರಾಮುನಾಯ್ಕ ರಾಠೋಡ ಇವರ ಮನೆಯ ಹತ್ತಿರ ಇದ್ದು ಅಂಗಡಿ ಇರುವ ಜಾಗದ ವಿಷಯಕ್ಕೆ ಸಂಬಂದಿಸಿದಂತೆ ಅವರ ನಡುವೆಮೊದಲಿನಿಂದಲು ತಂಟೆತಕರಾರು ನಡೆಯುತ್ತಾ ಬಂದಿರುತ್ತದೆ. ದಿನಾಂಕ:10/06/2019 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಪಿಯರ್ಾದಿಯು ತನ್ನ ಗಂಡನಾದ ರಾಜು ತಂದೆ ತಿರುಪತಿ ರಾಠೋಡ, ಮಕ್ಕಳಾದ ರೋಹಿತ, ಅಭಿ ಇವರಿಗೆ ಕರೆದುಕೊಂಡು ತಮ್ಮ ಅಂಗಡಿಯ ಮುಂದೆ ಕುಳಿತುಕೊಂಡಾಗ ಬಂದ ಆರೋಪಿತರು ಲೇ ಸೂಳಿ ನನ್ನ ಮಕ್ಕಳೆ ನೀವು ಅಂಗಡಿಯನ್ನು ನಮ್ಮ ಜಾಗೆಯಲ್ಲಿ ಯಾಕೆ ಹಾಕಿಕೊಂಡಿದ್ದಿರಿ ಅಂತಾ ಹೇಳಿದ್ದು ಪಿಯರ್ಾದಿಯ ಗಂಡನು ಅವರಿಗೆ ಇದು ನಿಮ್ಮ ಜಾಗೆ ಅಲ್ಲ ನಮ್ಮ ಜಾಗೆ ಅದ ಅಂತಾ ಹೇಳಿದ್ದು ರಾಮುನಾಯ್ಕ ರಾಠೋಡ, ಶಂಕರಪ್ಪ ರಾಠೋಡ ಇವರು ಎದುರು ಮಾತನಾಡುತ್ತಿಯಾ ಸೂಳಿ ಮಗನೆ ಅಂತಾ ಹೇಳಿ ಜಾಡಿಸಿ ದಬ್ಬಿಸಿಕೊಟ್ಟು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿದ್ದು, ಪಿಯರ್ಾದಿಗೆ ಅನುಸುಬಾಯಿ ರಾಠೋಡ, ನೀಲಬಾಯಿ ರಾಠೋಡ, ಕಮಲಾಬಾಯಿ ರಾಠೋಡ ಇವರು ಭೋಸೂಡಿ ರಂಡಿ ಅಂತಾ ಬೈದು ಕೈಯಿಂದ ಮೈ-ಕೈಗೆ ಹೊಡೆದಿದ್ದು ರಾಮುನಾಯ್ಕ ರಾಠೋಡ, ಶಾಂತಿಲಾಲ ರಾಠೋಡ ಇವರು ಪಿಯರ್ಾದಿಯ ಸೀರೆ ಜಗ್ಗಾಡಿ ಕೈಯಿಂದ ಹೊಡೆ-ಬಡೆ ಮಾಡಿದ್ದು ಪಿಯರ್ಾದಿಯ ಮಗನಾದ ರೋಹಿತ ಇವರಿಗೆ ಶಾಂತಿಲಾಲ ರಾಠೋಡ ಈತನು ಬಡಿಗೆಯಿಂದ ಹೊಡೆದು ಹಣೆಗೆ ತೆರಚಿದ ಗಾಯಪಡೆಸಿದ್ದು ಅವರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಹೇಳಿಕೆಯ ಸಾರಾಂಶ ಇರುತ್ತದೆ.
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 75/2019 ಕಲಂ 279, 338 ಐ.ಪಿ.ಸಿ:- ದಿನಾಂಕ: 12/06/2019 ರಂದು 3.30 ಎ.ಎಮ್ ಸುಮಾರಿಗೆ ಆರೋಪಿ ಶಿವುಪುತ್ರ ಈತನು ತನ್ನಕಾರ ನಂ ಕೆಎ:33 ಎಸಿ:4357 ನೇದ್ದನ್ನು ಮತ್ತು ಆರೋಪಿ ಮಹ್ಮದ ತೌಫೀಕ ಈತನು ತನ್ನ ಟಾಟಾ ಎಸಿ ವಾಹನ ನಂಕೆಎ:33 ಎ:5681 ನೇದ್ದನ್ನು ಭೀ.ಗುಡಿ-ಜೇವಗರ್ಿ ಮುಖ್ಯರಸ್ತೆಯ ಮೇಲೆ ಮದ್ರಕಿ ಕ್ರಾಸ ಹತ್ತಿರ ಆರೋಫಿತರಿಬ್ಬರೂ ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪರಸ್ಪರ ಮುಖಾಮುಖಿ ಡಿಕ್ಕಿಪಡಿಸಿ ಅಪಘಾತ ಮಾಡಿಕೊಂಡಿದ್ದು, ಅಪಘಾತದಲ್ಲಿ ಶಿವುಪುತ್ರ ಈತನಿಗೆ ಬಲಗಾಲು ತೊಡೆಯಲ್ಲಿ ಮುರದಿದ್ದು, ಎಡಗಾಲಿನ ಮೊಳಕಾಲಿಗೆ ಹಾಗು ಹಿಮ್ಮಡಿಯ ಹತ್ತಿರ ರಕ್ತಗಾಯವಾಗಿದ್ದು, ಮಹ್ಮದ ತೌಫೀಕ ಈತನಿಗೆ ಬಲಗಾಲು ತೊಡೆಯಲ್ಲಿ ಮುರದಿದ್ದು, ಎಡಗಾಲಿನ ಮೊಳಕಾಲಿಗೆ ಹಾಗು ಹಿಮ್ಮಡಿಯ ಹತ್ತಿರ ರಕ್ತಗಾಯವಾಗಿದ್ದು ಸದರಿ ಅಪಘಾತಕ್ಕೆ ಎರಡೂ ವಾಹನದ ಚಾಲಕರ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣ ಅಂತ ಅಜರ್ಿ ಸಾರಾಂಶವಿರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 131/2019 ಕಲಂ. 323, 324, 447, 504, 506 ಸಂಗಡ 34 ಐಪಿಸಿ:-ದಿನಾಂಕ:12/06/2019 ರಂದು 9 ಪಿ.ಎಮ್.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪುರದಿಂದ ಎಮ್ ಎಲ್ ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ತಿಳಿಸಿದ ಮೇರೆಗೆ 9-15 ಪಿ.ಎಂ.ಕ್ಕೆ ಆಸ್ಪತ್ರೆ ಬೇಟಿ ಗಾಯಾಳುದಾರನಾದ ಬಸನಗೌಡ ಈತನ ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12-06-2019 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಚಿಕ್ನಳ್ಳಿ ಸೀಮಾಂತರದ ಸವರ್ೆ ನಂ. 155/*/5 ನೇದ್ದರ ನನ್ನ ಹೊಲದಲ್ಲಿ ಉಳಿಮೆ ಮಾಡುತ್ತಿರುವಾಗ ಚಿಕ್ಕನಳ್ಳಿ ಗ್ರಾಮದವರಾದ 1) ಖಾಸಿಂಸಾಬ್ ತಂದೆ ಪೀರಸಾಬ್ ಪಿರಾಪೂರ 2) ರಾಜೆಸಾಬ್ ತಂದೆ ಖಾಸಿಂಸಾಬ್ ಪಿರಾಪೂರ 3) ಬುಡ್ಡೆಸಾಬ್ ತಂದೆ ಖಾಸಿಂಸಾಬ್ ಪಿರಾಪೂರ 4) ರಫೀಕಸಾಬ್ ತಂದೆ ಖಾಸಿಂಸಾಬ್ ಪಿರಾಪೂರ ಎಲ್ಲರು ಜಾ: ಮುಸ್ಲಿಂ ಸಾ: ಚಿಕ್ನಳ್ಳಿ ಇವರೆಲ್ಲರೂ ಕೂಡಿ ನಮ್ಮ ಹೊಲದಲ್ಲಿ ಅತೀಕ್ರಮಣ ಮಾಡಿ ಬಂದವರೆ ಲೇ ಬೋಸಡಿ ಮಗನೇ ನಮ್ಮ ಹೊಲದಲ್ಲಿ ಏಕೇ ಉಳಿಮೆ ಮಾಡುತ್ತಿರುವೇ? ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ, ನಾನು ಅವರಿಗೆ ಇದು ನಮ್ಮ ತಂದೆ ಖರೀದಿ ಮಾಡಿದ ಆಸ್ತಿ ಇರುತ್ತದೆ. ಆದ ಕಾರಣ ನಾನು ಉಳಿಮೆ ಮಾಡುತ್ತಿರುವೆ ಅಂತಾ ಹೇಳಿದಾಗ ಒಮ್ಮೆಲೆ ಎಲ್ಲರು ಬಂದವರೇ ನನಗೆ ದಬ್ಬಾಡುತ್ತಾ ಅವರಲ್ಲಿಯ ಖಾಸಿಂಸಾಬ್ ತಂದೆ ಪೀರಸಾಬ್ ಇತನು ತನ್ನ ಕೈಯಲ್ಲಿದ್ದ ಒಂದು ಕಲ್ಲಿನಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಬುಡ್ಡೆಸಾಬ್ ತಂದೆ ಖಾಸಿಂಸಾಬ್ ಮತ್ತು ರಫೀಕಸಾಬ ತಂದೆ ಖಾಸಿಂಸಾಬ್ ಇಬ್ಬರು ಕೂಡಿ ಹಿಂದಿನಿಂದ ಬಂದು ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದರು. ರಾಜೇಸಾಬ್ ತಂದೆ ಖಾಸಿಂಸಾಬ್ ಇತನು ನೆಲಕ್ಕೆ ಕೆಡವಿ ಹಾಕಿ ಕಾಲಿನಿಂದ ಒದ್ದು, ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅದೇ ಸಮಯಕ್ಕೆ ನಮ್ಮ ಹೊಲದ ಪಕ್ಕದಲ್ಲಿರುವ 1) ಅಮಾತ್ಯಪ್ಪ ತಂದೆ ಸಿದ್ದಪ್ಪ ಪೂಜಾರಿ ಸಾ: ಬೋನಾಳ ಮತ್ತು 2) ಸಿದ್ದಪ್ಪ ತಂದೆ ಮಾಳಪ್ಪ ಮಾಳಳ್ಳಿ ಸಾ: ಬೋನಾಳ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಆಗ ಅವರು ಇವತ್ತು ಉಳದಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋದರು ನಂತರ ನಾನು ಸರಕಾರಿ ಆಸ್ಪತ್ರೆ ಸರುಪುರಕ್ಕೆ ಹೋಗಿ ಉಪಚಾರ ಕುರಿತು ಸೇರಿಕೆ ಆಗಿದ್ದು ಇರುತ್ತದೆ. ಸದರಿ ಹೊಡೆ ಬಡೆ ಮಾಡಿ ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿ, ನಮ್ಮ ಹೊಲದಲ್ಲಿ ಅತೀಕ್ರಮಣ ಮಾಡಿದ 4 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using