ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-06-2019
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 106/2019 ಕಲಂ: 323, 324, 498(ಎ), 504, 506 ಸಂಗಡ 34 ಐಪಿಸಿ:-ದಿನಾಂಕ 07.06.2019 ರಂದು ಪಿರ್ಯಾಧಿಯು ತನ್ನ ಮನೆಯಲ್ಲಿ ಒಬ್ಬಳೆ ಮಲಗಿದಾಗ ರಾತ್ರಿ 2.30 ಗಂಟೆ ಸುಮಾರಿಗೆ ಆರೋಪಿತನು ಪಿರ್ಯಾಧಿ ಮನೆ ಮೇಲಿನ ಹಂಚಿನ ಕಲ್ಲು ತೆಗೆದು ಮನೆ ಒಳಗಡೆ ಹೋಗಿ ಪಿರ್ಯಾಧಿ ಕೂದಲು ಹಿಡಿದು ಎಳೆದುಕೊಂಡು ಬಾಗಿಲ ಹತ್ತಿರ ತಂದು ಚೀಲಕ ತೆಗೆದು ಕನ್ನ್ಯಾ ಇವಳು ಸಹ ಬಂದು ಪಿರ್ಯಾಧಿಗೆ ಕಟ್ಟಿಗೆ ಬಡಿಗೆಯಿಂದ, ಕೈಯಿಂದ ಹೊಡೆದು ತರಚಿದಗಾಯ, ಗುಪ್ತಪೆಟ್ಟು ಮಾಡಿ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 141/2019 ಕಲಂ 279, 337, 304[ಎ] ಐ.ಪಿ.ಸಿ:- ದಿನಾಂಕ:09/06/2019 ರಂದು ಬೆಳಿಗ್ಗೆ 10.45 ಎ.ಎಂ.ಕ್ಕೆ ಫಿಯರ್ಾದಿ ಶ್ರೀಮತಿ ಮರೆಮ್ಮ ಗಂ/ ಮಡಿವಾಳಪ್ಪ ಮಡಿವಾಳಕರ್ ಸಾ|| ಕನ್ಯಾಕೊಳ್ಳೂರ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ಇಂದು ದಿನಾಂಕ: 09/06/2019 ರಂದು ಬೆಳಿಗ್ಗೆ 8.30 ಎ.ಎಂ.ಕ್ಕೆ ನನ್ನ ಗಂಡ ಮಡಿವಾಳಪ್ಪ ಮತ್ತು ನಮ್ಮ ಸಂಬಂಧಿ ಮಲ್ಲಣ್ಣ ತಂ/ ತಿಪ್ಪಣ್ಣ ಮಡಿವಾಳಕರ್ ಇಬ್ಬರೂ ಕೂಡಿಕೊಂಡು ನಂದೆಳ್ಳಿಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಮೋಟರ ಸೈಕಲ್ ನಂ. ಕೆಎ-03 ಇ.ಟಿ-6351 ನೇದ್ದರಲ್ಲಿ ಹೋದರು. ಮೋಟರ ಸೈಕಲನ್ನು ಮಲ್ಲಣ್ಣನು ನಡೆಸುತ್ತಿದ್ದನು. 9.00 ಎ.ಎಂ. ಸುಮಾರಿಗೆ ಮಲ್ಲಣ್ಣನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ಮಡಿವಾಳಪ್ಪ ಇಬ್ಬರು ರಸ್ತಾಪುರ ಕ್ರಾಸ್ ಮುಖಾಂತರ ಹತ್ತಿಗುಡೂರು ಮಾರ್ಗವಾಗಿ ನಂದಲ್ಳಿಗೆ ಹೊರಟಿದ್ದಾಗ 8.45 ಎ.ಎಂ ಸುಮಾರಿಗೆ ಹತ್ತಿಗುಡೂರ ಬಸ ನಿಲ್ದಾಣದ ಮುಂದೆ ಶಹಾಪುರ-ಹತ್ತಿಗುಡೂರು ರಸ್ತೆಯಲ್ಲಿ ಹೊರಟಿದ್ದಾಗ ನಮ್ಮ ಹಿಂದಿನಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ನನ್ನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ಹಾಯಿಸಿಕೊಂಡು ಹೋಗಿ ಸ್ವಲ್ಪ ಮುಂದೆ ಹೋಗಿ ತನ್ನ ಟಿಪ್ಪರನ್ನು ನಿಲ್ಲಿಸಿದ್ದರಿಂದ ಅಪಘಾತದಲ್ಲಿ ನಾವಿಬ್ಬರು ಮೋಟರ ಸೈಕಲ್ ಸಮೇತವಾಗಿ ರೋಡಿನಲ್ಲಿ ಬಿದ್ದ ಪರಿಣಾಮ ನಿನ್ನ ಗಂಡ ಮಲ್ಲಣ್ಣನಿಗೆ ತಲೆಗೆ ಭಾರೀ ಒಳಪೆಟ್ಟಾಗಿ ಚಪ್ಪಟೆಯಾದಂತೆ ಕಾಣುತ್ತದೆ, ಬಲಗಾಲ ತೊಡೆಯಿಂದ ಪಾದದವರೆಗೆ ಭಾರೀ ರಕ್ತಗಾಯವಾಗಿ ಚರ್ಮ ಕಿತ್ತಿರುತ್ತದೆ, ಬಲಗಾಲ ಪಾದದ ಮೇಲ್ಭಾಗದಲ್ಲಿ ಮುರಿದಿರುತ್ತದೆ, ಬಲಗೈ ಮುಂಗೈಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನನಗೆ ಬಲ ಕಪಾಳಕ್ಕೆ ತರಚಿದಗಾಯ, ಬಲಮುಡ್ಡಿಗೆ ಒಳಪೆಟ್ಟಾಗಿದ್ದು, ಬಲಗಾಲ ಪಾದಕ್ಕೆ, ಬಲಗೈ ಮುಂಗೈಗೆ ತರಚಿದ ಗಾಯವಾಗಿರುತ್ತದೆ. ನಾನು ಶವವನ್ನು ಒಂದು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದೇನೆ ನೀವು ಶಹಾಪುರ ಸರಕಾರಿ ಆಸ್ಪತ್ರೆಗೆ ಬನ್ನಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಅತ್ತೆ ತಿಪ್ಪಮ್ಮ ಗಂ/ ಬಸಪ್ಪ ಮಡಿವಾಳಕರ್ ಮತ್ತು ತಂಗಿ ದೇವಮ್ಮ ಗಂ/ ಮಡಿವಾಳಪ್ಪ ಮೂರು ಜನರು ಕೂಡಿ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದು ಶಹಾಪುರ ಸರಕಾರಿ ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿದ್ದ ನನ್ನ ಗಂಡನಿಗೆ ನೋಡಲಾಗಿ ಮೇಲ್ಕಾಣಿಸಿದಂತೆ ಗಾಯಪೆಟ್ಟುಗಳಾಗಿ ನನ್ನ ಗಂಡ ಮೃಪಟ್ಟಿದ್ದನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 142/2019 ಕಲಂ 143, 147, 341, 323, 427, 504, 506 ಸಂ 149 ಐ.ಪಿ.ಸಿ :- ದಿನಾಂಕ 09/06/2019 ರಂದು ಮುಂಜಾನೆ 11-30 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಚಿದಾನಂದಪ್ಪ ಚಲುವಾದಿ ವಯ 26 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಚಾಲಕ ಸಾಃ ಕ್ಯಾದಿಗೇರಾ ತಾಃ ದೇವದುರ್ಗ ಜಿಃ ರಾಯಚೂರ ಇವರು ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 09/06/2019 ರಂದು ಮುಂಜಾನೆ ಕಲಬುರಗಿಯಿಂದ-ದೇವದುಗಕ್ಕೆ ಟೀಪ್ಪರ ನಂ ಕೆಎ-32-ಡಿ-1988 ನೇದ್ದು ಖಾಲಿ ಚಲಾಯಿಸಿಕೊಂಡು ಹೋಗುತಿದ್ದಾಗ ಮುಂಜಾನೆ 08-45 ಗಂಟೆಯ ಸುಮಾರಿಗೆ ಹತ್ತಿಗೂಡುರ ಬಸ್ ನಿಲ್ದಾಣದ ಎದರುಗಡೆ ಹೋಗುತಿದ್ದಾಗ ಟೀಪ್ಪರದ ಎಡಭಾಗದ ಹಿಂದನ ಟೈರದಲ್ಲಿ ಶಬ್ದಕೇಳಿ ಬಂದಿದ್ದರಿಂದ ಟಿಪ್ಪರ ರೋಡಿನ ಎಡ ಬದಿಗೆ ನಿಲ್ಲಿಸಿ ಕೆಳಗಡೆ ಇಳಿದು ಹಿಂದಿನ ಟೈರ ಹತ್ತಿರ ಹೋಗುತಿದ್ದಾಗ ಅಂದಾಜು 8 ರಿಂದ 10 ಜನರು ಗುಂಪುಕಟ್ಟಿಕೊಂಡು ನಮ್ಮ ಲೀಡರ ಶರಣರೆಡ್ಡಿಗೆ ಕರೆಯಿರಿ ಅಂತ ಹತ್ತಿರ ಬಂದರು, ಟೀಪ್ಪರದ ಹಿಂದೆ ನೋಡಲಾಗಿ ಒಬ್ಬ ಮೋಟರ ಸೈಕಲ್ ಸವಾರನಿಗೆ ಟೀಪ್ಪರದ ಎಡಭಾಗದ ಹಿಂದಿನ ಟೈರ್ ಹಾದು ಸ್ಥಳದಲ್ಲಿಯೇ ಮೃತ ಪಟ್ಟಿದ್ದನು ಇನ್ನೊಬ್ಬ ವ್ಯಕ್ತಿಗೆ ಸಣ್ಣ ಗಾಯವಾಗಿದು,್ದ ಅಷ್ಟರಲ್ಲಿಯೇ ಒಬ್ಬ ವ್ಯಕ್ತಿ ಬಂದಿದ್ದು, ಅವನಿಗೆ ತನ್ನನ್ನು ತೋರಿಸಿ ಶರಣ ರೆಡ್ಡಿ ಅಣ್ಣ ಇವನೇ ನೋಡು ಅಪಘಾತ ಮಾಡಿದ ಟಿಪ್ಪರ ಡ್ರೈವರ ಅಂತ ಹೇಳುತಿದ್ದಾಗ ಫಿಯರ್ಾದಿಯು ಅವರಿಂದ ತಪ್ಪಿಸಿಕೊಂಡು ಸಮೀಪದಲ್ಲಿಯೆ ಕಾಣುತಿದ್ದ ಪೊಲೀಸರ ಕಡೆಗೆ ಓಡಿ ಹೋಗುತಿದ್ದಾಗ ಶರಣ ರೆಡ್ಡಿ ಇವನು ಫಿಯರ್ಾದಿಗೆ ಒತ್ತಿ ಹಿಡಿದು ಏ ಬೋಸ್ಡಿ ಮಗನೇ ಎಲ್ಲಿಗೆ ಹೋಗ್ತಿಯಾ ಅಂತ ಅಂದವನೆ ಶರಣ ರೆಡ್ಡಿ ಮತ್ತು ಅವನ ಜೊತೆಯಲಿದ್ದ 8 ರಿಂದ 10 ಜನರು ಎಲ್ಲರೂ ಕೂಡಿ ತನಗೆ ಮನ ಬಂದಂತೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ತನ್ನ ಮೈಮೇಲಿನ ಅಂಗಿ ಹಿಡಿದು ಜಗ್ಗಾಡಿ ಹರಿದಿರುತ್ತಾರೆ. ಅಲ್ಲದೆ ಈ ಬೋಸ್ಡಿ ಮಗನಿಗೆ ಜೀವಂತ ಬೆಂಕಿ ಹಚ್ಚಿ ಖಲಾಸ ಮಾಡ್ರಿ ಅಂತ ಅಂದು ಟಿಪ್ಪರ ವಾಹನದ ಮುಂದಿನ ಗ್ಲಾಸಿಗೆ ಕಲ್ಲಿನಿಂದ ಒಡೆದು ಅಂದಾಜು 20,000=00 ರೂಪಾಯಿ ಕಿಮ್ಮತ್ತಿನದು ಹಾನಿ ಮಾಡಿರುತ್ತಾರೆ. ಅಲ್ಲದೆ ರೋಡಿನ ಮೇಲೆ ಹೋಗುತಿದ್ದ ಟಿಪ್ಪರ ನಂ ಕೆಎ-32-ಡಿ-2448 ಮತ್ತು ಕೆಎ-36-ಬಿ-2560 ನೇದ್ದರ ಅಂದಾಜು 40,000=00 ರೂಪಾಯಿ ಕಿಮ್ಮತ್ತಿನ ಗ್ಲಾಸುಗಳು ಕಲ್ಲಿನಿಂದ ಒಡೆದು ಹಾನಿ ಮಾಡಿರುತ್ತಾರೆ. ಅಷ್ಟರಲ್ಲಿಯೇ ನಾನು ಚಿರಾಡುತಿದ್ದಾಗ ಚೆಕ್ ಪೋಸ್ಟದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪೊಲೀಸರು ಬಂದು ತನಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 142/2019 ಕಲಂ 143 147 341, 323, 427, 504, 506, ಸಂ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 56/2019 ಕಲಂ: 323, 354, 504, 506 ಐಪಿಸಿ:-ದಿನಾಂಕ: 09/06/2019 ರಂದು 12.30 ಪಿಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ. ನೀಲಾಬಾಯಿ ಗಂಡ ತಿರುಪತಿ ಚವ್ಹಾಣ ವಯಾ: 45 ವರ್ಷ ಜಾ: ಲಂಬಾಣಿ ಉ: ಕೂಲಿ ಕೆಲಸ ಸಾ: ಹೋಸ್ಕೇರಾ ಮೇಲಿನ (ಟಾಕಿ) ತಾಂಡಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಅದರ ಸಾರಂಶವೆನಂದರೆ, ನನ್ನ ಗಂಡ ತಿರುಪತಿ ತಂದೆ ತಿಪ್ಪಣ್ಣ ಚವ್ಹಾಣ ಮತ್ತು, ಗೋವಿಂದ ತಂದೆ ತಿಪ್ಪಣ್ಣ ಚವ್ಹಾಣ ಇಬ್ಬರು ಅಣ್ಣ ತಮ್ಮಂದಿರು ಇದ್ದು ನಮ್ಮ ಅತ್ತೆ ಕಮಲಿಬಾಯಿ ಇವಳು ನಮ್ಮ ಮೈದುನ ಗೋವಿಂದನ ಹತ್ತಿರ ಇರುತ್ತಾಳೆ. ನಮಗೆ 20 ಎಕರೆ ಹೊಲ ಇರುತ್ತದೆ. ನನ್ನ ಗಂಡ ತಿರುಪತಿಗೆ 07 ಎಕರೆ ಹೊಲ ಬರಬೇಕು. ಆ ಏಳು ಎಕರೆ ಹೊಲ ನನ್ನ ಗಂಡ 4 ಲಕ್ಷ ಸಾಲ ತಿರಿಸಿದ ಮೇಲೆ ನನ್ನ ಗಂಡನ ಹೆಸರಿನಿಂದ ಮಾಡುವದಾಗಿ ಹೇಳಿದ್ದರು. ಈಗ ಸಾಲ ತಿರಿಸಿ 4 ವರ್ಷ ಮುಗಿದಿದೆ. ಆದರೂ ನಮ್ಮ ಅತ್ತೆ ನಮ್ಮ ಹೊಲ ನನ್ನ ಗಂಡನ ಹೆಸರಿನಿಂದ ಮಾಡಿ ಕೊಟ್ಟಿರುವದಿಲ್ಲ. ಅದಕ್ಕೆ ನಿನ್ನೆ ದಿನಾಂಕ;08/06/2019 ರಂದು ಮದ್ಯಾಹ್ನ 04.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ದೇವರಾಜ ಇಬ್ಬರು ಕೂಡಿ ನಮ್ಮ ಅತ್ತೆಯಾದ ಕಮಲಿಬಾಯಿ ಇವಳೊಂದಿಗೆ ನಮ್ಮ ಹೊಲದ ವಿಷಯದಲ್ಲಿ ಮಾತಾಡುತ್ತಾ ನಮ್ಮ ಹೊಸ್ಕೇರಾ ಮೇಲಿನ ತಾಂಡಾ(ಟಾಕಿ ತಾಂಡ)ದ ಮನೆಯ ಮುಂದೆ ನಿಂತಿದ್ದೆವು. ಆಗ ಪಿಕಲಿಬಾಯಿ ಗಂಡ ಠಾಕ್ರು ಚವ್ಹಾಣ ಇವಳು ಬಂದು ನನ್ನ ಮಗನಿಗೆ ಯಾಕಪ ನಿಮ್ಮ ಅಜ್ಜಿಗೆ ಹೊಡಿಬೇಕು ಅಂತಾ ಮಾಡಿದೆನು ಅಂತಾ ಅಂದಳು ಆಗ ನನ್ನ ಮಗನು ನಮ್ಮ ಅಜ್ಜಿಗೆ ನಾನು ಕೇಳಲಿಕ್ಕತ್ತಿನಿ ನಾನೇಕೆ ಹೋಡಿಲಿ ನೀನು ಸುಮ್ಮನೆ ಹೋಗು ಅಂತಾ ಹೇಳಿದ. ಆಗ ಪಿಕಲಿಬಾಯಿ ಇವಳ ಮಗ ಬಂದು ನಮ್ಮ ತಾಯಿಗೆ ಏನು ಬೈಯುತ್ತಿ ಲೇ ಬೋಸಡಿ ಮಗನೆ ಅಂತಾ ಅವಾಶ್ಚವಾಗಿ ಬೈಯುತ್ತಾ ಬಂದವನೆ ನನ್ನ ಮಗನಿಗೆ ಕೈಯಿಂದ ಹೋಡೆಯ ತೊಡಗಿದ ಆಗ ನಾನು ಯಾಕೆ ಹೋಡೆಯುತ್ತಿ ಅಂತಾ ಬಿಡಿಸಿಕೊಳ್ಳಲು ಹೋದಾಗ ನನಗೂ ಕೂಡ ಕೈ ಹೋಡೆದು ಕಾಲಿನಿಂದ ನನ್ನ ಎಡಗಡೆಯ ಎದೆಗೆ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾನೆ. ನನ್ನ ಎಡಗೈ ಹಿಡಿದು ಎಳೆದು ತಿರುವಿರುತ್ತಾನೆ ನನ್ನ ಎಡಗೈಗೆ ಗುಪ್ತ ಪೆಟ್ಟಾಗಿರುತ್ತದೆ. ಆಗ ಇಮಲಿಬಾಯಿ ಗಂಡ ನೇಹರು ಚವ್ಹಾಣ ಮತ್ತು ಸೊನಾಬಾಯಿ ಗಂಡ ತಿಪ್ಪಣ್ಣ ಚವ್ಹಾಣ ಇವರುಗಳು ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದನು. ಹೊಡೆದು ಹೋಗುವಾಗ ಮಕ್ಕಳೆ ಇನ್ನೊಮ್ಮೆ ನಮ್ಮ ತಾಯಿ ತಂಟೆಗೆ ಬಂದರೆ ನಿಮಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನಿನ್ನೆ ಶಹಾಪುರ ಸದರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 09/06/2019 ರಂದು ಠಾಣಗೆ ಬಂದು ದೂರು ನೀಡಿರುತ್ತೇನೆ. ಕಾರಣ ವಿನಾಃ ಕಾರಣ ನಮಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಕೈ ಹಿಡಿದು ಎಳೆದು, ಜೀವದ ಬೆದರಿಕೆ ಹಾಕಿದ ವಿಶ್ವನಾಥ ತಂದೆ ಠಾಕರೂನಾಯಕ ಚವ್ಹಾಣ ವಯಾ:35 ಸಾ: ಹೋಸ್ಕೇರಾ ಮೇಲಿನ ತಾಂಡಾ (ಟಾಕಿ ತಾಂಡ) ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2019 ಕಲಂ: 323, 354, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:-32/2019 ಕಲಂ 457 380 ಐಪಿಸಿ:-ದಿನಾಂಕ:09.06.2019 ರಂದು 5:30 ಪಿಎಮ್ ಕ್ಕೆ ಪಿರ್ಯಾದಿ ಶ್ರೀ. ಸೂಗಯ್ಯ ತಂದೆ ಚನ್ನಬಸಯ್ಯ ಹಿರೇಮಠ ವ:59 ವರ್ಷ ಜಾ: ಹಿಂದೂಲಿಂಗಾಯತ ಉ: ಕಿರಾಣಿ ವ್ಯಾಪಾರಿ ಸಾ; ರಾಜನಕೊಳೂರು ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ ನನಗೆ ಎರಡು ಜನ ಹೆಣ್ಣುಮಕ್ಕಳು ಒಬ್ಬ ಗಂಡು ಮಗನಿದ್ದು ರಾಜನಕೊಳೂರ ಗ್ರಾಮದಲ್ಲಿ ಇರುವ ಮನೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತಿದ್ದು, ದಿನಾಂಕ 05/06/2019 ರಂದು ಬೆಳಿಗ್ಗೆ 6:00 ಗಂಟೆಗೆ ನಾನು ನನ್ನ ಹೆಂಡತಿ ಅಕ್ಕಮಹಾದೇವಿಯವರಿಗೆ ಮೈಯಲ್ಲಿ ಆರಾಮ ಇಲ್ಲದಿರುವುದರಿಂದ ಆಸ್ಪತ್ರೆಗೆ ತೋರಿಸಲು ನಮ್ಮೂರ ಬಸ್ಸಿಗೆ ಕರೆದುಕೊಂಡು ಹೋಗಿದ್ದು, ಮನೆಯಲ್ಲಿ ನನ್ನ ಮಗನಾದ ಚಂದ್ರಶೇಖರ ಮಗಳಾದ ಬಸವರಾಜೇಶ್ವರಿ ಅವರಿದ್ದು, ನನ್ನ ಹೆಂಡತಿ ಅಕ್ಕಮಹಾದೇವಿ ಅವರಿಗೆ ಭಾಗ್ಯವಂತಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದರಿಂದ ನಾನು ಅವಳ ಸಂಗಡ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದು, ಹಿಗೀರುವಾಗ ನಿನ್ನೆ ದಿನಾಂಕ 08/06/2019 ರಂದು ಬೆಳಿಗ್ಗೆ 5:45 ಗಂಟೆ ಸುಮಾರಿಗೆ ನನ್ನ ಮಗನಾದ ಚಂದ್ರಶೇಖರ ಪೋನ ಮಾಡಿ ತಿಳಿಸಿದ್ದು ಏನೆಂದರೆ ನಮ್ಮ ಮನೆಯ ಮುಖ್ಯ ದ್ವಾರದ ಚೀಲಕ ಕೋಯ್ದು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯೊಳಗೆ ಬಂದು ದೇವರ ಮನೆಯ ಪಕ್ಕದ ರೂಮಿಗೆ ಹಾಕಿದ ಕೀಲಿಯನ್ನು ಮುರಿದು ರೂಮಿನ ಒಳಗೆ ಹೋಗಿ ರೂಮಿನಲ್ಲಿಟ್ಟಿದ್ದ ಎರಡು ಕಬ್ಬಿಣದ ಆಲಮರಿಯನ್ನು ಮುರಿದು ಬಟ್ಟೆ ಬರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಆಲಮರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ್ದು, ಕೂಡಲೇ ನಾನು ಬಿಜಾಪುರದಿಂದ ಬಿಟ್ಟು ಬೆಳಿಗ್ಗೆ 9:30 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಖ್ಯ ದ್ವಾರದ ಚಿಲಕ ಕೊಯ್ದಿದ್ದು, ಹಾಗೂ ದೇವರ ಮನೆಯ ಪಕ್ಕದ ರೂಮಿಗೆ ಹಾಕಿದ ಕೀಲಿ ಮುರಿದಿದ್ದು. ಕಂಡು ಬಂದಿದ್ದು ಅಲ್ಲದೇ ಅಲಮರಿಯಲ್ಲಿ ಇಟ್ಟಿದ್ದ ಬಟ್ಟೆ ಬರಿಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಕಿದ್ದು ನಾನು ಎರಡು ಆಲಮರಿಯನ್ನು ಚಕ್ ಮಾಡಿ ನೋಡಲಾಗಿ ಆಲಮರಿಯಲ್ಲಿ ಇಟ್ಟಿದ್ದ 1) ಒಂದು ಬಂಗಾರದ ಚಪ್ಲಾರ ನಾಲ್ಕು ತೋಲೆ 2) ನಾಲ್ಕು ಬಂಗಾರದ ಬಿಲ್ವಾರಗಳು ಐದು ತೋಲೆ 3) ಎರಡು ಬಂಗಾರದ ಪಾಟಲಿಗಳು ಐದು ತೋಲೆ 4) ಒಂದು ಬಂಗಾರದ ಎಳೆ ಒಂದೂವರೆ ತೋಲೆ 5) ನೆಕ್ಲೆಸ ಒಂದುವರೆ ತೋಲೆ ಬಂಗಾರದ್ದು 6) ಒಂದು ಬಂಗಾರದ ಸುತ್ತುಂಗರ ಒಂದು ತೋಲೆ 7) ಐದು ಬಂಗಾರದ ಸಣ್ಣ ಉಂಗುರಗಳು ಒಂದೊವರೆ ತೋಲೆ 8) ಎರಡು ಬಂಗಾರದ ಚೈನುಗಳು ಮೂರು ತೋಲೆ 9) ಒಂದು ಜೊತೆ ಕಿವಿಯೋಲೆಗಳು ಬಂಗಾರದ್ದು ಅರ್ಧತೋಲೆ 10) ಮಾಟಿಲ್ಲಾ ಎರಡು ಬಂಗಾರದ್ದು ಮೂರು ಮಾಸಿ 11) ಒಂದು ಜೊತೆ ಬಂಗಾರದ ಹರಳಿನ ಕಿವಿಯೋಲೆಗಳು ಅರ್ಧ ತೋಲೆ. ಹಾಗೂ ನಗದು ಹಣ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು ಇದಲ್ಲದೇ ಕಳುವಾದ ಒಟ್ಟು 23 ತೋಲೆ ಎಂಟು ಮಾಸಿ ಆಗುತ್ತಿದ್ದು, ಇವುಗಳ ಕಿಮ್ಮತ್ತು 5,95,000=00 ( ಐದು ಲಕ್ಷದ ತೋಂಬತ್ತೈದು ಸಾವಿರ ಆಗುತ್ತಿದ್ದು) ನಾನು ನನ್ನ ಮಕ್ಕಳಿಗೆ ವಿಚಾರಿಸಲಾಗಿ ರಾತ್ರಿ 10 ಗಂಟೆಗೆ ಮಲಗಿಕೊಂಡಿದ್ದು. ಬೆಳಿಗ್ಗೆ 5:30 ಗಂಟೆಗೆ ಎದ್ದು ನೋಡಲಾಗಿ ಕಳವು ಆಗಿದ್ದು ಗೊತ್ತಾಗಿದ್ದಾಗಿ ತಿಳಿಸಿದ್ದು, ದಿನಾಂಕ 07/06/2019 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 08/06/2019 ರಂದು ಬೆಳಗಿನ 5:30 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮುಖ್ಯ ದ್ವಾರದ ಚೀಲಕವನ್ನು ಕೊಯ್ದು ಮನೆಯೊಳಗೆ ಹೋಗಿ ದೇವರ ಮನೆಯ ಪಕ್ಕದ ರೂಮಿಗೆ ಹಾಕಿದ ಕೀಲಿ ಮುರಿದು ಒಳಗೆ ಹೋಗಿ ಆಲಮರಿಗಳಲ್ಲಿ ಇಟ್ಟಿದ್ದ ಮೇಲೆ ನಮೂದಿಸಿದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ನಾನು ಕಳುವಾದ ಬಂಗಾರದ ಆಭರಣಗಳನ್ನು ನೋಡಿದಲ್ಲಿ ಗುರುತಿಸುತ್ತೇನೆ. ನನ್ನ ಮನೆ ಕಳುವಾದ ಸುದ್ದಿ ತಿಳಿದು ಊರ ಜನರೆಲ್ಲ ಬಂದು ತಿರುಗಾಡಿ ನೋಡಿದ್ದು, ಅಲ್ಲದೆ ನಾನು ನನ್ನ ಮಕ್ಕಳು ತಿರುಗಾಡಿದ್ದು ನಾನು ಹಿರಿಯರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:32/2019 ಕಲಂ 457 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
Hello There!If you like this article Share with your friend using