ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-06-2019

By blogger on ಭಾನುವಾರ, ಜೂನ್ 2, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-06-2019 

ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:- 37/2019  ಕಲಂ 279, 337, 338 ಐಪಿಸಿ:-ದಿನಾಂಕ 02/06/2019 ರಂದು ಬೆಳಿಗ್ಗೆ 7-15 ಎ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ  ಗಾಯಾಳು ಪಿಯರ್ಾದಿ ಕುಮಾರಿ  ಆಯೇಷಾ ತಂದೆ ಫಾರುಕ್ ಮಹಿಮೂದ  ವಯ;28 ವರ್ಷ, ಜಾ;ಮುಸ್ಲಿಂ, ಉ;ಪ್ರೊಫೆಸರ್, ಸಾ;ಮೋಮಿನಪುರ, ಕಲಬುರಗಿ, ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದನ್ನು ಸಮಯ 8-15 ಎ.ಎಂ. ದಿಂದ 9-15 ಎ.ಎಂ ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂಧರೆ ನಾನು ಕಲಬುರಗಿಯ ಒಂದು ಕಾಲೇಜಿನಲ್ಲಿ ಪ್ರೊಫೆಸರ್ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮ ಸಂಬಂಧಿ ಮಾಮನವರಾದ ಶ್ರೀ ಅಹ್ಮದ್ ಫಯಾಜುದ್ದೀನ್ ತಂದೆ ಯಾಕುಬ್ ಅಲಿ ಮನಿಯಾರ್ ಇವರು ನಿನ್ನೆ ದಿನಾಂಕ 01/06/2019 ರಂದು ಸಾಯಂಕಾಲ ನಮ್ಮ ಮನೆಗೆ ಬಂದು ನಾಳೆ ಗದ್ವಾಲ್ದಲ್ಲಿ ನಮ್ಮ ಸಮಾಜದ ಗುರುಗಳಿದ್ದು ಅವರಿಗೆ ಭೇಟಿಯಾಗಿ ಬರೋಣ ಅಂದಾಗ ಅದಕ್ಕೆ ನಾನು ಮತ್ತು ನನ್ನ ತಾಯಿ ಇಬ್ಬರು ಅವರೊಂದಿಗೆ ಒಪ್ಪಿಕೊಂಡೆವು. ಹೀಗಿದ್ದು ಇಂದು ದಿನಾಂಕ 02/06/2019 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನಮ್ಮ ಮಾಮನವರು ಅವರ ತಂಗಿಯಾದ ನಸೀಮಾ ತಂದೆ ಯಾಕುಬ್ ಅಲಿ ಮನಿಯಾರ್ ಇವರಿಗೆ ಕರೆದುಕೊಂಡು ಕಾರ್ ನಂಬರ ಕೆಎ-36, ಎನ್-4669 ನೇದ್ದರಲ್ಲಿ ಬಂದು ನಡೀರಿ ಗದ್ವಾಲ್ಗೆ ಹೋಗೋಣ ಅಂತಾ ನಮ್ಮ ಮನೆ ಹತ್ತಿರ ಬಂದಾಗ ನಾನು ಮತ್ತು ನನ್ನ ತಾಯಿ ತಸ್ಲೀಮಾರವರು ಅದೇ ಕಾರಿನಲ್ಲಿ ಕುಳಿತೆವು. ನಾವು ಹೊರಟ ಕಾರಿನ ಚಾಲಕ ನಮಗೆ ಈ ಮೊದಲೇ ಪರಿಚಯವಿದ್ದು ಆತನ ಹೆಸರು ಮಹ್ಮದ್ ಹಯಾಜ್ ತಂದೆ ಮಹಮದ್ ಇಬ್ರಾಹಿಂ ಶೇಕ್ ಸಾ;ಶಹಾಬಾದ್ ಇರುತ್ತಾನೆ. ನಾವು ಕಲಬುರಗಿಯಿಂದ ಕಾರಿನಲ್ಲಿ ಹೊರಟೆವು ಮಾರ್ಗ ಮದ್ಯೆ ಯಾದಗಿರಿ ಸಮೀಪ ಅಲ್ಲಿಪುರ ಕ್ರಾಸ್ ದಾಟಿದ ನಂತರ ನಮ್ಮ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ  ಕಾರಿನಲ್ಲಿದ್ದ ನಾವು ನಿದಾನವಾಗಿ ಹೋಗು ಅಂತಾ ಹೇಳಿದೆವು ಅದೇ ಸಮಯಕ್ಕೆ ಯಾದಗಿರಿ ಕಡೆಯಿಂದ ಬರುತ್ತಿದ್ದ ಒಬ್ಬ ಲಾರಿ ಚಾಲಕನು ಕೂಡ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಮ್ಮೆದುರಿಗೆ ಬರುತ್ತಿದ್ದು ನಾವುಗಳು ನೋಡು ನೋಡುತ್ತಿದ್ದಂತೆ ನಮ್ಮ ಕಾರಿನ ಚಾಲಕ ಮತ್ತು ಲಾರಿ ಚಾಲಕನ ನಿರ್ಲಕ್ಷ್ಯತನದಿಂದ ಒಂದಕ್ಕೊಂದು ಡಿಕ್ಕಿಕೊಟ್ಟುಕೊಂಡಾಗ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಾಲು ತೊಡೆಗೆ, ಸೊಂಟಕ್ಕೆ, ಎದೆಗೆ, ಕುತ್ತಿಗೆಗೆ, ಹೊಟ್ಟೆಗೆ ಗುಪ್ತಗಾಯವಾಗಿದ್ದು, ಕಾರಿನಲ್ಲಿದ್ದ ನನ್ನ ತಾಯಿ ತಸ್ಲೀಮಾ ಇವರಿಗೆ ತಲೆಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿ ಬೇವುಶ್ ಆಗಿದ್ದು ಅವರ ಬಲಗಾಲಿನ ಪಾದದ ಮೇಲೆ ಬಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ. ನಸೀಮಾ ಇವರಿಗೆ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಎಡಗೈಗೆ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು ಇರುತ್ತದೆ, ನಮ್ಮ ಮಾಮ ಅಹ್ಮದ್ ಫಯಾಜುದ್ದೀನ್ ಇವರಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯ, ಮುಖಕ್ಕೆ, ಕಣ್ಣುಗಳಿಗೆ ತರಚಿದ ರಕ್ತಗಾಯವಾಗಿ ಬೇವುಶ್ ಆಗಿರುತ್ತಾರೆ, ನಮ್ಮ ಕಾರ್ ಚಾಲಕ ಮಹ್ಮದ್ ಹಯಾಜ್ ಇವರಿಗೆ ಎದೆಗೆ ಬಾರೀ ಗುಪ್ತಗಾಯವಾಗಿದ್ದು ಇರುತ್ತದೆ. ನಾನು ಕಾರಿನಿಂದ ಕೆಳಗೆ ಬಂದು ನೋಡಲಾಗಿ ನಮಗೆ ಅಪಘಾತ ಪಡಿಸಿದ ಲಾರಿ ಸ್ಥಳದಲ್ಲಿದ್ದು ಅದರ ನಂಬರ ಕೆಎ-34, ಬಿ-5467 ನೇದ್ದು ಇದ್ದು ಅದರ ಚಾಲಕನು ಕೂಡ ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಾಗರಾಜ ತಂದೆ ಮಾನಪ್ಪ ಅನೆಹೊಸುರ ಸಾ;ಉಪ್ಪೇರಿ, ತಾ;;ಲಿಂಗಸೂಗುರ ಅಂತಾ ತಿಳಿಸಿರುತ್ತಾನೆ ಈ ಘಟನೆ ಬಗ್ಗೆ ನಾನು ನಮ್ಮ ಸಂಬಂಧಿಯಾದ ಶ್ರೀ ಮಹ್ಮದ್ ಅಜರ್ ತಂದೆ ಮಹ್ಮದ್ ಫಯಾಜುದ್ದೀನ್ ಮನಿಯಾರ್ ಈತನಿಗೆ ತಿಳಿಸಿದಾಗ ಆತನು ನೀವು ಸಮೀಪದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಿ ನಾನು ಅಲ್ಲಿಗೆ ಬರುತ್ತೇನೆ ಅಂತಾ ತಿಳಿಸಿದನು.  ಸದರಿ ಘಟನೆಯು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ ಅಂದಾಜು 6-15 ಎ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರ ಹಳ್ಳಿ ಗೇಟ್ ಹತ್ತಿರ ಜರುಗಿದ್ದು, ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲೆಯ ಪೊಲಿಸರ ಹೈವೆ ಪೆಟ್ರೋಲ್ ವಾಹನ ಮತ್ತು 108 ಅಂಬುಲೆನ್ಸ್ ಸ್ಥಳಕ್ಕೆ ಬಂದಾಗ ಅವುಗಳಲ್ಲಿ ನಾವುಗಳು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಬಂದು ಸೇರಿಕೆ ಆಗಿರುತ್ತೇವೆ. ನಂತರ ಆಸ್ಪತ್ರೆಗೆ ಶ್ರೀ ಮಹಮದ್ ಅಜರ್  ಹಾಗು ಆತನ ಸಂಗಡ ಶ್ರೀ ಸೋಹಿಲ್ ತಂದೆ ಪಾಶಾಮಿಯಾ ಖಾನ್ ಸಾ;ಕಲಬುರಗಿ ಇವರು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ 6-15 ಎ.ಎಂ ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರ ಹಳ್ಳಿ ಗೇಟ್ ಹತ್ತಿರ ಕಾರ್ ನಂಬರ ಕೆಎ-36, ಎನ್-4669  ಮತ್ತು ಲಾರಿ ನಂಬರ ಕೆಎ-34, ಬಿ-5467 ನೇದ್ದರ ಇಬ್ಬರು ಚಾಲಕರುಗಳ ಅತೀವೇಗ ಮತ್ತು ಅಲಕ್ಷ್ಯತನದಿಂದ ಈ ಅಪಘಾತ ಜರುಗಿದ್ದು ಇಬ್ಬರು ಚಾಲಕರುಗಳ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಸಮಯ 8-15 ಎ.ಎಂ. ದಿಂದ 9-15 ಎ.ಎಂ ದ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ  9-30 ಎ.ಎಂ.ಕ್ಕೆ ಬಂದು  ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 37/2019 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:- 38/2019  ಕಲಂ 279, 338 ಐಪಿಸಿ :- ದಿನಾಂಕ 02/06/2019 ರಂದು ಬೆಳಿಗ್ಗೆ  10-45 ಎ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಆದೆಪ್ಪ ತಂದೆ ಚನ್ನಪ್ಪ ವಡ್ಡರ ವಯ;27 ವರ್ಷ, ಜಾ;ವಡ್ಡರ, ಸಾ;ಹುಲಕಲ್(ಜೆ), ಹಾ;ವ;ಪಗಲಾಪುರ ಇವರು ಪ್ರಜ್ಞಾವಸ್ಥೆಯಲ್ಲಿ ಇರದ ಕಾರಣ  ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳುವಿನ ತಾಯಿಯಾದ ಪಿಯರ್ಾದಿ ಶ್ರೀಮತಿ  ಕಾಂತಮ್ಮ ಗಂಡ ಚನ್ನಪ್ಪ  ವಡ್ಡರ  ವಯ;48 ವರ್ಷ, ಜಾ;ವಡ್ಡರ, ಉ;ಕೂಲಿ ಕೆಲಸ, ಸಾ;ಹುಲಕಲ್(ಜೆ), ಹಾ;ವ;ಪಗಲಾಫುರ ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ  10 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಆದೆಪ್ಪ ಈತನು ತನ್ನ ಸ್ನೇಹಿತನ ಮೋಟಾರು ಸೈಕಲ್ ನಂಬರ ಕೆಎ-33, ಕೆ-9522 ನೇದ್ದನ್ನು ತೆಗೆದುಕೊಂಡು  ತನ್ನ ಕೆಲಸದ ನಿಮಿತ್ಯ ಯಾದಗಿರಿಗೆ ಹೋಗಿ ಬರುತ್ತೇನೆಂದು  ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಸ್ವಲ್ಪ ಸಮಯದ ನಂತರ ನಮ್ಮ ಸಂಬಂಧಿಯಾದ ಶ್ರೀ ಹಣಮಂತ ತಂದೆ ಮಾರೆಪ್ಪ ವಡ್ಡರ ಈತನು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನಮ್ಮ ಸಂಬಂಧಿ ಶಂಕರ ತಂದೆ ರಂಗಪ್ಪ ವಡ್ಡರ ಈತನು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ತಾನು ಮತ್ತು ತನ್ನ ಸ್ನೇಹಿತನಾದ ಸಣ್ಣಮರೆಪ್ಪ ತಂದೆ ಗಿರೆಪ್ಪ ವಡ್ಡರ  ಸಾ;ವರ್ಕನಳ್ಳಿ ಇಬ್ಬರು ಯಾದಗಿರಿ ನಗರದ ಕುಬೇರ ಡಾಬಾದ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಮ್ಮ ಸಂಬಂಧಿಯಾದ ಆದೆಪ್ಪ ತಂದೆ ಚನ್ನಪ್ಪ  ವಡ್ಡರ ಈತನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಹೊರಟಿದ್ದ ದನಕ್ಕೆ ಡಿಕ್ಕಿ ಕೊಟ್ಟು ಸ್ಕಿಡ್ಡಾಗಿ ರಸ್ತೆ ಮೇಲೆ ಬಿದ್ದಾಗ ನಾವಿಬ್ಬರು ಓಡೋಡಿ ಆತನ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ಆದೆಪ್ಪನಿಗೆ ತಲೆಗೆ ಬಾರೀ ಗುಪ್ತಗಾಯವಾಗಿ ಎರಡು ಕಿವಿಗಳಿಂದ ರಕ್ತ ಹೊರಬರುತ್ತಿದ್ದು ಹಾಗೂ ಎರಡು ಕೈ ಬೆರಳುಗಳಿಗೆ ತರಚಿದ ರಕ್ತಗಾಯ ಆಗಿದ್ದು ಬೇವುಶ್ ಆಗಿರುತ್ತಾನೆ. ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂಬರ ಕೆಎ-33, ಕೆ-9522  ನೇದ್ದು ಇದ್ದು ಸದರಿ ಘಟನೆಯು ಇಂದು ದಿನಾಂಕ 02/06/2019 ರಂದು 10-30 ಎ.ಎಂ.ಕ್ಕೆ ಹೊಸಳ್ಳಿ ಕ್ರಾಸ್- ಗಂಜ್ ಕ್ರಾಸ್ ಮುಖ್ಯ ರಸ್ತೆ ಮೇಲೆ ಬರುವ ಕುಬೇರ ಡಾಬಾದ ಮುಂದಿನ ರಸ್ತೆ ಮೇಲೆ ಜರುಗಿದ್ದು  ಈತನಿಗೆ ಉಪಚಾರ ಕುರಿತು ನಾವುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಆದೆಪ್ಪನ ಮನೆಯವರಿಗೆ ವಿಷಯ ತಿಳಿಸಿ ಅವರಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಅಂತಾ ತಿಳಿಸಿರುತ್ತಾನೆ ಆದ್ದರಿಂದ ನಾವು ಬೇಗ ಹೋಗೋಣ ನಡೀರಿ ಅಂದಾಗ ನಾವಿಬ್ಬರು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ಈ ಮೇಲೆ ನಮಗೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು  ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ 10-30 ಎ.ಎಂ. ಕ್ಕೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್-ಗಂಜ್ ಮುಖ್ಯ ರಸ್ತೆ ಮೇಲೆ ಬರುವ  ಕುಬೇರ ಡಾಬಾದ  ಹತ್ತಿರ ಮುಖ್ಯ ರಸ್ತೆ ಮೇಲೆ ನನ್ನ ಮಗನಾದ ಆದೆಪ್ಪನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ದನಕ್ಕೆ ಡಿಕ್ಕಿ ಕೊಟ್ಟು  ಸ್ಕಿಡ್  ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು  ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 12-15 ಪಿ.ಎಂ.ಕ್ಕೆ ಬಂದು  ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 38/2019 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.      

ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:- 39/2019  ಕಲಂ 279, 337, 338 ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್:- ದಿನಾಂಕ 02/06/2019 ರಂದು ಮದ್ಯಾಹ್ನ ಸಮಯ 1 ಪಿ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀ ಯಂಕಪ್ಪ ತಂದೆ ತಿಪ್ಪಣ್ಣ ದೇವದುರ್ಗ  ವಯ;41 ವರ್ಷ, ಜಾ;ಕಬ್ಬಲಿಗ, ಉ;ಕೂಲಿ ಕೆಲಸ, ಸಾ;ತಡಿಬಿಡಿ, ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ  10 ಗಂಟೆ ಸುಮಾರಿಗೆ ನಾನು ಯಾದಗಿರಿಯಲ್ಲಿ ಸಂತೆ ಮಾಡಿಕೊಂಡು ಹೋದರಾಯಿತು ಅಂತಾ ಬಂದಿದ್ದು ಇರುತ್ತದೆ. ಹೀಗಿದ್ದು ನಾನು ಯಾದಗಿರಿಗೆ ಬಂದಾಗ ನನ್ನ ಅಳಿಯನಾದ ಶ್ರೀ ರಾಮಣ್ಣ ತಂದೆ ತಿಪ್ಪಣ್ಣ ಬಾಗೋಡಿ ಸಾ;ಬೆನಕನಳ್ಳಿ ಈತನು ನನಗೆ ಪೋನ್ ಮಾಡಿ ನಾನು  ಯಾದಗಿರಿಯ ನೀಲಕಂಠ ಸೈದಾಪುರ ಆಸ್ಪತ್ರೆಗೆ ನನಗೆ ತೋರಿಸಿಕೊಂಡು ಹೋಗಲು ಬರುತ್ತಿದ್ದೇನೆ, ನೀನು ಯಾದಗಿರಿಗೆ ಬಾ ಅಂದಾಗ ಅದಕ್ಕೆ ನಾನು ಈಗಾಗಲೇ ನಾನು ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಇದ್ದೇನೆ ಬಾ ಅಂತಾ ತಿಳಿಸಿದೆನು. ಸ್ವಲ್ಪ ಸಮಯದ ನಂತರ ನನ್ನ ಅಳಿಯ ರಾಮಣ್ಣನು ತಮ್ಮ ಮೋಟಾರು ಸೈಕಲ್ ನಂಬರ ಕೆಎ-32, ಇಇ-8076 ನೇದ್ದನ್ನು ತೆಗೆದುಕೊಂಡು ಬಂದಾಗ ನಾನು ಅದೇ ಮೋಟಾರು ಸೈಕಲ್ ಮೇಲೆ ಇಬ್ಬರು ಸೇರಿಕೊಂಡು ನೀಲಕಂಠ ಆಸ್ಪತ್ರೆಗೆ ಹೋಗಿದ್ದು, ಆಸ್ಪತ್ರೆಯಲ್ಲಿ ರಾಮಣ್ಣನು ವೈದ್ಯರಲ್ಲಿ ತೋರಿಸಿಕೊಂಡನು. ನಂತರ ರಾಮಣ್ಣನು ನನಗೆ ನೀನು ಇವತ್ತು ನನ್ನ ಸಂಗಡ ನಮ್ಮ ಬೆನಕನಳ್ಳಿ ಗ್ರಾಮಕ್ಕೆ ಬಾ, ನಾಳೆ ಮತ್ತೆ ಮರಳಿ ನಿಮ್ಮ ಊರಿಗೆ ಹೋಗುವಿಯಂತೆ ಕೇಳಿಕೊಂಡಾಗ ಆಯಿತು ನಡೀ ಹೋಗೋಣ ಅಂತಾ ತಯಾರಾಗಿ ಅದೇ ಮೋಟಾರು ಸೈಕಲ್ ಮೇಲೆ ಇಬ್ಬರು ಯಾದಗಿರಿ ಕೋಟರ್ು ಮುಂದಿನ ರಸ್ತೆ ಮೂಲಕ ಬೆನಕನಳ್ಳಿ ಗ್ರಾಮಕ್ಕೆ ಹೊರಟೆವು. ಮೋಟಾರು ಸೈಕಲನ್ನು ರಾಮಣ್ಣನು ನಡೆಸುತ್ತಿದ್ದನು ಮಾರ್ಗ ಮದ್ಯೆ ಯಾದಗಿರಿ ಅಂಬೇಡ್ಕರ್ ನಗರದ ಹತ್ತಿರ ಬರುವ ಶ್ರೀ ತಾಯಮ್ಮ ಆಯಿ ಗುಡಿ ಹತ್ತಿರ ಮುಖ್ಯ ರಸ್ತೆ ಮೇಲೆ ಹೊರಟಾಗ ನಮ್ಮದೆರುಗೆ ಬರುತ್ತಿದ್ದ ಒಬ್ಬ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಾನು ನೋಡು ನೋಡುತ್ತಿದ್ದಂತೆ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಸದರಿ ಅಪಘಾತದಲ್ಲಿ ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ರಸ್ತೆ ಮೇಲೆ ಬಿದ್ದಾಗ ನನಗೆ ಮೊಣಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಎದ್ದು ನೋಡಲು ರಾಮಣ್ಣನಿಗೆ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿ ಕಾಲು ಮುರಿದಿದ್ದು, ಬಲಭುಜಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ, ಸದರಿ ಅಪಘಾತವು ಇಂದು ದಿನಾಂಕ 02/06/2019 ರಂದು ಸಮಯ 12-30 ಪಿ.ಎಂ.ಕ್ಕೆ ಜರುಗಿದ್ದು, ಅದೇ ಸಮಯಕ್ಕೆ ಅದೇ ಮಾರ್ಗವಾಗಿ ಹೊರಟಿದ್ದ ನಮ್ಮೂರಿನ ಶ್ರೀ ನಾಗಪ್ಪ ತಂದೆ ಸಿದ್ದಪ್ಪ ಸಂದೂರದೋರ ಹಾಗೂ ಶರಣಪ್ಪ ತಂದೆ ತಿಪ್ಪಣ್ಣ ಸಾ;ಇಬ್ಬರು ತಡಬಿಡಿ ಇವರುಗಳು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ ನಮಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ್ ಸ್ಥಳದಲ್ಲಿದ್ದು ಅದರ ಇಂಜಿನ್ ನಂಬರ ಕೆಎ-36, ಟಿಬಿ-5821 ನೇದ್ದು ಇದ್ದು, ಟ್ರ್ಯಾಲಿಗೆ ನಂಬರ ಕಂಡು ಬಂದಿರುವುದಿಲ್ಲ, ಟ್ರ್ಯಾಕ್ಟರ್ ಚಾಲಕನು ನಮ್ಮನ್ನು ನೋಡಿ ಟ್ರ್ಯಾಕ್ಟರ್ನ್ನು ಬಿಟ್ಟು ಓಡಿ ಹೋಗಿರುತ್ತಾನೆ ಆತನನ್ನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ನನಗೆ ಮತ್ತು ರಾಮಣ್ಣನಿಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಹೀಗಿದ್ದು ಇಂದು ದಿನಾಂಕ 02/06/2019 ರಂದು ಸಮಯ 12-30 ಪಿ.ಎಂ. ಕ್ಕೆ ಯಾದಗಿರಿ ನಗರದ ಅಂಬೇಡ್ಕರ್ ನಗರದ ಹತ್ತಿರ ಬರುವ ಶ್ರೀ ತಾಯಮ್ಮ ಆಯಿ ಗುಡಿ ಹತ್ತಿರ ಮುಖ್ಯ ರಸ್ತೆ ಮೇಲೆ ನಮ್ಮ ಮೋಟಾರು ಸೈಕಲಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ಓಡಿ ಹೋದ ಟ್ರ್ಯಾಕ್ಟರ್ ಚಾಲಕನ ಮೇಲೆ  ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು  ಪಡೆದುಕೊಂಡು ಮರಳಿ ಠಾಣೆಗೆ 2-30 ಪಿ.ಎಂ.ಕ್ಕೆ ಬಂದು  ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 39/2019 ಕಲಂ 279, 337, 338 ಐಪಿಸಿ ಸಂಗಡ ಕಲಂ 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
                                                                                                                       
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 68/2019  ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 02/06/2019 ರಂದು ಆರೋಪಿತರೆಲ್ಲರೂ ಕೂಡಿ  ಮುಡಬೂಳ ಗ್ರಾಮದ ನಿಂಗಣ್ಣ ಹೆಳವರ ಈತನ ಗ್ಯಾರೇಜ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.45 ಪಿ.ಎಮ್ ಕ್ಕೆ ದಾಳಿ ಮಾಡಿ 04 ಜನ ಆರೋಪಿತರಿಗೆ ಹಿಡಿದು ನಗದು ಹಣ 2180/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 3.30 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 4.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 68/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 69/2019 ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 02/06/2019 ರಂದು ಆರೋಪಿತರೆಲ್ಲರೂ ಕೂಡಿ ಅಣಬಿ ಗ್ರಾಮದ ಸಂಗಣ್ಣ ಸಾಹುಕಾರ ಈತನ ಹಾಳು ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.45 ಪಿ.ಎಮ್ ಕ್ಕೆ ದಾಳಿ ಮಾಡಿ 04 ಜನ ಆರೋಪಿತರಿಗೆ ಹಿಡಿದು ನಗದು ಹಣ 2310/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 6.30 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7.45 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 69/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 54/2019 ಕಲಂ: 147, 143, 148, 448, 427, 323, 324, 354, 506 ಸಂ: 149 ಐಪಿಸಿ:-ದಿನಾಂಕ: 02/06/2019 ರಂದು 09.30 ಪಿಎಂ ಕ್ಕೆ ಪಿಯರ್ಾದಿ ಶರಣಪ್ಪ ತಂದೆ ಹಣಮಂತ್ರಾಯ ಹೂಗಾರ ವಯಾ: 72 ವರ್ಷ ಉ: ಒಕ್ಕಲುತನ ಜಾ: ಹೂಗಾರ ಸಾ: ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಯ ಸಾರಂಶವೆನಂದರೆ, ನನಗೆ 5 ಜನ ಗಂಡು ಮಕ್ಕಳು ಇದ್ದು 03 ಜನರ ಮದುವೆ ಮಾಡಿರುತ್ತೇನೆ. ನಮ್ಮ ಸಂಸಾರ ದೊಡ್ಡದು ಇದ್ದುದರಿಂದ ಊರಲ್ಲಿನ ಸರಕಾರಿ ಶಾಲೆ ಹತ್ತಿರ ಇರುವ ನಮ್ಮ ಮನೆ ನಂ:1-101 ನೇದ್ದರಲ್ಲಿ ನನ್ನ ಮಗ ನಾಗರಡ್ಡಿ ಮತ್ತು ಅವನ ಹೆಂಡತಿ ವಾಸವಿದ್ದು ಅವರು ಊರಿಗೆ ಹೋಗಿದ್ದರಿಂದ, ನನ್ನ ಹೆಂಡತಿ ಮತ್ತು ಮಗ ಜಗದೀಶ ಇವರು ಇಂದು ದಿನಾಂಕ: 02/06/2019 ರಂದು 08.00 ಎಎಂ ಸುಮಾರಿಗೆ ಕಸ ಗೂಡಿಸಲು ಅಂತಾ ನಮ್ಮ ಶಾಲೆಯ ಹತ್ತಿರ ಇರುವ ಸದರಿ ಮನೆಗೆ ಹೋಗಿದ್ದರು. ಆಗ ನಮ್ಮೂರಿನ 1) ಮಲ್ಲಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟೀಲ್ 2) ಗೀರಿಶ ತಂದೆ ಭೀಮಣ್ಣಗೌಡ 3) ಭೀಮಣ್ಣ ತಂದೆ ದೇವರಡ್ಡಿ 4) ಜಗಪ್ಪ ತಂದೆ ಹಣಮಂತ್ರಾಯ ವಡ್ಡೊಡಗಿ 5) ಅಂಬ್ರಪ್ಪ ತಂದೆ ದೇವರಡ್ಡಿ 6) ದೇವರಡ್ಡಿ ತಂದೆ ಅಂಬ್ರಪ್ಪ ವಡ್ಡೋಡಗಿ, 7) ಮಂಜುನಾಥ ತಂದೆ ಭಿಮಣ್ಣಗೌಡ ಪೊಲೀಸ್ ಪಾಟೀಲ 8) ಬಲಂತ್ರಾಯ ತಂದೆ ಹಣಮಂತ್ರಾಯ ವಟ್ಟೊಡಗಿ 9) ಶಂಕ್ರಯ್ಯ ತಂದೆ ಮಲ್ಲೇಶಯ್ಯ ಹಿರೇಮಠ 10) ಬಸಯ್ಯ ತಂದೆ ಈರಯ್ಯ ಹಿರೇಮಠ 11) ಸಂಗಯ್ಯ ತಂದೆ ಮಲ್ಲಯ್ಯ ಹಿರೇಮಠ 12) ಶರಣಪ್ಪ ತಂದೆ ಅಂಬ್ರಪ್ಪ ವಡ್ಡೊಡಗಿ ಎಲ್ಲರು ಸಾ: ಕರಕಳ್ಳಿ ಇವರುಗಳು ಕೂಡಿ ನಮ್ಮ ಮನೆಯನ್ನು ಅತೀಕ್ರಮ ಪ್ರವೆಶ ಮಾಡಿ, ಒಂದು ಜೆಸಿಬಿ ಯಿಂದ ನಮ್ಮ ಮನೆಯ ಗೋಡೆ ಕೆಡುವದನ್ನು ನೋಡಿದ ನನ್ನ ಹೆಂಡತಿ ಮತ್ತು ಮಕ್ಕಳು ನನಗೆ ಪೋನ ಮಾಡಿದ್ದರು. ಆಗ ನಾನು ಸ್ಥಳಕ್ಕೆ ಹೋಗಿದ್ದು, 1) ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಈತನು ನನ್ನ ಹೆಂಡತಿ ಸೂಗಮ್ಮ ಗಂಡ ಶರಣಪ್ಪ ಹೂಗಾರ ಇವಳು ನಮ್ಮ ಮನೆಗೆ ಯಾಕೆ ಜೆಸಿಬಿ ಹಚ್ಚಿದ್ದಿಯಾ ನಿಲ್ಲಸು ಅಂತಾ ಕೇಳಿದ್ದಕ್ಕೆ ನನ್ನ ಹೆಂಡತಿಗೆ ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ನೀನು ಅಡ್ಡ ಬಂದರೆ ಜೆಸಿಬಿ ಹಲ್ಲಿನಿಂದ ಹೊಡೆಸಿ ಖಲಾಸ್ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುತ್ತಾರೆ. ಆಗ ಅಲ್ಲೆ ಇದ್ದ ನನ್ನ ಮಗ ಜಗದೀಶ ಈತನು ಬಿಡಿಸಿಕೊಳ್ಳಲು ಹೋದಾಗ 2) ಗೀರಿಶ ತಂದೆ ಭೀಮಣ್ಣಗೌಡ ಈತನು ಕೈಯಿಂದ ಕಪಾಳಕ್ಕೆ ಹೊಡೆದನು. 3) ಭೀಮಣ್ಣ ತಂದೆ ದೇವರಡ್ಡಿ ಈತನು ಕೆಳಗೆ ಕೆಡವಿ ಕಲ್ಲಿನಿಂದ ನನ್ನ ಮಗ ಜಗದೀಶನ ಎಡಗಾಲಿನ ಕಿರುಬೆರಳಿಗೆ ಹೊಡೆದು ರಕ್ತ ಗಾಯ ಮಾಡಿರುತ್ತಾನೆ. ಅಷರಲ್ಲಿ ನಾನು ಮತ್ತು ನನ್ನ ಇನ್ನೊಬ್ಬ ಮಗ ದೇವಿಂದ್ರಪ್ಪ ತಂದೆ ಶರಣಪ್ಪ ಹೂಗಾರ ಇಬ್ಬರು ಬಿಡಿಸಿಕೊಳ್ಳಲು ಹೋದಾಗ ದೇವಿಂದ್ರಪ್ಪ ಇವನಿಗೆ 4) ಜಗಪ್ಪ ತಂದೆ ಹಣಮಂತ್ರಾಯ ಒಡ್ಡೊಡಗಿ ಈತನು ಒಂದು ಕಲ್ಲಿನಿಂದ ಕಪಾಳಕ್ಕೆ ಹೆಡೆದು ಗುಪ್ತಗಾಯ ಮಾಡಿದ ಮತ್ತು 5) ಅಂಬ್ರಪ್ಪ ತಂದೆ ದೇವರಡ್ಡಿ ಇತನು ದೇವಿಂದ್ರಪ್ಪನಿಗೆ ಕೈಯಿಂದ ಹೊಡೆದನು.  ಅಷ್ಟರಲ್ಲಿ ನಾನು ಮತ್ತು ನನ್ನ ಮಗಳು ಪದ್ಮಾವತಿ ಗಂಡ ನಿಂಗಣ್ಣ ಮತ್ತು ನಮ್ಮ ಮಗ ಈರಣ್ಣ ತಂದೆ ಶರಣಪ್ಪ ಎಲ್ಲರೂ ಕೂಡಿ ಬಿಡಿಸಿಕೊಂಡೆವು ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಸದರಿಯವರೆಲ್ಲರೂ ನಮ್ಮ ಮನೆಯನ್ನು ಕೆಡವಿ ನಮ್ಮ ಮನೆಯ ಪತ್ರಾಸ್ ಗಳನ್ನು ಕಿತ್ತಿ ದೇವರಡ್ಡಿ ಇವರ ಮನೆಯಲ್ಲಿ ಇಟ್ಟಿರುತ್ತಾರೆ. ನಾನು ನನ್ನ ಹೆಂಡತಿ, ಮಕ್ಕಳಿಗೆ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿಕೊಂಡು ಬಂದು ಹೇಳಿಕೆ ನೀಡಿದ್ದು ಇರುತ್ತದೆ.ಕಾರಣ ನಮ್ಮ ಮನೆಯನ್ನು ಜೆಸಿಬಿ ನಂ: ಕೆಎ-33-4091 ನೇದ್ದರಿಂದ ಕೆಡವಿ ಮನೆಯನ್ನು ಹಾನಿ ಮಾಡಿದ್ದು ಅದನ್ನು ಕೇಳಲು ಹೊದಾಗ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಜೀವ ಭಯ ಹಾಕಿರುವ ಸದ್ರಿ ಮೇಲೆ ನಮೂದಿಸಿದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2019 ಕಲಂ: 147, 143, 148, 448, 427, 323, 324, 354, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 139/2019 ಕಲಂ 457, 380 ಐಪಿಸಿ :- ದಿನಾಂಕ: 02/06/2019 ರಂದು 08:00 ಎ.ಎಂ.ಕ್ಕೆ ಶ್ರೀ ಸಿದ್ದಲಿಂಗರಡ್ಡಿ ತಂದೆ ಭೀಮನಗೌಡ ಕಂಚಲಕವಿ ಸಾ|| ಕಂಚಲಕವಿ ಹಾ||ವ|| ಲಕ್ಷ್ಮಿನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಮಾವ ಅರವಿಂದರೆಡ್ಡಿ ತಂ/ ರಾಮರಡ್ಡಿ ರವರು ಒಂದು ವಾರದ ಹಿಂದೆ ಬಾಪುಗೌಡ ನಗರದ ಅರವಿಂದ ತಂ/ ನಾನಾಗೌಡ ಪಾಟೀಲ್ ಇವರ ಮನೆಯಲ್ಲಿ ಬಾಡಿಗೆಗೆ ಇದ್ದರು, ಸಾಯಂಕಾಲ 6 ಗಂಟೆಗೆ ಮನೆ ಕೀಲಿ ಹಾಕಿಕೊಂಡು ಗುರಮಿಟಕಲ್ ಹತ್ತಿರದ ತಿಪ್ಪನಾಮಪಲ್ಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಗಂಡ ಹೆಂಡತಿ ಇಬ್ಬರು ಹೋಗಿದ್ದರು. ಇಂದು ದಿನಾಂಕ; 02/06/2019 ರಂದು ಬೆಳಿಗ್ಗೆ 6.00 ಎ.ಎಂ.ಕ್ಕೆ ನಮ್ಮ ಮಾವ ಅರವಿಂದರಡ್ಡಿ ಇವರು ನನಗೆ ಫೋನ್ ಮಾಡಿ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಕಳ್ಳತನವಾಗಿದೆ ಅಂತಾ ನನಗೆ ಫೋನ್ ಬಂದಿದೆ ನೀನು ಹೋಗಿ ನೋಡು, ನಾನು ಬರುತ್ತೇನೆ ಅಂತಾ ಹೇಳಿದಾಗ ನಾನು ಬಾಪುಗೌಡ ನಗರದ ನಮ್ಮ ಮಾವನ ಮನೆಗೆ ಹೋಗಿ ನೋಡಲಾಗಿ ನಮ್ಮ ಮಾವನ ಮನೆಯ ಮುಖ್ಯದ್ವಾರದ ಕೀಲಿ ಮುರಿದಿದ್ದು, ಮನೆಯೊಳಗಡೆ ಹೋಗಿ ನೋಡಲಾಗಿ ಬೆಡ್ ರೂಮಿನಲ್ಲಿರುವ ಅಲಮಾರಿಯ ಬಾಗಿಲು ಓಪನ್ ಆಗಿದ್ದು, ಅಲಮಾರಿಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನನ್ನ ಮಾವ ಅಲಮಾರಿಯಲ್ಲಿ ಬಂಗಾರದ ಲಾಂಗ್ ಚೈನ್ ಹಾಗೂ ಇತರೆ ಆಭರಣಗಳು, ನಗದು ಹಣ 5000=00 ರೂಪಾಯಿಗಳು ಇದ್ದವು ನೋಡು ಅಂತಾ ಹೇಳಿದಾಗ ನಾನು ನೋಡಲಾಗಿ ಅಲ್ಲಿ ಬಂಗಾರ ಮತ್ತು ನಗದು ಹಣ ಕಾಣಿಸಲಿಲ್ಲ ನಂತರ ಪಕ್ಕದ ಮನೆಯ ಸಾಬಯ್ಯ ತಂ/ ಮಲ್ಲಣ್ಣ ದಿಗ್ಗಿ ರವರಿಗೆ ವಿಚಾರಿಸಲಾಗಿ ಅವರ ಮನೆಯ ಮೇನ್ ಡೋರನ ಕೀಲಿ ಮುರಿದು ಮನೆಯೊಳಗೆ ಹೋಗಿ ಬೆಡ್ ರೂಮಿನಲ್ಲಿದ್ದ ಸಾಮಾನುಗಳನ್ನು ಕಿತ್ತಿ ಹಾಕಿದ್ದು, ಯಾವುದೇ ವಸ್ತು ಕಳ್ಳತನವಾಗಿರಲಿಲ್ಲ ಅಂತಾ ಹೇಳಿದ್ದು, ಮತ್ತು ಅವರು ನಿನ್ನೆ ದಿನಾಂಕ: 01/06/2019 ರಂದು ಸಂಜೆ 6.00 ಪಿ.ಎಂ ವರೆಗೆ ಮನೆಯಲ್ಲಿದ್ದು, ನಂತರ ಮನೆ ಕೀಲಿ ಹಾಕಿಕೊಂಡು ತಮ್ಮ ಊರಿಗೆ ಹೋಗಿದ್ದಾಗಿ ಹೇಳಿದರು. ನಮ್ಮ ಮಾವನವರು ಊರಿನಿಂದ ಬಂದ ನಂತರ ಮನೆಯಲ್ಲಿ ಪರಿಶೀಲಿನ ಮಾಡಿ ಮನೆಯಲ್ಲಿ ಇನ್ನೂ ಏನೇನು ಕಳ್ಳತನವಾಗಿರುತ್ತದೆ ಅಂತಾ ವಿಚಾರ ಮಾಡಿ ನಂತರ ಬಂದು ತಿಳಿಸುತ್ತೇನೆ. ಕಾರಣ ದಿನಾಂಕ: 01/06/2019 ರಂದು ಸಂಜೆ 6.00 ಪಿ.ಎಂ ಇಂದ ದಿನಾಂಕ: 02/06/2019 ರಂದು 6.00 ಎ.ಎಂ ಮಧ್ಯದ ಅವಧಿಯಲ್ಲಿ ನನ್ನ ಮಾವನ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.139/2019 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 30/2019 ಕಲಂ 143 147 148 323 324 354 504 506  ಸಂ 149 ಐಪಿಸಿ:-ದಿನಾಂಕ: 01.06.2019 ರಂದು ವಿಜಯಪೂರಕ್ಕೆ ಸಂಜೀವನಿ ಆಸ್ಪತ್ರೆಯಿಂದ  ಎಮ್ಎಲ್ಸಿ  ಮಾಹಿತಿ ಬಂದ ಮೇರೆಗೆ ನಾನು ಹೆಚ್ಸಿ 121 ಬಾಬು ರಾಠೋಡ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಗೋವಿಂದ  ತಂದೆ ಶಂಕರಲಾಲ ಇತನು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ಕಾರಣ ಗಾಯಾಳುವಿನ ತಂದೆ ಶಂಕರಲಾಲ ತಂದೆ ಹಣಮಂತ ರಾಠೋಡ ವ: 40 ವರ್ಷ ಉ: ಒಕ್ಕಲುತನ ಜಾ:ಲಂಬಾಣಿ ಸಾ: ಕಡದರಾಳ ತಾಂಡ ತಾ: ಹುಣಸಗಿ ಇವರಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡು  ಇಂದು ದಿನಾಂಕ:02.06.2019 5:00 ಗಂಟೆಗೆ ಮರಳಿ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಗೋವಿಂದ  ಮತ್ತು ಸುನೀಲ್ ಅಂತಾ  ಇಬ್ಬರೂ ಮಕ್ಕಳಿದ್ದು. ನಾವು ಒಂದು ಮಹಿಳಾ ಸಂಘ ಮಾಡಿಕೊಂಡಿದ್ದು ಅದರ ಅಧ್ಯಕ್ಷರನ್ನಾಗಿ ರುಕ್ಮಬಾಯಿ ಗಂಡ ಮಾರುತಿ ರಾಠೋಡ ಇವರನ್ನು ಮಾಡಿದ್ದು. ನಾವು ಪ್ರತಿ ತಿಂಗಳು ಈ ಸಂಘಕ್ಕೆ 100/ ರೂಪಾಯಿಯಂತೆ 6 ವರ್ಷಗಳ ಕಾಲ ಹಣ ತುಂಬಿದ್ದು  ಈ ಹಣವನ್ನು ನಾವು ರುಕ್ಮಾಬಾಯಿ ರವರಗೆ ಕೇಳಲು ಹೋದರೆ ಅವಳು ಗುಂಡಪ್ಪ ತಂದೆ ಚಂದ್ರಶೇಖರ ರಾಠೋಡ ಇವನ ಹತ್ತಿರ ಕೇಳಿ ನಿಮ್ಮ  ಹಣ ತೆದುಕೊಳ್ಳಿ ಅಂತಾ ಅಂದಿದಕ್ಕೆ. ನಾನು ನನ್ನ ತಾಯಿ ಸೋನಾಬಾಯಿ ಇಬ್ಬರೂ ಕೂಡಿ ಗುಂಡಪ್ಪ ತಂದೆ ಚಂದ್ರಶೇಖರ ರಾಠೋಡ ಇತನಿಗೆ ಕೇಳಲು ಹೋದರೆ ಅವನು ನನಗೆ ಮತ್ತು ನನ್ನ ತಾಯಿಗೆ ಬೈದು ನಾನು ನಿಮಗೆ ದೂಡ್ಡು ಕೊಡುವದಿಲ್ಲಾ  ಅಂತಾ ಹೇಳಿದ್ದರಿಂದ ನಾವು ಸುಮ್ಮನೆ ನಾನು ಮತ್ತು ನನ್ನ ತಾಯಿ ನಮ್ಮ ಮನೆಗೆ ಹೋಗಿದ್ದು ಇರುತ್ತದೆ.ಹೀಗಿದ್ದು ದಿನಾಂಕ:29.05.2019 ರಂದು 6:00 ಗಂಟೆಯ  ಸುಮಾರಿಗೆ ನಾನು ನನ್ನ ಹೆಂಡತಿ ಚಾಂದಿಬಾಯಿ, ನನ್ನ ಅಕ್ಕನ ಮಗ ಸಂತೋಷ ತಂದೆ ಹರಿಶ್ಚಂದ್ರ, ನನ್ನ ಹಿರಿಯ ಮಗ ಗೋವಿಂದ, ನನ್ನ ತಮ್ಮ ಧೀರಪ್ಪ,  ನಾವೆಲ್ಲರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತ್ತಿದ್ದಾಗ, ಗುಂಡಪ್ಪ ತಂದೆ ಚಂದ್ರಶೇಖರ ರಾಠೋಡ  ಇತನ ತಮ್ಮ ರಾಜು ತಂದೆ ಚಂದ್ರಶೇಖರ ರಾಠೋಡ, ಗುಂಡಪ್ಪನ ಕಾಕ ರವಿ ತಂದೆ ನೀಲಕಂಠ ರಾಠೊಡ, ಗುಂಡಪ್ಪನ ಹೆಂಡತಿ ಶಿವಗಂಗ, ಗುಂಡಪ್ಪನ ತಾಯಿ ಕಮಲಾಬಾಯಿ, ಗುಂಡಪ್ಪನ ತಂದೆ ಚಂದ್ರಶೇಖರ, ಗುಂಡಪ್ಪ ಕಾಕ ಮಾರುತಿ ತಂದೆ ನೀಲಕಂಠ ರಾಠೋಡ, ಗುಂಡಪ್ಪನ ಅತ್ತಿಯ ಮಗ ಚಂದು ತಂದೆ ಬಂಗಪ್ಪ ಜಾಧವ, ಗುಂಡಪ್ಪನ ಕಾಕನ ಮಗ ಹೇಮರೆಡ್ಡಿ ತಂದೆ ಮಾರುತಿ ರಾಠೋಡ, ಗುಂಡಪ್ಪನ ಕಾಕಿಂದಿಯರಾದ  ರೇಣಿಬಾಯಿ ಗಂಡ ರವಿ ರಾಠೋಡ, ಜಾನುಬಾಯಿ ಗಂಡ ರವಿ ರಾಠೋಡ, ಗುಂಡಪ್ಪನ ತಾಯಿ ಗಮನಾಬಾಯಿ ಗಂಡ ನೀಲಕಂಠ ರಾಠೋಡ ಇವರೆಲ್ಲರೂ ಕೂಡಿ ಕೈಯಲ್ಲಿ ಕಬ್ಬಿಣ ರಾಡು, ಕ್ರೀಕೆಟ್ ಬ್ಯಾಟ್, ಬಡಿಗೆಳನ್ನು ಹಿಡಿದುಕೊಂಡು ಬಂದು. ನನಗೆ ಏನು ಹಣ ಕೇಳುತ್ತಿ,  ಬೋಸಡಿ ಮಗನ್ಯಾ ಶಂಕ್ಯಾ ನಾವು ಹಣ ಕೊಡಲ್ಲಾ  ನಿನ್ನ ತಮ್ಮ ಧೀರ್ಯಾ ಹತ್ತಿರ ಕೇಳು ಸೂಳ್ಯಾ ಮಗನೇ ಅಂತಾ ಅಂದವರೇ ಅವರಲ್ಲಿಯ ಗುಂಡಪ್ಪ ತಂದೆ ಚಂದ್ರಶೇಖರ ಇತನು ತನ್ನ ಕೈಯಲ್ಲಿ ಬಡಿಗೆಯಿಂದ ನನ್ನ ಮಗ ಗೋವಿಂದನ ತೆಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು, ಚಂದು ತಂದೆ ಬಂಗಪ್ಪ ಜಾಧವ, ಇತನು ತನ್ನ ಕೈಯಲ್ಲಿನ ಕ್ರೀಕೇಟ್ ಬ್ಯಾಟಿನಿಂದ ನನ್ನ ಮಗ ಗೋವಿಂದನ ಕಿವಿಯ ಮೇಲ್ಗಡೆ ಹೊಡೆದು ರಕ್ತಗಾಯ ಪಡಿಸಿದನು, ಇದನ್ನು ನೋಡಿ ಬಿಡಿಸಲು ಹೋದ ನನ್ನ ಅಕ್ಕನ ಮಗನಾದ  ಸಂತೋಷ ತಂದೆ ಹರಿಶ್ಚಂದ್ರ, ಜಾಧವ ಇವನಿಗೆ ರಾಜು ತಂದೆ ಚಂದ್ರಶೇಖರ ರಾಠೋಡ, ಇತನು ಕಬ್ಬಿಣದ ರಾಡಿನಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಮತ್ತೆ ನನ್ನ ಮಗ ಗೋವಿಂದನಿಗೆ ರವಿ ತಂದೆ ನೀಲಕಂಠ ರಾಠೊಡ ಇತನು ತನ್ನ ಕೈಲ್ಲಿದ್ದ ಬಡಿಗೆಯಿಂದ ಎಡಗಾಲು ಮೊಲಕಾಲು ಕೆಳಗೆ ಹೊಡೆದು ಗುಪ್ತಗಾಯ ಪಡಿಸಿದನು, ನನ್ನ ಹೆಂಡತಿ ಚಾಂದಿಬಾಯಿ, ಮತ್ತು ನಾನು ಬಿಡಿಸಲು ಹೋದಾಗ ನನ್ನ ಹೆಂಡತಿಗೆ ಹೇಮರೆಡ್ಡಿ ತಂದೆ ಮಾರುತಿ ರಾಠೋಡ, ಮಾರುತಿ ತಂದೆ ನೀಲಕಂಠ ರಾಠೋಡ, ಇಬ್ಬರೂ ಕೂಡಿ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳಿದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ಶಿವಗಂದ ಗಂಡ ಗುಂಡಪ್ಪ, ಕಮಲಾಬಾಯಿ ಗಂಡ ಚಂದ್ರಶೇಖರ, ಚಂದ್ರಶೇಖರ ತಂದೆ ನೀಲಕಂಠ, ರೇಣಿಬಾಯಿ ಗಂಡ ರವಿ ರಾಠೋಡ, ಗಮನಾಬಾಯಿ ಗಂಡ ನೀಲಕಂಠ ಇವರೆಲ್ಲರೂ ನನ್ನ ನನ್ನ ತಮ್ಮ ದೀರಪ್ಪ ನನ್ನ ಹೆಂಡತಿಗೆ ಬಿಡಿಸಲು ಹೋದಾಗ  ಇವರೆಲ್ಲರು ಕೈ ಮತ್ತು ಬಡಿಗೆಯಿಂದ ಹೊಡೆಯುತ್ತಿದ್ದಾಗ ನಾನು ಮತ್ತು ನನ್ ಹೆಂಡತಿ ಚಿರಾಡಲು ಅಲ್ಲಿಯೇ ಇದ್ದ ಹರಿಶ್ಚಂದ್ರ ತಂದೆ ಪರತಪ್ಪ ಜಾಧವ, ಗೋವಿಂದ ತಂದೆ ರಾಮಪ್ಪ ಜಾಧವ ಇವರು ಬಂದು ಬಿಡಿಸಿದ್ದು. ಅವರು ಬಂದು ಬಿಡಿಸದ್ದಿದ್ದರೆ ಅವರೆಲ್ಲರೂ ಇನ್ನು ಹೊಡೆಯುತ್ತಿದ್ದು ಅವರೆಲ್ಲರೂ ಹೋಗುವಾಗ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಜೀವಂತ ಉಳಿದಿರಿ ಇನ್ನೂಂದು ಸಲ ಸಿಕ್ಕರೆ ನಿಮಗೆ ಜೀವಂತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು. ಆಗ ನನ್ನ ಮಗ ಗೋವಿಂದ ಮತ್ತು ನನ್ನ ಅಕ್ಕನ ಮಗ ಸಂತೋಷ ನನ್ನ ತಮ್ಮ ಧೀರಪ್ಪನಿಗೆ ಸಕರ್ಾರಿ ಆಸ್ಪತ್ರೆ ಕೊಡೇಕಲ್ಲಗೆ ತಂದು ಸೇರಿಕೆ ಮಾಡಿದ್ದು ಅಲ್ಲಿಯ ವೈದ್ಯರು ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ನನ್ನ ಮಗ ಗೋವಿಂದ ಮತ್ತು ನನ್ನ ಅಕ್ಕನ ಮಗ ಸಂತೋಷನಿಗೆ ಸಕರ್ಾರಿ ಆಸ್ಪತ್ರೆ ವಿಜಯಪೂರಕ್ಕೆ ಕರೆದುಕೊಮಡು ಹೋಗಲು ತಿಳಿಸಿದ್ದು  ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ವಿಜಯಪೂರ ಸಕರ್ಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು.  ಅಲ್ಲಿನ ವೈದ್ಯರು ನನ್ನ ಮಗನನ್ನು ಹೆಚ್ಚಿನ ಉಪಚಾರಕ್ಕಾಗಿ ಸಂಜೀವಿಣಿ ಆಸ್ಪತ್ರೆಗೆ ಕಳುಸಿದ್ದು. ನನ್ನ ಮಗನನ್ನ ದಿನಾಂಕ31.05.2019 ರಂದು  ಈ ಆಸ್ಪತ್ರೆಗೆ  ತಂದು ಸೇರಿಕೆ ಮಾಡಿದ್ದು ಕಾರಣ  ವಿನಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿದ ಮೇಲೆ ಹೇಳಿದ ಎಲ್ಲರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ. ಸಾರಾಂಶ  ಮೇಲಿಂದ ಠಾಣೆ ಗುನ್ನೆ ನಂ: 30/2019 ಕಲಂ 143 147 148 323 324 354 504 506  ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತೆನಿಖೆ ಕೈಗೊಂಡೇನು.
  
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 31/2019 ಕಲಂ 143 147 148 323 324 354 504 506  ಸಂ 149 ಐಪಿಸಿ:-ದಿನಾಂಕ:02.06.2019 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಗುಂಡಪ್ಪ ತಂದೆ ಚಂದ್ರಶೇಖರ ರಾಠೋಡ ವಯ:35, ಜಾ:ಲಂಭಾಣಿ, ಉ:ಕೂಲಿ ಕೆಲಸ, ಸಾ:ಕಡದರಾಳ ತಾಂಡಾ ತಾ:ಹುಣಸಗಿ. ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದು ಹಾಜರುಪಡಿಸಿದ ಫೀರ್ಯಾದಿ ಅಜರ್ಿಯ ಸಾರಾಂಶವೆನೆಂದರೆ, ನಾನು, ನನ್ನ ತಮ್ಮ ರಾಜು, ನನ್ನ ಸಣ್ಣವ್ವಳಾದ ರುಕ್ಮಬಾಯಿ ಗಂಡ ಮಾರುತಿ ರಾಠೋಡ, ನನ್ನ ಅಜ್ಜಿಯಾದ ಗಮನಾಬಾಯಿ ಗಂಡ ನೀಲಕಂಠ ನಾವುಗಳು ದಿನಾಂಕ:29.05.2019 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾಲ್ಕು ಜನರು ನಮ್ಮ ಮನೆಯ ಮುಂದೆ ಮಾತನಾಡುತ್ತ ಕುಳಿತಿರುವಾಗ ಧೀರಪ್ಪ ತಂದೆ ಹನಮಂತ ರಾಠೋಡ, ಧೀರಪ್ಪನ ಅಣ್ಣಂದಿರಾದ ಶಂಕರಲಾಲ್ ತಂದೆ ಹಣಮಂತ ರಾಠೋಡ, ಪೀರಪ್ಪ ತಂದೆ ಹಣಮಂತ ರಾಠೋಡ, ಧೀರಪ್ಪನ ಅಣ್ಣನ ಮಗನಾದ ಗೋವಿಂದ ತಂದೆ ಶಂಕರಲಾಲ್ ರಾಠೋಡ, ಧೀರಪ್ಪನ ಮಾವನಾಗಬೇಕಾದ ಹರಿಶ್ಚಂದ್ರ ತಂದೆ ಪರತಪ್ಪ ಜಾಧವ್, ಧೀರಪ್ಪನ ಅಳಿಯ ಸಂತೋಷ ತಂದೆ ಹರಿಶ್ಚಂದ್ರ ಜಾಧವ್, ಧೀರಪ್ಪನ ಅಣ್ಣನ ಹೆಂಡತಿಯಾದ ಚಾಂದಿಬಾಯಿ ಗಂಡ ಶಂಕರಲಾಲ ರಾಠೋಡ, ಧೀರಪ್ಪನ ಹೆಂಡತಿಯಾದ ಲಲಿತಾಬಾಯಿ, ಧೀರಪ್ಪನ ಅಣ್ಣನ ಎರಡನೇ ಹೆಂಡತಿಯಾದ ಶಾನುಬಾಯಿ, ಧೀರಪ್ಪನ ಅತ್ತಯಾಗಬೇಕಾದ ರಾಮಿಬಾಯಿ ಗಂಡ ಹರಿಶ್ಚಂದ್ರ ಜಾಧವ್, ತಾಯಿಯಾದ ಸೋನಾಬಾಯಿ ಗಂಡ ಹನಮಂತ ರಾಠೋಡ ಮತ್ತು ಧೀರಪ್ಪನ ಅಣ್ಣ ಪೀರಪ್ಪನ ಹೆಂಡತಿಯಾದ ಕವಿತಾಬಾಯಿ ಇವರೆಲ್ಲರೂ ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆ ಮತ್ತು ಕೊಡಲಿ ಹಿಡಿದುಕೊಂಡು ಬಂದು ಲೇ ಗುಂಡ್ಯಾ ಸೂಳೇ ಮಗನೇ ನಿನಗೆ ನಾವು ಸಂಘದಲ್ಲಿ ತುಂಬಿದ ಹಣವನ್ನು ನನ್ನ ಅಣ್ಣ ಕೇಳಲು ಬಂದರೇ ಅವನಿಗೆ ಬೈದು ಕಳುಹಿಸಿರೇನಲೇ ಸೂಳೆ ಮಕ್ಕಳೆ ಅಂತಾ ಅಂದವರೇ ಅವರಲ್ಲಿಯ ಧೀರಪ್ಪ ಈತನು ತನ್ನ ಕೈಯಲ್ಲಿಯ ಕೊಡಲಿಯ ತುಂಬಿನಿಂದ ನನ್ನ ತಮ್ಮ ರಾಜುವಿನ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಗೋವಿಂದ ತಂದೆ ಶಂಕರಲಾಲ ರಾಠೋಡ ಈತನೂ ಕೂಡಾ ರಾಜುವಿಗೆ  ತನ್ನ ಕೈಯಲ್ಲಿಯ ಬಡಿಗೆಯಿಂದ ಎಡ ಪಕ್ಕಡಿಗೆ ಹೊಡೆದು ಗುಪ್ತಗಾಯ ಪಡಿಸಿದನು. ನಾನು ಬಿಡಿಸಲು ಹೋದಾಗ ನನಗೆ ಸಂತೋಷ ತಂದೆ ಹರಿಶ್ಚಂದ್ರ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನ ಮೇಲೆ ಹೊಡೆದು ಗುಪ್ತಗಾಯಪಡಿಸಿದನು.  ಪೀರಪ್ಪ ತಂದೆ ಹಣಮಂತ ಈತನು ನನ್ನ ಸಣ್ಣವ್ವಳಾದ ರುಕ್ಮಾಬಾಯಿಯ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು, ಶಂಕರಲಾಲ ತಂದೆ ಹನಂಮತ ಈತನು ರುಕ್ಮಾಬಾಯಿ ಇವಳಿಗೆ ಬಲಗಡೆ ಪಕ್ಕಡಿಗೆ ಕೈಯಿಂದ ಗುದ್ದಿ ಗುಪ್ತಗಾಯಪಡಿಸಿದ್ದು, ಸಂತೋಷ ತಂದೆ ಹರಿಶ್ಚಂದ್ರ ಜಾಧವ್ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ರುಕ್ಮಬಾಯಿಗೆ ತಲೆಯ ಹಿಂಭಾಜುವಿಗೆ ಹೊಡೆದು ಗುಪ್ತಗಾಯಪಡಿಸಿದನು. ನನ್ನ ಅಜ್ಜಿ ಗಮನಾಬಾಯಿ ಇವಳಿಗೆ ಚಾಂದಿಬಾಯಿ ಗಂಡ ಶಂಕರಲಾಲ್ ಇವಳು ತನ್ನ ಕೈಯಿಂದ ಎದೆಗೆ ಗುದ್ದಿ ಗುಪ್ತಗಾಯ ಮಾಡಿದ್ದು, ಲಲಿತಾಬಾಯಿ ಇವಳು ಕೂಡಾ ಗಮನಾಬಾಯಿ ಇವಳಿಗೆ ಬೆನ್ನ ಮೇಲೆ ಗುದ್ದಿ ಗುಪ್ತಗಾಯ ಮಾಡಿದಳು. ಕವಿತಾಬಾಯಿ ಗಂಡ ಪೀರಪ್ಪ ಇವಳು ತನ್ನ ಕೈಯಲ್ಲಿಯ ಬಡಿಗೆಯಿಂದ ಗಮನಾಬಾಯಿ ಇವಳ ಎರಡೂ ಮೊಳಕಾಲುಗಲ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಶಾನುಬಾಯಿ ಗಂಡ ಶಂಕರಲಾಲ, ರಾಮಿಬಾಯಿ ಗಂಡ ಹರಿಶ್ಚಂದ್ರ ಮತ್ತು ಸೊನಾಬಾಯಿ ಗಂಡ ಹಣಮಂತ ಈ ಮೂರು ಜನರು ಕೂಡಿಕೊಂಡು ರುಕ್ಮಾಬಾಯಿ ಹಾಗು ಗಮನಾಯಿಗೆ ತೆಕ್ಕೆಗೆ ಬಿದ್ದು, ತಮ್ಮ ಕೈಯಿಂದ ಹೊಡೆಯುತ್ತಿರುವಾಗ ಅವರು ಚೀರಾಡಲು ಅಲ್ಲಿಯೇ ಇದ್ದ ಕಸನಪ್ಪ ತಂದೆ ಹರಿಶ್ಚಂದ್ರ ರಾಠೋಡ, ಖೀರಪ್ಪ ತಂದೆ ಗೋಪಿಲಾಲ್ ಜಾಧವ್ ಇವರುಗಳು ಬಂದು ಬಿಡಿಸಿದ್ದು, ಇವರುಗಳು ಬಂದು ಬಿಡಿಸದಿದ್ದರೆ ಇನ್ನೂ ನಮಗೆ ಹೊಡೆಯುತ್ತಿದ್ದರು. ಅವರೆಲ್ಲರೂ ಹೋಗುವಾಗು ಇವತ್ತು ನಮ್ಮ ಕೈಯಲ್ಲಿ ಜೀವಂತ ಉಳಿದೀರಿ ಇನ್ನೊಂದು ಸಲ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವದಿಲ್ಲ. ಅಂತಾ ಜೀವದ ಬೆಧರಿಕೆ ಹಾಕಿ ಹೋದರು. ನಂತರ ನಾನು, ನನ್ನ ತಮ್ಮ ರಾಜು, ರುಕ್ಮಾಬಾಯಿ, ಗಮನಾಬಾಯಿ ಎಲ್ಲರೂ ಬಂದು ಕೊಡೆಕಲ್ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಬಂದು ಸೇರಿಕೆಯಾಗಿದ್ದು, ವೈದ್ಯರು ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ನನಗೆ ತಮ್ಮ ರಾಜುವಿಗೆ ಹಾಗು ಅಜ್ಜಿ ಗಮನಾಬಾಯಿಗೆ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ನಾನು ನಿನ್ನೆಯ ವರೆಗೂ ಉಪಚಾರ ಪಡೆದಿದ್ದು, ನನ್ನ ತಮ್ಮ ಮತ್ತು ಅಜ್ಜಿ ಇವರುಗಳು ಇನ್ನೂ ಉಪಚಾರ ಪಡೆಯುತ್ತಿದ್ದು, ನಾನು ತಾಂಡಾದ ಹಿರಿಯರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ಮೇಲೆ ನಮೂದಿಸಿದ ಎಲ್ಲರೂ ನಮ್ಮ ಮನೆಯ ಮುಂದೆ ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ  ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು ವಿನಂತಿ.  ಅಂತಾ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ: 31/2019 ಕಲಂ 143, 147, 148, 323, 324, 354, 504, 506  ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತೆನಿಖೆ ಕೈಗೊಂಡೇನು



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!