ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-06-2019

By blogger on ಶನಿವಾರ, ಜೂನ್ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-06-2019 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ: 279,304(ಎ) ಐಪಿಸಿ:-ದಿನಾಂಕ: 01/06/2019 ರಂದು 7-30 ಎಎಮ್ ಕ್ಕೆ ಶ್ರೀ ಅಶೋಕ ತಂದೆ ಮರೆಪ್ಪ ಬಿಳ್ಹಾರ, ವಯ:23 ವರ್ಷ, ಜಾತಿ:ಕಬ್ಬಲಿಗ, ಉ||ವಿದ್ಯಾಭ್ಯಾಸ ಸಾ||ತಡಿಬಿಡಿ, ತಾ||ವಡಗೇರಾ, ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನಾನು ಬಿ.ಎಸ್ಸಿ.ಪದವಿ ವಿದ್ಯಾಭ್ಯಾಸ ಮುಗಿದಿದ್ದು ಸ್ಪಧರ್ಾತ್ಮಕ ಪರೀಕ್ಷೆಗಳ ತಯಾರಿ ನಡೆಸಿಕೊಂಡಿರುತ್ತೇನೆ.ಹೀಗಿದ್ದು ನಿನ್ನೆ ದಿನಾಂಕಃ31/05/2019 ರಂದು ಕುರುಕುಂದಿ ಗ್ರಾಮದಲ್ಲಿ ಸ್ವಲ್ಪ ಕೆಲಸವಿದೆ ಹೋಗಿಬರುತ್ತೇನೆ ಎಂದು ಹೇಳಿ ನಮ್ಮ ತಂದೆಯು ಮೋಟರ್ ಸೈಕಲ್ ನಂ.ಕೆ.ಎ.33 ಎಸ್.9670 ಪ್ಯಾಶನ್ ಪ್ರೋ ನೇದ್ದರ ಮೇಲೆ ಸಾಯಂಕಾಲ 6 ಗಂಟೆ ಸುಮಾರಿಗೆ ಹೋದನು. ನಾನು ಮತ್ತು ನಮ್ಮ ತಾಯಿ ಮಹಾದೇವಿ ಮನೆ ಹತ್ತೀರ ಇದ್ದೇವು.ರಾತ್ರಿ 8.30 ಗಂಟೆ ಸುಮಾರಿಗೆ ನಮ್ಮ ಅಣ್ಣತಮ್ಮಕಿಯ ಚಿಕ್ಕಪ್ಪನಾದ ಶಂಕರ ತಂದೆ ಮಲ್ಲಪ್ಪ ಬಾಡಿಯಾಳ ಈತನು ನನಗೆ ಫೋನ್ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ರಾಜೇಂದ್ರ ಕೆಲಸದ ಪ್ರಯುಕ್ತ ಕುರುಕುಂದಿ ಗ್ರಾಮಕ್ಕೆ ಬಂದಿದ್ದೆವು.ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ರಾಜೇಂದ್ರ ಇಬ್ಬರೂ ಕುರುಕುಂದಿ ಗ್ರಾಮದಿಂದ ಕೆಲಸ ಮುಗಿಸಿಕೊಂಡು ಮರಳಿ ತಡಿಬಿಡಿಗೆ ನಮ್ಮ ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ನಿಮ್ಮ ತಂದೆಯು ನಮ್ಮ ಮುಂದೆ ಮೋಟರೆ ಸೈಕಲ್ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಹೊರಟು ಖಾನಾಪುರ-ಕುರುಕುಂದಿ ರೋಡ ಕುರುಕುಂದಿ ಹಳ್ಳದ ಬ್ರಿಡ್ಜ ಕೆಲಸ ನಡೆದ ರೋಡಿನ ಮೇಲೆ ಹೋಗಿ ಡೋಣಿ ಪೈಪುಗಳ ಮೇಲೆ ಬೈಕ್ಸಮೇತ ಬಿದ್ದು ಮೃತಪಟ್ಟಿರುತ್ತಾನೆ ಅಂತ ಹೇಳಿದಾಗ ಗಾಬರಿಯಾದ ನಾನು ಮತ್ತು ನಮ್ಮ ತಾಯಿ ಮಹಾದೇವಿ ಹಾಗು ಇತರರು ಕೂಡಿ ಸ್ಥಳಕ್ಕೆ ಬಂದು ನೋಡಿದಾಗ ನಮ್ಮ ತಂದೆಯು ಖಾನಾಪುರ-ಕುರುಕುಂದಿ ರೋಡ ಕುರುಕುಂದಿ ಹಳ್ಳದ ನೀರು ಹೋಗಲು ಹಾಕಿರುವ ಡೋಣಿ ಪೈಪುಗಳ ಮೇಲೆ ಬಿದ್ದು, ತಲೆಗೆ ಬಲಗಣ್ಣಿನ ಹುಬ್ಬಿನಿಂದ ನಡುತಲೆಯವರೆಗೆ ಭಾರಿ ಸೀಳಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ನಮ್ಮ ಕಾಕನಿಗೆ ಕೇಳಿದಾಗ ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ರಾಜೇಂದ್ರ ಇಬ್ಬರೂ ಕುರುಕುಂದಿ ಗ್ರಾಮದಿಂದ ಕೆಲಸ ಮುಗಿಸಿಕೊಂಡು ಮರಳಿ ತಡಿಬಿಡಿಗೆ ನಮ್ಮ ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ನಿಮ್ಮ ತಂದೆಯು ನಮ್ಮ ಮುಂದೆ ಮೋಟರೆ ಸೈಕಲ್ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಹೊರಟು ಖಾನಾಪುರ-ಕುರುಕುಂದಿ ರೋಡ ಕುರುಕುಂದಿ ಹಳ್ಳದ ಬ್ರಿಡ್ಜ ಕೆಲಸ ನಡೆದ್ದಿದು ಪಕ್ಕದಿಂದ ಹೋಗಲು ಕಚ್ಚಾ ರಸ್ತೆ ಮಾಡಿದ್ದು ನಿಮ್ಮ ತಂದೆಯು ಆ ಬೈಪಾಸ್ ರೋಡಿನ ಮೇಲೆ ಹೋಗದೆ ಬ್ರಿಡ್ಜ ಕೆಲಸ ನಡೆದ ರೋಡಿನ ಮೇಲೆ ಹೋಗಿ ತಗ್ಗಿನಲ್ಲಿ ಡೋಣಿ ಪೈಪುಗಳ ಮೇಲೆ ಬೈಕ್ಸಮೇತ ಬಿದ್ದು, ತಲೆಗೆ ಬಲಗಣ್ಣಿನ ಹುಬ್ಬಿನಿಂದ ನಡುತಲೆಯವರೆಗೆ ಭಾರಿ ಸೀಳಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತ ಹೇಳಿದನು. ನಮ್ಮ ತಂದೆಯು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ಬ್ರ್ರಿಡ್ಜ್ ಕೆಲಸ ನಡೆದಿದ್ದು, ಪಕ್ಕದಿಂದ ಹೋಗಲು ರಸ್ತೆ ಮಾಡಿದ್ದು, ಅದರ ಮೇಲಿಂದ ಹೋಗದೆ ಬ್ರಿಡ್ಜ್ ಕೆಲಸ ನಡೆದ ರೋಡಿನ ಮೇಲೆ ವೇಗವಾಗಿ ಬಂದು ಮೋಟರ್ ಸೈಕಲ ಸಮೆತ ಪೈಪುಗಳ ಮೇಲೆ ಬಿದ್ದು ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ. ಮೃತ ನನ್ನ ತಂದೆಯ ಶವವನ್ನು ಯಾದಗಿರಿ ಸರಕಾರಿ ಆಸ್ಪತ್ರೆಯ ಶವಾಗಾರ ಕೊಣೆಯಲ್ಲಿ ತಂದು ಹಾಕಿರುತ್ತೇವೆ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 50/2019 ಕಲಂ: 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 126/2019 ಕಲಂ: 143, 147, 323, 504, 506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989:- ದಿನಾಂಕಃ 01-06-2019 ರಂದು 6-45 ಪಿ.ಎಮ್ ಕ್ಕೆ ಫಿಯರ್ಾಧಿ ಶ್ರೀಮತಿ ಪರಮವ್ವ ಗಂಡ ರಾಮಯ್ಯ ಪೂಜಾರಿ ಸಾಃ ಹಾಲಗೇರಾ ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ನಮ್ಮ ಮನೆಯಲ್ಲಿ ನನ್ನ ಇಬ್ಬರೂ ಮಕ್ಕಳ ಮದುವೆಯನ್ನು ದಿನಾಂಕ: 31/05/2019 ರಂದು ಇಟ್ಟುಕೊಂಡಿದ್ದರಿಂದ ಮದುವೆಗೆ ಜಾಜದ ಪಟ್ಟಿಯನ್ನು ಬಿಡುವ ಸಲುವಾಗಿ ನನ್ನ ಮನೆಗೆ ನನ್ನ ಅಳಿಯಂದಿರಾದ ರಾಮನಗೌಡ ಮಾಲಿಪಾಟೀಲ್ ಮತ್ತು ಬಸನಗೌಡ ಮಾಲಿಪಾಟೀಲ್ ಇವರಿಗೆ ಕರೆದಿದ್ದು, ಸದರಿಯವರು ದಿನಾಂಕಃ 30/05/2019 ರಂದು ನಮ್ಮ ಮನೆಗೆ ಬಂದಿದ್ದರು. ಅಂದು ಸಾಯಂಕಾಲ 5:30 ರ ಸುಮಾರಿಗೆ ನಾನು ಮತ್ತು ನನ್ನ ಮಗನಾದ ನಾಗಪ್ಪ ಹಾಗು ಅಳಿಯಂದಿರಾದ ರಾಮನಗೌಡ, ಬಸನಗೌಡ ಮತ್ತು ನಮ್ಮೂರ ಬೀರಪ್ಪ, ಮರೆಪ್ಪ ಭಜಂತ್ರಿ, ಹಾಗು ಹುಲಗಪ್ಪಗೌಡ ಪೋಲಿಸ ಪಾಟೀಲ ಎಲ್ಲರೂ ನಮ್ಮ ಮನೆಯ ಮುಂದೆ ಮದುವೆಯ ಹಂದರವನ್ನು ಹಾಕುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರಿನ 1) ತಿರುಪತಿ ತಂದೆ ಸಾಬಗೌಡ ಜಾ: ಬೇಡರ ಇತನ ಜೊತೆಯಲ್ಲಿ 2) ಸೂಗಪ್ಪ ತಂದೆ ಬಸವರಾಜಪ್ಪ ಅಂಗಡಿ ಜಾ: ಲಿಂಗಾಯತ, 3) ಮಲ್ಲಿಕಾಜರ್ುನ ತಂದೆ ಮಹಾದೇವಪ್ಪ ಅಂಗಡಿ ಜಾ: ಲಿಂಗಾಯತ, 4) ಶೇಖಪ್ಪ ತಂದೆ ಮಹಾದೇವಪ್ಪ ಅಂಗಡಿ ಜಾ: ಲಿಂಗಾಯತ, 5) ದೇವಿಂದ್ರಪ್ಪ ತಂದೆ ಬಾಗಪ್ಪ ಅಂಗಡಿ ಜಾ: ಲಿಂಗಾಯತ, 6) ಬಸವರಾಜ ತಂದೆ ಸೂಗಪ್ಪ ಅಂಗಡಿ ಜಾ: ಲಿಂಗಾಯತ, 7) ಗಾಳೆಪ್ಪ ತಂದೆ ಭೀಮಪ್ಪ ಚಿಕ್ಕಮೇಟಿ ಜಾ: ಬೇಡರ ಇವರೆಲ್ಲರೂ ಕೂಡಿಕೊಂಡು ಬಂದವರೇ ಅವರಲ್ಲಿ ತಿರುಪತಿ ಇವನು ನನಗೆ ಲೇ ಪರಮವ್ವ ನನ್ನ ಅಣ್ಣನಿಗೆ ಕೊಲೆ ಮಾಡಿದ ಮನೆಯವರಾದ ರಾಮನಗೌಡ ಮತ್ತು ಬಸನಗೌಡ ಇವರಿಗೆ ಮನೆಗೆ ಕರೆಸುತ್ತಿಯಾ ಭೋಸಡಿ ಸೂಳಿ ಮಗಳೇ ನಿನಗೆಷ್ಟು ಸೊಕ್ಕು ಲೇ, ಅವರ ಮನೆಯವರೆಲ್ಲರಿಗೆ ಜೇಲಿಗೆ ಹಾಕಿಸುತ್ತೇವೆ ಅಂತ ಅವಾಚ್ಯ ಶಬ್ದಗಳಿಂದ ಬೈದನು. ನಂತರ ಲಿಂಗಾಯತ ಜನಾಂಗದವರಾದ ಸೂಗಪ್ಪ, ಮಲ್ಲಿಕಾಜರ್ುನ, ಶೇಖಪ್ಪ, ದೇವಿಂದ್ರಪ್ಪ, ಬಸವರಾಜ ಇವರೆಲ್ಲರೂ ಸೇರಿ ನನಗೆ ಮತ್ತು ನನ್ನ ಮಗನಾದ ನಾಗಪ್ಪನಿಗೆ ಲೇ ಬೇಡರ ಸೂಳೆ ಮಕ್ಕಳೇ ನಿಮಗೆಷ್ಟು ಸೊಕ್ಕು, ಅವರಿಗೆ ಊರಿಗೆ ಯಾಕೇ ಕರೆಸಿದ್ದೀರಿ, ನಿಮಗೆ ಮತ್ತು ಅವರಿಗೆ ಖಲಾಸ ಮಾಡುತ್ತೇವೆ ಅಂತ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದಾಗ, ತಿರುಪತಿ ಮತ್ತು ಗಾಳೆಪ್ಪ ಇಬ್ಬರೂ ಸೇರಿ ನನ್ನ ಮಗನಾದ ನಾಗಪ್ಪನಿಗೆ ಲೇ ಸೂಳಿಮಗನೇ ನಾಗ್ಯಾ, ನಮ್ಮ ಮುಂದೇನೇ ನಮ್ಮ ಎದರು ಪಾಟರ್ಿಯವರಿಗೆ ಕರೆಸುತ್ತೀಯಾ ಅವರನ್ನು ಕರೆದುಕೊಂಡು ಹೇಗೆ ಛಾಜಾ ಮಾಡುತ್ತೀಯಾ ಅನ್ನುತ್ತ ಕೈಯಿಂದ ಮೈಮೇಲೆ ಹೊಡೆಬಡೆ ಮಾಡಿರುತ್ತಾನೆ. ಆಗ ಅಲ್ಲಿದ್ದವರು ಜಗಳ ಬಿಡಿಸಿರುತ್ತಾರೆ. ಬಳಿಕ ಈ ಘಟನೆ ಕುರಿತು ನಮ್ಮ ಮನೆಯಲ್ಲಿ ಮದುವೆ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ತಡವಾಗಿ ಬಂದು ಠಾಣೆಗೆ ದೂರು ಅಜರ್ಿ ನೀಡಿದ್ದು ನಮಗೆ ಜಾತಿ ನಿಂದನೆ ಮಾಡಿ ಮತ್ತು ಅವಾಚ್ಚ ಶಬ್ದಗಳಿಂದ ಬೈದು ನನ್ನ ಮಗನಿಗೆ ಹೊಡೆಬಡೆಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 126/2019 ಕಲಂ. 143, 147, 323, 504, 506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:-66/2019  ಕಲಂ: 143,147,148,323,324,307,327,354,504,506 ಸಂಗಡ 149 ಐಪಿಸಿ ಮತ್ತು 3[1],[ಆರ್],[ಎಸ್],[ಡಬ್ಲೂ] ಎಸ್ ಎಸಿ/ಎಸ್ ಟಿ ಪಿಎ ಆಕ್ಟ್ 1989:- ದಿನಾಂಕ 01/06/2019 ರಂದು 11-30 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಿವಲಿಂಗಮ್ಮ ಗಂಡ ಮಾನಪ್ಪ ದಾಸರ ವಯಾ|| 30 ಜಾ|| ಹೊಲೆ ದಾಸರ ಉ|| ಕೂಲಿ ಸಾ|| ಮಾವಿನಮಟ್ಟಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಿನ್ನೆ ದಿನಾಂಕ: 31/05/2019 ರಂದು ನಮ್ಮೂರಿನಲ್ಲಿ ಕುರುಬ ಜನಾಂಗದವರ ಮದುವೆ ಇತ್ತು. ಹೀಗಿದ್ದು ನಿನ್ನೆ ದಿ: 31/05/19 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕುಳಿತಾಗ ನಮ್ಮೂರ ಕುರುಬ ಜನಾಂಗದವರು ಮದುವೆಯ ಮದುಮಕ್ಕಳ ಮೆರವಣಿಗೆ ಮಾಡುತ್ತಾ ಡಿಜೆಗಳನ್ನು ಹಚ್ಚಿ ಕುಣಿಯುತ್ತಾ ನಮ್ಮ ಮನೆಯ ಮುಂದೆ ಬಂದು ಕೂಗಾಡುವದು ಚೀರಾಡುವದು ಮಾಡುತ್ತಾ ಇದ್ದಾಗ ಮನೆ ಇದೆ ಸ್ವಲ್ಪ ಮುಂದೆ ಹೋಗಿರಿ ಅಂತ ಅಂದಾಗ ನಮ್ಮೂರ ಕುರುಬ ಜನಾಂಗದವರಾದ 1) ರಾಮಯ್ಯ ತಂದೆ ಕರೆಪ್ಪ ಪೂಜಾರಿ 2) ನಿಂಗಪ್ಪ ತಂದೆ ಬಸಪ್ಪ ಗೊರಕಿ 3) ಶೇಕಪ್ಪ ತಂದೆ ಹಣಮಂತ್ರಾಯ ಗೊರಕಿ 4) ಮಾನಪ್ಪ ತಂದೆ ರಾಯಪ್ಪ ಗೊರಕಿ 5) ನಿಂಗಪ್ಪ ಗೊರಕಿ 6) ದೇವಿಂದ್ರಪ್ಪ ತಂದೆ ಮಲ್ಲಣ್ಣ ಗಿಂಡಿ 7) ಶಿವಪುತ್ರ ತಂದೆ ಕರೆಪ್ಪ ಪೂಜಾರಿ 8) ಬುಸಪ್ಪ ಗೊರಕಿ 9) ರೇವಣಪ್ಪ ತಂದೆ ಬೀರಪ್ಪ ಹೂಗಾರ 10) ನಾಗಪ್ಪ ತಂದೆ ಭೀಮಣ್ಣ ಗೊರಕಿ 11) ಭೀಮಣ್ಣ ತಂದೆ ತಮ್ಮಣ್ಣ ಜಂಗಳಿ 12) ಬೀರಪ್ಪ ತಂದೆ ಶೇಖಪ್ಪ ಭಂಗಿ 13) ಶೇಖಪ್ಪ ತಂದೆ ಪರಮಣ್ಣ ಭಂಗಿ 14) ಪರಮಪ್ಪ ತಂದೆ ಹಣಮಂತ್ರಾಯ ಭಂಗಿ 15) ಸಿದ್ದಪ್ಪ ತಂದೆ ಹಣಮಂತ್ರಾಯ ಭಂಗಿ 16) ನಿಂಗಪ್ಪ ತಂದೆ ಬಾಲಪ್ಪ ವನದುರ್ಗ 17) ಸಿದ್ದಪ್ಪ ತಂದೆ ಬಾಲಪ್ಪ ವನದುರ್ಗ 18) ಬೀರಪ್ಪ ತಂದೆ ನಿಂಗಪ್ಪ ಗೋವಾದವರ 19) ರೇವಣಿಸಿದ್ದ ತಂದೆ ರಾಮಯ್ಯ ಪೂಜಾರಿ 20) ಕರೆಪ್ಪ ತಂದೆ ನಿಂಗಪ್ಪ ಗೋವಾದವರ 21) ರಾಯಪ್ಪ ತಂದೆ ಚಳಿಗೆಪ್ಪ ಗೊರಕಿ 22) ಭೀಮಣ್ಣ ತಂದೆ ಚಳಿಗೆಪ್ಪ ಗೊರಕಿ 23) ಶಿವಪ್ಪ ತಂದೆ ಹಣಮಂತ್ರಾಯ ಗೊರಕಿ 24) ರಾಯಪ್ಪ ತಂದೆ ಹಣಮಂತ್ರಾಯ ಗೊರಕಿ 25) ಮೀನಾಕ್ಷಿ ಗಂಡ ನಿಂಗಪ್ಪ ಗೊರಕಿ 26) ಗಂಗಮ್ಮ ಗಂಡ ರಾಮಯ್ಯ ಪೂಜಾರಿ ಈ ಎಲ್ಲಾ ಜನರು ಕೊಲೆ ಮಾಡುವ ಉದ್ದೇಶದಿಂದ ಈ ದಾಸ ಸೂಳೆಯರದು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರು ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ನಿಂಗಪ್ಪ ತಂದೆ ಬಸಪ್ಪ ಗೊರಕಿ ಈತನು ಅಲ್ಲಿಯೇ ವಾಹನದಲ್ಲಿದ್ದ ಒಂದು ಕಬ್ಬಿಣದ ರಾಡನ್ನು ತೆಗೆದುಕೊಂಡು ನನ್ನ ಹಣೆಗೆ ಹಾಗೂ ಗದ್ದಕ್ಕೆ ಹೊಡೆದು ರಕ್ತಗಾಯಪಡಿಸಿ ಬಲಪಕ್ಕಡಿಗೆ ಹೊಡೆದು ಒಳಪೆಟ್ಟು ಮಾಡಿದ್ದು ಇರುತ್ತದೆ ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ಜನಾಂಗದ ಪದ್ಮಾವತಿ ಗಂಡ ಗೋಪಾಲ ದಾಸರ, ಯಂಕಪ್ಪ ತಂದೆ  ಭೀಮದಾಸ ದಾಸರ, ಭೀಮಪ್ಪ ತಂದೆ ಗೋಪಾಲ ದಾಸರ, ದೇವರಾಜ ತಂದೆ ತಿರುಪತಿ ದಾಸರ, ವೆಂಕಟೇಶ ತಂದೆ ಮಾನಪ್ಪ ದಾಸರ, ಮಾನಪ್ಪ ತಂದೆ ಗೋಪಾಲ ದಾಸರ ಇವರೆಲ್ಲರು ಬಿಡಿಸಲು ಬಂದಾಗ ಸದರಿಯವರಿಗೂ ಸಹ ದಾಸ ಸೂಳೆಮಕ್ಕಳದು ಊರಲ್ಲಿ ಬಾಳ ಆಗಿದೆ ಅಂತ ಜಾತಿನಿಂದನೆಯಿಂದ ಬೈಯುತ್ತಾ ಯಂಕಪ್ಪ ದಾಸರ ಈತನಿಗೆ ಶೇಖಪ್ಪ ತಂದೆ ಹಣಮಂತ್ರಾಯ ಗೊರಕಿ ಈತನು ಚಾಕುವಿನಿಂದ ಮೇಲ್ತುಟಿಗೆ ಹಾಗೂ ಗದ್ದಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಭೀಮಪ್ಪ ದಾಸರ ಈತನಿಗೆ ರಾಮಯ್ಯ ಪೂಜಾರಿ ಈತನು ಕೈಯಿಂದ ಬಲಗಣ್ಣಿಗೆ ಬಲವಾಗಿ ಗುದ್ದಿ ಗುಪ್ತಗಾಯಪಡಿಸಿರುತ್ತಾನೆ. ದೇವರಾಜ ದಾಸರ ಈತನಿಗೆ ಶಿವಪುತ್ರ ಹಾಗೂ ಬುಸಪ್ಪ ಇವರು ಕೈಯಿಂದ ಹೊಟ್ಟಗೆ ಗುದ್ದಿ ಗುಪ್ತಗಾಯಪಡಿಸಿರುತ್ತಾರೆ ವೆಂಕಟೇಶ ದಾಸರ ಈತನಿಗೆ ಮೀನಾಕ್ಷಿ ಹಾಗೂ ಗಂಗಮ್ಮ ಇವರು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಗುಪ್ತಗಾಯಪಡಿಸಿರುತ್ತಾರೆ. ಮಾನಪ್ಪ ದಾಸರ ಈತನಿಗೆ ರಾಯಪ್ಪ ಗೊರಕಿ ಹಾಗೂ ಶಿವಪ್ಪ ಗೊರಕಿ ಇವರು ಕೈಯಿಂದ ಎರಡೂ ಪಕ್ಕಡಿಗೆ ಗುದ್ದಿ ಗುಪ್ತಗಾಯಪಡಿಸಿರುತ್ತಾನೆ ಪದ್ಮಾವತಿ ಹಾಗೂ ನನಗೆ ನಿಂಗಪ್ಪ ಹಾಗೂ ರಾಮಯ್ಯ ಇವರು ಈ ಸೂಳೆಯರ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ನಮ್ಮಿಬ್ಬರ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಲ್ಲದೇ ಸದರಿ ಜಗಳದಲ್ಲಿ ಸೀತಮ್ಮ ಗಂಡ ಗೋಪಾಲ,ದೇವಕ್ಕೆಮ್ಮ ಗಂಡ ವಿಠಲ, ಬನ್ನೆಮ್ಮ ಗಂಡ ರಂಗಪ್ಪ, ಚಂದಮ್ಮ ಗಂಡ ಕನಕಪ್ಪ, ಹಣಮಂತಿ ಗಂಡ ಹಳ್ಳೆಪ್ಪ ಇವರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ. ನಂತರ ನಾವೆಲ್ಲರು ಕೆಳಗೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಬೇಡ ಜನಾಂಗದ ಸಾಯಬಣ್ಣ ಕ್ವಾಟಿ ಹಾಗೂ ಲಕ್ಷ್ಮೀಬಾಯಿ ದೊರಿ ಇವರು ಬಂದು ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರು ಹೊಡೆಯುವದನ್ನು ಬಿಟ್ಟು ಊರಲ್ಲಿ ದಾಸರ ಮನೆಗಳು ನಾಲ್ಕೇ ಇದ್ದು ನಮ್ಮ ಮನೆಗಳು ಬಹಳ ಇದ್ದು ಇಷ್ಟಕ್ಕೆ ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಕೇಕೇ ಹಾಕುತ್ತಾ ಹೋಗಿ ಅಲ್ಲಿಯೇ ಮನೆಯ ಮುಂದೆ ನಿಲ್ಲಿಸಿದ ನಮ್ಮ ಸಂಬಂದಿಕರ ಟವೇರಾ ಕಾರ ನಂ ಕೆಎ-53 ಬಿ-9649 ನೇದ್ದರ ಮೇಲೆ ಎಲ್ಲರೂ ಕಲ್ಲು ಎತ್ತಿ ಹಾಕಿ ಪೂತರ್ಿಯಾಗಿ ಜಖಂಗೊಳಿಸಿರುತ್ತಾರೆ. ಕಾರಣ ಮನೆಯ ಮುಂದೆ ಮದುವೆಯ ಮೆರವಣಗೆ ತೆಗೆದುಕೊಂಡು ಹೋಗುವಾಗ ಗಲಾಟೆ ಮಾಡಬೇಡಿರಿ ಮನೆ ಇರುತ್ತವೆ ಅಂತ ಅಂದಿದ್ದಕ್ಕೆ  ನಮ್ಮೊಂದಿಗೆ ಜಗಳ ತೆಗೆದು ಜಾತಿನಿಂದನೆಯಿಂದ ಬೈದು ಕೈಯಿಂದ, ಕಬ್ಬಿಣದ ರಾಡಿನಿಂದ ಹಾಗೂ ಚಾಕುವಿನಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯಪಡಿಸಿ ಮಾನಭಂಗ ಮಾಡಲು ಪ್ರಯತ್ನಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನುನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 66/2019 ಕಲಂ 143,147,148,323,324,307,427,354,504,506 ಸಂಗಡ 149 ಐಪಿಸಿ ಮತ್ತು 3[1],[ಆರ್],[ಎಸ್],[ಡಬ್ಲೂ] ಎಸ್ ಎಸಿ/ಎಸ್ ಟಿ ಪಿಎ ಆಕ್ಟ್ 1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                                                         
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ, 279,337,338 ಐಪಿಸಿ:-  ದಿನಾಂಕ: 01-06-2019 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾಧಿ ಮತ್ತು ಆರೋಪಿತನು ಕೂಡಿ ಕೂಡ್ಲೂರ ಗ್ರಾಮದಿಂದ ಗುಂಜನೂರ ಗ್ರಾಮಕ್ಕೆ ಆಟೋ ನಂ. ಕೆಎ-33ಎ-9367 ನೆದ್ದರಲ್ಲಿ ಕುಳಿತುಕೊಂಡು ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಕ್ರಾಸ ಹತ್ತಿರ ಹೋಗುತ್ತಿರುವಾಗ ಆರೋಪಿತನು ತಾನು ನಡೆಸುವ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಬ್ರೆಕ್ ಹಾಕಿ ಆಟೋ ಪಲ್ಟಿ ಮಾಡಿದ್ದು ಅಪಘಾತದಲ್ಲಿ ಪಿಯರ್ಾಧಿ ಮತ್ತು ಆರೋಪಿತನಿಗೆ ಗಾಯಗಳಾಗಿರುತ್ತೇವೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 89/2019 ಕಲಂ ಮನುಷ್ಯ ಕಾಣೆಯಾದ ಬಗ್ಗೆ:- ದಿನಾಂಕ 22/04/2019 ರಂದು ಬೆಳಿಗ್ಗೆ ಸುಮಾರಿಗೆ ನಾನು, ನನ್ನ ತಾಯಿ ಸುಶೀಲಮ್ಮ ಗಂಡ ಸಣ್ಣಸಾಬಣ್ಣ ಮಾನೆಗಾರ, ನನ್ನ ತಂದೆ ಸಣ್ಣಸಾಬಣ್ಣ ತಂದೆ ಜಕ್ಕಪ್ಪ ಮಾನೆಗಾರ, ನನ್ನ ತಮ್ಮಂದಿರಾದ ಸಾಬಣ್ಣ ತಂದೆ ಸಣ್ಣಸಾಬಣ್ಣ ಮಾನೆಗಾರ ಮತ್ತು ಶರಣಪ್ಪ ತಂದೆ ಸಣ್ಣಸಾಬಣ್ಣ ಮಾನೆಗಾರ ಎಲ್ಲರೂ ಮನೆಯಲ್ಲಿದ್ದೆವು, ನನ್ನ ತಮ್ಮನಾದ ಶರಣಪ್ಪ ತಂದೆ ಸಣ್ಣಸಾಬಣ್ಣ ಮಾನೆಗಾರ ಇತನು ಮನೆಯಲ್ಲಿ ಊಟ ಮಾಡಿ ಪ್ರತಿನಿತ್ಯದಂತೆ ಗ್ರಾಮದಲ್ಲಿ ತಿರುಗಾಡಲು ಬೆಳಿಗ್ಗೆ 8-00 ಗಂಟೆಗೆ ಹೋದನು, ರಾತ್ರಿ 9-00 ಗಂಟೆಯಾದರೂ ಕೂಡಾ ನನ್ನ ತಮ್ಮ ಶರಣಪ್ಪ ಇತನು ಮನೆಗೆ ಬರಲಿಲ್ಲ, ನಂತರ ನಾನು ಮತ್ತು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ನಮ್ಮೂರಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡಾ ಅವನು ಸಿಕ್ಕಿರುವದಿಲ್ಲ, ನಂತರ ಮರುದಿವಸದಿಂದ ಇಲ್ಲಿಯವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ, ನಮ್ಮ ಬೀಗರು ಮತ್ತು ನೆಂಟರ ಮನೆಗೆ ಹೋಗಿ ನನ್ನ ತಮ್ಮ ಶರಣಪ್ಪ ಇತನ ಬಗ್ಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ, ಅವನು ಮನೆಯ ಬಿಟ್ಟು ಹೋಗುವಾಗ  ಮೈಮೇಲೆ ನೀಲಿ ಮತ್ತು ಬಿಳಿ ಕಲರ ಚೆಕ್ಸ ಅಂಗಿ, ಕಪ್ಪು ಗೆರೆಯುಳ್ಳ ಪ್ಯಾಂಟ ಇದ್ದಿರುತ್ತವೆ, ಅವನ ಚಹರೆ ಪಟ್ಟಿ ಸಾಧಾರಣ ಮೈಕಟ್ಟು, ಸಾದಾ ಕಪ್ಪು ಬಣ್ಣ, ಕೋಲು ಮುಖ, ಮೊಂಡು ಮೂಗು, ತಲೆಯ ಮೇಲೆ ಒಂದು ಇಂಚು ಕಪ್ಪು ಕೂದಲು ಇದ್ದಿರುತ್ತದೆ, ಈ ಘಟನೆಯು ದಿನಾಂಕ 22/04/2019 ರಂದು ಬೆಳಿಗ್ಗೆ 8 ಗಂಟೆಗೆ ನಮ್ಮ ಮನೆಯಲ್ಲಿ ನಡೆದಿರುತ್ತದೆ. ಈ ಬಗ್ಗೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 89/2019 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಅಂತಾ ಪ್ರಕರಣ ದಾಖಲಾಗಿರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 41/2019 ಕಲಂ.379 ಐಪಿಸಿ:- ದಿನಾಂಕ:28/05/2019 ರಂದು ಮಧ್ಯಾಹ್ನ 12:00 ಗಂಟೆಗೆ ಪಿಯರ್ಾದಿ ಹುಣಸಗಿ ಬಸ್ ನಿಲ್ದಾಣದ ನೀರಿನ ಅರವಟ್ಟಿಗೆ ಹತ್ತಿರ ತನ್ನ ಮೋಟರ್ ಸೈಕಲನ್ನು ಕೀಲಿ ಸಮೇತ ಗಾಡಿಯಲ್ಲಿಯೇ ಬಿಟ್ಟು ನಿಲ್ಲಿಸಿ ಬಸ್ ನಿಲ್ದಾಣದ ಒಳಗಡೆ ಇರುವ ಕ್ಯಾಂಟಿನಗೆ ಹೋಗಿ ಚಹಾ ಮತ್ತು ನೀರು ಕೂಡಿದು ಮರಳಿ ಮೋಟರ್ ಸೈಕಲ್ ಹತ್ತಿರ ಬಂದು ನೋಡಲು ನನ್ನ ಮೋಟರ್ ಸೈಕಲ್ ಇರಲಿಲ್ಲ, ಆಗ ನಾನು ಗಾಬರಿಯಿಮದ ನಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟರ್ ಸೈಕಲ ಸಿಕ್ಕಿರುವುದಿಲ್ಲಾ ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.   

ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:- 36/2019  ಕಲಂ 279, 337, 338 ಐಪಿಸಿ:-ದಿನಾಂಕ 01/06/2019 ರಂದು ರಾತ್ರಿ 9  ಪಿ.ಎಂ.ಕ್ಕೆ ಈ ಕೇಸಿನ ಫಿಯರ್ಾದಿಯವರ  ತಂದೆಯಾದ ಗಾಯಾಳು ರಾಮಸ್ವಾಮಿ ರವರು ಹೊಸಳ್ಳಿ ಕ್ರಾಸ್ ಹತ್ತಿರ  ತಮ್ಮ ಮನೆಗೆ ನಡೆದುಕೊಂಡು ಬರುವಾಗ ಲಾರಿ ಟಿಪ್ಪರ್ ನಂಬರ ಎಮ್.ಎಚ್.-05, ಡಿಕೆ-3796 ನೇದ್ದರ ಚಾಲಕನು ತನ್ನ ಲಾರಿ ಟಿಪ್ಪರ್ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಫಿಯರ್ಾದಿಯವರ ತಂದೆಯಾದ ಗಾಯಾಳುವಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳು ರಾಮಸ್ವಾಮಿ ಇವರಿಗೆ  ಎಡಗಾಲು ಪಾದಕ್ಕೆ ಭಾರೀ ರಕ್ತಗಾಯವಾಗಿದ್ದು, ಬಲಗಾಲಿನ ಪಾದಕ್ಕೆ ತರಚಿದ ರಕ್ತಗಾಯವಾಗಿದ್ದು  ಸದರಿ ಘಟನೆಯು ಲಾರಿ ಟಿಪ್ಪರ್ ನಂಬರ ಎಮ್.ಎಚ್.-05, ಡಿಕೆ-3796 ನೇದ್ದರ ಸವಾರನ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಜರುಗಿದ್ದು  ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.     

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.:- 67/2019  ಕಲಂ: 143,147,148,323,324,354,307,504,506 ಸಂಗಡ 149 ಐಪಿಸಿ:-ದಿನಾಂಕ 01/06/2019 ರಂದು 8.30 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ನಿಂಗಮ್ಮ ಗಂಡ ಶಿವಣ್ಣ ಗೊಕರ್ಿ ವಯಾ|| 30 ಜಾ|| ಕುರುಬ ಉ|| ಕೂಲಿಕೆಲಸ ಸಾ|| ಮಾವಿನಮಟ್ಟಿ ರವರು ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ: 31.05.2019 ರಂದು ನಮ್ಮೂರಿನಲ್ಲಿ ನಮ್ಮ ಜನಾಂಗದವರ ಮದುವೆ ಇದ್ದುದ್ದರಿಂದ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ನಮ್ಮ ಸಮಾಜದವರು ಮದುವೆಯ ಮದುಮಕ್ಕಳ ಮೆರವಣಿಗೆ ಮಾಡುತ್ತಾ ಡಿಜೆ ಹಚ್ಚಿ ಕುಣಿಯುತ್ತಾ ನಮ್ಮೂರಿನ ಮಾನಪ್ಪ ದಾಸರ ಇವರ ಮನೆಯ ಮುಂದೆ ಬಂದು ಕುಣಿಯುತ್ತಿದ್ದಾಗ ಮಾನಪ್ಪ ದಾಸರ ಈತನು ನಮ್ಮ ಮನೆ ಮುಂದೆ ಯಾಕೆ ಕುಣಿಯುತ್ತಿದ್ದಿರಿ ಇಲ್ಲಿಂದ ಮುಂದೆ ಹೋಗಿರಿ ಅಂತಾ ಅಂದಿದ್ದಕ್ಕೆ ಆಯ್ತು ಅಂತಾ ಕುಣಿಯುತ್ತಾ ಮುಂದಕ್ಕೆ ಹೋಗುತ್ತಿರುವಾಗ ನಮ್ಮೂರ ದಾಸರ ಸಮೂದಾಯವರಾದ 1) ಮಾನಪ್ಪ ತಂದೆ ಗೊಪಾಲಪ್ಪ ದಾಸರ 2) ಭೀಮಪ್ಪ ತಂದೆ ಗೊಪಾಲಪ್ಪ ದಾಸರ 3) ಅಮರಪ್ಪ ತಂದೆ ಗೋಪಾಲಪ್ಪ ದಾಸರ 4) ದೇವಪ್ಪ ತಂದೆ ತಿರುಪತಿ ದಾಸರ 5) ರಾಯಪ್ಪ ತಂದೆ ತಿರುಪತಿ ದಾಸರ 6) ಯಂಕಪ್ಪ ತಂದೆ ಭೀಮಪ್ಪ ದಾಸರ 7) ಗೋಪಾಲಪ್ಪ ತಂದೆ ಭೀಮಣ್ಣ ದಾಸೆ 8) ಭೀಮಪ್ಪ ತಂದೆ ಯಂಕಪ್ಪ ದಾಸರ 9) ಶಿವಲಿಂಗಮ್ಮ ಗಂಡ ಮಾನಪ್ಪ ದಸಾಸರ 10) ಚಂದಮ್ಮ ಗಂಡ ಯಂಕಪ್ಪ ದಾಸರ  11) ಪದ್ಮಾ ಗಂಡ ತಿರುಪತಿ ದಾಸರ 12) ಹಣಮವ್ವ ಗಂಡ ಮಹಾಂತೇಶ 13) ದೇವಕ್ಕಿ ಗಂಡ ವಿಠ್ಠಲ ದಾಸರ 14) ಶಂಕರ ದಾಸರ ಮಳ್ಳಿ  15) ಶ್ರಾವಣ್ಯ ತಂದೆ ವಿಠ್ಠಲ ದಾಸರ 16) ಯಂಕಪ್ಪ ತಂದೆ ರಂಗಪ್ಪ ದಾಸರ 17) ಜಗಪ್ಪ ತಂದೆ ಮಾನಶಪ್ಪ ದಾಸರ 18) ಮಹಾಂತೇಶ ದಾಸರ ಈ ಎಲ್ಲಾ ಜನರು ಕೋಲೆ ಮಾಡುವ ಉದ್ದೆಶದಿಂದ ಅಕ್ರಮಕೂಟ ಕಟ್ಟಿಕೊಂಡು ಎಲೇ ಕುರುಬ ಸೂಳೆ ಮಕ್ಕಳೆ  ಊರಾಗ ಬಹಳ ಆಗಿದೆ ನಿಮ್ಮದು ನಮ್ಮ ಮನೆಯ ಮುಂದುಗಡೆ ಎಷ್ಟೋತ್ತು ಕುಣಿಯುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರು ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಮಾನಪ್ಪ ತಂದೆ ಗೋಪಾಲಪ್ಪ ಈತನು ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು ನಿಂಗಪ್ಪ ತಂದೆ ಬಸಪ್ಪ ಗೊರಕಿ ಈತನ ಕಣ್ಣಿನ ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು, ಅಲ್ಲದೇ ರೆವಣಸಿದ್ದಪ್ಪ ತಂದೆ ಭೀಮಣ್ಣ ಪುಜಾರಿ ಈತನಿಗೆ ಭೀಮಪ್ಪ ತಂದೆ ಗೋಪಾಲಪ್ಪ ಈತನು ಅಲ್ಲೆ ಬಿದ್ದ ಕಲ್ಲಿನಿಂದ ಎಡಕಿವಿಯ ಹತ್ತಿರ ಹೋಡೆದು ರಕ್ತಗಾಯ ಪಡಿಸಿ, ಸಿದ್ದಪ್ಪ ತಂದೆ ಬಾಲಪ್ಪ ವನದುಗರ್ಾ ಈತನಿಗೆ ಭೀಮಪ್ಪ ತಂದೆ ಯಂಕಪ್ಪ ಈತನು ಕಲ್ಲಿನಿಂದ ಎಡಮುಡ್ಡಿಗೆ ಹೊಡೆದು ರಕ್ತಗಾಯ ಮಾಡಿದ್ದು, ಶಿವಪುತ್ರ ತಂದೆ ಕರೆಪ್ಪ ಪೂಜಾರಿ ಈತನಿಗೆ ಶಂಕರ ದಾಸರ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಮಾನಯ್ಯ ತಂದೆ ರಾಯಪ್ಪ ಗೊರಕಿ ಈತನಿಗೆ ಜಗಪ್ಪ ತಂದೆ ಮಾನಶಪ್ಪ ದಾಸರ ಈತನು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಾಗ ನೆಲಕ್ಕೆ ಬಿದ್ದು ಬಲಮೋಳಕಾಲು ಹತ್ತಿರ ತರಚಿದ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಆಗ ಅಲ್ಲೆ ಮದುವೆ ಮೆರವಣಿಗೆ ಕುಣಿಯುದನ್ನು ನೊಡುತ್ತಾ ನಿಂತಿದ್ದ ನಾನು ಮತ್ತು ನಿಂಗಮ್ಮ ಗಂಡ ಶಿವಣ್ಣ ಗೊಕರ್ಿ ಇಬ್ಬರೂ ಬಿಡಿಸಲು ಹೋದಾಗ ನನಗೆ ಯಂಕಪ್ಪ ತಂದೆ ರಂಗಪ್ಪ ದಾಸರ, ರಾಯಪ್ಪ ತಂದೆ ತಿರುಪತಿ ದಾಸರ ಹಾಗೂ ಅಮರಪ್ಪ ತಂದೆ ಗೊಪಾಲಪ್ಪ ದಾಸರ ಇವರು ಈ ಸೂಳೆಯರ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ನನಗೆ ಮಾನಭಂಗ ಮಾಡುವ ಉದ್ದೇಶದಿಂದ ಕೂದಲೂ ಮತ್ತು ಸೀರೆ ಹಿಡಿದು ಎಳೆದಾಡಿದ್ದು ಇರುತ್ತದೆ. ನಂತರ ನಾವೆಲ್ಲರು ಕೆಳಗೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಮೇರವಣಿಗೆ ಹತ್ತಿರ ಇದ್ದ ಸಿದ್ದಪ್ಪ ತಂದೆ ಹಣಮಪ್ಪ ಹರಿಜನ, ಮರಳಪ್ಪ ತಂದೆ ಜೊಗೆಪ್ಪ ಹರಿಜನ ಹಾಗು ಜೆಟ್ಟೆಪ್ಪ ತಂದೆ ರೆವಣಸಿದ್ದಪ್ಪ ಪುಜಾರಿ ಇವರು ಬಂದು ನಮಗೆ ಹೊಡೆಯುದನ್ನು ನೋಡಿ ಬಿಡಿಸಿಕೊಂಡರು.  ನಂತರ ಸದರಿಯವರೆಲ್ಲರು ಹೊಡೆಯುವದನ್ನು ಬಿಟ್ಟು ಊರಲಿ ನಿಮ್ಮದು ಬಹಾಳ ಆಗಿದೆ   ಇಷ್ಟಕ್ಕೆ ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ ನಿಂಗಪ್ಪ ತಂದೆ ಬಸಪ್ಪ, ರೆವಣಪ್ಪ ತಂದೆ ಬೀಮಣ್ಣ, ಸಿದ್ದಪ್ಪ ತಂದೆ ಬಾಲಪ್ಪ, ಶಿವಪುತ್ರ ತಂದೆ ಕರೆಪ್ಪ, ಮಾನಯ್ಯ ತಂದೆ ರಾಯಪ್ಪ ಇವರೆಲ್ಲರೂ ರಕ್ತಗಾಯ ಆಗಿದ್ದರಿಂದ ಉಪಚಾರ ಕುರಿತು ಕೆಂಭಾವಿ ಆಸ್ಪತ್ರೆಗೆ ಸೇರಿಕೆ ಆಗಿ ನಂತರ ಹೆಚ್ಚಿನ ಉಪಚಾರ ಕುರಿತು ಸುರಪೂರ ಆಸ್ಪತ್ರೆಗೆ ಸೇರಿಕೆ ಆಗಿದ್ದು ಇರುತ್ತದೆ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂಡು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ಸಮಾಜದ ಮದುವೆ ಪ್ರಯುಕ್ತ ಡಿಜೆ ಹಚ್ಚಿ ಮಾನಪ್ಪ ದಾಸರ ಇವರ ಮನೆ ಮುಂದೆ ಮದುವೆಯ ಮೆರವಣಗೆ ನಡೆಯುತ್ತಿದ್ದಾಗ ನಮ್ಮ ಮನೆಯ ಮುಂದೆ ಯಾಕೆ ಕುಣಿಯುತ್ತಿದ್ದಿರಿ ಅಂತಾ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ, ಕಬ್ಬಿಣದ ರಾಡಿನಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯಪಡಿಸಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಅಜರ್ಿ ಕೊಟ್ಟ ಸಾರಾಂಶ ಮೇಲಿಂದ  ಠಾಣಾ ಗುನ್ನೆ ನಂಬರ 67/2019 ಕಲಂ: 143,147,148,323,324,307,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
  
ಶಹಾಪೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.:- 138/2019.ಕಲಂ 5&11(ಡಿ) ಪ್ರಾಣೀ ಹಿಂಸೆ ಪ್ರತಿಬಂದಕ ಕಾಯ್ದೆ 1964 ಮತ್ತು 177 ಐ,ಎಂ,ವಿ, ಕಾಯ್ದೆ:- ದಿನಾಂಕ 01/06/2019 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾಧಿ ಶ್ರೀ ಮಾರುತಿ ತಂದೆ ಪುರುಷೊತ್ತಮ್ಮ ಹೆದರುಮನಿ ವ|| 23 ಜಾ|| ಮಾದಿಗ ಉ|| ಶ್ರೀರಾಸೇನೆ ಉಪಾದ್ಯಕ್ಷ ಸಾ|| ಇಂದಿರಾನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ದಿನಾಂಕ 01/06/2019 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾಧಿ ಶ್ರೀ ಮಾರುತಿ ತಂದೆ ಪುರುಷೊತ್ತಮ್ಮ ಹೆದರುಮನಿ ವ|| 23 ಜಾ|| ಮಾದಿಗ ಉ|| ಶ್ರೀರಾಸೇನೆ ಉಪಾದ್ಯಕ್ಷ ಶಹಾಪೂರ ಸಾ|| ಇಂದಿರಾನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ದಿನಾಂಕ 01/06/2019 ರಂದು ಫಿಯರ್ಾದಿಯವರಿಗೆ ಈ ದಿನ ಮದ್ಯಾಹ್ನ 2-30 ಗಂಟೆಗೆ ಮನಕಲಕುವ ತಲೆ ತಗ್ಗಿಸುವ ಕಾನೂನು ಬಹಿರಂಗವಾಗಿ ಹಿಂಸಾತ್ಮಕವಾಗಿ ಕಸಾಯಿಕಾನೆಗೆ ಗೊವುಗಳನ್ನು ಸಾಗಾಣಿಕೆ ಮಾಡುತ್ತಿರುವದಕ್ಕೆ ನಮ್ಮ ಕಣ್ಣು ಸಾಕ್ಷಿಯಾಗಿವೆ, ಈ ಗೋವುಗಳನ್ನು ಸಾಗಾಣಿಕೆ ಮಾಡಲು ವೈದ್ಯರಿಂದ ಯಾವುದೆ ಬರವಣಿಗೆ ಪಡೆದಿರುವದಿಲ್ಲಾ ಪಾರಿಸ್ಟ ಬಟೆಸ್ಟ ಪೆಟ್ಟಿಗೆ ಇರುವದಿಲ್ಲಾ, ಯಾವಸ್ಥಳಕ್ಕೆ ಹೊರಟಿವೆ ಎಂದು ಸಂಪೂರ್ಣಮಾಹಿತಿ ಇರುವದಿಲ್ಲಾ ಕೆಎ-33ಎ-1433 ಈ ವಾನದಲ್ಲಿ ಗೋವುಗಳಿಗೆ ಕುಡಿಯಲು ನೀರು ಮತ್ತು ತಿನ್ನಲು ಮೇವಿನ ವ್ಯೆವಸ್ಥೆ ಇರುವದಿಲ್ಲಾ ಹಾಗೂ ಗೋವುಗಳ ಕಾಲಿಗೆ ಅಡಿಯಲ್ಲಿ ನೊವು ಆಗದಂತೆ ಒಣ ಹುಲ್ಲು ಹಾಗೂ ಸರಿಯಾಗಿ ಉಸಿರಾಡಲು ವ್ಯೆವಸ್ಥೆ ಇರುವದಿಲ್ಲಾ ಸದರಿ ವಾಹನ ಕನ್ಯಾಕೊಳ್ಳೂರ ಅಗಸಿ ಶಹಾಪೂರ ಹತ್ತಿರ ತಡೆಯಲಾಗಿದೆ, ಒಂದು ಗುಡ್ಸ ವಾಹನದಲ್ಲಿ 2 ಕಿಂತ ಹೆಚ್ಚು ಗೋವುಗಳನ್ನು ಸಾಗಾಣೀಕೆ ಮಾಡುವುದಿಲ್ಲಾ ಆದರೆ ಇವರು 6 ಗೋವುಗಳನ್ನು ಕಾಲುಗಳನ್ನು ಕಟ್ಟಿ ಒಂದರ ಮೇಲೊಂದು ಬಿದ್ದಿದ್ದು ಚಿತ್ರಹಿಂಸೆಯಾಗಿ ಗೋವುಗಳನ್ನು ಸಾಗಿಸುತ್ತಿದ್ದಾನೆ, ಇದರಿಂದಾಗಿ 4 ಹೋರಿಗಳು ಹಾಗೂ 2 ಆಕಳೂಗಳಿಗೆ ಒಂದರಮೇಲೊಂದರಂತೆ ಹಾಕಿ ತುಳಿದು ತುಳಿದು ಗಾಯವಾಗಿ ಚಿತ್ರ ಹಿಂಸೆ ಕೊಟ್ಟು ದೈಹಿಕ ನೊವನ್ನುಂಟುಮಾಡಿ ಸಾಗಿಸುತ್ತಿದ್ದಾನೆ, ಸದರಿ ವಾಹನದ ಚಾಲಕನು ತನ್ನ ಹೆಸರು ಅಲ್ಲಾಖಾ ತಂದೆ ಇಸ್ಮಾಯಿಲ್ಸಾಬ ಸಾ|| ಗೋಗಿ (ಕೆ) ಅಂತ ತಿಳಿಸಿದನು, ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 138/2019 ಕಲಂ 5 ಮತ್ತು 11 (ಡಿ) ಪ್ರಾಣಿ ಹಿಂಸೆ ಪ್ರತಿಬಂದಕ ಕಾಯ್ದೆ 1964 ಮತ್ತು ಕಲಂ 177 ಐ,ಎಂ,ವಿ, ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು,



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!