ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 31-05-2019

By blogger on ಶುಕ್ರವಾರ, ಮೇ 31, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 31-05-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 123/2019 ಕಲಂ: 279, 337,338,304(ಎ) ಐಪಿಸಿ:-ದಿನಾಂಕ: 31/05/2019 ರಂದು 9-00 ಎ.ಎಮ್ ಕ್ಕೆ ಶ್ರೀಮತಿ ಮರೆಮ್ಮ ಗಂಡ ಯಲ್ಲಪ್ಪ ಕಟಿಗೆಲ್ಲರ ಸಾ: ಹೋತಪೇಟ, ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 30/05/2019 ರಂದು ನನ್ನ ದೊಡ್ಡಪ್ಪನ ಮಗನಾದ ಬೈಲಪ್ಪನ ಮದುವೆ ಕಾರ್ಯಕ್ರಮ ಇರುವದರಿಂದ ನಾವು ನಿನ್ನೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಪೇಟ ಅಮ್ಮಾಪೂರದಿಂದ ಟಿ.ಬೊಮ್ಮನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಬೈಲ ಹಣಮಂತ ದೇವಸ್ಥಾನಕ್ಕೆ ಬಂದು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೇವೆ. ರಾತ್ರಿ ದೇವಸ್ಥಾನದಲ್ಲಿ ಅಡಿಗೆ ಮಾಡುತ್ತಿರುವಾಗ ಕಿರಾಣಿ ವಸ್ತುಗಳು ಕಡಿಮೆ ಬಿದ್ದಿದ್ದರಿಂದ ನಮ್ಮ ಸಂಬಂಧಿಕರಾದ ಭೀಮರಾಯ ತಂದೆ ಹಣಮಂತ ಜೋಡಬಡಿಗೇರ ಇವರು ತನ್ನ ಹಿರೋ ಸ್ಪ್ಲೇಂಡರ ಪ್ಲಸ್ ಮೋಟರ ಸೈಕಲ ನಂಬರ ಕೆ.ಎ 33 ಡಬ್ಲೂ 3160 ನೇದ್ದರ ಮೇಲೆ ನನ್ನ ಗಂಡನಾದ ಯಲ್ಲಪ್ಪ ತಂದೆ ಹೈಯ್ಯಾಳಪ್ಪ ಕಟಿಗೆಲ್ಲರ ಹಾಗು ರವಿ ತಂದೆ ದೇವಿಂದ್ರಪ್ಪ ತಿರುಲಯ್ಯನೋರ ಇವರನ್ನು ಕೂಡಿಸಿಕೊಂಡು ಪೇಠ ಅಮ್ಮಾಪೂರ ಊರಲ್ಲಿ ಹೋಗುವಾಗ ತನ್ನ ಮೋ.ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ 10-20 ಪಿ.ಎಮ್ ಕ್ಕೆ ಪೇಠ ಅಮ್ಮಾಪೂರ ಸಿಮಾಂತರದಲ್ಲಿ ಬರುವ ವಿಠಲ್ ಯಾದವ ಇವರ ಹೊಲದಲ್ಲಿ ತಿರುವು ರಸ್ತೆಯಲ್ಲಿ ವೇಗದಲ್ಲಿ ಮೋ.ಸೈಕಲ್ ನಿಯಂತ್ರಣ ಮಾಡದೇ ರಸ್ತೆಯ ಪಕ್ಕದಲ್ಲಿರುವ ಗೂಟಗಲ್ಲಿಗೆ ಡಿಕ್ಕಿ ಹೊಡೆದು ಮೋ.ಸೈಕಲ್ ಸಮೇತ ಕೆಳಗಡೆ ಹಳ್ಳದಲ್ಲಿ ಬಿದ್ದಿದ್ದರಿಂದ ನನ್ನ ಗಂಡನಾದ ಯಲ್ಲಪ್ಪನಿಗೆ ತಲೆಗೆ ಭಾರಿಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತಸ್ರಾವ ಆಗಿರುವದಲ್ಲದೇ ಬಾಯಿಯ ಎಡಭಾಗದಲ್ಲಿ, ಬಲಗಾಲಿನ ಪಾದಕ್ಕೆ ಭಾರಿ ರಕ್ತಗಾಯವಾಗಿ ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿತ್ತು. ಮೋ.ಸೈಕಲ್ ನಡೆಸುತ್ತಿದ್ದ ಭೀಮರಾಯನಿಗೆ ಬಲಗಣ್ಣಿನ ಹತ್ತಿರ ಹಾಗು ಮುಖದ ಮೇಲೆ ಅಲ್ಲಲ್ಲಿ ಮತ್ತು ಬಲಭುಜಕ್ಕೆ ತರಚಿದ ಭಾರಿ ರಕ್ತಗಾಯಗಳಾಗಿರುತ್ತವೆ. ರವಿ ತಿರುಲಯ್ಯನವರ ಇತನಿಗೆ ಬಲಗಾಲಿನ ಮೊಣಕಾಲಿಗೆ ಹಾಗು ಬಾಯಿ, ಗದ್ದಕ್ಕೆ ಭಾರಿ ರಕ್ತಗಾಯಗಳಾಗಿರುತ್ತವೆ. ಆಗ ನಾವು ಖಾಸಗಿ ಜೀಪಿನಲ್ಲಿ ಮೂವರು ಗಾಯಾಳುಗಳಿಗೆ ಹಾಕಿಕೊಂಡು ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಪ್ರಥಮೋಪಚಾರ ಮಾಡಿಸಿಕೊಂಡು ಇಲ್ಲಿಂದ ವೈದ್ಯರ ಸಲಹೆ ಮೇರೆಗೆ ಮೂವರಿಗೂ ಅಂಬ್ಯಲೇನ್ಸ್ ವಾಹನದಲ್ಲಿ ಹಾಕಿಕೊಂಡು ನಿನ್ನೆ ರಾತ್ರಿಯೇ ಕಲಬುರಗಿಯಲ್ಲಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಯುನೈಟೆಡ್ ಆಸ್ಪತ್ರೆಯಲ್ಲಿ ನನ್ನ ಗಂಡನು ಉಪಚಾರ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 31/05/2019 ರಂದು 3-00 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 123/2019 ಕಲಂ. 279, 337 338, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 124/2019ಕಲಂ: 504,506, ಸಂ.34  ಐ.ಪಿ.ಸಿ ಮತ್ತು ಕಲಂ. 3(1) (ಆರ್), (ಎಸ್) ಎಸ್ಸಿ ಎಸ್ ಟಿ ಪಿಎ ಕಾಯ್ದೆ-1989:- ದಿನಾಂಕ:31-05-2019ರಂದು6 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಹಸನಮ್ಮ ಗಂ/ದಿ.ಸಾಬಗೌಡಚಿಕ್ಕಮೇಟಿ ವಯಸ್ಸು:50 ವರ್ಷ, ಉದ್ಯೋಗ:ಕೂಲಿ ಜಾತಿ:ಪರಿಶಿಷ್ಟಪಂಗಡ(ಬೇಡರ)ಸಾ||ಹಾಲಗೇರಾಇವರುಠಾಣೆಗೆ ಬಂದುಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆನನಗೆ ಎರಡುಗಂಡು ಮಕ್ಕಳು ಇದ್ದು ನಾನು ನನ್ನೇರಡುಗಂಡು ಮಕ್ಕಳು ಕೂಲಿ ನಾಲಿ ಮಾಡಿಕೊಂಡುಆದಷ್ಟುಉತ್ತಮಜೀವನ ಮಾಡುತ್ತಿದ್ದೆವು ನನ್ನ ಹಿರಿಯ ಮಗನಾದ ನಿಂಗಯ್ಯಾಚಿಕ್ಕಮೇಟಿ ಕೂಲಿ ನಾಲಿ ಮಾಡಿ  ಸಂಜೆಊರಿಗೆ ಬಂದುರಾತ್ರಿ ಊಟ ಮಾಡಿ ದಿನಾಲು ನಮ್ಮೂರ ಹಣಮಂತದೇವರಗುಡಿಯಕಟ್ಟೆಯ ಮಲಗುತ್ತಿದ್ದಆದರೆ ದಿನಾಂಕ: 02/07/2014 ರಂದುರಾತ್ರಿ 12:30 ಗಂಟೆ ಸುಮಾರಿಗೆ ಕೊಲೆ ಮಾಡಿದ್ದು, ಮರುದಿವಸ ನಾನು ಕೋಲೆ ಮಾಡಿದವರುಒಟ್ಟು 5 ಜನಇದ್ದು ನಾನು ಕೂಡಾ 5 ಜನಅಂತಾ ಹೇಳಿದರು ಹೇಳಿಕೆಯಲ್ಲಿ ಒಬ್ಬನೆ ಬೀಮಣಗೌಡತಂದೆ ಹನುಮಗೌಡ ಮಾಲಿ ಪಾಟೀಲ ಎಂದುಈತನೊಬ್ಬನ ಮೇಲೆ ಕೇಸು ದಾಖಲಿಸಿದ್ದಾಗಿರುತ್ತದೆ. ಅಪರಾಧ ಸಂಖ್ಯೆ:141/2014 ದಿ:03/07/2014 ಭೀಮಣಗೌಡ ಈಗ ಬೇಲ ಮೇಲೆ ಹೊರಗೆ ಬಂದಿರುತ್ತಾನೆ.ಈ ಅಪರಾಧ ಮಾನ್ಯಗೌರವಾನ್ವಿತಜಿಲ್ಲಾ ಮತ್ತು ಸತ್ರ ನ್ಯಾಯಾಲಯಯಾದಿಗಿರಿರವರು ನನಗೆ ನೋಟಿಸ್ ನೀಡಿ ನನ್ನಿಂದ ಹೇಳಿಕೆ ಪಡೆಯುವಾಗ ನಾನು ಮಾನ್ಯಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾದಿಶರ ಮುಂದೆ ಕೊಲೇ ಮಾಡಿದವ ಬೀಮನಗೌಡಒಬ್ಬನೆಅಲ್ಲಈತನೊಂದಿಗೆಇನ್ನು ನಾಲ್ಕು ಜನಇದ್ದಾರೆಂದುಅವರು ಹೆಸರು ಹೇಳಿ ಹೇಳಿಕೆ ಕೊಟ್ಟಿದ್ದಾಗಿರುತ್ತದೆ. ಆದರೆ ದಿನಾಂಕ:30/05/2019 ರಂದು ನನ್ನ ಮನೆಯ ಮುಂದೆ ನಮ್ಮ ಬೇಡಜನಾಂಗದವರಾದ ಶ್ರೀ ನಾಗಪ್ಪತಂದೆರಾಮಯ್ಯಾ ಪೂಜಾರಿ (ಬೇಡರ) ಈತನತಮ್ಮನವರು ಮದುವೆ ಮಾಡುತ್ತಿದ್ದ ಮಧ್ಯಾಹ್ನ 3 ಗಂಟೆ ಸುಮಾರಿಗೆ 1) ಭಿಮನಗೌಡ 2) ಬಸನಗೌಡ 3) ರಾಮನಗೌಡತಂದೆ ಹನುಮಗೌಡ ಮಾಲೀ ಪಾಟೀಲ ಮತ್ತು 4) ಶರಣಪ್ಪತಂದೆ ಪರಮಪ್ಪ ಪೂಜಾರಿಜಾತಿ:ಕುರುಬ ಈ ನಾಲ್ಕು ಜನ ಸೇರಿ ನನ್ನ ಮನೆಯಕಡೆ ಮುಖ ಮಾಡಿ ಮಿಸೇ ತಿರುಗುವದುದುರಗುಟ್ಟಿ ನೋಡುವದು ಮಾಡ ಹತ್ತಿದರು ನಾನು ನನ್ನ ಮಗ ಯಾವುದೆ ಗಮನ ಕೊಡದೆ ಸುಮ್ಮನಿದ್ದೆವುಆದರೆ ಸಾಯಂಕಾಲ 7-30 ಗಂಟೆ ಸುಮಾರಿಗೆ 1) ಬೀಮನಗೌಡತಂದೆ ಹನುಮಗೌಡ ಮಾಲಿ ಪಾಟೀಲ 2) ಬಸನಗೌಡತಂದೆ ಹನುಮಗೌಡ ಮಾಲೀ ಪಾಟೀಲ 3) ರಾಮನಗೌಡತಂದೆ ಹನುಮಗೌಡ ಮಾಲಿ ಪಾಟೀಲ ಮತ್ತು 4) ಶರಣಪ್ಪಉರ್ಪ ಶಾಣಪ್ಪತಂದೆ ಪರಮಪ್ಪ ಪೂಜಾರಿಜಾತಿ||ಕುರುಬ ಈ ನಾಲ್ಕು ಜನಕೂಡಿಕೊಂಡು ಬೀಮನಗೌಡಕೈಯಲ್ಲಿಕೊಡಲಿ, ಬಸಣಗೌಡನಕೈಯಲ್ಲಿರಾಡು, ರಾಮಣಗೌಡನಕೈಯಲ್ಲಿ ಬಡಿಗೆ ಮತ್ತು ಶರಣಪ್ಪ ಪೂಜಾರಿಕುರುಬರಈತನಕೈಯಲ್ಲಿ ಬಡಿಗೆ ಹಿಡಿದುಕೊಂಡುಇಲ್ಲದ ಸಲ್ಲದಅವಾಚ್ಯ ಶಬ್ದಗಳಿಂದ ಬೈಯುತ್ತಾಕುತೆ ಹೊಡೆಯುತ್ತಾ ಲೇ ಸೂಳಿ ನೀನು ಯಾದಗಿರಿಕೊಟರ್ಿನಲ್ಲಿಒಟ್ಟು 5 ಜನರ ಹೆಸರು ಹೇಳಿದ್ದಿಯಾ ಮಗಳೆ ನಿನ್ನ ಮತ್ತುಇನ್ನುಇದ್ದ ಮಗನನ್ನುಕೊಲ್ಲುತ್ತೇವೆ ಮುಂದೆಯಾರ ಸಾಕ್ಷಿ ಹೇಳುತ್ತಾರೆ ನೋಡುತ್ತೆವೆಅಂತಾ ಹೇಳುತ್ತಾ ನನ್ನ ಮನೆಯಕಡೆಗೆಕೂಗಾಡುತ್ತಾ ಬರುವದನ್ನು ನೋಡಿ ನಾನು ಜೀವಕ್ಕೆಅಂಜಿ ಮನೆಯ ಒಳಗೆ ಓಡಿ ಮನೆಯ ಒಳಚೀಲಕ ಹಾಕಿಕೊಂಡುಚಿರಾಡುತ್ತಿದ್ದಾಗ ನಮ್ಮೂರ ಹಾಲಗೇರದವರೆಆದ 1) ಹಣಮಂತ್ರಾಯತಂದೆರಂಗಯ್ಯಾಚಿಕ್ಕಮೇಟಿ 2) ಗಾಳೆಪ್ಪ ತಂದೆ ಬೀಮಪ್ಪಚಿಕ್ಕಮೇಟಿ 3) ಸೋಮಯ್ಯಾತಂದೆದೇವಪ್ಪ ಹೊಸಮನಿ ಇವರಜೋತೆಗೆಇನ್ನು ಕೆಲವರು ಬಂದುಯಾಕೆಇವರಿಗೆತೊಂದರೆಕೋಡುತ್ತಿದ್ದಿರಿಅಂತಾ ಬೇದರಿಸಿ ಕಳಿಸಿರುತ್ತಾರೆ. ಇಲ್ಲಅಂದರೆ ನನ್ನ ಮನೆಯ ಬಾಗಿಲ ಮುರಿದು ನನಗೂ ನನ್ನ ಮಗನಾದತಿರುಪತಿಯನ್ನುಕೊಲ್ಲುತ್ತಿದ್ದರು. ಈ ನಾಲ್ಕು ಜನರಲ್ಲಿ ಬಸನಗೌಡ ಮಾಲೀ ಪಾಟೀಲ ಖುಲ್ಲಾ ಹೇಳುತ್ತಾನೆ ನನಗೆ ಕೊಲ್ಲುವದುಗುರುತು ಹೇಗೆ ಹೊರಗಡೆ ಬರುವದುಗುರುತು ಈಗಾಗಲೆ ಹಿಂದೆ ಮಾದಿಗಜನಾಂಗದಕುಮಾರಿ ಕುಶುಮಾಳನ್ನು ಬಸಿರು ಮಾಡಿ ಕೊಲೇ ಮಾಡಿ ಸುಮಾರು 5 ವರ್ಷಗಳವರೆಗೆ ಯಾವುದೆ ಕೇಸು ಆಗದಂತೆ ನೋಡಿಕೊಂಡಿದ್ದಯಾವಾಗ ನನ್ನ ಮಗನಾದ ನಿಂಗಪ್ಪನನ್ನುಕೊಂದ ಮೇಲೆ ಕುಶುಮಾಳ ಕೊಲೆ ಹೊರಗಡೆ ಬಂದಿರುತ್ತದೆ. ನಮ್ಮೂರ ಹಾಲಗೇರಾದಲ್ಲಿಇವರೆ ಶ್ರೀಮಂತರಿದ್ದು ಅಲ್ಲದೆ ಬಸನಗೌಡರಾಜಕೀಯ ಪ್ರಭಾವಿತನಾಗಿದ್ದು ನಮ್ಮೂರಿನಲ್ಲಿಯೆಅವರದೆ ದಬ್ಬಾಳಿಕೆ ದೌರ್ಜನ್ಯ, ಅತ್ಯಾಚಾರ ಕೊಲೆಗಳು ಮಾಡುತ್ತಿದ್ದರಿಂದಇವರಿಗೆ ನಮ್ಮೂರಿನಜನಇವರ ವಿರುದ್ದಯಾರೂಚಕಾರಎತ್ತುವಂಗಿಲ್ಲ. ಇವರ ಮೂಲ ಉದ್ದೇಶವೆನೆಂದರೆ ಈ ಎರಡು ಕೇಸುಗಳಲ್ಲಿ ಯಾರೂ ಸಾಕ್ಷಿ ನುಡಿವಂಗಿಲ್ಲದಂತೆ ಸಾಕ್ಷಿ ನಾಶ ಮಾಡುವದಿದೆದಯಮಾಡಿಇವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೂ ನನ್ನ ಮಗನಿಗೂ ಜೀವರಕ್ಷಣೆ ಮಾಡಬೇಕುಏನಾದರೂತಾವೂ ನನ್ನದೂರಿನಲ್ಲಿ ಮೌನ ವಹಿಸಿದ್ದಲ್ಲಿ ಮುಂದೆಏನಾದರೂ ಅನಾವುತಗಳಾದರೆ ತಮ್ಮ ದಿವ್ಯ ನಿರ್ಲಕ್ಷವೆಕಾರಣವಾಗಿರುತ್ತದೆ ನಾನು ನನ್ನವರೊಂದಿಗೆ ಚಚರ್ಿಸಿ ತಡವಾಗಿ ಈ ದೂರುತಮಗೆ ನಿಡಿರುತ್ತೆನೆ.. ಅಂತಾಅಜರ್ಿಯಸಾರಾಂಶ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 125/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ. ಆರ್.ಆಕ್ಟ 1957:- ದಿನಾಂಕ:31-05-2019 ರಂದು 9 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಕಿರಣ್ ಡಿ ಆರ್ ವಯಾ:35 ವರ್ಷ ಉ:ಬೂ ವಿಜ್ಷಾನಿ ಗಣಿ ಮತ್ತು ಬೂ ವಿಜ್ಷಾನ ಇಲಾಖೆ ಯಾದಗಿರಿ ಒಂದು ಮರಳು ತುಂಬಿದ ಟಿಪ್ಪರ ನೊಂದಿಗೆ ಠಾಣೆಗೆ ಬಂದು ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:31-05-2019 ರಂದು ಮಧ್ಯಾಹ್ನ ಸುಮಾರಿಗೆ ನಾನು ನಮ್ಮ ಇಲಾಖೆಯ ಶ್ರೀ ರಾಜೇಂದ್ರಗೌಡ ತಂದೆ ವಿರಬದ್ರಗೌಡ ಶಾನಬೋಗ ಪ್ರಥಮ ದಜರ್ೇ ಸಹಾಯಕರು ಹಾಗೂ ಜೀಪ ಚಾಲಕನಾದ ಶ್ರೀ ಜಂಬಣ್ಣ ಮೂವರು ಕೂಡಿಕೊಂಡು ನಮ್ಮ ಸರಕಾರಿ ಜೀಪ ನಂಬರ ಕೆಎ-04 ಜಿ-1490 ನೇದ್ದರಲ್ಲಿ ಸುರಪೂರಕ್ಕೆ ಬಂದು  ಶೆಳ್ಳಗಿ ಚೆಕ್ಕ ಪೋಸ್ಟ ಹತ್ತಿರ 4 ಪಿ.ಎಂ. ಸುಮಾರಿಗೆ ನಿಂತುಕೊಂಡಾಗ ಅದೇ ಸಮಯಕ್ಕೆ ಶೆಳ್ಳಗಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಾವು ಕೈ ಮಾಡಿ ನಿಲ್ಲಿಸಲು ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಬಸವರಾಜ ತಂದೆ ಚೆನ್ನಪ್ಪ ತಳವಾರ ವಯಾ:23 ವರ್ಷ ಉ:ಡ್ರೈವರ ಜಾತಿ:ಕಬ್ಬಲಿಗ ಸಾ:ಪರಸನಳ್ಳಿ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು (ಎಮ್ಡಿಪಿ) ವಿಚಾರಿಸಲು ನಮ್ಮ ಮಾಲೀಕರು ತಿಳಿಸಿದಂತೆ ಶೇಳ್ಳಗಿ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಹೊರಟಿರುತ್ತೇನೆ. ಅಂತಾ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು ನಂತರ ಸದರಿ ಟಿಪ್ಪರನ್ನು ಪರೀಶಿಲಿಸಲು ಒಂದು ಬಾರತಬೆಂಜ ಕಂಪನಿಯ ಟಿಪ್ಪರ ನಂಬರ ಕೆಎ-32, ಸಿ-9343 ನೇದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಶೇಳ್ಳಗಿ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ನೈಸಗರ್ಿಕ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು  ಬೇರೆ ಚಾಲಕನ  ಸಹಾಯದಿಂದ ಠಾಣೆಗೆ ತಂದಿದ್ದು ಇರುತ್ತದೆ.ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                                                         
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ:- ದಿನಾಂಕ:31/05/2019 ರಂದು 14.05 ಗಂಟೆಯ ಸುಮಾರಿಗೆ ಆರೋಪಿತನು ಸರಕಾರದಿಂದಾ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾಗ ಖಚಿತ ಬಾತ್ಮಿ ಬಂದ ಮೇರೆಗೆ ಪಿಯರ್ಾದಿ ಹಾಗೂ ಸಿಬ್ಬಂದಿಯಾದ ಹೆಚ್.ಸಿ-130, 67 ಪಿಸಿ-288, 399 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ, ಆರೋಪಿತನಿಗೆ ಹಿಡಿದಿದ್ದು, ಆರೋಪಿತನು ಮಾರಾಟ ಮಾಡುತ್ತಿದ್ದ 1) 90 ಎಂಎಲ್ದ ಓರಿಜನಲ್ ಚಾಯ್ಸ್ ವಿಸ್ಕಿ ಡಬ್ಬಿಗಳು 96 ಅಕಿ:2910-00 ರೂ 2) 180 ಎಂಎಲ್ದ ಓಲ್ಡ್ ಟವರನ್ ವಿಸ್ಕಿ ಡಬ್ಬಿಗಳು 32 ಅಕಿ:2372-00 ರೂ 3) 180 ಎಂಎಲ್ದ ಬ್ಯಾಗಪೇಪರ್ ವಿಸ್ಕಿ ಡಬ್ಬಿಗಳು 16 ಅಕಿ:1443-00 ರೂ ಹೀಗೆ ಒಟ್ಟು 6725-00 ರೂ ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 99/2019 ಕಲಂ: 323, 324, 504, 506 ಸಂ. 34 ಐಪಿಸಿ:-ದಿನಾಂಕ 31.05.2019 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿದಾರನು ತನ್ನ ಅಳಿಯ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲಾರು ಸೇರಿ ಫಿರ್ಯಾದಿಗೆ ನಮ್ಮೂರಿಗೆ ಯಾಕ ಬಂದಿದೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ರಕ್ತಗಾಯಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2019 ಕಲಂ: 323, 324, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 100/2019 ಕಲಂ: 341, 323, 324, 354, 504, 506 ಸಂಗಡ  34 ಐಪಿಸಿ:-ದಿನಾಂಕ 31.05.2019 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಫಿರ್ಯಾಧಿದಾರಳು ತನ್ನ ಮಗನಿಗೆ ಆರಾಮವಿಲ್ಲದ ಕಾರಣ ಹಣ ಹೊಂದಿಸಲು ಊರಲ್ಲಿ ಆರೋಪಿತರ ಮನೆಯ ಮುಂದಿನಿಂದ ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಫಿರ್ಯಾದಿದಾರಳಿಗೆ ತಡದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 100/2019 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!