ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-05-2019

By blogger on ಗುರುವಾರ, ಮೇ 30, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-05-2019 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 33/2019 ಕಲಂ 279, 337, 338, 304(ಎ)  ಐಪಿಸಿ:-ದಿನಾಂಕ:09/05/2019 ರಂದು ಪಿಯರ್ಾದಿ ದವಾಖಾನೆಗೆ ತೋರಿಸಿಬೇಕೆಂದು ಹುಣಸಗಿಗೆ ಬಂದು ಹುಣಸಗಿಯ ಸರಕಾರಿ ದವಾಖಾನೆಯಲ್ಲಿ ತೋರಿಸಿಕೊಂಡಿದ್ದು, ನಂತರ ಮರಳಿ ಊರಿಗೆ ಹೋಗಬೇಕೆಂದು ದವಾಖಾನೆಯ ಮುಂದಿನ ನಾರಾಯಣಪುರ ರೋಡಿನ ಮೇಲೆ ನಿಂತಾಗ ಆರೋಪಿತನು ತನ್ನ ಅಟೋವನ್ನು ಹುಣಸಗಿ ಕಡೆಯಿಂದಾ ನಡೆಯಿಸಿಕೊಂಡು ಬಂದಿದ್ದು, ಪಿಯರ್ಾದಿ ಅಟೋದವನಿಗೆ ಕೈ ಮಾಡಿ ನಿಲ್ಲಿಸಿ ಅಟೋದಲ್ಲಿ ಕುಳಿತುಕೊಂಡು ಬಲಶೆಟ್ಟಿಹಾಳ ಕಡೆಗೆ ಹೊರಟಿದ್ದು, ಆರೋಪಿತನು ಹುಣಸಗಿ-ನಾರಾಯಣಪುರ ರೋಡಿನ ಮೇಲೆ ಕುಪ್ಪಿ ಕ್ರಾಸ್ ಸಮೀಪ್ ಅಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ರೋಡಿನ ಎಡಬಾಗಕ್ಕೆ ಕಟ್ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಪಿಯರ್ಾದಿ ಕೆಳಗೆ ಬಿದ್ದಾಗ ಅವಳ ಮೇಲೆ ಅಟೋ ಬಿದ್ದಿದ್ದು, ಅಟೋವನ್ನು ಚಾಲಕನು ಎತ್ತಿ ನಿಲ್ಲಿಸಿ ಪಿಯರ್ಾದಿ ಎಬ್ಬಿಸಿ ಉಪಚಾರಕ್ಕೆಂದು ಅದೇ ಅಟೋದಲ್ಲಿ ಹುಣಸಗಿ ಸರಕಾರಿ ದವಾಖಾನೆಗೆ ತಂದು ಹಾಕಿದ್ದು ಇರುತ್ತದೆ. ಪಿಯರ್ಾದಿಗೆ ಅಟೋದವರು ದವಾಖಾನೆಗೆ ತೋರಿಸುತ್ತೇನೆ ಅಂತಾ ಹೇಳಿ ತೋರಿಸದೆ ಇದ್ದುದ್ದಕ್ಕೆ ತಡವಾಗಿ ದೂರು ಕೊಟ್ಟಿರುತ್ತವೆ ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ. ದಿನಾಂಕ: 30/05/2019 ರಂದು 20.30 ರಂದು ಗಂಟೆಗೆ ಮೃತ ಗದ್ದೆಮ್ಮ ಗಂಡ ಅಮರಪ್ಪ ಪೂಜಾರಿ ಸಾ||ನಾರಾಯಣಪೂರ ಇವಳ ಮಗನಾದ ರಾಜಶೇಖರ ತಂದೆ ಅಮರಪ್ಪ ಪೂಜಾರಿ ಸಾ||ಚೊಂಡಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟ ಸಾರಾಂಶವೇನೆಂದರೆ, ದಿನಾಂಕ:09/05/2019 ರಂದು ಮಧ್ಯಾಹ್ನ 15:00 ಗಂಟೆ ಸುಮಾರಿಗೆ ಹುಣಸಗಿಯಿಂದ ನನ್ನ ತಾಯಿ ಆರೋಪಿತನ ಆಟೋ ಟಂ-ಟಂ ದಲ್ಲಿ ಬಲಶೆಟ್ಟಿಹಾಳಗೆ ಹೋಗಲು ಹೊರಟಾಗ ಕುಪ್ಪಿ ಕ್ರಾಸ್ ಹತ್ತಿರ ರಸ್ತೆ ಮೇಲೆ ಆಟೋ ಪಲ್ಟಿಯಾಗಿ ಗಾಯಹೊಂದಿದ್ದರಿಂದ ಅಂದೇ ಸಾಯಂಕಾಲ ಉಪಚಾರಕ್ಕೆಂದು ವಿಜಯಪೂರದ ಯಶೋಧರಾ ದವಾಖಾನೆಯಲ್ಲಿ ಸೇರಿಕೆ ಮಾಡಿ ದಿನಾಂಕ:19/05/2019 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ನಮ್ಮೂರದ ಚೊಂಡಿಗೆ ಕರೆದುಕೊಂ<ಡು ಬಂದು ವೈಧ್ಯಾಧಿಕಾರಿಯವರ ಸಲಹೆಯಂತೆ ಮನೆಯಲ್ಲಿಯೇ ಔಷಧೋಪಚಾರ ಮಾಡುತ್ತಿದ್ದಾಗ, ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ:30/05/2019 ರಂದು 15.30 ಗಂಟೆಗೆ ಮೃತಪಟ್ಟಿರುತ್ತಾಳೆೆ ಎಂದು ಹೇಳಿಕೆ ಕೊಟ್ಟಿದ್ದು ಇರುತ್ತದೆ. ಸದರಿ ಹೇಳಿಕೆ ಯಾದಿಯ ಪ್ರತಿಯನ್ನು ಈ ಕೂಡಾ ಲಗತ್ತಿಡಲಾಗಿದೆ. ಕಾರಣ ಮಾನ್ಯರು ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಮುಖಾಂತರ ನಿವೇಧಿಸಿಕೊಂಡು ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 39/2019+ ಕಲಂ 279, 337, 338, 304(ಎ)  ಐಪಿಸಿ:-ದಿನಾಂಕ:22/05/2019 ರಂದು ಬೆಳಿಗ್ಗೆ 09.15 ಎ.ಎಮ್ ಕ್ಕೆ ಫಿರ್ಯಾದಿಯ ಅಣ್ಣನು ತನ್ನ ಟಂ-ಟಂ ಅಟೋದಲ್ಲಿ ಮಾವಿನಗಿಡದ ತಾಂಡಾದಿಂದ ತಮ್ಮ ಬೀಗರ ಎರಡು ಆಡುಗಳನ್ನು ಹುಣಸಗಿ ತಾಂಡಾಕ್ಕೆ ಬಿಟ್ಟು ಬರಲು ಮಾವಿನ ಗಿಡದ ತಾಂಡಾದ ಕು.ಜಯರಾಂ ತಂದೆ ಗೋಪಿಲಾಲ ರಾಠೋಡ ಇವನೊಂದಿಗೆ ಹುಣಸಗಿ ಕಡೆಗೆ ಕಾಮನಟಗಿ ಸೀಮಾಂತರದ ಎರೆಕೆನಾಲ ಸಮೀಪ ರಸ್ತೆಯ ಎಡಗಡೆ ಹೊರಟಾಗ ಹಿಂದಿನಿಂದ ಆರೋಪಿತನು ತನ್ನ ಕೆಎ-02 ಡಿ-6729 ನೇದ್ದರ ಮಿನಿ ಟ್ರಾವೆಲ್ಸ್ ನೇದ್ದನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಅಣ್ಣನ ಟಂ-ಟಂ ಅಟೋಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿಯ ಅಣ್ಣನು ಟಂ-ಟಂ ಸಮೇತ ಕೆಳಗೆ ಬಿದ್ದು ಫಿರ್ಯಾದಿಯ ಅಣ್ಣನಿಗೆ ಎಡಗಡೆ ತಲೆಗೆ & ಎಡಗಡೆಟೊಂಕಕ್ಕೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೆ ಅಟೋದಲ್ಲಿ ಕುಳಿತ ಜಯರಾಂ ತಂದೆ ಗೋಪಿಲಾಲ ರಾಠೋಡ ಈತನಿಗೆ ಎರಡು ಮೊಳಕಾಲಿಗೆ ರಕ್ತಗಾಯವಾಗಿ & ಮೈಯಲ್ಲಾ ಒಳಪೆಟ್ಟುಗಳಾಗಿದ್ದು ಬಗ್ಗೆ ಫಿಯರ್ಾದಿಯು ಗಾಯಾಳುವಿಗೆ ಬಾಗಲಕೋಟ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ದಿನಾಂಕ: 30/05/2019 ರಂದು 17.00 ರಂದು ಗಂಟೆಗೆ ಎಸ್.ಹೆಚ್.ಓ ಬಾಗಲಕೋಟ ಸಂಚಾರಿ ಪೊಲೀಸ ಠಾಣೆಯಿಂದಾ ಎನ್.ಆರ್-155 ಜಿಆರ್-60 ನೇದ್ದು ವಸೂಲಾಗಿದ್ದು ಏನೆಂದರೆ, ಪ್ರಕರಣದಲ್ಲಿ ಗಾಯಾಳು ವಾಲಪ್ಪ ತಂದೆ ಯಂಕಪ್ಪ ರಾಠೋಡ ಸಾ:ಆರ್.ಕೆ ನಗರ ತಾಂಡಾ (ಬರದೇವನಾಳ) ಈತನಿಗೆ ಉಪಚಾರಕ್ಕೆಂದು ಬಾಗಲಕೋಟ ಕಟ್ಟಿ ದವಾಖಾನೆಯಲ್ಲಿ ಉಪಚಾರಕ್ಕೆಂದು ಸೇರಿಕೆ ಮಾಡಿ ಉಪಚಾರ ಮಾಡುತ್ತಿದ್ದಾಗ, ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ:30/05/2019 ರಂದು 14.30 ಗಂಟೆಗೆ ಮೃತಪಟ್ಟಿರುತ್ತಾನೆ ಎಂದು ಮಾಹಿತಿ ತಿಳಿಸಿದ್ದು ಇರುತ್ತದೆ. ಸದರಿ ಎಂಎಲ್ಸಿ ಯಾದಿಯ ಪ್ರತಿಯನ್ನು ಈ ಕೂಡಾ ಲಗತ್ತಿಡಲಾಗಿದೆ. ಕಾರಣ ಮಾನ್ಯರು ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಮುಖಾಂತರ ನಿವೇಧಿಸಿಕೊಂಡು ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 135/2019 ಕಲಂ 379 ಐ.ಪಿ.ಸಿ:- ದಿನಾಂಕ 30/05/2019 ರಂದು ಮದ್ಯಾಹ್ನ 13-00 ಗಂಟೆಗೆ ಫಿಯರ್ಾದಿ ಶ್ರೀ ಗುರುನಾಥ ತಂದೆ ರೇವು ಚವ್ಹಾಣ ವಯ 32 ವರ್ಷ ಜಾತಿ ಲಂಬಾಣಿ ಉಃ ಒಕ್ಕಲುತ ಸಾಃ ಚಂದಾಪೂರ ತಾಂಡಾ ತಾಃಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮುಂಜಾನೆ 09-45 ಗಂಟೆಗೆ ಫಿಯರ್ಾದಿ ಮತ್ತು ಫಿಯರ್ಾದಿಯ ಅಣ್ಣತಮ್ಮಕಿ ಅನೀಲಕುಮಾರ  ಇಬ್ಬರೂ ಕೂಡಿ ಚಂದಾಪೂರ ತಾಂಡಾದಿಂದ ತಮ್ಮ ಮೋಟರ ಸೈಕಲ್ ನಂ ಕೆಎ-33-ವಿ-7772 ನೇದ್ದರ ಮೇಲೆ ಶಹಾಪೂರದ ಕನರ್ಾಟಕ ಬ್ಯಾಂಕಿಗೆ ಬಂದು ಫಿಯರ್ಾದಿಯು ತನ್ನ  ಖಾತೆ ನಂ 7272500102651701 ನೇದ್ದರಿಂದ ರೂಪಾಯಿ 2 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದು, ಅನೀಲಕುಮಾರನು ಇವನು ತನ್ನ ಖಾತೆ ನಂ 7272500102558301 ನೇದ್ದರಿಂದ 1 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದು ಹೀಗೆ ಒಟ್ಟು 3 ಲಕ್ಷ ರೂಪಾಯಿಯನ್ನು ಡ್ರಾ ಮಾಡಿಕೊಂಡು ಫಿಯರ್ಾದಿ ತಂದಿದ್ದ ನೀಲಿ ಬಣ್ಣದ ಪ್ಲಾಸ್ಟೀಕ್ ಬ್ಯಾಗನಲ್ಲಿ ರೂಪಾಯಿ 3 ಲಕ್ಷ ಹಣ ಹಾಕಿ ಮೋಟರ ಸೈಕಲ್ನ ಟ್ಯಾಂಕ್ ಕವರನಲ್ಲಿಟ್ಟುಕೊಂಡು ಬಸವೇಶ್ವರ ವೃತ್ತದ ಕಡೆಗೆ ಬರುತಿದ್ದಾಗ ಅನೀಲಕುಮಾರನು ಹಳೆ ಬಸ್ ನಿಲ್ದಾಣದ ಹತ್ತಿರ ಸೇವಿಂಗ್ ಮಾಡಿಕೊಳ್ಳುತ್ತೆನೆ ಅಂತ ಇಳಿದುಕೊಂಡಿದ್ದು ಫಿಯರ್ಾದಿಯು ಬಸವೇಶ್ವರ ವೃತ್ತದ ವರೆಗೆ  ಹೋಗಿ ಬರುತ್ತೆನೆ ಅಂತ ಹೇಳಿ  ಮೋಟರ ಸೈಕಲ್ ಚಲಾಯಿಸಿಕೊಂಡು ಶಹಾಪೂರದ ಬಸವೇಶ್ವರ ವೃತ್ತದ ಹತ್ತಿರ ಬಂದು ಪಾಪುಲರ ಬೇಕರಿ ಹತ್ತಿರ ಇರುವ ಜಿಲೇಬಿ ಅಂಗಡಿಯಲ್ಲಿ  ಜಿಲೇಬಿ ಖರೀದಿ ಮಾಡಿಕೊಂಡು ಬರಲು ತನ್ನ ಮೋಟರ ಸೈಕಲ್ ರೋಡಿನ ಬದಿಗೆ ನಿಲ್ಲಿಸಿ ಜಿಲೇಬಿ ಅಂಗಡಿ ಯವನ  ಹತ್ತಿರ ಹೋಗಿ ರೇಟ್ ಎಷ್ಟು ಅಂತ ಕೇಳುತ್ತಾ ತನ್ನ ಮೋಟರ ಸೈಕಲ್ ಕಡೆಗೆ ನಿಗಾ ಮಾಡಿದಾಗ ಮೋಟರ ಸೈಕಲ್ನ ಟ್ಯಾಂಕ್ ಕವರನಲ್ಲಿ  ಹಣವಿಟ್ಟ  ಪ್ಲಾಸ್ಟೀಕ್ ಬ್ಯಾಗ್ ಕಾಣಲಿಲ್ಲ ಹತ್ತಿರ ಬಂದು ನೋಡಲಾಗಿ  3 ಲಕ್ಷ ರೂಪಾಯಿ ಹಣವಿರಲಿಲ್ಲ  ಬಸವೇಶ್ವರ ವೃತ್ತದಲ್ಲಿ ಹುಡಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ಮೋಟರ  ಸೈಕಲ್ ಟ್ಯಾಂಕ ಕವರನಲ್ಲಿಟ್ಟಿದ್ದ 3 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ಕಾನೂನು ರೀತಿಯ  ಕ್ರಮ ಕೈಕೊಂಡು ಕಳುವಾದ ನನ್ನ ಹಣ ಪತ್ತೆ ಮಾಡಿಕೊಡಲು ವಿನಂತಿ ಅಂತ ನೀಡಿದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 135/2019 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                                                                         
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 136/2019 ಕಲಂ 279, 337, 338, 304[ಎ] ಐ.ಪಿ.ಸಿ:- ದಿನಾಂಕ:30/05/2019 ರಂದು ರಾತ್ರಿ 3:00 ಪಿಎಂ ಕ್ಕೆ ಫಿಯರ್ಾದಿ ಶ್ರೀ  ನಿಂಗಪ್ಪ ತಂದೆ ಶರಣಪ್ಪ ಗುಂಟನೂರ ವ|| 35 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೋರನಹಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ನಮ್ಮ ಚಿಕ್ಕಮ್ಮಳಾದ ಗೌರಮ್ಮ ಗಂಡ ಬಸಲಿಂಗಪ್ಪ ನಿಲಳ್ಳಿ ವ|| 58 ವರ್ಷ ಜಾ|| ಬೇಡರ ಉ|| ಕೂಲಿ ಕೆಲಸ ಸಾ|| ವಡಗೇರಾ ಇವಳು ತನ್ನ ಹೆಸರಿನಲ್ಲಿದ್ದ ಒಂದು ಎಕರೆ ಜಮಿನನ್ನು ನಮ್ಮೂರ ತಿರಕಯ್ಯ ತಂದೆ ಭೀಮರಾಯ ಬುಸೇನಿ ಸಾ|| ವಡಗೇರಿ ಇವರಿಗೆ ಮಾರಾಟ ಮಾಡಿದ್ದರಿಂದ ಜಮಿನು ರಜಿಸ್ಟ್ರಶನ್ ಮಾಡಿಸಲು ಇಂದು ದಿನಾಂಕ:30/05/2019 ರಂದು ಮುಂಜಾನೆ 07:30 ಎ.ಎಂ ಸುಮಾರಿಗೆ ನಮ್ಮೂರಿನಿಂದ ನಾನು ಮತ್ತು ತಿರಕಯ್ಯ ಬುಸೇನಿ ಇಬ್ಬರು ಒಂದು ಮೋಟರ ಸೈಕಲ್ದಲ್ಲಿ ಹಾಗೂ ನಮ್ಮೂರ ಯಂಕಪ್ಪ ತಂದೆ ಈರಪ್ಪ ಬುಸೇನಿ ಈತನ ಆಟೋ ನಂ. ಕೆಎ-33 ಎ-3611 ನೇದ್ದರಲ್ಲಿ ನಮ್ಮ ಚಿಕ್ಕಮ್ಮಳಾದ ಗೌರಮ್ಮ ನಿಲಳ್ಳಿ, ಆಕೆಯ ಮಗ ಶಿವರಾಜ ತಂದೆ ಬಸಲಿಂಗಪ್ಪ ನಿಲಳ್ಳಿ, ನಮ್ಮ ಚಿಕ್ಕಪ್ಪ ಸಂಜೀವಪ್ಪ ತಂದೆ ಮರೆಪ್ಪ ನಿಲಳ್ಳಿ, ಆತನ ಮಗ ದೇವಪ್ಪ ತಂದೆ ಸಂಜೀವಪ್ಪ ನಿಲಳ್ಳಿ, ನಮ್ಮ ಚಿಕ್ಕಪ್ಪ ತಿಪ್ಪಣ್ಣ ತಂದೆ ಮರೆಪ್ಪ ನಿಲಳ್ಳಿ ಎಲ್ಲರೂ ಕೂಡಿಕೊಂಡು ಆಟೋದಲ್ಲಿ ಶಹಾಪೂರ ರಜಿಸ್ಟ್ರೇಶನ್ ಆಫೀಸ್ಗೆ ಬಂದು ರಜಿಸ್ಟ್ರೇಶನ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಯಂಕಪ್ಪ ಬುಸೇನಿ ಈತನ ಆಟೋದಲ್ಲಿ ಹೊಗುವಾಗ ನಮ್ಮ ಮುಂದೆ ಹೊರಟಿದ್ದ ಆಟೋವನ್ನು ಅಂದಾಜು 1:00 ಪಿಎಂ ಸುಮಾರಿಗೆ ಶಹಾಪೂರ-ಯಾದಗಿರಿ ಮುಖ್ಯ ರಸ್ತೆಯ ದೋರನಹಳ್ಳಿ ಗ್ರಾಮದ ಅಬ್ದುಲ್ ಕರಿಮ್ ಸಾಬ ಮಠ ರವರ ಮನೆಯ ಮುಂದೆ ರೋಡಿನಲ್ಲಿ ಅತಿ ವೆಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗುತ್ತಾ ಒಮ್ಮಲೆ ಎಡಕ್ಕೆ ಕಟ್ಟ ಮಾಡಿದರಿಂದ ಅಟೋ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದರಿಂದ ಅಟೋದಲ್ಲಿದ್ದವರಿಗೆ ನೋಡಲಾಗಿ ಆಟೋದಲ್ಲಿದ್ದವರಿಗೆ ಭಾರಿ ಮತ್ತು ಸಾದಾ ಗಾಯಗಳಾಗಿ ಗೌರಮ್ಮ ನಿಲಳ್ಳಿ ಇವರು ಸ್ಥಳದಲಿ ಮೃತ ಪಟ್ಟಿರುತ್ತಾಳೆ. 108 ವಾಹನಕ್ಕೆ ಕಾಲ ಮಾಡಿದ್ದು ನಂತರ 108 ವಾಹನದಲ್ಲಿ  ಗಾಳುಗಳಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕಳುಹಿಸಿದ್ದು, ನಂತರ ಒಂದು ಖಾಸಗಿ ವಾಹನದಲ್ಲಿ ಮೃತ ದೇಹವನ್ನು ಹಾಕಿಕೊಂಡು ಸರಕಾರಿ ಆಸ್ಪತ್ರೆ ಶಹಾಪೂರ ಶವಗಾರ ಕೋಣೆಯ ಸ್ಟ್ರಕ್ಚರ ಕಟ್ಟೆಯ ಮೇಲೆ ಹಾಕಿ ಠಾಣೆಗೆ ಬಂದಿರುತ್ತೇನೆ. ಕಾರಣ ಸದರಿ ಅಪಘಾತ ಮಾಡಿದ ಆಟೋ ನಂ. ಕೆಎ-33 ಎ-3611 ನೆದ್ದರ ಚಾಲಕನಾದ ಯಂಕಪ್ಪ ತಂದೆ ಈರಪ್ಪ ಬುಸೇನಿ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ. ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.136/2019 ಕಲಂ 279, 337, 338, 304[ಎ] ಐ.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 137/2019  ಕಲಂ 279,336 ಐ.ಪಿ.ಸಿ. ಸಂಗಡ 192(ಎ), 185 ಐ.ಎಮ್.ವಿ. ಆಕ್ಟ್:- ದಿನಾಂಕ 30/05/2019 ರಂದು 7.45 ಪಿ.ಎಂ ಸುಮಾರಿಗೆ ಸರಕರ್ಾರಿ ತಫರ್ೆ ಫಿಯರ್ಾದಿ ಶ್ರೀ ನಾಗರಾಜ.ಜಿ ಪಿ.ಐ ಶಹಾಪುರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ ಮತ್ತು ಒಂದು ಲಾರಿಯೊಂದಿಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ: 30/05/2019 ರಂದು 6.00 ಪಿ.ಎಂ. ಸುಮಾರಿಗೆ ಶಹಾಪೂರ-ಯಾದಿಗಿರಿ ಮುಖ್ಯೆ ರಸ್ತೆಯ ಮೇಲೆ ಶಿರವಾಳ ಕ್ರಾಸ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸುತಿದ್ದಾಗ ಶಹಾಪೂರ ಕಡೆಯಿಂದ ಶಿರವಾಳ ಕಡೆಗೆ ಒಬ್ಬ ಗೂಡ್ಸ ಲಾರಿ ಚಾಲಕನು ಸದರಿ ವಾಹನದ ಒಳಗಡೆ ಮತ್ತು  ಲಾರಿಯ ಕ್ಯಾಬಿನ್ ಮೇಲೆ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 25 ರಿಂದ 30 ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವುದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ತಪಾಸಣೆ ಮಾಡಿದ್ದು,  ಗೂಡ್ಸ ಲಾರಿ ಇದ್ದು ನಂ ಕೆಎ- ಕೆಎ-28-5592 ಇದ್ದು, ಸದರಿ ಲಾರಿ ಚಾಲಕನು ಮದ್ಯ ಸೇವನೆ ಮಾಡಿ  ವಾಹನ ಚಲಾಯಿಸಿದ್ದು  ಅಲ್ಲದೆ ಸದರಿ ಗೂಡ್ಸ ವಾಹನದಲ್ಲಿ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿ ವೇಗ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸಿ  ವಾಹನದ ಪಮರ್ಿಟ್ ಉಲ್ಲಂಘನೆ ಮಾಡಿದ್ದರಿಂದ  ಸದರಿ ಸ್ಥಳಕ್ಕೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಜಪ್ತಿ ಪಂಚನಾಮೆ ಮೂಲಕ ಲಾರಿಯನ್ನು ತೆಗೆದುಕೊಂಡು ಸದರ ವಾಹನ ಮತ್ತು ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಸಾಯಂಕಾಲ 7-35 ಗಂಟೆಗೆ ಬಂದು ಠಾಣೆಯಲ್ಲಿ ಅದೆ ಪಂಚರ ಸಮಕ್ಷಮದಲ್ಲಿ ವಾಹನ ಚಾಲಕ ಇಬ್ರಾಹಿಂ ಈತನಿಗೆ ಃಡಿಜಚಿಣ ಂಟಿಚಿಟಥಿದಜಡಿ ಮಷೀನ್ನಲ್ಲಿ ಚೆಕ್ ಮಾಡಿದಾಗ  ಅಲ್ಕೋಹಾಲ್ ಪ್ರತಿಶತ% 168 ಟರ ಬಂದಿರುತ್ತದೆ. ಸದರಿ ಆಡಿಣಟಿಞಜಟಿ ಆಡಿತಟಿರ ಅಚಿಟಟಚಿಟಿ ಮೇಲೆ ಪಂಚರು ಮತ್ತು ಚಾಲಕನ ಸಹಿ ಪಡೆದುಕೊಂಡು ಚಾಲಕನ ವಿರುದ್ದ ವರದಿಯನ್ನು ತಯಾರಿಸಿ ಕಲಂ 279, 336 ಐ.ಪಿ.ಸಿ ಮತ್ತು 192(ಎ) 185 ಐ.ಎಮ್.ವಿ ಆಕ್ಟ ನೇದ್ದರಡಿಯಲ್ಲಿ ಕ್ರಮ ಜರುಗಿಸಲು ಸಾಯಂಕಾಲ 7-45 ಗಂಟೆಗೆ ಸರಕಾರದ ಪರವಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 137/2019 ಕಲಂ 279, 336 ಐಪಿಸಿ ಸಂಗಡ 192 (ಎ), 185 ಐ.ಎಮ್.ವಿ.  ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 122/2019 ಕಲಂ 143,147,323,504,506(2) ಸಂ.149 ಐಪಿಸಿ:-ದಿನಾಂಕ:30-05-2019 ರಂದು ಮಾನ್ಯ ಪೊಲೀಸ್ಅಧೀಕ್ಷಕರುಯಾದಿಗಿರರವರಕಛೇರಿಯಜ್ಷಾಪನಾ ಪತ್ರ ಸಂಖ್ಯೆ: 216/ಅಜರ್ಿ/ನೇ/ಯಾ.ಜಿ/2019/606 ದಿನಾಂಕ:16/05/2019 ನೇದ್ದನ್ನು ಸ್ವೀಕರಿಸಿಕೊಂಡು ಜ್ಷಾಪನಾ ಪತ್ರದೊಂದಿಗೆ ಲಗತ್ತಿಸಿರುವ ಅಜರ್ಿಯನ್ನು ಪರೀಶೀಲಿಸಿ ಅಜರ್ಿಧಾರನಾದ ಶ್ರೀ ಹಣಮಂತತಂದೆದ್ಯಾವಪ್ಪ ಭಂಗಿ ಸಾಮಾಜಿಕಕಾರ್ಯಕರ್ತ ಸಾ: ಎಮ್ ಕೊಳ್ಳೂರ ರವರು ಸಲ್ಲಿಸಿರುವ ದೂರುಅಜರ್ಿಯ ಸಾರಾಂಶವೆನೆಂದರೆ ನಾನು ಹಣಮಂತತಂದೆದ್ಯಾವಪ್ಪ ಭಂಗಿ ಸಾಮಾಜಿಕಕಾರ್ಯಕರ್ತ ಸಾ: ಎಂ. ಕೊಳ್ಳೂರು ತಾ:ಶಹಾಪುರ ಜಿ:ಯಾದಗಿರಿ ಇದ್ದು, ತಮ್ಮ ಹೃತ್ಪೂರ್ವಕ ಅವಗಾಹನೆಗಾಗಿ ತರಬಯಸುತ್ತಾ, ತಮ್ಮಲ್ಲಿ ಪಿಯರ್ಾದಿ ಸಲ್ಲಿಸುವುದೆನೆಂದರೆ,ದಿನಾಂಕ:05-05-2019 ರಂದುಅಪರಿಚಿತ ವ್ಯಕ್ತಿಯು ಶಹಾಪೂರ ಪಟ್ಟಣದಚರಬಸವೇಶ್ವರದೇವಾಸ್ಥಾನದಕಮಾನ ಮುಂದೆ ನಿಂತಾಗ ಪೋನ್ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿತನ್ನ ಪೋನ್ಕಟ್ ಮಾಡಿದತಕ್ಷಣಅಲ್ಲಿಂದ ನಾನು ವನದುರ್ಗದ ಮಾರ್ಗವಾಗಿ ಸುರಪುರಕ್ಕೆ ಸಂಜೆ 4.30 ರಿಂದ 5.30 ಗಂಟೆಯ ಮಧ್ಯದಲ್ಲಿಯೇ ಹೋಗಿ ರಾಜಾ ವೆಂಕಟಪ್ಪ ನಾಯಕ ಪತ್ಥಳಿಯ ಪೆಟ್ರೋಲ್ ಪಂಪ್ ಬಳಿ ಓವರ್ ಲೋಡ್ ಮರಳು ಲಾರಿಯು ಹೋಗುತ್ತಿರುವುದನ್ನುಕಂಡು ನಾನು ಪೋಟೋತೆಗೆಯುತ್ತಿದ್ದಾಗಅಲ್ಲಿಯೇ ನಿಂತಿದ್ದರಮೇಶತಂದೆ ಹಣಮಂತ ಬಿರಾದಾರ ಸಾ:ಕನರ್ಾಳ ಎಂಬುವವರು ಸುಮಾರು 15 ಜನರೊಂದಿಗೆ ಬಂದು ನನ್ನ ಸುತ್ತಮುತ್ತಲೂಗೇರ್ವಾ ಹಾಕಿ ನನಗೆ ಅವಾಚ್ಯ ಶಬ್ದಗಳಿಂದ  ನಿಂದಿಸಿ ಹೆದರಿಸಿ ಮೇಲಿನ ಅಂಗಿಯನ್ನು ಹಿಡಿದು ಕಪಾಳಕ್ಕೆ ಹೊಡೆದು ಹಿಂದಿನಿಂದ ಕಾಲಿನಿಂದ ಹೊದ್ದು, ಎಳೆದಾಡಿ ಇನ್ನು ಮುಂದೆ ಮರಳು ಗಾಡಿಯತಂಟೆಗೆ ಬಂದರೆ ನಿನ್ನನ್ನುಖಲಾಸ್ ಮಾಡುತ್ತೇವೆಂದುಎಚ್ಚರಿಕೆಕೊಟ್ಟು ನನಗೆ ಹೊಡೆಯುತ್ತಿರುವಾಗಅಲ್ಲಿಯೇ ನಿಂತಿರುವ ಬಸಪ್ಪ ವಾಬೆ ಲಕ್ಷ್ಮಿಪೂರಇತನು ಬಂದು ನನಗೆ ಬಿಡಿಸಿ ಅಲ್ಲಿಂದ ಪಾರಾಗುವಂತೆ ಮುನ್ಸೂಚನೆ ನೀಡಿದಾಗ ನನ್ನಜೀವಕ್ಕೆಅಪಾಯವಾಗುವ ಸಾಧ್ಯತೆಇರುತ್ತವೆಂದು ತಿಳಿದು ಅಲ್ಲಿಂದ ಹೋಡೆ ಹೋದೆನು.ಈಘಟನೆಯ ಬಗ್ಗೆ ವಿಚಾರಣೆ ಮಾಡಿಠಾಣೆಗೆತಡವಾಗಿ ಬಂದುತಮ್ಮಕಾಯರ್ಾಲಯಕ್ಕೆಅಜರ್ಿ ಸಲ್ಲಿಸಿರುತ್ತೇನೆ.ನಾನು 2015ನೇ ಸಾಲಿನಿಂದಇಲ್ಲಿಯವರೆಗೆ ಮರಳು ಮಾಫಿಯಾ ವಿರುದ್ಧ ಸಾಮಾಜಿಕಕಾಯಕರ್ತನಂತೆ ಹೋರಾಟ ಮಾಡಿಕೊಂಡು ಬಂದಿರುತ್ತೇನೆ. ಆದ್ದರಿಂದ ಮಾನ್ಯರಾದ ತಾವುಗಳು ನನಗೆ ಅವಾಚ್ಯ ಶಬ್ದಗಲಿಂದ ನಿಂದಿಸಿ ಮಾನಸಿಕ ಹಿಂಸೆ ನೀಡಿ ನನಗೆ ಹೊಡೆ ಬಡೆ ಮಾಡಿಜೀವದ ಬೆದರಿಕೆ ಹಾಕಿದವರ ವಿರುದ್ಧ ಕಾನುನು ಸೂಕ್ತ ಕ್ರಮಕೈಗೊಂಡು ನನಗೆ ನ್ಯಾಯ ಒದಗಿಸಿ ಜೀವರಕ್ಷಣೆ ನೀಡಬೇಕೆಂದುತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.

 ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:- 35/2019  ಕಲಂ 279,  337 338 336 ಐಪಿಸಿ :- ದಿನಾಂಕ 30/05/2019 ರಂದು ಬೆಳಿಗ್ಗೆ 9-30 ಎ.ಎಂ.ಕ್ಕೆ ಶ್ರೀ ಸಾಲೋಮನ್ ಆಲಪ್ರಡ್ ತಂದೆ ಮರೆಪ್ಪ ಕಟ್ಟಿಮನಿ ವಯಸ್ಸು;46 ವರ್ಷ, ಉ;ನ್ಯಾಯವಾದಿಗಳು, ಸಾ;ಮುಮ್ತಾಜ್ ಅಪಾರ್ಟಮೆಂಟ್, ಲಕ್ಷ್ಮೀನಗರ, ಯಾದಗಿರಿ (ಮೊ.ನಂ. 8660185639)  ರವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ಪಿಯರ್ಾದು ನೀಡುತ್ತಿರುವುದೇನೆಂದರೆ ದಿನಾಂಕ 31/03/2019 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಶೋಭಾ ಇಬ್ಬರು ಹೊಸಳ್ಳಿ ಬೈಪಾಸ್ ರಸ್ತೆಗೆ ಹೊಂದಿಕೊಂಡು ಹೊಸದಾಗಿ ಕಟ್ಟುತ್ತಿರುವ ಮನೆಯ ಜಾಗೆಯಲ್ಲಿದ್ದಾಗ ಆಗ ನನ್ನ ಹೆಂಡತಿಯು ಮನೆಯಿಂದ ಊಟ ಮತ್ತು ಕುಡಿಯಲು ನೀರು ತರುವಂತೆ ಮನೆಯಲ್ಲಿದ್ದ ನನ್ನ ಹಿರಿಮಗನಾದ ಸ್ಟಿವನ್ ಆಲ್ ಪ್ರೆಡ್ ಈತನಿಗೆ ಪೋನ್ ಮಾಡಿ ಹೇಳಿದ್ದು,  ನಮ್ಮ ಮಗನನ್ನು ಕರೆದುಕೊಂಡು ಬರಲು ನಮ್ಮ ಕಾರ್ ಚಾಲಕ ಸಿಕಂದರ್ ತಂದೆ ಮಸ್ತಾನಸಾಬ ಸಾ;ಯಾದಗಿರಿ ಇವರಿಗೆ ನಮ್ಮ ಬಜಾಜ್ ಪ್ಲಾಟಿನಮ್ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-5663 ನೇದ್ದನ್ನು ಕೊಟ್ಟು ಕಳಿಸಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ನನ್ನ ಮಗನಾದ ಸ್ಟಿವನ್ ಈತನು ನಮ್ಮ ಕಾರ್ ಚಾಲಕ ಸಿಕಂದರ್ ಇವರ ಮೊಬೈಲನಿಂದ ಪೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ ನಾನು ನೀವು ಹೇಳಿದಂತೆ ಮನೆಯಲ್ಲಿನ ಊಟ ಮತ್ತು ಕುಡಿಯಲು ನೀರನ್ನು ತೆಗೆದುಕೊಂಡು ತಯಾರಾಗಿ ಮನೆಯ ಮುಂದೆ ನಿಂತಿದ್ದಾಗ ನನಗೆ ಕರೆದುಕೊಂಡು ಹೋಗಲು ಬಂದಿದ್ದ ಸಿಕಂದರ್ ಇವರ ಜೊತೆಯಲ್ಲಿ  ನಮ್ಮ ಮೋಟಾರು ಸೈಕಲ್ ಮೇಲೆ ಹೊರಟಾಗ ಸಿಕಂದರ್ ಈತನು ಮೋಟಾರು ಸೈಕಲ್ ನಡೆಸುತ್ತಿದ್ದನು ಮಾರ್ಗ ಮದ್ಯೆ ಲುಂಬಿನಿ ಪಾರ್ಕ ಮುಂದಿನ ಮುಖ್ಯ ರಸ್ತೆ ಮೇಲೆ  ಸಿಕಂದರ್ ಈತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ ರಸ್ತೆ ಬದಿಯಲ್ಲಿನ ಕೆರೆಯಲ್ಲಿನ ಎಮ್ಮೆಗಳು ಜಗಳ ಮಾಡಿಕೊಂಡು ಒಮ್ಮೊಲೆ ರಸ್ತೆ ಮೇಲೆ ಬಂದಾಗ ಸಿಕಂದರ್ ಇವರು ಸಡನ್ನಾಗಿ ಬ್ರೇಕ್ ಹಾಕಿದಾಗ  ಮೋಟಾರು ಸೈಕಲ್ ಹಿಂಬದಿ ಕುಳಿತ ನಾನು ಆಯತಪ್ಪಿ ರಸ್ತೆ ಮೇಲೆ ಬಲಕ್ಕೆ ಬಿದ್ದಾಗ ನನ್ನ ಬಲ ಸೊಂಟಕ್ಕೆ ಭಾರೀ ಗುಪ್ತಗಾಯ ಮತ್ತು ಎಡಗಾಲಿನ ಮೊಳಕಾಲಿನ ಮೇಲೆ  ತೀರ್ವ ರಕ್ತಗಾಯವಾಗಿದ್ದು  ಇರುತ್ತದೆ  ಸದರಿ ಘಟನೆಯು ಇಂದು ದಿನಾಂಕ 31/03/2019 ರಂದು ಮದ್ಯಾಹ್ನ ಅಂದಾಜು 2-30 ಪಿ.ಎಂ.ಕ್ಕೆ ಜರುಗಿದ್ದು ನೀವು ಕೂಡಲೇ ಘಟನಾ ಸ್ಥಳಕ್ಕೆ ಬರಬೇಕು ಅಂದಾಗ ನಮಗೆ ಗಾಬರಿಯಾಗಿ ಒಂದು ಖಾಸಗಿ ಆಟೋದಲ್ಲಿ ನಾನು ಮತ್ತು ನನ್ನ ಹೆಂಡತಿ ಶೋಭಾ ಕೂಡಿಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಿ ವಿಚಾರಿಸಲಾಗಿ ನಮಗೆ ನಮ್ಮ ಮಗ ಪೋನಿನಲ್ಲಿ  ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜವಿರುತ್ತದೆ ನಾವು ಕೂಡಲೇ ನನ್ನ ಮಗನಿಗೆ ಉಪಚಾರಕ್ಕಾಗಿ ಯಾದಗಿರಿಯ ಡಾ;ನೀಲಕಂಠ ಸೈದಾಫುರ ಇವರ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿದ್ದು  ಡಾ;ನೀಲಕಂಠ ವೈದ್ಯರು ನನ್ನ ಮಗನ ಎಕ್ಸರೇ ವರದಿಯನ್ನು ನೋಡಿ ಬಲಕಾಲಿನ ಸೊಂಟದಲ್ಲಿನ ಮೂಳೆ ಮುರಿತ ಕಂಡಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಕಡೆ ಹೋಗಲು ತಿಳಿಸಿದರು.  ಆಗ ನಾವು ಗಾಬರಿಯಲ್ಲಿ ಅದೇ ದಿನ ಅಂಬುಲೆನ್ಸ್ ಮೂಲಕ ಹೈದ್ರಾಬಾದ್ನ ಉದಯ್ ಓಮ್ನಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ರಾತ್ರಿ 9-30 ಪಿ.ಎಂ.ಕ್ಕೆ ಸೇರಿಕೆ ಮಾಡಿರುತ್ತೇವೆ. ನನ್ನ ಮಗನಿಗೆ ಉದಯ್ ಓಮ್ನಿ ಆಸ್ಪತ್ರೆಯಲ್ಲಿ ದಿನಾಂಕ 31/03/2019 ರಿಂದ 10/04/2019 ರ ವರೆಗೆ ಒಳರೋಗಿಯನ್ನಾಗಿ ಚಿಕಿತ್ಸೆ ಕೊಡಿಸಿದ್ದು ಇರುತ್ತದೆ. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ್ನ ಅಪೋಲೋ ಆಸ್ಪತ್ರೆಗೆ ದಿನಾಂಕ 10/04/2019 ರಿಂದ 20/04/2019 ರ ವರೆಗೆ ಚಿಕಿತ್ಸೆ ಕೊಡಿಸಿದ್ದು ಮತ್ತು ವೈದ್ಯರ ಸಲಹೆಯ ಮೇರೆಗೆ ಇಲ್ಲಿಯವರೆಗೆ ಹೊರ ರೋಗಿಯಾಗಿ ಪಿಜೋಥೆರೋಪಿ ಚಿಕಿತ್ಸೆ ಪಡೆಯುತ್ತಿದ್ದು ನನ್ನ ಮಗನಿಗೆ ತೀರ್ವ ಗಾಯಗೊಂಡಿದ್ದರಿಂದ ಇಲ್ಲಿಯವರೆಗೆ ಆತನ ಜೊತೆಯಲ್ಲಿದ್ದು ಚಿಕಿತ್ಸೆ ಕೊಡಿಸಿದ್ದು, ನನಗೂ ಸಹ ಮನೆ ಕಟ್ಟುವ ಸ್ಥಳದಲ್ಲಿ ಆಯ ತಪ್ಪಿ ಆಕಸ್ಮಿಕವಾಗಿ ಗುಂಡಿಯಲ್ಲಿ ಬಿದ್ದು ಎಡಗಾಲಿನ ಪಾದದ ಮೂಳೆ ಮುರಿತ ಆಗಿದ್ದರಿಂದ ವೈದ್ಯರು ಹೆಚ್ಚಿಗೆ ತಿರುಗಾಡದಂತೆ ಸಲಹೆ ನೀಡಿದ್ದರಿಂದ ಠಾಣೆಗೆ ಬಂದು ದೂರು ಸಲ್ಲಿಸಲು ಆಗಿರುವುದಿಲ್ಲ. ಆದರೆ ಈ ಘಟನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ವೈದ್ಯರು ಆರ್.ಟಿ.ಐ ಎಮ್.ಎಲ್.ಸಿ ಅಂತಾ ಪರಿಗಣಿಸಿ ಚಿಕಿತ್ಸೆ  ಮಾಡಿರುತ್ತಾರೆ. ಕಾರಣ ಇಂದು ದಿನಾಂಕ 30/05/2019 ರಂದು ಬೆಳಿಗ್ಗೆ 9-30 ಎ.ಎಂ.ಕ್ಕೆ ತಮ್ಮ ಪೊಲಿಸ್ ಠಾಣೆಗೆ ತಡವಾಗಿ ಹಾಜರಾಗಿ ಪಿಯರ್ಾದು ನೀಡುತ್ತಿದ್ದು ಈ ಘಟನೆಯ ಬಗ್ಗೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ಕೊಟ್ಟ ಫಿಯರ್ಾದು  ದೂರಿನ ಸಾರಾಂಶದ ಮೇಲಿಂದ ಠಾಣೆಗ ಗುನ್ನೆ ನಂಬರ 35/2019 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 58/2019 ಕಲಂ, 279,337,338 ಐಪಿಸಿ:-ದಿನಾಂಕ: 30-05-2019 ರಂದು ಬೆಳಿಗ್ಗೆ 09-20 ಗಂಟೆಗೆ ಪಿಯರ್ಾಧಿ ಮತ್ತು ಗಾಯಾಳುಗಳು ಕೂಡಿ ಬದ್ದೆಪಲ್ಲಿ ಮತ್ತು ಬಾಲಛೆಡ ಗ್ರಾಮದಿಂದ ಬಸ್ ನಂ. ಕೆಎ-33 ಎಫ್-0179 ನೆದ್ದರಲ್ಲಿ ಕುಳಿತುಕೊಂಡು ಸೈದಾಪೂರಕ್ಕೆ ಬರುವಾಗ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ರಾಚನಳ್ಳಿ ಕ್ರಾಸ ಹತ್ತಿರ ಬಸ್ ನಲ್ಲಿ ಹೊಗುತ್ತಿರುವಾಗ ಆರೋಪಿತನು ತಾನು ನಡೆಸುವ ಬಸನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಯಾದಗಿರಿ ಕಡೆಯಿಂದ ರಾಯಚೂರ ಕಡೆಗೆ ಹೋಗುವ ಲಾರಿಗೆ ಡಿಕ್ಕಿಪಡಿಸಿದ್ದು ಅಪಘಾತದಲ್ಲಿ ಪಿಯರ್ಾಧಿ ಮತ್ತು ಬಸನಲ್ಲಿ ಕುಳಿತವರಿಗೆ ಗಾಯಗಳಾಗಿರುತ್ತೇವೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!