ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-05-2019
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 93/2019 ಕಲಂ 279, 338, 304(ಎ) ಐಪಿಸಿ & ಕಲಂ: 187 ಐ.ಎಮ್.ವಿ ಆಕ್ಟ್:- ದಿನಾಂಕ 24.05.2019 ರಂದು ಮಧ್ಯಾಹ್ನ 1:15 ಗಂಟೆಗೆ ಮೃತ ಶ್ರೀನಿವಾಸರಡ್ಡಿ ಮತ್ತು ಗಾಯಾಳುದಾರರಾದ ನಾಗರಾಜ ಮ್ತು ಉಮೇಶ ಮೂರು ಜನರು ಸೇರಿ ಮೋಟಾರು ಸೈಕಲ್ ನಂ: ಎಪಿ-09-ಸಿ.ಕ್ಯೂ-9935 ನೇದ್ದರ ಮೇಲೆ ಗುರುಮಠಕಲ್ ಕಡೆಯಿಂದ ಎಮ್.ಟಿ ಪಲ್ಲಿ ಕಡೆಗೆ ಹೋಗುತ್ತಿದ್ದಾಗ ಎಮ್.ಟಿ ಪಲ್ಲಿ ಕಡೆಯಿಂದ ಎದುರಿಗೆ ಬಂದ ಕಾರ್ ನಂ: ಕೆಎ-33-ಎ-6516 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಎಮ್.ಟಿಪಲ್ಲಿ-ಕಾಕಲವಾರ ಗ್ರಾಮಗಳ ನಡುವೆ ಕಾಕಲವಾರ ಸಿಮಾಂತರದ ವೀರರಡ್ಡಿ ಇವರ ಹೊಲದ ಹತ್ತಿರ ರೋಡಿನ ಮೆಲೆ ಅಪಘಾತಪಡಿಸಿ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಗಾಯಾಳುಗಳಿಗೆ ಬಾರಿ ರಕ್ತಗಾಯಳಾಗಿದ್ದು ಅಲ್ಲದೇ ಸದರಿ ಅಪಘಾತದಲ್ಲಿ ಆಘ ಗಾಯಗಳಿಂದ ಮೃತ ಶ್ರೀನಿವಾಸರಡ್ಡಿ ಈತನು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಬಗ್ಗೆ ಫಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳೀಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 93/2019 ಕಲಂ 279, 338, 304(ಎ) ಐಪಿಸಿ & ಕಲಂ: 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ 279, 337, 338 ಐ.ಪಿಸಿ:- ದಿನಾಂಕ 24-05-2019 ರಂದು 11 ಎ,ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟಾಗ ಅಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ಪೈಕಿ ಶ್ರೀ ಮಲ್ಲಪ್ಪಾ ತಂದೆ ರಾಚಪ್ಪಾ ಚಿನ್ನಾಕಾರ ವಯಾ:60 ಉ:ಒಕ್ಕಲುತನ ಜಾ: ಬೇಡರ ಕಾಳೇಬೆಳಗುಂದಿ ತಾ:ಜಿ: ಯಾದಗಿರಿ ಇವರ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 24-05-2019 ರಂದು ಲಗ್ನದ ಸಂತೆ ಮಾಡುವ ಸಲುವಾಗಿ 1) ನಾನು ಹಾಗೂ ನಮ್ಮ ಗ್ರಾಮದ 2) ರಾಚಮ್ಮಾ ಗಂಡ ಶಿವಪ್ಪಾ ಚಿನ್ನಾಕಾರ, ಹಾಗೂ ನಮ್ಮೂರಿನವರೇ ಮುಸ್ಲಿಂ ಸಮಾಜದ 3) ಮಾಲನಬೀ ಗಂಡ ಮೌಲಾನಾಸಾಬ ಜಮಾದಾರ 4) ನಜಮಾಬೇಗಂ ಗಂಡ ಹೈದರಲಿ ಜಾಗೀರದಾರ 5)ಅಯ್ಯುಬ್ ತಂದೆ ಮಹ್ಮದ್ ಮೌಲಾನಾ ಜಮಾದಾರ ಎಲ್ಲರೂ ಕೂಡಿ ನಮ್ಮ ಗ್ರಾಮದವನೇ ಆಗ ಬಸು ತಂದೆ ಬನ್ನಪ್ಪಾ ಯಾಧವ ಇತನ ಟಂಟಂ ನಂ:ಕೆ.ಎ-33/4243 ನೆದ್ದರಲ್ಲಿ ನಮ್ಮೂರಿನಿಂದ ಬೆಳಗ್ಗೆ 9 ಗಂಟೆ ಸುಮಾರಿಗೆ ಯಾದಗಿರಿ ಕಡೆಗೆ ಹೋರಟೇವು, ಬಳಿಚಕ್ರ ಗ್ರಾಮಕ್ಕೆ ಬಂದ ನಂತರ ಅಲ್ಲಿ ಯಾದಗಿರಿಗೆ ಬರುವ ಸಲುವಾಗಿ 6) ಲಕ್ಷ್ಮೀ ಗಂಡ ಕಾಶಪ್ಪಾ ಐಕೂರ ಸಾ: ನೀಲಹಳ್ಳಿ 7) ಶರಣಮ್ಮಾ ಗಂಡ ಚನ್ನಪ್ಪಾ ಸುಳ್ಳನವರ ಸಾ: ಬಳಿಚಕ್ರ 8) ನಾಗಮ್ಮಾ ಗಂಡ ಈರಪ್ಪಾ ಸಾ: ದುಪ್ಪಲ್ಲಿ ಎಂಬುವವರು ಕುಳಿತುಕೊಂಡರು. ಟಂಟಂ ಚಾಲಕನು ಬಳಿಚಕ್ರ ಗ್ರಾಮದಲ್ಲಿ ಎಲ್ಲಾ ಪ್ರಯಾಣಿಕರನ್ನು ಕೂಡಿಸಿಕೊಂಡು ತನ್ನ ಟಂಟಂನ್ನು ನಡೆಸಿಕೊಂಡು ಯಾದಗಿರಿ ಕಡೆಗೆ ಹೊರಟನು. ಬಳಿಚಕ್ರ ಗ್ರಾಮ ದಾಟಿದ ಕೂಡಲೇ ಟಂಟಂ ಚಾಲಕನಾದ ಬಸು ಇತನು ತನ್ನ ಟಂಟಂ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಹತ್ತಿದನು. ಆಗ ಟಂಟಂ ಕುಳಿತ ನಾವೇಲ್ಲಾ ಆತನಿಗೆ ಸಾವಕಾಶವಾಗಿ ಓಡಿಸು ನಮಗೆ ಅಷ್ಟೇನು ಅವಸರವಿಲ್ಲಾ ಅಂತಾ ಕೂಗಿ ಹೇಳಿದರೂ ಕೂಡಾ ಟಂಟಂ ಚಾಲಕನು ಹಳಗೇರಾ ಕ್ರಾಸಿನಲ್ಲಿ ಬಂದು ಪೂತರ್ಿ ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಹಳಗೇರಾ ಕ್ರಾಸ ಕಡೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಒಂದು ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಟಂಟಂ ಕೂಡಾ ಪಲ್ಟಿ ಮಾಡಿದನು ಆಗ ಸಮಯ ಬೆಳಗ್ಗೆ 10 ಗಂಟೆಯಾಗಿತ್ತು. ಈ ಘಟನೆಯಲ್ಲಿ 1) ನನಗೆ ಎರಡು ಕಾಲಿನ ಕಪಗಂಡಳಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿತ್ತು ನಮ್ಮ ಗ್ರಾಮದ 2) ರಾಚಮ್ಮಾ ಗಂಡ ಶಿವಪ್ಪಾ ಚಿನ್ನಾಕಾರ ಇವಳಿಗೆ ಬಲಗೈಬೆರಳಿಗೆ ರಕ್ತಗಾಯವಾಗಿತ್ತು. 3) ಮಾಲನಬೀ ಗಂಡ ಮೌಲಾನಾಸಾಬ ಜಮಾದಾರ ಇವಳಿಗೆ ಎಡಗಡೆ ತಲೆಗೆ, ಎಡಕಪಾಳದ ಮೇಲೆ ರಕ್ತಗಾಯ ಮತ್ತು ಎಡಮೊಳಕಾಲಿಗೆ ಭಾರಿ ಗುಪ್ತಗಾಯವಾಗಿತ್ತು 4) ನಜಮಾಬೇಗಂ ಗಂಡ ಹೈದರಲಿ ಜಾಗೀರದಾರ ತಲೆಗೆ ರಕ್ತಗಾಯವಾಗಿತ್ತು 5) ಅಯ್ಯುಬ್ ತಂದೆ ಮಹ್ಮದ್ ಮೌಲಾನಾ ಜಮಾದಾರ ಇತನಿಗೆ ತೆಲೆಗೆ ಗುಪ್ತಗಾಯ, ಬಲಹುಬ್ಬಿಗೆ ತರಚಿದ ಗಾಯ ಹಾಗೂ ಎಡಮೊಳಕಾಲಿಗೆ ಗುಪ್ತಗಾಯವಾಗಿತ್ತು. 6) ಲಕ್ಷ್ಮೀ ಗಂಡ ಕಾಶಪ್ಪಾ ಐಕೂರ ಎಡಗಾಲು ಹಿಡಕಿಗೆ ಎಡತೊಡೆಗೆ, ಎಡಪಕ್ಕೆಗೆ ಗುಪ್ತಗಾಯಗಳಾಗಿದ್ದವು. 7) ಶರಣಮ್ಮಾ ಗಂಡ ಚನ್ನಪ್ಪಾ ಸುಳ್ಳನವರ ಇವಳಿಗೆ ಎದೆಗೆ ಬಾರಿ ಗುಪ್ತಗಾಯವಾಗಿತ್ತು. 8) ನಾಗಮ್ಮಾ ಗಂಡ ಈರಪ್ಪಾ ಇವಳಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗತ್ತು. ಟಂಟಂ ಚಾಲಕನಾದ 9) ಬಸು ಇತನಿಗೆ ತಲೆಗೆ ರಕ್ತಗಾಯ, ಎಡಮೊಳಕಾಲಿಗೆ ರಕ್ತಗಾಯ ಮತ್ತು ಬಲಮೊಳಕಾಲಿಗೆ ಗುಪ್ತಗಾಯವಾಗಿತ್ತು. ಮತ್ತು ಅಪಘಾತವಾದ ಮೋಟಾರ ಸೈಕಲ್ ನಂ:ಕೆ.ಎ-33/ವ್ಹಿ-8435 ನೆದ್ದರ ಸವಾರನಾದ 10) ನಾಗರಾಜ ತಂದೆ ಮಲ್ಲಪ್ಪಾ ಮ್ಯಾಗೇರ ಇತನಿಗೆ ಎಡಮುಂಡಿಗೆ, ಎಡಮುಂಗೈಗೆ ಮತ್ತು ಎಡಮೊಳಕಾಲಿಗೆ ರಕ್ತಗಾಯಗ ಳಾಗಿದ್ದವು. ನಂತರ ಗಾಯಹೊಂದಿದ ನಾವೇಲ್ಲರೂ 108 ಅಂಬುಲೇನ್ಸ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಈ ಬಗ್ಗೆ ಟಂಟಂ ಚಾಲಕನಾದ ಬಸು ತಂದೆ ಬನ್ನಪ್ಪಾ ಯಾಧವ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಪೀರ್ಯಾಧಿಯನ್ನು ಪಡೆದುಕೊಂಡು ಮರಳಿ 12-15 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 85/2019 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 131/2019 ಕಲಂ 32, 34 ಕೆ.ಇ ಯಾಕ್ಟ:- ದಿನಾಂಕ 24/05/2019 ರಂದು 6.30 ಪಿಎಂ ಕ್ಕೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ನಾಗರಾಜ ಜಿ. ಪಿಐ ಶಹಾಪೂರ ಪೊಲೀಸ್ ಠಾಣೆರವರು ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಒಂದು ವರದಿ ಹಾಜರುಪಡಿಸಿದ್ದು ವರದಿಯ ಸಾರಾಂಶವೆನೆಂದರೆ, ಇಂದು 4.00 ಪಿಎಂ ಕ್ಕೆ ಗಂಟೆಗೆ ಫಿಯರ್ಾದಿಯವರು ಠಾಣೆಯಲ್ಲಿದ್ದಾಗ, ಬೇವಿನಳ್ಳಿ ಕ್ರಾಸಿನ ಬೀಟ್ ಸಿಬ್ಬಂದಿಯಾದ ಪಿಸಿ 150 ಇವರು ಶಹಾಪೂರ-ಯಾದಗಿರಿ ಮುಖ್ಯ ರಸ್ತೆಯ ಪಕ್ಕದಲ್ಲಿ ಮುರಾಜರ್ಿ ದೇಸಾಯಿ ವಸತಿ ಶಾಲೆಯ ಹತ್ತಿರ ಇರುವ ಬೇವಿನಳ್ಳಿ ಕ್ರಾಸಿನಲ್ಲಿ ಬಾಬು ತಂದೆ ಚಂದ್ರಾಮ ರಾಠೋಡ ವ|| 40ವರ್ಷ ಜಾ|| ಲಂಬಾಣಿ ಉ|| ಒಕ್ಕಲುತನ ಮತ್ತು ಹೊಟೇಲ್ ವ್ಯಾಪಾರ ಸಾ|| ದೋರನಳ್ಳಿ ತಾಂಡಾ ತಾ|| ಶಹಾಪೂರ ಈತನು ತನ್ನ ಚಹಾ ಹೋಟೆಲ್ದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಫಿಯರ್ಾದಿಯವರು, ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ 4.50 ಪಿಎಂ ಕ್ಕೆ ದಾಳಿ ಮಾಡಿದಾಗ ಸದರಿ ಆರೋಪಿತನು ಓಡಿ ಹೋಗಿದ್ದು, ಆರೋಪಿತನು ಒಂದು ರಟ್ಟಿನ ಡಬ್ಬಿಯಲ್ಲಿ 90 ಎಮ್.ಎಲ್.ನ 36 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಸರಾಯಿ ಪೌಚಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಸರಾಯಿ ಮಾರುತ್ತಿದ್ದ ಬಗ್ಗೆ ಖಾತ್ರಿಯಾಗಿದ್ದರಿಂದ 5.00 ಪಿಎಂ ದಿಂದ 6.00 ಪಿಎಂ ದವರೆಗೆ ಜಪ್ತಿ ಪಂಚನಾಮೆ ಮಾಡಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತ ವರದಿ ನೀಡಿ ಆದೇಶಿಸಿದ್ದರಿಂದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 131/2019 ಕಲಂ 32,34 ಕೆ.ಇ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 14/2019 ಕಲಂ: 498(ಎ) 323 504 506 ಸಂಗಡ 34 ಐ.ಪಿ.ಸಿ ಮತ್ತು 3 ಮತ್ತು 4 ಡಿ.ಪಿ.ಅಕ್ಟ:- ದಿನಾಂಕ: 23/05/2019 ರಂದು ರಾಯಚೂರ ರಿಮ್ಸ ಆಸ್ಪತ್ರೆಯಿಂದ ಎಮ್.ಎಲ್ ಸಿ ಮಾಹಿತಿ ಬಂದ ಮೇರೆಗೆ ನಾನು ಎ.ಎಸ್.ಐ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಗಾಯಾಳು ಶ್ರೀಮತಿ ಶಾಲಿನಿ ಗಂಡ ರಮೇಶ ವ-21 ಉ-ಮನೆಕೆಲಸ ಸಾ-ಹೆಗಡೆ ನಗರ ಯಲಹಂಕಾ ಬೆಂಗಳೂರು ಹಾ.ವ ಸಕ್ಕಿನಗರ ಯಾದಗಿರಿ. ಈಕೆಯು ಹೇಳಿಕೆ ಕೊಟ್ಟಿದ್ದು ಸಾರಂಶವೆನಂದರೆ 5 ತಿಂಗಳ ಹಿಂದೆ ಮದುವೆಯಾಗಿದ್ದು ನನ್ನ ಗಂಡ ಮತ್ತು ಅತ್ತೆ , ಮೈದುನ ಯಾದಗಿರಿಗೆ ಬಂದು ಮನೆ ಬಾಡಿಗೆ ಮಾಡಿಕೊಂಡು ಇದ್ದು ನನ್ನ ಅತ್ತೆ ಮತ್ತು ನನ್ನ ಗಂಡ ವರದಕ್ಷಣೆ ತರುವಂತೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿದ್ದು ಕಿರುಕುಳ ಕೊಟ್ಟಿದ್ದರಿಂದ ಬೇಸತ್ತು ದಿನಾಂಕ 23/05/2019 ರಂದು ಬೆಳಗ್ಗೆ 10 ಗಂಟೆಗೆ ನಾನು ಕಸ ಗುಡಿಸು ಸಂದರ್ಬದಲ್ಲಿ ನನ್ನ ಅತ್ತೆ ಚುಚ್ಚಿ ಚುಚ್ಚಿ ಮಾತನಾಡಿದ್ದರಿಂದ ಮನೆಯಲ್ಲಿ ಇದ್ದ ಸೀಮೆಯ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಕಡ್ಡಿ ಕೊರಿದು ಬೆಂಕಿ ಹಚ್ಚಿಕೊಂಡಿದ್ದು ಇದರಿಂದ ನನ್ನ ಮೈಮೇಲೆ ಭಾರಿ ಸುಟ್ಟ ಗಂಭಿರ ಸ್ವರೂಪದ ಗಾಯಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತೇನೆ. ಕಾರಣ ಈ ಘಟನೆಗೆ ಕಾರಣರಾದ ಗಂಡ ಮತ್ತು ಅತ್ತೆಯ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಮೇಲೆ ಠಾಣೆ ಗುನ್ನೆ ನಂ 14/2019 ಕಲಂ: 498(ಎ) 323 504 506 ಸಂಗಡ 34 ಐ.ಪಿ.ಸಿ ಮತ್ತು 3 ಮತ್ತು 4 ಡಿ.ಪಿ.ಅಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using