ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-05-2019

By blogger on ಬುಧವಾರ, ಮೇ 22, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-05-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 89/2019 ಕಲಂ: 283, 337, 338 ಐಪಿಸಿ:-ದಿನಾಂಕ 21.05.2019 ರಂದು ರಾತ್ರಿ 10:15 ಗಂಟೆಯ ಸುಮಾರಿಗೆ ಸಿಂದಗಿ-ಕೊಡಂಗಲ್ ಮುಖ್ಯ ರಸ್ತೆಯ ಮೇಲೆ ಗುರುಮಠಕಲ್ ಬಸ್ ಡಿಪೋ-ಬೂದೂರ ಗೇಟ್ಗಳ ನಡುವೆ ರೋಡಿನ ಮೇಲೆ ರಸ್ತೆಯ ತಿರುವಿನಲ್ಲಿ ಲಾರಿ ನಂ: ಎಮ್.ಹೆಚ್.-25-ಬಿ-7107 ನೇದ್ದರ ಚಾಲಕ ತನ್ನ ಲಾರಿಯನ್ನು ರಸ್ತೆಯ ಮೇಲೆ ಯಾವುದೇ ಇಂಡಿಕೆಟರ್ ಹಾಕದೇ ಮುಂಜಾಗೃತ ವಹಿಸದೇ ರಸ್ತೆಯ ಮೇಲೆ ತನ್ನ ವಾಹನವನ್ನು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಿ ರಸ್ತೆಯ ಮೇಲೆ ಹೋಗಿ-ಬರುವ ಸಾರ್ವಜನಿಕ ಸವಾರರಿಗೆ ಸಂಚಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಲಾರಿಯನ್ನು ನಿಲ್ಲಿಸದ್ದರಿಂದ ಬಸ್ ನಂ: ಟಿ.ಎಸ್.-34-ಜೆಡ್-0020 ಚಾಲಕ ತಕ್ಕಲಲ್ಲಿ ವಾಹನ ಕಾಣಿಸದೇ ಲಾರಿಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದು ಸದರಿ ಬಸ್ನಲ್ಲಿದ್ದ ಚಾಲಕ, ನಿವರ್ಾಹಕ ಹಾಗೂ ಪ್ರಯಾಣಿಕೆರಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯಗಳು ಮತ್ತು ಗುಪ್ತಗಾಯಗಳ ಆಗಿದ್ದ ಬಗ್ಗೆ ಫಿರ್ಯಾದಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 89/2019 ಕಲಂ: 283, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 90/2019 ಕಲಂ: 323, 324, 354, 504, 506 ಸಂ. 34 ಐಪಿಸಿ:-ದಿನಾಂಕ 16.05.2019 ರಂದು ಬೆಳಿಗ್ಗೆ 6:00 ಗಂಟೆಗೆ ಫಿರ್ಯಾದಿದಾರರು ಮನೆಯಲ್ಲಿದ್ದಾಗ ಆರೋಪಿತರೆಲ್ಲಾರು ಸೇರಿ ತಮ್ಮ ಕೈಯಲ್ಲಿದ್ದ ಕಲ್ಲು ಮತ್ತು ಮಚ್ಚು ಹಿಡಿದುಕೊಂಡು ಬಂದು ಹೊಲ ಡೋಣ ವಿಚಾರದಲ್ಲಿ ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಫಿರ್ಯಾದಿಯ ಕುಪ್ಪಸ ಹಿಡಿದು ಜಗ್ಗಿ ಹರಿದು ತಲೆಯ ಕೂದಲು ಹಿಡಿದು ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 90/2019 ಕಲಂ: 323, 324, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 91/2019 ಕಲಂ: 147, 148, 323, 324, 325, 341, 504, 506 ಸಂಗಡ 149:- ದಿನಾಂಕ : 22.05.2019 ರಂದು ಸಂಜೆ 4:00 ಗಂಟೆಗೆ ಶ್ರೀ ಶಿವರಾಮರಡ್ಡಿ ಪಿಸಿ-223 ಗುರುಮಠಕಲ್ ಪೊಲೀಸ್ ಠಾಣೆಗೆ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ : 23/2019 ದಿನಾಂಕ 14.05.2019 ನೇದ್ದನ್ನು ತೆಗೆದುಕೊಂಡು ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಸದರಿ ಖಾಸಗಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 91/2019 ಕಲಂ: 147, 148, 323, 324, 325, 341, 504, 506 ಸಂಗಡ 149 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 119/2019 ಕಲಂ  87 ಕೆ.ಪಿ.ಕಾಯ್ದೆ  :- ದಿನಾಂಕ:21-05-2019 ರಂದು 5-30 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನಿಂದಿಗೆ 8  ಜನ ಆರೊಪಿತರೊಂದಿಗೆ ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:21-05-2019 ರಂದು 3 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ದಿವಳಗುಡ್ಡದ ಬೆಂಗಳೂರು ಆಸ್ಪತ್ರೆಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕಿಟ್ಟು ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿದ್ದಾರೆ  ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ವಿನೋದ ತಂದೆ ನಿಂಗಪ್ಪ ಹೊನ್ನಕೇರಿ ವಯಾ:25 ವರ್ಷ ಉ:ಕೂಲಿ ಜಾ:ಕುರುಬ ಸಾ:ದಿವಳಗುಡ್ಡ   2) ಶ್ರಿ ಬಸವರಾಜ ತಂದೆ ನಿಂಗಪ್ಪ ಕೊಳ್ಳಿ ವಯಾ:23 ವರ್ಷ ಉ:ಗಾರೆ ಕೆಲಸ ಜಾ:ಕುರುಬ ಸಾ:ದಿವಳಗುಡ್ಡ  ಇವರನ್ನು 3-15 ಪಿ.ಎಂ.ಕ್ಕೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರೊಂದಿಗೆ ನಾನು ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2)ಸುಭಾಸ ಸಿಪಿಸಿ-174 3) ಜಗದೀಶ ಸಿಪಿಸಿ-335 ಹಾಗೂ 4) ಮಂಜುನಾಥ ಸಿಪಿಸಿ-271 5)ಬಸಪ್ಪ  ಸಿಪಿಸಿ-393 6) ದೇವಿಂದ್ರಪ್ಪ ಸಿಪಿಸಿ-184 7) ವಿರೇಶ ಸಿಪಿಸಿ-374 ಎಲ್ಲರೂ ಕೂಡಿ ಖಾಸಗಿ  ವಾಹನದಲ್ಲಿ ಠಾಣೆಯಿಂದ  ಹೊರಟು ದಿವಳಗುಡ್ಡದ ಬೆಂಗಳೂರು ಆಸ್ಪತ್ರೆಯ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡು ಬೆಂಗಳೂರು ಆಸ್ಪತ್ರೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಆಸ್ಪತ್ರೆಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕಿಟ್ಟು ಇಸ್ಪೇಟ ಎಲೆಗಳ ಸಹಾಯಂದಿಂದ ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ 3-45 ಪಿ.ಎಮ್.ಕ್ಕೆ ಒಮ್ಮೆಲೆ ಅವರ ಮೇಲೆ ದಾಳಿಮಾಡಲಾಗಿ ಒಟ್ಟು 8 ಜನರು ಸಿಕ್ಕಿದ್ದು ಅವರ  ಹೆಸರು ವಿಳಾಸ ವಿಚಾರಿಸಿ ಅಂಗಶೋಧನೆ ಮಾಡಲಾಗಿ 1) ಶರಣಬಸಪ್ಪ ತಂದೆ ಶಿವಪ್ಪ ಕವಡಿಮಟ್ಟಿ ವಯಾ:50 ವರ್ಷ ಜಾ:ಮಾದಿಗ ಉ:ಒಕ್ಕಲುತನ ಸಾ:ದಿವಳಗುಡ್ಡ ಈತನ ಹತ್ತಿರ 400/-ರೂ ನಗದು ಸಿಕ್ಕಿದ್ದು 2) ನಿಂಗಣ್ಣ ತಂದೆ ನಿಂಗಣ್ಣ ಹೊಸಮನಿ ವಯಾ:44 ವರ್ಷ ಉ:ಒಕ್ಕಲುತನ ಜಾ:ಬೆಡರು ಸಾ:ದಿವಳಗುಡ್ಡ ಈತನ ಹತ್ತಿರ 500/- ರೂ ನಗದು ಸಿಕ್ಕಿದ್ದು 3) ಹಣಮಂತ ತಂದೆ ಮರೆಪ್ಪ ತಂದೆ ಕರಿಗೇರಾ ವಯಾ:31 ವರ್ಷ ಜಾ:ಕುರುಬರ ಉ:ಕೂಲಿ ಸಾ:ದಿವಳಗುಡ್ಡ  ಈತನ ಹತ್ತಿರ 1200/- ನಗದು ಹಣ ಸಿಕ್ಕಿದ್ದು 4) ಹಯ್ಯಳಪ್ಪ ತಂದೆ ಶಿವಪ್ಪ ಜಂಬಲದಿನ್ನಿ ವಯಾ:30 ವರ್ಷ ಉ:ಅಂಗಡಿ ವ್ಯಾಪಾರ ಜಾ:ಕುರುಬರ ಸಾ:ದಿವಳಗುಡ್ಡ  ಈತನ ಹತ್ತಿರ 860/- ನಗದು ಸಿಕ್ಕಿದ್ದು 5) ಬಸವರಾಜ ತಂದೆ ಸಕ್ರೆಪ್ಪ ಬಾಗ್ಲಿ ವಯಾ:39 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ದಿವಳಗುಡ್ಡ ಈತನ ಹತ್ತಿರ 620/- ರೂ ನಗದು ಹಣ ಸಿಕ್ಕಿದ್ದು 6) ಶಿವಪ್ಪ ತಂದೆ ಹಣಮಂತ ಮೇದಾರಗಾಳ ವಯಾ:33 ವರ್ಷ ಉ:ಕೂಲಿ ಜಾ:ಬೇಡರ ಸಾ:ದಿವಳಗುಡ್ಡ  ಈತನ ಹತ್ತಿರ 920/-ರೂ ಸಿಕ್ಕಿದ್ದು 7) ಹಣಮಂತ ತಂದೆ ರಂಗಪ್ಪ ಗುಡಸುಲ್ ವಯಾ;29 ವರ್ಷ ಜಾ;ಬೇಡರ ಉ;ಗಾರೆ ಕೆಲಸ ಸಾ;ದಿವಳಿಗುಡ್ಡ ಈತನ ಹತ್ತಿರ ನಗದು ಹಣ 820/- ರೂಗಳು ಸಿಕ್ಕಿದ್ದು 8) ಮಲ್ಲೇಶಿ ತಂದ ಹೊನ್ನಕೇರಪ್ಪ ಹೊನ್ನಕೇರಿ ವಯಾ:45 ವರ್ಷ ಜಾ:ಕುರುಬ ಉ: ಕೂಲಿ ಸಾ: ದಿವಳಗುಡ್ಡ ಈತನ ಹತ್ತಿರ ನಗದು ಹಣ 680/- ರೂ ನಗದು ಹಣ ಸಿಕ್ಕಿದ್ದು. ಮತ್ತು ಕಣದಲ್ಲಿದ್ದ 800/- ರೂಗಳು ಹಾಗೂ 52 ಇಸ್ಪೇಟ ಎಲೆಗಳು ಅ.ಕಿ 00=00 ಹೀಗೆ ಒಟ್ಟು ನಗದು ಹಣ 6800=00 ರೂಗಳು ದೋರೆತವು ಸದರಿಯವರೆಲ್ಲರ ಹತ್ತಿರ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 6800=00 ರೂಪಾಯಿಗಳನ್ನು, ಮತ್ತು 52 ಇಸ್ಪೇಟ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 3-45 ಪಿ.ಎಮ್.ದಿಂದ 4-45 ಪಿ.ಎಮ್.ದ ವರೆಗೆ ಮಾಡಿ 8 ಜನ ಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ ಬಂದು ತಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿ ಆರೋಪಿತರ ವಿರುದ್ದ ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 120/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್. ಡಿ.ಆರ್.ಆಕ್ಟ 1957:- ದಿನಾಂಕ:22-05-2019 ರಂದು ಬೆಳಿಗ್ಗೆ 10 ಎ.ಎಮ್ ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಮಾನ್ಯ ಪಿ.ಐ.ಸಾಹೇಬರ ಒಂದು ಮರಳು ತುಂಬಿದ ಟ್ಯಾಕ್ಟರದೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:22-05-2019 ರಂದು ಬೆಳಿಗ್ಗೆ 06 ಎ.ಎಮ್ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಸೋಮಯ್ಯಾ ಸಿಪಿಸಿ- 235, 2) ಸುಭಾಸ್ ಸಿಪಿಸಿ-174 ಹಾಗೂ ಜೀಪ ಚಾಲಕನಾದ 3) ಮಾಹಾಂತೇಶ ಎಪಿಸಿ-48 ಎಲ್ಲರೂ ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಶೇಳ್ಳಗಿ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ತಿಂಥಣಿ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಮರೆಪ್ಪ ತಂದೆ ಪರಮಪ್ಪ ತಳವಾರ ವಯಾ:42 ವರ್ಷ ಉ:ಗ್ರಾಮ ಸಹಾಯಕ ಜಾತಿ:ಹರಿಜನ ಸಾ:ನಾಗರಾಳ  2) ಶ್ರೀ ಬಂದಗಿಸಾಬ ತಂದೆ ಶರಿಫಸಾಬ ಪಿಂಜಾರ ವಯಾ:35 ವರ್ಷ ಉ:ಗ್ರಾಮ ಸಹಾಯಕ ಜಾತಿ:ಮುಸ್ಲಿಂ ಸಾ:ಕೋನಾಳ ಇವರನ್ನು ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಸಿಬ್ಬಂದಿಯವರೆಲ್ಲರೂ ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33, ಜಿ-0238 ನೇದ್ದರ ವಾಹನದಲ್ಲಿ 06-30 ಎ.ಎಮ್ಕ್ಕೆ ಠಾಣೆಯಿಂದ ಹೊರಟು 07:30 ಎ.ಎಮ್ ಕ್ಕೆ ತಿಂಥಣಿ ಬ್ರಿಡ್ಜ್ದ ಶಾಂತಪೂರ ಕ್ರಾಸ ಹತ್ತಿರ ಮುಖ್ಯ ರಸ್ತೆಯ ರಸ್ತೆಯ ಪಕ್ಕದಲ್ಲಿ ಜೀಪ ನಿಲ್ಲಿಸಿ ಕೆಳಗೆ ಇಳಿದು ನಿಂತುಕೊಂಡಾಗ 07:45 ಎ.ಎಮ್ ಕ್ಕೆ ಅಳ್ಳಳ್ಳಿ ಕಡೆಯಿಂದ  ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುವುದನ್ನು ಕಂಡು ನಾವು ಜೀಪನಿಂದ ಕೆಳಗೆ ಇಳಿದು ಟ್ಯಾಕ್ಟರ ಚಾಲನಿಗೆ ಟ್ಯಾಕ್ಟರ ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಸ್ವಲ್ಪ ದೂರದಲ್ಲಿಯೆ ನಿಲ್ಲಿಸಿ ಕೆಳಗೆ ಇಳಿದು ಓಡಿಹೋದನು. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೀಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-36, ಟಿಸಿ-9920 ಇದ್ದು ಟ್ರಾಲಿ ನಂಬರ ಕೆಎ-36, ಟಿಸಿ-9921 ನೇದ್ದರಲ್ಲಿ  ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅಂದಾಜು ಕಿಮ್ಮತ್ತು 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಅಕ್ರಮ ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಮರಳು ತುಂಬಿದ ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 07-45 ಎ.ಎಮ್ ದಿಂದ 08-45 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಸದರಿ ಓಡಿ ಹೋದ ಟ್ಯಾಕ್ಟರ ಚಾಲಕನ ಹೆಸರು ಯಲ್ಲಪ್ಪ ತಂದೆ ಯಂಕಪ್ಪ ದೊರೆ ವಯಾ:21 ವರ್ಷ ಉ:ಡ್ರೈವರ ಜಾತಿ:ಬೇಡರ ಸಾ:ಬುಂಕಲದೊಡ್ಡಿ ತಾ:ದೇವದುಗರ್ಾ ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟ್ಯಾಕ್ಟರದಲ್ಲ್ಲಿ ಒಟ್ಟು 1600=00 ರೂ ಕಿಮ್ಮತ್ತಿನ  ಅಂದಾಜು 2 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಟ್ಯಾಕ್ಟರನ್ನು  ನಿಮ್ಮ ವಶಕ್ಕೆ ನೀಡಿರುತ್ತೇನೆ. ಅಂತಾ ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 66/2019 ಕಲಂ 279, 338 ಐ.ಪಿ.ಸಿ:- ದಿನಾಂಕ:22/05/2019 ರಂದು 9 ಎ.ಎಮ್ ಸುಮಾರಿಗೆ ಫಿಯರ್ಾದಿಯ ಮಗನಾದ ಶರಣಪ್ಪಗೌಡ ಈತನು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ತನ್ನ ಬಜಾಜ ಪಲ್ಸರ್ ಮೋಟರ್ ಸೈಕಲ್ ನಂ:ಕೆಎ-33, ಎಕ್ಸ್-1266 ನೇದ್ದನ್ನು ನಡೆಸಿಕೊಂಡು ತನ್ನ ಊರಾದ ಜಮಖಂಡಿಯಿಂದ ಯಾದಗಿರಿಯ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಜಮಖಂಡಿ ಕಚ್ಚಾ ರಸ್ತೆ ಕ್ರಾಸ್ ಹತ್ತಿರ ಮುಖ್ಯ ರಸ್ತೆ ದಾಟುತ್ತಿರುವಾಗ ಭೀ.ಗುಡಿ ಕಡೆಯಿಂದ ಆರೋಪಿತನು ತನ್ನ ಕಾರ್ ನಂ:ಕೆಎ-05, ಎಮ್.ವೈ-4210 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದರಿಂದ ಶರಣಪ್ಪಗೌಡ ಈತನ ತಲೆಗೆ ಭಾರಿ ಒಳಪೆಟ್ಟಾಗಿದ್ದು, ಬಲಗಾಲ ತೊಡೆಗೆ, ಬಲಗಾಲ ಮೊಳಕಾಲಿಗೆ ಹಾಗೂ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯಗಳಾಗಿದ್ದು ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 53/2019 ಕಲಂ. 498(?),323,504,506,ಸಂಗಡ 149 ಐಪಿಸಿ:- ದಿನಾಂಕ: 22-05-2019 ರಂದು ಸಾಯಂಕಾಲ 04-00 ಗಂಟೆಗೆ ಪಿಯಾಧರ್ಿ ಮಾಹಾದೇವಮ್ಮ ಗಂಡ  ಮಲ್ಲಿಕಾಜರ್ುನ ಶೆಖಸಿಂದಿ ವ|| 25 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆಕೆಲಸ ಸಾ|| ಬಾಲಛೇಡ ಹಾ|| ವ|| ಎಸ್. ಹೊಸಳ್ಳಿ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನ ಮನೆಯವರು ನಿನು ಸರಿಯಾಗಿಲ್ಲ ನಿನು ನಮ್ಮ ಮನೆಗೆ ಒಪ್ಪುವ ಹೆಣ್ಣು ಅಲ್ಲ ಅಂತಾ ದೈಹಿಕ ಮತ್ತು ಮಾನಸಿಕ ಕೀರುಕುಳ ನೀಡಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಪಿಯಾಧರ್ಿ ಸಾರಂಶ ಇರುತ್ತದ.ೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 54/2019 ಕಲಂ, 279,336 ಐಪಿಸಿ ಮತ್ತು 192 ಐಎಮ್ ವಿ ಕಾಯ್ದೆ:- ದಿನಾಂಕ: 22-05-2019 ರಂದು ಸಾಯಂಕಾಲ 05-00 ಗಂಟೆಗೆ ವರದಿಯನ್ನು ತಂದು ಹಾಜರುಪಡಿಸಿದ ಸಾರಂಶವೆನೆಂದರೆ  ಇಂದು  ಕರಿಬೆಟ್ಟ ಕ್ರಾಸ ಹತ್ತಿರ ಸಾಯಕಾಲ 04-00 ಗಂಟೆಗೆ ಪೆಟ್ರೊಲಿಂಗ ಕರ್ತವ್ಯದಲಿದ್ದಾಗ ಬುಲೋರ ಪಿಕಪ್  ನೋಂದಣಿ ಸಂಖ್ಯೆ ಕೆಎ 36 ಬಿ 2287  ನೆದ್ದರಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಸರಕು ಸಾಗಾಣಿಕೆ ಮಾಡುವ ವಾಹನದಲ್ಲಿ ಪ್ರಯಾಣೀಕರನ್ನು ಅಪಾಯಕಾರಿ ರೀತಿಯಲ್ಲಿ ಕುಡಿಸಿಕೊಂಡು ಸಾಗಿಸಿ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘನೆ ಮಾಡಿರುತ್ತಾನೆ ಅಂತಾ ಪಿಯಾಧಿ ಸಾರಂಶ ಇರುತ್ತದೆ

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.:- 84/2019  ಕಲಂ 323, 448,  354 504, 506 ಸಂಗಡ 34 ಐ.ಪಿಸಿ:- ದಿನಾಂಕ 22-05-2019 ರಂದು 6-50 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು  ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಸಾಬಮ್ಮಾ ಗಂಡ ಮಲ್ಲಪ್ಪಾ ಕನ್ನಡಿಯೋರ ವಯಾ:30 ಉ: ಕೂಲಿ ಜಾ: ಮಾದಿಗ  ಸಾ:ಹತ್ತಿಕುಣಿ ತಾ:ಜಿ: ಯಾದಗಿರಿ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದೆನೆಂದರೆ ನನ್ನ ತವರು ಮನೆಯು ಶಹಾಪೂರ ತಾಲೂಕಿನ ಗುರಸುಣಗಿ ಗ್ರಾಮವಿದ್ದು, ಈಗ ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು ನನಗೆ ಎರಡು ಮಕ್ಕಳಿರುತ್ತವೆ. ಮೊದಲು ನಮ್ಮ ಮನೆಯಲ್ಲಿ ನಾನು ನನ್ನ ಗಂಡ ಹಾಗೂ ನನ್ನ ಮಾವ ರಾಜಪ್ಪಾ, ಅತ್ತೆಯಾದ ತಾಯಮ್ಮಾ ಮೈದುನನಾದ ಶರಣಪ್ಪಾ ಆತನ ಹೆಂಡತಿಯಾದ ದ್ಯಾವಮ್ಮಾ, ಎಲ್ಲರೂ ಒಟ್ಟಿಗೆ ಇದ್ದೇವು. ತದ ನಂತರ ನನ್ನ ಗಂಡನಿಗೂ ಹಾಗೂ ಅವರಿಗೂ ಮನೆಯಲ್ಲಿ ಕಿರಿಕಿರಿಯಾದ ಕಾರಣ ಅವರಿಂದ ಈಗ ಸುಮಾರು ವರ್ಷಗಳ ಹಿಂದೆ ನಾವು ಬೇರೆಯಾಗಿ ಅಲ್ಲಿಯೇ ಪಕ್ಕದ ಮನೆಯಲ್ಲಿಯೇ ವಾಸವಾಗಿರುತ್ತವೆ. ಹತ್ತಿಕುಣಿ ಗ್ರಾಮದಲ್ಲಿ ನಮಗೆ ಸಂಸಾರ ಸಾಗಿಸಲು ತೊಂದರೆಯಾದ ಕಾರಣ ನಾವು ಈ ಮೊದಲು ಬೆಂಗಳೂರಿಗೆ ದುಡಿದು ತಿನ್ನಲಿಕ್ಕೆ ಹೋಗಿದ್ದು, ಈಗ ಕೆಲವು ದಿವಸಗಳ ಹಿಂದೆ ನಮ್ಮ ಮಗನಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ನಾವು ಬೆಂಗಳೂರಿನಿಂದ ನಮ್ಮೂರಿಗೆ ಬಂದಿದ್ದೆವು. ನಮ್ಮ ಮಗನಿಗೆ ಆರೋಗ್ಯ ಸುಧಾರಿಸಿದ ಕಾರಣ ನಾವು ಮತ್ತೆ ಬೆಂಗಳೂರಿಗೆ ಹೋಗಬೇಕೆಂದು ನಾನು ನನ್ನ ಗಂಡ ಮಾತಾಡಿದಾಗ ನನ್ನ ಗಂಡನು ಬೆಂಗಳೂರಿಗೆ ಹೋಗಿ ಕೆಲಸ ಮತ್ತು ಇರಲು ಜ್ಯಾಗ ನೋಡಿಕೊಂಡು ಬರುವುದಾಗಿ ಹೇಳಿ ನಿನ್ನೆ ಬೆಂಗಳೂರಿಗೆ ಹೋಗಿರುತ್ತಾನೆ.ನಿನ್ನೆ ದಿನಾಂಕ 21-05-2019 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿ ಊಟ ಮಾಡಿ ಬೇಸಿಗೆ ಇದ್ದ ಪ್ರಯುಕ್ತ ಮನೆಯ ಬಾಗಿಲು ಖುಲ್ಲಾ ಇಟ್ಟು ಮಲಗಿಕೊಂಡೆನು. ಮಧ್ಯ ರಾತ್ರಿ ಅಂದರೆ ಇಂದು ದಿನಾಂಕ 22-05-2019 ರಂದು ರಾತ್ರಿ 1 ಗಂಟೆ ಸುಮಾರಿಗೆ ನನ್ನ ಮೈದುನನಾದ ಶರಣಪ್ಪಾ ತಂದೆ ರಾಜಪ್ಪಾ ಇತನು ರಾತ್ರಿ ಸದ್ದಿಲ್ಲದೇ ನಮ್ಮ ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ನನಗೆ ಕೈಹಿಡಿದು ನನ್ನ ಪಕ್ಕದಲ್ಲಿ ಕುಳಿತುಕೊಂಡಾಗ ನನಗೆ ಎಚ್ಚರವಾಗಿ ಎದ್ದು ಇಲ್ಲಿಗೆ ಬಂದಿದ್ದಿ ಅಂತಾ ಕೇಳುವಷ್ಟರಲ್ಲಿ ಅವನು ನನ್ನ ಸೀರೆ ಹಿಡಿದು ಜಗ್ಗಾಡತೊಡಗಿದನು. ನಾನು ಅವನಿಂದ ಕೊಸರಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ನನಗೆ ಸುಮ್ಮನೇ ನನ್ನ ಜೋತೆ ಮಲಗಿಕೊಂಡರೇ ಸರಿ ಇಲ್ಲವಾದರೇ ನಿನ್ನ ಕಥೇ ಇಲ್ಲಿಯೇ ಮುಗಿಸಿ ಬಿಡುತ್ತೆನೆ ಅಂತಾ ಕೈಮುಷ್ಟಿ ಮಾಡಿ ನನ್ನ ಎಡಗಣ್ಣಿಗೆ ಮತ್ತು ತೆಲೆಗೆ ಹೊಡೆದನು. ಆಗ ಚೀರಾಡ ತೊಡಗಿದಾಗ ನಮ್ಮ ಮಾವ ರಾಜಪ್ಪಾ ಅತ್ತೆಯಾದ ತಾಯಮ್ಮಾ ನನ್ನ ನೆಗೆಣ್ಣಿಯಾದ ದ್ಯಾವಮ್ಮಾ ಎಲ್ಲರು ಬರುವಷ್ಟರಲ್ಲಿ ಶರಣಪ್ಪನು ಅಲ್ಲಿಂದ ಓಡಿ ಹೋದನು, ಅವರು ಬಂದು ನನಗೆ ಏನಾಯಿತೆಂದು ಕೇಳಿದಾಗ ನಾನು ನಡೆದ ಕಥೆಯನ್ನೆಲ್ಲಾ ಹೇಳಿದೇನು. ಆಗ ಆ ಮೂವರು ಒಮ್ಮೇಲೆ ಭೋಸಡಿ ನಮ್ಮ ಮಗನ ಮೇಲೆ ವಿನಾಕಾರಣ ಅಪವಾದ ಕೊಡುತ್ತಿ ಅಂತಾ ರಂಡಿ ಅಂತಾ ಅಂದವರೇ ನನಗೆ ಕೈಯಿಂದ ಕಪಾಳಕ್ಕೆ ಹೊಟ್ಟೆಗೆ ಹೊಡೆದರು. ಮತ್ತು ಕಿವಿ ಹಿಡಿದು ಜಗ್ಗಾಡಿದರು. ಮತ್ತು ಸುಮ್ಮನೇ ನಮ್ಮ ಮನೆಯವರ ಮೇಲೆ ಅಪವಾಧ ಮಾಡಿದರೇ ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಮತ್ತೆ ಕೈಯಿಂದ ಹೊಡೆಯುತ್ತಿದ್ದಾಗ ಆಗ ನಾನು ಚೀರಾಡುವುದು ಮಾಡುತ್ತಿದ್ದಾಗ ಆಗ ಮನೆಯ ಪಕ್ಕದ ಮನೆಯವರಾದ ಮಲ್ಲಮ್ಮಾ ಹಳಗೇರಾ ಹಾಗೂ ಮಲ್ಲಪ್ಪಾ ಕೊಳ್ಳೆನವರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡು ಅವರನ್ನು ಸಮಾಧಾನ ಮಾಡಿ ಅಲ್ಲಿಂದ ಕಳುಹಿಸಿದರು. ಈ ಬಗ್ಗೆ ನಾನು ನಮ್ಮ ಹಿರಿಯರೊಂದಿಗೆ ಹಾಗೂ ನನ್ನಣ್ಣಾ ಧೂಳಪ್ಪಾ ತಂದೆ ಮುತ್ತಪ್ಪಾ ಸಾ: ಗುರುಸುಣಗಿ ಇವರೊಂದಿಗೆ ವಿಚಾರಣೆ ಮಾಡಿ ಉಪಚಾರ ಕುರಿತು ಯಾಧಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ನನಗೆ ಮಾನಬಂಗ ಮಾಡಲು ಪ್ರಯತ್ನಿಸಿ ಹೋಡೆಬಡಿ ಮಾಡಿ ಜೀವದ ಭಯ ಹಾಕಿದ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಣಿಡಿದ ಹೇಳಿಕೆಯನ್ನು ಪಡೆದುಕೊಂಡು 8-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2019 ಕಲಂ 323, 448, 354, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 121/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ: 22-05-2019 ರಂದು 8-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಆನಂದರಾವ್ ಎಸ್.ಎನ್. ಪಿಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು  ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:22-05-2019 ರಂದು 5-45 ಪಿ.ಎಮ್. ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮನೋಹರ ಹೆಚ್.ಸಿ-105 2) ಪರಮೇಶ ಪಿಸಿ-142 3) ಸುಭಾಸ ಸಿಪಿಸಿ-174 4) ಸೋಮಯ್ಯ ಸಿಪಿಸಿ-235  ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪೂರ-ಕೆಂಭಾವಿ ಮುಖ್ಯ ರಸ್ತೆಯ ಕಾನಕೇರಿ ಓಣಿಯ ಮರಗಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ಪ್ರಕಾಶ ತಂದೆ ಮರೆಪ್ಪ ಹಳ್ಳಿಗಿಡ ವಯಾ:28 ವರ್ಷ ಉ:ಪೈನಾನ್ಸ್ ಜಾ:ಬೇಡರ ಸಾ:ಮ್ಯಾಗೇರಿ ಓಣಿ ಸುರಪುರ  2) ಶ್ರೀ ವೆಂಕಟೇಶ ತಂದೆ ರಂಗಣ್ಣ ಕನಕೇರಿ ವಯಾ:41 ವರ್ಷ ಉ:ಹೊಟೇಲ್ ಕೆಲಸ ಜಾ: ಬೇಡರ ಸಾ:ಕಾನಕೇರಿ ಓಣಿ ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 6 ಪಿ.ಎಮ್ ಕ್ಕೆ ಠಾಣೆಯಿಂದ ಸರಕಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಹೊರಟು 6-15 ಪಿ.ಎಮ್ ಕ್ಕೆ ಸುರಪೂರ-ಕೆಂಭಾವಿ ಮುಖ್ಯ ರಸ್ತೆಯ ಕಾನಕೇರಿ ಓಣಿಯ ಮರಗಮ್ಮ ಗುಡಿ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ಮರಗಮ್ಮ ಗುಡಿ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6-30 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಭೀಮಣ್ಣ ತಂದೆ ಮರೆಪ್ಪ ಕಾನಕೇರಿ ವಯಾ:30 ವರ್ಷ ಉ:ಕೂಲಿ ಜಾ:ಬೇಡರ ಸಾ:ಕಾನಕೇರಿ ಓಣಿ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 2770=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6-30 ಪಿ.ಎಮ್ ದಿಂದ 7-30 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಅಂತಾ ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!