ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-05-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 83/2019 ಕಲಂ: 279, 336 ಐಪಿಸಿ ಸಂ 192(ಎ) ಐ.ಎಂ.ವಿ ಕಾಯ್ದೆ:- ದಿನಾಂಕ 21/05/2019 ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀ ವಿಠಲ ಎ.ಎಸ್.ಐ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ, ಜೀಪ ಮತ್ತು ಒಬ್ಬ ಆರೋಪಿ ತಮದು ಹಾಜರ ಪಡಿಸಿದ್ದೆನೆಂದರೆ ನಾನು ವಿಠಲ ಎ.ಎಸ್.ಐ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವರದಿ ಕೊಡುವುದೆನೆಂದರೆ ಇಂದು ದಿನಾಂಕ 21/05/2019 ರಂದು ಮಧ್ಯಾಹ್ನ 2-00 ಗಂಟೆಗೆ ಪೆಟ್ರೊಲಿಂಗ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮಹೇಶ ಸಿಪಿಸ-358, ಶ್ರೀ ಪ್ರಭುಗೌಡ ಸಿಪಿಸಿ-361 ಮತ್ತು ಜೀಪ ಚಾಲಕನಾದ ಶ್ರೀ ಬಾಪುಗೌಡ ಸಿಪಿಸಿ-301 ಎಲ್ಲರೂ ಕೂಡಿಕೊಂಡು ಬಂದಳ್ಳಿ, ಯಡ್ಡಳ್ಳಿ ಮತ್ತು ಹತ್ತಿಕುಣಿ ಗ್ರಾಮದ ಕಡೆಗೆ ಹೋಗಿ ಬರುವಾಗ ಯಾದಗಿರಿ ಕಡೆಯಿಂದ ಒಂದು ಜೀಪ ನಂ ಎಮ್.ಎಚ್-11-ಎಚ್-5087 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುತ್ತಿದ್ದುದನ್ನು ಕಂಡು ಸಿಬ್ಬಂಧಿಯವರ ಸಹಾಯದಿಂದ ಅದನ್ನು ಬಂದಳ್ಳಿ ಗ್ರಾದ ಪಂಚಾಯತ ಹತ್ತಿರ 2-45 ಪಿ.ಎಂ. ಕ್ಕೆ ಹಿಡಿದು, ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನ ಹೆಸರು ತಿಪ್ಪಣ್ಣ ತಂದೆ ಮಲ್ಲಪ್ಪ ಹಡಪದ ಸಾಃ ಹೊನಗೇರಾ ಅಂತಾ ತಿಳಿಸಿದ್ದು, ಅದನ್ನು ನೋಡಲಾಗಿ ಆ ಜೀಪಿನಲ್ಲಿ 12 ಜನ ಪ್ಯಾಸೆಂಜರಗಳನ್ನು ಕೂಡಿಸಿಕೊಂಡು ಪರಮಿಟ್ ಉಲ್ಲಂಘನೆ ಮಾಡಿ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಓಡಿಸಿಕೊಂಡು ಬರುತ್ತಿರುವದು ಕಂಡು ಬಂದಿರುತ್ತದೆ, ಸಿಬ್ಬಂಧಿಯವರ ಸಹಾಯದಿಂದ ಜೀಪನ್ನು ನಮ್ಮ ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ 3-00 ಗಂಟೆಗೆ ತಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ವರದಿ, ಜೀಪ ಮತ್ತು ಚಾಲಕನನ್ನು ಒಪ್ಪಿಸಿದ್ದು ಇರುತ್ತದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 83/2019 ಕಲಂ 279, 336, ಐಪಿಸಿ ಮತ್ತು 192(ಎ) ಐ.ಎಂ.ವಿ ಕಾಯ್ದೆ ಪ್ರಾಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 82/2019 ಕಲಂ: 279, 336 ಐಪಿಸಿ ಸಂ 192(ಎ) ಐ.ಎಂ.ವಿ ಕಾಯ್ದೆ:- ದಿನಾಂಕ 21/05/2019 ರಂದು ಮಧ್ಯಾಹ್ನ 2-15 ಗಂಟೆಗೆ ಸ.ತ.ಫಿ. ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ, ಜೀಪ ಮತ್ತು ಚಾಲಕನನ್ನು ತಂದು ಹಾಜರಪಡಿಸಿದ್ದೆನೆಂದರೆ ನಾನು ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವರದಿ ಕೊಡುವುದೆನೆಂದರೆ ಇಂದು ದಿನಾಂಕ 21/05/2019 ರಂದು ಮಧ್ಯಾಹ್ನ 1-00 ಗಂಟೆಗೆ ಪೆಟ್ರೊಲಿಂಗ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮಹೇಶ ಸಿಪಿಸ-358, ಶ್ರೀ ಪ್ರಭುಗೌಡ ಸಿಪಿಸಿ-361 ಮತ್ತು ಜೀಪ ಚಾಲಕನಾದ ಶ್ರೀ ಬಾಪುಗೌಡ ಸಿಪಿಸಿ-301 ಎಲ್ಲರೂ ಕೂಡಿಕೊಂಡು ಬಂದಳ್ಳಿ, ಯಡ್ಡಳ್ಳಿ ಮೂಲಕ ಹತ್ತಿಕುಣಿ ಗ್ರಾಮದ ಕಡೆಗೆ ಹೋಗುವಾಗ ಹತ್ತಿಕುಣಿ ಗ್ರಾಮದ ಕಡೆಯಿಂದ ಒಂದು ಜೀಪ ನಂ ಕೆ.ಎ-36-ಎಮ್-4567 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುತ್ತಿದ್ದುದನ್ನು ಕಂಡು ಸಿಬ್ಬಂಧಿಯವರ ಸಹಾಯದಿಂದ ಹತ್ತಿಕುಣಿ ಕೆ.ಇ.ಬಿ. ಹತ್ತಿರ ಅದನ್ನು 1-45 ಪಿ.ಎಂ. ಕ್ಕೆ ಹಿಡಿದು, ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನ ಹೆಸರು ಶರಣಪ್ಪ ತಂದೆ ಚಂದ್ರಪ್ಪ ಕುಂಬಾರ ಸಾಃ ಕ್ವಾಟಗೇರಿ ಅಂತಾ ತಿಳಿಸಿದ್ದು, ಅದನ್ನು ನೋಡಲಾಗಿ ಆ ಜೀಪಿನಲ್ಲಿ 15 ಜನ ಪ್ಯಾಸೆಂಜರಗಳನ್ನು ಕೂಡಿಸಿಕೊಂಡು ಪರಮಿಟ್ ಉಲ್ಲಂಘನೆ ಮಾಡಿ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಓಡಿಸಿಕೊಂಡು ಬರುತ್ತಿರುವದು ಕಂಡು ಬಂದಿರುತ್ತದೆ, ಸಿಬ್ಬಂಧಿಯವರ ಸಹಾಯದಿಂದ ಜೀಪನ್ನು ನಮ್ಮ ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ 2-15 ಗಂಟೆಗೆ ತಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ವರದಿ, ಜೀಪ ಮತ್ತು ಚಾಲಕನನ್ನು ಒಪ್ಪಿಸಿದ್ದು ಇರುತ್ತದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 82/2019 ಕಲಂ 279, 336 ಐಪಿಸಿ ಮತ್ತು 192(ಎ) ಐ.ಎಂ.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ 279, 336 ಐಪಿಸಿ ಸಂ. 192(ಎ) ಐ.ಎಂ.ವಿ ಆಕ್ಟ್:- ದಿನಾಂಕ 21.05.2019 ರಂದು ಬೆಳಿಗ್ಗೆ 11.00 ಗಂಟೆ ಪಿರ್ಯಾಧಿಯು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಆರೊಚೀಪಿತನು ತನ್ನ ಜೀಪದಲ್ಲಿ ಮಿತಿಗಿಂತೆ ಹೆಚ್ಚಿನ ಅಂದರೆ ಸುಮಾರು 11 ರಿಂದ 12 ಜನ ಹೆಚ್ಚಿನ ಪ್ರಮಾಣಿಕರನ್ನು ಕುಳ್ಳಿರಿಸಿಕೊಂಡು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ದಲ್ಲದೆ ಪ್ರಯಾಣಿಕರ ಪ್ರಾಣಕ್ಕೆ ಧಕ್ಕೆಯನ್ನುಂಟು ಮಾಡುವ ಅಪಾಯಕರ ರೀತಿಯಲ್ಲಿ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧ ಎಸಗಿರುತ್ತಾನೆ ಸದರಿ ವಾಹನ ಮತ್ತು ಚಾಲಕನೊಂದಿಗೆ ಬೆಳಿಗ್ಗೆ 11.45 ಎ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಠಾಣೆಗೆ ಬಂದು ವರದಿ ನೀಡಿದ ಬಗ್ಗೆ ಅಪರಾಧ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ. 341,323,324,,504,506 ಐಪಿಸಿ :- ದಿನಾಂಕ 21-05-2019 ಬೆಳಿಗ್ಗೆ 9-00 ಗಂಟೆಗೆ ನಾನು ಖಾಸಿಂಅಲಿ ತಂದೆ ಅಬೀಬಹುಸೇನ ವ|| 29 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಮುನಗಲ ತಾ|| ಜಿ|| ಯಾದಗಿರಿ ಇದ್ದು ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದು ಇದರ ಸಾರಾಂಶವೆನೆಂದರೆ ನನ್ನ ತಂದೆಗೆ ನಾನೊಬ್ಬನೇ ಮಗನಿದ್ದು ನಮ್ಮದು ಸಂಗ್ವಾರ ಗ್ರಾಮದ ಸಿಮಾಂತರದಲ್ಲಿ 5 ಎಕರೆ 38 ಗುಂಟೆಯ ಜಮೀನಿದ್ದು ಅದರ ಸ.ನಂ 124/1 ಅಂತಾ ಇರುತ್ತದೆ. ಅದನ್ನು ನಾವು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುತ್ತೆವೆ. ನಾವು ಸಾಗುವಳಿ ಮಾಡುವ ಸಮಯದಲ್ಲಿ ನಮ್ಮೂರಿನ ಶೇಖಶಾವಲಿ ತಂದೆ ಮೌಲಾನಾಸಾಬ ಇತನು ನಾವು ಸಾಗುವಳಿ ಮಾಡುವ ಸಮಯದಲ್ಲಿ ಆಗಾಗ ಹೋಲಕ್ಕೆ ಬಂದು ನಮ್ಮ ಹೋಲದಲ್ಲಿ ಆತನಿಗೆ 1 ಎಕರೆ 2 ಗುಂಟೆ ಜಮೀನು ಬರುತ್ತದೆ ಅಂತಾ ತಕರಾರು ಮಾಡುತ್ತಿದನು. ಆಗ ನಾವು ನಿನ್ನ ಹೋಲ ಎಲ್ಲಿ ಬರುತ್ತದೆಯೋ ಸವರ್ೆ ತುಂಬಿ ಅಳತೆ ಮಾಡಿಕೋ ನಮ್ಮ ಹೊಲದಲ್ಲಿ ಬಂದರೆ ನೀನಗೆ ಹೋಲ ಬಿಡುತ್ತೆವೆ ಅಂತಾ ಹೇಳುತ್ತಿದ್ದೆವು. ದಿನಾಂಕ 12-05-2019 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸಂಗ್ವಾರ ಗ್ರಾಮದ ಸಿಮಾಂತರದಲ್ಲಿ ಇರುವ ನಮ್ಮ ಹೋಲಕ್ಕೆ ಸಾಗುವಳಿ ಮಾಡಲು ಹೋಗಿದ್ದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಮ್ಮ ಹೋಲದಲ್ಲಿ ಸಾಗುವಳಿ ಮಾಡುತ್ತಿರುವಾಗ ನಮ್ಮೂರಿನ ಶೇಖಶಾವಲಿ ತಂದೆ ಮೌಲಾನಾಸಾಬ ಇತನು ಬಂದು ಎ ರಂಡಿ ಮಗನೇ, ಭೋಸಡಿ ಮಗನೇ ಈ ಹೋಲ ಯಾರದ್ದು ಅಂತಾ ಸಾಗುವಳಿ ಮಾಡುತ್ತಾ ಇದ್ದಿ ರಂಡಿ ಮಗನೇ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಮ್ಮ ಹೋಲದಲ್ಲಿ ನಾನು ಸಾಗುವಳಿ ಮಾಡಿದರೆ ಯಾಕೆ ಬೈಯುತ್ತಿ ಅಂತಾ ಹೇಳಿದಾಗ ಇದರಲ್ಲಿ ನನಗೂ ಕೂಡಾ ಪಾಲು ಬರುತ್ತದೆ ಅಂತಾ ಅಂದು ಕೈಯಿಂದ ಕಪಾಳಕ್ಕೆ ಹೋಡೆದು ಕೆಳಗೆ ಬಿಳಿಸಿ ಅಲ್ಲೆ ಬಿದ್ದಿದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ಹೋಟ್ಟೆಗೆ ಹೋಡೆದು ಗುಪ್ತ ಗಾಯ ಪಡಿಸಿರುತ್ತಾನೆ. ಗುಪ್ತಗಾಯ ಪಡಿಸಿ ಈ ಹೋಲದಲ್ಲಿ ನನಗೆ ಪಾಲು ಕೋಡದಿದ್ದರೆ ನೀನಗೆ ಜಿವ ಸಹಿತ ಬೀಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕುತ್ತಿರುವಾಗ ನನಗೆ ಹೋಡೆಯುವುದನ್ನು ನೋಡಿ ನಮ್ಮ ಪಕ್ಕದ ಹೋಲದವರಾದ ಮೌಲಾನಾಸಾಬ ತಂದೆ ಹಸನಸಾಬ ಮತ್ತು ಹುಸೇನಸಾಬ ತಂದೆ ಹಸನಸಾಬ ಇವರು ಬಂದು ಜಗಳವನ್ನು ಬೀಡಿಸಿದರು. ಆಗ ನಾನು ಅಂಜಿ ಊರಕಡೆಗೆ ಬರುವಾಗ ನನಗೆ ಅಡ್ಡಗಟ್ಟಿ ನಿಲ್ಲಿಸಿ ನನಗೆ ಏನಾದರೂ ಭಾಗ ಕೋಡದಿದ್ದರೆ ಈ ಹೋಲದಲ್ಲಿ ನಿನಗೆ ಸಾಗುವಾಳಿ ಮಾಡಲಿಕ್ಕೆ ಬೀಡುವುದಿಲ್ಲ ಮಗನೇ ಹುಷಾರ ಅಂತಾ ಬೈದನು. ಕಾರಣ ನನಗೆ ಅವಾಚ್ಯವಾಗಿ ಬೈದು ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದವನಾದ ಶೇಖಶಾವಲಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ನಿಡಿರುತ್ತಾನೆ ಅಂತಾ ಹೇಳಿ ಗಣಕೀಕರಣ ಮಾಡಿಸಿದ್ದ ಹೇಳಿಕೆ ನೀಜ ಇರುತ್ತದೆ. ನಾನು ಜಗಳದ ಬಗ್ಗೆ ಮನೆಯಲ್ಲಿ ವಿಚಾರಮಾಡಿ ತಡವಾಗಿ ಠಾಣೆಗೆ ಬಂದಿರುತ್ತೆನೆ. ಅಂತಾ ಪಿಯರ್ಾದಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 51/2019 ಕಲಂ 341,323,324,504,506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 52/219 ಕಲಂ. 379,511 ಐಪಿಸಿ:- ನಾನು ಸಾಯಿಬಣ್ಣ. ಎ ಎಸ್ ಐ ಸೈದಾಪೂರ ಪೊಲೀಸ ಠಾಣೆ ಇದ್ದು. ಸರಕಾರಿ ತಪರ್ೆ ಪಿಯರ್ಾದಿಯಾಗಿ ತಮ್ಮಲ್ಲಿ ಈ ಪಿಯರ್ಾಧಿಯನ್ನು ನೀಡುವದೇನಂದರೆ. ನಾನು ದಿನಾಂಕ: 20-05-2019 ರಂದು ನನ್ನದು ರಾತ್ರಿ 08-00 ಗಂಟೆಗೆ ಹೈವೇ ಪೆಟ್ರೋಲಿಂಗ್ ಕರ್ತವ್ಯ ಇರುವದರಿಂದ ನಾನು ಸೈದಾಪೂರದಿಂದ ರಾತ್ರಿ 07-00 ಗಂಟೆಗೆ ಸೈದಪ್ಪ ಹೋಮ ಗಾರ್ಡ ನಂ.532 ಇತನನ್ನು ಕರೆದುಕೊಂಡು ಠಾಣೆಯಿಂದ ಗುರಮಿಠಕಲ್ ಸಿಪಿಐ ಕಛೆರಿಗೆ ಹೋಗಿ ಅಲ್ಲಿಂದ ರಾತ್ರಿ 08-00 ಗಂಟೆಗೆ ನಾನು ಮತ್ತು ಕಾರ ಚಾಲಕ ಚಂದ್ರರೆಡ್ಡಿ ಎಹೆಚ್ಸಿ-08, ಮತ್ತು ಸೈದಪ್ಪ ಹೋಮ್ ಗಾರ್ಡ ನಂ532. ರವರನ್ನು ಕರೆದುಕೊಂಡು ಗುರಮಿಠಕಲ್ ದಿಂದ ಹೈವೇ ಪೆಟ್ರೊಲಿಂಗ್ ಗಾಡಿ ನಂ. ಕೆಎ-33 ಜಿ-0244 ನೆದ್ದರಲ್ಲಿ ಪೆಟೋಲಿಂಗ್ ಕುರಿತು ಗುಂಜನೂರ ಕ್ರಾಸ, ಕಂದಕೂರ ಕ್ರಾಸ, ಮತ್ತು ಕುಂಟಿಮರಿ ಚೆಕ್ ಪೋಸ್ಟ, ನಂದೆಪಲ್ಲಿ, ಮಾದ್ವಾರ ಕಣೆಕಲ್ ಕ್ರಾಸ ದಿಂದ ಪೆಟ್ರೋಲಿಂಗ್ ಮಾಡುತ್ತ ದಿನಾಂಕ: 21-05-2019 ರಂದು ಮದ್ಯರಾತ್ರಿ 01-45 ಗಂಟೆ ಸುಮಾರಿಗೆ ಕರಿಬೆಟ್ಟ ಕ್ರಾಸನ ಇಂಡಿಯನ್ ಪೆಟ್ರೊಲ್ ಬಂಕ್ ಹತ್ತಿರ ಪೆಟ್ರೋಲಿಂಗ್ ಮಾಡುತ್ತ ಹೊಗುತ್ತಿರುವಾಗ ಪೆಟ್ರೋಲ್ ಬಂಕ್ ಹತ್ತಿರ ರೋಡಿನ ಮೇಲೆ ಪಕ್ಕದಲ್ಲಿ ಯಾವುದೊ ಒಂದು ಲಾರಿ ನಿಂತಿದ್ದು ಆ ಲಾರಿ ಹತ್ತಿರ ಕರಿ ಬಣ್ಣದ ಕಾರು ಇದ್ದು ಅದರಲ್ಲಿ ಇಬ್ಬರು ಕುಂತಿದ್ದು ಮತ್ತೊಬ್ಬ ವ್ಯಕ್ತಿ ಲಾರಿಯ ಡಿಸೇಲ್ ಟ್ಯಾಂಕಗೆ ಪೈಪು ಹಚ್ಚಿ ಡಿಸೇಲ್ ಕಾರಿನ ಒಳಗಡೆ ಇರುವ ಡಿಸೇಲ್ ಡಬ್ಬಿಗಳಿಗೆ ತುಂಬಿಸುತ್ತಿರುವ ಸಮಯದಲ್ಲಿ ನಾವು ಹೋಗಿ ಹೇ ಯಾರೋ ನಿವು ಏನ ಮಾಡುತಿದ್ದರಿ ಅಂತಾ ಅಂದಾಗ ಕೆಳಗೆ ಇದ್ದ ವ್ಯಕ್ತಿ ಕಾರಿನಲ್ಲಿ ಕುಂತು ಕಾರನ್ನು ಯಾದಗಿರಿ ಕಡೆಗೆ ತಿರಿವಿ ನಿಲ್ಲಿಸದೆ ವೇಗವಾಗಿ ಹೋದರು, ಆಗ ನಾವು ಅವರ ಹಿಂದನೆ ಬೆನ್ನಟ್ಟಿಕೊಂಡು ಹೋಗುತ್ತಿರುವಾಗ ರಾಮಸಮುದ್ರ ಕ್ರಾಸನಲ್ಲಿ ಅವರಿಗೆ ಯಾವ ಕಡೆ ಹೊಗಬೇಕು ಅಂತಾ ಗೊತ್ತಾಗದೆ ತಕ್ಷಣ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದು 3 ಜನ ಹೊಲಗಳಲ್ಲಿ ಓಡಿ ಹೋದರು. ಆಗ ನಾವು ಕಾರು ನಿಲ್ಲಿಸಿ ಅವರ ಹಿಂದೆ ಬೆನ್ನಟ್ಟಿ ಓಡಿ ಹೋದರು ಅವರುಸಿಗಲಿಲ್ಲ. ಅವರನ್ನು ನೋಡಿದರೆ ಗುರುತ್ತಿಸುತ್ತೇನೆ, ಆಗ ನಾವು ಕಾರನ್ನು ನೋಡಲಾಗಿ ಅದರ ನಂ.ಎಪಿ-29 ಇ-6226 ಅಂತಾ ಇತ್ತು ಅದರಲ್ಲಿ ಡಿಸೇಲ್ ನ 12 ಡಬ್ಬಿಗಳು ಇದ್ದು ಎರಡು ರಬ್ಬರ ಪೈಪು ಇತ್ತು ಡಬ್ಬಿಗಳು ಎಲ್ಲವು ಖಾಲಿ ಇದ್ದವು, ನಂತರ ನಾನು ಎಹೆಚ್.ಸಿ-08, ಹೆಚ್.ಜಿ-352 ಸೇರಿ ಬಿಟ್ಟು ಹೊದ ಕಾರನ್ನು ತೆಗೆದುಕೊಂಡು ಕರಿಬೆಟ್ಟ ಕ್ರಾಸ ಹತ್ತಿ ಬಂದು ಲಾರಿ ನೋಡಲಾಗಿ ಆಗ ಲಾರಿ ಇರಲಿಲ್ಲ. ನಂತರ ಠಾಣೆಗೆ ಬಂದು ಠಾಣಾ ಆವರಣದಲ್ಲಿ ಕಾರನ್ನು ನಿಲ್ಲಿಸಿ ಅದನ್ನು ಪರಿಶಿಲಿಸಿ ನೋಡಲಾಗಿ ಕಾರಿನ ಚೆಸ್ಸಿ ನಂ.ಒಂ6ಎಖಃಈ194ಊ231929 ಇಂಜಿನ್ ನಂ. 4ಊ0013273 ಅಂತಾ ಇರುತ್ತದೆ. ಕಾರಣ ಡಿಸೇಲ್ನ್ನು ಕಳ್ಳತನ ಮಾಡಲು ಪ್ರಯತ್ನ ಮಾಡುತ್ತಿರುವ ಯಾರೋ 3 ಜನ ಅಪರಿಚಿತ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 48/2019 ಕಲಂ: 279,336 ಐಪಿಸಿ ಮತ್ತು ಕಲಂ: 192(ಎ) ಐಎಮ್ವಿ ಎಕ್ಟ:- ದಿನಾಂಕ: 21/05/20/19 ರಂದು 5-30 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 21/05/2019 ರಂದು ಸಾಯಂಕಾಲ ಸಮಯ 4-30 ಗಂಟೆ ಸುಮಾರಿಗೆ ನಾನು ಮತ್ತು ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ರವರೊಂದಿಗೆ ಯಾದಗಿರಿ-ಶಹಾಪೂರ ಮೇನ ರೋಡ ವಡಗೇರಾ ಕ್ರಾಸ ಹತ್ತಿರ ಸರಕಾರಿ ಜೀಪ ನಂ. ಕೆಎ 33 ಜಿ 0115 ನೇದ್ದರಲ್ಲಿ ಪೆಟ್ರೋಲಿಂಗ ಮಾಡುತ್ತಾ ಇದ್ದಾಗ ಯಾದಗಿರಿ ಕಡೆಯಿಂದ ಒಂದು ಸರಕು ಸಾಗಣೆ ಬೊಲೆರೊ ಪಿಕಪ್ ವಾಹನದಲ್ಲಿ ಚಾಲಕನು ಪ್ರಯಾಣಿಕರನ್ನು ಕೂಡಿಸಿಕೊಂಡು, ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೊರಟಿದ್ದು, ವಾಹನದ ಹಿಂದುಗಡೆ ಫಳಕ ಹಾಕದೆ ಖುಲ್ಲಾ ಬಿಟ್ಟಿದ್ದು, ಕೆಲ ಪ್ರಯಾಣಿಕರು ವಾಹನದಲ್ಲಿ ಕಾಲುಗಳನ್ನು ಇಳೆ ಬಿಟ್ಟು ಅಪಾಯಕಾರಿ ರೀತಿಯಲ್ಲಿ ಕುಳಿತ್ತಿದ್ದನ್ನು ಕಂಡು ನಾವು ಮತ್ತು ಸಿಬ್ಬಂದಿಯವರು ಸೇರಿ ಸದರಿ ಪಿಕಪ್ ವಾಹನವನ್ನು ನಿಲ್ಲಿಸಿದಾಗ ಅದರಲ್ಲಿ ಇದ್ದ ಪ್ರಯಾಣಿಕರು ಇಳಿದು ಓಡಿ ಹೋದರು. ಸದರಿ ವಾಹನ ಪರಿಶೀಲಿಸಿ ನೋಡಲಾಗಿ ಬೊಲೆರೋ ಪಿಕಪ್ ವಾಹನ ಇದ್ದು, ನೊಂದಣಿ ಸಂಖ್ಯೆ ಕೆಎ 33 ಎ 7776 ಇರುತ್ತದೆ. ವಾಹನ ಚಾಲಕನಿಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ತನ್ನ ಹೆಸರು ದೇವಪ್ಪ ತಂದೆ ಮರಲಿಂಗಪ್ಪ ದುಪ್ಪಲ್ಲೇರ, ವ:26, ಜಾ:ಕುರುಬರ, ಉ:ಡ್ರೈವರ ಸಾ:ಉಳ್ಳೆಸೂಗೂರು ತಾ:ವಡಗೇರಾ ಎಂದು ಹೇಳಿ ತಮ್ಮ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಿಂದ ವಡಗೇರಾ ತಾಲೂಕಿನ ಉಳ್ಳೆಸೂಗೂರು ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡನು. ವಾಹನ ಚಾಲಕನು ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿ, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ದಲ್ಲದೆ, ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧ ಎಸಗಿರುತ್ತಾನೆ. ಕಾರಣ ಸದರಿ ವಾಹನ ಮತ್ತು ಚಾಲಕನೊಂದಿಗೆ ಪೊಲೀಸ ಠಾಣೆಗೆ ಬಂದು ವರದಿ ತಯಾರಿಸಿ, ಪ್ರಿಂಟ ಹಾಕಿ ಸರಕಾರಿ ತಫರ್ೆಯಿಂದ ದೂರು ಕೊಡುತ್ತಿದ್ದು, ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 48/2019 ಕಲಂ: 279,336 ಐಪಿಸಿ ಮತ್ತು ಕಲಂ: 192(ಎ) ಐಎಮ್ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 49/2019 ಕಲಂ: 279,336 ಐಪಿಸಿ ಮತ್ತು ಕಲಂ: 192(ಎ) ಐಎಮ್ವಿ ಎಕ್ಟ:- ದಿನಾಂಕ: 21/05/20/19 ರಂದು 7-15 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ದಿನಾಂಕ: 21/05/2019 ರಂದು ಸಾಯಂಕಾಲ ಸಮಯ 6-30 ಗಂಟೆ ಸುಮಾರಿಗೆ ನಾನು ಮತ್ತು ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ರವರೊಂದಿಗೆ ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ಕ್ರಾಸ ಹತ್ತಿರ ಸರಕಾರಿ ಜೀಪ ನಂ. ಕೆಎ 33 ಜಿ 0115 ನೇದ್ದರಲ್ಲಿ ಪೆಟ್ರೋಲಿಂಗ ಮಾಡುತ್ತಾ ಇದ್ದಾಗ ಯಾದಗಿರಿ ಕಡೆಯಿಂದ ಒಂದು ಸರಕು ಸಾಗಣೆ ಲಾರಿ ಚಾಲಕನು ಸದರಿ ಲಾರಿ ಒಳಗಡೆ ಮತ್ತು ಲಾರಿ ಕ್ಯಾಬಿನ ಮೇಲ್ಭಾಗದಲ್ಲಿ ಪ್ರಯಾಣಿಕರನ್ನು ಅಪಾಯಕಾರಿ ರೀತಿಯಲ್ಲಿ ಕೂಡಿಸಿಕೊಂಡು, ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೊರಟಿದ್ದನ್ನು ಕಂಡು ನಾವು ಮತ್ತು ಸಿಬ್ಬಂದಿಯವರು ಸೇರಿ ಸದರಿ ಲಾರಿಯನ್ನು ನಿಲ್ಲಿಸಿದಾಗ ಅದರಲ್ಲಿ ಇದ್ದ ಪ್ರಯಾಣಿಕರು ಇಳಿದು ಓಡಿ ಹೋದರು. ಸದರಿ ವಾಹನ ಪರಿಶೀಲಿಸಿ ನೋಡಲಾಗಿ ಅಶೋಕ ಲಿಲ್ಯಾಂಡ ಲಾರಿ ಇದ್ದು, ನೊಂದಣಿ ಸಂಖ್ಯೆ ಕೆಎ 32/6998 ಇರುತ್ತದೆ. ವಾಹನ ಚಾಲಕನಿಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ತನ್ನ ಹೆಸರು ಮೊಹ್ಮದ ಶಫಿ ತಂದೆ ಅಬ್ದುಲ್ ನಬಿ ಹೊಸಳ್ಳಿ, ವ:32, ಜಾ:ಮುಸ್ಲಿಂ, ಉ:ಡ್ರೈವರ ಸಾ:ನಾಯ್ಕಲ್ ತಾ:ವಡಗೇರಾ ಎಂದು ಹೇಳಿ ತಮ್ಮ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ನಾಯ್ಕಲ್ ಗ್ರಾಮದಿಂದ ವಡಗೇರಾ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡನು. ವಾಹನ ಚಾಲಕನು ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿ, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ದಲ್ಲದೆ, ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಲಾರಿಯ ಕ್ಯಾಬಿನ ಮೇಲೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧ ಎಸಗಿರುತ್ತಾನೆ. ಕಾರಣ ಸದರಿ ವಾಹನ ಮತ್ತು ಚಾಲಕನೊಂದಿಗೆ ಪೊಲೀಸ ಠಾಣೆಗೆ ಬಂದು ವರದಿ ತಯಾರಿಸಿ, ಪ್ರಿಂಟ ಹಾಕಿ ಸರಕಾರಿ ತಫರ್ೆಯಿಂದ ದೂರು ಕೊಡುತ್ತಿದ್ದು, ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 49/2019 ಕಲಂ: 279,336 ಐಪಿಸಿ ಮತ್ತು ಕಲಂ: 192(ಎ) ಐಎಮ್ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ.:- 65/2019 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ದಿನಾಂಕ: 21/05/2019 ರಂದು 4.15 ಎ.ಎಂ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಮರಳು ತುಂಬಿದ ಒಂದು ಟಿಪ್ಪರ ತಂದು ಒಂದು ವರದಿಯೊಂದಿಗೆ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ: 21/05/2019 ರಂದು 2 ಎ.ಎಂ.ಕ್ಕೆ ಪಿ.ಎಸ್.ಐ ರವರು ಹುಲಕಲ್ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಶಹಾಪೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬಂದಿದ್ದು ಅದರ ರಾಯಲ್ಟಿ ನೋಡಲಾಗಿ ಟಿಪ್ಪರ ನಂ ಕೆಎ:39 ಎ:0355 ನೇದ್ದಕ್ಕೆ ರಾಯಲ್ಟಿ ನಂ: 22258937 ಹಾಗೂ ಎಮ್.ಡಿ.ಪಿ ನಂ: ಙಉಖಓಖಂಔಖ042800005931 ನೇದ್ದು ನೀಡಿದ್ದು ಇತ್ತು. ಪರಿಶೀಲಿಸಿ ನೋಡಲಾಗಿ ಸದರಿ ರಾಯಲ್ಟಿಗೆ ನಿನ್ನೆ ದಿನಾಂಕ:20/05/2019 ರಂದು 5.50 ಪಿ.ಎಮ್.ಕ್ಕೆ ಹತ್ತಿಗೂಡುರ ಚೆಕ್ ಪೋಸ್ಟ್ನಲ್ಲಿ ಈ ಮೊದಲೇ ಚೆಕ್ ಮಾಡಿ ರುಜು ಮಾಡಿದ್ದು ಇತ್ತು. ಸದರಿ ಟಿಪ್ಪರ ಚಾಲಕನು ಒಂದೇ ರಾಯಲ್ಟಿ ಪಡೆದು ಅದರ ಮೇಲೆ ಒಂದಕ್ಕಿಂತ ಹೆಚ್ಚು ಟ್ರಿಪ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಟಿಪ್ಪರ ನಂ ಕೆಎ-39 ಎ-0355 ನೇದ್ದನ್ನು ಜಪ್ತಿಪಡಿಸಿಕೊಂಡು ಅದರ ಚಾಲಕನಾದ ಭರತ ತಂದೆ ಲಕ್ಷ್ಮಣ ಬಾಗೆಕಾರ ಸಾ:ದುಬಲಗುಂಡಿ ತಾ:ಹುಮನಾಬಾದ ಜಿ:ಬೀದರ ಈತನಿಗೆ ಸದರಿ ಟಿಪ್ಪರನ್ನು ಭೀ.ಗುಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ನಡೆ ಅಂತ ಹೇಳಿದ ಕೂಡಲೇ ಟಿಪ್ಪರ ಚಾಲಕನು ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದರಿಂದ ಸದರಿ ಟಿಪ್ಪರನ್ನು ಪಿಎಸ್ಐ ರವರು ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದು ಅದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 65/2019 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 129/2019 ಕಲಂ 78(3) ಕೆಪಿ.ಯಾಕ್ಟ:- ದಿನಾಂಕ 21/05/2019 ರಂದು 4.30 ಪಿಎಂ ಕ್ಕೆ ಶ್ರೀ ನಾಗರಾಜ ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಹಯ್ಯಾಳ(ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ದೇವಪ್ಪ ತಂದೆ ಹಯ್ಯಾಳಪ್ಪ ಯಕ್ಷಿಂತಿ ವ|| 27ವರ್ಷ ಜಾ|| ಕುರುಬರ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಕೆಲಸ ಸಾ|| ಬೈರಿಮಡ್ಡಿ ಹಾ|| ವ|| ಹಯ್ಯಾಳ(ಬಿ) ತಾ|| ಶಹಾಪೂರ ಈತನಿಂದ ನಗದು ಹಣ 550/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 21/05/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8.30 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 129/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ.:- 38/2019 ಕಲಂ 379 ಐಪಿಸಿ:- 21/05/2019 ರಂದು ಮದ್ಯಾಹ್ನ 14.10 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ಟಿಪ್ಪರ ನಂ. ಕೆಎ-33 ಎ-9753 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಟಿಪ್ಪರ ಮಾಲಿಕ ಹೇಳಿದಂತೆ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವಾಗ ಈ ಬಗ್ಗೆ ಖಚತಿ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿಯಾದ ಹೆಚ್.ಸಿ-130, 67 ಪಿಸಿ-288 ರವರೊಂದಿಗೆ ಮತ್ತು ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಜಪ್ತಿ ಮಾಡಿಕೊಂಡು ತಮ್ಮ ವರದಿಯೊಂದಿಗೆ ಠಾಣೆಗೆ ತಂದು ಒಪ್ಪಿಸಿದ್ದರಿಂದಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.;- 18/2019 ಕಲಂ: 143, 147, 323, 354, 355, 448, 504, 506 ಸಂಗಡ 149 ಐಪಿಸಿ :- ಪಿಯರ್ಾದಿಯು ದಿನಾಂಕ: 10/05/2019 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಬಂದ ಆರೋಪಿತರು ಬಂದು ಪಿಯರ್ಾದಿಗೆ ಲೇ ಸೂಳಿ ನಿಮ್ಮದು ತಿಂಡಿ ಜಾಸ್ತಿ ಆಗೆದ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಶಿವಾನಂದ ರಾಠೋಡ ಇವರು ಪಿಯರ್ಾದಿಗೆ ಮನೆಯ ಹೊರಗೆ ಎಳೆದುಕೊಂಡು ಬಂದು ಚಪ್ಪಲಿಯಿಂದ ಹೊಡೆದಿರುತ್ತಾರೆ. ಪ್ರೇಮಾ ರಾಠೋಡ, ಶಾಂತಪ್ಪ ಚಿನ್ನಾರಾಠೋಡ, ತಾರಾಬಾಯಿ ರಾಠೋಡ ಇವರು ಹಿಡಿದು ದಬ್ಬಿಸಿಕೊಟ್ಟು ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವಬೇದರಿಕೆಯನ್ನು ಹಾಕಿರುತ್ತಾರೆ. ಉಳಿದ ಜನ ಕೈಯಿಂದ ಬೆನ್ನಿಗೆ, ಕಪಾಳಕ್ಕೆ ಹೊಡೆ-ಬಡೆ ಮಾಡಿರುತ್ತಾರೆ. ಕುಮಾರಿ ರಾಠೋಡ, ಶಿವಾನಂದ ರಾಠೋಡ, ಪ್ರೇಮಾ ರಾಠೋಡ ಇವರು ತಮ್ಮ ಕೈಯಲ್ಲಿ 5 ಲೀಟರಿನ ಎರಡು ಕ್ಯಾನ ಪೆಟ್ರೋಲ್ ಹಿಡಿದುಕೊಂಡು ಪಿಯರ್ಾದಿಗೆ ಮೈಮೇಲೆ ಸುರಿದು ಬೆಂಕಿಹಚ್ಚಲು ಪ್ರಯತ್ನಪಟ್ಟಿರುತ್ತಾರೆ. ಆಗ ಪಿಯರ್ಾದಿಯು ಅವರಿಗೆ ಬೆಂಕಿ ಹಚ್ಚಬೇಡಿ ನಾನು ನನ್ನ ಗಂಡನದು ನಿಮ್ಮ ಮೇಲೆ ಯಾವುದೇ ದ್ವೇಷ ಇಲ್ಲ ನನ್ನ ಗಂಡ ನಿಮ್ಮ ಜಗಳ ಬಿಡಿಸಲು ಹೋಗಿರುತ್ತಾರೆ ಎಂದು ಹೇಳಿದರು ಕೇಳದೆ 14 ಜನ ಹಲ್ಲೆ ಮಾಡಿ ನೀವು ನಮ್ಮ ಮೇಲೆ ಯಾವುದೇ ಪಿಯರ್ಾದಿ ಕೊಡಬಾರದು ಒಂದು ವೇಳೆ ಕೊಟ್ಟರೆ ನೀನು ರೋಡಿಗೆ ಹೋವುವಾಗ ನಾವು ನಿನ್ನ ಮೇಲೆ ಲಾರಿ ಹಾಯಿಸಿ ಖಲಾಸ ಮಾಡುತ್ತೇವೆ ಇಲ್ಲದಿದ್ದರೆ ನಮ್ಮ ಜೆ.ಸಿ.ಬಿ.ಯಿಂದ ಹೊಡೆದು ನಿನ್ನ ಸಾಯಿಸುತ್ತೇವೆ ಎಂದು ಜೀವಬೇದರಿಕೆ ಹಾಕಿರುತ್ತಾರೆ.ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.:- 49/2019 ಕಲಂ.323,324,307,504 ಸಂ.34 ಐಪಿಸಿ :-ದಿನಾಂಕ; 21/05/2019 ರಂದು 2-30 ಪಿಎಮ್ ಕ್ಕೆ ಧನ್ವಂತರಿ ಆಸ್ಪತ್ರೆ ಕಲಬುರಗಿಯಿಂದ ಫೋನ ಮೂಲಕ ಎಮ್.ಎಲ್.ಸಿ ಮಾಹಿತಿ ವಸುಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಹ್ಮದ ಮುಜಾಯಿದ್ದೀನ್ ತಂದೆ ನವಾಬ ಸಾಬ ಪ್ರೂಟಿವಾಲೆ ವ;27 ಜಾ; ಮುಸ್ಲಿಂ ಉ; ವ್ಯಾಪಾರ ಸಾ; ಮಕ್ಕಾ ಮಜೀದ ಹತ್ತಿರ ಹತ್ತಿಕುಣಿ ರೋಡ್ ಯಾದಗಿರಿ ಈತನು ಹೇಳಿಕೆ ನೀಡಿದ್ದು ಪಡೆದುಕೊಂಡು ಇಂದು ದಿನಾಂಕ;21/05/2019 ರಂದು 9-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದಿದ್ದು ಸದರಿ ಹೇಳೀಕೆಯ ಸಾರಾಂಶವೆನೆಂದರೆ, ದಿನಾಂಕ; 20/05/2019 ರಂದು 12-30 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ತಂದೆ ನವಾಬಸಾಬ ತಂದೆ ಚಂದಾಹುಸೇನ ಮತ್ತು ನಮ್ಮ ಅಣ್ಣಂದಿರಾದ ನಜಮುದ್ದೀನ ತಂದೆ ನವಾಬಸಾಬ ಹಾಗೂ ಜಹೀರುದ್ದೀನ ತಂದೆ ನವಾಬಸಾಬ ಎಲ್ಲರು ಯಾದಗಿರಿ ನಗರದ ಹಳೆ ಬಸನಿಲ್ದಾಣದ ಹತ್ತಿರವಿರುವ ನಮ್ಮ ಹಣ್ಣಿನ ಗೋದಾಮದಲ್ಲಿರುವಾಗ ಅಲ್ಲಿಗೆ ಹಣ್ಣಿನ ವ್ಯಾಪಾರಿಯಾದ ಅಫ್ಜಲ ತಂದೆ ಮಹ್ಮದ ಅಬ್ದುಲ ಹಾಗೂ ಅಫ್ಜಲ ಈತನಲ್ಲಿ ಕೆಲಸ ಮಾಡುವ ಮುಬೀನ ತಂದೆ ಸಿಲಾರ, ಶಬ್ಬೀರ ಮತ್ತು ಶೇಖ ಸೈಯದ ತಂದೆ ಮಹ್ಮದ ಗೌಸ ಎಲ್ಲರು ಕೂಡಿಕೊಂಡು ನಮ್ಮ ಹಣ್ಣಿನ ಗೋದಾಮಿನ ಮುಂದೆ ಬಂದು ಹಣ್ಣಿನ ವ್ಯಾಪಾರದಲ್ಲಿ ಏಕೆ ರೆಟಿನಲ್ಲಿ ಹೆಚ್ಚುಕಮ್ಮಿ ಮಾಡುತ್ತೀದ್ದೀರಿ ಅಂತಾ ಕೇಳಿದರು. ಆಗ ನಾವು ಬಜಾರಿನಲ್ಲಿ ಯಾವ ರೀತಿ ವ್ಯಾಪಾರ ನಡೆದಿರುತ್ತದೆ ನಾವು ಸಹಾ ಅದೇ ರೆಟಿನಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅಂತಾ ಹೇಳಿದಾಗ ಅವರಲ್ಲಿ ಅಫ್ಜಲ ಈತನು ಬೇ ಮಾಕಿ ಚುತ ತುಮ್ ಹಮಾರೆಕು ಊಲ್ಟಾಸಿದಾ ಬಾತ ಕರತೇ ಕ್ಯಾರೇ ಅಂತಾ ಅವಾಚ್ಯವಾಗಿ ಬೈದನು. ಆಗ ನಾವು ಯಾಕೆ ಈ ರೀತಿ ಬೈಯುತ್ತೀದಿ ನಾವೆಲ್ಲಾ ಒಂದೇ ಇರುತ್ತೇವೆ ಅಂತಾ ಹೇಳಿದಾಗ ಅಫ್ಜಲ ಈತನು ಹಮತುಮ ಕೈಸೆ ಏಕ ಹೋತೆ ರೇ ಸಾಲೆ ಅಂತಾ ಬೈಯುತ್ತಾ ನಮ್ಮ ಗೋದಾಮದ ಮುಂದೆ ಇದ್ದ ಪೈಪನಿಂದ ನನ್ನ ತಲೆಗೆ ಮತ್ತು ಹೊಟ್ಟೆಗೆ ಹೊಡೆದನು. ಸಂಗಡ ಇದ್ದ ಶಬ್ಬೀರ ಈತನು ಈಸಕು ಕತಮ್ ಕರೆಂಗೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಕಾಲಿನಿಂದ ನನ್ನ ತೊರಡಿಗೆ ಒದ್ದು ಭಾರೀ ಗುಪ್ತಗಾಯ ಮಾಡಿದನು. ಆಗ ಬಿಡಿಸಲು ಬಂದ ನನ್ನ ತಂದೆ ನವಾಬಸಾಬ ಈತನಿಗೆ ಮುಬೀನ ತಂದೆ ಸಿಲಾರ, ಅಣ್ಣನಾದ ನಜಮುದ್ದೀನ ಈತನಿಗೆ ಶೇಖ ಸೈಯದ ತಂದೆ ಮಹ್ಮದ ಗೌಸ, ಜಹಿರುದ್ದೀನ ಈತನಿಗೆ ಅಫ್ಜಲ ಈತನು ಕೈಯಿಂದ ಹೊಡೆಬಡೆ ಮಾಡಿದರು. ನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಸೇರಿಕೆಯಾಗಿದ್ದು ತಕ್ಷಣವೇ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿಕೊಟ್ಟಿದ್ದು ನಾನು ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಧನ್ವಂತರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದರಿಂದ ಪಿರ್ಯಾಧಿ ನೀಡಲು ತಡವಾಗಿದ್ದು ಇರುತ್ತದೆ. ಕಾರಣ ಹಣ್ಣಿನ ವ್ಯಾಪಾರದ ರೆಟ್ ಬಗ್ಗೆ ಮಾತನಾಡಲು ಬಂದು ಈ ಮೇಲಿನ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ಕಾಲಿನಿಂದ ಒದ್ದು, ಪೈಪಿನಿಂದ ಹೊಡೆದು ಹಾಗೂ ಕೈಯಿಂದ ಹೊಡೆಬಡೆ ಮಾಡಿ ಭಾರಿ ಗುಪ್ತಗಾಯ ಮಾಡಿದ್ದು ಇರುತ್ತದೆ. ಆದ್ದರಿಂದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.49/2019 ಕಲಂ.323,324,307,504 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. :-31/2019 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್ :-ದಿನಾಂಕ 21/05/2019 ರಂದು 3 ಪಿ.ಎಂ.ಕ್ಕೆ ಶ್ರೀ ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ, ಟಾಟಾ ಏಸ್ ಗೂಡ್ಸ ನಂ ಕೆಎ-33, ಎ-7756 ನೇದ್ದು ವಾಹನ ಹಾಗೂ ಚಾಲಕನನ್ನು ಹಾಜರುಪಡಿಸಿದ್ದು ನೀಡಿದ ವರದಿ ಸಾರಾಂಶವೇನೆಂದರೆ ನಾನು ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಈ ವರದಿ ಮೂಲಕ ಸೂಚಿಸುವದೆನೆಂದರೆ ಇಂದು ದಿನಾಂಕ: 21/05/2019 ರಂದು ಮದ್ಯಾಹ್ನ 2-30 ಪಿ.ಎಂ.ಸುಮಾರಿಗೆ ಯಾದಗಿರಿ ನಗರದ ಚಿತ್ತಾಪುರ ಮುಖ್ಯ ರಸ್ತೆಯ ಸುಭಾಷ್ ವೃತ್ತದ ಹತ್ತಿರ ನಾನು ಮತ್ತು ಸಿಬ್ಬಂದಿಯವರಾದ ಜಗದೀಶ ಹೆಚಸಿ 144 ಸಂಚಾರಿ ಠಾಣೆರವರು ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿರುವಾಗ ಯಾದಗಿರಿ ನಗರದ ಶಾಸ್ತ್ರೀ ವೃತ್ತದ ಕಡೆಯಿಂದ ಚಿತ್ತಾಪುರ ರಸ್ತೆಯ ಕಡೆಗೆ ಹೊರಟಿದ್ದ ಒಂದು ಟಾಟಾ ಏಸ್ ಗೂಡ್ಸ ನಂ ಕೆಎ-33, ಎ-7756 ನೇದ್ದರ ವಾಹನದಲ್ಲಿ ವಾಹನದ ಗೂಡ್ಸ್ ಪರಮಿಟನ್ನು ಉಲ್ಲಂಘನೆ ಮಾಡಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ತಡೆದು ನಿಲ್ಲಿಸಿ ನೋಡಲಾಗಿ ಸದರಿ ವಾಹನದಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 08 ಜನ ಪ್ರಯಾಣಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ. ಟಾಟಾ ಗೂಡ್ಸ್ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಸಿದ್ದಲಿಂಗಪ್ಪ ತಂದೆ ನಿಂಗಪ್ಪ ಯಾದಗಿರಿ ವಯ:32 ವರ್ಷ ಜಾತಿ: ಬೇಡರು, ಉ: ಟಾಟಾ ಗೂಡ್ಸ್ ವಾಹನದ ಚಾಲಕ, ಸಾ:ಗಡ್ಡೆಸೂಗುರ ತಾ:ಜಿ:ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ವಾಹನದ ಗೂಡ್ಸ್ ಪರಮಿಟ ಉಲ್ಲಂಘನೆ ಮಾಡಿದ್ದು, ಅಲ್ಲದೆ ಪ್ರಯಾಣಿಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ವರದಿಯನ್ನು ಮಾನ್ಯ ಪಿ.ಎಸ್.ಐ ಸಾಹೇಬರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 31/2018 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. :-32/2019 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್:-ದಿನಾಂಕ 21/05/2019 ರಂದು 4 ಪಿ.ಎಂ.ಕ್ಕೆ ಶ್ರೀ ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ, ಬುಲೆರೋ ಗೂಡ್ಸ ನಂ ಕೆಎ-33, ಎ-6980 ನೇದ್ದು ವಾಹನ ಹಾಗೂ ಚಾಲಕನನ್ನು ಹಾಜರುಪಡಿಸಿದ್ದು ನೀಡಿದ ವರದಿ ಸಾರಾಂಶವೇನೆಂದರೆ ನಾನು ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಈ ವರದಿ ಮೂಲಕ ಸೂಚಿಸುವದೆನೆಂದರೆ ಇಂದು ದಿನಾಂಕ: 21/05/2019 ರಂದು ಮದ್ಯಾಹ್ನ 3-30 ಪಿ.ಎಂ.ಸುಮಾರಿಗೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಹತ್ತಿರ ನಾನು ಮತ್ತು ಸಿಬ್ಬಂದಿಯವರಾದ ಜಗದೀಶ ಹೆಚಸಿ 144 ಸಂಚಾರಿ ಠಾಣೆರವರು ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿರುವಾಗ ಯಾದಗಿರಿ ನಗರದ ಶಾಸ್ತ್ರೀ ವೃತ್ತದ ಕಡೆಯಿಂದ ಶಹಾಪುರ ರಸ್ತೆಯ ಕಡೆಗೆ ಹೊರಟಿದ್ದ ಒಂದು ಬುಲೇರೋ ಗೂಡ್ಸ್ ನಂಬರ ನಂ ಕೆಎ-33, ಎ-6980 ನೇದ್ದರ ವಾಹನದಲ್ಲಿ ವಾಹನದ ಗೂಡ್ಸ್ ಪರಮಿಟನ್ನು ಉಲ್ಲಂಘನೆ ಮಾಡಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ತಡೆದು ನಿಲ್ಲಿಸಿ ನೋಡಲಾಗಿ ಸದರಿ ವಾಹನದಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 12 ಜನ ಪ್ರಯಾಣಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ. ಬುಲೆರೋ ಗೂಡ್ಸ್ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ವಿಶ್ವನಾಥ ತಂದೆ ಶಿವಲಿಂಗಪ್ಪ ಪೊಲೀಸ್ ಪಾಟೀಲ್ ವಯ:30 ವರ್ಷ ಜಾತಿ: ಲಿಂಗಾಯತ್, ಉ:ಬುಲೆರೋ ಗೂಡ್ಸ್ ವಾಹನದ ಚಾಲಕ, ಸಾ:ಮಳ್ಳಳ್ಳಿ ತಾ:ವಡಗೇರಾ, ಜಿ:ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ವಾಹನದ ಗೂಡ್ಸ್ ಪರಮಿಟ ಉಲ್ಲಂಘನೆ ಮಾಡಿದ್ದು, ಅಲ್ಲದೆ ಪ್ರಯಾಣಿಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ವರದಿಯನ್ನು ಮಾನ್ಯ ಪಿ.ಎಸ್.ಐ ಸಾಹೇಬರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 32/2018 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. :-33/2019 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್:-ದಿನಾಂಕ 21/05/2019 ರಂದು 5 ಪಿ.ಎಂ.ಕ್ಕೆ ಶ್ರೀ ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ, ಟಾಟಾ ಏಸ್ ಗೂಡ್ಸ ನಂ ಕೆಎ-33, ಎ-0296 ನೇದ್ದು ವಾಹನ ಹಾಗೂ ಚಾಲಕನನ್ನು ಹಾಜರುಪಡಿಸಿದ್ದು ನೀಡಿದ ವರದಿ ಸಾರಾಂಶವೇನೆಂದರೆ ನಾನು ಬಾಪುಗೌಡ ಪಾಟೀಲ್ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ಪ್ರಭಾರ ಪಿ.ಎಸ್.ಐ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮಗೆ ಈ ವರದಿ ಮೂಲಕ ಸೂಚಿಸುವದೆನೆಂದರೆ ಇಂದು ದಿನಾಂಕ: 21/05/2019 ರಂದು ಮದ್ಯಾಹ್ನ 4-30 ಪಿ.ಎಂ.ಸುಮಾರಿಗೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಹತ್ತಿರ ನಾನು ಮತ್ತು ಸಿಬ್ಬಂದಿಯವರಾದ ಜಗದೀಶ ಹೆಚಸಿ 144 ಸಂಚಾರಿ ಠಾಣೆರವರು ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿರುವಾಗ ಯಾದಗಿರಿ ನಗರದ ಶಾಸ್ತ್ರೀ ವೃತ್ತದ ಕಡೆಯಿಂದ ಶಹಾಪುರ ರಸ್ತೆಯ ಕಡೆಗೆ ಹೊರಟಿದ್ದ ಒಂದು ಟಾಟಾ ಏಸ್ ಗೂಡ್ಸ್ ನಂಬರ ನಂ ಕೆಎ-33, ಎ-0296 ನೇದ್ದರ ವಾಹನದಲ್ಲಿ ವಾಹನದ ಗೂಡ್ಸ್ ಪರಮಿಟನ್ನು ಉಲ್ಲಂಘನೆ ಮಾಡಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ತಡೆದು ನಿಲ್ಲಿಸಿ ನೋಡಲಾಗಿ ಸದರಿ ವಾಹನದಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 16 ಜನ ಪ್ರಯಾಣಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ. ಬುಲೆರೋ ಗೂಡ್ಸ್ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಮಹಾದೇವಪ್ಪ ತಂದೆ ಅಯ್ಯಪ್ಪ ಬಡಿಗೇರ ವಯ:52 ವರ್ಷ ಜಾತಿ: ಕಬ್ಬಲಿಗ, ಉ: ಟಾಟಾ ಏಸ್ ಗೂಡ್ಸ್ ವಾಹನದ ಚಾಲಕ, ಸಾ;ಇಬ್ರಾಹಿಂಪುರ, ತಾ:ಶಹಾಪುರ, ಜಿ:ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ವಾಹನದ ಗೂಡ್ಸ್ ಪರಮಿಟ ಉಲ್ಲಂಘನೆ ಮಾಡಿದ್ದು, ಅಲ್ಲದೆ ಪ್ರಯಾಣಿಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ವರದಿಯನ್ನು ಮಾನ್ಯ ಪಿ.ಎಸ್.ಐ ಸಾಹೇಬರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2018 ಕಲಂ 279, 336 ಐಪಿಸಿ ಸಂಗಡ ಕಲಂ 192(ಎ) ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using