ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-05-2019

By blogger on ಭಾನುವಾರ, ಮೇ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-05-2019 

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ: 379 ಐಪಿಸಿ:-ದಿನಾಂಕ: 19/05/2019 ರಂದು 5-15 ಪಿಎಮ್ ಕ್ಕೆ ಶ್ರೀ ವಿಜಯ ತಂದೆ ಹೀರು ಪವ್ಹಾರ, ವ:30, ಜಾ:ಲಮ್ಮಾಣಿ, ಉ:ಕೂಲಿ ಸಾ:ಬಸವಂತಪೂರ ತಾಂಡಾ ಹಾ:ವ:ರೈಲ್ವೆ ವಸತಿ ಗೃಹ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ. ಸುಮಾರು 2015 ನೇ ಸಾಲಿನಲ್ಲಿ ನಾನು ಬಜಾಜ್ ಪಲ್ಸರ್ 150 ಸಿಸಿ ಮೋಟರ್ ಸೈಕಲ್ ಖರೀದಿ ಮಾಡಿದ್ದು, ನನ್ನ ಹೆಸರಿನಲ್ಲಿ ನೊಂದಣಿ ಆಗಿರುತ್ತದೆ. ಮೋಟರ್ ಸೈಕಲ್ ನೊಂದಣಿ ಸಂ. ಕೆಎ 33 ಎಸ್ 5643 ಇದ್ದು, ಚೆಸ್ಸಿ ನಂ. ಒಆ2ಂ11ಅಚ2ಈಘಅ19370 ಇಂಜನ ನಂ. ಆಊಚಘಈಅ28500 ಇರುತ್ತದೆ. ಹೀಗಿದ್ದು ದಿನಾಂಕ: 19/04/2019 ರಂದು ವಡಗೇರಾ ಕಂಠಿ ತಾಂಡಾದಲ್ಲಿ ನಮ್ಮ ಬೀಗರು ದೇವರು ಮಾಡಿದ್ದರಿಂದ ನಾನು ಕಂಠಿ ತಾಂಡಾಕ್ಕೆ ಬಂದು ದೇವರ ಕಾರ್ಯಕ್ರಮ ಭಾಗಿಯಾಗಿ ಊಟ ಮಾಡಿಕೊಂಡು ರಾತ್ರಿ ಅಂದಾಜು 11 ಗಂಟೆ ಸುಮಾರಿಗೆ ಕಂಠಿ ತಾಂಡಾದಿಂದ ಯಾದಗಿರಿಗೆ ನನ್ನ ಮೋಟರ್ ಸೈಕಲ್ ಮೇಲೆ ಒಬ್ಬನೆ ಹೊರಟೆನು. ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ ಕ್ರಾಸ ಹತ್ತಿರ ರಾತ್ರಿ 11-30 ಗಂಟೆ ಸುಮಾರಿಗೆ ನನ್ನ ಪಾಡಿಗೆ ನಾನು ನಿಧಾನವಾಗಿ ಹೋಗುತ್ತಿದ್ದಾಗ ನನ್ನ ಮೋಟರ್ ಸೈಕಲಗೆ ಯಾವುದೋ ಒಂದು ಪ್ರಾಣಿ ಅಡ್ಡಬಂದಾಗ ಅದಕ್ಕೆ ಗುದ್ದುವುದನ್ನು ತಪ್ಪಿಸಲು ಹೋದಾಗ ಮೋಟರ್ ಸೈಕಲ್ ಸೆಲ್ಫ ಸ್ಕಿಡ್ಡಾಗಿ ಬಿದ್ದು ಬಿಟ್ಟೆನು. ನನ್ನ ಎಡಗೈ ಭುಜದಲ್ಲಿ ಒಳಪೆಟ್ಟಾಗಿ ನನಗೆ ತಲೆ ಸುತ್ತು ಬಂದು ಅಲ್ಲೆ ಮಲಗಿಕೊಂಡೆನು. ಬೆಳಗ್ಗೆ 5 ಗಂಟೆ ಸುಮಾರಿಗೆ ಯಾರೋ ದಾರಿ ಮೇಲೆ ಹೋಗುವವರು ನನ್ನ ಮೊಬೈಲದಿಂದ ನನ್ನ ಅಣ್ಣನಾದ ಸಂತೋಷ  ಈತನಿಗೆ ಫೋನ ಮಾಡಿ ಹೇಳಿದಾಗ ನಮ್ಮಣ್ಣ ಸಂತೋಷ ಮತ್ತು ಇತರರು ಬಂದು ನನಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನಾನು ಅಲ್ಲಿ ಉಪಚಾರ ಪಡೆದುಕೊಂಡು ಸೆಲ್ಫ ಸ್ಕಿಡ್ಡಾಗಿ ಬಿದ್ದಿದ್ದರಿಂದ ಯಾರ ಮೇಲೆ ಯಾವುದೇ ದೂರು ಕೊಡದೆ, ಎಮ್.ಎಲ್.ಸಿ ಮುಕ್ತಾಯ ಮಾಡಿಕೊಂಡಿರುತ್ತೇನೆ. ನಮ್ಮಣ್ಣ ಮತ್ತು ಇತರರು ಬಂದು ನನಗೆ ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ನನ್ನ ಮೋಟರ್ ಸೈಕಲ್ ನೋಡಿದರೆ ನಾನು ಬಿದ್ದ ಜಾಗದಲ್ಲಿ ಮೋಟರ್ ಸೈಕಲ್ ಇರಲಿಲ್ಲ. ಅದರ ಮುಂದಿನ ಶೋದ ಮುರಿದ ಕೆಲವು ಬಿಡಿ ಭಾಗಗಳು ಬಿದ್ದಿದ್ದವು. ನಾನು ಸೆಲ್ಫ ಸ್ಕಿಡ್ಡಾಗಿ ಬಿದ್ದು ತೆಲೆ ಸುತ್ತು ಬಂದು ಅಲ್ಲೆ ಮಲ್ಕೊಂಡಾಗ ಯಾರೋ ಕಳ್ಳರು ನನ್ನ ಬಜಾಜ್ ಪಲ್ಸರ 150 ಸಿಸಿ ಮೋಟರ್ ಸೈಕಲ್ ನಂ. ಕೆಎ 33 ಎಸ್ 5643 ಅ:ಕಿ: 35,000=00 ರೂ. ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನಮಣ್ಣ ಸಂತೋಷ ಮತ್ತು ಇತರರು ಕೂಡಿ ಎಲ್ಲಾ ಕಡೆ ಹುಡುಕಾಡಿ ಬಂದು ಈಗ ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಕಳುವಾದ ಮೋಟರ್ ಸೈಕಲ್ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 117/2019 ಕಲಂ 279,336 ಐ.ಪಿ.ಸಿ. ಸಂಗಡ 192(ಎ) ಐ.ಎಮ್.ವಿ. ಆಕ್ಟ್:- ದಿನಾಂಕ:19-05-2019 ರಂದು 8 ಪಿ.ಎಮ್ ಕ್ಕೆ ಶ್ರೀ ಆನಂದರಾವ್ ಎಸ್.ಎನ್. ಪಿಐ ಸಾಹೇಬರು ಮುಂದಿನ ಕ್ರಮ ಜರುಗಿಸುವ ಕುರಿತು ಸುಭಾಷ ಪಿಸಿ-174 ರವರೊಂದಿಗೆ ಒಂದು ಟಂ ಟಂ ಆಟೋ ನಂಬರ ಕೆಎ-33, 8223 ಹಾಗೂ ಚಾಲಕನನ್ನು ಠಾಣೆಗೆ ಬಂದು ಹಾಜರುಪಡಿಸಿದ್ದು ವರದಿ ನೀಡಿದ ಸಾರಾಂಶವೇನೆಂದರೆ ಇಂದು ದಿನಾಂಕ: 19-05-2019 ರಂದು 6 ಪಿ.ಎಮ್ ಸುಮಾರಿಗೆ ನಾನು ಸಿಬ್ಬಂದಿಯವರಾದ 1) ಸೋಮಯ್ಯ ಪಿಸಿ-235 2) ಸುಭಾಸ್ ಪಿಸಿ-174  ಪಟ್ರೋಲ್ಲಿಂಗ ಕರ್ತವ್ಯ ಹಾಗೂ ವಾಹನ ತಪಾಸಣೆ ಕುರಿತು ಸುರಪುರ ಪೊಲೀಸ್ ಠಾಣೆಯ ವಾಪ್ತಿಯ ಲಕ್ಷ್ಮೀಪೂರ ಕ್ರಾಸ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ಶಹಾಪೂರ ಕಡೆಯಿಂದ ಸುರಪುರ ಕಡೆಗೆ ಹೊರಟಿದ್ದ ಒಂದು ಟಂ ಟಂ ಅಟೋ ಚಾಲಕನು ತನ್ನ ಟಂ ಟಂ ಅಟೋ ನಂಬರ ಕೆಎ-33, 8223 ನೇದ್ದರ ವಾಹನದ ಒಳಗಡೆ ಮತ್ತು ವಾಹನದ ಮೇಲೆ ಕೂಡಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 15 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬರುವುದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ವಾಹನ ವಾಲಕನ ಹೆಸರು ವಿಳಾಸ ವಿಚಾರಿಸಲು ಅವನ ತನ್ನ ಹೆಸರು ಭೀಮಣ್ಣ ತಂದೆ ಕೃಷ್ಣಪ್ಪ ಪೂಜಾರಿ ವಯಾ:19 ವರ್ಷ ಉ:ಚಾಲಕ ಜಾ:ಉಪ್ಪಾರ ಸಾ:ದೇವಿಕೇರಾ ತಾ: ಸುರಪುರ  ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ವಾಹನದ ಪಮರ್ಿಟ್ ಉಲ್ಲಂಘನೆ ಮಾಡಿದ್ದು ಅಲ್ಲದೆ ಪ್ರಯಾಣೀಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮ ಜರಗಿಸಲು ಸೂಚಿಸಿದ  ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 117/2019 ಕಲಂ 279, 336 ಐಪಿಸಿ ಸಂಗಡ 192 (ಎ) ಐ.ಎಮ್.ವಿ.  ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 118/2019 ಕಲಂ 279,336 ಐ.ಪಿ.ಸಿ. ಸಂಗಡ 192(ಎ) ಐ.ಎಮ್.ವಿ. ಆಕ್ಟ್:- ದಿನಾಂಕ:19-05-2019 ರಂದು 9-15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ ಎಸ್.ಎನ್. ಪಿಐ ಸಾಹೇಬರು ಒಂದು ಲಾರಿ ನಂಬರ ಎಮ್.ಹೆಚ್-11, ಎಮ್-4392 ಹಾಗೂ ಚಾಲಕನನ್ನು ಹಾಜರುಪಡಿಸಿದ್ದು ವರದಿ ನೀಡಿದ ಸಾರಾಂಶವೇನೆಂದರೆ ಇಂದು ದಿನಾಂಕ: 19-05-2019 ರಂದು 7 ಪಿ.ಎಮ್ ಸುಮಾರಿಗೆ ನಾನು ಸಿಬ್ಬಂದಿಯವರಾದ 1) ಸೋಮಯ್ಯ ಪಿಸಿ-235 2) ಮನೋಹರ ಹೆಚ್ಸಿ-105 ರವರೊಂದಿಗೆ   ಪಟ್ರೋಲ್ಲಿಂಗ ಕರ್ತವ್ಯ ಹಾಗೂ ವಾಹನ ತಪಾಸಣೆ ಕುರಿತು ಸುರಪುರ ಪೊಲೀಸ್ ಠಾಣೆಯ ವಾಪ್ತಿಯ ಬಿಜಾಸಪುರ ಗ್ರಾಮದ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ಶಹಾಪೂರ ಕಡೆಯಿಂದ ಸುರಪುರ ಕಡೆಗೆ ಹೊರಟಿದ್ದ ಒಂದು ಅಶೋಕ ಲೈಲ್ಯಾಂಡ ಗೊಡ್ಸ ಲಾರಿ ಚಾಲಕನು ತನ್ನ ಅಶೋಕ ಲೈಲ್ಯಾಂಡ ಗೊಡ್ಸ ಲಾರಿ ನಂಬರ ಎಮ್.ಹೆಚ್-11, ಎಮ್-4392 ನೇದ್ದರ ಲಾರಿ ಒಳಗಡೆ ಮತ್ತು ಲಾರಿ ಮೇಲೆ ಕೂಡಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 50-60 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬರುವುದನ್ನು ಕಂಡು ಸದರಿ ಲಾರಿಗೆ ಕೈ ಮಾಡಿ ನಿಲ್ಲಿಸಿ ಲಾರಿ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನ ತನ್ನ ಹೆಸರು ಭೀಮಣ್ಣ ತಂದೆ ತಿಮ್ಮಣ್ಣ ಗದ್ವಾಲ್ ವಯಾ:28 ವರ್ಷ ಜಾ: ಉಪ್ಪಾರ ಉ:ಚಾಲಕ ಸಾ:ರಂಗಮ ಪೇಠ ಸುರಪುರ ಅಂತಾ ತಿಳಿಸಿದ್ದು ಸದರಿ ಚಾಲಕನು ತನ್ನ ಲಾರಿ ಪಮರ್ಿಟ್ ಉಲ್ಲಂಘನೆ ಮಾಡಿದ್ದು ಅಲ್ಲದೆ ಪ್ರಯಾಣೀಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿದ್ದು ಇರುತ್ತದೆ. ಸದರಿ ಲಾರಿಯನ್ನು  ಚಾಲಕನ ಸಮೇತ ಠಾಣೆಗೆ ತಂದು ಹಾಜರ ಪಡಿಸಿದ್ದು ಮುಂದಿನ ಕ್ರಮ ಜರಗಿಸಲು ಸೂಚಿಸದ್ದು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2019 ಕಲಂ 279, 336 ಐಪಿಸಿ ಸಂಗಡ 192 (ಎ) ಐ.ಎಮ್.ವಿ.  ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.   



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!