ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-05-2019

By blogger on ಶನಿವಾರ, ಮೇ 18, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-05-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 81/2019 ಕಲಂ: 498(ಎ), 323, 324, 504, 506 ಸಂ 34 ಐಪಿಸಿ:-ಫಿರ್ಯಾದಿದಾರಳಿಗೆ ಸುಮಾರು 5 ವರ್ಷಗಳ ಹಿಂದೆ ಆರೋಪಿ ಭೀಮರಾಯ ತಂದೆ ತಿಮ್ಮಪ್ಪ ಮುಂಡರಗೇರ ಜೋತೆಗೆ ಮದುವೆಯಾಗಿದ್ದು, ಸುಮಾರು ಎರಡು ವರ್ಷಗಳಿಂದ ಅವಳ ಗಂಡ ಭೀಮರಾಯ ಅತ್ತೆ ಲಕ್ಷ್ಮಿ ಮತ್ತು ಮಾವ ತಿಮ್ಮಪ್ಪ ಎಲ್ಲರೂ ಕೂಡಿ ಫಿರ್ಯಾಧಿದಾರಳಿಗೆ ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ನೀನು ಆಶಾ ಕಾರ್ಯಕತರ್ೆ ಕೆಲಸ ಬಿಡು  ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದರು, ದಿನಾಂಕ 16/05/2019 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿ ಜೋತೆಗೆ ಆರೋಪಿತರೆಲ್ಲರೂ ಕೂಡಿ ಜಗಳ ತೆಗೆದು ಅವಾಚ್ಯವಾಗಿ ಬೈದು, ಕಲ್ಲಿನಿಂದ, ಕೈಯಿಂದ ಹೊಬಡೆ ಮಾಡಿ ತಲೆಗೆ ರಕ್ತಗಾಯ, ಗುಪ್ತಗಾಯ ಮಾಡಿದ ಬಗ್ಗೆ. ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ: 323, 324, 498(ಎ), 504, 506 ಸಂ. 34 ಐಪಿಸಿ:-ದಿನಾಂಕ 18.05.2019 ರಂದು ಮಧ್ಯಾಹ್ನ 2.30 ಪಿ.ಎಂ ಕ್ಕೆ ಪಿರ್ಯಾಧಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ ಸುಮಾರು 4 ವರ್ಷದ ಹಿಂದೆ ಪಿರ್ಯಾಧಿಗೆ ಪುಟಪಾಕ ಗ್ರಾಮಕ್ಕೆ ಮದೆವೆ ಮಾಡಿಕೊಟ್ಟಿದ್ದು ಮದುವೆ ಆಗಿದ್ದನಿಂದ ಆಕೆಯ ಗಂಡ ಮತ್ತು ಅತ್ತೆ ಕೂಡಿ ಪಿರ್ಯಾಧಿ ದಿನಾಲೂ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದರು ಸುಮಾರು 8-9 ದಿನಗಳ ಹಿಂದೆ ಪಿರ್ಯಾಧಿದಾರಳು ತನ್ನ ಅತ್ತೆಯ ಸಂಗಡ ಬಾಯಿ ಮಾತಿನ ತಕರಾರು ಮಾಡಿಕೊಂಡು ತನ್ನ ತವರು ಮನೆಯಾದ ಅನಪೂರ ಗ್ರಾಮಕ್ಕೆ ತನ್ನ ಮಕ್ಕಳೊಂದಿಗೆ ಬಂದಾಗ ಆಕೆಯ ಗಂಡನು ದಿನಾಂಕ 15.05.2019 ರಂದು ಅನಪೂ ಗ್ರಾಮಕ್ಕೆ ಬಂದು ಅವಾಚ್ಯವಾಗಿ ಚಿನಾಲಿ ಬೋಸಡಿ ಅಂತಾ ಬೈದು ಪ್ಲಾಸ್ಟೀಕ್ ಪೈಪನಿಂದ ಪಿರ್ಯಾಧಿಗೆ ಎರಡು ಕೈಗಳ ರಟ್ಟೆಗೆ, ಎರಡು ತೊಡೆಯ ಹಿಂದೆ, ಎರಡು ಮೊಳಕಾಲು ಕೆಳಗೆ, ಎರಡು ಪಾದಗಳಿಗೆ ಹೊಡೆದು ಭಾರಿ ಗುಪ್ತಪೆಟ್ಟು ಮಾಡಿದ್ದು ರಕ್ತ ಗಂದುಗಟ್ಟುವಂತೆ ಹೊಡೆದು ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 52/2019 ಕಲಂ: 323, 504, 435, 427 ಐಪಿಸಿ:-ದಿನಾಂಕ: 18/05/2019 ರಂದು 08.15 ಪಿಎಂ ಕ್ಕೆ ಪಿಯರ್ಾದಿ ನಾಗರಾಜ ತಂದೆ ಶಂಕರ ಪವಾರ ವ:27 ವರ್ಷ ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ನಾಗನಟಗಿ ಮೇಘಾನಾಯ್ಕ ತಾಂಡಾ ತಾ|| ಶಹಾಪೂರ ಜಿ: ಯಾದಗಿರಿ ಇವರು ಠಾಣಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಯ ಸಾರಂಶವೆನಂದರೆ, ದಿನಾಂಕ:16/05/2019 ರಂದು ನಾನು ಮತ್ತು ನಮ್ಮ ಚಿಕ್ಕಪ್ಪನ ಮಗ ಕಾಂತಿಲಾಲ ತಂದೆ ರಾಮು ಪವಾರ ಇಬ್ಬರು ನಮ್ಮ ಮೊಟಾರ ಸೈಕಲ್ ನಂ: ಕೆಎ-33 ಎಸ್.-4721 ನೇದ್ದನ್ನು ತಗದುಕೊಂಡು ಹೋಸ್ಕೇರಾ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದೆವು, ಮರಳಿ ನಮ್ಮ ತಾಂಡಾಕ್ಕೆ ಬರುವಾಗ ಭೀಮ್ಲುನಾಯ್ಕ ತಾಂಡಾದ ನಾಗನಟಗಿಯಲ್ಲಿ ರೊಡಿನಲ್ಲಿರುವ 08.00 ಪಿಎಮ ಸುಮಾರಿಗೆ ನಮ್ಮ ಚಿಕ್ಕಪ್ಪನ ಮಗಳಾದ ರೇಣಿಬಾಯಿ ಇವಳ ಗಂಡ ಸುರೇಶ ತಂದೆ ದೀಪ್ಲೂ ರಾಠೋಡ ವಯಾ:28 ವರ್ಷ ಜಾ: ಲಂಬಾಣಿ ಸಾ: ಮೇಘಾನಾಯಕ ತಾಂಡಾ ನಾಗನಟಗಿ ಇವನು ತನ್ನ ಹೆಂಡತಿಯ ಜೋತೆಯಲ್ಲಿ ಜಗಳ ಮಾಡುತ್ತಿದ್ದನು. ನಮ್ಮ ಮೋಟಾರ್ ಸೈಕಲ್ ಬೆಳಕಿನಲ್ಲಿ ನೋಡಿದ ನಾನು ಮತ್ತು ನಮ್ಮ ತಮ್ಮ ಕಾಂತಿಲಾಲ ಇಬ್ಬರು ನಮ್ಮ ಮೊಟಾರ್ ಸೈಕಲ್ ರೋಡಿನಲ್ಲಿ ನಿಲ್ಲಿಸಿ ಯಾಕೆ ಜಗಳ ಮಾಡುತ್ತಿ ಅಂತಾ ಬಿಡಿಸಿಕೊಳ್ಳಲು ಹೋದಾಗ ಸುರೇಶ ತಂದೆ ದೀಪ್ಲೂ ರಾಠೋಡ ಸಾ: ಭೀಮ್ಲಾನಾಯ್ಕ ತಾಂಡಾ ನಾಗನಟಗಿ ಈತನು ನನಗೆ ಮತ್ತು ನನ್ನ ತಮ್ಮ ಕಾಂತಿಲಾಲ ಇಬ್ಬರು ಸೂಳೆ ಮಕ್ಕಳೆ ನೀವ್ಯಾಕೆ ಬಂದಿದ್ದಿರಿ ಅಂತಾ ಅವಾಚ್ಯವಾಗಿ ಬೈಯತೊಡಗಿದ ಆಗ ನಾವು ಯಾಕೆ ಬೈಯುತ್ತಿ ನಾವು ನಿನಗೆ ಏನು ಮಾಡಿದ್ದೇವೆ ನಿಮ್ಮ ಮನೆಗೆ ಹೆಣ್ಣು ಕೊಟ್ಟಿದ್ದು ತಪ್ಪಾಯಿತು ಅಂದಿದ್ದಕ್ಕೆ ಒಮ್ಮೆಲೆ ಸಿಟ್ಟಿಗೆ ಬಂದು ನಮ್ಮ ತಮ್ಮನಿಗೆ ಕೈಯಿಂದ ಹೊಡೆದು ದಬ್ಬಕೊಟ್ಟಿ ಅವಾಚ್ಯವಾಗಿ ಬೈಯುತ್ತಾ, ನನ್ನ ಮೋಟಾರ್ ಸೈಕಲ್ ನೇದ್ದರ ಚಾವಿ ಮತ್ತು ಪ್ಲಗ್ ಕಿತ್ತಿಕೊಂಡು ಓಡಿ ಹೋದನು. ಆಗ ನಾವು ಇರಲಿ ಬಿಡು ಅಂತಾ ಮೋಟಾರ್ ಸೈಕಲ್ ಅಲ್ಲೆ ಬಿಟ್ಟು ಬಂದಿದ್ದೆವು. ನಂತರ 11.30 ಗಂಟೆಯ ಸುಮಾರಿಗೆ ಕೃಷ್ಣಾ ತಂದೆ ತೇಜು ಸಾ: ಭಿಮ್ಲುನಾಯಕ ತಾಂಡಾ ಇವರು ಪೊನ್ ಮಾಡಿ ಸುರೇಶ ತಂದೆ ದೀಪ್ಲು ರಾಠೋಡ ಈತನು ನಿಮ್ಮ ಮೋಟಾರ್ ಸೈಕಲ ಕ್ಕೆ ಬೆಂಕಿ ಹಚ್ಚಿದ್ದಾನೆ ಅಂತಾ ತಿಳಿಸಿದರು ಆಗ ನಾನು ನಮ್ಮ ತಮ್ಮ ಕಾಂತಿಲಾಲ ಹಾಗೂ ನಮ್ಮ ತಾಂಡಾದ ನೂರು ತಂದೆ ಧಾರು ಪವಾರ ಮತ್ತು ತಿಪ್ಪಣ್ಣ ತಂದೆ ಹೀರು ಪವಾರ ಎಲ್ಲರು ಕೂಡಿ ಹೋಗಿ ನೋಡಲಾಗಿ ನನ್ನ ಮೋಟಾರ ಸೈಕಲ್ ನಂ: ಕೆಎ-33 ಎಸ್.-4721 ಅಂ.ಕಿ: 20,000=00 ರೂ ನೇದ್ದಕ್ಕೆ ಸುರೇಶ ತಂದೆ ದೀಪ್ಲೂ ರಾಠೊಡ ಈತನು ಬೆಂಕಿ ಹಚ್ಚಿದ್ದು ನೋಡಿದೆವು. ಬೆಂಕಿಯಿಂದ ನನ್ನ ಮೋಟಾರ್ ಸೈಕಲ್ ಸಂಪೂರ್ಣ ಸುಟ್ಟು ಹಾಳಾಗಿರುತ್ತದೆ. ನಾನು ಸುರೆಶ ಈತನು ನಮ್ಮ ಅಳಿಯ ಆಗಿದ್ದರಿಂದ ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದಿರುತ್ತೇನೆ.  ಕಾರಣ ಗಂಡ ಹೆಂಡತಿ ಜಗಳ ಆಡುತ್ತಿದ್ದುದನ್ನು ನೋಡಿ ಬಿಡಿಸಿಕೊಳ್ಳಲು ಹೊದ ನಮಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆದು ನನ್ನ ಮೋಟಾರ ಸೈಕಲ್ ನಂ: ಕೆಎ-33 ಎಸ್.-4721 ಅಂ.ಕಿ: 20,000=00 ರೂ ನೇದ್ದಕ್ಕೆ  ಬೆಂಕಿ ಹಚ್ಚಿ ಸುಟ್ಟು ಹಾನಿ ಮಾಡಿದ ಸುರೇಶ ತಂದೆ ದೀಪ್ಲೂ ರಾಠೊಡ ವಯ:28 ಸಾ: ಭೀಮ್ಲುನಾಯಕ ತಾಂಡಾ ನಾಗನಟಗಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2019 ಕಲಂ:323, 504, 435, 427 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ 379 ಐಪಿಸಿ:-18/05/2019 ರಂದು ಬೆಳಿಗ್ಗೆ 09.45 ಗಂಟೆಯ ಸುಮಾರಿಗೆ ಆರೋಪಿತರು ಕೆಲಸ ಮಾಡುವ ಟಿಪ್ಪರ ನಂ. ಕೆಎ-28 ಸಿ-9765 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವಾಗ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ನಿಲ್ಲಿಸಿ ಚಕ್ ಮಾಡಲು ಟಿಪ್ಪರ ಚಾಲಕ ಹಾಗೂ ಕ್ಲೀನರ್ ಓಡಿ ಹೋಗಿದ್ದು, ನಂತರ ಪಿಯರ್ಾದಿ ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಕೊಂಡು ಟಿಪ್ಪರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪಿಯರ್ಾದಿ ಒಂದು ಲಿಖತ ವರದಿ ನೀಡಿದ್ದರ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.     ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!