ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-05-2019

By blogger on ಶುಕ್ರವಾರ, ಮೇ 17, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-05-2019 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ 379 ಐಪಿಸಿ & 21(3)(4) ಎಮ್ಎಮ್ ಆರ್ಡಿ ಎಕ್ಟ್ 1957:- ದಿನಾಂಕ:17.05.2019 ರಂದು 11:00 ಎಎಮ್ ಕ್ಕೆ ಶ್ರೀ ವಿಠ್ಠಲ್ ಬಂದಾಳ ಕಂದಾಯ ನಿರೀಕ್ಷಕರು ಕಕ್ಕೇರಾ  ರವರು ಠಾಣೆಗೆ ಹಾಜರಾಗಿ  ತಾವು ಪುರೈಸಿದ ಜಪ್ತಿ ಪಂಚನಾಮೆ ಮತ್ತು ವರದಿಯನ್ನು  ಮತ್ತು  ಟಿಪ್ಪರ್ ನಂ:ಕೆಎ-33 ಎ 4776  ಹಾಜರುಪಡಿಸಿದ್ದು ವಿಠ್ಠಲ್ ಬಂದಾಳ ಕಂದಾಯ ನಿರೀಕ್ಷಕರು ಜಪ್ತಿ ಪಂಚನಾಮೆ ಮತ್ತು  ವರದಿ ಸಾರಾಂಶವೆನ ಇಂದು ದಿನಾಂಕ:17.05.2019  ರಂದು ಶ್ರೀ ಶ್ರೀಧರ  ತಹಸೀಲ್ದಾರರು ಹುಣಸಗಿ ಇವರ ಚುನಾವಣೆ ತರಬೇತಿ ಕುರಿತು. ಇಂದು ದಿನಾಂಕ:17.05.2019 ರಂದು ಬೆಳಗ್ಗೆ ಹುಣಸಗಿ ಯಿಂದ ಬಿಟ್ಟು ಕಕ್ಕೇರಾ ಪಟ್ಟಣದ ಪರಮಾನಂದ ಪೆಟ್ರೋಲ್ ಬಂಕ್ ಹತ್ತಿರ 8:30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಶಾಂತಪೂರ ಕ್ರಾಸ್ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವನ್ನು ನೋಡಿದ್ದು ಅಲ್ಲಯೇ ಇದ್ದು ಪಿಎಸ್ಐ ಕೊಡೇಕಲ್ಲ ರವರನ್ನು ಕರೆದು ತಮ್ಮೊಂದಿಗೆ  ನಿಲ್ಲಿಸಿಕೊಂಡು  ಸದರಿ ಟಿಪ್ಪರಿಗೆ ಮಾನ್ಯ ತಹಶೀಲ್ದಾರರು ಹುಣಸಗಿ ಇವರು ಕೈ ಮಾಡಿ ನಿಲ್ಲಿಸಲು ಸದರಿ ಟಿಪ್ಪರ್ ಚಾಲಕನ್ನು  ಪಿಎಸ್ಐ ಮತ್ತು ಮಾನ್ಯ ತಹಶೀಲ್ದಾರನ್ನು ನೋಡಿ  ಸ್ವಲ್ಪ ದೂರದಲ್ಲಿ  ಟಿಪ್ಪರನ್ನು ನಿಲ್ಲಿಸಿ. ಓಡಿ ಹೋಗಿದ್ದು  ನಂತರ ತಹಶೀಲ್ದಾರರು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಿದ್ದು ಟಿಪ್ಪರ ನಂ: ಕೆಎ-33 ಎ-4776 ಇದ್ದು.  ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ್ ಮರಳು ಮರಳಿನ ತುಂಬಿದ್ದು ಇದ್ದು ಅ:ಕಿ: 10,400/-ರೂ  ಟಿಪ್ಪರಿನ ಅ;ಕಿ:2,0000/- ರೂ ಇದ್ದನ್ನು ಯಾವುದೆ ಪರವಾನಿಗೆ ಇಲ್ಲದೆ  ಸಕರ್ಾರಕ್ಕೆ ರಾಜಧನ ಕಟ್ಟದೆ ಆಕ್ರಮವಾಗಿ ಮರಳನ್ನು ಕೃಷ್ಣ ನದಿ ತೀರದಲ್ಲಿ ಕಳ್ಳತನದಿಂದ ತುಂಬಿಕೊಂಡು ಆಕ್ರಮವಾಗಿ ಸಾಗಿಸುತ್ತಿರವದು ಕಂಡುಬಂದಿದ್ದರಿಂದ  ಕಕ್ಕೇರಾದಲ್ಲಿದ್ದ ನನಗೆ ಮಾನ್ಯ ತಹಶೀಲ್ದಾರರು ಪೋನ್ ಮಾಡಿ ತಿಳಿಸಿದ್ದರಿಂದ. ಕಕ್ಕೇರಾ ಪರಮಾನಂದ ಪೆಟ್ರೋಲ್ ಬಂಕ್ ಹತ್ತಿರ ಬರಲು ತಿಳಿಸಿದ್ದರಿಂದ   ನಾನು ಕಕ್ಕೇರಾ ಶಾಂತಪೂರ-ಬಲಶೆಟ್ಟಿಹಾಳ  ಮುಖ್ಯ ರಸ್ತಯ ಹತ್ತಿರದ ಪರಮಾನಂದ ಪೆಟ್ರೋಲ್ ಬಂಕ್ ಹೋಗಿದ್ದು ಅಲ್ಲಿ ಹುಣಸಗಿ ತಹಶೀಲ್ದಾರು  ಇದ್ದು ಮಾನ್ಯ  ತಹಶೀಲ್ದಾರರು ಹುಣಸಗಿ ರವರು ನನಗೆ ಟಿಪ್ಪರ ನಂ: ಕೆಎ-33 ಎ-4776  ಒಪ್ಪಿಸಿ ಸದರಿ ಟಿಪ್ಪರದಲ್ಲಿ ಆಕ್ರಮವಾಗಿ ಸಕರ್ಾರಕ್ಕೆ ರಾಜಧನ ಕಟ್ಟದೆ ಆಕ್ರಮವಾಗಿ ಮರಳನ್ನು ಕೃಷ್ಣ ನದಿ ತೀರದಲ್ಲಿ ಕಳ್ಳತನದಿಂದ ತುಂಬಿಕೊಂಡು ಆಕ್ರಮವಾಗಿ ಸಾಗಿಸುತ್ತಿರವದು ಕಂಡುಬಂದಿದ್ದು ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಕ್ರಮ ಕೈಗೊಳ್ಳಲು ನನಗೆ ಒಪ್ಪಿಸಿದ್ದು ನಾನು ಸಂತೋಷ ಕುಮಾರ ತಂದೆ ಶಿವರೆಡ್ಡಿ ಗ್ರಾಮ ಲೆಕ್ಕಾಧಿಕಾರಿಗಳು ಕಕ್ಕೇರಾ ಇವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ  ಇಬ್ಬರು ಪಂಚರಾದ ಮಾನಪ್ಪ ತಂದೆ ಬಸಣ್ಣ ರೋಟ್ಲರ್ ಸಾ: ಕಕ್ಕೇರಾ, ಸೋಮಪ್ಪ ತಂದೆ ಮಾನಪ್ಪ ಪಿಳಬಂಟಿ  ರವರನ್ನು 9:00 ಗಂಟೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರ ಪಡಿಸಿದ್ದು ನಾನು ಸದರಿ ಪಂಚರಿಗೆ ಈ ವಿಷಯ ತಿಳಿಸಿ ಆಕ್ರಮ ಮರಳು ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡ ಮೇರೆಗೆ ಅವರು ಒಪ್ಪಿಕೊಂಡಿದ್ದರಿಂದ ಜಪ್ತಿ ಪಂಚನಾಮೆಯನ್ನು 9:15 ರಿಂದ 10:00 ಗಂಟೆಯ ವರೆಗೆ ಪುರೈಸಿಕೊಂಡು ಸದರಿ ಟಿಪ್ಪರದೊಂದಿಗೆ  11:00 ಗಂಟೆಗೆ ಹಾಜರಾಗಿ ನಾನು ಪುರೈಸಿ ಜಪ್ತಿ ಪಂಚನಮೆ ಮತ್ತು  ಆಕ್ರಮವಾಗಿ ಮರಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಟಿಪ್ಪರ್  ನಂ: ಕೆಎ-33 ಎ-4776 ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ತಮಗೆ ವರದಿ ಸಲ್ಲಿಸಿದ್ದರ ಜಪ್ತಿ ಪಂಚನಾಮೆ ಮತ್ತು ವರದಿಯ  ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 27/2019 ಕಲಂ:  21(3) (4) ಎಮ್ಎಮ್ಆರ್ಡಿ ಮತ್ತು 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 115/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ: 17-05-2019 ರಂದು 1 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು  ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:17-03-2019 ರಂದು 11 ಎ.ಎಮ್. ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮನೋಹರ ಹೆಚ್.ಸಿ-105 2) ಪರಮೇಶ ಪಿಸಿ-142 3) ಸುಭಾಸ ಸಿಪಿಸಿ-174 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪುರ ಪಟ್ಟಣದ ಗಾಂಧಿಚೌಕದಿಂದ ಗೋಪಾಲಸ್ವಾಮಿ ಗುಡಿಗೆ ಹೋಗುವ ಮುಖ್ಯ ರಸ್ತೆಯ ಹನುಮಾನ ಟಾಕೀಸ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ಭೀಮರಾಯ ತಂದೆ ನಿಂಗಪ್ಪ ಬಡಿಗೇರ ವಯಾ: 32 ವರ್ಷ ಉ: ಡ್ರೈವರ್ ಜಾ: ಹೊಲೆಯ ಸಾ: ಬೋನಾಳ ತಾ:ಸುರಪುರ  2) ಶ್ರೀ ಕಾಶಿನಾಥ ತಂದೆ ಹಣಮಂತ ದೊಡ್ಮನಿ ವಯಾ: 40 ವರ್ಷ ಉ: ಒಕ್ಕಲುತನ ಜಾ: ಮಾದಿಗ ಸಾ: ಬೋನಾಳ ತಾ:ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 11-10 ಎ.ಎಮ್ ಕ್ಕೆ ಠಾಣೆಯಿಂದ ಸರಕಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು 11-30 ಎ.ಎಮ್ ಕ್ಕೆ ಸುರಪುರ ಪಟ್ಟಣದ ಗಾಂಧಿಚೌಕದಿಂದ ಗೋಪಾಲಸ್ವಾಮಿ ಗುಡಿಗೆ ಹೋಗುವ ಮುಖ್ಯ ರಸ್ತೆಯ ಹನುಮಾನ ಟಾಕೀಸ್ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ಹನುಮಾನ ಟಾಕೀಸ್ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 11-45 ಎ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಾಗಪ್ಪ ತಂದೆ ನಿಂಗಪ್ಪ ಕಿಲ್ಲೆದಾರ ವಯಾ: 40 ವರ್ಷ ಜಾ: ಕುರುಬ ಉ: ಕೂಲಿ ಸಾ: ಆಲ್ದಾಳ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 4100=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 11-45 ಎ.ಎಮ್ ದಿಂದ 12-45 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 116/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ: 17-05-2019 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2)  ಸುಭಾಸ ಸಿಪಿಸಿ-174 3) ಜಗದೀಶ ಪಿಸಿ-335 ಇವರೊಂದಿಗೆ ಠಾಣೆಯಲ್ಲಿದ್ದಾಗ ಖಚಿತವಾಗ ಬಾತ್ಮಿ ಬಂದಿದ್ದೇನೆಂದರೆ ಸುರಪುರ ಪಟ್ಟಣದ ಗಾಂದಿ ಚೌಕದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ಭೀಮರಾಯ ತಂದೆ ನಿಂಗಪ್ಪ ಬಡಿಗೇರ ವಯಾ: 32 ವರ್ಷ ಉ: ಡ್ರೈವರ್ ಜಾ: ಹೊಲೆಯ ಸಾ: ಬೋನಾಳ ತಾ: ಸುರಪುರ 2) ಶ್ರೀ ಕಾಶಿನಾಥ ತಂದೆ ಹಣಮಂತ ದೊಡ್ಮನಿ ವಯಾ: 40 ವರ್ಷ ಉ: ಒಕ್ಕಲುತನ ಜಾ: ಮಾದಿಗ ಸಾ: ಬೋನಾಳ ತಾ:ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ 2-10 ಪಿ.ಎಮ್ ಕ್ಕೆ ಠಾಣೆಯಿಂದ ಹೊರಟು ಸುರಪುರ ಗಾಂದಿಚೌಕ ಹತ್ತಿರ 2-20 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲು ಗಾಂದಿಚೌಕದ ಹನುಮಾನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2-30 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುವವನ್ನು ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಚನ್ನಬಸವ ತಂದೆ ಪರಮಣ್ಣ ಪೂಜಾರಿ ವಯಾ: 50 ಜಾ: ಉಪ್ಪಾರ ಉ: ಒಕ್ಕಲುತನ ಸಾ: ಎಸ್.ಡಿ. ಗೋನಾಳ ತಾ: ಸುರಪುರ  ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 3500=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 2-30 ಪಿ.ಎಮ್ ದಿಂದ 3-30 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:-47/2019 ಕಲಂ 341,355,504,506 ಐಪಿಸಿ.:-ದಿನಾಂಕ;17/05/2019 ರಂದು 9-30 ಎಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ಬಸವರಾಜ ತಂದೆ ನಾಗಪ್ಪ ಕಣೇಕಲ ವಃ45 ಉಃ ಕೂಲಿಕೆಲಸ ಸಾಃ ಕಣೆಕಲ್ ತಾಃಜಿಃಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ,  ನಾನು ಆರೋಪಿತಳಾದ ನಾಗಮ್ಮ ತಂ. ಹಣಮಂತ ಇವರೊಂದಿಗೆ ಕಳೆದ  25 ವರ್ಷಗಳ ಹಿಂದೆ ಮದುವೆಯಾಗಿದ್ದು ಇರುತ್ತದೆ. ನನ್ನ ಮತ್ತು ನಾಗಮ್ಮಳ ಸಂಸಾರಿಕ ಜೀವನದಲ್ಲಿ ತಾಪತ್ರೆಗಳು ಉದ್ಬವಿಸಿದ್ದರಿಂದ 2005 ರಲ್ಲಿ ನನ್ನ ವಿರುದ್ದ ಸೈದಾಪೂರ ಪೊಲಿಸ್ ಠಾಣೆಯಲ್ಲಿ ಕಲಂ.326 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸದರಿ ಪ್ರಕರಣವು ಮಾನ್ಯ ಜೆ.ಎಂ.ಎಫ್.ಸಿ.ನ್ಯಾಯಾಲಯ ವಿಚಾರಣೆ ಮಾಡಿ ನನ್ನನ್ನು ಬಿಡುಗಡೆಗೊಳಿಸಿದ್ದು ಇರುತ್ತದೆ. ಈ ಮೇಲಿನ ಪ್ರಕರಣ ದಾಖಲಾದ ದಿನಾಂಕದಿಂದ ನಾನು ಮತ್ತು ನಾಗಮ್ಮ ಪ್ರತ್ಯೇಕವಾಗಿ ವಾಸವಾಗಿದ್ದು ಇರುತ್ತದೆ. ನಾಗಮ್ಮ ಈಕೆಯು ಮುಂಬಯಿಯಲ್ಲಿ ಇದ್ದು ಪುನಃ ನನ್ನ ವಿರುದ್ದ ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಯಾದಗಿರದಲ್ಲಿ ನನ್ನ ವಿರುದ್ದ ಜೀವನಾಂಶ ಕೋರಿ ಅಜರ್ಿ ಸಲ್ಲಿಸಿದ್ದು ಇರುತ್ತದೆ. ಜೀವನಾಂಶ ಕ್ರಿ.ಮಿ.ನಂ.820/2015 ಎಂದು ನಮೂದಾಗಿದ್ದು ಸದರಿ ಪ್ರಕರಣವು ದಿನಾಂಕ.22/04/2019 ರಂದು ವಿಚಾರಣೆಗಾಗಿ ನ್ಯಾಯಾಲಯ ದಿನಾಂಕ ನಿಯೋಜಿಸಿದ್ದು ಇರುತ್ತದೆ. ನಾನು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಸದರಿ ಪ್ರಕರಣದಲ್ಲಿ ಹಾಜರಾಗಲೂ ಮಾನ್ಯ ಜೆ.ಎಂ.ಎಫ್.ಸಿ. ನ್ಯಾಯಾಲಯ ಮುಂದುಗಡೆ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಹೋಗುತ್ತಿರುವಾಗ ನಾಗಮ್ಮ ಇವಳು ಏಕಾಏಕಿ ಬಂದು ನನಗೆ ತಡೆದು ನಿಲ್ಲಿಸಿ ಎಲೇ ಬೋಸುಡಿ ಸೂಳಿ ಮಗನೇ ಇವತ್ತು ನಿನ್ನನ್ನು ಖಲಾಸ ಮಾಡಿಯೆ ಬಿಡುತ್ತೇನೆಂದು ತನ್ನ ಬಲಗಾಲಿನ ಚಪ್ಪಲಿಯನ್ನು ತೆಗೆದುಕೊಂಡು ನನ್ನ ಬಲಗಡೆ ಬುಜಕ್ಕ ಎರಡು ಏಟನ್ನು ಹೊಡೆದಿದ್ದು ಇರುತ್ತದೆ. ಆಗ ನಾನು ಏಕೆ ಹೊಡೆಯುತ್ತಿಯಾ ಎಂದಾಗ ಚಪ್ಪಲಿಯನ್ನು ಬಿಸಾಕಿದ್ದು ಈ ಘಟನೆ ನಡೆದಾಗ ಅಲ್ಲಿ ನೇರೆದಿದ್ದ ನ್ಯಾಯಾವಾದಿಗಳಾದ ಮಲ್ಲಿಕಾಜರ್ುನ ಕಾಂತಿಮನಿ ವಕೀಲರು, ಹಾಗೂ ಶಿವಪ್ರಸಾದ ವಕೀಲರು ಸದರಿ ಘಟನೆಯನ್ನು ನೋಡಿ ಬಿಡಿಸಿದ್ದು ಇರುತ್ತದೆ. ನನಗೆ ಅಷ್ಟೇನು ಪಟ್ಟಾಗಿಲ್ಲದ್ದರಿಂದ ಆಸ್ಪತ್ರೆಗೆ ತೋರಿಸಿರುವುದಿಲ್ಲಾ. ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರಿಗೆ ವಿಚಾರಿಸಿ ಇಂದು ದಿನಾಂಕ.17/05/2019 ರಂದು ಠಾಣೆಗೆ ದೂರು ಸಲ್ಲಿಸಲು ಬಂದಿದ್ದು ಆದ್ದರಿಂದ ದಯಾಳುಗಳಾದ ತಾವು ನನ್ನ ದೂರು ಅಜರ್ಿಯನ್ನು ಸ್ವೀಕರಿಸಿ ನಾಗಮ್ಮ ತಂ. ಹಣಮಂತ ಸಾಃ ಕಡೆಚೂರ ಇವಳ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.47/2019 ಕಲಂ.341,355,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 80/2019 ಕಲಂ 143, 147, 447, 341, 504, 506 ಸಂ 149 ಐಪಿಸಿ:-ದಿನಾಂಕ 17-05-2019 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿ ಮತ್ತು ಇತರರು ಕೂಡಿಕೊಂಡು ಎಂ.ಹೊಸಳ್ಳಿ ಗ್ರಾಮದ ಸೀಮೆಯಲ್ಲಿ ಬರುವ ತನ್ನ ಹೊಲ ಸವರ್ೆ ನಂ 102/2 ಎನ್.ಎ. ಮಾಡಿದ ಪ್ಲಾಟಗಳಲ್ಲಿ ಅಭಿವೃಧಿ ಕೆಲಸ ಮಾಡಿಸುತ್ತಿರುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಈ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಬೋಸಡಿ ಮಕ್ಕಳೆ, ರಂಡಿ ಮಕ್ಕಳೇ ಇಲ್ಲಿ ಯಾಕೆ ಕೆಲಸ ಮಾಡಿಸುತ್ತಿದ್ದಿರಿ ಅಂತಾ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿ ಅಲ್ಲಿ ಮಾಡಿಸುತ್ತಿರುವ ಕೆಲಸಕ್ಕೆ ಅಡೆತಡೆ ಉಂಟು ಮಾಡಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.



ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 83/2019 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ:-ದಿನಾಂಕ 17.05.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಫಿರ್ಯಾಧಿಯ ದನ-ಕರುಗಳನು ಆರೋಪಿತರ ತಿಪ್ಪೆಯ ಮೇಲೆ ಮೇಯುತ್ತಿದ್ದಾಗ ಅವುಗಳನ್ನು ಹೊಡೆದುಕೊಳ್ಳವು ವಿಚಾರದಲ್ಲಿ ಬಾಯಿ ಮಾತಿಗೆ ಮಾತು ಬೆಳೆದು ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ, ಕಲ್ಲು, ರಾಡು ಹಿಡಿದುಕೊಂಡು ಬಂದು ಫಿರ್ಯಾದಿಗೆ ಹಾಗೂ ಗಾಯಾಳುದಾರರಿಗೆ ಹೊಡೆ-ಬಡೆ  ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗೊಳ್ಳಿಸಿದ್ದು ಅಲ್ಲದೆ ಗಾಯಾಳು ಅನೀತಾಳ ತಲೆಯ ಕೂದಲು ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 83/2019 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 84/2019 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ:-ದಿನಾಂಕ 17.05.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಆರೋಪಿತರ ದನ-ಕರುಗಳನು ಫಿರ್ಯಾದಿಯ ತಿಪ್ಪೆಯ ಮೇಲೆ ಮೇಯುತ್ತಿದ್ದಾಗ ಅವುಗಳನ್ನು ಹೊಡೆದುಕೊಳ್ಳವು ವಿಚಾರದಲ್ಲಿ ಬಾಯಿ ಮಾತಿಗೆ ಮಾತು ಬೆಳೆದು ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ, ಕಲ್ಲು, ಹಿಡಿದುಕೊಂಡು ಬಂದು ಫಿರ್ಯಾದಿಗೆ ಹಾಗೂ ಗಾಯಾಳುದಾರರಿಗೆ ಹೊಡೆ-ಬಡೆ  ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗೊಳ್ಳಿಸಿದ್ದು ಅಲ್ಲದೆ ಗಾಯಾಳು ಬುಜ್ಜಿಬಾಯಿಯ ತಲೆಯ ಕೂದಲು ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2019 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!